ಕುಕ್ಕರ್ ಕಂಪನಿ ಮೇಲೆ ತಹಶೀಲ್ದಾರ್ ದಾಳಿ ➤ ಮತದಾರರಿಗೆ ಹಂಚಲು ಇಟ್ಟಿದ್ದ 2900 ಕುಕ್ಕರ್ ಗಳು ವಶ
(ನ್ಯೂಸ್ ಕಡಬ) newskadaba.com ರಾಮನಗರ, ಮಾ. 18. ಕುಕ್ಕರ್ ತಯಾರಿಕಾ ಕಂಪೆನಿ ಮೇಲೆ ತಹಶೀಲ್ದಾರ್ ತೇಜಸ್ವಿನಿ ನೇತೃತ್ವದ ತಂಡವು ದಾಳಿ ನಡೆಸಿ, 2900 ಕುಕ್ಕರ್ ಗಳನ್ನು ವಶಕ್ಕೆ ಪಡೆದ ಘಟನೆ ಕರಿಕಲ್ ದೊಡ್ಡಿ ಎಂಬಲ್ಲಿ ನಡೆದಿದೆ. ವಿಶ್ವಾಸ್ ವೈದ್ಯ ಎಂಬವರಿಗೆ ಸೇರಿದ ಕಂಪೆನಿಗೆ ದಾಳಿ ನಡೆಸಿದ ತಹಶೀಲ್ದಾರ್, ಸವದತ್ತಿ ಯಲ್ಲಮ್ಮ ಕ್ಷೇತ್ರದ ಮತದಾರರಿಗೆ ಹಂಚಲು ಸಿದ್ಧತೆ ಮಾಡಿಕೊಳ್ಳಲಾಗಿದ್ದ ಕುಕ್ಕರ್‌ಗಳನ್ನು ವಶಕ್ಕೆ ಪಡೆದಿದ್ದಾರೆ. ಈ ಕುರಿತು ಬಿಡದಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ಕುಕ್ಕರ್ ಕಂಪನಿ ಮೇಲೆ ತಹಶೀಲ್ದಾರ್ ದಾಳಿ ➤ ಮತದಾರರಿಗೆ ಹಂಚಲು ಇಟ್ಟಿದ್ದ 2900 ಕುಕ್ಕರ್ ಗಳು ವಶ Read More »
ಕರ್ನಾಟಕ