ರಾಮಕುಂಜ: ಮ್ಯಾಗ್ಸೇಸೆ ಪ್ರಶಸ್ತಿ ಪುರಸ್ಕೃತ ವಿಜ್ಞಾನಿ ಡಾ| ಹರೀಶ್ ಹಂದೆ ಭೇಟಿ ► ರಾಮಕುಂಜೇಶ್ವರ ವಿದ್ಯಾಲಯದ ವಿದ್ಯಾರ್ಥಿಗಳೊಂದಿಗೆ ಶೈಕ್ಷಣಿಕ ಸಂವಾದ
(ನ್ಯೂಸ್ ಕಡಬ) newskadaba.com ಕಡಬ, ಡಿ.18. ಮ್ಯಾಗ್ಸೇಸೆ ಪ್ರಶಸ್ತಿ ಪುರಸ್ಕೃತ ವಿಜ್ಞಾನಿ, ಸೆಲ್ಕೋ ಇಂಡಿಯಾದ ಸಂಸ್ಥಾಪಕ ಡಾ.ಹರೀಶ್ ಹಂದೆ ಶುಕ್ರವಾರದಂದು ರಾಮಕುಂಜ ವಿದ್ಯಾಸಂಸ್ಥೆಗೆ ಭೇಟಿ ನೀಡಿದ್ದು ವಿದ್ಯಾರ್ಥಿಗಳೊಂದಿಗೆ ಶೈಕ್ಷಣಿಕ ಸಂವಾದ ನಡೆಸಿದರು. ಸಂಸ್ಥೆಯಲ್ಲಿ ಆಯೋಜಿಸಿದ್ದ ಗಣಿತ ಮಾದರಿಗಳ ಪ್ರದರ್ಶನವನ್ನು ಡಾ.ಹರೀಶ್ ಹಂದೆಯವರು ಈ ವೇಳೆ ಉದ್ಘಾಟಿಸಿದರು. ಭಾರತ ಅಭಿವೃದ್ಧಿ ಹೊಂದಿದಲ್ಲಿ ಮಾತ್ರ ವಿಶ್ವ ಅಭಿವೃದ್ಧಿಗೊಳ್ಳಲಿದೆ ಎಂಬುದು ದೆಹಲಿಯಲ್ಲಿ ಎರಡು ವರ್ಷ ವ್ಯಾಸಾಂಗ ಮಾಡಿದ ಅಮೆರಿಕನ್ ಪ್ರಜೆಯೊಬ್ಬರ ಅಭಿಪ್ರಾಯವಾಗಿದೆ. ಆತನಲ್ಲಿ ಭಾರತದ ಗ್ರಾಮೀಣ ಪ್ರದೇಶಗಳು ಅಭಿವೃದ್ಧಿಗೊಳ್ಳದೇ ಇದ್ದಲ್ಲಿ ವಿಶ್ವ […]







