ಪಡಿತರ ಕೇಂದ್ರಗಳಲ್ಲಿ ನೀಡುತ್ತಿರುವುದು ಸಾರವರ್ಧಿತ ಅಕ್ಕಿ ➤ ದ.ಕ ಜಿಲ್ಲೆಯಲ್ಲಿ ಪ್ಲಾಸ್ಟಿಕ್ ಅಕ್ಕಿ ವಿತರಣೆ ವದಂತಿ..!
(ನ್ಯೂಸ್ ಕಡಬ)newskadaba.com ಪುತ್ತೂರು, ಫೆ.02. ಪಡಿತರ ಅಂಗಡಿ ಮೂಲಕ ನೀಡಲಾಗುತ್ತಿರುವ ಅಕ್ಕಿಯೊಂದಿಗೆ ಪ್ಲಾಸ್ಟಿಕ್ ಅಕ್ಕಿ ಕಾಳು ಮಿಶ್ರಣವಾಗಿದೆ ಎಂಬ ವದಂತಿ ವ್ಯಾಪಕವಾಗಿ ಹಬ್ಬುತ್ತಿದೆ. ಆದರೆ ವಾಸ್ತವವಾಗಿ ಅದು ಪ್ಲಾಸ್ಟಿಕ್ ಅಕ್ಕಿ ಅಲ್ಲ, ಸಾರವರ್ಧಿತ ಅಕ್ಕಿ ! ದ.ಕ.ಜಿಲ್ಲೆಯಲ್ಲಿ ಜನವರಿಯ ಅಕ್ಕಿ ವಿತರಣೆ ಆಗುತ್ತಿದ್ದಂತೆ ಅದರಲ್ಲಿ ಕಂಡು ಬಂದಿರುವ ದೊಡ್ಡ ಗಾತ್ರದ ಬಿಳಿ ಬಣ್ಣದ ಅಕ್ಕಿಯನ್ನು ಕಂಡು ಪಡಿತರ ಅಕ್ಕಿಗೆ ಪ್ಲಾಸ್ಟಿಕ್ ಅಕ್ಕಿ ಬೆರೆಸಲಾಗಿದೆ ಎಂದು ಆಹಾರ ಇಲಾಖೆ, ಗ್ರಾ.ಪಂ.ಗಳಿಗೆ ದೂರು ಹೇಳುತ್ತಿರುವ ಪ್ರಸಂಗ ಕಂಡು ಬರುತ್ತಿದೆ. ಕೇಂದ್ರ […]

