puttur

ಪುತ್ತೂರು : ಪಾದಚಾರಿಗೆ ಓಮಿನಿ ಡಿಕ್ಕಿ

(ನ್ಯೂಸ್ ಕಡಬ) newskadaba.com, ಪುತ್ತೂರು, ಡಿ.12   ಪಾದಚಾರಿಗೆ ಓಮಿನಿ ಡಿಕ್ಕಿ ಹೊಡೆದು ಗಾಯಗೊಂಡ ಘಟನೆ ಪುತ್ತೂರು ತಾಲೂಕು  ಸರ್ವೇ ಗ್ರಾಮದಲ್ಲಿ ನಿನ್ನೆ ನಡೆದಿದೆ. ಕುಮಾರಿ ಶೋಭಾ ಎಂಬವರಿಗೆ ತಲೆ ಭಾಗಕ್ಕೆ ರಕ್ತ ಗಾಯವಾಗಿರುತ್ತದೆ. ಈ ಬಗ್ಗೆ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪುತ್ತೂರು : ಪಾದಚಾರಿಗೆ ಓಮಿನಿ ಡಿಕ್ಕಿ Read More »

ಕರಾವಳಿ

ಲಾರಿ ಹಾಗೂ ಬಸ್ಸ್ ನಡುವೆ ಅಪಘಾತ

(ನ್ಯೂಸ್ ಕಡಬ) newskadaba.com, ಪುತ್ತೂರು , ಡಿ.5  ಬಸ್ಸ್ ಮತ್ತು ಲಾರಿ ನಡುವೆ ಢಿಕ್ಕಿ ಸಂಭವಿಸಿ ಬಸ್ಸ್ ಚಾಲಕನಿಗೆ ಗಾಯಗೊಂಡ ಘಟನೆ ಪುತ್ತೂರು ತಾಲೂಕು ಬಜತ್ತೂರು ಗ್ರಾಮದ ಬೆದ್ರೋಡಿ ಎಂಬಲ್ಲಿ ನಡೆದಿದೆ. ಅಪಘಾತವಾಗಿ ಬಸ್ ಜಖಂಗೊಂಡಿರುವುದಲ್ಲದೇ, ಸುನಿಲ್ ಎಂಬವರಿಗೆ ಬಲ ಭುಜಕ್ಕೆ ಗುದ್ದಿದ ನೋವಾಗಿ ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ಹೊರರೋಗಿಯಾಗಿ ಚಿಕಿತ್ಸೆ ಪಡೆದುಕೊಂಡಿರುತ್ತಾರೆ. ಬಸ್ಸಿನಲ್ಲಿದ್ದ ಸಿಬ್ಬಂದಿಗಳಿಗೆ ಯಾವುದೇ ಗಾಯಗಳಾಗಿರುವುದಿಲ್ಲ. ಎಂದು ಪುತ್ತೂರು ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಲಾರಿ ಹಾಗೂ ಬಸ್ಸ್ ನಡುವೆ ಅಪಘಾತ Read More »

ಕರಾವಳಿ

ಪಾದಚಾರಿಗೆ ಅಟೋರಿಕ್ಷಾ ಢಿಕ್ಕಿ

(ನ್ಯೂಸ್ ಕಡಬ) newskadaba.com, ಪುತ್ತೂರು , ಡಿ.3  ಪಾದಚಾರಿಗೆ ಅಟೋರಿಕ್ಷಾ ಢಿಕ್ಕಿ ಹೊಡೆದ ಪರಿಣಾಮ ಗಾಯಗೊಂಡ ಘಟನೆ ಪುತ್ತೂರು ತಾಲೂಕು ಕಸ್ಬಾ ಗ್ರಾಮದ ಬೊಳ್ವಾರು ಎಂಬಲ್ಲಿ ಸುಝುಕಿ ಶೋರೂಂನ ಎದುರು ಸೋಮವಾರದಂದು ನಡೆದಿದೆ. ಗಾಯಗೊಂಡ ಸತೀಶ್ ರಾವ್ ರವರನ್ನು ಚಿಕಿತ್ಸೆ ಬಗ್ಗೆ ಪುತ್ತೂರು ಸರಕಾರಿ ಆಸ್ಪತ್ರೆಗೆ ದಾಖಲಿಸಿ, ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಿರುವುದಾಗಿ ಪುತ್ತೂರು ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಪಾದಚಾರಿಗೆ ಅಟೋರಿಕ್ಷಾ ಢಿಕ್ಕಿ Read More »

ಕರಾವಳಿ

ಸಾಮಾಜಿಕ ಕಾಳಜಿ ಮೆರೆದ ಪುತ್ತೂರು ಮಹಿಳಾ ಪೊಲೀಸ್ ಠಾಣೆಯ ಮಹಿಳಾ ಪೊಲೀಸ್ ಉಪನಿರೀಕ್ಷಕರು

 (ನ್ಯೂಸ್ ಕಡಬ) newskadaba.com ಪುತ್ತೂರು , ನ.22  ಪುತ್ತೂರು ಮಹಿಳಾ ಪೊಲೀಸ್ ಠಾಣೆಯ ಮಹಿಳಾ ಪೊಲೀಸ್ ಉಪನಿರೀಕ್ಷಕರಾದ ಸೇಸಮ್ಮ ರವರು ರಾತ್ರಿ ಕರ್ತವ್ಯ ನಿರ್ವಹಿಸುತ್ತಿದ್ದಾಗ ಪುತ್ತೂರು ಬಸ್ ನಿಲ್ದಾಣದ ಬಳಿ ಮಾನಸಿಕವಾಗಿ ಅಸ್ವಸ್ಥ ವ್ಯಕ್ತಿಯೋರ್ವ ತಿರುಗಾಡುತ್ತಿರುವುದು ಕಂಡುಬಂದು ಆತನನ್ನು ವಿಚಾರಿಸಿ, ಮನೆಗೆ ತಲುಪಿಸಿದ ಘಟನೆ ಗುರುವಾರದಂದು ನಡೆದಿದೆ. ಮಾನಸಿಕ ಅಸ್ವಸ್ಥ ವ್ಯಕ್ತಿಯು ದಿನಾಂಕ 19.11.2019 ರಂದು ಮನೆಯವರಿಗೆ ಯಾವುದೇ ಮಾಹಿತಿ ನೀಡದೇ ಹೊರಹೋಗಿರುವುದಾಗಿಯೂ ಆತನಿಗಾಗಿ ಹುಡುಕಾಟ ನಡೆಸಿ ಪತ್ತೆಯಾಗದೇ ಆತನ ವಯೋವೃದ್ದ ತಂದೆ-ತಾಯಿ ಚಿಂತಿತರಾಗಿರುವುದು ತಿಳಿದುಬಂದಿದ್ದು, ಆ ಕೂಡಲೇ

ಸಾಮಾಜಿಕ ಕಾಳಜಿ ಮೆರೆದ ಪುತ್ತೂರು ಮಹಿಳಾ ಪೊಲೀಸ್ ಠಾಣೆಯ ಮಹಿಳಾ ಪೊಲೀಸ್ ಉಪನಿರೀಕ್ಷಕರು Read More »

ಕರಾವಳಿ

ಕಳವಾದ ಗೂಡ್ಸ್ ವಾಹನ

 (ನ್ಯೂಸ್ ಕಡಬ) newskadaba.com ಪುತ್ತೂರು, ನ.21  ಖಾಸಗಿ ಬಸ್ ನಿಲ್ದಾಣದ ಎದುರು ರಸ್ತೆಯ ಬದಿ ಗೂಡ್ಸ್ ವಾಹನ ನಿಲ್ಲಿಸಿ ಊಟ ಮುಗಿಸಿ ವಾಪಾಸು ವಾಹನ ನಿಲ್ಲಿಸಿದ್ದ ಜಾಗಕ್ಕೆ ಬಂದು ನೋಡುವಾಗ ವಾಹನವು ಆ ಜಾಗದಲ್ಲಿ ಇರಲಿಲ್ಲ, ಬಳಿಕ ಆಸುಪಾಸಿನಲ್ಲಿ ಹುಡುಕಾಡಿದರೂ ವಾಹನವು ಪತ್ತೆಯಾಗದ ಘಟನೆ ಬುಧವಾರದಂದು ಪುತ್ತೂರು ತಾಲೂಕು ಕಸ್ಬಾ ಗ್ರಾಮದ ನೆಲ್ಲಿಕಟ್ಟೆಯಲ್ಲಿ ನಡೆದಿದೆ. ಹಾಲಯ್ಯ ಕೆ.ಟಿ ಅವರು ಮಂಜುನಾಥ ರೋಡ್ ಲೈನ್ಸ್ ಸಂಸ್ಥೆಯ ಗೂಡ್ಸ್ ಸಾಮಾಗ್ರಿಗಳನ್ನು ಪುತ್ತೂರಿನಲ್ಲಿ ಡೋರ್ ಡೆಲಿವರಿ ಮಾಡುವ ವ್ಯವಹಾರ ನಡೆಸುತ್ತಿದ್ದು, ಸಾಮಾಗ್ರಿಗಳನ್ನು

ಕಳವಾದ ಗೂಡ್ಸ್ ವಾಹನ Read More »

ಕರಾವಳಿ

ಕಳವು

 (ನ್ಯೂಸ್ ಕಡಬ) newskadaba.com ಪುತ್ತೂರು,  ನ.18  ಸಹೋದರನ ಮನೆಗೆಂದು ಹೋದವರು ಕೆಲವು ದಿನಗಳು ಕಳೆದು ತಮ್ಮ ಮನೆಗೆ ಬಂದಾಗ ಸುಮಾರು 60,000/- ಮೌಲ್ಯದ ಚಿನ್ನ ಕಳವಾಗಿದೆ. ಶಾಹಿದಾ ಬಿ.ಎಂ ರವರು 30.10.2019 ರಂದು ಸಹೋದರನ ಮನೆಗೆ ಹೋಗಿದ್ದು, 17.11.2019 ರಂದು ಮನೆಗೆ ಬಂದು ನೋಡಿದಾಗ ಹಿಂದಿನ ಬಾಗಿಲು ತೆರೆದುಕೊಂಡಿದ್ದು, ಕಪಾಟಿನಲ್ಲಿದ್ದ ಸುಮಾರು 60,000/- ಮೌಲ್ಯದ ಚಿನ್ನ ಕಳವಾಗಿದೆ ಎಂದು ಪುತ್ತೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಕಳವು Read More »

ಕರಾವಳಿ

ಗೂಡ್ಸ್ ಟೆಂಪೋ ಮತ್ತು ಸ್ಕೂಟರ್ ನಡುವೆ ಡಿಕ್ಕಿ

(ನ್ಯೂಸ್ ಕಡಬ) newskadaba.com  ಪುತ್ತೂರು, ನ.6  ಗೂಡ್ಸ್ ಟೆಂಪೋ ಮತ್ತು ಸ್ಕೂಟರ್ ಡಿಕ್ಕಿ ಹೊಡೆದ ಪರಿಣಾಮ ಸ್ಕೂಟರ್ ರಸ್ತೆಗೆ ಬಿದ್ದು ಸವಾರನಿಗೂ, ಸಹಸವಾರನಿಗೂ ಗಾಯಗೊಂಡ ಘಟನೆ ಪುತ್ತೂರು ತಾಲೂಕು ಕಸ್ಬಾ ಗ್ರಾಮದ ಅಶ್ವಿನಿ ಸರ್ಕಲ್ ಬಳಿ ಮಂಗಳವಾರದಂದು ನಡೆಯಿತು. ಗಾಯಗೊಂಡ ಹರೀಶ್ ಪಿ ಹಾಗೂ ಸಂತೋಷ್ ಪಿ ಇವರು ಪುತ್ತೂರು ಸಿಟಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿರುತ್ತಾರೆ ಎಂದು ಪುತ್ತೂರು ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಗೂಡ್ಸ್ ಟೆಂಪೋ ಮತ್ತು ಸ್ಕೂಟರ್ ನಡುವೆ ಡಿಕ್ಕಿ Read More »

ಕರಾವಳಿ

ಅಟೋರಿಕ್ಷಾ ಮತ್ತು ಬೈಕ್ ಡಿಕ್ಕಿ ➤ಗಾಯಗೊಂಡ ಬೈಕ್ ಸವಾರ

(ನ್ಯೂಸ್ ಕಡಬ) newskadaba.com  ಪುತ್ತೂರು, ಅ.30  ಅಟೋರಿಕ್ಷಾ ಮತ್ತು ದ್ವಿಚಕ್ರ ವಾಹನದ ನಡುವೆ ಡಿಕ್ಕಿ ಸಂಭವಿಸಿ ಸವಾರ ಯಾದವ ಪೂಜಾರಿ ಎಂಬವರು ಗಾಯಗೊಂಡ ಘಟನೆ ಮಂಗಳವಾರದಂದು ಚಿಕ್ಕಮುಡ್ನೂರು ಗ್ರಾಮದ ಸಾಲ್ಮರ ಜಂಕ್ಷನ್ ಬಳಿ ನಡೆಯಿತು. ಡಿಕ್ಕಿ ಹೊಡೆದ ಪರಿಣಾಮ, ಮೋಟಾರ್ ಸೈಕಲ್ ಸವಾರ ಯಾದವ ಪೂಜಾರಿ ಎಂಬವರು ಮೋಟಾರ್ ಸೈಕಲ್ ಸಮೇತ ರಸ್ತೆಗೆ ಬಿದ್ದುದರಿಂದ, ಅವರಿಗೆ ತಲೆಗೆ ಮತ್ತು ಕೈಗೆ ಗಾಯವಾಗಿರುತ್ತದೆ. ಅವರನ್ನು ಪುತ್ತೂರು ಆದರ್ಶ ಆಸ್ಪತ್ರೆಗೆ ಕರೆದುಕೊಂಡು ಹೋಗಿ, ಅಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ, ಹೆಚ್ಚಿನ

ಅಟೋರಿಕ್ಷಾ ಮತ್ತು ಬೈಕ್ ಡಿಕ್ಕಿ ➤ಗಾಯಗೊಂಡ ಬೈಕ್ ಸವಾರ Read More »

ಕರಾವಳಿ

ಪುತ್ತೂರಿನಲ್ಲಿ “ ಪೊಲೀಸರ ಕುಟುಂಬ ಸಮ್ಮಿಲನ ” ಕಾರ್ಯಕ್ರಮ

(ನ್ಯೂಸ್ ಕಡಬ) newskadaba.com ಪುತ್ತೂರು , ಅ.28. ಪುತ್ತೂರು ನಗರದ “ ಪೊಲೀಸರ ಕುಟುಂಬ ಸಮ್ಮಿಲನ ” ಕಾರ್ಯಕ್ರಮವು ಬ್ರಹ್ಮಶ್ರೀ ನಾರಾಯಣಗುರು ಸಭಾಂಗಣ, ಪುತ್ತೂರು ಇಲ್ಲಿ ಶನಿವಾರದಂದು ನಡೆದಿದೆ. ದಕ್ಷಿಣ ಕನ್ನಡ ಜಿಲ್ಲಾ ಪೊಲೀಸರಿಗಾಗಿ ಹಮ್ಮಿಕೊಂಡಿರುವ “ ಜಿಲ್ಲಾ ಪೊಲೀಸರ ಕುಟುಂಬ ಸಮ್ಮಿಲನ “ ಎಂಬ   ಕಾರ್ಯಕ್ರಮದ ಎರಡನೆ ಹಂತವಾಗಿ ಪುತ್ತೂರು ನಗರ ಠಾಣೆ, ಪುತ್ತೂರು ಪೊಲೀಸ್ ಉಪವಿಭಾಗ ಕಛೇರಿ, ಸಂಚಾರ ಪೊಲೀಸ್ ಠಾಣೆ ಮತ್ತು ಮಹಿಳಾ ಪೊಲೀಸ್ ಠಾಣೆ ಪುತ್ತೂರು ಇಲ್ಲಿನ ಅಧಿಕಾರಿಗಳು, ಸಿಬ್ಬಂದಿಗಳು ಮತ್ತು

ಪುತ್ತೂರಿನಲ್ಲಿ “ ಪೊಲೀಸರ ಕುಟುಂಬ ಸಮ್ಮಿಲನ ” ಕಾರ್ಯಕ್ರಮ Read More »

ಕರಾವಳಿ

ಪುತ್ತೂರು: ಚೂರಿಯಿಂದ ಇರಿದು ಹಿಂಜಾವೇ ಮುಖಂಡನ ಬರ್ಬರ ಹತ್ಯೆ ➤ ಪೊಲೀಸ್ ಠಾಣೆಯ ಮುಂಭಾಗದ ಗಣೇಶೋತ್ಸವ ಕಾರ್ಯಕ್ರಮದಲ್ಲಿ ಘಟನೆ

(ನ್ಯೂಸ್ ಕಡಬ) newskadaba.com ಪುತ್ತೂರು, ಸೆ.04. ಗಣೇಶೋತ್ಸವ ಕಾರ್ಯಕ್ರಮದಲ್ಲಿ ಯುವಕನೋರ್ವನನ್ನು ಚೂರಿಯಿಂದ ಇರಿದು ಬರ್ಬರವಾಗಿ ಹತ್ಯಗೈದ ಘಟನೆ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣಾ ಮುಂಭಾಗದಲ್ಲಿ ಮಂಗಳವಾರ ರಾತ್ರಿ ನಡೆದಿದೆ. ಮೃತ ಯುವಕನನ್ನು ಪುತ್ತೂರು ತಾಲೂಕು ಹಿಂದೂ ಜಾಗರಣಾ ವೇದಿಕೆಯ ಕಾರ್ಯದರ್ಶಿ ಮೇರ್ಲ ನಿವಾಸಿ ಕಾರ್ತಿಕ್ ಸುವರ್ಣ ಎಂದು ಗುರುತಿಸಲಾಗಿದೆ. ಆರೋಪಿಗಳಾದ ಸಂಪ್ಯದ ಚರಣ್‌ರಾಜ್, ಕಿರಣ್ ಮತ್ತು ಪ್ರೀತೇಶ್ ಸ್ಥಳದಿಂದ ಪರಾರಿಯಾಗಿದ್ದು, ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ. ಗಣೇಶೋತ್ಸವ ಕಾರ್ಯಕ್ರಮವನ್ನು ಅರ್ಧಕ್ಕೆ ನಿಲ್ಲಿಸಲಾಗಿದ್ದು, ಸ್ಥಳದಲ್ಲಿ ಕೆಲಕಾಲ ಆತಂಕಕಾರಿ

ಪುತ್ತೂರು: ಚೂರಿಯಿಂದ ಇರಿದು ಹಿಂಜಾವೇ ಮುಖಂಡನ ಬರ್ಬರ ಹತ್ಯೆ ➤ ಪೊಲೀಸ್ ಠಾಣೆಯ ಮುಂಭಾಗದ ಗಣೇಶೋತ್ಸವ ಕಾರ್ಯಕ್ರಮದಲ್ಲಿ ಘಟನೆ Read More »

ಕರಾವಳಿ
Scroll to Top