ಪೇರಡ್ಕ: ರಾಜ್ಯ ಹೆದ್ದಾರಿಯಲ್ಲೊಂದು ಅಗಲ ಕಿರಿದಾದ ಸೇತುವೆ ! ➤ ಅಪಾಯಕ್ಕೆ ಆಹ್ವಾನ! ಅಗಲೀಕರಣಕ್ಕೆ ಸಾರ್ವಜನಿಕರ ಆಗ್ರಹ
(ನ್ಯೂಸ್ ಕಡಬ) newskadaba.com ಕಡಬ ಅ.23: ನೂಜಿಬಾಳ್ತಿಲ ಗ್ರಾ.ಪಂ. ವ್ಯಾಪ್ತಿಯಲ್ಲಿ ಹಾದು ಹೋಗುತ್ತಿರುವ ಸುಬ್ರಹ್ಮಣ್ಯ-ಧರ್ಮಸ್ಥಳ ರಾಜ್ಯ ಹೆದ್ದಾರಿಯಲ್ಲಿ ರೆಂಜಿಲಾಡಿ ಗ್ರಾಮದ ಪೇರಡ್ಕ ಬಳಿಯ ಕಾಜರಕಟ್ಟೆ ಸೇತುವೆ ಅಗಲ ಕಿರಿದಾಗಿದ್ದು, ಅಪಘಾತವಾಗುವ ಸಂಭವವಿರುವುದರಿಂದ ಸೇತುವೆಯನ್ನು ಅಗಲೀಕರಣ ಅಥವಾ ಬೃಹತ್ ಸೇತುವೆ ನಿರ್ಮಾಣ ಮಾಡುವಂತೆ ಆಗ್ರಹ ವ್ಯಕ್ತವಾಗಿದೆ. ರಾಜ್ಯದ ಪ್ರಸಿದ್ಧ ಪುಣ್ಯ ಕ್ಷೇತ್ರಗಳಾದ ಸುಬ್ರಹ್ಮಣ್ಯ ಹಾಗೂ ಧರ್ಮಸ್ಥಳ ದೇವಸ್ಥಾನಗಳನ್ನು ಸಂಪರ್ಕಿಸುವ ಸುಬ್ರಹ್ಮಣ್ಯ-ಮರ್ದಾಳ-ಪೆರಿಯಶಾಂತಿ-ಧರ್ಮಸ್ಥಳ ರಾಜ್ಯ ಹೆದ್ದಾರಿ ಡಾಮರೀಕರಣಗೊಂಡು ಅಭಿವೃದ್ಧಿ ಹೊಂದಿದ್ದು, ಪೇರಡ್ಕ ಬಳಿಯ ಕಾಜರಕಟ್ಟೆ ಸೇತುವೆ ಅಗಲ ಕಿರಿದಾಗಿದ್ದು, ತಡೆಗೋಡೆಗಳೂ ಶಿಥಿಲಾವಸ್ಥೆಯಿಂದ […]


