ಪರಿಪೂರ್ಣ ವ್ಯಕ್ತಿತ್ವದ ಡಾ.ಲಕ್ಷ್ಮಣ್ ಪ್ರಭುಗಳ ಅಗಲಿಕೆಯಿಂದ ಶೂನ್ಯತೆ ಸೃಷ್ಟಿಯಾಗಿದೆ – ಭುವನೇಶ್ವರಿ ಹೆಗಡೆ
(ನ್ಯೂಸ್ ಕಡಬ) newskadaba.com ಮಂಗಳೂರು, ನ. 22. ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮಂಗಳೂರು ತಾಲೂಕು ಘಟಕದ ವತಿಯಿಂದ ಇತ್ತೀಚೆಗೆ ನಮ್ಮನ್ನೆಲ್ಲ ಅಗಲಿದ ಕವಿ ಹೃದಯದ ಹಿರಿಯ ಖ್ಯಾತ ವೈದ್ಯ ಡಾ.ಜಿ.ಜಿ.ಲಕ್ಷ್ಮಣ ಪ್ರಭು ಅವರಿಗೆ ಮಂಗಳೂರಿನ ಹೋಟೆಲ್ ವುಡ್‌ಲ್ಯಾಂಡ್ಸ್ ನಲ್ಲಿ ಶೃದ್ಧಾಂಜಲಿ ಸಭೆ ಏರ್ಪಡಿಸಲಾಗಿತ್ತು. ಕ.ಸಾ.ಪ. ಮಂಗಳೂರು ತಾಲೂಕು ಘಟಕದ ಅಧ್ಯಕ್ಷ ಶ್ರೀ.ಮಂಜುನಾಥ್ ಎಸ್. ರೇವಣಕರ್ ರವರು ಅಧ್ಯಕ್ಷತೆ ವಹಿಸಿದ್ದರು. ನುಡಿನಮನ ಸಲ್ಲಿಸಿ ಮಾತನಾಡಿದ ಶ್ರೀಮತಿ ಭುವನೇಶ್ವರಿ ಹೆಗ್ಗಡೆಯವರು ಡಾ.ಜಿ.ಜಿ.ಲಕ್ಷ್ಮಣ ಪ್ರಭುಗಳ ವ್ಯಕ್ತಿತ್ವ, ಹಾಸ್ಯಪ್ರಿಯತೆ ಮತ್ತು ಕರ್ತವ್ಯ […]

