newskadaba

ಮೂಡುಬಿದಿರೆ: ಬ್ಲಡ್‌ ಬ್ಯಾಂಕ್ ಗ್ರೂಪ್‍ನಿಂದ ರೋಗಿಗಳಿಗೆ ಹಣ್ಣು, ಪಾನೀಯ ವಿತರಣೆ

(ನ್ಯೂಸ್ ಕಡಬ) newskadaba.com ಮೂಡುಬಿದಿರೆ, ಆ .16,  ಬ್ಲಡ್ ಬ್ಯಾಂಕ್ ರಕ್ತದಾನಿಗಳ ಗ್ರೂಪ್‍ನಿಂದ 71ನೇ ಸ್ವಾತಂತ್ರ್ಯೋತ್ಸವದ ಪ್ರಯುಕ್ತ ಮೂಡುಬಿದಿರೆಯ ಸರಕಾರಿ ಆಸ್ಪತ್ರೆಯಲ್ಲಿ ರೋಗಿಗಳು ಹಾಗೂ ಅವರ ಬಂಧುಗಳಿಗೆ ಹಣ್ಣುಹಂಪಲು – ಪಾನೀಯ ನೀಡಲಾಯಿತು. ಈ ಸಂದರ್ಭ ರಕ್ತದಾನಿ ಹಾಗೂ ರಾಜ್ಯಸರಕಾರದಿಂದ ಜೀವರಕ್ಷಕ ಪ್ರಶಸ್ತಿ ವಿಜೇತ ಉದ್ಯಮಿ ಸಿ.ಹೆಚ್. ಅಬ್ದುಲ್ ಗಫೂರ್ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ ‘ರಕ್ತದಾನ ಒಂದು ಮಹತ್ವಪೂರ್ಣ ಸಾಮಾಜಿಕ ಜವಾಬ್ದಾರಿಯಾಗಿದ್ದು ಅದನ್ನು ನಿರ್ವಹಿಸುವಲ್ಲಿ ಯುವಜನತೆ ಮುಂದಾಗಿರುವುದು ಸಂತಸ ತಂದಿದೆ. ಇಂತಹ ಬಲಿಷ್ಠ ಯುವಪಡೆ ಯಾವುದೇ ಸಮಯದಲ್ಲಿ […]

ಮೂಡುಬಿದಿರೆ: ಬ್ಲಡ್‌ ಬ್ಯಾಂಕ್ ಗ್ರೂಪ್‍ನಿಂದ ರೋಗಿಗಳಿಗೆ ಹಣ್ಣು, ಪಾನೀಯ ವಿತರಣೆ Read More »

ಕರಾವಳಿ

ನೆಲ್ಯಾಡಿ: ಉಳಿತೊಟ್ಟು ಮಸೀದಿಯಲ್ಲಿ ಸ್ವಾತಂತ್ರ್ಯೋತ್ಸವ

(ನ್ಯೂಸ್ ಕಡಬ) newskadaba.com ನೆಲ್ಯಾಡಿ, ಆ .15,  ಇಲ್ಲಿನ ಸಮೀಪದ ಉಳಿತೊಟ್ಟು ಬಿಲಾಲ್ ಜುಮ್ಮಾ ಮಸೀದಿಯಲ್ಲಿ 71ನೇ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮ ನಡೆಯಿತು. ಪಡುಬೆಟ್ಟು ಸರಕಾರಿ ಪ್ರೌಡ ಶಾಲೆಯ ಅಧ್ಯಾಪಕರಾದ ಎಂ.ಡಿ. ಮಜೀದ್ ಅಲಿ ಇವರು ಧ್ವಜಾರೋಹಣ ನೆರವೇರಿಸಿದರು. ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಜಮಾಅತ್ ಅಧ್ಯಕ್ಷರಾದ ಹಾಜಿ ಯು.ಉಮರಬ್ಬ ಅಧ್ಯಕ್ಷತೆ ವಹಿಸಿದ್ದರು. ಜಮಾಅತ್ ಖತೀಬ್ ಸಿದ್ದೀಕ್ ಸಖಾಫಿ ದುಆ ನೆರವೇರಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಪಡುಬೆಟ್ಟು ಸರಕಾರಿ ಪ್ರೌಢಶಾಲೆಯ ಅಧ್ಯಾಪಕರಾದ ಎಂ.ಡಿ. ಮಜೀದ್ ಅಲಿ ಸಂದೇಶ ಭಾಷಣ ಮಾಡಿದರು.

ನೆಲ್ಯಾಡಿ: ಉಳಿತೊಟ್ಟು ಮಸೀದಿಯಲ್ಲಿ ಸ್ವಾತಂತ್ರ್ಯೋತ್ಸವ Read More »

ಕರಾವಳಿ

ಕಡಬ: ಸ್ವಾತಂತ್ರ್ಯೋತ್ಸವ ಪ್ರಯುಕ್ತ ಪನ್ಯ ಗುರಿಯಡ್ಕ ರಸ್ತೆ ದುರಸ್ಥಿ

(ನ್ಯೂಸ್ ಕಡಬ) newskadaba.com ಕಡಬ, ಆ .15,  71ನೇ ಸ್ವಾತಂತ್ರ್ಯೋತ್ಸವ ಪ್ರಯುಕ್ತ ಹದಗೆಟ್ಟು ಸಂಚಾರಕ್ಕೆ ತೊಡಕಾಗುತ್ತಿದ್ದ ಪನ್ಯ ಗುರಿಯಡ್ಕ ರಸ್ತೆಯನ್ನು ಊರವರು ಸೇರಿ ದುರಸ್ಥಿಗೊಳಿಸಿದರು. ಹೊಂಡ – ಗುಂಡಿಗಳಿಗೆ ಕೆಂಪು ಕಲ್ಲು ಹಾಸಿ ದುರಸ್ಥಿಗೊಳಿಸಲಾಯಿತು.

ಕಡಬ: ಸ್ವಾತಂತ್ರ್ಯೋತ್ಸವ ಪ್ರಯುಕ್ತ ಪನ್ಯ ಗುರಿಯಡ್ಕ ರಸ್ತೆ ದುರಸ್ಥಿ Read More »

ಕರಾವಳಿ

ಬಲ್ಯ ಫ್ರೀಡಂ ಬಾಯ್ಸ್‌ ಆರ್ಟ್ಸ್ ಆಂಡ್ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಸ್ವಾತಂತ್ರ್ಯೋತ್ಸವ

(ನ್ಯೂಸ್ ಕಡಬ) newskadaba.com ಕಡಬ, ಆ .15,  ಬಲ್ಯ ಫ್ರೀಡಂ ಬಾಯ್ಸ್‌ ಆರ್ಟ್ಸ್ ಆಂಡ್ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಬಲ್ಯ ಸರಕಾರಿ ಶಾಲೆಯಲ್ಲಿ 71ನೇ ಸ್ವಾತಂತ್ರ್ಯೋತ್ಸವ ನಡೆಯಿತು.

ಬಲ್ಯ ಫ್ರೀಡಂ ಬಾಯ್ಸ್‌ ಆರ್ಟ್ಸ್ ಆಂಡ್ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಸ್ವಾತಂತ್ರ್ಯೋತ್ಸವ Read More »

ಕರಾವಳಿ

ಕುಟ್ರುಪ್ಪಾಡಿ ಗ್ರಾಮ ಪಂಚಾಯತ್‍ನಲ್ಲಿ 71ನೇ ಸ್ವಾತಂತ್ಯೋತ್ಸವ

(ನ್ಯೂಸ್ ಕಡಬ) newskadaba.com ಕಡಬ, ಆ . 15,  ಕುಟ್ರುಪ್ಪಾಡಿ ಗ್ರಾಮ ಪಂಚಾಯತ್ನಲ್ಲಿ 71ನೇ ಸ್ವಾತಂತ್ಯೋತ್ಸವ ನಡೆಯಿತು. ಅಧ್ಯಕ್ಷರಾದ ಶ್ರೀಮತಿ ಜಾನಕಿ ಧ್ವಜಾರೋಹಣ ನೆರವೇರಿಸಿದರು. ಸದಸ್ಯರಾದ ಶಿವ ಪ್ರಸಾದ್ ಮೈಲೇರಿ ಮತ್ತು ಮೊಹಮ್ಮದ್ ಆಲಿ ಮಾತನಾಡಿ ಸ್ವಾತಂತ್ಯೋತ್ಸವದ ಶುಭ ಹಾರೈಸಿದರು. ಹೊಸ್ಮಠ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಶ್ರೀ ಕರುಣಾಕರ ಗೋಕಟೆ ಶುಭ ಹಾರೈಸಿದರು. ಉಪಾಧ್ಯಕ್ಷರಾದ ಆನಂದ ಪೂಜಾರಿ, ಸದಸ್ಯರಾದ ಲಿಂಗಪ್ಪ ಗೌಡ, ಜಾನಕಿ, ತನಿಯ ಸಂಪಡ್ಕ, ಸೂಸಮ್ಮ ಮತ್ತು ಕುಟ್ರುಪ್ಪಾಡಿ ಜಿ.ಪಂ. ಮಾಜಿ

ಕುಟ್ರುಪ್ಪಾಡಿ ಗ್ರಾಮ ಪಂಚಾಯತ್‍ನಲ್ಲಿ 71ನೇ ಸ್ವಾತಂತ್ಯೋತ್ಸವ Read More »

ಕರಾವಳಿ

ರಾಮಕುಂಜ: ಒಕ್ಕಲಿಗ ಗೌಡ ಸೇವಾ ಸಂಘ, ಆಟಿಡೊಂಜಿ ದಿನ, ಅಭಿನಂದನಾ ಕಾರ್ಯಕ್ರಮ

(ನ್ಯೂಸ್ ಕಡಬ) newskadaba.com ಕಡಬ, ಆ .15, ಹಿಂದಿನ ಬೇಸಾಯ ಪದ್ಧತಿಗಳು ಕಣ್ಮರೆಯಾಗುತ್ತಿರುವ ಇಂದಿನ ಕಾಲದಲ್ಲಿ ಆಟಿಡೊಂಜಿ ಕಾರ್ಯಕ್ರಮದ ಮೂಲಕ ಸಮಾಜ ಬಾಂಧವರೆಲ್ಲರೂ ಒಟ್ಟು ಸೇರಿಕೊಂಡು ಸುಖ, ದು:ಖ ಹಂಚಿಕೊಳ್ಳಲು ಸಾಧ್ಯವಾಗಿದೆ . ಆಟಿ ಆಚರಣೆ ಸಾರ್ವಜನಿಕ ಉತ್ಸವಗಳ ಮಾದರಿಯಲ್ಲಿ ಎಲ್ಲಾ ಸಮುದಾಯದವರು ಒಟ್ಟು ಸೇರಿಕೊಂಡು ಆಚರಿಸುವಂತಾಗಬೇಕೆಂದು ಒಕ್ಕಲಿಗ ಗೌಡ ಸೇವಾ ಸಂಘದ ಆಲಂಕಾರು ವಲಯದ ಉಸ್ತುವಾರಿ ತಿಮ್ಮಪ್ಪ ಗೌಡ ಕುಂಡಡ್ಕ ಹೇಳಿದರು. ಅವರು ಒಕ್ಕಲಿಗ ಗೌಡ ಸೇವಾ ಸಂಘ ರಾಮಕುಂಜ ಮತ್ತು ಒಕ್ಕಲಿಗ ಸ್ವ-ಸಹಾಯ ಸಂಘಗಳ

ರಾಮಕುಂಜ: ಒಕ್ಕಲಿಗ ಗೌಡ ಸೇವಾ ಸಂಘ, ಆಟಿಡೊಂಜಿ ದಿನ, ಅಭಿನಂದನಾ ಕಾರ್ಯಕ್ರಮ Read More »

ಕರಾವಳಿ

ಕಡಬ: ಪಿಜಕ್ಕಳ ಶಾಲೆಯಲ್ಲಿ ಸ್ವಚ್ಚತಾ ಕಾರ್ಯಕ್ರಮ

(ನ್ಯೂಸ್ ಕಡಬ) newskadaba.com ಕಡಬ, ಆ .15, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಕಡಬ ‘ಬಿ’ ಒಕ್ಕೂಟ, ಪಿಜಕ್ಕಳ ಕುಮಾರಧಾರ ಯುವಕ ಮಂಡಲ, ಪಿಜಕ್ಕಳ ಸ್ತ್ರೀ ಶಕ್ತಿ ಸಂಘ ಮತ್ತು ಪಿಜಕ್ಕಳ ಶಾಲಾಭಿವೃದ್ದಿ ಸಮಿತಿ ಆಶ್ರಯದಲ್ಲಿ ಕಡಬ ಗ್ರಾಮದ ಪಿಜಕ್ಕಳ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಸ್ವಚ್ಚತಾ ಕಾರ್ಯಕ್ರಮ ನಡೆಯಿತು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಕೃಷಿ ಅಧಿಕಾರಿ ಗಿರೀಶ್, ಕುಮಾರಧಾರ ಯುವಕ ಮಂಡಲದ ಗೌರವಾಧ್ಯಕ್ಷ ಶ್ಯಾಮ್ ತೋಮಸ್, ಒಕ್ಕೂಟದ ಅಧ್ಯಕ್ಷ ಆನಂದ ಗೌಡ

ಕಡಬ: ಪಿಜಕ್ಕಳ ಶಾಲೆಯಲ್ಲಿ ಸ್ವಚ್ಚತಾ ಕಾರ್ಯಕ್ರಮ Read More »

ಕರಾವಳಿ

ಕಡಬ: ಹೋಬಳಿ ಮಟ್ಟದ ಜನ ಸಂಪರ್ಕ ಸಭೆ; ಮದ್ಯದಂಗಡಿ ಸುತ್ತಾ ಮದ್ಯಸೇವನೆ, ಸಾರ್ವಜನಿಕರಿಗೆ ತೊಂದರೆ

(ನ್ಯೂಸ್ ಕಡಬ) newskadaba.com ಕಡಬ, ಆ .15, ಇಲ್ಲಿನ ಸರಕಾರಿ ಸಾಮ್ಯದ ಮದ್ಯದಂಗಡಿ ಸುತ್ತಾ ಮದ್ಯಸೇವನೆ ಮಾಡುತ್ತಾ ರಸ್ತೆಯಲ್ಲಿ ಸಂಚರಿಸುವ ಸಾರ್ವಜನಿಕರಿಗೆ ತೊಂದರೆಯಾಗುತ್ತಿದ್ದು ಈ ಬಗ್ಗೆ ಎಂ.ಎಸ್.ಐ,ಎಲ್ ನವರಿಗೆ ಕಟ್ಟುನಿಟ್ಟಿನ ಸೂಚನೆ ನೀಡಬೇಕೆಂದು ಪೋಲಿಸರನ್ನು ಆಗ್ರಹಿಸಿದ ಘಟನೆ ಕಡಬ ಹೋಬಳಿ ಮಟ್ಟದ ಜನಸಂಪರ್ಕ ಸಭೆಯಲ್ಲಿ ನಡೆದಿದೆ. ಸಭೆಯು ಕಡಬ ಅಂಬೇಡ್ಕರ್ ಭವನದಲ್ಲಿ ಕಡಬ ತಹಸೀಲ್ದಾರ್ ಜಾನ್ ಪ್ರಕಾಶ್ ರೋಡ್ರಿಗಸ್ರವರ ಅಧ್ಯಕ್ಷತೆಯಲ್ಲಿ ನಡೆಯಿತು .ಕಡಬದ ಎಂ.ಎಸ್.ಐ.ಎಲ್ ಸುತ್ತಾ ಮುತ್ತದ ಪರಿಸರದಲ್ಲಿ ಮದ್ಯಸೇವನೆ ಮಾಡುತ್ತಿದ್ದು, ಇದರಿಂದ ಮಾಲೇಶ್ವರ, ಕೋಡಿಂಬಾಳ ಭಾಗಗಳಿಗೆ

ಕಡಬ: ಹೋಬಳಿ ಮಟ್ಟದ ಜನ ಸಂಪರ್ಕ ಸಭೆ; ಮದ್ಯದಂಗಡಿ ಸುತ್ತಾ ಮದ್ಯಸೇವನೆ, ಸಾರ್ವಜನಿಕರಿಗೆ ತೊಂದರೆ Read More »

ಕರಾವಳಿ

ನೂಜಿಬಾಳ್ತಿಲ: 33ನೇ ವರ್ಷದ ಕೃಷ್ಣ ಜನ್ಮಾಷ್ಟಮಿ

(ನ್ಯೂಸ್ ಕಡಬ) newskadaba.com ಕಡಬ, ಆ .15, ನೂಜಿಬಾಳ್ತಿಲ ಉ.ಹಿ.ಪ್ರಾ.ಶಾಲಾ ವಠಾರದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಉತ್ಸವವು ಸೋಮವಾರ ನಡೆಯಿತು. ಬೆಳಿಗ್ಗೆ ನೂಜಿಶ್ರೀ ಉಳ್ಳಾಲ್ತಿ ದೈವಸ್ಥಾನದ ಅರ್ಚಕರಾದ ಕೃಷ್ಣ ಹೆಬ್ಬಾರ್ ಪೂಜಾವಿಧಿವಿಧಾನಗಳನ್ನು ನಡೆಸಿದರು. ಕಡಬ ಮೆಸ್ಕಾಂ ಸಿಬ್ಬಂದಿ ರವಿ ಕುಮಾರ್ ಕಾರ್ಯಕ್ರಮ ಉದ್ಘಾಟಿಸಿ ಶುಭಹಾರೈಸಿದರು. ನೂಜಿಬಾಳ್ತಿಲ ಗ್ರಾ.ಪಂ.ಅಧ್ಯಕ್ಷ ಸದಾನಂದ ಗೌಡ, ನೂಜಿಬಾಳ್ತಿಲ ಉ.ಹಿ.ಪ್ರಾ.ಶಾಲಾ ಮುಖ್ಯೋಪಧ್ಯಾಯ ಶ್ರೇಯಾಂಸ್, ಶಾಲಾ ಎಸ್ಡಿಎಂಸಿ ಅಧ್ಯಕ್ಷ ಮೋನಪ್ಪ ಗೌಡ ಅರಿಮಜಲು, ಗ್ರಾ.ಪಂ.ಸದಸ್ಯ ರಾಮಚಂದ್ರ ಗೌಡ ಶುಭಹಾರೈಸಿದರು. ಶ್ರೀಕೃಷ್ಣ ಜನ್ಮಾಷ್ಟಮಿ ಸಮಿತಿ ಅಧ್ಯಕ್ಷ ಹರೀಶ್ ಗೌಡ

ನೂಜಿಬಾಳ್ತಿಲ: 33ನೇ ವರ್ಷದ ಕೃಷ್ಣ ಜನ್ಮಾಷ್ಟಮಿ Read More »

ಕರಾವಳಿ

ಆತೂರು ಶ್ರೀ ಸದಾಶಿವ ದೇವಸ್ಥಾನಕ್ಕೆ ಶಾಸಕಿ ಶಕುಂತಳಾ ಶೆಟ್ಟಿ ಭೇಟಿ

(ನ್ಯೂಸ್ ಕಡಬ) newskadaba.com ಕಡಬ, ಆ .14, ರಾಜ್ಯ ಸಂಸದೀಯ ಕಾರ್ಯದರ್ಶಿ, ಪುತ್ತೂರು ಶಾಸಕಿಯೂ ಆದ ಶಕುಂತಳಾ ಶೆಟ್ಟಿಯವರು ಕೊೖಲ ಗ್ರಾಮದ ಆತೂರು ಶ್ರೀ ಸದಾಶಿವ ದೇವಸ್ಥಾನಕ್ಕೆ ಶನಿವಾರ ಭೇಟಿ ನೀಡಿದರು. ಈ ವೇಳೆ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ವತಿಯಿಂದ ಶಾಸಕರನ್ನು ಗೌರವಿಸಲಾಯಿತು. ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸುನೀತ್ ರಾಜ್ ಶೆಟ್ಟಿ ಆರ್ವಾರ, ಸದಸ್ಯರುಗಳಾದ ಪುರಂದರ ರೈ ಸಬಳೂರು, ಬಿ.ಕೆ.ಚಂದ್ರಶೇಖರ, ಚಂದ್ರಶೇಖರ ಗೌಡ, ರಾಮಕುಂಜ ಗ್ರಾ.ಪಂ.ಸದಸ್ಯ ಯತೀಶ್ ಕುಮಾರ್ ಬಾನಡ್ಕ ಉಪಸ್ಥಿತರಿದ್ದರು.

ಆತೂರು ಶ್ರೀ ಸದಾಶಿವ ದೇವಸ್ಥಾನಕ್ಕೆ ಶಾಸಕಿ ಶಕುಂತಳಾ ಶೆಟ್ಟಿ ಭೇಟಿ Read More »

ಕರಾವಳಿ
Scroll to Top