ಕಡಬ: ಪಿಜಕ್ಕಳ ಶಾಲೆಯಲ್ಲಿ ಸ್ವಚ್ಚತಾ ಕಾರ್ಯಕ್ರಮ

(ನ್ಯೂಸ್ ಕಡಬ) newskadaba.com ಕಡಬ, ಆ .15, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಕಡಬ ‘ಬಿ’ ಒಕ್ಕೂಟ, ಪಿಜಕ್ಕಳ ಕುಮಾರಧಾರ ಯುವಕ ಮಂಡಲ, ಪಿಜಕ್ಕಳ ಸ್ತ್ರೀ ಶಕ್ತಿ ಸಂಘ ಮತ್ತು ಪಿಜಕ್ಕಳ ಶಾಲಾಭಿವೃದ್ದಿ ಸಮಿತಿ ಆಶ್ರಯದಲ್ಲಿ ಕಡಬ ಗ್ರಾಮದ ಪಿಜಕ್ಕಳ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಸ್ವಚ್ಚತಾ ಕಾರ್ಯಕ್ರಮ ನಡೆಯಿತು.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಕೃಷಿ ಅಧಿಕಾರಿ ಗಿರೀಶ್, ಕುಮಾರಧಾರ ಯುವಕ ಮಂಡಲದ ಗೌರವಾಧ್ಯಕ್ಷ ಶ್ಯಾಮ್ ತೋಮಸ್, ಒಕ್ಕೂಟದ ಅಧ್ಯಕ್ಷ ಆನಂದ ಗೌಡ ಕೋಂಕ್ಯಾಡಿ, ಯುವಕ ಮಂಡಲದ ಅಧ್ಯಕ್ಷ ದಯಾನಂದ ಗೌಡ, ಸೇವಾ ಪ್ರತಿನಿಧಿ ಪುಷ್ಪಾ, ಶಾಲಾ ಮುಖ್ಯ ಶಿಕ್ಷಕಿ ಚೇತನಾ, ಸಹ ಶಿಕ್ಷಕಿ ಸವಿತಾ, ಒಕ್ಕೂಟದ ಉಪಾಧ್ಯಕ್ಷ ಕೃಷ್ಣಪ್ಪ ಗೌಡ, ಕುಮಾರಧಾರ ಯುವಕ ಮಂಡಲದ ಸದಸ್ಯರು, ಶಾಲಾ ಪೋಷಕರು, ಶಾಲಾಭಿವೃದ್ದಿ ಸಮಿತಿಯ ಸದಸ್ಯರು, ಸ್ತ್ರೀಶಕ್ತಿ ಸಂಘದ ಸದಸ್ಯರು, ಕಡಬ ‘ಬಿ’ ಒಕ್ಕೂಟದ ಸದಸ್ಯರು, ಶಾಲಾಭಿಮಾನಿಗಳು ಉಪಸ್ಥಿತರಿದ್ದರು.

Scroll to Top