newskadaba

ಸುಳ್ಯ: ಇಂದು ಶ್ರೀ ಚೆನ್ನಕೇಶವ ದೇವರ ಸನ್ನಿಧಿಯಲ್ಲಿ ವೈಭವದ ರಥೋತ್ಸವ

(ನ್ಯೂಸ್ ಕಡಬ) newskadaba.com.ಸುಳ್ಯ,ಜ.11. ಶ್ರೀ ಚೆನ್ನಕೇಶವ ದೇವರ ಸನ್ನಿಧಿಯಲ್ಲಿ ಪೂರ್ವಶಿಷ್ಟ ಸಂಪ್ರದಾಯ ದಂತೆ ವರ್ಷಾವಧಿ ಜಾತ್ರೆಯ ವೈಭವದ ರಥೋತ್ಸವ ಜ. 11ರಂದು ನಡೆಯಲಿದೆ. ಸಾವಿರಾರು ಭಕ್ತರು ಆಗಮಿಸುವ ನಿರೀಕ್ಷೆ ಇದೆ. ಗುರುವಾರ ದೇವಸ್ಥಾನದಲ್ಲಿ ಭಕ್ತರ ಸಂಖ್ಯೆ ಹೆಚ್ಚಿದ್ದು, ಸಂತೆ ಮಳಿಗೆಗಳಲ್ಲೂ ಜನಸಂಖ್ಯೆ ಅಧಿಕವಾಗಿತ್ತು. ರಥೋತ್ಸವದ ಹಿನ್ನೆಲೆಯಲ್ಲಿ ರಥಬೀದಿಯಿಂದ ಎಪಿಎಂಸಿ ತನಕದ ರಸ್ತೆಯಲ್ಲಿ ವಾಹನ ಸಂಚಾರ ನಿಷೇಧಿಸಿ, ಪಾದಚಾರಿ ಸಂಚಾರಕ್ಕೆ ಸೀಮಿತಗೊಳಿಸಲಾಗಿದೆ. ಜ. 11ರ ಶುಕ್ರವಾರ ಬೆಳಗ್ಗೆ ದೊಡ್ಡ ದರ್ಶನ ಬಲಿ, ಬಟ್ಟಲು ಕಾಣಿಕೆ ಸಮರ್ಪಣೆ ನಡೆಯಿತು.ರಾತ್ರಿ ಕಲ್ಕುಡ ದೈವಗಳ […]

ಸುಳ್ಯ: ಇಂದು ಶ್ರೀ ಚೆನ್ನಕೇಶವ ದೇವರ ಸನ್ನಿಧಿಯಲ್ಲಿ ವೈಭವದ ರಥೋತ್ಸವ Read More »

ಕರಾವಳಿ

ಹಾಡಹಗಲೇ ಗೂಡಂಗಡಿಗೆ ನುಗ್ಗಿ ಸೊತ್ತುಗಳ ಕಳ್ಳತನ► ಸಾರ್ವಜನಿಕರ ಸಹಾಯದಿಂದ ಆರೋಪಿಗಳ ಬಂಧನ

(ನ್ಯೂಸ್ ಕಡಬ)newskadaba.comಪುತ್ತೂರು, ಜ.7.ಆರ್ಲಪದವಿನಲ್ಲಿ ಹಾಡಹಗಲೇ ಗೂಡಂಗಡಿಗೆ ನುಗ್ಗಿ ಸೊತ್ತುಗಳನ್ನು ಕಳವುಗೈದವರನ್ನು ಸಾರ್ವಜನಿಕರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.ಉಪ್ಪಿನಂಗಡಿ ಬೇಜಾರು ನಿವಾಸಿ ರಿಯಾಝ್, ನೆಕ್ಕಿಲಾಡಿಯ ಸಿರಾಜು ದ್ದೀನ್‌, ಬಂಧಿತರು.   ಆರ್ಲಪದವಿನಲ್ಲಿ ಮನೆಗೆ ಹೊಂದಿಕೊಂಡಿರುವ ಅಶ್ರಫ್‌  ಅವರ ಗೂಡಂಗಡಿಯಿಂದ 5 ಸಾವಿರ ಹಾಗೂ ಮೊಬೈಲ್‌ ಫೋನ್‌  ಅನ್ನು ಇವರು ಕಳವು ಮಾಡಿದ್ದರು. ಕಳ್ಳತನ ಅರಿವಿಗೆ ಬಂದ ತತ್‌ಕ್ಷಣ ಅಶ್ರಫ್‌ ಅವರು ಪೊಲೀಸರಿಗೆ ಮಾಹಿತಿ ನೀಡಿದ್ದು, ಸಾರ್ವಜನಿಕರ ಸಹಕಾರದಿಂದ ಆರ್ಲಪದವು ಚೆಕ್‌ ಪೋಸ್ಟ್‌ ಬಳಿ ಆರೋಪಿಗಳು ಪೊಲೀಸರ ಬಲೆಗೆ ಬಿದ್ದಿದ್ದಾರೆ.ಬಂಧಿತರಿಂದ ಕಳವುಗೈದ

ಹಾಡಹಗಲೇ ಗೂಡಂಗಡಿಗೆ ನುಗ್ಗಿ ಸೊತ್ತುಗಳ ಕಳ್ಳತನ► ಸಾರ್ವಜನಿಕರ ಸಹಾಯದಿಂದ ಆರೋಪಿಗಳ ಬಂಧನ Read More »

ಕರಾವಳಿ

ಶಬರಿಮಲೆ: ಅಯ್ಯಪ್ಪ ದೇವಸ್ಥಾನಕ್ಕೆ ಪ್ರವೇಶಿಸಿದ ಮಹಿಳೆಯರು ► ಮಹಿಳೆಯರನ್ನು ಪ್ರವೇಶಿಸಿದ ಕೇರಳ ಸರಕಾರವನ್ನು ವಜಾಗೊಳಿಸಲು ರಾಷ್ಟ್ರಪತಿಗೆ ಮನವಿ

(ನ್ಯೂಸ್ ಕಡಬ) newskadaba.com.ಕಡಬ,ಜ. 4. ಶಬರಿಮಲೆ ಅಯ್ಯಪ್ಪ ಸ್ವಾಮೀ ದೇವಸ್ಥಾನಕ್ಕೆ 10ರಿಂದ 50ವರ್ಷದ ಒಳಗಿನ ಮಹಿಳೆಯರ ಪ್ರವೇಶ ನಿಷಿದ್ದ ಎಂಬ ಸಂಪ್ರದಾಯ ಇರುವಾಗ ಪಿನರಾಯಿ ನೇತೃತ್ವದ ಕಮ್ಯೂನಿಸ್ಟ್ ಸರಕಾರ ಮಹಿಳೆಯರನ್ನು ಭದ್ರತೆಯಲ್ಲಿ ಪ್ರವೇಶಿಸಿದ್ದು ಘೋರ ಅನ್ಯಾಯ ಈ ಸರಕಾರವನ್ನು ವಜಾಗೊಳಿಸಿ ಅಲ್ಲಿ ರಾಷ್ಟ್ರಪತಿ ಆಡಳಿತವನ್ನು ಹೇರಬೇಕೆಂದು ಆಗ್ರಹಿಸಿ ಕಡಬ ವಿ.ಹಿಂ.ಪ ನೇತೃತ್ವದಲ್ಲಿ ಕಡಬ ತಹಸೀಲ್ದಾರ್ ಮೂಲಕ ರಾಷ್ಟಪತಿಗೆ ಮನವಿ ಸಲ್ಲಿಸಲಾಗಿದೆ.   ಈ ಸಂದರ್ಭದಲ್ಲಿ ವಿ.ಹಿಂ.ಪ ಗೌರವಾಧ್ಯಕ್ಷ ಜನಾರ್ದನ ರಾವ, ಅಧ್ಯಕ್ಷ ರಾಧಾಕೃಷ್ಣ ಕೋಲ್ಪೆ, ಕಾರ್ಯದರ್ಶಿ ಪ್ರಮೋದ್ ರೈ

ಶಬರಿಮಲೆ: ಅಯ್ಯಪ್ಪ ದೇವಸ್ಥಾನಕ್ಕೆ ಪ್ರವೇಶಿಸಿದ ಮಹಿಳೆಯರು ► ಮಹಿಳೆಯರನ್ನು ಪ್ರವೇಶಿಸಿದ ಕೇರಳ ಸರಕಾರವನ್ನು ವಜಾಗೊಳಿಸಲು ರಾಷ್ಟ್ರಪತಿಗೆ ಮನವಿ Read More »

ಕರಾವಳಿ

ಆತೂರು: ದಿಕ್ರ್ ಹಲ್ಕಾ ವಾರ್ಷಿಕೋತ್ಸವ ► ಅಲ್ಲಾಹುವಿನ ಸ್ನೇಹ ಸಂಪಾದನೆಗೆ ದಿಕ್ರ್, ಸ್ವಲಾತ್ ಉತ್ತಮ ಹಾದಿ-ತ್ವಾಖ ಅಹ್ಮದ್ ಮೌಲವಿ

(ನ್ಯೂಸ್ ಕಡಬ) newskadaba.com.ಉಪ್ಪಿನಂಗಡಿ,ಜ. 4.  ಅಲ್ಲಾಹುವಿನ ಸ್ನೇಹ ಸಂಪಾದನೆಗೆ ದಿಕ್ರ್, ಸ್ವಲಾತ್ ಹೇಳುವುದು ಉತ್ತಮ ಹಾದಿಯಾಗಿದ್ದು, ಆ ಮೂಲಕ ನಮ್ಮ ಆತ್ಮ ಶುದ್ಧೀಕರಣದೊಂದಿಗೆ ಹೃದಯಪರಿಪೂರ್ಣತೆ ಆಗುತ್ತದೆ ಜೊತೆಗೆ ಪುಣ್ಯ ಸಂಪಾದನೆ ಲಭಿಸಲಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಖಾಝಿ ಯಾರ್‍ಕತ್ತ್ ತ್ವಾಖ ಅಹ್ಮದ್ ಮೌಲವಿ ಅಲ್‍ಖಾಸಿಮಿ ಅಲ್‍ಅಝ್‍ಹರಿ ಹೇಳಿದರು.ಅವರು ಜ. 3ರಂದು ಆತೂರು ಬದ್ರಿಯಾ ಜುಮಾ ಮಸೀದಿಯಲ್ಲಿ ಪ್ರತಿ ತಿಂಗಳ ಮೊದಲ ಗುರುವಾರ ರಾತ್ರಿ ಆಚರಿಸಿಕೊಂಡು ಬರುತ್ತಿರುವ ದಿಕ್ರ್ ಹಲ್ಕಾ ಇದರ 18ನೇ ವಾರ್ಷಿಕೋತ್ಸವ ಸಮಾರಂಭದ ಸಭಾ

ಆತೂರು: ದಿಕ್ರ್ ಹಲ್ಕಾ ವಾರ್ಷಿಕೋತ್ಸವ ► ಅಲ್ಲಾಹುವಿನ ಸ್ನೇಹ ಸಂಪಾದನೆಗೆ ದಿಕ್ರ್, ಸ್ವಲಾತ್ ಉತ್ತಮ ಹಾದಿ-ತ್ವಾಖ ಅಹ್ಮದ್ ಮೌಲವಿ Read More »

ಕರಾವಳಿ

ಆತೂರು ದಿಕ್ರ್ ಹಲ್ಖಾ ವಾರ್ಷಿಕೋತ್ಸವ ► ದಿಕ್ರ್, ಸ್ವಲಾತ್ ಹೇಳುವಾತನ ಜೀವನ ಧನ್ಯ ಆಗಲಿದೆ-ಮುರ್ಷಿದ್ ಫೈಝಿ

(ನ್ಯೂಸ್ ಕಡಬ) newskadaba.com.ಉಪ್ಪಿನಂಗಡಿ,ಡಿ.31  ದಿಕ್ರ್, ಸ್ವಲಾತ್‍ಗೆ ಅದರದ್ದೇ ಆದ ಪಾವಿತ್ರತೆ ಇದೆ, ಅದನ್ನು ಹೇಳುವಾತ ಸ್ವರ್ಗವಾಸಿ ಆಗಲಿದ್ದಾನೆ, ಆತನ ಜೀವನ ಧನ್ಯ ಆಗಲಿದೆ ಎಂದು ಆತೂರುಮುಹಿಯುದ್ದೀನ್ ಜುಮಾ ಮಸೀದಿ ಖತೀಬ್ ಮುಹಿಯುದ್ದೀನ್ ಮುರ್ಷಿದ್ ಫೈಝಿ ಹೇಳಿದರು.ಅವರು ಡಿ. 29ರಂದು ಆತೂರು ಬದ್ರಿಯಾ ಜುಮಾ ಮಸೀದಿ ವತಿಯಿಂದ ಪ್ರತೀ ತಿಂಗಳು ಆಚರಿಸಿಕೊಂಡು ಬರುತ್ತಿರುವ ದಿಕ್ರ್ ಹಲ್ಖಾ ಇದರ 18ನೇ ವಾರ್ಷಿಕೋತ್ಸವ ಸಮಾರಂಭದ ಸಲುವಾಗಿ ಹಮ್ಮಿಕೊಳ್ಳಲಾದ ಧಾರ್ಮಿಕ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಬಹಳಷ್ಟು ಮಂದಿ ದಿಕ್ರ್ ನಮಾಜು ಬಳಿಕ

ಆತೂರು ದಿಕ್ರ್ ಹಲ್ಖಾ ವಾರ್ಷಿಕೋತ್ಸವ ► ದಿಕ್ರ್, ಸ್ವಲಾತ್ ಹೇಳುವಾತನ ಜೀವನ ಧನ್ಯ ಆಗಲಿದೆ-ಮುರ್ಷಿದ್ ಫೈಝಿ Read More »

ಕರಾವಳಿ

ನೇರೆಂಕಿಗುತ್ತು: ಶ್ರೀ ಚಕ್ರವರ್ತಿ ಕೊಡಮಣಿತ್ತಾಯ ಪರಿವಾರ ದೈವಗಳು ಮತ್ತು ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ

(ನ್ಯೂಸ್ ಕಡಬ) newskadaba.com. ಕಡಬ,ಡಿ.29. ಭೂತಾರಾಧನೆಯಲ್ಲಿ ನಂಬಿಕೆಯೇ ಪ್ರಧಾನವಾಗಿದೆ. ಪೂಜೆ ಮಾಡುತ್ತಿರುವಂತೆಯೇ ಅಲ್ಲಿ ಸಾನಿಧ್ಯ ಸನ್ನಿಹಿತವಾಗುವುದೇ ದೈವರಾಧನೆಯ ವಿಶೇಷ ಕಲ್ಪನೆಯಾಗಿದೆ. ಇದು ಹಂತ ಹಂತವಾಗಿ ನಮ್ಮ ಮುಂದೆ ಪ್ರಕಟಗೊಳ್ಳುತ್ತದೆ ಎಂದು ಜಾನಪದ ವಿದ್ವಾಂಸ ಎಲ್ಲೂರು ಕೆ.ಲಕ್ಷ್ಮೀನಾರಾಯಣಕುಂಡಂತಾಯರವರು ಹೇಳಿದರು.ಕಡಬ ತಾಲೂ ಕು ಹಳೆನೇರೆಂಕಿ ಗ್ರಾಮದ ನೇರೆಂಕಿಗುತ್ತು ಶ್ರೀ ಚಕ್ರವರ್ತಿ ಕೊಡಮಣಿತ್ತಾಯ ದೈವಸ್ಥಾನ ಮತ್ತು ಶ್ರೀ ಬ್ರಹ್ಮಬೈದರ್ಕಳ ಗರಡಿಯಲ್ಲಿ ನಡೆದ ಶ್ರೀ ದೈವಗಳ ಮತ್ತು ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವದ ಪ್ರಯುಕ್ತ ನಡೆದ ಧರ್ಮಜಾಗೃತಿ ಸಭೆಯಲ್ಲಿ ಮುಖ್ಯ ಉಪನ್ಯಾಸ ನೀಡಿದರು. ಈಗ ದೈವರಾಧಾನೆಯಲ್ಲೂ

ನೇರೆಂಕಿಗುತ್ತು: ಶ್ರೀ ಚಕ್ರವರ್ತಿ ಕೊಡಮಣಿತ್ತಾಯ ಪರಿವಾರ ದೈವಗಳು ಮತ್ತು ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ Read More »

ಕರಾವಳಿ

ಕೋಡಿಂಬಾಳ: ಮೂರಾಜೆ ಅಡೀಲು ಪರಿಶಿಷ್ಟ ಕಾಲೋನಿ ರಸ್ತೆ ಸಂಪರ್ಕಕ್ಕೆ ಮನವಿ

(ನ್ಯೂಸ್ ಕಡಬ) newskadaba.com.ಕಡಬ, ಡಿ.28. ಕೋಡಿಂಬಾಳ ಗ್ರಾಮದ ಮೂರಾಜೆ ಅಡೀಲು ದಲಿತ ಕಾಲೋನಿಗೆ ಸಂಪರ್ಕ ರಸ್ತೆ ನಿರ್ಮಿಸುವಂತೆ ಅಡೀಲು ಕಾಲೋನಿ ನಿವಾಸಿಗಳು ಪುತ್ತೂರು ಸಹಾಯಕ ಕಮಿಷ್‍ನರ್ , ಕಡಬ ತಹಶೀಲ್ದಾರ್ ಹಾಗೂ ಕಡಬ ಗ್ರಾ.ಪಂ ಗೆ ಮನವಿ ನೀಡಿ ಶೀಘ್ರ ರಸ್ತೆ ಮಾಡಿಸುವಂತೆ ಆಗ್ರಹಿಸಿದ ಘಟನೆ ನಡೆದಿದೆ. ದಲಿತ ಒಕ್ಕೂಟಗಳ ಕಡಬ ತಾಲೂಕು ಅಧ್ಯಕ್ಷ ವಸಂತ ಕುಬುಲಾಡಿಯವರ ನೇತೃತ್ವದಲ್ಲಿ ಅಡೀಲು ದಲಿತ ನಿವಾಸಿಗಳು ಕಡಬ ತಹಶೀಲ್ದಾರರಿಗೆ ಹಾಗೂ ಕಡಬ ಗ್ರಾ.ಪಂ ಪಿಡಿಒ ರವರಿಗೆ ಮನವಿ ಸಲ್ಲಿಸಿ ಹಲವಾರು ವರ್ಷಗಳ

ಕೋಡಿಂಬಾಳ: ಮೂರಾಜೆ ಅಡೀಲು ಪರಿಶಿಷ್ಟ ಕಾಲೋನಿ ರಸ್ತೆ ಸಂಪರ್ಕಕ್ಕೆ ಮನವಿ Read More »

ಕರಾವಳಿ

ಪೆರಾಬೆ ಸರಕಾರಿ ಉನ್ನತ ಹಿರಿಯ ಪ್ರಾಥಮಿಕ ಶಾಲಾ ವಾರ್ಷಿಕೋತ್ಸವ ಸಮಾರಂಭ

(ನ್ಯೂಸ್ ಕಡಬ) newskadaba.com .ಪೆರಾಬೆ,  ಡಿ. 25  ಯಾವುದೇ ಸಂಸ್ಥೆಯ ಇತಿಹಾಸ ತಿಳಿದು ಕೆಲಸ ನಿರ್ವಹಿಸಿದರೆ ಇತಿಹಾಸ ನಿರ್ಮಿಸಲು ಸಾಧ್ಯ ಎಂದು ಸುಳ್ಯ ಶಾಸಕ ಎಸ್ ಅಂಗಾರ ನುಡಿದರು. ಅವರು ಸೋಮವಾರ ರಾತ್ರಿ ಪೆರಾಬೆ ಸರಕಾರಿ ಉನ್ನತ ಹಿರಿಯ ಪ್ರಾಥಮಿಕ ಶಾಲಾ ವಾರ್ಷಿಕೋತ್ಸವ ಸಮಾರಂಭವನ್ನು ಉದ್ಟಾಟಿಸಿ ಮಾತನಾಡುತ್ತಿದ್ದರು. ಸ್ವಾರ್ಥ ಬಿಟ್ಟು ಸಮರ್ಪಣಾ ಭಾವದಿಂದ ಸೇವೆ ಮಾಡಿದಾಗ ಭವಿಷ್ಯದಲ್ಲಿ ಇತಿಹಾಸ ನಿರ್ಮಿಸ ಬಹುದು. ಸರಕಾರಿ ಶಾಲೆಗಳನ್ನು ಕ್ಷೇತ್ರದ ಶಾಸಕರಿಂದ ಉಳಿಸಿಕೊಳ್ಳಲು ಅಸಾಧ್ಯವಾದರೂ ಗ್ರಾಮದ ಜನತೆಯಿಂದ ಮಾತ್ರ ಸಾಧ್ಯ. ಇದಕ್ಕಾಗಿ ಗ್ರಾಮದ

ಪೆರಾಬೆ ಸರಕಾರಿ ಉನ್ನತ ಹಿರಿಯ ಪ್ರಾಥಮಿಕ ಶಾಲಾ ವಾರ್ಷಿಕೋತ್ಸವ ಸಮಾರಂಭ Read More »

ಕರಾವಳಿ

ಕಡಬದಿಂದ ಶಬರಿಮಲೆಗೆ ಪಾದಯಾತ್ರೆ

(ನ್ಯೂಸ್ ಕಡಬ) newskadaba.com  ಡಿ.  25. ಕಡಬ. ಶ್ರೀ ಶಬರಿಮಲೆ ಅಯ್ಯಪ್ಪ ಸ್ವಾಮಿಯ ದರ್ಶನ ಪಡೆಯಲು ಕಡಬದಿಂದ ನಾಲ್ವರು ಭಕ್ತರು ಪಾದಯಾತ್ರೆಯನ್ನು ಸೋಮವಾರದಿಂದ ಕೈಗೊಂಡಿದ್ದಾರೆ.ಕಡಬ ಶ್ರೀ ದುರ್ಗಾಂಬಿಕಾ ಭಜನಾ ಮಂಡಳಿಯ ಕಾರ್ಯದರ್ಶಿ ಮನೋಹರ್ ರೈ ಬೆದ್ರಾಜೆ, ಜತೆ ಕಾರ್ಯದರ್ಶಿ ದಿನೇಶ್ ಶೆಟ್ಟಿ ಕಳಾರ ಹಾಗೂ ಕಡಬ ಶ್ರೀ ದೇವಿ ಪ್ರೈಬ್ರೀಕೇಶನ್‍ನ ಸಹನ್ ಮತ್ತು ಇಚ್ಲಂಪಾಡಿಯ ವೇಣುಗೋಪಾಲ ರೈ ಪಾದಯಾತ್ರೆಯ ಮೂಲಕ ಶಬರಿಮಲೆಗೆ ಹೊರಟವರು. ಸೋಮವಾರ ಕಡಬ ಬೆದ್ರಾಜೆ ಮನೆಯಲ್ಲಿ ಗೋಳಿಯಡ್ಕ ಶ್ರೀ ರವೀಂದ್ರನ್ ಗುರುಸ್ವಾಮಿಯವರ ನೇತೃತ್ವದಲ್ಲಿ ಇರುಮುಡಿ ಕಟ್ಟಿ ಹೊರಟಿದ್ದಾರೆ, ಮನೋಹರ್

ಕಡಬದಿಂದ ಶಬರಿಮಲೆಗೆ ಪಾದಯಾತ್ರೆ Read More »

ಕರಾವಳಿ

ಬಂಟ್ವಾಳ ಗೃಹರಕ್ಷಕ ಕವಾಯತಿಗೆ ಜಿಲ್ಲಾ ಕಮಾಡೆಂಟ್ ಡಾ||ಮುರಳಿ ಮೋಹನ್ ಚೂಂತಾರು ಭೇಟಿ

(ನ್ಯೂಸ್ ಕಡಬ) newskadaba.com  ಬಂಟ್ವಾಳ ಡಿ. 22. ದಿನಾಂಕ 21-12-2018ರ ಶುಕ್ರವಾರ ಬಂಟ್ವಾಳ ಗೃಹರಕ್ಷಕ ಘಟಕದ ವಾರದ ಕವಾಯತಿಗೆ ಜಿಲ್ಲಾ ಕಮಾಡೆಂಟ್ ಡಾ||ಮುರಳಿ ಮೋಹನ್ ಚೂಂತಾರು ರವರು ಭೇಟಿ ನೀಡಿ ವಾರದ ಕವಾಯತು ವೀಕ್ಷಣೆ ನಡೆಸಿದರು. ನಂತರ ಬಂಟ್ವಾಳ ಘಟಕದಲ್ಲಿ ಸುಮಾರು 26 ವರ್ಷ ಸೇವೆ ಸಲ್ಲಿಸಿದ ಐತ್ತಪ್ಪರವರನ್ನು ತಿಂಗಳ ಗೃಹರಕ್ಷಕರಾಗಿ ಜಿಲ್ಲಾ ಕಮಾಡೆಂಟ್ ಡಾ||ಮುರಳಿ ಮೋಹನ್ ಚೂಂತಾರುರವರು ಸನ್ಮಾನಿಸಿದರು. ಈ ವೇಳೆ ಮಾತನಾಡಿದ ಜಿಲ್ಲಾ ಕಮಾಡೆಂಟ್  ಗೃಹರಕ್ಷಕ ಐತ್ತಪ್ಪರವರ 26 ವರ್ಷದ ಸೇವೆ ಇಲಾಖೆ ಗೌರವ ತಂದಿದೆ.

ಬಂಟ್ವಾಳ ಗೃಹರಕ್ಷಕ ಕವಾಯತಿಗೆ ಜಿಲ್ಲಾ ಕಮಾಡೆಂಟ್ ಡಾ||ಮುರಳಿ ಮೋಹನ್ ಚೂಂತಾರು ಭೇಟಿ Read More »

ಕರಾವಳಿ
Scroll to Top