newskadaba

ವೈದ್ಯಕೀಯ ವೃತ್ತಿಯ ತಿರುಳು ಇರುವುದೇ ತ್ಯಾಗದಲ್ಲಿ: ಡಾ|| ಬನಾರಿ

(ನ್ಯೂಸ್ ಕಡಬ) newskadaba.com, ಹೊಸಂಗಡಿ, ಡಿ.3  ತ್ಯಾಗವಿಲ್ಲದೆ ಬದುಕಿಲ್ಲ ಅದರಲ್ಲೂ ಜನರ ಸೇವೆಯಲ್ಲಿಯೇ ನಿರತರಾಗಿರುವ ವೈದ್ಯರಲ್ಲಿ ತ್ಯಾಗದ ಪ್ರಮಾಣ ಹೆಚ್ಚಾಗಿರುತ್ತದೆ ಎಂದು ಹಿರಿಯ ಸಾಹಿತಿ ಡಾ|| ರಮಾನಂದ ಬನಾರಿ ಅಭಿಪ್ರಾಯಪಟ್ಟರು. ಹೊಸಂಗಡಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಪ್ರಸ್ತುತ ಹೈಲ್ಯಾಂಡ್ ಕಾಂಪ್ಲೆಕ್ಸ್‍ಗೆ ಸ್ಥಳಾಂತರಗೊಂಡ ಸುರಕ್ಷ ದಂತ ಚಿಕಿತ್ಸಾಲಯವನ್ನು ಉದ್ಘಾಟಿಸಿ ಮಾತನಾಡಿದರು. ಭಗವದ್ಗೀತೆಯಲ್ಲಿ ಯಜ್ಞ, ದಾನ ಹಾಗೂ ತಪಸ್ಸು ಆದರ್ಶ ಮನುಷ್ಯ ಜೀವನದಲ್ಲಿರಬೇಕೆಂದು ತಿಳಿಸಲಾಗಿದೆ. ಆದರೆ ಈ ಮೂರರಲ್ಲಿಯೂ ದಾನವೊಂದೇ ಅಂತರ್ಗತವಾಗಿರುತ್ತದೆ. ವೃತ್ತಿಯೊಂದಿಗೆ ಸಾಮಾಜಿಕ ಕಳಕಳಿಯ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವ ಡಾ|| ಮುರಲೀಮೋಹನ ಚೂಂತಾರು […]

ವೈದ್ಯಕೀಯ ವೃತ್ತಿಯ ತಿರುಳು ಇರುವುದೇ ತ್ಯಾಗದಲ್ಲಿ: ಡಾ|| ಬನಾರಿ Read More »

ಕರಾವಳಿ

ಗೃಹರಕ್ಷಕರ ಪಶ್ವಿಮ ವಲಯ ವೃತ್ತಿಪರ ಕ್ರೀಡಾಕೂಟದ ಉಧ್ಥಾಟನಾ ಸಮಾರಂಭ

(ನ್ಯೂಸ್ ಕಡಬ) newskadaba.com, ಮಂಗಳೂರು, ಡಿ.3  ಗೃಹರಕ್ಷಕರ ವಲಯ ಮಟ್ಟದ ವೃತ್ತಿಪರ ಕ್ರೀಡಾಕೂಟದ 2019 ಇದರ ಉದ್ಘಾಟನಾ ಸಮಾರಂಭ ಭಾನುವಾರದಂದು ಸಂಜೆ 5.00 ಗಂಟೆಗೆ ಪೊಲೀಸ್ ಪೆರೇಡ್ ಮೈದಾನದಲ್ಲಿ ನಡೆಯಿತು. ತುಕಡಿ ನಾಯಕರಾದ ಶ್ರೀ ವಸಂತ್ ಕುಮಾರ್ ಇವರ ನೇತೃತ್ವದಲ್ಲಿ ಅತಿಥಿಗಳಿಗೆ ಗೌರವ ವಂದನೆಯನ್ನು ನೀಡಲಾಯಿತು. ಕ್ರೀಡಾ ಜ್ಯೋತಿಯ ಆಗಮನವನ್ನು ಶ್ರೀ ಚೇತನ್, ಮೆಟಲ್ ಸಂಖ್ಯೆ 5, ಮಂಗಳೂರು ಘಟಕ ಇವರು ನಿರ್ವಹಿಸಿದರು. ಉಪ ಸಮಾದೇಷ್ಟರಾದ ಶ್ರೀ ರಮೇಶ್ ಇವರು ಪ್ರತಿಜ್ಞಾ ವಿಧಿ ಭೋದಿಸಿದರು. ಕಾರ್ಯಕ್ರಮದ ಉದ್ಘಾಟನೆಯನ್ನು

ಗೃಹರಕ್ಷಕರ ಪಶ್ವಿಮ ವಲಯ ವೃತ್ತಿಪರ ಕ್ರೀಡಾಕೂಟದ ಉಧ್ಥಾಟನಾ ಸಮಾರಂಭ Read More »

ಕರಾವಳಿ

ಕಡ್ಯ ಕೊಣಾಜೆ: ಕಬಡ್ಡಿ ಪಂದ್ಯಾಟ

(ನ್ಯೂಸ್ ಕಡಬ) newskadaba.com, ಕಲ್ಲುಗುಡ್ಡೆ , ಡಿ.3  ರಾಮನಗರ ಯುವಕ ಮಂಡಲದ ವತಿಯಿಂದ ಕಡ್ಯ ಕೊಣಾಜೆ ಶಾಲಾ ಕ್ರೀಡಾಂಗಣದಲ್ಲಿ 6ನೇ ವರ್ಷದ ದೀಪಾವಳಿ ಪ್ರಯುಕ್ತ ಕಬಡ್ಡಿ ಪಂದ್ಯಾಟ ಇತ್ತೀಚೆಗೆ ನಡೆಯಿತು. ಕಡ್ಯ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಗಂಗಾಧರ ಗೌಡ ದೊಡ್ಡಮನೆ ಪಂದ್ಯಾಟ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಗ್ರಾ.ಪಂ. ಉಪಾಧ್ಯಕ್ಷ ಯಶೋಧರ ಗೌಡ ಉಪಸ್ಥಿತರಿದ್ದರು. ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಶ್ರೀ ರಾಮನಗರ ಯುವಕ ಮಂಡಲದ ಅಧ್ಯಕ್ಷ ಪುಂಡರೀಕಾಕ್ಷ ವಹಿಸಿದ್ದರು. ಹೊನ್ನಪ್ಪ ಗೌಡ ಕಲ್ಲೂರು, ಗಂಗಾಧರ ಗೌಡ ದೊಡ್ಡಮನೆ,

ಕಡ್ಯ ಕೊಣಾಜೆ: ಕಬಡ್ಡಿ ಪಂದ್ಯಾಟ Read More »

ಕರಾವಳಿ

ಗಂಡಿಬಾಗಿಲು ಮದ್ರಸದಲ್ಲಿ ಪ್ರಾರ್ಥನಾ ದಿನಾಚರಣೆ

(ನ್ಯೂಸ್ ಕಡಬ) newskadaba.com, ಉಪ್ಪಿನಂಗಡಿ, ಡಿ.2.   ಹಿಮಾಯತುಲ್ ಇಸ್ಲಾಂ ಮದ್ರಸ ಗಂಡಿಬಾಗಿಲು ಇದರ ಆಶ್ರಯದಲ್ಲಿ ಸಮಸ್ತ ಪ್ರಾರ್ಥನಾ ದಿನಾಚರಣೆ ಕಾರ್ಯಕ್ರಮ ಭಾನುವಾರದಂದು ಜರುಗಿತು. ಗಂಡಿಬಾಗಿಲು ಮಸೀದಿ ಖತೀಬ್ ಸೆಯ್ಯದ್ ಅನಸ್ ತಂಙಳ್ ಕಾರ್ಯಕ್ರಮ ಉದ್ಘಾಟಿಸಿ ಪ್ರಾರ್ಥನಾ ದಿನಾಚರಣೆ ಮಹತ್ವದ ಬಗ್ಗೆ ಸಂದರ್ಭೋಚಿತವಾಗಿ ಮಾತನಾಡಿದರು. ಸಮಾರಂಭದಲ್ಲಿ ಗಂಡಿಬಾಗಿಲು ಮಸೀದಿ ಅಧ್ಯಕ್ಷ ಹಸೈನಾರ್ ಹಾಜಿ, ಕಾರ್ಯದರ್ಶಿ ಜಿ. ಮಹಮ್ಮದ್ ರಫೀಕ್, ಉಪಾಧ್ಯಕ್ಷ ಎಸ್. ಆದಂ ಹಾಜಿ, ಮದ್ರಸದ ಮುಅಲ್ಲಿಂ ರಫೀಕ್ ಮುಸ್ಲಿಯಾರ್, ಜೊತೆ ಕಾರ್ಯದರ್ಶಿ ಅಬ್ದುಲ್ ರಜಾಕ್ ಮರ್ವೇಲ್, ಎಸ್.ಕೆ.ಎಸ್.ಎಸ್.ಎಫ್.

ಗಂಡಿಬಾಗಿಲು ಮದ್ರಸದಲ್ಲಿ ಪ್ರಾರ್ಥನಾ ದಿನಾಚರಣೆ Read More »

ಕರಾವಳಿ

ಪ್ರಾಮಾಣಿಕ ಚಾಲಕರಿಗೆ ಪುರಸ್ಕಾರ- ಅರ್ಜಿ ಸಲ್ಲಿಸುವ ಅವಧಿ ವಿಸ್ತರಣೆ

 (ನ್ಯೂಸ್ ಕಡಬ) newskadaba.com, ಮಂಗಳೂರು, ನ.29.  ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಪ್ರಾಮಾಣಿಕವಾಗಿ ಮತ್ತು ಅಪಘಾತರಹಿತವಾಗಿ ಸೇವೆ ಸಲ್ಲಿಸಿರುವ ಚಾಲಕರನ್ನು ಗುರುತಿಸಿ ಪುರಸ್ಕಾರ ನೀಡಲು ಅರ್ಜಿ ಸಲ್ಲಿಸುವ ಕೊನೆಯ ದಿನವನ್ನು ಡಿಸೆಂಬರ್ 20 ರ ತನಕ ವಿಸ್ತರಿಸಲಾಗಿದೆ. ನೋಂದಾಯಿತ ಯೂನಿಯನ್/ಸಂಘಗಳು ಚಾಲಕರ ವಿವರಗಳನ್ನು ದಾಖಲೆಗಳೊಂದಿಗೆ ಶಿಫಾರಸು ಮಾಡಬಹುದು. ಹೆಚ್ಚಿನ ವಿವರಗಳಿಗೆ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಸಂಬಂದಿಸಿದ ಪ್ರಾದೇಶಿಕ ಸಾರಿಗೆ ಕಚೇರಿಗಳನ್ನು ಸಂಪರ್ಕಿಸಲು ಸದಸ್ಯ ಕಾರ್ಯದರ್ಶಿ ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿ, ದ.ಕ.ಜಿಲ್ಲೆ ಹಾಗೂ

ಪ್ರಾಮಾಣಿಕ ಚಾಲಕರಿಗೆ ಪುರಸ್ಕಾರ- ಅರ್ಜಿ ಸಲ್ಲಿಸುವ ಅವಧಿ ವಿಸ್ತರಣೆ Read More »

ಕರಾವಳಿ

ನೆಲ್ಯಾಡಿ ಕಾರು ಕಳ್ಳತನ

 (ನ್ಯೂಸ್ ಕಡಬ) newskadaba.com, ಉಪ್ಪಿನಂಗಡಿ , ನ.28.  ಮನೆಯ ಶೆಡ್ ನಲ್ಲಿದ್ದ ಕಾರು ಹಾಗೂ ಮನೆಯೊಳಗಿದ್ದ ಎರಡು ಮೊಬೈಲ್ ಫೋನ್ ಗಳನ್ನು ಕಳವುಗೈದ ಘಟನೆ ನೆಲ್ಯಾಡಿಯಲ್ಲಿ ನಡೆದಿದೆ. ಕಡಬ ತಾಲೂಕು ನೆಲ್ಯಾಡಿ ಗ್ರಾಮದ ಪದ್ದಡ್ಕ ನಿವಾಸಿ ಸುನಿತ ಎಂಬವರಿಗೆ ಬೆಳಗಿನ ಜಾವ 03.30 ಗಂಟೆಗೆ ಎಚ್ಚರವಾಗಿ ನೋಡಿದಾಗ,ಮೊಬೈಲ್ ಫೋನು ಕಾಣಿಸದೆ ಇದ್ದು, ಹಿಂಬಾಗಿಲು ತೆರೆದಿತ್ತು. ಹೊರಗೆ ಬಂದು ಕಾರು ಶೆಡ್ಡು ನೋಡಿದಾಗ ಶೆಡ್ನಲ್ಲಿ ಇರಿಸಿದ ಮಾರುತಿ ಅಲ್ಟೋ 800 ಕಾರನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುವುದು

ನೆಲ್ಯಾಡಿ ಕಾರು ಕಳ್ಳತನ Read More »

ಕರಾವಳಿ

ಮಾರ್ ಇವಾನಿಯೋಸ್ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯದ ಪ್ರಶಿಕ್ಷಣಾರ್ಥಿಗಳಿಂದ ಕುಪ್ಪಳ್ಳಿಯ ಕವಿಶೈಲಕ್ಕೆ ಭೇಟಿ

(ನ್ಯೂಸ್ ಕಡಬ) newskadaba.com, ಕಡಬ, ನ.27.  ಇಲ್ಲಿನ ಮಾರ್ ಇವಾನಿಯೋಸ್ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯದ ದ್ವಿತೀಯ ವರ್ಷದ ಪ್ರಶಿಕ್ಷಣಾರ್ಥಿಗಳಿಗೆ ಕಲೆ ಮತ್ತು ಸಾಹಿತ್ಯದ ತಿಳುವಳಿಕೆ ಮೂಡಿಸುವ ಸಲುವಾಗಿ ತಿರ್ಥಹಳ್ಳಿ ತಾಲೂಕಿನ ಕುಪ್ಪಳ್ಳಿಯ ಕವಿಶೈಲಕ್ಕೆ ಭೇಟಿ ನೀಡಲಾಯಿತು. ತೃತೀಯ ಸೆಮಿಸ್ಟರ್ ನ ಪ್ರಶಿಕ್ಷಣಾರ್ಥಿಗಳ ಪಠ್ಯಕ್ರಮದ ಅಂಗವಾಗಿ ರಾಷ್ಟ್ರಕವಿ, ಕನ್ನಡದ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕುವೆಂಪುರವರ ಹುಟ್ಟೂರಿನ ಮನೆಯಾದ ಶಿವಮೊಗ್ಗ ಜಿಲ್ಲೆಯ ತಿರ್ಥಹಳ್ಳಿಯ ಕವಿಶೈಲಕ್ಕೆ ಭೇಟಿ ನೀಡಿ ಕುವೆಂಪುರವರ ಬಗೆಗಿನ ಸಮಗ್ರ ಮಾಹಿತಿಯನ್ನು ಸಂಗ್ರಹಿಸಿದರು. ಕಾಲೇಜಿನ ಉಪನ್ಯಾಸಕ ಶ್ರೀ ರಘುನಂದನ

ಮಾರ್ ಇವಾನಿಯೋಸ್ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯದ ಪ್ರಶಿಕ್ಷಣಾರ್ಥಿಗಳಿಂದ ಕುಪ್ಪಳ್ಳಿಯ ಕವಿಶೈಲಕ್ಕೆ ಭೇಟಿ Read More »

ಕರಾವಳಿ

ಅಕ್ರಮ ಮರಳುಗಾರಿಕೆ ಮತ್ತು ಸಾಗಾಟಕ್ಕೆ ಕಡಿವಾಣ

 (ನ್ಯೂಸ್ ಕಡಬ) newskadaba.com, ಮಂಗಳೂರು, ನ.27.  ದ.ಕ ಜಿಲ್ಲೆಯ ವ್ಯಾಪ್ತಿಯಲ್ಲಿ ಅಕ್ರಮ ಮರಳುಗಾರಿಕೆ ಮತ್ತು ಸಾಗಾಟವನ್ನು ಕಟ್ಟುನಿಟ್ಟಾಗಿ ತಡೆಯಲು ನವೆಂಬರ್ 21 ರಂದು ದ.ಕ ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ಸಭೆಯನ್ನು ನಡೆಸಿದ್ದು, ಜಿಲ್ಲೆಯಲ್ಲಿ ಸಂಪೂರ್ಣವಾಗಿ ಅಕ್ರಮ ಮರಳು ಗಣಿಗಾರಿಕೆ, ಸಾಗಾಟ ಹಾಗೂ ದಾಸ್ತಾನನ್ನು ತಡೆಗಟ್ಟಲು ಸಂಬಂಧಪಟ್ಟ ಎಲ್ಲಾ ಅಧಿಕಾರಿಗಳು ಕಟ್ಟುನಿಟ್ಟಾಗಿ ಕಾರ್ಯನಿರ್ವಹಿಸಲು ಸೂಚಿಸಲಾಗಿದೆ. ಜಿ.ಪಿ.ಎಸ್ ಅಳವಡಿಸಿ ಕಾರ್ಯಾಚರಿಸುತ್ತಿರುವ ವಾಹನಗಳು ಮಾತ್ರ ಮರಳು ಸಾಗಾಟ ಮಾಡಬೇಕು ಮತ್ತು ಜಿಲ್ಲೆಯ ಕೇರಳ ಗಡಿ ಭಾಗದಲ್ಲಿ ಯಾವುದೇ ಅಕ್ರಮ ಗಣಿಗಾರಿಕೆ

ಅಕ್ರಮ ಮರಳುಗಾರಿಕೆ ಮತ್ತು ಸಾಗಾಟಕ್ಕೆ ಕಡಿವಾಣ Read More »

ಕರಾವಳಿ

ಬಿಸಿಯೂಟಕ್ಕೆ ಶಾಲೆಯಲ್ಲಿಯೇ ಬೆಳೆದರು ತರಕಾರಿ ➤ನೂಜಿಬಾಳ್ತಿಲ ಶಾಲೆಯಲ್ಲಿದೆ ವಿವಿಧ ಬಗೆಯ ತರಕಾರಿ ಕೈ ತೋಟ

(ನ್ಯೂಸ್ ಕಡಬ) newskadaba.com ಕಲ್ಲುಗುಡ್ಡೆ, ನ.26  ಸರಕಾರಿ ಪ್ರಾಥಮಿಕ ಶಾಲಾ ಆವರಣದಲ್ಲಿಯೇ ಸಮೃದ್ಧ ತರಕಾರಿ ಕೃಷಿಯ ಕೈ ತೋಟ ನಿರ್ಮಿಸಿ, ಮದ್ಯಾಹ್ನದ ಬಿಸಿಯೂಟಕ್ಕೆ ಅನುಕೂಲವಾಗುವಂತೆ ವಿವಿಧ ಬಗೆಯ ತರಕಾರಿಗಳನ್ನು ಬೆಳೆದು ಮಾದರಿಯಾಗಿದ್ದಾರೆ ಈ ಶಾಲೆಯವರು. ಕಡಬ ತಾಲೂಕಿನ ನೂಜಿಬಾಳ್ತಿಲ ಗ್ರಾಮದ ಕಲ್ಲುಗುಡ್ಡೆ ಉನ್ನತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಈ ವಿಶೇಷ ತರಕಾರಿ ಕೈ ತೋಟವನ್ನು ಮಾಡಿದ್ದು, ಇದೀಗ ತರಕಾರಿ ಯಥೇಚ್ಚವಾಗಿ ಬೆಳೆದು ಫಸಲು ಬಂದಿದ್ದು, ಶ್ರಮಪಟ್ಟ ತಂಡ ಇದೀಗ ಸಂತೋಷದ ನಗೆ ಬೀರಿದ್ದಾರೆ. ಈ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ

ಬಿಸಿಯೂಟಕ್ಕೆ ಶಾಲೆಯಲ್ಲಿಯೇ ಬೆಳೆದರು ತರಕಾರಿ ➤ನೂಜಿಬಾಳ್ತಿಲ ಶಾಲೆಯಲ್ಲಿದೆ ವಿವಿಧ ಬಗೆಯ ತರಕಾರಿ ಕೈ ತೋಟ Read More »

ಕರಾವಳಿ

ಲಕ್ಷದೀಪೋತ್ಸವ ದಿಕ್ಸೂಚಿ ನುಡಿ ➤ ಜಗವು ಧರ್ಮದ ನೆಲೆಯಾಗಲಿ: ಡಾ.ಡಿ.ವೀರೇಂದ್ರ ಹೆಗ್ಗಡೆ

(ನ್ಯೂಸ್ ಕಡಬ) newskadaba.com ಧರ್ಮಸ್ಥಳ, ನ.25  ಶುಕ್ರವಾರ ಸಂಜೆ ಚಾಲನೆ ಕಂಡ ಶ್ರೀಕ್ಷೇತ್ರ ಧರ್ಮಸ್ಥಳದ ಲಕ್ಷದೀಪೋತ್ಸವದ ಪ್ರಸಕ್ತ ವರ್ಷದ ಮೌಲಿಕ ಸಂದೇಶ ಇಡೀ ಜಗತ್ತು ಒಳಿತಿನೆಡೆಗೆ ಸಾಗಬೇಕಾದ ಅಗತ್ಯವನ್ನು ಮನಗಾಣಿಸಿತು. ಉಜಿರೆಯಿಂದ ಧರ್ಮಸ್ಥಳದವರೆಗಿನ ಪಾದಯಾತ್ರೆಯಲ್ಲಿ ಪಾಲ್ಗೊಂಡು ಧರ್ಮಸ್ಥಳಕ್ಕೆ ಆಗಮಿಸಿದ ಭಕ್ತಸಮೂಹವನ್ನು ಉದ್ದೇಶಿಸಿ ಮಾತನಾಡಿದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಅವರ ನುಡಿಗಳು ಲಕ್ಷದೀಪೋತ್ಸವದ ಈ ಸಲದ ಕೇಂದ್ರ ಆಶಯವನ್ನು ಧ್ವನಿಸಿದವು. ಕಳೆದ ಆರು ವರ್ಷಗಳಿಂದ ಆಯೋಜಿತವಾಗುತ್ತಿರುವ ಪಾದಯಾತ್ರೆಯ ಮಹತ್ವ ವಿವರಿಸುತ್ತಲೇ ಈ ವರ್ಷದ ಲಕ್ಷದೀಪೋತ್ಸವದ ಮೂಲಕ ಕಂಡುಕೊಳ್ಳಬೇಕಾದ ಮೌಲ್ಯ

ಲಕ್ಷದೀಪೋತ್ಸವ ದಿಕ್ಸೂಚಿ ನುಡಿ ➤ ಜಗವು ಧರ್ಮದ ನೆಲೆಯಾಗಲಿ: ಡಾ.ಡಿ.ವೀರೇಂದ್ರ ಹೆಗ್ಗಡೆ Read More »

ಕರಾವಳಿ
Scroll to Top