newskadaba

ಬೈಕ್ ಸ್ಟಂಟ್ ಮಾಡಿ ಪ್ರಾಣ ಕಳೆದುಕೊಂಡ ಮೂವರು ಯುವಕರು

(ನ್ಯೂಸ್ ಕಡಬ) newskadaba.com.ಬೆಂಗಳೂರು,ಜೂ.21:ಬೆಳ್ಳಂಬೆಳಗ್ಗೆ ಬೈಕ್‍ನಲ್ಲಿ ಸ್ಟಂಟ್ ಮಾಡಲು ಹೋಗಿ ಮೂವರು ಯುವಕರು ಮೃತಪಟ್ಟ ಘಟನೆ ಯಲಹಂಕ ಸಮೀಪ ವಿಮಾನ ನಿಲ್ದಾಣ ರಸ್ತೆಯಲ್ಲಿ ನಡೆದಿದೆ. ಇಂದು ಬೆಳಗ್ಗೆ ರಸ್ತೆ ಖಾಲಿಯಿದೆ ಎಂದು ಬೈಕ್‍ನಲ್ಲಿ ಹೊರಟ ಯುವಕರು ಹುರುಪಿನಿಂದ ಸ್ಟಂಟ್ ಮಾಡಿದ್ದಾರೆ. ಈ ಸಂದರ್ಭ ಸ್ಕಿಡ್ ಆಗಿ ಬಿದ್ದು ಮೃತಪಟ್ಟಿದ್ದಾರೆ. ಮೃತರು ಬೆಂಗಳೂರಿನ ಗೋವಿಂದಪುರ ಪ್ರದೇಶದವರು ಎಂದು ತಿಳಿದು ಬಂದಿದೆ. ಯಲಹಂಕ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿದೆ.

ಬೈಕ್ ಸ್ಟಂಟ್ ಮಾಡಿ ಪ್ರಾಣ ಕಳೆದುಕೊಂಡ ಮೂವರು ಯುವಕರು Read More »

ಕರ್ನಾಟಕ

ಸುಳ್ಯದಲ್ಲಿ ಬಿಜೆಪಿ ಶಕ್ತಿ ಕೇಂದ್ರದ ವತಿಯಿಂದ ಯೋಗ ದಿನಾಚರಣೆ

(ನ್ಯೂಸ್ ಕಡಬ) newskadaba.com. ಸುಳ್ಯ,ಜೂ.21: ಇಂದು ಅಂತರಾಷ್ಟ್ರೀಯ ಯೋಗ ದಿನಾಚರಣೆ. ಈ ಹಿನ್ನಲೆಯಲ್ಲಿ ಸುಳ್ಯ ನಗರ ಬಿಜೆಪಿ ಶಕ್ತಿ ಕೇಂದ್ರದ ವತಿಯಿಂದ ಕೇರ್ಪಳ ಶ್ರೀ ದುರ್ಗಾಪರಮೇಶ್ವರಿ ಕಲಾ ಮಂದಿರದಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಆಚರಿಸಲಾಯಿತು. ಹಾಗೆಯೇ, ಸ್ವದೇಶಿ ಸಂಕಲ್ಪ ಪ್ರತಿಜ್ಞೆಯನ್ನು ಸ್ವೀಕರಿಸಲಾಯಿತು. ಯೋಗ ದಿನಾಚರಣೆ ಸಂದಭ್ದಲ್ಲಿ ಶಕ್ತಿ ಕೇಂದ್ರದ ಅಧ್ಯಕ್ಷ ಐ ಬಿ ಚಂದ್ರಶೇಖರ, ಕಾರ್ಯದರ್ಶಿ ಜಿನ್ನಪ್ಪ ಪೂಜಾರಿ, ಸಿಎ ಬ್ಯಾಂಕ್ ಅಧ್ಯಕ್ಷ ಹರೀಶ್ ಬೂಡುಪನ್ನೆ, ನಗರ ಪಂಚಾಯತ್ ಸದಸ್ಯರುಗಳಾದ ವಿನಯಕುಮಾರ್ ಕಂದಡ್ಕ, ಸುಧಾಕರ ಕುರುಂಜಿಭಾಗ್, ಬೂತ್

ಸುಳ್ಯದಲ್ಲಿ ಬಿಜೆಪಿ ಶಕ್ತಿ ಕೇಂದ್ರದ ವತಿಯಿಂದ ಯೋಗ ದಿನಾಚರಣೆ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಕೊಯಿಲ: ಸಬಳೂರು ಶ್ರೀರಾಮ ಭಜನಾ ಮಂಡಳಿ ವತಿಯಿಂದ ಹುತಾತ್ಮ ಯೋಧರಿಗೆ ಶ್ರದ್ಧಾಂಜಲಿ

(ನ್ಯೂಸ್ ಕಡಬ) newskadaba.com ಕಡಬ, ಜೂ.21. ಕಡಬ ತಾಲೂಕು ಕೊಯಿಲ ಗ್ರಾಮದ ಸಬಳೂರು ಅಯೋದ್ಯನಗರ ಶ್ರೀ ರಾಮ ಭಜನಾ ಮಂಡಳಿ ವತಿಯಿಂದ ಲಡಕ್ ಗಡಿ ಭಾಗದಲ್ಲಿ ಚೀನಾ ಯೋಧರೊಂದಿಗೆ ಹೋರಾಡಿ ದೇಶಕ್ಕಾಗಿ ಬಲಿದಾನಗೈದಿರುವ ನಮ್ಮ ದೇಶದ ಇಪ್ಪತ್ತು ವೀರ ಯೋಧರಿಗೆ ಶ್ರದ್ದಾಂಜಲಿ ಕಾರ್ಯಕ್ರಮ ಶನಿವಾರ ಭಜನಾ ಮಂದಿರದಲ್ಲಿ ನಡೆಯಿತು. ವೀರ ಮರಣವನ್ನಪ್ಪಿದ ಯೋಧರಿಗೆ ನುಡಿನಮನ ಸಲ್ಲಿಸಿ, ಒಂದು ನಿಮಿಷದ ಮೌನ ಪ್ರಾರ್ಥನೆ ಸಲ್ಲಿಸಲಾಯಿತು. ಆಲಂಕಾರು ಸಿ . ಎ ಬ್ಯಾಂಕ್ ನಿರ್ದೇಶಕ ರಾಮಚಂದ್ರ ನಾಯ್ಕ ಏಣಿತ್ತಡ್ಕ, ಶ್ರೀ

ಕೊಯಿಲ: ಸಬಳೂರು ಶ್ರೀರಾಮ ಭಜನಾ ಮಂಡಳಿ ವತಿಯಿಂದ ಹುತಾತ್ಮ ಯೋಧರಿಗೆ ಶ್ರದ್ಧಾಂಜಲಿ Read More »

ಕರಾವಳಿ

ಕೋವಿಡ್ -19 ಸಂಕಷ್ಟ➤ ನಷ್ಟದ ಭೀತಿಯಲ್ಲಿ ದಕ್ಷಿಣ ಕನ್ನಡ ಹಾಲು ಒಕ್ಕೂಟ

(ನ್ಯೂಸ್ ಕಡಬ) newskadaba.com ಮಂಗಳೂರು,ಜೂ.21:   ಕೋವಿಡ್ 19 ಸಂಕಷ್ಟದಿಂದ ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ವಹಿವಾಟಿಗೂ ತೊಮದರೆ ಉಂಟಾಗಿದೆ. ಒಕ್ಕೂಟದಲ್ಲಿ ಹಾಲು ಶೇಖರಣೆ ಏರಿಕೆಯಾಗಿದ್ದು, ನಿತ್ಯ 5 ಲಕ್ಷ ಕೆ.ಜಿ. ಗೂ ಸಧೀಕ ಹಾಲು ಸಂಗ್ರಹಣೆಯಾಗುತ್ತಿದೆ. ಕೋವಿಡ್ -19 ರ ಸಮಸ್ಯೆಯಿಮದ ಹಾಲು ಮತ್ತು ಹಾಲಿನ ಉತ್ಪನ್ನಗಳ ಮಾರಾಟದ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗಿದೆ. ಕರ್ನಾಟಕ ಹಾಲು ಮಹಾಮಂಡಳಿಗೆ ನಿತ್ಯ ಮಹಾಮಂಡಳಿಗೆ ನಿತ್ಯ 86.73 ಲಕ್ಷ ಲೀಟರ್ ಹಾಲು ಸಂಗ್ರಹನೆಯಾಗುತ್ತಿದ್ದು, ರಾಜ್ಯದಲ್ಲಿ ಹಾಲು ಮತ್ತು

ಕೋವಿಡ್ -19 ಸಂಕಷ್ಟ➤ ನಷ್ಟದ ಭೀತಿಯಲ್ಲಿ ದಕ್ಷಿಣ ಕನ್ನಡ ಹಾಲು ಒಕ್ಕೂಟ Read More »

ಕರಾವಳಿ, ಕರ್ನಾಟಕ

ಎಸ್‍ಎಸ್‍ಎಲ್‍ಸಿ ಪರೀಕ್ಷೆ ಬರೆಯಬೇಕಿದ್ದ ಬಾಲಕನಿಗೆ ಕೊರೊನಾ

(ನ್ಯೂಸ್ ಕಡಬ) newskadaba.com.ಬೆಳಗಾವಿ,ಜೂ.21:ಜೂನ್ 25 ಎಸ್‍ಎಸ್‍ಎಲ್‍ಸಿ ಪರೀಕ್ಷೆ ಬರೆಯಬೇಕಿದ್ದ 16 ವರ್ಷದ ಬಾಲಕನಿಗೆ ಕೊರೊನಾ ಸೋಂಕು ತಗುಲಿರುವ ಘಟನೆ ಬೆಳಗಾವಿ ಜಿಲ್ಲೆಯ ಚ.ಕಿತ್ತೂರು ತಾಲೂಕಿನ ಕಲಬಾಂವಿಯಲ್ಲಿ ನಡೆದಿದೆ. ಈ ಬಾಲಕ ಹೊರರಾಜ್ಯದ ಹಿನ್ನೆಲೆ ಹೊಂದಿದ್ದರಿಂದ ಸೋಂಕು ತಗುಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈತ ಕಲಬಾಂವಿಯಲ್ಲಿ ಮುಂಬರಲಿರುವ ಎಸ್‍ಎಸ್‍ಎಲ್‍ಸಿ ಪರೀಕ್ಷೆ ಬರೆಯಬೇಕಿತ್ತು ಆದರೆ ಈಗ ಆತನಿಗೆ ಸೋಂಕು ತಗುಲಿರುವುದರಿಂದ ಪರೀಕ್ಷೆ ಎದುರಿಸುವುದು ಅನುಮಾನ ಎಂದೇ ಹೇಳಲಾಗುತ್ತಿದೆ. ಬಾಲಕ ಈ ಹಿಂದೆ ಚೆನ್ನೈನಲ್ಲಿರುವ ಆತನ ಅಕ್ಕನ ಮನೆಗೆ ಹೋಗಿ ಬಂದಿದ್ದ

ಎಸ್‍ಎಸ್‍ಎಲ್‍ಸಿ ಪರೀಕ್ಷೆ ಬರೆಯಬೇಕಿದ್ದ ಬಾಲಕನಿಗೆ ಕೊರೊನಾ Read More »

ಕರಾವಳಿ, ಕರ್ನಾಟಕ

ಮಾಂಸ ಸಾಗಾಟಕ್ಕೆ ಅಡ್ಡಿ ➤ ವಾಹನ ಚಾಲಕನಿಗೆ ಹಲ್ಲೆ

(ನ್ಯೂಸ್ ಕಡಬ) newskadaba.com ಮಂಗಳೂರು, ಜೂ.21: ಕುದ್ರೋಳಿಯ ವಧಾಗೃಹದಿಂದ ಕಂಕನಾಡಿಯ ಮಾರುಕಟ್ಟೆಗೆ ಮಾಂಸ ಸಾಗಾಟಕ್ಕೆ ಅಡ್ಡಿಪಡಿಸಿ , ಚಾಲಕನಿಗೆ ಹಲ್ಲೆಗೈದ ಕೃತ್ಯ ರವಿವಾರ ಬೆಳಗ್ಗೆ ಕಂಕನಾಡಿ ಬಳಿ ನಡೆದಿದೆ. ಕುದ್ರೋಳಿಯ ರಶೀದ್ ಎಂಬವರು ತನ್ನ ರಿಕ್ಷಾ ಟೆಂಪೋದಲ್ಲಿ ಕಂಕನಾಡಿ ಮಾರುಕಟ್ಟೆಯಲ್ಲಿ ಬೀಫ್ ಸ್ಟಾಲ್ ಹೊಂದಿರುವ ಝಾಕಿರ್ ಎಂಬವರ ಅಂಗಡಿಗೆ ಸುಮಾರು 200 ಕೆಜಿಯಷ್ಟು ದನದ ಮಾಂಸವನ್ನು ಸಾಗಾಟ ಮಾಡುತ್ತಿದ್ದರು. ಸುಮಾರು ಐದಾರು ಮಂದಿಯನ್ನೊಳಗೊಂಡ ದುಷ್ಕರ್ಮಿಗಳ ತಂಡವು ಕಾರು ಮತ್ತು ದ್ವಿಚಕ್ರ ವಾಹನದಲ್ಲಿ ಹಿಂಬಾಲಿಸಿಕೊಂಡು ಬಂದು ಹೈಲ್ಯಾಂಡ್ ಆಸ್ಪತ್ರೆ-ಕಂಕನಾಡಿ

ಮಾಂಸ ಸಾಗಾಟಕ್ಕೆ ಅಡ್ಡಿ ➤ ವಾಹನ ಚಾಲಕನಿಗೆ ಹಲ್ಲೆ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಕಡೇಶ್ವಾಲ್ಯ ಬೆಂಕಿ ಅವಘಡಕ್ಕೆ ತುತ್ತಾಗಿದ್ದ ಮಹಿಳೆ ಮೃತ್ಯು

(ನ್ಯೂಸ್ ಕಡಬ) newskadaba.com.ಬಂಟ್ಚಾಳ,ಜೂ.21:ಬೆಂಕಿ ತಗುಲಿ ಸುಟ್ಟ ಗಾಯಗೊಂಡಿದ್ದ ಕಡೇಶ್ವಾಲ್ಯ ಗ್ರಾಮದ ನೆತ್ತರಮನೆ ನಿವಾಸಿ ಮಹಿಳೆ ಹರಿಣಾಕ್ಷಿ(35) ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಘಟನೆ  ನಡೆದಿದೆ. ಜೂ. 2 ರಂದು ಮನೆಯಲ್ಲಿ ಗ್ಯಾಸ್ ಖಾಲಿಯಾದ ಹಿನ್ನೆಯಲ್ಲಿ ಕಟ್ಟಿಗೆಯ ಒಲೆಯಲ್ಲಿ ತಿಂಡಿ ಮಾಡುತ್ತಿದ್ದ ವೇಳೆ ಬೆಂಕಿ ಆಕಸ್ಮಿಕವಾಗಿ ಅವರು ಧರಿಸದ್ದ ಬಟ್ಟೆಗೆ ತಗುಲಿತ್ತು ಇದರಿಂದ ದೇಹಕ್ಕೆ ತೀವ್ರ ಸುಟ್ಟಗಾಯಗಳಾಗಿತ್ತು. ಬಳಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮನೆಗೆ ಮರಳಿದ್ದರು ಆದರೆ ಮತ್ತೆಗಾಯ ಉಲ್ಬಣಗೊಂಡು ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ಮಹಿಳೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

ಕಡೇಶ್ವಾಲ್ಯ ಬೆಂಕಿ ಅವಘಡಕ್ಕೆ ತುತ್ತಾಗಿದ್ದ ಮಹಿಳೆ ಮೃತ್ಯು Read More »

ಕರಾವಳಿ

ಬೆಳ್ಳಾರೆ : ಹಸಿಕಸ-ಒಣಕಸ ಪ್ರತ್ಯೇಕಿಸಲು ಗೋಣಿಚೀಲ ವಿತರಣೆ

(ನ್ಯೂಸ್ ಕಡಬ) newskadaba.com ಬೆಳ್ಳಾರೆ,ಜೂ.20:  ಸ್ವಚ್ಚತೆಗೆ ಮೊದಲ ಆದ್ಯತೆಯನ್ನ ನೀಡುವ ನಿಟ್ಟಿನಲ್ಲಿ ಹಾಗೂ ಕಸ ವಿಲೇವಾರಿಯಾಗುವ ವೇಲೆ ಸಮಸ್ಯೆಯಾಗದಂತೆ, ತ್ಯಾಜ್ಯಗಳ ನಿರ್ವಹಣೆಗೆ ಬೆಳ್ಳಾರೆಯಲ್ಲಿ ವಿನೂತನ ಕಾರ್ಯವನ್ನ ಮಾಡಿದ್ದಾರೆ. ಬೆಳ್ಳಾರೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ತ್ಯಾಜದ ನಿರ್ವಹಣೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನ ಗೊಳಿಸುವ ನಿಟ್ಟಿನಲ್ಲಿ ಹಸಿಕಸ ಮತ್ತು ಒಣಕಸವಾಗಿ ಪ್ರತ್ಯೇಕವಾಗಿ ವಿಂಗಡಿಸಿ ತ್ಯಾಜ್ಯ ವಾಹನಕ್ಕೆ ಹಾಕುವ ಉದ್ದೇಶದಿಂದ, ಪ್ರತಿ ಅಂಗಡಿಗೆ ಮತ್ತು ಮನೆಗಳಿಗೆ ಗೋಣಿಚೀಲವನ್ನು ಕಛೇರಿ ಆವರಣದಲ್ಲಿ ವಿತರಿಸಲಾಯಿತು. ಈ ಸಂದರ್ಭದಲ್ಲಿ ಪಂಚಾಯತ್ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಪಂಚಾಯತ್ ಅಭಿಬೃದ್ದಿ8

ಬೆಳ್ಳಾರೆ : ಹಸಿಕಸ-ಒಣಕಸ ಪ್ರತ್ಯೇಕಿಸಲು ಗೋಣಿಚೀಲ ವಿತರಣೆ Read More »

ಕರಾವಳಿ, ಕರ್ನಾಟಕ

ಮುಂಬೈನಿಂದ ಬಂದ ತೆಕ್ಕಟ್ಟೆ ವ್ಯಕ್ತಿ ಮೃತ್ಯು ➤ ಪತ್ನಿ ಮಗನಿಗೆ ಕೊರೋನಾ ಪಾಸಿಟಿವ್

(ನ್ಯೂಸ್ ಕಡಬ) newskadaba.com ಉಡುಪಿ,ಜೂ.20: ಕೊರೋನಾ ತನ್ನ ಕಬಂಧ ಬಾಹುವನ್ನ ಕರಾವಳಿಯಲ್ಲಿ ವಿಸ್ತರಿಸುತ್ತಲೇ ಇದೆ,  ಅನಾರೋಗ್ಯದಿಂದ ಬಳಲುತ್ತಿದ್ದ ಮುಂಬೈನಿಂದ ವಾಪಸಾದ ತೆಕ್ಕಟ್ಟೆ ವ್ಯಕ್ತಿ ನಿನ್ನೆ ಮೃತಪಟ್ಟಿದ್ದು, ಇದೀಗ ಮೃತ ವ್ಯಕ್ತಿಯ ಪತ್ನಿ ಹಾಗೂ ಮಗನಿಗೆ ಕೂಡ ಕೊರೊನಾ ಪಾಸಿಟಿವ್ ದೃಢಪಟ್ಟಿದೆ. ಸದ್ಯ ಇಬ್ಬರನ್ನೂ ಕೋವಿಡ್ ಆಸ್ಪತ್ರೆಗೆ ದಾಖಲಿಸಿರುವ ಆರೋಗ್ಯ ಇಲಾಖೆ ಸೂಕ್ತ ಚಿಕಿತ್ಸೆ ನೀಡುತ್ತಿದೆ. ಮೃತ ವ್ಯಕ್ತಿ ಮುಂಬೈಯಿಂದ ಬರುವಾಗ ಪತ್ನಿ, ಪುತ್ರ ಮತ್ತು ಡ್ರೈವರ್ ಜೊತೆಗೆ ಬಂದಿದ್ದರು. ಆದರೆ ಡ್ರೈವರ್ ಪರೀಕ್ಷಾ ವರದಿ ಮಾತ್ರ ನೆಗೆಟಿವ್

ಮುಂಬೈನಿಂದ ಬಂದ ತೆಕ್ಕಟ್ಟೆ ವ್ಯಕ್ತಿ ಮೃತ್ಯು ➤ ಪತ್ನಿ ಮಗನಿಗೆ ಕೊರೋನಾ ಪಾಸಿಟಿವ್ Read More »

ಕರಾವಳಿ, ಕರ್ನಾಟಕ

ಪ್ಯಾಕೇಜ್ ಬದಲಾವಣೆಗೆ ಹೆದ್ದಾರಿ ಪ್ರಾಧಿಕಾರ ನಿರ್ಧಾರ ➤ವೇಗ ಪಡೆಯಲಿದೆ ಅಡ್ಡಹೊಳೆ-ಬಿ.ಸಿ.ರೋಡ್ ಚತುಷ್ಪಥ ಕಾಮಗಾರಿ

(ನ್ಯೂಸ್ ಕಡಬ) newskadaba.com.ಮಂಗಳೂರು,ಜೂ.20:ಕುಂಟತ್ತ ಸಾಗುತ್ತಿರುವ ಬಿ.ಸಿರೋಡ್-ಅಡ್ಡಹೊಳೆ ನಡುವಿನ ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ಕಾಂಕ್ರೀಟ್ ಕಾಮಗಾರಿಯ ಗುತ್ತಿಗೆಯನ್ನು ಒಬ್ಬರಿಗೆ ವಹಿಸುವ ಬದಲು ಮೂರು ಹಂತಗಳಾಗಿ ವಿಭಜಿಸಿ ಪ್ರತ್ಯೇಕ ಮೂರು ಟೆಂಡರ್ ಮೂಲಕ ಪೂರ್ಣಗೊಳಿಸಲು ಹೆದ್ದಾರಿ ಪ್ರಾಧಿಕಾರ ನಿರ್ಧರಿಸಿದೆ. ಬಿ.ಸಿ ರೋಡ್‍ನಿಂದ ಅಡ್ಡಹೊಳೆಯವರೆಗಿನ ರಸ್ತೆ ಕಾಮಗಾರಿಯನ್ನು ಎಲ್ ಆ್ಯಂಡ್ ಟಿ ಕಂಪೆನಿ ಮಾತ್ರ ವಹಿಸಿತ್ತು. ಆದರೆ,ಒಂದೇ ಕಂಪೆನಿಗೆ ಈ ಕಾಮಗಾರಿ ನಡೆಸಲು ಕಷ್ಟ ಹಾಗೂ ಅರಣ್ಯ ಇಲಾಖೆ ಸಂಬಂಧಿತ ವಿವಿಧ ಇಲಾಖೆಗಳ ಒಪ್ಪಿಗೆ ಪಡೆಯಲು ಸಮಸ್ಯೆಗಳಿವೆ ಎಂಬ ಏಕ ಪ್ಯಾಕೇಜ್

ಪ್ಯಾಕೇಜ್ ಬದಲಾವಣೆಗೆ ಹೆದ್ದಾರಿ ಪ್ರಾಧಿಕಾರ ನಿರ್ಧಾರ ➤ವೇಗ ಪಡೆಯಲಿದೆ ಅಡ್ಡಹೊಳೆ-ಬಿ.ಸಿ.ರೋಡ್ ಚತುಷ್ಪಥ ಕಾಮಗಾರಿ Read More »

ಕರಾವಳಿ
Scroll to Top