newskadaba

ಕಕ್ಕೆಪದವು : ನೂತನವಾಗಿ ಶುಭಾರಂಭಗೊಂಡ ಪೆಟ್ರೋಲ್ ಪಂಪ್

(ನ್ಯೂಸ್ ಕಡಬ) newskadaba.com ಕಕ್ಕೆಪದವು ನ. 09: ಕಕ್ಕೆಪದವಿನಲ್ಲಿ ನೂತನವಾಗಿ ಪೆಟ್ರೋಲ್ ಪಂಪ್ ವೊಂದು ಶುಭಾರಂಭಗೊಂಡಿದೆ. ಕಕ್ಕೆಪದವು ಶ್ರೀಪಂಚದುರ್ಗಾಪರಮೇಶ್ವರಿ ದೇವಸ್ಥಾನದ ದ್ವಾರದ ಬಳಿ ನೂತನವಾಗಿ ಶುಭಾರಂಭಗೊಂಡ ಪೆಟ್ರೋಲ್ ಪಂಪ್ ಇದರ ಉದ್ಘಾಟನೆಯನ್ನು ಮಾಜಿ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ. ರಮಾನಾಥ ರೈ ಯವರು ನೆರೆವೇರಿಸಿದರು.   ಈ ಸಂದರ್ಭದಲ್ಲಿ ಮಾಲಕರಾದ ರಂಗನಾಥ ಜಿಲ್ಲಾ ಪಂಚಾಯತ್ ಸದಸ್ಯರಾದ ಪದ್ಮಶೇಖರ್ ಜೈನ್, ಬಂಟ್ವಾಳ ಬ್ಲಾಕ್ ಅಧ್ಯಕ್ಷರಾದ ಬೇಬಿ ಕುಂದರ್,ವಿಶ್ವನಾಥ್ ಬಿತ್ತ,ಅಬ್ದುಲ್ ರಹಿಮಾನ್ ಮೊದಲಾದವರು ಉಪಸ್ಥಿತರಿದ್ದರು.  

ಕಕ್ಕೆಪದವು : ನೂತನವಾಗಿ ಶುಭಾರಂಭಗೊಂಡ ಪೆಟ್ರೋಲ್ ಪಂಪ್ Read More »

ಕರಾವಳಿ

ಸುಳ್ಯ : ಭೂಕುಸಿತದಿಂದ ತೊಂದರೆಗೊಳಗಾಗಿದ್ದ ಜಯರಾಮ ನಾಯರ್ ಗೆ ಪರಿಹಾರಧನ ವಿತರಣೆ

(ನ್ಯೂಸ್ ಕಡಬ) newskadaba.com ಸುಳ್ಯ ನ. 09: ಭೂಕುಸಿತದಿಂದ ತೊಂದರೆಗೊಳಗಾಗಿದ್ದ ಜಯರಾಮ ನಾಯರ್ ಗೆ ತಹಶೀಲ್ದಾರ್ ಪರಿಹಾರಧನ ವಿತರಣೆ ಮಾಡಿದ್ದಾರೆ.   ಸುಳ್ಯ ತಾಲೂಕಿನ ಕಸಬಾ ಗ್ರಾಮದ ಕಲ್ಲು ಮುಟ್ಲು ಜಯರಾಮ ನಾಯರ್ ಎಂಬವರ ನಾಯರ್ ಎಂಬುವರ ಮನೆಯ ಮುಂಭಾಗದಲ್ಲಿ ಭೂ ಕುಸಿತ ಉಂಟಾಗಿತ್ತು. ಆದರೆ ಅವರಿಗೆ ಯಾವುದೇ ಪರಿಹಾರ ನಿಗದೇ ಇದ್ದಾಗ, ಅಂಬೇಡ್ಕರ್ ತತ್ವ ರಕ್ಷಾಣಾ ವೇದಿಕೆಗೆ ತಿಳಿಸಿದ್ದರು. ಈ ಕುರಿತು ಅಧ್ಯಕ್ಷರಾದ ಪಿ.ಸುಂದರ್ ಪಾಟಾಜೆಯವರು ಜಿಲ್ಲಾಧಿಕಾರಿಯವರಿಗೆ ಪತ್ರ ಬರೆದು ಮನವಿ ಮಾಡಿದ್ದರು. ಇವರ ಪತ್ರ ಮನವಿಗೆ

ಸುಳ್ಯ : ಭೂಕುಸಿತದಿಂದ ತೊಂದರೆಗೊಳಗಾಗಿದ್ದ ಜಯರಾಮ ನಾಯರ್ ಗೆ ಪರಿಹಾರಧನ ವಿತರಣೆ Read More »

ಕರಾವಳಿ

ಮಂಗಳೂರು: ನೀರಿನಲ್ಲಿ ಮುಳುಗಿ ಯುವಕ ಮೃತ್ಯು

(ನ್ಯೂಸ್ ಕಡಬ) newskadaba.com ಮಂಗಳೂರು, ನ.9: ಮೂಡಬಿದಿರೆಯ ಬೆಳುವಾಯಿ ಎಂಬಲ್ಲಿ ನೀರಿನಲ್ಲಿ ಮುಳುಗಿ ಯುವಕ ಮೃತಪಟ್ಟಿರುವ ಘಟನೆ ನಡೆದಿದೆ. ಮೃತಪಟ್ಟ ವ್ಯಕ್ತಿಯನ್ನು ಸುರತ್ಕಲ್ ಕಾಟಿಪಳ್ಳ ನಿವಾಸಿ ನಿಹಾಲ್ ಶಾ(20) ಎಂದು ಗುರುತಿಸಲಾಗಿದೆ.       ಸ್ನೇಹಿತರ ಜೊತೆಗೂಡಿ ನಿಹಾಲ್ ಈಜಲು ತೆರಳಿದ್ದರು. ಮಠದಕೆರೆ ಎಂಬಲ್ಲಿ ಕೆರೆಗೆ ಇಳಿದಿದ್ದ ವೇಳೆ ನೀರಲ್ಲಿ ಮುಳುಗಿ ನಿಹಾಲ್ ಶಾ ಮೃತಪಟ್ಟಿದ್ದಾರೆ. ಘಟನಾ ಸ್ಥಳಕ್ಕೆ ಸ್ಥಳೀಯ ಈಜುಗಾರ ಅಂಥೋಣಿ ಯವರು ಧಾವಿಸಿದ್ದು, ಮೃತದೇಹವನ್ನು ಮೇಲಕ್ಕೆತ್ತಿದ್ದಾರೆ. ಈ ಕುರಿತು ಮೂಡಬಿದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಂಗಳೂರು: ನೀರಿನಲ್ಲಿ ಮುಳುಗಿ ಯುವಕ ಮೃತ್ಯು Read More »

ಕರಾವಳಿ

ಸುಳ್ಯ: ಖಾಸಗಿ ಬಸ್ ನಿಲ್ದಾಣದ ರಸ್ತೆ ಬದಿಗೆ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಸ್ಲಾಬ್ ದುರಸ್ಥಿ

(ನ್ಯೂಸ್ ಕಡಬ) newskadaba.com ಸುಳ್ಯ, ನ.8: ಸುಳ್ಯದ ಖಾಸಗಿ ಬಸ್ ನಿಲ್ದಾಣದಲ್ಲಿ ಮುಖ್ಯ ರಸ್ತೆ ಬದಿಗೆ ಅಳವಡಿಸಿದ ಸ್ಲಾಬ್ ತುಂಡಾಗಿ ಹಾಗೂ ಕುಸಿದು ಬಿದ್ದು, ಪಾದಾಚಾರಿಗಳಿಗೆ ತೀವ್ರ ತೊಂದರೆಯಾಗುತ್ತಿದೆ.     ಇದರಿಂದಾಗಿ ಜನರಿಗೆ ಆಗುತ್ತಿರುವ ಸಮಸ್ಯೆಯನ್ನು ಮನಗಂಡು ಕರ್ನಾಟಕ ರಕ್ಷಣಾ ವೇದಿಕೆಯ ಸದಸ್ಯರು ಶ್ರಮದಾನ ಮಾಡಿ ದುರಸ್ಥಿ ಪಡಿಸಿದರು. ಕರ್ನಾಟಕ ರಕ್ಷಣಾ ವೇದಿಕೆಯ ಸುಳ್ಯ ಘಟಕದ ಗೌರವ ಅಧ್ಯಕ್ಷ ಅಶೋಕ್ ಕುಮಾರ್, ರುಕ್ಮಯ್ಯ ಕುರುಂಜಿ, ನಾರಾಯಣ, ಗಣೇಶ ಪಲ್ಲತಡ್ಕ, ವಿಜಯ ಕುರುಂಜಿ, ಚಿದಾನಂದ ಕಲ್ಲಗುಡ್ಡೆ, ಗಿರೀಶ ಕಲ್ಲಗುಡ್ಡೆ,

ಸುಳ್ಯ: ಖಾಸಗಿ ಬಸ್ ನಿಲ್ದಾಣದ ರಸ್ತೆ ಬದಿಗೆ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಸ್ಲಾಬ್ ದುರಸ್ಥಿ Read More »

ಕರಾವಳಿ

ಸುಬ್ರಹ್ಮಣ್ಯ: ಉದ್ಯೋಗ ನೈಪುಣ್ಯ ಶಿಬಿರ ➤ ಸಚಿವ ಕೋಟ ಶ್ರೀನಿವಾಸ ಪೂಜಾರಿಯವರಿಂದ ಉದ್ಘಾಟನೆ

(ನ್ಯೂಸ್ ಕಡಬ) newskadaba.com ಸುಬ್ರಹ್ಮಣ್ಯ, ನ.8: ಸುಬ್ರಹ್ಮಣ್ಯದ ಕೆ.ಎಸ್.ಎಸ್. ಕಾಲೇಜಿನಲ್ಲಿ ಆತ್ಮ ನಿರ್ಭರ ಭಾರತ ಉದ್ಯೋಗ ನೈಪುಣ್ಯ ಶಿಬಿರವು ಇಂದಿನಿಂದ ಆರಂಭಗೊಳ್ಳುತ್ತಿದ್ದು,  ಮುಜುರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಯವರು ಇಂದು ಕಾರ್ಯಕ್ರಮಕ್ಕೆಚಾಲನೆ ನೀಡಿ ದೀಪ ಬೆಳಗಿಸುವುದರ ಮೂಲಕ ಶಿಬಿರನ್ನು ಉದ್ಘಾಟಿಸಿದರು.     ಗ್ರಾಮ ವಿಕಾಸ ಸಮಿತಿ, ಮಂಗಳೂರು ವಿಭಾಗ ವಿವೇಕಾನಂದ ವಿದ್ಯಾವರ್ಧಕ ಸಂಘ(ರಿ) ಪುತ್ತೂರು ಸಹಕಾರ ಭಾರತಿ ದ.ಕ ಜಿಲ್ಲೆ ವಿವೇಕಾನಂದ ಪಾಲಿಟೆಕ್ನಿಕ್ ಕಾಲೇಜ, ಪುತ್ತೂರು, ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಮಹಾವಿದ್ಯಾಲಯ ಸುಬ್ರಹ್ಮಣ್ಯ ಹಾಗೂ ಸುಬ್ರಹ್ಮಣ್ಯ-ಐನೆಕಿದು

ಸುಬ್ರಹ್ಮಣ್ಯ: ಉದ್ಯೋಗ ನೈಪುಣ್ಯ ಶಿಬಿರ ➤ ಸಚಿವ ಕೋಟ ಶ್ರೀನಿವಾಸ ಪೂಜಾರಿಯವರಿಂದ ಉದ್ಘಾಟನೆ Read More »

ಕರಾವಳಿ

ಪುತ್ತೂರು: ಈಶ್ವರಮಂಗಲ ಹನುಮಗಿರಿ ಕ್ಷೇತ್ರಕ್ಕೆ ನ್ಯೂಸ್ ಫಸ್ಟ್ ಸಿಇಒ ರವಿಕುಮಾರ್ ಭೇಟಿ

(ನ್ಯೂಸ್ ಕಡಬ) newskadaba.com ಪುತ್ತೂರು, ನ.8: ನ್ಯೂಸ್ ಫಸ್ಟ್ ಚಾನೆಲ್ ಸಿಇಒ ರವಿಕುಮಾರ್ ರವರು ಈಶ್ವರಮಂಗಲ ಹನುಮಗಿರಿ ಕ್ಷೇತ್ರಕ್ಕೆ ಭೇಟಿ ನೀಡಿದರು.     ಇವರು ಪಂಚಮುಖಿ ಆಂಜನೇಯ ಸ್ವಾಮಿಗೆ ರಂಗ ಪೂಜೆ ಹಾಗೂ ಕೋದಂಡರಾಮನಿಗೆ ಪುಷ್ಪಾಭಿಶೇಕ ನೆರವೇರಿಸಿದರು. ಆಡಳಿತ ಧರ್ಮದರ್ಶಿ ನನ್ಯ ಅಚ್ಚುತ ಮೂಡೆತ್ತಾಯ, ಧರ್ಮದರ್ಶಿ ಶಿವರಾಮ ಶರ್ಮ, ಶಿವರಾಮ ಪಿ, ಹಾಗೂ ನಿವೃತ್ತ ಶಿಕ್ಷಕರ ಆನಂದ ರೈ ಸಾಂತ್ಯ ಉಪಸ್ಥಿತರಿದ್ದರು.    

ಪುತ್ತೂರು: ಈಶ್ವರಮಂಗಲ ಹನುಮಗಿರಿ ಕ್ಷೇತ್ರಕ್ಕೆ ನ್ಯೂಸ್ ಫಸ್ಟ್ ಸಿಇಒ ರವಿಕುಮಾರ್ ಭೇಟಿ Read More »

ಕರಾವಳಿ

ಸುಬ್ರಹ್ಮಣ್ಯ: ಅರ್ನಾಬ್ ಗೋಸ್ವಾಮಿಯ ಬಂಧನ ವಿರೋಧಿಸಿ ABVP ವತಿಯಿಂದ ಪ್ರತಿಭಟನೆ

(ನ್ಯೂಸ್ ಕಡಬ) newskadaba.com ಸುಬ್ರಹ್ಮಣ್ಯ ನ. 08: ಅರ್ನಾಬ್ ಗೋಸ್ವಾಮಿಯವರ ಬಂಧನವನ್ನು ಖಂಡಿಸಿ ಇಂದು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಸುಬ್ರಹ್ಮಣ್ಯ ಘಟಕದಿಂದು ಇಂದು ಪ್ರತಿಭಟನೆ ನಡೆಸಿದ್ದಾರೆ. ಅರ್ನಾಬ್ ಗೋಸ್ವಾಮಿ ಯುವರ ಬಂಧನ ಇಂದು ಮೂಲಭೂತ ಸ್ವಾತಂತ್ರ್ಯದ ಮೇಲೆ ತುರ್ತು ಪರಿಸ್ಥಿತಿ ಹೇರಿಕೆ  ರೀತಿಯ ದಾಳಿ ವಿರುದ್ಧವಾಗಿದೆ. ಇದನ್ನು ಖಂಡಿಸಿ ಸುಬ್ರಹ್ಮಣ್ಯ ವನದುರ್ಗ ದೇವಸ್ಥಾನದ ಬಳಿ ಪ್ರತಿಭಟಿಸಲಾಯಿತು. ಹಾಗೂ ಕಡನ ತಹಶೀಲ್ದಾರ್ ಮೂಲಕ ಮನವಿಯನ್ನು ನೀಡಿದ್ದಾರೆ. ಈ ವೇಳೆ ಸಂದರ್ಭದಲ್ಲಿ ನಗರ ಕಾರ್ಯದರ್ಶಿಯಾದ ಇಲೈ ಅರಸ್, ವಿದ್ಯಾರ್ಥಿ ಪ್ರಮುಖರಾದ

ಸುಬ್ರಹ್ಮಣ್ಯ: ಅರ್ನಾಬ್ ಗೋಸ್ವಾಮಿಯ ಬಂಧನ ವಿರೋಧಿಸಿ ABVP ವತಿಯಿಂದ ಪ್ರತಿಭಟನೆ Read More »

ಕರಾವಳಿ

ಪುತ್ತೂರು: ಅಪಾಯಕಾರಿ ತೆಂಗಿನ ಮರ ತೆರವುಗೊಳಿಸುವಂತೆ ಪೆಟ್ರೋಲ್ ಸಿಬ್ಬಂದಿಗಳಿಂದ ಸಂಬಂಧಿಸಿದ ಇಲಾಖೆಗೆ ಮಾಹಿತಿ

(ನ್ಯೂಸ್ ಕಡಬ) newskadaba.com ಪುತ್ತೂರು, ನ.8: ಮಾಣಿ- ಮೈಸೂರು ರಾಷ್ಟ್ರೀಯ ಹೆದ್ದಾರಿ ಕಬಕ ಕುವೆತ್ತಿಲ ಸಮೀಪ ವಿದ್ಯುತ್ ಕಂಬದ ಪಕ್ಕದಲ್ಲಿ ಗರಿ ಮುರಿದು ತೆಂಗಿನ ಮರವೊಂದು ಬೀಳುವಂತ ಅಪಾಯಕಾರಿ ಸ್ಥಿತಿಯಲ್ಲಿದೆ. ಇದನ್ನು ಗಮನಿಸಿದ ಗಸ್ತು ನಿರತ ಹೈವೇ ಪೆಟ್ರೋಲ್ ಪಂಪ್ ಸಿಬ್ಬಂದಿ, ಪುತ್ತೂರು ನಗರ ಪೊಲೀಸ್ ಠಾಣೆಯ ಹೆಡ್ ಕಾನ್ ಸ್ಟೇಬಲ್ ಆಗಿರುವ ಶಿವಪ್ಪ ನಾಯ್ಕ್ ಅವರು ಅಪಾಯಕಾರಿ ತೆಂಗಿನಮರದ ಕುರಿತು ಸಂಬಂಧಿಸಿದ ಇಲಾಖೆಗಳಿಗೆ ಮಾಹಿತಿ ನೀಡಿದ್ದಾರೆ.     ಮರ ಮುರಿದು ಬಿದ್ದರೆ ಪಕ್ಕದಲ್ಲಿರುವ ವಿದ್ಯುತ್ ತಂತಿಗಳು

ಪುತ್ತೂರು: ಅಪಾಯಕಾರಿ ತೆಂಗಿನ ಮರ ತೆರವುಗೊಳಿಸುವಂತೆ ಪೆಟ್ರೋಲ್ ಸಿಬ್ಬಂದಿಗಳಿಂದ ಸಂಬಂಧಿಸಿದ ಇಲಾಖೆಗೆ ಮಾಹಿತಿ Read More »

ಕರಾವಳಿ

ಬೆಳ್ತಂಗಡಿ: ಭಾರತೀಯ ಜನತಾ ಪಕ್ಷದ ವತಿಯಿಂದ ಮೆರವಣಿಗೆ

(ನ್ಯೂಸ್ ಕಡಬ) newskadaba.com ಬೆಳ್ತಂಗಡಿ, ನ.8: ಬೆಳ್ತಂಗಡಿ ನಗರ ಪಂಚಾಯತ್ ಅಧ್ಯಕ್ಷರಾಗಿ ಶ್ರೀಮತಿ ರಜನಿ ಕುಡ್ವ ಹಾಗೂ ಉಪಾಧ್ಯಕ್ಷರಾಗಿ ಜಯಾನಂದ ಗೌಡ ಟಿ ಯವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.     ಈ ಹಿನ್ನಲೆಯಲ್ಲಿ ಭಾರತೀಯ ಜನತಾ ಪಕ್ಷದ ವತಿಯಿಂದ ಸಂತೆಕಟ್ಟೆಯಿಂದ ಬೆಳ್ತಂಗಡಿ ಮುಖ್ಯ ಬಸ್ ತಂಗುದಾಣದವರೆಗೆ ಮೆರವಣಿಗೆ ನಡೆಯಿತು. ಈ ಸಂದರ್ಭದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಶಾಸಕ ಹರೀಶ್ ಪೂಂಜ, ಬೆಳ್ತಂಗಡಿ ಮಂಡಲದ ಅಧ್ಯಕ್ಷ ಜಯಂತ್ ಗೌಡ, ನ.ಪಂ ಸದಸ್ಯರು, ಬಿಜೆಪಿ ಪ್ರಮುಖರು, ಕಾರ್ಯಕರ್ತರು ಭಾಗವಹಿಸಿದ್ದರು.

ಬೆಳ್ತಂಗಡಿ: ಭಾರತೀಯ ಜನತಾ ಪಕ್ಷದ ವತಿಯಿಂದ ಮೆರವಣಿಗೆ Read More »

ಕರಾವಳಿ

ಬಂಟ್ವಾಳ: ಯುವತಿಯನ್ನು ಕೊಲೆಗೈದು ನದಿತೀರದಲ್ಲಿ ಎಸೆದು ಹೋದ ದುಷ್ಕರ್ಮಿಗಳು

(ನ್ಯೂಸ್ ಕಡಬ) newskadaba.com ಬಂಟ್ವಾಳ, ನ.8: ಯುವತಿಯೊಬ್ಬರನ್ನು ಕೊಲೆಗೈದು ತುಂಬೆ ತೀರದಲ್ಲಿ ಎಸೆದು ಹೋಗಿರುವ ಬಗ್ಗೆ ಶಂಕೆಯಾಗಿದೆ. ಮೃತ ವ್ಯಕ್ತಿಯನ್ನು ಮುಲ್ಕಿ ಒಡೆಯರ ಬೆಟ್ಟು ನಿವಾಸಿ ಆಶಾ(36) ಎಂದು ಗುರುತಿಸಲಾಗಿದೆ.     ಯುವತಿಯ ಶವ ನದಿ ತೀರದಲ್ಲಿ ಪತ್ತೆಯಾಗಿದ್ದು, ಮೈಮೇಲೆ ರಕ್ತದ ಕಲೆಗಳು ಕಂಡುಬಂದಿದೆ. ಹೀಗಾಗಿ ಯುವತಿಯನ್ನು ಕೊಲೆಗೈದು ಎಸೆದು ಹೋಗಿರಬಹುದು ಎಂದು ಹೇಳಲಾಗುತ್ತಿದೆ. ಮೃತಳು ಭೂ ವ್ಯವಹಾರ ನಡೆಸುತ್ತಿದ್ದು, ಈಕೆಯ ಸಾವು ಸಂಶಯಕ್ಕೆ ಕಾರಣವಾಗಿದೆ. ಇವರು ಒಡೆಯರಬೆಟ್ಟು ಮನೆಯಲ್ಲಿ ತಾಯಿಯೊಂದಿಗೆ ವಾಸಿಸುತ್ತಿದ್ದರು. ಮೃತ ದೇಹ ಪತ್ತೆಯಾದ

ಬಂಟ್ವಾಳ: ಯುವತಿಯನ್ನು ಕೊಲೆಗೈದು ನದಿತೀರದಲ್ಲಿ ಎಸೆದು ಹೋದ ದುಷ್ಕರ್ಮಿಗಳು Read More »

ಕರಾವಳಿ, ಕ್ರೈಮ್ ನ್ಯೂಸ್
Scroll to Top