newskadaba

ಕಡಬ,ಪುತ್ತೂರು ತಾಲೂಕಿನಲ್ಲಿ ಇಂದು 3 ಮಂದಿಯಲ್ಲಿ ಕೋವಿಡ್ ದೃಢ

(ನ್ಯೂಸ್ ಕಡಬ) newskadaba.com  ಕಡಬ , ನ.12: ಕಡಬ ಮತ್ತು ಪುತ್ತೂರು ತಾಲೂಕುಗಳಲ್ಲಿ ಆರೋಗ್ಯ ಇಲಾಖೆಯ ವರದಿಯಂತೆ ಇಂದು 3 ಮಂದಿಯಲ್ಲಿ ಕೊರೋನಾ ಸೋಂಕು ಪತ್ತೆಯಾಗಿದೆ.     ಕಡಬ ತಾಲೂಕಿನ ಪಾಲ್ತಾಡಿ ನಿವಾಸಿ 60 ವರ್ಷದ ಮಹಿಳೆ, ಪುತ್ತೂರು ತಾಲೂಕಿನ ಕರ್ನೂರು ನಿವಾಸಿ 46 ವರ್ಷದ ಮಹಿಳೆ, 82 ವರ್ಷದ ವ್ಯಕ್ತಿಯಲ್ಲಿ ಕೊರೋನಾ ಸೋಂಕು ದೃಡಪಟ್ಟಿದೆ.  

ಕಡಬ,ಪುತ್ತೂರು ತಾಲೂಕಿನಲ್ಲಿ ಇಂದು 3 ಮಂದಿಯಲ್ಲಿ ಕೋವಿಡ್ ದೃಢ Read More »

ಕರಾವಳಿ

ಕಾಸರಗೋಡು: ಆಯ ತಪ್ಪಿ ಕೆರೆಗೆ ಬಿದ್ದು ವ್ಯಕ್ತಿ ಮೃತ್ಯು

(ನ್ಯೂಸ್ ಕಡಬ) newskadaba.com  ಕಾಸರಗೋಡು, ನ.12: ಮುಳಿಯಾರು ಎಂಬಲ್ಲಿ ಕೃಷಿಕರೋರ್ವರು ತರಕಾರಿ ಕೃಷಿಗೆ ನೀರು ಹಾಯಿಸಲು ತೆರಳಿದ್ದ ಸಂದರ್ಭದಲ್ಲಿ ಆಯ ತಪ್ಪಿ ಕೆರೆಗೆ ಬಿದ್ದು ಮೃತಪಟ್ಟಿರುವ ಘಟನೆ ನಡೆದಿದೆ.     ಮೃಪಟ್ಟ ವ್ಯಕ್ತಿಯನ್ನು ಮುಳಿಯಾರು ಬೇಪು ಅಂಬಲತಿಂಗಳ್‌ನ ಎಂ.ಕುಞಂಬು ನಾಯರ್(65) ಎಂದು ಗುರುತಿಸಲಾಗಿದೆ. ಪತ್ನಿಯ ಬೊಬ್ಬೆ ಕೇಳಿ ಪರಿಸರವಾಸಿಗಳು ಕುಞಂಬು ನಾಯರ್‌ರನ್ನು ಮೇಲಕ್ಕೆತ್ತಿ ಆಸ್ಪತ್ರೆಗೆ ತಲಪಿಸುವಷ್ಟರಲ್ಲಿ ಮೃತಪಟ್ಟಿದ್ದರು. ಇನ್ನು ಈ ಘಟನೆ ಕುರಿತು ಆದೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.  

ಕಾಸರಗೋಡು: ಆಯ ತಪ್ಪಿ ಕೆರೆಗೆ ಬಿದ್ದು ವ್ಯಕ್ತಿ ಮೃತ್ಯು Read More »

ಕರ್ನಾಟಕ

ಸುಳ್ಯ: ಯುವ ನಾಯಕ ಮುದ್ದಸೀರ್ ಕುದ್ರೋಳಿ ನಿಧನಕ್ಕೆ ಸಂತಾಪ

(ನ್ಯೂಸ್ ಕಡಬ) newskadaba.com ಸುಳ್ಯ, ನ.12: ಮಂಗಳೂರಿನ ಅಸುಪಾಸಿನ ಬಡ ಹಾಗೂ ನಿರ್ಗತಿಕ ಜನರಿಗೆ ಆಶಾಕಿರಣ ವಾಗಿ ಬಡವರ ಹಸಿವು ನೀಗಿಸಲು ಸಹಾಯ ಮಾಡಬಲ್ಲ ವ್ಯಕ್ತಿತ್ವ ರಾಜಕೀಯ ಸಮಾಜಿಕ ಧಾರ್ಮಿಕ ರಂಗದಲ್ಲಿ ತನ್ನನ್ನು ತಾನೂ ಸಮಾಜ ಸೇವೆಯಲ್ಲಿ ತೊಡಗಿ ಸಮಾಜಕ್ಕೆ ಮಾದರಿಯಾದ ಯುವ ನಾಯಕ ಮುದ್ದಸೀರ್ ರವರ ನಿಧನಕ್ಕೆ ಅರಂತೋಡು ವಲಯ ಕಾಂಗ್ರೆಸ್ ಸಂಘಟನಾ ಕಾರ್ಯದರ್ಶಿ ತಾಜುದ್ದೀನ್ ಅರಂತೋಡು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.       ಭಗವಂತನು ಮನೆಯವರಿಗೆ ಕುಟುಂಬದ ಬಂಧು ಮಿತ್ರ ರಿಗೆ ನೋವುವನ್ನು ಸಹಿಸುವ

ಸುಳ್ಯ: ಯುವ ನಾಯಕ ಮುದ್ದಸೀರ್ ಕುದ್ರೋಳಿ ನಿಧನಕ್ಕೆ ಸಂತಾಪ Read More »

ಕರಾವಳಿ

ಸುಳ್ಯ: ಕೋವಿಡ್ ಶಂಕಿತ ವ್ಯಕ್ತಿ ಮೃತ್ಯು

(ನ್ಯೂಸ್ ಕಡಬ) newskadaba.com  ಸುಳ್ಯ, ನ.12: ಸುಳ್ಯ ಖಾಸಗಿ ಆಸ್ಪತ್ರೆಯಲ್ಲಿ ಇಂದು ಉಬರಡ್ಕ ಮಿತ್ತೂರು ಗ್ರಾಮದ ಸೂಂತೋಡು ನಿವಾಸಿ ಯೋಗೀಶ್ ಗೌಡ(35) ಎಂಬವರು ಅಸೌಖ್ಯದಿಂದ ನಿಧನರಾಗಿದ್ದರು.     ಅಸೌಖ್ಯದ ಕಾರಣಕ್ಕಾಗಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಪರೀಕ್ಷೆಯ ವೇಳೆ ಅವರಿಗೆ ಕೋವಿಡ್ ಪಾಸಿಟಿವ್ ಬಂದಿರುವುದು ಕಂಡು ಬಂದಿದೆ. ಇದರಿಂದಾಗಿ ಯೋಗೀಶ್ ಗೌಡ ರವರು ಕೋವಿಡ್ ಸೋಂಕಿಗೆ ಮೃತಪಟ್ಟಿರುವುದಾಗಿ ಹೇಳಲಾಗುತ್ತಿದೆ.    

ಸುಳ್ಯ: ಕೋವಿಡ್ ಶಂಕಿತ ವ್ಯಕ್ತಿ ಮೃತ್ಯು Read More »

ಕರಾವಳಿ

ಕಡಬ: ನೂತನ ತಾ.ಪಂ. ಅಭಿವೃದ್ಧಿಗೆ ಅನುದಾನ ಬಿಡುಗಡೆಗೊಳಿಸಲು ಉಸ್ತುವಾರಿ ಸಚಿವರಿಗೆ ಮನವಿ

(ನ್ಯೂಸ್ ಕಡಬ) newskadaba.com ಕಡಬ, ನ.12: ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ಕಡಬ ತಾಲೂಕು ಪಂಚಾಯತ್ ಗೆ ಅನುದಾನ ಬಿಡುಗಡೆಗೊಳಿಸುವಂತೆ ತಾ.ಪಂ. ಅಧ್ಯಕ್ಷರ ನೇತೃತ್ವದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಿಗೆ ನ.10 ರಂದು ಕಡಬ ತಾ.ಪಂ. ಅಧ್ಯಕ್ಷರ ನೇತೃತ್ವದಲ್ಲಿ ಮನವಿ ಸಲ್ಲಿಸಲಾಗಿದೆ.     ಹೊಸದಾಗಿ ರಚನೆಗೊಂಡಿರುವ ಕಡಬ ತಾಲೂಕು ಪಂಚಾಯತ್ ಅಭಿವೃದ್ಧಿಗೊಳಿಸುವ ನಿಟ್ಟಿನಲ್ಲಿ ಅನುದಾನದ ಕೊರತೆ ಇದ್ದು, ಕೂಡಲೇ 2 ಕೋಟಿ ಅನುದಾನವನ್ನು ಬಿಡುಗಡೆಗೊಳಿಸಬೇಕೆಂದು ತಾ.ಪಂ. ಅಧ್ಯಕ್ಷೆ ರಾಜೇಶ್ವರಿ ಕನ್ಯಾಮಂಗಲ ಅವರು ನ.10 ರಂದು ಮಂಗಳೂರಿಗೆ ಆಗಮಿಸಿದ್ದ ಜಿಲ್ಲಾ ಉಸ್ತುವಾರಿ

ಕಡಬ: ನೂತನ ತಾ.ಪಂ. ಅಭಿವೃದ್ಧಿಗೆ ಅನುದಾನ ಬಿಡುಗಡೆಗೊಳಿಸಲು ಉಸ್ತುವಾರಿ ಸಚಿವರಿಗೆ ಮನವಿ Read More »

ಕರಾವಳಿ

ಉಳ್ಳಾಲ :ಅಕ್ರಮ ಜಾನುವಾರು ಸಾಗಾಟ ➤ ವಾಹನ ಚಾಲಕ ಖಾಕಿ ವಶಕ್ಕೆ

(ನ್ಯೂಸ್ ಕಡಬ) newskadaba.com ಉಳ್ಳಾಲ ನ. 12: ಉಳ್ಳಾಲದಲ್ಲಿ ಅಕ್ರಮ ಜಾನುವಾರು ಸಾಗಾಟ ಮಾಡುತ್ತಿದ್ದ ವಾಹನವನ್ನು ವಶಕ್ಕೆ ಪಡೆದುಕೊಂಡು ಜಾನುವಾರುಗಳನ್ನು ಪೊಲೀಸರು ರಕ್ಷಿಸಿದ್ದಾರೆ. ಮಂಗಳೂರಿನಿಂದ ಕೇರಳದ ಕಡೆಗೆ ಈಚರ್ ವಾಹನದಲ್ಲಿ ಸಾಗಾಟ ಮಾಡುತ್ತಿದ್ದ ಐದು ಹೋರಿ ಹಾಗೂ ಒಂದು ಹಸುವನ್ನು ವಶಕ್ಕೆ ಪಡೆದಿದ್ದಾರೆ. ದಾವಣಗೆರೆ ನೋಂದವಣಿಯ ವಾಹನವಾಗಿದ್ದು ಚಾಲಕನು ವಾಹನ ಮತ್ತು ಜಾನುವಾರುಗಳನ್ನು ಹುಬ್ಬಳ್ಳಿಯ ಕೋರ್ಟಿಂದ ಬಿಡುಗಡೆಗೊಳಿಸಿರುವುದಾಗಿ ದಾಖಲೆ ತೋರಿದ್ದಾನೆ. ಉಳ್ಳಾಲ ಪೊಲೀಸರು ವಾಹನ ಮತ್ತು ಚಾಲಕನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.    

ಉಳ್ಳಾಲ :ಅಕ್ರಮ ಜಾನುವಾರು ಸಾಗಾಟ ➤ ವಾಹನ ಚಾಲಕ ಖಾಕಿ ವಶಕ್ಕೆ Read More »

ಕರಾವಳಿ

ನ. 13 ರಂದು ಕಡಬ ಸಮುದಾಯ ಆಸ್ಪತ್ರೆಯಲ್ಲಿ ಉಚಿತ ವೈದ್ಯಕೀಯ ತಪಾಸಣ ಶಿಬಿರ

(ನ್ಯೂಸ್ ಕಡಬ) newskadaba.com ಕಡಬ ನ. 11: ಸಮುದಾಯ ಆರೋಗ್ಯ ಕೇಂದ್ರ ಕಡಬ, ದ.ಕ.ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಕಡಬ ಹಾಗೂ ಪಟ್ಟಣ ಪಂಚಾಯತ್ ಕಡಬ ಇದರ ಸಂಯುಕ್ತ ಆಶ್ರಯದಲ್ಲಿ ಆಸಾಂಕ್ರಾಮಿಕ ರೋಗಗಳು ಮತ್ತು ಕೋವಿಡ್-19 ಉಚಿತ ತಪಾಸಣ ಶಿಬಿರವು ಕಡಬ ಸಮುದಾಯ ಆರೋಗ್ಯ ಕೇಂದ್ರದಲ್ಲಿ ನ. 13 ರಂದು ಜರಗಲಿದೆ.   ಶಿಬಿರದಲ್ಲಿ ಕೋವಿಡ್-19 ಪರೀಕ್ಷೆ ಮಾತ್ರವಲ್ಲದೇ ರಕ್ತದೊತ್ತಡ ಪರೀಕ್ಷೆ  ಸಕ್ಕರೆ ಕಾಯಿಲೆ ಪರೀಕ್ಷೆ ಹಾಗೂ ರಕ್ತ ವರ್ಗೀಕರಣವನ್ನು ಉಚಿತವಾಗಿ ನಡೆಸಲಾಗುವುದು ಎಂದು ಕಡಬ ಸಮುದಾಯ ಆರೋಗ್ಯ

ನ. 13 ರಂದು ಕಡಬ ಸಮುದಾಯ ಆಸ್ಪತ್ರೆಯಲ್ಲಿ ಉಚಿತ ವೈದ್ಯಕೀಯ ತಪಾಸಣ ಶಿಬಿರ Read More »

ಕರಾವಳಿ

ಹರಿಹರ ಪಲ್ಲತಡ್ಕ: ರಸ್ತೆ ಕಾಂಕ್ರೀಟ್ ಕಾರ್ಯ

(ನ್ಯೂಸ್ ಕಡಬ) newskadaba.com ಹರಿಹರ ಪಲ್ಲತಡ್ಕ, ನ.11: ಮಳೆ ಹಾನಿ ಯೋಜನೆಯಡಿಯಲ್ಲಿ ಮಂಜೂರಾದ 45 ಲಕ್ಷ ಅನುದಾನದಲ್ಲಿ 815 ಮೀಟರ್ ರಸ್ತೆ ಕಾಂಕ್ರೀಟ್ ಕಾರ್ಯವು ಬಾಳುಗೋಡು -ಹರಿಹರ ಸಂಪರ್ಕ ರಸ್ತೆಯ ಕಲ್ಲೆಮಠ ಎಂಬಲ್ಲಿ ಭರದಿಂದ ಸಾಗುತ್ತಿದೆ.     ಈ ಸಂದರ್ಭದಲ್ಲಿ ತಾಲೂಕು ಲೋಕೋಪಯೋಗಿ ಇಲಾಖೆಯ ಜೂನಿಯರ್ ಇಂಜಿನಿಯರ್ ಜನಾರ್ಧನ ರವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಹಾಗೆಯೇ ಪಲ್ಲತಡ್ಕ ಗ್ರಾ.ಪಂ. ನ ಮಾಜಿ ಅಧ್ಯಕ್ಷರಾದ ಚಂದ್ರಹಾಸ ಶಿವಾಲ, ಶಿವಕುಮಾರ್ ಶಿವಾಲ, ಗುತ್ತಿಗೆದಾರರ ಉಸ್ತುವಾರಿ ಯಾಹ್ಯಾ ಉಪಸ್ಥಿತರಿದ್ದರು.  

ಹರಿಹರ ಪಲ್ಲತಡ್ಕ: ರಸ್ತೆ ಕಾಂಕ್ರೀಟ್ ಕಾರ್ಯ Read More »

ಕರಾವಳಿ

ಪುತ್ತೂರು: ಶ್ರೀ ವಿಷ್ಣುಮೂರ್ತಿ ದೈವಸ್ಥಾನದಲ್ಲಿ ಆಭರಣ ಕಳವು

(ನ್ಯೂಸ್ ಕಡಬ) newskadaba.com ಪುತ್ತೂರು, ನ.11: ಕಾರಣಿಕ ಕ್ಷೇತ್ರ ಶ್ರೀ ವಿಷ್ಣುಮೂರ್ತಿ ಮತ್ತು ಪರಿವಾರ ದೈವಸ್ಥಾನ ಬಲ್ನಾಡು ಗ್ರಾಮದ ಕಾಡ್ಲ ಎಂಬಲ್ಲಿ ಕಳ್ಳತನ ಎಸಗಿರುವ ಘಟನೆ ಕಳೆದ ದಿನ ರಾತ್ರಿ ಬೆಳಕಿಗೆ ಬಂದಿದೆ.     ಕಳೆದ ದಿನ ರಾತ್ರಿ ದೀಪ ಹಚ್ಚಲು ಬಾಗಿಲು ತೆರೆದಾಗ ದೈವಸ್ಥಾನದ ಒಳಗಿರುವ ದೈವದ ಆಯುಧಗಳು ಹಾಗೂ ಆಭರಣಗಳು ಕಳವಾಗಿರುವುದು ಬೆಳಕಿಗೆ ಬಂದಿದೆ. ಘಟನಾ ಸ್ಥಳಕ್ಕೆ ಸಂಪ್ಯ ಠಾಣಾ ಎಸ್.ಐ ಉದಯ ರವಿ, ಪೊಲೀಸ್ ಸಿಬಂದಿಗಳು, ಶ್ವಾನ ದಳ ಹಾಗೂ ಬೆರಳುತಜ್ಞರು ಆಗಮಿಸಿ

ಪುತ್ತೂರು: ಶ್ರೀ ವಿಷ್ಣುಮೂರ್ತಿ ದೈವಸ್ಥಾನದಲ್ಲಿ ಆಭರಣ ಕಳವು Read More »

ಕರಾವಳಿ

ಮಂಗಳೂರು: ದೇರಳಕಟ್ಟೆ ಆಸ್ಪತ್ರೆಯಿಂದ ಹುಬ್ಬಳ್ಳಿಗೆ ಮೃತದೇಹವನ್ನು ಸಾಗಿಸಲು ನೆರವಾದ ಕರ್ನಾಟಕ ರಕ್ಷಣಾ ವೇದಿಕೆ

(ನ್ಯೂಸ್ ಕಡಬ) newskadaba.com ಮಂಗಳೂರು, ನ.11: ಉತ್ತರಕನ್ನಡ ಮೂಲದ ವ್ಯಕ್ತಿಯೋರ್ವರು ಮಂಗಳೂರು ದೇರಳಕಟ್ಟೆ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಮೃತದೇಹವನ್ನು ಅವರ ಊರಿಗೆ ತಲುಪಿಸಲು ವ್ಯವಸ್ಥೆ ಮಾಡುವ ಮೂಲಕ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣ ದ.ಕ ಜಿಲ್ಲಾ ಸಮಿತಿ ಯವರು ಮಾನವೀಯತೆ ಮೆರೆದಿದ್ದಾರೆ.     ಹುಬ್ಬಳ್ಳಿ ಮೂಲದ ವಿಷ್ಣು ಎಂಬ ಯುವಕ ದೇರಳಕಟ್ಟೆ ಆಸ್ಪತ್ರೆಯಲ್ಲಿ ನಿಧನರಾಗಿದ್ದರು. ಮೃತರು ಮೃತದೇಹವನ್ನು ಊರಿಗೆ ಸಾಗಿಸಲು ಹಣಕಾಸಿನ ಕೊರತೆ ಇದ್ದುದರಿಂದ ಈ ವಿಚಾರ ತಿಳಿದ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನ ಬಣ ದ.ಕ.

ಮಂಗಳೂರು: ದೇರಳಕಟ್ಟೆ ಆಸ್ಪತ್ರೆಯಿಂದ ಹುಬ್ಬಳ್ಳಿಗೆ ಮೃತದೇಹವನ್ನು ಸಾಗಿಸಲು ನೆರವಾದ ಕರ್ನಾಟಕ ರಕ್ಷಣಾ ವೇದಿಕೆ Read More »

ಕರಾವಳಿ
Scroll to Top