newskadaba

ಬೆಂಗಳೂರು: ಬೆಳ್ಳಂಬೆಳಗ್ಗೆ ಮಾಜಿ ಸಚಿವ ರೋಷನ್ ಬೇಗ್ ನಿವಾಸಕ್ಕೆ ಸಿಬಿಐ ದಾಳಿ

(ನ್ಯೂಸ್ ಕಡಬ) newskadaba.com ಬೆಂಗಳೂರು ನ. 23: ಬೆಳ್ಳಂಬೆಳಗ್ಗೆ ನ್ಯಾಯಾಂಗ ಬಂಧನದಲ್ಲಿರುವ ಮಾಜಿ ಸಚಿವ ರೋಷನ್ ಬೇಗ್ ನಿವಾಸಕ್ಕೆ ಸಿಬಿಐ ಅಧಿಕಾರಿಗಳು ದಾಳಿ ನಡೆಸಿದ್ದಾರೆ.     ಇವರನ್ನು ಐಎಂಎ ಬಹುಕೋಟಿ ರೂಪಾಯಿ ವಂಚನೆ ಪ್ರಕರಣದ ಸಂಬಂಧ ರೋಷನ್ ಬೇಗ್ ಅವರನ್ನು ಸಿಬಿಐ ಅಧಿಕಾರಿಗಳು ಕಳೆದ ದಿನ ಬಂಧಿಸಿದ್ದಾರೆ. ಬೆಂಗಳೂರಿನ ಪುಲಕೇಶಿ ನಗರದ ಕೋಲ್ಸ್ ಪಾರ್ಕ್‍ನಲ್ಲಿರುವ ರೋಷನ್ ಬೇಗ್ ಅವರ ಮನೆಗೆ ಬೆಳ್ಳಂಬೆಳಗ್ಗೆ ಸಿಬಿಐ 7 ಅಧಿಕಾರಿಗಳ ತಂಡ ದಾಳಿ ನಡೆಸಿ, ಪರಿಶೀಲನೆ  ನಡೆಸುತ್ತಿದ್ದಾರೆ.  

ಬೆಂಗಳೂರು: ಬೆಳ್ಳಂಬೆಳಗ್ಗೆ ಮಾಜಿ ಸಚಿವ ರೋಷನ್ ಬೇಗ್ ನಿವಾಸಕ್ಕೆ ಸಿಬಿಐ ದಾಳಿ Read More »

ಕರಾವಳಿ, ಕರ್ನಾಟಕ

ಮಂಗಳೂರು: ಸ್ಕೂಟರ್ ಗೆ ಲಾರಿ ಢಿಕ್ಕಿ ➤ ದ್ವಿಚಕ್ರ ವಾಹನ ಸವಾರ ಸ್ಥಳಲ್ಲೇ ಮೃತ್ಯು

(ನ್ಯೂಸ್ ಕಡಬ) newskadaba.com ಉಚ್ಚಿಲ ನ. 23: ಇಂದು ಮುಂಜಾನೆ ಉಚ್ಚಿಲ ಪೇಟೆಯಲ್ಲಿ ದ್ವಿಚಕ್ರ ವಾಹನಕ್ಕೆ ಲಾರಿ ಢಿಕ್ಕಿ ಹೊಡೆದಿದ್ದು, ಪರಿಣಾಮ ರಸ್ತೆಗೆ ಬಿದ್ದ ದ್ವಿಚಕ್ರ ವಾಹನ ಸವಾರ ಲಾರಿ ಚಕ್ರಕ್ಕೆ ಸಿಲುಕಿ ಮೃತಪಟ್ಟ ಘಟನೆ ನಡೆದಿದೆ. ಮೃತಪಟ್ಟ ವ್ಯಕ್ತಿಯನ್ನು ಹೆಜಮಾಡಿ ಅಡ್ಕ ಹೌಸ್ ನಿವಾಸಿ ವಾಸು ಡಿ. ಕೋಟ್ಯಾನ್(65) ಎಂದು ಗುರುತಿಸಲಾಗಿದೆ.     ಮಂಗಳೂರಿನತ್ತ ಗ್ಯಾಸ್ ಸಿಲಿಂಡರ್ ತುಂಬಿಕೊಂಡು ಚಲಿಸುತ್ತಿದ್ದ ಲಾರಿ ಹಾಗೂ ಉಚ್ಚಿಲ ಪೇಟೆಯಿಂದ ಪಡುಬಿದ್ರೆ ಕಡೆಗೆ ಸ್ಕೂಟರ್ ಸವಾರಿ ಮಾಡಿಕೊಂಡು ಹೋಗುತ್ತಿದ್ದ ವೇಳೆ

ಮಂಗಳೂರು: ಸ್ಕೂಟರ್ ಗೆ ಲಾರಿ ಢಿಕ್ಕಿ ➤ ದ್ವಿಚಕ್ರ ವಾಹನ ಸವಾರ ಸ್ಥಳಲ್ಲೇ ಮೃತ್ಯು Read More »

ಕರಾವಳಿ, ಕ್ರೈಮ್ ನ್ಯೂಸ್

ಕುಕ್ಕೆ ಶ್ರೀ ಸುಬ್ರಹ್ಮಣ್ಯ: 180 ಕೊಠಡಿಗಳುಳ್ಳ “ಅನಘ” ವಸತಿಗೃಹ ಲೋಕಾರ್ಪಣೆ

(ನ್ಯೂಸ್ ಕಡಬ) newskadaba.com ಕುಕ್ಕೆ ಶ್ರೀ ಸುಬ್ರಹ್ಮಣ್ಯ ನ. 23: ಕಳೆದ ದಿನ ಸುಬ್ರಹ್ಮಣ್ಯ ದೇವಸ್ಥಾನದ ವತಿಯಿಂದ ನಿರ್ಮಿಸಲ್ಪಟ್ಟ 180 ಕೊಠಡಿಗಳುಳ್ಳ “ಅನಘ” ವಸತಿಗೃಹವನ್ನು ಮುಜುರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿಯವರು ಉದ್ಘಾಟನೆ ಮಾಡಿ ಲೋಕಾರ್ಪಣೆ ಮಾಡಿದ್ದಾರೆ.   ಕಾರ್ಯಕ್ರಮದ ಅಧ್ಯಕ್ಷತೆಯನ್ನು ದೇವಸ್ಥಾನದ ಅಭಿವೃದ್ಧಿ ಸಮಿತಿ ಅಧ್ಯಕ್ಷ, ಶಾಸಕ ಎಸ್.ಅಂಗಾರ ರವರು ವಹಿಸಿದ್ದರು. ವೇದಿಕೆಯಲ್ಲಿ ದೇವಸ್ಥಾನದ ಆಡಳಿತಾಧಿಕಾರಿ ರೂಪ ಎಂ,ಜೆ, ಸುಳ್ಯ ತಾ.ಪಂ. ಅಧ್ಯಕ್ಷ ಚನಿಯ ಕಲ್ತಡ್ಕ, ಕಡಬ ತಾಲೂಕು ಪಂ. ಸದಸ್ಯ ಅಶೋಕ್ ನೆಕ್ರಾಜೆ, ಅಭಿವೃದ್ಧಿ ಸಮಿತಿ

ಕುಕ್ಕೆ ಶ್ರೀ ಸುಬ್ರಹ್ಮಣ್ಯ: 180 ಕೊಠಡಿಗಳುಳ್ಳ “ಅನಘ” ವಸತಿಗೃಹ ಲೋಕಾರ್ಪಣೆ Read More »

ಕರಾವಳಿ

ನೆಲ್ಯಾಡಿ : ಕ್ಯಾನ್ಸರ್ ಪೀಡಿತೆಯನ್ನು ಆಸ್ಪತ್ರೆಗೆ ಸಾಗಿಸುವ ದಾರಿಯಲ್ಲಿ ಕಂದಕ ನಿರ್ಮಿಸಿದ ನೆರೆಯ ಮನೆಯವರು

(ನ್ಯೂಸ್ ಕಡಬ) newskadaba.com ನೆಲ್ಯಾಡಿ, ನ. 23: ಕ್ಯಾನ್ಸರ್ ಪೀಡಿತ ಮಹಿಳೆಯೊಬ್ಬರ ಮನೆಗೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ವ್ಯಕ್ತಿಯೋರ್ವ ಕಂದಕ ನಿರ್ಮಿಸಿ ಆಕೆಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗದ ಪರಿಸ್ಥಿತಿಯನ್ನು ನಿರ್ಮಾಣ ಮಾಡಿದ ಘಟನೆ ಬೆಳ್ತಂಗಡಿ ತಾಲೂಕಿನಲ್ಲಿ ನಡೆದಿದೆ.     ಬೆಳ್ತಂಗಡಿ ತಾಲೂಕಿನ ರೆಖ್ಯಾ ಗ್ರಾಮದ ಅರಸಿನಮಕ್ಕಿ ಪಂಚಾಯತ್ ವ್ಯಾಪ್ತಿಯ ಎಂಜಿರ ಎಂಬಲ್ಲಿ ಹೀಗೆ ರಸ್ತೆಗೆ ಕಂದಕ ನಿರ್ಮಿಸಲಾಗಿದ್ದು, ರೆಜಿ ಎಂಬವರು ಈ ರೀತಿಯ ಅಮಾನವೀಯತೆ ತೋರಿಸಿದ್ದಾರೆ .ರಾಷ್ಟ್ರೀಯ 75ರ ಸಮೀಪದ ಹೆದ್ದಾರಿ ಸಮೀಪ ಇರುವ ಕ್ಯಾನ್ಸರ್​ನಿಂದ ಬಳಲುತ್ತಿರುವ

ನೆಲ್ಯಾಡಿ : ಕ್ಯಾನ್ಸರ್ ಪೀಡಿತೆಯನ್ನು ಆಸ್ಪತ್ರೆಗೆ ಸಾಗಿಸುವ ದಾರಿಯಲ್ಲಿ ಕಂದಕ ನಿರ್ಮಿಸಿದ ನೆರೆಯ ಮನೆಯವರು Read More »

ಕರಾವಳಿ

24 ಗಂಟೆಗಳಲ್ಲಿ ಒಂದರ ಹಿಂದೊಂದರಂತೆ 78 ಗೋವುಗಳು ಮೃತ್ಯು

(ನ್ಯೂಸ್ ಕಡಬ) newskadaba.com ಜೈಪುರ ನ. 23: ತೋಟವೊಂದರಲ್ಲಿ 24 ಗಂಟೆಗಳ ಅವಧಿಯಲ್ಲಿ ಒಂದರ ಹಿಂದೊಂದರಂತೆ ಕನಿಷ್ಠ 78 ಹಸುಗಳು ಮೃತಪಟ್ಟಿರುವ ಘಟನೆ ರಾಜಸ್ಥಾನದ ಜೈಪುರದಲ್ಲಿ ನಡೆದಿದ್ದು, ಹಸುಗಳು ಏಕಾಏಕಿ ಕುಸಿದು ಬಿದ್ದು ಮೃತಪಟ್ಟಿವೆ ಎಂದು ತಿಳಿದು ಬಂದಿದೆ. ರಾಜಸ್ಥಾನದ ಚುರು ಜಿಲ್ಲೆಯ ತೋಟವೊಂದರಲ್ಲಿ ಈ ಘಟನೆ ನಡೆದಿದೆ. ಸರ್ದರ್ಶಹರ್‌ ಬಿಲ್ಲುಪಸ್ ರಾಂಪುರ ಗ್ರಾಮದ ಖಾಸಗಿ ಜಮೀನಿನಲ್ಲಿ ಈ ಘಟನೆ ನಡೆದಿದೆ. ಆಹಾರದಲ್ಲಿ ವಿಷ ವಸ್ತುಗಳನ್ನು ಸೇವಿಸಿ ಹಸುಗಳು ಮೃತಪಟ್ಟಿವೆ ಎಂದು ಶಂಕಿಸಲಾಗಿದೆ. ಹಸುಗಳಿಗೆ ನೀಡಲಾಗಿರುವ ಆಹಾರದ ಮಾದರಿಗಳನ್ನು

24 ಗಂಟೆಗಳಲ್ಲಿ ಒಂದರ ಹಿಂದೊಂದರಂತೆ 78 ಗೋವುಗಳು ಮೃತ್ಯು Read More »

ರಾಷ್ಟ್ರೀಯ ನ್ಯೂಸ್

ಉಡುಪಿ: ಮಕರ ಸಂಕ್ರಾಂತಿಯಂದು ಶ್ರೀಕೃಷ್ಣ ಉತ್ಸವಕ್ಕೆ ಬ್ರಹ್ಮರಥ ತಯಾರಿ

(ನ್ಯೂಸ್ ಕಡಬ) newskadaba.com ಉಡುಪಿ  ನ. 23: ಶ್ರೀಕೃಷ್ಣಮಠದಲ್ಲಿ ಮಕರ ಸಂಕ್ರಾಂತಿಯಂದು ಶ್ರೀಕೃಷ್ಣನ ಉತ್ಸವಕ್ಕಾಗಿ ಬ್ರಹ್ಮರಥವನ್ನು ಸಜ್ಜುಗೊಳಿಸುವ ಕಾರ್ಯ ನಡೆಯುತ್ತಿದೆ. ಈ ಪ್ರಯುಕ್ತ ದೇವರಿಗೆ ಪ್ರಾರ್ಥನೆ ನಡೆಸಿ ಸಂಪ್ರದಾಯದಂತೆ ರಥದ ಜಿಡ್ಡೆಯನ್ನು ರಥಬೀದಿಯಲ್ಲಿ ಹೊರ ತಂದಿರಿಸಲಾಯಿತು. ಈ ಸಂದರ್ಭದಲ್ಲಿ ಮಠದ ದಿವಾನ ಲಕ್ಷ್ಮೀನಾರಾಯಣ ಮುಚ್ಚಿಂತಾಯ, ವ್ಯವಸ್ಥಾಪಕರಾದ ಗೋವಿಂದರಾಜ್ , ಪ್ರದೀಪ್ ರಾವ್, ಶ್ರೀಶ ಭಟ್ ಕಡೆಕಾರ್ ಮೊದಲಾದವರು ಪಾಲ್ಗೊಂಡಿದ್ದರು.    

ಉಡುಪಿ: ಮಕರ ಸಂಕ್ರಾಂತಿಯಂದು ಶ್ರೀಕೃಷ್ಣ ಉತ್ಸವಕ್ಕೆ ಬ್ರಹ್ಮರಥ ತಯಾರಿ Read More »

ಕರಾವಳಿ

ಮೂತ್ರಪಿಂಡ ವೈಫಲ್ಯದಿಂದ ಕಿರುತೆರೆ ನಟಿ ನಿಧನ

(ನ್ಯೂಸ್ ಕಡಬ) newskadaba.com ಮುಂಬೈ ನ. 23 :ಕ್ಲಾಸ್ ಆಫ್ 2020 ಮತ್ತು ಸೇಠ್ ಜಿ ಮುಂತಾದ ಟಿವಿ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಂಡಿದ್ದ ನಟಿ ಲೀನಾ ಆಚಾರ್ಯ ಅವರು ಮೂತ್ರಪಿಂಡ ಸಮಸ್ಯೆಯಿಂದ ಕೊನೆಯುಸಿರೆಳೆದಿದ್ದಾರೆ. ಈ ಬಗ್ಗೆ ನಟಿ ಲೀನಾ ಆಚಾರ್ಯ ಅವರ ಜೊತೆ ನಟಿಸಿದ್ದ ನಟ ರೋಹನ್‌ ಮೆಹ್ರಾ ಮಾಹಿತಿ ನೀಡಿದ್ದಾರೆ. ಮೆಹ್ರಾ ಅವರು “ಕ್ಲಾಸ್‌ ಆಫ್ 2020′ ನಲ್ಲಿ ಆಚಾರ್ಯ ಜತೆಗೆ ನಟಿಸಿದ್ದರು. ಸಾವಿನ ಬಗ್ಗೆ ಪ್ರತಿಕ್ರಿಯೆ ನೀಡಿದ ನಟ ಆಯುಷ್‌ ಆನಂದ್‌ ಲೀನಾ ತನಗೆ ಇದ್ದ

ಮೂತ್ರಪಿಂಡ ವೈಫಲ್ಯದಿಂದ ಕಿರುತೆರೆ ನಟಿ ನಿಧನ Read More »

ರಾಷ್ಟ್ರೀಯ ನ್ಯೂಸ್

ಕಲ್ಲಡ್ಕ: ಓಮ್ನಿ-ಬೈಕ್ ಅಪಘಾತ ➤ ಬೈಕ್ ಸವಾರ ಮೃತ್ಯು

(ನ್ಯೂಸ್ ಕಡಬ) newskadaba.com ಕಲ್ಲಡ್ಕ ನ. 23: ಕಳೆದ ದಿನ ರಾತ್ರಿ ಕಲ್ಲಡ್ಕ ಸಮೀಪದಲ್ಲಿ ನಡೆದ ಓಮ್ನಿ ಹಾಗೂ ಬೈಕ್ ಅಪಘಾತ ನಡೆದಿತ್ತು. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಬೈಕ್ ಸವಾರನಿಗೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಮೃತಪಟ್ಟ ವ್ಯಕ್ತಿಯನ್ನು ಕಲ್ಲಡ್ಕ ಹಿಂದೂ ಸಂಘಟನೆ ಕಾರ್ಯಕರ್ತ ಯತಿರಾಜ್(30) ಎಂದು ಗುರುತಿಸಲಾಗಿದೆ.     ಕಳೆದ ದಿನ ರಾತ್ರಿ ಕ್ಲಡ್ಕ ಸಮೀಪದ ಕುದ್ರೆಬೆಟ್ಟುನಲ್ಲಿ ಸಂಭವಿಸಿದ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದರು. ಚಿಕಿತ್ಸೆಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕರಿಯಾಗದೇ ಮೃತಪಟ್ಟಿದ್ದಾರೆ. ಇನ್ನು ಈ

ಕಲ್ಲಡ್ಕ: ಓಮ್ನಿ-ಬೈಕ್ ಅಪಘಾತ ➤ ಬೈಕ್ ಸವಾರ ಮೃತ್ಯು Read More »

ಕರಾವಳಿ, ಕ್ರೈಮ್ ನ್ಯೂಸ್

157 ಕಿ.ಮೀ ಸೈಕಲ್ ಯಾನ ಮಾಡಿದ ಕಲ್ಮಕಾರು ಯುವಕ

(ನ್ಯೂಸ್ ಕಡಬ) newskadaba.com ಸುಳ್ಯ ನ. 21: ಸುಳ್ಯ ತಾಲೂಕಿನ ಕಲ್ಮಕಾರು ಗ್ರಾಮದ ಕೊಪ್ಪಡ್ಕ ಸುಬ್ರಹ್ಮಣ್ಯ ಕೆ.ಜೆ ಎಂಬವರು 157 ಕಿ.ಮೀ ಸೈಕಲ್ ಯಾನ ಮಾಡಿದ್ದಾರೆ.     ಇವರು ಬೆಂಗಳೂರಿನ ಬೊಮ್ಮಸಂದ್ರದ ಖಾಸಗಿ ಕಂಪನಿಯ ಮಾನವ ಸಂಪನ್ಮೂಲ ಅಧಿಕಾರಿಯಾಗಿರುವ ಇವರು ಕೆಲಸದ ನಿಮಿತ್ತ ಬೆಂಗಳೂರಿನಿಂದ ಮೈಸೂರಿಗೆ ಪ್ರಯಾಣಿಸಬೇಕಾಗಿದ್ದು, ಸೋಲೊ ಸೈಕಲ್ ನಲ್ಲಿ ಬೆಳಗ್ಗಿನ ಜಾವ 4 ಗಂಟೆಗೆ ಪ್ರಯಾಣ ಪ್ರಾರಂಭಿಸಿ ಮೈಸೂರಿಗೆ ಸಂಜೆ 3.15ಕ್ಕೆ ತಲುಪಿದ್ದಾರೆ.    

157 ಕಿ.ಮೀ ಸೈಕಲ್ ಯಾನ ಮಾಡಿದ ಕಲ್ಮಕಾರು ಯುವಕ Read More »

ಕರಾವಳಿ

ಹಿಂದೂ ದೇವರ ನಿಂದನೆ ➤ ಹಿ.ಜಾ.ವೇದಿಕೆಯಿಂದ ವಿಟ್ಲ ಠಾಣೆಗೆ ದೂರು, ಆರೋಪಿಯ ಬಂಧನ

(ನ್ಯೂಸ್ ಕಡಬ) newskadaba.com ಪುತ್ತೂರು ನ. 21: ಕಂಬಳಬೆಟ್ಟುವಿನ ವ್ಯಕ್ತಿಯೊಬ್ಬರು ಹಿಂದೂ ದೇವಿ ದೇವತೆಗಳನ್ನು ಅವಹೇಳನ ಮಾಡುವ ಸಂದೇಶವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಯ ಬಿಟ್ಟಿದ್ದರು. ಇದೀಗಾ ಈತನ ವಿರುದ್ಧ ಹಿಂದೂ ಜಾಗರಣಾ ವೇದಿಕೆ ವಿಟ್ಲ ಪೊಲೀಸರಿಗೆ ದೂರು ದಾಖಲಿಸಿದ್ದರು.   ಕುಂಬಳಬೆಟ್ಟುವಿನ ರಿಜ್ವಾನ್ ಎಂಬವರು ಹಿಂದೂ ದೇವರನ್ನು, ಹಿಂದೂ ಶಬ್ಧಗಳನ್ನು ಉಲ್ಲೇಖಿಸಿ ಅವಹೇಳನ ಮಾಡಿರುವ ಸಂದೇಶ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು , ಈ ಕುರಿತು ಹಿಂದೂಜಾಗರಣಾ ವೇದಿಕೆಯ ವಿಟ್ಲ ತಾಲೂಕು ಕಾರ್ಯದರ್ಶಿ ಹರ್ಷೇಂದ್ರ ಅವರು ವಿಟ್ಲ ಪೊಲೀಸ್ ಠಾಣೆಗೆ

ಹಿಂದೂ ದೇವರ ನಿಂದನೆ ➤ ಹಿ.ಜಾ.ವೇದಿಕೆಯಿಂದ ವಿಟ್ಲ ಠಾಣೆಗೆ ದೂರು, ಆರೋಪಿಯ ಬಂಧನ Read More »

ಕರಾವಳಿ
Scroll to Top