newskadaba

ಮಂಗಳೂರು ಖಾಸಗಿ ಆಸ್ಪತ್ರೆಗೆ ಪ್ರಧಾನಿ ಕಾರ್ಯಾಲಯದಿಂದ 12ಲಕ್ಷ ರೂಪಾಯಿ ದಂಡ

(ನ್ಯೂಸ್ ಕಡಬ) newskadaba.com ಮಂಗಳೂರು  ನ. 24: ಕೊರೊನಾ ಹಿನ್ನಲೆಯಲ್ಲಿ ಆರ್ಥಿಕ ಸಂಕಷ್ಟದಲ್ಲಿರುವಾಗ ಖಾಸಗಿ ಆಸ್ಪತ್ರೆಗಳು ಒಂದಲ್ಲ ಒಂದು ರೀತಿಯಲ್ಲಿ ಹಣ ಮಾಡುವ ದಂಧೆ ನಡೆಯುತ್ತಲೇ ಇದೆ. ಇದೀಗ ಮಂಗಳೂರಿನಲ್ಲಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ಬಡ ರೋಗಿಯನ್ನು ಸೂಕ್ತ ಚಿಕಿತ್ಸೆ ನೀಡುವುದು ಬಿಟ್ಟು, ಲಕ್ಷಾಂತರ ರೂಪಾಯಿ ಬಿಲ್ ಮಾಡಿರುವ ಘಟನೆ ಬಗ್ಗೆ ಬಂದ ದೂರಿನ ಹಿನ್ನಲೆಯಲ್ಲಿ ಪ್ರಧಾನಿ ಕಾರ್ಯಾಲಯ ಆಸ್ಪತ್ರೆಗೆ 12,96,320 ರೂಪಾಯಿ ದಂಡ ವಿಧಿಸಿರುವ ಘಟನೆ ನಡೆದಿದೆ.     ಪಣಂಬೂರು ವ್ಯಕ್ತಿಯೊಬ್ಬರು ಫೆಬ್ರವರಿ ತಿಂಗಳಿನಲ್ಲಿ […]

ಮಂಗಳೂರು ಖಾಸಗಿ ಆಸ್ಪತ್ರೆಗೆ ಪ್ರಧಾನಿ ಕಾರ್ಯಾಲಯದಿಂದ 12ಲಕ್ಷ ರೂಪಾಯಿ ದಂಡ Read More »

ಕರಾವಳಿ

ಶಿವಮೊಗ್ಗ: ಹೊಸ ಸೈನಿಕ ಶಾಲೆ ಆರಂಭಿಸುವ ಕುರಿತು ಸಂಸದ ಬಿವೈ ರಾಘವೇಂದ್ರ ಮಾಹಿತಿ

(ನ್ಯೂಸ್ ಕಡಬ) newskadaba.com ಶಿವಮೊಗ್ಗ ನ. 24: ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲ್ಲೂಕಿನ ಆಗುಂಬೆಯಲ್ಲಿ ಹೊಸ ಸೈನಿಕ ಶಾಲೆ ಆರಂಭಿಸುವ ಕುರಿತು ಸಂಸದ ಬಿವೈ ರಾಘವೇಂದ್ರ ಮಾಹಿತಿ ನೀಡಿದ್ದಾರೆ.     ಮುಂದಿನ ದಿನಗಳಲ್ಲಿ ಸುಮಾರು 300 ಕೋಟಿ ರೂಪಾಯಿ ವೆಚ್ಚದಲ್ಲಿ ಶಾಲೆ ನಿರ್ಮಾಣವಾಗಲಿದ್ದು, ಸೈನಿಕ ಶಾಲೆಗಾಗಿ ಆಗುಂಬೆಯಲ್ಲಿ 100 ಎಕರೆ ಜಮೀನು ಗುರುತಿಸುವ ಕಾರ್ಯ ನಡೆಯುತ್ತಿದೆ. ಈ ಬಗ್ಗೆ ಕೇಂದ್ರ ರಕ್ಷಣಾ ಸಚಿವರಾದ ರಾಜನಾಥ್ ಸಿಂಗ್ ಅವರಲ್ಲಿ ಚರ್ಚಿಸಲಾಗಿದೆ ಎಂದು ಬಿವೈ ರಾಘವೇಂದ್ರ ಅವರು ಹೇಳಿದ್ದಾರೆ.  

ಶಿವಮೊಗ್ಗ: ಹೊಸ ಸೈನಿಕ ಶಾಲೆ ಆರಂಭಿಸುವ ಕುರಿತು ಸಂಸದ ಬಿವೈ ರಾಘವೇಂದ್ರ ಮಾಹಿತಿ Read More »

ಕರಾವಳಿ, ಕರ್ನಾಟಕ

ಕಾಸರಗೋಡು: ಪೊಲೀಸರನ್ನು ಕಂಡು ಹೆದರಿ ಓಡಿದ ಯುವಕ ➤ ಬಾವಿಗೆ ಬಿದ್ದು ಮೃತ್ಯು

(ನ್ಯೂಸ್ ಕಡಬ) newskadaba.com ಕಾಸರಗೋಡು ನ. 24: ಮಂಜೇಶ್ವರ ಸಮೀಪ ಮಜೀರ್ಪಳ್ಳ ಎಂಬಲ್ಲಿ ಪೊಲೀಸರನ್ನು ಕಂಡು ಹೆದರಿ ಓಡಿ ಯುವಕ ಪಾಳು ಬಾವಿಗೆ ಬಿದ್ದು ಮೃತಪಟ್ಟ ಘಟನೆ ಕಳೆದ ದಿನ ರಾತ್ರಿ ನಡೆದಿದೆ. ಮೃತಪಟ್ಟ ವ್ಯಕ್ತಿಯನ್ನು ಕೋಳ್ಯೂರಿನ ಸಂಪತ್(26) ಎಂದು ಗುರುತಿಸಲಾಗಿದೆ.     ಸ್ನೇಹಿತರ ಜೊತೆ ಮಾತನಾಡುತ್ತಿದ್ದ ಸಂದರ್ಭದಲ್ಲಿ ಪೊಲೀಸರ ವಾಹನವನ್ನು ಗಮನಿಸಿದ ಈತ ಅಲ್ಲಿಂದ ಪರಾರಿಯಾಗಿದ್ದು, ಸ್ವಲ್ಪ ಸಮಯ ಕಳೆದು ಜೊತೆಗಿದ್ದ ಸ್ನೇಹಿತರು ಹುಡುಕಾಡಿದಾಗ ಸಂಪತ್ ನಾಪತ್ತೆಯಾಗಿದ್ದನು. ನಾಪತ್ತೆಯಾದ ಕುರಿತು ಮಂಜೇಶ್ವರ ಠಾಣಾ ಪೊಲೀಸರಿಗೆ ದೂರು

ಕಾಸರಗೋಡು: ಪೊಲೀಸರನ್ನು ಕಂಡು ಹೆದರಿ ಓಡಿದ ಯುವಕ ➤ ಬಾವಿಗೆ ಬಿದ್ದು ಮೃತ್ಯು Read More »

ಕರ್ನಾಟಕ, ಕ್ರೈಮ್ ನ್ಯೂಸ್

ಉಡುಪಿ: ಕುಂದಗನ್ನಡ ಸಾಹಿತ್ಯಲೋಕ ಬ್ರಹ್ಮ ಅಶೋಕ್ ನೀಲಾವರ ನಿಧನ

(ನ್ಯೂಸ್ ಕಡಬ) newskadaba.com ಉಡುಪಿ ನ. 24: ಕುಂದಗನ್ನಡ ಸಾಹಿತ್ಯಲೋಕ ಬ್ರಹ್ಮ ಅಶೋಕ್ ನೀಲಾವರ ನಿಧನರಾಗಿದ್ದಾರೆ. ಅರೆಭಾಷೆ ಕುಂದಾಪುರದ ಇತಿಹಾಸದಲ್ಲೇ ಪ್ರಪ್ರಥಮ ಬಾರಿಗೆ ಪಣ್ಕ್ ಮಕ್ಕಳ್ ಆಲ್ಬಮ್ ಸಾಂಗ್ ಮೂಲಕ ಹೊಸ ಅಧ್ಯಾಯ ಬರೆದಿದ್ದರು. ಸಂಗೀತ ನಿರ್ದೇಶಕ ರವಿ ಬಸ್ರೂರ್ ಗರಡಿಯಲ್ಲಿ ಹಲವು ಕುಂದಗನ್ನಡದ ಸಾಹಿತ್ಯ ಉಣಬಡಿಸಿದ ಒಬ್ಬ ಅದ್ಭುತ ಬರಹಗಾರರಾಗಿದ್ದರು.     ನಂತರ ಕನ್ನಡದ ಕಮರ್ಷಿಯಲ್ ಸಿನಿಮಾಗಳತ್ತ ಮುಖಮಾಡಿದ ಅಶೋಕ್ ನೀಲಾವರ, ನಿರ್ಮಾಪಕ ಪಿ. ಆರ್. ಅಮೀನ್ ನಿರ್ಮಾಣದ ಕತ್ತಲೆ ಕೋಣೆ ಕನ್ನಡ ಚಿತ್ರಕ್ಕೆ ಎರಡು

ಉಡುಪಿ: ಕುಂದಗನ್ನಡ ಸಾಹಿತ್ಯಲೋಕ ಬ್ರಹ್ಮ ಅಶೋಕ್ ನೀಲಾವರ ನಿಧನ Read More »

ಕರಾವಳಿ

ಕಾಪು: ಕಾರು ಢಿಕ್ಕಿ ಪಾದಚಾರಿ ಸ್ಥಳದಲ್ಲೇ ಮೃತ್ಯು

(ನ್ಯೂಸ್ ಕಡಬ) newskadaba.com ಕಾಪು ನ. 24: ಉಚ್ಚಿಲ ಪೇಟೆಯಲ್ಲಿ ಪಾದಚಾರಿಯೋರ್ವರಿಗೆ ಕಾರು ಢಿಕ್ಕಿ ಹೊಡೆದು ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟ ಘಟನೆ ನಡೆದಿದೆ. ಮೃತಪಟ್ಟ ವ್ಯಕ್ತಿಯನ್ನು ಸುಧಾಕರ ಶೆಟ್ಟಿ ಎಂದು ಗುರುತಿಸಲಾಗಿದೆ.   ರಾಷ್ಟ್ರೀಯ ಹೆದ್ದಾರಿಯಲ್ಲಿ ಕುಂದಾಪುರದಿಂದ ಮಂಗಳೂರಿಗೆ ಚಲಿಸುತ್ತಿದ್ದ ಕಾರು, ನರ್ಸರಿಯಲ್ಲಿ ಸಸಿ ಖರೀದಿಸಿ ರಾಷ್ಟ್ರೀಯ ಹೆದ್ದಾರಿ 66 ರ ಪಕ್ಕದಲ್ಲಿ ಉಚ್ಚಿಲ ಪೇಟೆಯತ್ತ ಹೋಗುತ್ತಿದ್ದ ಪಾದಚಾರಿಯೋರ್ವರಿಗೆ ಢಿಕ್ಕಿ ಹೊಡೆದಿದೆ. ಅಪಘಾತದಲ್ಲಿ ಗಂಭಿರವಾಗಿ ಗಾಯಗೊಂಡು ಮೃತಪಟ್ಟ ವ್ಯಕ್ತಿಯನ್ನು ಸ್ಥಳೀಯರ ಸಹಕಾರದಿಂದ ಆಂಬ್ಯುಲೆನ್ಸ್ ಮೂಲಕ ಉಡುಪಿ ಆಸ್ಪತ್ರೆಗೆ

ಕಾಪು: ಕಾರು ಢಿಕ್ಕಿ ಪಾದಚಾರಿ ಸ್ಥಳದಲ್ಲೇ ಮೃತ್ಯು Read More »

ಕರಾವಳಿ

ಪುತ್ತೂರು: ಪೊಲೀಸ್ ಠಾಣೆಯ ಬಳಿಯಿಟ್ಟ ದ್ವಿಚಕ್ರ ವಾಹನ ಕಳವು

(ನ್ಯೂಸ್ ಕಡಬ) newskadaba.com ಪುತ್ತೂರು ನ. 24: ಕಳೆದ ದಿನ ರಾತ್ರಿ ಮಹಿಳಾ ಪೊಲೀಸ್ ಠಾಣೆಯ ಬಳಿ ಶಿವಕೃಪಾ ಸ್ಟೋರ್ ಎದುರು ನಿಲ್ಲಿಸಲಾಗಿದ್ದ ದ್ವಿಚಕ್ರ ವಾಹನವೊಂದು ಕಳವಾದ ಬಗ್ಗೆ ವರದಿಯಾಗಿದೆ.     ಪುತ್ತೂರು ಪತ್ರಕರ್ತರ ಸಂಘದ ಸದಸ್ಯ ಅನೀಶ್ ಮರೀಲ್ ಎಂಬವರು ಪೊಲೀಸ್ ಠಾಣೆಯ ಬಳಿ ತನ್ನ ಹಿರೋ ಫ್ಲಜರ್ ಸ್ಕೂಟರ್ ನಿಲ್ಲಿಸಿದ್ದರು. ವಾಹನ ನಿಲ್ಲಿಸಿದ ಸ್ಥಳಕ್ಕೆ ಬಂದು ನೋಡಿದಾಗ ವಾಹನ ಕಳವಾಗಿರುವುದು ಬೆಳಕಿಗೆ ಬಂದಿದೆ. ಘಟನೆಯ ಕುರಿತು ಪೊಲೀಸರಿಗೆ ದೂರು ನೀಡಿದ್ದಾರೆ.    

ಪುತ್ತೂರು: ಪೊಲೀಸ್ ಠಾಣೆಯ ಬಳಿಯಿಟ್ಟ ದ್ವಿಚಕ್ರ ವಾಹನ ಕಳವು Read More »

ಕರಾವಳಿ

ಉಡುಪಿ: ಏಕಾಏಕಿ ಮೇಲಿಂದ ಬಿದ್ದ ಫ್ಯಾನ್ ➤ ಅಪಾಯದಿಂದ ಪಾರಾದ ಅಂಗಡಿ ಮಾಲಿಕ

(ನ್ಯೂಸ್ ಕಡಬ) newskadaba.com ಉಡುಪಿ ನ. 24: ಉಡುಪಿ ಜಿಲ್ಲೆಯಲ್ಲಿ ಏಕಾಏಕಿ ಮೇಲಿನಿಂದ ಫ್ಯಾನ್ ಬೀಳುತ್ತಿದ್ದಂತೆ ಅಂಗಡಿ ಮಾಲಿಕ ಅಪಾಯದಿಂದ ಪಾರಾದ ಘಟನೆ ನಡೆದಿದೆ.     ಘಟನೆಯಿಂದ ಪಾರಾದ ವ್ಯಕ್ತಿಯನ್ನು ಸತೀಶ್ ಎಂದು ಗುರುತಿಸಲಾಗಿದೆ. ಎಂದಿನಂತೆ ತರಕಾರಿ ಮಾರಾಟದ ಲೆಕ್ಕಾಚಾರ ಬರೆಯುತ್ತಿದ್ದ ಸತೀಶನ ತಲೆ ಮೇಲೆ ತಿರುಗುತ್ತಿದ್ದ ಸೀಲಿಂಗ್ ಫ್ಯಾನ್ ಬೀಳುತ್ತಿದ್ದಂತೆ ಕ್ಷಣಾರ್ಧದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇನ್ನು ಫ್ಯಾನ್ ಮೇಲಿಂದ ಬೀಳುತ್ತಿರುವ ದೃಶ್ಯವಾಳಿ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.    

ಉಡುಪಿ: ಏಕಾಏಕಿ ಮೇಲಿಂದ ಬಿದ್ದ ಫ್ಯಾನ್ ➤ ಅಪಾಯದಿಂದ ಪಾರಾದ ಅಂಗಡಿ ಮಾಲಿಕ Read More »

ಕರಾವಳಿ

ನ.25ರಂದು ಡಾ. ಡಿ. ವೀರೇಂದ್ರ ಹೆಗ್ಗಡೆಯವರ 73ನೇ ಜನ್ಮ ದಿನದ ಸಂಭ್ರಮ

(ನ್ಯೂಸ್ ಕಡಬ) newskadaba.com ಧರ್ಮಸ್ಥಳ ನ. 24: ಧರ್ಮ ಸಮನ್ವಯತೆಯ ನೆಲೆವೀಡು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರ 73ನೇ ಹುಟ್ಟುಹಬ್ಬ ನವೆಂಬರ್ 25ರಂದು ಶ್ರೀ ಕ್ಷೇತ್ರದಲ್ಲಿ ಕೊರೊನಾ ಹಿನ್ನಲೆಯಲ್ಲಿ ಸರಕಾರದ ಮಾರ್ಗಸೂಚಿಯಂತೆ ಸರಳವಾಗಿ ನಡೆಯಲಿದೆ.   ಧರ್ಮಾಧಿಕಾರಿ ಡಾ. ಹೆಗ್ಗಡೆಯವರ ಕುಟುಂಬಸ್ಥರು, ಬಂಧುಗಳು, ಆಪ್ತರು, ಅಭಿಮಾನಿಗಳು, ಭಕ್ತರು ಗೌರವ ನಮನ ಸಲ್ಲಿಸುವರು. ಕೀರ್ತಿಶೇಷ ಹಿಂದಿನ ಧರ್ಮಾಧಿಕಾರಿಯಾಗಿದ್ದ ರತ್ನವರ್ಮ ಹೆಗ್ಗಡೆ, ರತ್ನಮ್ಮ ದಂಪತಿಯ ಜೇಷ್ಠ ಪುತ್ರರಾಗಿರುವ ಡಾ.ಹೆಗ್ಗಡೆಯವರು 1948ರ ನವೆಂಬರ್‌ 25ರಂದು ಜನಿಸಿದ ಅವರು, 1968ರ ಅಕ್ಟೋಬರ್‌

ನ.25ರಂದು ಡಾ. ಡಿ. ವೀರೇಂದ್ರ ಹೆಗ್ಗಡೆಯವರ 73ನೇ ಜನ್ಮ ದಿನದ ಸಂಭ್ರಮ Read More »

ಕರಾವಳಿ, ಕರ್ನಾಟಕ

ಕಡಬ ಮತ್ತು ಪುತ್ತೂರು ತಾಲೂಕಿನಲ್ಲಿ ಇಂದು 3 ಮಂದಿಯಲ್ಲಿ ಕೋವಿಡ್ ದೃಢ

(ನ್ಯೂಸ್ ಕಡಬ) newskadaba.com ಕಡಬ ನ. 24: ಕಡಬ ಮತ್ತು ಪುತ್ತೂರು ತಾಲೂಕಿನಲ್ಲಿ ಆರೋಗ್ಯ ಇಲಾಖೆಯ ವರದಿಯಂತೆ ಇಂದು 3 ಮಂದಿಯಲ್ಲಿ ಕೋವಿಡ್ ದೃಢಪಟ್ಟಿದೆ.     ಕಡಬ ತಾಲೂಕಿನ ಕಾಣಿಯೂರು ಗ್ರಾಮದ 20 ವರ್ಷದ ಯುವಕನಲ್ಲಿ ಕೊರೋನಾ ಪತ್ತೆಯಾಗಿದೆ. ಇನ್ನು ಪುತ್ತೂರು ತಾಲೂಕಿನ ಪುತ್ತೂರು ಕಸಬದ 42 ವರ್ಷದ ಮಹಿಳೆ ಮತ್ತು ಕುಂಬ್ರದ 81 ವರ್ಷದ ವ್ಯಕ್ತಿಯಲ್ಲಿ ಕೊರೋನಾ ದೃಢಪಟ್ಟಿದೆ.  

ಕಡಬ ಮತ್ತು ಪುತ್ತೂರು ತಾಲೂಕಿನಲ್ಲಿ ಇಂದು 3 ಮಂದಿಯಲ್ಲಿ ಕೋವಿಡ್ ದೃಢ Read More »

ಕರಾವಳಿ

ಕಡಬ ತಾಲೂಕು ಕಛೇರಿ ಎದುರು ಕಸ್ತೂರಿ ರಂಗನ್ ವರದಿ ಅನುಷ್ಠಾನದ ವಿರುದ್ದ ಬೃಹತ್ ಪ್ರತಿಭಟನೆ

(ನ್ಯೂಸ್ ಕಡಬ) newskadaba.com ಕಡಬ ನ. 24: ಕಡಬದಲ್ಲಿ ಮಲೆನಾಡು ಜನಹಿತ ರಕ್ಷಣಾ ವೇದಿಕೆ ನೇತೃತ್ವದಲ್ಲಿ ಕಸ್ತೂರಿ ರಂಗನ್ ವರದಿ ಅನುಷ್ಠಾನದ ವಿರುದ್ದ ಬೃಹತ್ ಪ್ರತಿಭಟನೆ ನಡೆಯುತ್ತಿದೆ. ಮಲೆನಾಡು ಜನಹಿತ ರಕ್ಷಣಾ ವೇದಿಕೆ ಸಂಚಾಲಕ ಕಿಶೋರ್ ಶಿರಾಡಿ, ಮಲೆನಾಡು ಹಿತರಕ್ಷಣಾ ವೇದಿಕೆಯ ಪ್ರಮುಖರಾದ ಹಾಜಿ ಸೈಯದ್ ಮೀರಾ ಸಾಹೇಬ್  ಸೇರಿದಂತೆ ಆನೇಕ ಗಣ್ಯರು ಪ್ರತಿಭಟನಾಗಾರರು ಪಾಲ್ಗೊಂಡಿದ್ದಾರೆ ಕಡಬ ತಾಲೂಕು ಕಛೇರಿ ಎದುರು ಕಸ್ತೂರಿ ರಂಗನ್ ವರದಿ ಅನುಷ್ಠಾನದ ವಿರುದ್ದ ಬೃಹತ್ ಪ್ರತಿಭಟನೆ ನಡೆಯುತ್ತಿದೆ.   ಮಲೆನಾಡು ಜನಹಿತ ರಕ್ಷಣಾ

ಕಡಬ ತಾಲೂಕು ಕಛೇರಿ ಎದುರು ಕಸ್ತೂರಿ ರಂಗನ್ ವರದಿ ಅನುಷ್ಠಾನದ ವಿರುದ್ದ ಬೃಹತ್ ಪ್ರತಿಭಟನೆ Read More »

ಕರಾವಳಿ
Scroll to Top