newskadaba

ಸಂಜನಾ ಜಾಮೀನು ಅರ್ಜಿ ವಿಚಾರಣೆ ಪೂರ್ಣ ➤ ಡಿಸೆಂಬರ್​ 7ಕ್ಕೆ ತೀರ್ಪು

(ನ್ಯೂಸ್ ಕಡಬ) newskadaba.com ಬೆಂಗಳೂರು, ಡಿ. 05: ಸ್ಯಾಂಡಲ್​ವುಡ್​ ಡ್ರಗ್ಸ್ ಪ್ರಕರಣದಲ್ಲಿ ಸಿಲುಕಿ ಜೈಲುಪಾಲಾಗಿರುವ ನಟಿ ಸಂಜನಾ ಗಲ್ರಾನಿ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಪೂರ್ಣಗೊಳಿಸಿರುವ ಹೈಕೋರ್ಟ್ ತೀರ್ಪನ್ನು ಡಿಸೆಂಬರ್​ 7ಕ್ಕೆ ಕಾಯ್ದಿರಿಸಿದೆ. ನ್ಯಾಯಮೂರ್ತಿ ಶ್ರೀನಿವಾಸ್ ಹರೀಶ್ ಕುಮಾರ್ ಅವರಿದ್ದ ಪೀಠ ಸಂಜನಾ ಅವರ ಜಾಮೀನು ಅರ್ಜಿಯ ವಿಚಾರಣೆ ನಡೆಸಿತು. ಆರೋಪಿ ನಟಿ ಪರ ಹಿರಿಯ ವಕೀಲ ಹಸ್ಮತ್ ಪಾಷಾ ವಾದ ಮಂಡಿಸಿ, ಸಂಜನಾಗೆ ಅನಾರೋಗ್ಯ ಸಮಸ್ಯೆ ಇದೆ. ಅವರು ಇದಕ್ಕಾಗಿ 2018ರಲ್ಲಿ ಮಣಿಪಾಲ್ ಆಸ್ಪತ್ರೆಯಲ್ಲಿ ಸರ್ಜರಿಗೆ […]

ಸಂಜನಾ ಜಾಮೀನು ಅರ್ಜಿ ವಿಚಾರಣೆ ಪೂರ್ಣ ➤ ಡಿಸೆಂಬರ್​ 7ಕ್ಕೆ ತೀರ್ಪು Read More »

ಕರಾವಳಿ

ಕಾಸರಗೋಡು: ಅಕ್ರಮ ಗಾಂಜಾ ಸಾಗಾಟ ➤ ಇಬ್ಬರು ಆರೋಪಿಗಳು ಖಾಕಿ ಬಲೆಗೆ

(ನ್ಯೂಸ್ ಕಡಬ) newskadaba.com ಕಾಸರಗೋಡು, ಡಿ. 05: ಅಕ್ರಮ ಗಾಂಜಾ ಹಾಗೂ ಮಾದಕ ದ್ರವ್ಯ ಸಾಗಾಟ ಮಾಡುತ್ತಿದ್ದ ಕುಂಬಳೆ ನಿವಾಸಿಗಳಿಬ್ಬರನ್ನು ಕೋಜಿಕ್ಕೋಡ್ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತ ಆರೋಪಿಗಳನ್ನು ಕುಂಬಳೆಯ ಅಹಮ್ಮದ್ ಜಲಾಮುದ್ದೀನ್ (19) ಮತ್ತು ಬಿ.ಎಂ. ಉಮ್ಮರ್ (27) ಎಂದು  ಗುರುತಿಸಲಾಗಿದೆ.     ವಾಹನ ತಪಾಸಣೆ ನಡೆಸುತ್ತಿದ್ದಾಗ ಬಂದ ಸ್ಕೂಟರ್ ನ್ನು ತಡೆದು ನಿಲ್ಲಿಸಿ ತಪಾಸಣೆ ನಡೆಸಿದಾಗ ಬ್ಯಾಗ್ ನಲ್ಲಿ ಗಾಂಜಾ ಹಾಗೂ ಮಾದಕ ದ್ರವ್ಯ ಪತ್ತೆಯಾಗಿದ್ದು, ಆರೋಪಿಗಳ ಬಳಿಯಿಂದ ಏಳು ಕಿಲೋ ಗಾಂಜಾ ಹಾಗೂ

ಕಾಸರಗೋಡು: ಅಕ್ರಮ ಗಾಂಜಾ ಸಾಗಾಟ ➤ ಇಬ್ಬರು ಆರೋಪಿಗಳು ಖಾಕಿ ಬಲೆಗೆ Read More »

ಕರ್ನಾಟಕ

ಮಂಗಳೂರು: ರಸ್ತೆ ದಾಟುತ್ತಿದ್ದ ಸಂದರ್ಭ ಕಾರು ಅಪಘಾತ ➤ ಗಾಯಗೊಂಡ ಬಾಲಕ ಮೃತ್ಯು

(ನ್ಯೂಸ್ ಕಡಬ) newskadaba.com ಮಂಗಳೂರು, ಡಿ. 05: ಡಿ.4ರ ಶುಕ್ರವಾರದಂದು ಸಂಜೆ ಐಯಾನ್‌‌ ತನ್ನ ಮನೆಯ ಮುಂದಿನ ರಸ್ತೆ ದಾಟುತ್ತಿದ್ದ ಸಂದರ್ಭ ತಲಪಾಡಿಯಿಂದ ಮಂಗಳೂರಿಗೆ ಹೋಗುತ್ತಿದ್ದ ರಿಟ್ಜ್‌‌ ಕಾರು ಡಿಕ್ಕಿ ಹೊಡೆದ ಪರಿಣಾಮ ಬಾಲಕ ಗಂಭೀರ ಗಾಯಗೊಂಡಿದ್ದು, ಬಳಿಕ ರಸ್ತೆ ಬದಿಯಲ್ಲಿದ್ದ ವಿದ್ಯುತ್‌ ಕಂಬಕ್ಕೆ ಢಿಕ್ಕಿ ಹೊಡೆದಿತ್ತು. ಇದೀಗ ಗಾಯಗೊಂಡಿದ್ದ ಬಾಲಕ ಇಂದು ನಗರದ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಮೃತಪಟ್ಟ ವ್ಯಕ್ತಿಯನ್ನು ನಗರದ ಖಾಸಗಿ ಕಾಲೇಜಿನ ವಿದ್ಯಾರ್ಥಿಯಾಗಿದ್ದ ಬಶೀರ್ ಅಹ್ಮದ್ ಹಾಗೂ ರಿಯಾನ್ ದಂಪತಿಗಳ ಹಿರಿಯ ಪುತ್ರ ಐಯಾನ್(16)

ಮಂಗಳೂರು: ರಸ್ತೆ ದಾಟುತ್ತಿದ್ದ ಸಂದರ್ಭ ಕಾರು ಅಪಘಾತ ➤ ಗಾಯಗೊಂಡ ಬಾಲಕ ಮೃತ್ಯು Read More »

ಕರಾವಳಿ

ಚಾರ್ಮಡಿ ಘಾಟ್ ನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಪ್ರಪಾತಕ್ಕೆ ಉರುಳಿದ ಕಾರು ➤ ಕಂದಕದಲ್ಲಿ ಸಿಲುಕಿಕೊಂಡ ಐವರು.!

(ನ್ಯೂಸ್ ಕಡಬ) newskadaba.com ಚಿಕ್ಕಮಗಳೂರು, ಡಿ. 05: ಚಾಲಕನ ನಿಯಂತ್ರಣ ತಪ್ಪಿ ಧರ್ಮಸ್ಥಳಕ್ಕೆ ತೆರಳುತ್ತಿದ್ದ ಕಾರೊಂದು 150 ಅಡಿ ಆಳದ ಪ್ರಪಾತಕ್ಕೆ ಉರುಳಿ ಬಿದ್ದಿರುವ ಘಟನೆ ಚಾರ್ಮಾಡಿ ಘಾಟ್‍ನ ಬಿದರತಳದಲ್ಲಿ ನಡೆದಿದೆ.     ಕಾರಿನಲ್ಲಿದ್ದ ಐವರು ಕಂದಕದಲ್ಲಿ ಸಿಲುಕಿದ್ದು, ಮೂವರು ಗಾಯಗೊಂಡಿದ್ದಾರೆ. ಇವರನ್ನು ಸ್ಥಳೀಯರ ಸಹಾಯದಿಂದ ರಕ್ಷಣೆ ಮಾಡಲಾಗಿದ್ದು, ಅಪಘಾತದಲ್ಲಿ ಗಾಯಗೊಂಡವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನು ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.  

ಚಾರ್ಮಡಿ ಘಾಟ್ ನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಪ್ರಪಾತಕ್ಕೆ ಉರುಳಿದ ಕಾರು ➤ ಕಂದಕದಲ್ಲಿ ಸಿಲುಕಿಕೊಂಡ ಐವರು.! Read More »

ಕರ್ನಾಟಕ

ಪುತ್ತೂರು: ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಅನುರಾಧ ಮುತ್ತಪ್ಪ ರೈ ಭೇಟಿ

(ನ್ಯೂಸ್ ಕಡಬ) newskadaba.com ಪುತ್ತೂರು, ಡಿ. 05: ಜಯಕರ್ನಾಟಕ ಸಂಘಟನೆಯ ಸ್ಥಾಪಕಾಧ್ಯಕ್ಷ ದಿ. ಮುತ್ತಪ್ಪ ರೈ ರವರ ಪತ್ನಿ ಅನುರಾಧ ಮುತ್ತಪ್ಪ ರೈ ರವರು ಇಂದು ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ಬಳಿಕ ಕುಕ್ಕೆ ಸುಬ್ರಹ್ಮಣ್ಯ ಹಾಗೂ ಕೆಯ್ಯೂರು ಮಹಿಷಮರ್ದಿನಿ ದುರ್ಗಾಪರಮೇಶ್ವರಿ ದೇವಸಾನಕ್ಕೆ ಭೇಟಿ ನೀಡಿದರು.  

ಪುತ್ತೂರು: ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಅನುರಾಧ ಮುತ್ತಪ್ಪ ರೈ ಭೇಟಿ Read More »

ಕರಾವಳಿ

ಮಂಗಳೂರು: ಟೆಸ್ಟ್ ಡ್ರೈವ್ ಗೆ ಕೊಂಡು ಹೋದ ಬೈಕ್‌ನೊಂದಿಗೆ ವ್ಯಕ್ತಿ ಪರಾರಿ

(ನ್ಯೂಸ್ ಕಡಬ) newskadaba.com ಮಂಗಳೂರು, ಡಿ. 05: ಬೈಕ್ ಖರೀದಿಗೆ ಬಂದು ಟೆಸ್ಟ್ ಡ್ರೈವ್ ಮಾಡುವುದಾಗಿ ಬೈಕ್‌ನೊಂದಿಗೆ ತೆರಳಿದಾತ ಬೈಕ್ ನೊಂದಿಗೆ ಪರಾರಿಯಾಗಿರುವ ಘಟನೆ ಇದೀಗಾ ಮಂಗಳೂರಿನಲ್ಲಿ ನಡೆದಿದೆ. ಈ ಹಿಂದೆ ಇಂತಹ ಪ್ರಕರಣ ಉಡುಪಿಯಲ್ಲಿ ನಡೆದಿತ್ತು. ಅಳಕೆಯಲ್ಲಿರುವ ಕನ್ಸಲ್ಟೆಂಟ್ಸ್ ಸಂಸ್ಥೆಯೊಂದರ ಹಳೆ ದ್ವಿಚಕ್ರ ವಾಹನ ಮಾರಾಟ ಮಳಿಗೆಗೆ ಬಂದಿದ್ದ ಅಪರಿಚಿತನೋರ್ವ ಬೈಕ್‌ನೊಂದಿಗೆ ಪರಾರಿಯಾಗಿದ್ದಾನೆ‌ ಎನ್ನಲಾಗಿದೆ. ಕನ್ಸಲ್ಟೆಂಟ್ಸ್ ಸಂಸ್ಥೆಯ ಗೋಡೌನ್ ಭೋಜರಾವ್ ಲೇನ್‌ನಲ್ಲಿದ್ದು, ಅಲ್ಲಿ ಗುರು ಪ್ರಸಾದ್ ಎಂಬ ಮೆಕ್ಯಾನಿಕ್ ಕೆಲಸ ನಿರ್ವಹಿಸುತ್ತಿದ್ದರು.ಇಲ್ಲಿಗೆ ಬಂದ ಅಪರಿಚಿತನೋರ್ವ ಬೈಕ್ ಖರೀದಿಸುವುದಾಗಿ

ಮಂಗಳೂರು: ಟೆಸ್ಟ್ ಡ್ರೈವ್ ಗೆ ಕೊಂಡು ಹೋದ ಬೈಕ್‌ನೊಂದಿಗೆ ವ್ಯಕ್ತಿ ಪರಾರಿ Read More »

ಕರಾವಳಿ

ಸುಳ್ಯ: ಕೃಷಿ ಇಲಾಖೆಯಲ್ಲಿ ವಿಶ್ವ ಮಣ್ಣು ಆರೋಗ್ಯ ದಿನಾಚರಣೆ

(ನ್ಯೂಸ್ ಕಡಬ) newskadaba.com ಸುಳ್ಯ, ಡಿ. 05: ಸುಳ್ಯದ ಕೃಷಿ ಇಲಾಖಾ ಕಛೇರಿಯಲ್ಲಿ ಇಂದು ದ.ಕ ಜಿ.ಪಂ ಕೃಷಿ ಇಲಾಖೆಯ ವತಿಯಿಂದ ವಿಶ್ವ ಮಣ್ಣು ಆರೋಗ್ಯ ದಿನಾಚರಣೆಯ ಕಾರ್ಯಕ್ರಮ ಜರುಗಿತು.     ವಿಶ್ವ ಮಣ್ಣು ದಿನಾಚರಣೆಯ ಕುರಿತು ರೈತರಿಗೆ ಸುಳ್ಯ ಕೃಷಿ ಇಲಾಕೆಯ ತಾಂತ್ರಿಕ ಕೃಷಿ ಅಧಿಕಾರಿ ಮೋಹನ ನಂಗಾರು ಅವರು ಮಾಹಿತಿ ನೀಡಿದರು. ಕಾರ್ಯಕ್ರಮದ ವೇದಿಕೆಯಲ್ಲಿ ಆತ್ಮ ಯೋಜನೆಯ ಅಧಿಕಾರಿ ಪ್ರಶಾಂತ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ತಾಲೂಕಿನ ಹಲವು ಕೃಷಿಕರು ಉಪಸ್ಥಿತರಿದ್ದು, ಮಾಹಿತಿ ಪಡೆದುಕೊಂಡರು.

ಸುಳ್ಯ: ಕೃಷಿ ಇಲಾಖೆಯಲ್ಲಿ ವಿಶ್ವ ಮಣ್ಣು ಆರೋಗ್ಯ ದಿನಾಚರಣೆ Read More »

ಕರಾವಳಿ

ಕಡಬ ಮತ್ತು ಪುತ್ತೂರು ತಾಲೂಕಿನಲ್ಲಿ ಇಂದು 5 ಮಂದಿಯಲ್ಲಿ ಕೋವಿಡ್ ದೃಢ

(ನ್ಯೂಸ್ ಕಡಬ) newskadaba.com ಕಡಬ, ಡಿ. 05: ಕಡಬ ಮತ್ತು ಪುತ್ತೂರು ತಾಲುಕಿನಲ್ಲಿ ಇಂದು ಆರೋಗ್ಯ ಇಲಾಖೆಯ ವರದಿಯಂತೆ ಇಂದು 5 ಮಂದಿಯಲ್ಲಿಕೋವಿಡ್ ಪತ್ತೆಯಾಗಿದೆ.     ಕಡಬ ತಾಲೂಕಿನ ಕೌಕ್ರಾಡಿ ನಿವಾಸಿ 21 ವರ್ಷದ ಯುವತಿ, ಕೊಂಬಾರು ನಿವಾಸಿ 60 ವರ್ಷದ ಮಹಿಳೆ, 23 ವರ್ಷದ ಯುವತಿಯಲ್ಲಿ ಕೊರೋನಾ ಸೋಂಕು ಪತ್ತೆಯಾಗಿದೆ. ಇನ್ನು ಪುತ್ತೂರು ತಾಲುಕಿನಲ್ಲಿ ಕಬಕ ನಿವಾಸಿ 21 ವರ್ಷದ ಯುವಕ, ಬಜತ್ತೂರು ನಿವಾಸಿ 19 ವರ್ಷದ ಯುವಕ ನಲ್ಲಿ ಕೊರೋನಾ ಸೋಂಕು ಪತ್ತೆಯಾಗಿದೆ.  

ಕಡಬ ಮತ್ತು ಪುತ್ತೂರು ತಾಲೂಕಿನಲ್ಲಿ ಇಂದು 5 ಮಂದಿಯಲ್ಲಿ ಕೋವಿಡ್ ದೃಢ Read More »

ಕರಾವಳಿ

ಮಂಗಳೂರು: ಜಿಪಿಎಸ್ ಅಳವಡಿಸದ ಸಿಟಿ ಬಸ್‌ ಪರವಾನಿಗೆ ರದ್ದು ಜಿಲ್ಲಾಧಿಕಾರಿ ➤ ಡಾ.ಕೆ.ವಿ. ರಾಜೇಂದ್ರ ಎಚ್ಚರಿಕೆ

(ನ್ಯೂಸ್ ಕಡಬ) newskadaba.com ಮಂಗಳೂರು, ಡಿ. 05: ಜಿಪಿಎಸ್ ಅಳವಡಿಸದಿರುವ ಸಿಟಿ ಬಸ್‌ಗಳ ಪರವಾನಿಗೆ ರದ್ದುಗೊಳಿಸಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ಕೆ.ವಿ. ರಾಜೇಂದ್ರ ಬಸ್ ಮಾಲಕರಿಗೆ ಎಚ್ಚರಿಕೆ ನೀಡಿದ್ದಾರೆ. ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಸಾರಿಗೆ ಪ್ರಾಧಿಕಾರಿಗಳ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು. ಪ್ರಯಾಣಿಕರ ಸುರಕ್ಷತೆ ದೃಷ್ಟಿಯಲ್ಲಿ ಸಿಟಿ ಬಸ್‌ಗಳಲ್ಲಿ ಜಿಪಿಎಸ್ ಅಳವಡಿಕೆ ಕಡ್ಡಾಯ. ಮುಂದಿನ 15 ದಿನಗಳೊಳಗಾಗಿ ಜಿಪಿಎಸ್ ಅಳವಡಿಸದಿದ್ದ ಪಕ್ಷದಲ್ಲಿ ಅಂತಹ ಬಸ್‌ಗಳನ್ನು ಗುರುತಿಸಿ, ಪರವಾನಿಗೆ ರದ್ದುಗೊಳಿಸುವ ಜೊತೆಗೆ ನಿರ್ದಾಕ್ಷಿಣ್ಯ ಕ್ರಮ ಜರುಗಿಸಲಾಗುವುದು ಎಂದರು.ಮಂಗಳೂರು ನಗರ ವ್ಯಾಪ್ತಿಯಲ್ಲಿ

ಮಂಗಳೂರು: ಜಿಪಿಎಸ್ ಅಳವಡಿಸದ ಸಿಟಿ ಬಸ್‌ ಪರವಾನಿಗೆ ರದ್ದು ಜಿಲ್ಲಾಧಿಕಾರಿ ➤ ಡಾ.ಕೆ.ವಿ. ರಾಜೇಂದ್ರ ಎಚ್ಚರಿಕೆ Read More »

ಕರಾವಳಿ

ಸೋಲಾರ್ ಶಕ್ತಿಯಿಂದ ಮನೆಬಳಕೆಯ ನೀರಿನ ಪಂಪ್ ಚಾಲನೆ ➤ ನೂಜಿಬಾಳ್ತಿಲದ ಯುವಕನ ಸಾಧನೆ 

(ನ್ಯೂಸ್ ಕಡಬ) newskadaba.com ಕಲ್ಲುಗುಡ್ಡೆ , ಡಿ. 05: ಬೇಸಿಗೆ ಕಾಲ ಬಂತೆಂದರೆ ದಿನಂಪ್ರತಿ ವಿದ್ಯುತ್ ಕಡಿತಗೊಂಡು ವಿವಿಧ ರೀತಿಯಲ್ಲಿ ತೊಂದರೆಗಳನ್ನು ಅನುಭವಿಸುತ್ತಿರುವ ಗ್ರಾಮೀಣ ಭಾಗದವರು, ಸಂಕಷ್ಟಪಡುತ್ತಿರುತ್ತಾರೆ. ಆದರೆ ಯುವಕನೊಬ್ಬ ಕಡಿಮೆ ವೆಚ್ಚದಲ್ಲಿ ಸೌರಶಕ್ತಿ ಬಳಸಿ ಮನೆಬಳಕೆಗೆ ಕೆರೆ, ಬಾವಿಯಿಂದ ನೀರೆತ್ತುವ ಪಂಪ್ ಚಾಲನೆಗೊಳ್ಳುವ ಪ್ರಯೋಗದಲ್ಲಿ ಯಶಸ್ವಿಯಾಗಿದ್ದಾರೆ. ಕಡಬ ತಾಲೂಕಿನ ನೂಜಿಬಾಳ್ತಿಲ ಗ್ರಾಮದ ಮಲ್ಯೋಡಿ ನಿವೃತ್ತ ಪೋಸ್ಟ್‍ಮೆನ್ ತೋಮಸ್ ಕೆ.ಟಿ. ಹಾಗೂ ಸೋಸಮ್ಮ ದಂಪತಿಗಳ ಪುತ್ರ ಅಂಡ್ರೋಸ್ ಪಿ.ಟಿ. ಎಂಬವರು ಮನೆ ಬಳಕೆಗೆ ಕಡಿಮೆ ವೆಚ್ಚದಲ್ಲಿ ಸೋಲಾರ್ ಶಕ್ತಿಯಿಂದ

ಸೋಲಾರ್ ಶಕ್ತಿಯಿಂದ ಮನೆಬಳಕೆಯ ನೀರಿನ ಪಂಪ್ ಚಾಲನೆ ➤ ನೂಜಿಬಾಳ್ತಿಲದ ಯುವಕನ ಸಾಧನೆ  Read More »

ಕರಾವಳಿ
Scroll to Top