newskadaba

ಉಡುಪಿ :ಸಿಡಿಲು ಬಡಿದು ವರ್ಕ್ ಫ್ರಂ ಹೋಮ್ ಉದ್ಯೋಗಿ ಮೃತ್ಯು

(ನ್ಯೂಸ್ ಕಡಬ) newskadaba.com ಉಡುಪಿ, ಡಿ.11: ಸಿಡಿಲು‌ ಬಡಿದು‌ ಯುವಕನೋರ್ವ ಸಾವನ್ನಪ್ಪಿದ ಘಟನೆ ವಂಡಾರಿನ ಬೋರ್ಡಕಲ್ಲಿನಲ್ಲಿ ಗುರುವಾರ ರಾತ್ರಿ ಸಂಭವಿಸಿದೆ. ಸ್ಥಳೀಯ ನಿವಾಸಿ‌ ಸಾಫ್ಟ್ ವೇರ್ ಇಂಜಿನಿಯರ್ ಚೇತನ್ (24) ಮೃತಪಟ್ಟ ಯುವಕ.   ಇವರು ಬೆಂಗಳೂರಿನ ಪ್ರತಿಷ್ಠಿತ ಸಾಫ್ಟ್‌ವೇರ್ ಕಂಪನಿಯ ಉದ್ಯೋಗಿಯಾಗಿದ್ದು ಕೊರೊನಾ ಸಮಸ್ಯೆಯ ಅನಂತರ ಹಲವು ತಿಂಗಳಿಂದ ಮನೆಯಲ್ಲೇ ಕಾರ್ಯನಿರ್ವಹಿಸುತ್ತಿದ್ದರು.ಮನೆಯೊಳಗಡೆ ಲ್ಯಾಪ್‌ಟಾಪ್ ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಸಂದರ್ಭ ಸಿಡಿಲಿನ‌ ಹೊಡೆತಕ್ಕೆ ಒಳಗಾಗಿ ಗಂಭೀರವಾಗಿ ಅಸ್ವಸ್ಥತಗೊಂಡಿದ್ದು ತಕ್ಷಣ ಅವರನ್ನು ಬ್ರಹ್ಮಾವರದ ಖಾಸಗಿ ಆಸ್ಪತ್ರೆ ಗೆ ಕರೆದೊಯ್ಯಲಾಯಿತು. […]

ಉಡುಪಿ :ಸಿಡಿಲು ಬಡಿದು ವರ್ಕ್ ಫ್ರಂ ಹೋಮ್ ಉದ್ಯೋಗಿ ಮೃತ್ಯು Read More »

ಕರಾವಳಿ

ಗೃಹರಕ್ಷಕರು ಚುನಾವಣಾ ಕರ್ತವ್ಯ ನಿರ್ವಹಿಸಿ- ಚೂಂತಾರು 

(ನ್ಯೂಸ್ ಕಡಬ) newskadaba.com ಮಂಗಳೂರು, ಡಿ.11: ಪ್ರತಿಯೊಬ್ಬ ಗೃಹರಕ್ಷಕರು ಚುನಾವಣಾ ಕರ್ತವ್ಯವನ್ನು ನಿರ್ವಹಿಸಬೇಕು ಮತ್ತು ಗುರುತಿನ ಚೀಟಿಯನ್ನು ಪಡೆಯದ ಗೃಹರಕ್ಷಕರು ಜಿಲ್ಲಾ ಗೃಹರಕ್ಷಕದಳ ಕಛೇರಿಗೆ ಬಂದು ಗುರುತಿನ ಚೀಟಿಯನ್ನು ಪಡೆದುಕೊಳ್ಳಬೇಕಾಗಿ ಜಿಲ್ಲಾ ಗೃಹರಕ್ಷಕ ದಳದ ಸಮಾದೇಷ್ಟರಾದ ಡಾ|| ಮುರಲೀ ಮೋಹನ್ ಚೂಂತಾರು ಸೂಚಿಸಿದರು. ಅವರು ಡಿಸೆಂಬರ್ 10 ರಂದು ಸುಳ್ಯ ಘಟಕಕ್ಕೆ ಭೇಟಿ ನೀಡಿ ಗ್ರಾಮ ಪಂಚಾಯತ್ ಚುನಾವಣಾ ಕರ್ತವ್ಯಕ್ಕೆ ಗೃಹರಕ್ಷಕರನ್ನು ನಿಯೋಜಿಸುವ ಬಗ್ಗೆ ಚರ್ಚಿಸಿದರು ಹಾಗೂ ಗೃಹರಕ್ಷಕರ ಕುಂದು ಕೊರತೆಗಳನ್ನು ಆಲಿಸಿದರು.ಸುಳ್ಯ ಘಟಕದ ಘಟಕಾಧಿಕಾರಿ ಜಯಂತ್

ಗೃಹರಕ್ಷಕರು ಚುನಾವಣಾ ಕರ್ತವ್ಯ ನಿರ್ವಹಿಸಿ- ಚೂಂತಾರು  Read More »

ಕರಾವಳಿ

ಮಗುವಿನ ಹಕ್ಕುಗಳ ಉಲ್ಲಂಘನೆಯಾದ್ದಲ್ಲಿ ಮಕ್ಕಳ ಸಹಾಯವಾಣಿ ➤1098 ಕರೆ ಮಾಡಿ- ಡಿ ಶಂಕರಪ್ಪ

(ನ್ಯೂಸ್ ಕಡಬ) newskadaba.com ಮಂಗಳೂರು, ಡಿ.11: ಪ್ರತಿಯೊಂದು ಮಗುವಿನ ಹಕ್ಕುಗಳ ಉಲ್ಲಂಘನೆಯಾಗಿದೆಂದು ತಿಳಿದಾಗ ಯಾವುದೇ ಹಿಂಜರಿಕೆಯನ್ನು ಮಾಡದೇ ಮಕ್ಕಳ ಸಹಾಯವಾಣಿ -1098 ತಕ್ಷಣ ಕರೆ ಮಾಡಿ ಮಾಹಿತಿ ನೀಡಿದರೆ ಮಗುವಿನ ಮೇಲಾಗುತ್ತಿರುವ ದೌರ್ಜನ್ಯವನ್ನು ತಡೆಗಟ್ಟಲು ಸಾಧ್ಯ ಎಂದು ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಡಿ ಶಂಕರಪ್ಪ ಹೇಳಿದರು. ಅವರು ಬುಧವಾರ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಬೆಂಗಳೂರು, ಯುನಿಸೆಫ್ ಹೈದರಬಾದ್, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಮಂಗಳೂರು, ಜಿಲ್ಲಾ

ಮಗುವಿನ ಹಕ್ಕುಗಳ ಉಲ್ಲಂಘನೆಯಾದ್ದಲ್ಲಿ ಮಕ್ಕಳ ಸಹಾಯವಾಣಿ ➤1098 ಕರೆ ಮಾಡಿ- ಡಿ ಶಂಕರಪ್ಪ Read More »

ಕರಾವಳಿ

ಸಾರ್ವಜನಿಕ ಸ್ಥಳಗಳಲ್ಲಿ ತಂಬಾಕು ಉತ್ಪನ್ನ ಹಾಗೂ ಪಾನ್ ಮಸಾಲಗಳನ್ನು ಜಗಿದು ಉಗುಳುವುದು ಶಿಕ್ಷಾರ್ಹ ಅಪರಾಧ ➤ ಡಾ. ರಾಜೇಂದ್ರ ಕೆ.ವಿ

(ನ್ಯೂಸ್ ಕಡಬ) newskadaba.com ಮಂಗಳೂರು, ಡಿ.11:ಸಾರ್ವಜನಿಕ ಪ್ರದೇಶಗಳಲ್ಲಿ ಧೂಮಪಾನ ಸೇವನೆ ಹಾಗೂ ತಂಬಾಕು ಉತ್ಪನ್ನ ಜಗಿದು ಉಗಿಯುವುದು ಅಪರಾಧವಾಗಿದ್ದು, ಇಂತಹ ಪ್ರಕರಣಗಳು ಕಂಡು ಬಂದರೆ ಅವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ ಹೇಳಿದರು.  ಅವರು ಇಂದು ತಮ್ಮ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಜಿಲ್ಲಾ ಸಮನ್ವಯ ಸಮಿತಿ ಸಭೆಯನ್ನುದ್ದೇಶಿ ಮಾತನಾಡಿದರು. ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ನಿಷೇಧಿಸಿದ್ದು ಇದನ್ನು ಉಲ್ಲಂಘನೆ ಮಾಡಿದವರಿಗೆ ರೂ. 200 ಗಳ ದಂಡ

ಸಾರ್ವಜನಿಕ ಸ್ಥಳಗಳಲ್ಲಿ ತಂಬಾಕು ಉತ್ಪನ್ನ ಹಾಗೂ ಪಾನ್ ಮಸಾಲಗಳನ್ನು ಜಗಿದು ಉಗುಳುವುದು ಶಿಕ್ಷಾರ್ಹ ಅಪರಾಧ ➤ ಡಾ. ರಾಜೇಂದ್ರ ಕೆ.ವಿ Read More »

ಕರಾವಳಿ

ನಿಯಂತ್ರಣ ತಪ್ಪಿ ಸೇತುವೆಗೆ ಢಿಕ್ಕಿ ಹೊಡೆದ ಕಾರು ➤ ಕೆಎಂಎಫ್‌ ನಿರ್ದೇಶಕ ಹದ್ದೂರು ರಾಜೀವ ಶೆಟ್ಟಿ ಮೃತ್ಯು

(ನ್ಯೂಸ್ ಕಡಬ) newskadaba.com ಮಂಗಳೂರು, ಡಿ.09: ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಸೇತುವೆಗೆ ಢಿಕ್ಕಿ ಹೊಡೆದ ಪರಿಣಾಮ ಕೆಎಂಎಫ್ ನಿರ್ದೇಶಕ ಹದ್ದೂರು ರಾಜೀವ ಶೆಟ್ಟಿ ಮೃತಪಟ್ಟಿದ್ದಾರೆ. ಅವರು ಶಂಕರನಾರಾಯಣದಲ್ಲಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಹಿಂದಿರುಗುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ ಎಂದು ತಿಳಿದುಬಂದಿದೆ.ಸ್ಥಳಕ್ಕೆ ಶಂಕರನಾರಾಯಣ ಪೊಲೀಸರು ಆಗಮಿಸಿದ್ದು, ಪರಿಶೀಲನೆ ನಡೆಸಿದ್ದಾರೆ. ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ಹದ್ದೂರು ರಾಜೀವ್ ಶೆಟ್ಟಿಯವರನ್ನು ಚಿಕಿತ್ಸೆಗಾಗಿ ಮಣಿಪಾಲ ಆಸ್ಪತ್ರೆಗೆ ಕರೆತರುವ ವೇಳೆ ದಾರಿ ಮಧ್ಯೆ ಮೃತಪಟ್ಟಿದ್ದಾರೆ.  

ನಿಯಂತ್ರಣ ತಪ್ಪಿ ಸೇತುವೆಗೆ ಢಿಕ್ಕಿ ಹೊಡೆದ ಕಾರು ➤ ಕೆಎಂಎಫ್‌ ನಿರ್ದೇಶಕ ಹದ್ದೂರು ರಾಜೀವ ಶೆಟ್ಟಿ ಮೃತ್ಯು Read More »

ಕರಾವಳಿ, ಕರ್ನಾಟಕ

ಕುಕ್ಕೆ ಸುಬ್ರಹ್ಮಣ್ಯ ಚಂಪಾಷಷ್ಠಿ ಹಿನ್ನಲೆ ➤ ಎಡೆಸ್ನಾನ, ಡಿಸಿ ಜತೆ ಚರ್ಚಿಸಿ ಅಂತಿಮ ತೀರ್ಮಾನ – ಡಾ.ಯತೀಶ್‌ ಉಳ್ಳಾಲ್‌

(ನ್ಯೂಸ್ ಕಡಬ) newskadaba.com ಸುಬ್ರಹ್ಮಣ್ಯ, ಡಿ.09: ಕೊರೊನಾದ ಕಾರಣದಿಂದ ಈ ಬಾರಿ ಎಡೆಸ್ನಾನವನ್ನು ಮೊಟಕುಗೊಳಿಸಲು ಈ ಹಿಂದಿನ ಸಭೆಯಲ್ಲಿ ತೀರ್ಮಾನಿಸಲಾಗಿದ್ದು, ಮತ್ತೊಮ್ಮೆ ಜಿಲ್ಲಾಧಿಕಾರಿಗಳ ಜತೆ ಚರ್ಚಿಸಿ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು. ಈ ಬಾರಿ ಬೀದಿ ಬದಿ ವ್ಯಾಪಾರಕ್ಕೆ ಮತ್ತು ಸಂತೆ ವ್ಯಾಪಾರಕ್ಕೆ ಅವಕಾಶವಿಲ್ಲ ಎಂದು ದೇವಳದ ಆಡಳಿತಾಧಿಕಾರಿ ಮತ್ತು ಪುತ್ತೂರು ಉಪವಿಭಾಗದ ಸಹಾಯಕ ಆಯುಕ್ತ ಡಾ.ಯತೀಶ್‌ ಉಳ್ಳಾಲ್‌ ಹೇಳಿದರು.   ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ನಡೆಯುವ ದೇವರ ಚಂಪಾಷಷ್ಠಿ ಜಾತ್ರಾ ಮಹೋತ್ಸವದ ಅಂಗವಾಗಿ ಭಾನುವಾರ ದೇವಳದ ಮೇಲ್ಮಹಡಿಯಲ್ಲಿ

ಕುಕ್ಕೆ ಸುಬ್ರಹ್ಮಣ್ಯ ಚಂಪಾಷಷ್ಠಿ ಹಿನ್ನಲೆ ➤ ಎಡೆಸ್ನಾನ, ಡಿಸಿ ಜತೆ ಚರ್ಚಿಸಿ ಅಂತಿಮ ತೀರ್ಮಾನ – ಡಾ.ಯತೀಶ್‌ ಉಳ್ಳಾಲ್‌ Read More »

ಕರಾವಳಿ

ಸಾಲ್ಮರ :ಸಹೋದರಿ ಮನೆಯಲ್ಲಿದ್ದ ಅವಿವಾಹಿತೆ ನಾಪತ್ತೆ ಪ್ರಕರಣ ➤ ಮಂಗಳೂರಿನಲ್ಲಿ ಅವಿವಾಹಿತೆ ಪತ್ತೆ

(ನ್ಯೂಸ್ ಕಡಬ) newskadaba.com ಸಾಲ್ಮರ, ಡಿ.09: ಅವಿವಾಹಿತ ಮಹಿಳೆಯೊಬ್ಬರು ನಾಪತ್ತೆಯಾಗಿರುವ ಪ್ರಕರಣಕ್ಕೆ ಸಂಬಂಧಪಟ್ಟಂತೆ, ಮಹಿಳೆಯನ್ನು ಮಂಗಳೂರಿನಲ್ಲಿ ಪತ್ತೆ ಮಾಡುವ ಮೂಲಕ ಪೊಲೀಸರು ಯಶಸ್ವಿಯಾಗಿದ್ದಾರೆ. ನಾಪತ್ತೆಯಾಗಿದ್ದ ಮಹಿಳೆ ಮಂಗಳೂರು ಬಸ್ ನಿಲ್ದಾಣದಲ್ಲಿ ಪತ್ತೆಯಾಗಿದ್ದಾರೆ. ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಶಾರದಾ ಅವರನ್ನು ಇಂದು (ಡಿ.09) ಮಂಗಳೂರಿನ ಬಸ್ ನಿಲ್ದಾಣದಲ್ಲಿ ಪತ್ತೆ ಮಾಡಿದ್ದಾರೆ.ನಗರದ ಪರ್ಲಡ್ಕ ಎಂಬಲ್ಲಿನ ನಿವಾಸಿ ಶಾರದಾ (55) ನಾಪತ್ತೆಯಾಗಿದ್ದರು. ಶಾರದಾ ಅವರು ಅವಿವಾಹಿತೆಯಾಗಿದ್ದು, ಕಳೆದ ಕೆಲ ಸಮಯಗಳಿಂದ ಸಾಲ್ಮರದಲ್ಲಿರುವ ಸಹೋದರಿ ಪುಷ್ಪಲತಾ ಎಂಬವರೊಂದಿಗೆ ವಾಸವಾಗಿದ್ದರು. ಸೋಮವಾರ ಪೇಟೆಗೆ ಹೋಗಿ

ಸಾಲ್ಮರ :ಸಹೋದರಿ ಮನೆಯಲ್ಲಿದ್ದ ಅವಿವಾಹಿತೆ ನಾಪತ್ತೆ ಪ್ರಕರಣ ➤ ಮಂಗಳೂರಿನಲ್ಲಿ ಅವಿವಾಹಿತೆ ಪತ್ತೆ Read More »

ಕರಾವಳಿ

ಕುಸಿದು ಬಿದ್ದ ವೃಕ್ಷಗಳ ಮಾತೆ ಸಾಲುಮರದ ತಿಮ್ಮಕ್ಕ ➤ ಆಸ್ಪತ್ರೆಗೆ ದಾಖಲು

(ನ್ಯೂಸ್ ಕಡಬ) newskadaba.com ಬೇಲೂರು, ಡಿ.09: ಪದ್ಮ ಶ್ರೀ ಪುರಸ್ಕ್ರತ, ವೃಕ್ಷಗಳ ಮಾತೆ ಪರಿಸರ ಪ್ರೇಮಿ ಸಾಲುಮರದ ತಿಮ್ಮಕ್ಕ ಅವರು ಅನಾರೋಗ್ಯಕ್ಕೆ ಒಳಗಾಗಿದ್ದು, ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಬೇಲೂರಿನ ತಮ್ಮ ನಿವಾಸದಲ್ಲಿ ಕುಸಿದು ಬಿದ್ದ ತಿಮ್ಮಕ್ಕರವರಿಗೆ ಸೊಂಟದ ಮೂಳೆ ಮುರಿದಿದೆ ಎಂದು ಮೂಲಗಳು ತಿಳಿಸಿವೆ.ಡಿ.09 ರ ಇಂದು ಅಪರೇಷನ್ ನಡೆಸುವ ಸಾಧ್ಯತೆಯಿದೆ ಎಂದು ತಿಮ್ಮಕ್ಕರವರ ದತ್ತು ಪುತ್ರ ಉಮೇಶ್ ರವರು ಮಾಹಿತಿ ನೀಡಿದ್ದಾರೆ.    

ಕುಸಿದು ಬಿದ್ದ ವೃಕ್ಷಗಳ ಮಾತೆ ಸಾಲುಮರದ ತಿಮ್ಮಕ್ಕ ➤ ಆಸ್ಪತ್ರೆಗೆ ದಾಖಲು Read More »

ಕರ್ನಾಟಕ

ಉಡುಪಿ : ಒಂದೇ ಕಡೆ 4 ಭಾರೀ ಗಾತ್ರದ ಹೆಬ್ಬಾವುಗಳು ಪತ್ತೆ.!

(ನ್ಯೂಸ್ ಕಡಬ) newskadaba.com ಉಡುಪಿ, ಡಿ.09: ನಗರದ ಹೃದಯಭಾಗದಲ್ಲಿ ಮಂಗಳವಾರ ಒಂದೇ ಕಡೆಯಲ್ಲಿ 4 ಭಾರೀ ಗಾತ್ರದ ಹೆಬ್ಬಾವುಗಳು ಪತ್ತೆಯಾಗಿವೆ. ಅಲ್ಲದೇ ಈ ಹಾವು ಹಿಡಿಯಲೆತ್ನಿದ ಒಬ್ಬರಿಗೆ ಕಚ್ಚಿರುವ ಘಟನೆ ನಡೆದಿದೆ.     ನಗರದ ಪೂರ್ಣಪ್ರಜ್ಞಾ ಕಾಲೇಜಿನ ಬಳಿಯ ಖಾಲಿ ನಿವೇಶನದಲ್ಲಿ ಮಂಗಳವಾರ ಸಂಜೆ ಹಲ್ಲು ಕತ್ತರಿಸುವಾಗ ಒಂದು ಹೆಬ್ಬಾವು ಪತ್ತೆಯಾಗಿತ್ತು.ಬಳಿಕ ಅಲ್ಲಿಯೇ ಹುಲ್ಲು ಪೊದೆಯಲ್ಲಿ ಇನ್ನೊಂದು ಹೆಬ್ಬಾವು ಕಂಡುಬಂದಿದೆ.ವಿಷಯ ತಿಳಿದು ಸ್ಥಳಿಯ ಯುವಕರು ಸೇರಿ ಅವುಗಳನ್ನು ಹಿಡಿದು ಚೀಲದೊಳಗೆ ಹಾಕಿದರು.ಹುಲ್ಲಿನಲ್ಲಿ ಹುಡುಕಿದಾಗ ಇನ್ನೂ ಎರಡು

ಉಡುಪಿ : ಒಂದೇ ಕಡೆ 4 ಭಾರೀ ಗಾತ್ರದ ಹೆಬ್ಬಾವುಗಳು ಪತ್ತೆ.! Read More »

ಕರಾವಳಿ

ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾದ ಕಿರುತೆರೆಯ ಖ್ಯಾತ ನಟಿ..!!

(ನ್ಯೂಸ್ ಕಡಬ) newskadaba.com ತಮಿಳುನಾಡು, ಡಿ.09: ತಮಿಳಿನ ಕಿರುತೆರೆಯಲ್ಲಿ ಇತ್ತೀಚೆಗೆ ಖ್ಯಾತಿ ಪಡೆದಿದ್ದ ನಟಿ ಚಿತ್ರಾ ಸಾವನ್ನಪ್ಪಿದ್ದಾರೆ. ಪಾಂಡಿಯನ್​ ಸ್ಟೋರ್ಸ್​​ ಖ್ಯಾತಿಯ ನಟಿ ಚಿತ್ರಾ ತಮಿಳುನಾಡಿನ ಹೋಟೆಲ್​ನಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗುತ್ತಿದೆ. ಅವರ ದೇಹ ನೇಣು ಬಿಗಿದ ಸ್ಥಿತಿಯಲ್ಲಿ ಸಿಕ್ಕಿದೆ.ಚಿತ್ರಾ ಅವರು ಪಾಂಡಿಯನ್​ ಸ್ಟೋರ್ಸ್​ ಧಾರಾವಾಹಿಯಲ್ಲಿ ನಟಿಸುತ್ತಿದ್ದರು. ಇದರಿಂದಾಗಿಯೇ ಇತ್ತೀಚೆಗೆ ಖ್ಯಾತಿ ಪಡೆದಿದ್ದರು. ಅಲ್ಲದೆ ಉದ್ಯಮಿ ಹೇಮಂತ್​ ರವಿ ಎಂಬುವರೊಂದಿಗೆ ನಿಶ್ಚಿತಾರ್ಥ ಸಹ ನಿಗದಿಯಾಗಿತ್ತು. ಹೇಮಂತ್​ ರವಿ ಅವರೊಂದಿಗೆ ಹೋಟೆಲ್​ನಲ್ಲಿರುವಾಗಲೇ ಈ ಘಟನೆ ನಡೆದಿದೆ. ಹೇಮಂತ್​ ಅವರೊಂದಿಗೆ

ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾದ ಕಿರುತೆರೆಯ ಖ್ಯಾತ ನಟಿ..!! Read More »

ರಾಷ್ಟ್ರೀಯ ನ್ಯೂಸ್
Scroll to Top