newskadaba

ವಿದ್ಯಾರ್ಥಿಯೊಬ್ಬ ಗೆಳತಿಯೊಂದಿಗೆ ನಿರ್ಜನ ಪ್ರದೇಶದಲ್ಲಿ ಪತ್ತೆ ➤ವಿದ್ಯಾರ್ಥಿಗಳಿಬ್ಬರು ಪರಾರಿ

(ನ್ಯೂಸ್ ಕಡಬ) newskadaba.com ಮಧ್ಯಪ್ರದೇಶ, ಫೆ.17. ಕಾಲೇಜಿನಲ್ಲಿ ಪಿಯುಸಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿಯೊಬ್ಬ ನಿರ್ಜನ ಪ್ರದೇಶದಲ್ಲಿ ತನ್ನ ಗೆಳತಿಯೊಂದಿಗೆ ಕಾರಿನಲ್ಲಿ ಕುಳಿತಿದ್ದ ವೇಳೆ ರೌಂಡ್ಸ್ ನಲ್ಲಿದ್ದ ಪೊಲೀಸರ ತಂಡ ಅಲ್ಲಿಗೆ ಬಂದಿದ್ದು, ಸಿಕ್ಕಿ ಬೀಳುವ ಭಯದಲ್ಲಿ ಆತ ಪೇದೆಯೊಬ್ಬರ ಕಾಲಿನ ಮೇಲೆ ಕಾರು ಹರಿಸಿ ಗೆಳತಿಯೊಂದಿಗೆ ಪರಾರಿಯಾಗಿದ್ದಾನೆ.ಇಂತಹದೊಂದು ಘಟನೆ ಮಧ್ಯಪ್ರದೇಶದ ಇಂದೋರಿನ ತೇಜಾಜಿ ನಗರ ಪ್ರದೇಶದಲ್ಲಿ ಸಂಭವಿಸಿದೆ. ಕೋಚಿಂಗ್ ಕ್ಲಾಸಿಗೆ ತೆರಳಿದ್ದ ಈತ ಬಳಿಕ ತನ್ನ ಗೆಳತಿಗೆ ಕರೆ ಮಾಡಿ ಕರೆಸಿಕೊಂಡಿದ್ದು, ಇಬ್ಬರೂ ಬೆಳಗಿನ ಜಾವ 3:30ರ […]

ವಿದ್ಯಾರ್ಥಿಯೊಬ್ಬ ಗೆಳತಿಯೊಂದಿಗೆ ನಿರ್ಜನ ಪ್ರದೇಶದಲ್ಲಿ ಪತ್ತೆ ➤ವಿದ್ಯಾರ್ಥಿಗಳಿಬ್ಬರು ಪರಾರಿ Read More »

ರಾಷ್ಟ್ರೀಯ ನ್ಯೂಸ್

ಬ್ರಿಡ್ಜ್ ಗೆ ಕಾರು ಢಿಕ್ಕಿ ➤ನಾಲ್ವರು ಸ್ಥಳದಲ್ಲೇ ಮೃತ್ಯು

(ನ್ಯೂಸ್ ಕಡಬ) newskadaba.com ಕೊಪ್ಪಳ, ಫೆ.17.ಜಿಲ್ಲೆಯ ಕುಕನೂರು ತಾಲೂಕಿನ   ಬನ್ನಿಕೊಪ್ಪದ ಬಳಿ ರಾಷ್ಟೀಯ ಹೆದ್ದಾರಿಯಲ್ಲಿ  ಬ್ರಿಡ್ಜ್ ಗೆ ಕಾರು ವೇಗವಾಗಿ ಢಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ನಾಲ್ವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಇವರೆಲ್ಲರೂ ತೆಲಂಗಾಣದವರು ಎಂದು  ಪೊಲೀಸರು ಮಾಹಿತಿ ನೀಡಿದ್ದಾರೆ. ಜಿಲ್ಲೆಯಿಂದ ಗದಗ ಮಾರ್ಗದಲ್ಲಿ ಹೋಗುವಾಗ ಈ ಘಟನೆ ಸಂಭವಿಸಿದೆ. ಢಿಕ್ಕಿ ಹೊಡೆದ ರಭಸಕ್ಕೆ ಕಾರಿನ ಮುಂಭಾಗ ಸಂಪೂರ್ಣವಾಗಿ ನಜ್ಜುಗುಜ್ಜಾಗಿದೆ.ಕಾರಿನ ಬಿಡಿಭಾಗವು ರಸ್ತೆ ತುಂಬೆಲ್ಲಾ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು ಎಂದು ವರದಿಯಾಗಿದೆ.

ಬ್ರಿಡ್ಜ್ ಗೆ ಕಾರು ಢಿಕ್ಕಿ ➤ನಾಲ್ವರು ಸ್ಥಳದಲ್ಲೇ ಮೃತ್ಯು Read More »

ಕರ್ನಾಟಕ

ರೈಲಿನಲ್ಲಿ ಹೃದಯಾಘಾತ ➤ವಕೀಲ ಕೆ.ಪಿ. ಜೇಮ್ಸ್ ನಿಧನ

(ನ್ಯೂಸ್ ಕಡಬ) newskadaba.com ಪುತ್ತೂರು, ಫೆ.17.  ರೈಲಿನಲ್ಲಿ ಸಂಚರಿಸುತ್ತಿರುವಾಗ ಹೃದಯಾಘಾತದಿಂದ ವಕೀಲರೊಬ್ಬರು ಮೃತಪಟ್ಟಿರುವ ಘಟನೆ ಮಲಬಾರ್ ಎಕ್ಸ್ ಪ್ರೆಸ್ ರೈಲಿನಲ್ಲಿ ಸಂಭವಿಸಿದೆ. ಪುತ್ತೂರಿನ ಎಪಿಎಂಸಿ ರಸ್ತೆಯ ನೆಲ್ಲಿಕಟ್ಟೆ ನಿವಾಸಿ, ವಕೀಲ ಕೆ.ಪಿ. ಜೇಮ್ಸ್ ಅವರು ತಮಿಳುನಾಡು ಕಡೆ ತೆರಳುತ್ತಿದ್ದ ಮಲಬಾರ್ ಎಕ್ಸ್‌ಪ್ರೆಸ್‌ ರೈಲಿನಲ್ಲಿ ರಾತ್ರಿ ಹೃದಯಾಘಾತಕ್ಕೊಳಗಾಗಿ ಕುಸಿದು ಬಿದ್ದು ಮೃತಪಟ್ಟಿದ್ದಾರೆ. ಕೆ.ಪಿ.ಜೇಮ್ಸ್ ಅವರು ಪತ್ನಿಯೊಂದಿಗೆ ಚೆಂಗನೂರಿನ ಧಾರ್ಮಿಕ ಕ್ಷೇತ್ರಕ್ಕೆ ರೈಲಿನಲ್ಲಿ ತೆರಳುತ್ತಿದ್ದರು. ಹವಾನಿಯಂತ್ರಿತ ಕೋಚ್‌ನಲಿದ್ದ ಅವರು ರಾತ್ರಿ ವೇಳೆ ಶೌಚಾಲಯಕ್ಕೆ ಹೋದವರು ನಾಪತ್ತೆಯಾಗಿದ್ದರು. ಜೇಮ್ಸ್‌ ವಾಪಸ್‌ ಬರದ

ರೈಲಿನಲ್ಲಿ ಹೃದಯಾಘಾತ ➤ವಕೀಲ ಕೆ.ಪಿ. ಜೇಮ್ಸ್ ನಿಧನ Read More »

ಕರಾವಳಿ

 ಟ್ಯಾಂಕರ್-ಟ್ರಕ್ ನಡುವೆ ಢಿಕ್ಕಿ ➤ ನಾಲ್ವರು ಮೃತ್ಯು

(ನ್ಯೂಸ್ ಕಡಬ) newskadaba.com ಜೈಪುರ, ಫೆ.17.  ರಾಜಸ್ಥಾನದ ಅಜ್ಮೀರ್ ಜಿಲ್ಲೆಯಲ್ಲಿ ಎಲ್ ಪಿಜಿ ಸಿಲಿಂಡರ್ ಗಳನ್ನು ಸಾಗಿಸುತ್ತಿದ್ದ ಗ್ಯಾಸ್ ಟ್ಯಾಂಕರ್ ಮಾರ್ಬಲ್ ಸಾಗಿಸುತ್ತಿದ್ದ ಟ್ರಕ್ ಗೆ ಢಿಕ್ಕಿ ಹೊಡದ ಪರಿಣಾಮವಾಗಿ ನಾಲ್ವರು ಮೃತಪಟ್ಟಿದ್ದಾರೆ ಹಾಗೂ ಇನ್ನೊಬ್ಬರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ”ಅಪಘಾತದಲ್ಲಿ ನಾಲ್ವರು ಸಜೀವ ದಹನವಾಗಿದ್ದಾರೆ ಹಾಗೂ ಇನ್ನೊಬ್ಬರು ಗಾಯಗೊಂಡಿದ್ದಾರೆ.ಅಕ್ಕ ಪಕ್ಕದ ಅಂಗಡಿಗಳು ಮತ್ತು ನಿವಾಸಗಳು ಸಹ ಬೆಂಕಿಗೆ ಆಹುತಿಯಾಗಿವೆ”ಎಂದು ಅಜ್ಮೀರ್ ಪೊಲೀಸ್ ಸೂಪರಿಂಟೆಂಡೆಂಟ್  ಚುನಾರಾಮ್ ಜಾಟ್ ಹೇಳಿದ್ದಾರೆ ಎಂದು ವರದಿಯಾಗಿದೆ.

 ಟ್ಯಾಂಕರ್-ಟ್ರಕ್ ನಡುವೆ ಢಿಕ್ಕಿ ➤ ನಾಲ್ವರು ಮೃತ್ಯು Read More »

ರಾಷ್ಟ್ರೀಯ ನ್ಯೂಸ್

➤ ಉಜಿರೆ ಖಾಸಗಿ ಕಾಲೇಜಿನ ವಿದ್ಯಾರ್ಥಿನಿ ನಾಪತ್ತೆ

ನ್ಯೂಸ್ ಕಡಬ) newskadaba.com.ಬೆಳ್ತಂಗಡಿ, ಫೆ.17.  ಉಜಿರೆ ಖಾಸಗಿ ಕಾಲೇಜಿನ ವಿದ್ಯಾರ್ಥಿನಿ ನಾಪತ್ತೆಯಾದ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ನಾಪತ್ತೆಯಾದ ವಿದ್ಯಾರ್ಥಿನಿಯನ್ನು ದೀಕ್ಷಿತಾ(18) ಎಂದು ಗುರುತಿಸಲಾಗಿದೆ. ಈಕೆ ಹಾಸ್ಟೆಲ್ ನಲ್ಲಿ ಕಲಿಯುತ್ತಿದ್ದು, ಹಾಸ್ಟೆಲ್ ನಿಂದ ಮನೆಗೆ ಹೋದವಳು ಮನೆಗೆ ಹೋಗದೆ ನಾಪತ್ತೆಯಾಗಿದ್ದಾಳೆ. ಮಗಳು ನಾಪತ್ತೆಯಾಗಿರುವ ಬಗ್ಗೆ ಆಕೆಯ ತಂದೆ ಬೆಳ್ತಂಗಡಿ ಪೊಲೀಸರಿಗೆ ದೂರು ನೀಡಿದ್ದಾರೆ. ಈಕೆಯ ಬಗ್ಗೆ ಯಾವುದಾದರೂ ಮಾಹಿತಿ ಸಿಕ್ಕಿದಲ್ಲಿ ಬೆಳ್ತಂಗಡಿ ಪೊಲೀಸರಿಗೆ ಮಾಹಿತಿ ನೀಡುವಂತೆ ಕೋರಲಾಗಿದೆ.

➤ ಉಜಿರೆ ಖಾಸಗಿ ಕಾಲೇಜಿನ ವಿದ್ಯಾರ್ಥಿನಿ ನಾಪತ್ತೆ Read More »

ಕರಾವಳಿ, ಕ್ರೈಮ್ ನ್ಯೂಸ್

ಎಣ್ಣೆ ಸಪ್ಲೈ ತಡವಾಗಿದ್ದಕ್ಕೆ ಬಾರ್​ ಸಿಬ್ಬಂದಿ ಮೇಲೆ ಹಲ್ಲೆ   ➤23 ದಿನದ ಬಳಿಕ ಯುವಕ ಮೃತ್ಯು

(ನ್ಯೂಸ್ ಕಡಬ) newskadaba.com ಬೆಂಗಳೂರು, ಫೆ.17.  ಬಾರ್​ನಲ್ಲಿ ಸಪ್ಲೈ ತಡವಾಗಿದ್ದಕ್ಕೆ ಸಿಬ್ಬಂದಿ ಬಸವರಾಜು (39) ಎಂಬುವವರ ಮೇಲೆ ಹಲ್ಲೆ ಮಾಡಲಾಗಿತ್ತು. ತೀವ್ರವಾಗಿ ಗಾಯಗೊಂಡಿದ್ದ ಬಸವರಾಜ ನಿರ್ಲಕ್ಷ್ಯವಹಿಸಿದ್ದಾನೆ. ಬಳಿಕ ಮಾರನೇ ದಿನ ತಲೆ ತಿರುಗುವಂತಾಗಿದ್ದು, ಕೂಡಲೇ ಆಸ್ಪತ್ರೆಗೆ ಸೇರಿಸಲಾಗಿ ಚಿಕಿತ್ಸೆ ಪಡೆಯುತ್ತಿದ್ದ. ಇದೀಗ 23 ದಿನದ ಬಳಿಕ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾನೆ. ಇನ್ನು ಬಾರ್ ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ್ದ ಆರೋಪಿಗಳಾದ ಸುರೇಶ್(29), ವಿನೋದ್ ಕುಮಾರ್ ( 28) ಎಂಬುವವರನ್ನ ಕುಮಾರಸ್ವಾಮಿ ಲೇಔಟ್ ಪೊಲೀಸರು ಬಂಧಿಸಿದ್ದಾರೆ ಎಂದು ವರದಿಯಾಗಿದೆ.

ಎಣ್ಣೆ ಸಪ್ಲೈ ತಡವಾಗಿದ್ದಕ್ಕೆ ಬಾರ್​ ಸಿಬ್ಬಂದಿ ಮೇಲೆ ಹಲ್ಲೆ   ➤23 ದಿನದ ಬಳಿಕ ಯುವಕ ಮೃತ್ಯು Read More »

ಕರ್ನಾಟಕ, ಕ್ರೈಮ್ ನ್ಯೂಸ್

ಇಕ್ಕುಳದಿಂದ ಏಳು ವರ್ಷದ ಮಗಳಿಗೆ ಸುಟ್ಟ ಪಾಪಿ ಮಲತಾಯಿ!!

(ನ್ಯೂಸ್ ಕಡಬ) newskadaba.com ದೆಹಲಿ, ಫೆ.17.ಮಲತಾಯಿಯೇ ತನ್ನ ಏಳು ವರ್ಷದ ಮಗಳನ್ನು ಇಕ್ಕಳಗಳಿಂದ ಸುಟ್ಟ ದಾರುಣ ಘಟನೆ ದೆಹಲಿಯ ಆರ್.ಕೆ.ಪುರಂನಲ್ಲಿ ಸಂಭವಿಸಿದೆ. ಪ್ರಕರಣ ಕುರಿತು ಮಲತಾಯಿ ಹಾಗೂ ಆಕೆಯ ಮಗನ್ನು ಪೋಲಿಸರು ಬಂಧಿಸಿದ್ದಾರೆ. ಬಾಲಕಿಯ ಜೈವಿಕ ಪೋಷಕರು ಮಲತಾಯಿಗೆ ಸಂಬಂಧಿಗಳಾಗಿದ್ದಾರೆ ಎಂದು  ಪೋಲಿಸರು ಹೇಳಿದ್ದಾರೆ ಎಂದು ವರದಿಯಾಗಿದೆ.  

ಇಕ್ಕುಳದಿಂದ ಏಳು ವರ್ಷದ ಮಗಳಿಗೆ ಸುಟ್ಟ ಪಾಪಿ ಮಲತಾಯಿ!! Read More »

ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ವಿದ್ಯಾರ್ಥಿಗಳ ಪ್ರತಿಭಟನೆಗೆ ಬ್ರೇಕ್ ➤ಕೃಷಿ ವಿವಿ ಹೊಸ ಪ್ಲಾನ್..!

(ನ್ಯೂಸ್ ಕಡಬ) newskadaba.com ರಾಯಚೂರು, ಫೆ.17.  ವಿದ್ಯಾರ್ಥಿಗಳ ಪ್ರತಿಭಟನೆಗೆ ಬ್ರೇಕ್ ಹಾಕಲು ರಾಯಚೂರಿನ ಕೃಷಿ ವಿಶ್ವವಿದ್ಯಾಲಯ ಹೊಸ ಪ್ಲಾನ್‌ವೊಂದನ್ನ ಮಾಡಿದೆ. ಹೌದು, ಪ್ರತಿಭಟನೆ ಕುಳಿತ ವಿದ್ಯಾರ್ಥಿಗಳಿಗೆ ವಸತಿ ನಿಲಯದಲ್ಲಿ ಪ್ರವೇಶ ನಿಷೇಧಿಸಲಾಗಿದೆ. ಬಿ.ಟೆಕ್ ತಾಂತ್ರಿಕ ವಿದ್ಯಾರ್ಥಿಗಳಿಗೆ ವಸತಿ ನಿಲಯದಲ್ಲಿ ಭೋಜನ ವ್ಯವಸ್ಥೆಯನ್ನ ಸ್ಥಗಿತ ಮಾಡಲಾಗಿದೆ. ಕೃಷಿ ವಿವಿಯ ಆವರಣದಲ್ಲಿನ ವಸತಿ ನಿಲಯದಲ್ಲಿ ಪ್ರವೇಶ ನಿಷೇಧಿಸಿ ರಾಯಚೂರು ಕೃಷಿ ವಿವಿಯ ಕುಲ ಸಚಿವರು  ಆದೇಶ ಹೊರಡಿಸಿದೆ ಎಂದು ತಿಳಿದು ಬಂದಿದೆ. ಕಳೆದ 30 ದಿನಗಳಿಂದ ರಾಯಚೂರು ಕೃಷಿ ವಿವಿಯ ಬಿ.ಟೆಕ್

ವಿದ್ಯಾರ್ಥಿಗಳ ಪ್ರತಿಭಟನೆಗೆ ಬ್ರೇಕ್ ➤ಕೃಷಿ ವಿವಿ ಹೊಸ ಪ್ಲಾನ್..! Read More »

ಕರ್ನಾಟಕ

ಸಿಎಂ ಬೊಮ್ಮಾಯಿ ಬಜೆಟ್ ಮಂಡನೆ ➤ರಾಜ್ಯದ ಎಲ್ಲಾ ವಿದ್ಯಾರ್ಥಿಗಳಿಗೆ ಉಚಿತ ಬಸ್​ ಪಾಸ್​​​​ ವ್ಯವಸ್ಥೆ…

(ನ್ಯೂಸ್ ಕಡಬ) newskadaba.com ಬೆಂಗಳೂರು, ಫೆ.17. ಶಾಲಾ ಕಾಲೇಜು ವಿದ್ಯಾರ್ಥಿನಿಯರಿಗೆ ಬಂಪರ್ ಗಿಫ್ಟ್​ ನೀಡಿದ್ದು, ಸರ್ಕಾರ ಉಚಿತ ಬಸ್​ಪಾಸ್ ಸೌಲಭ್ಯ ಘೋಷಣೆ ಮಾಡಿದೆ. ವಿದ್ಯಾವಾಹಿನಿ ಯೋಜನೆ ಯಡಿ 350 ಕೋಟಿ ವೆಚ್ಚದಲ್ಲಿ ಉಚಿತ ಬಸ್ಸು ಪಾಸ್ ಸೌಲಭ್ಯ  ನೀಡಲಿದೆ ಎಂದು ವರದಿಯಾಗಿದೆ.  ಇದರಿಂದ ರಾಜ್ಯದ 8 ಲಕ್ಷ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಪ್ರಯೋಜನವಾಗಲಿದೆ.  

ಸಿಎಂ ಬೊಮ್ಮಾಯಿ ಬಜೆಟ್ ಮಂಡನೆ ➤ರಾಜ್ಯದ ಎಲ್ಲಾ ವಿದ್ಯಾರ್ಥಿಗಳಿಗೆ ಉಚಿತ ಬಸ್​ ಪಾಸ್​​​​ ವ್ಯವಸ್ಥೆ… Read More »

ಕರ್ನಾಟಕ

ಗುಡ್ಡಕ್ಕೆ ಬೆಂಕಿ ಹಾಕಿದ ದುಷ್ಕರ್ಮಿಗಳು!

(ನ್ಯೂಸ್ ಕಡಬ) newskadaba.com ದಾವಣಗೆರೆ, ಫೆ.17. ಇತಿಹಾಸ ಪ್ರಸಿದ್ಧ ಸೂಳೆಕೆರೆ ಗುಡ್ಡಕ್ಕೆ ಯಾರೋ ಕಿಡಿಗೇಡಿಗಳು ಬೆಂಕಿ ಹಚ್ಚಿದ ಪರಿಣಾಮ ಅಪಾರ ಪ್ರಮಾಣದ ಸಸ್ಯ ಸಂಪತ್ತು ಸುಟ್ಟು ನಾಶವಾಗಿದೆ. ಕಾಡು ಪ್ರಾಣಿಗಳು, ಪಕ್ಷಿ ಸಂಕುಲ ಅರಣ್ಯದಿಂದ ಚಿತ್ಕಾರದೊಂದಿಗೆ ಪಾಲಾಯನ ಮಾಡಿವೆ. ಗುಡ್ಡಕ್ಕೆ ಹೊಂದಿಕೊಂಡ ಜಮೀನು ಕಬಳಿಸಲು ಭೂಗಳ್ಳ ಕಿಡಿಗೇಡಿಗಳು ಈ ಕೃತ್ಯ ಎಸಗುತ್ತಿದ್ದಾರೆ. ಇದರ ಜತೆ ದನಗಾಹಿಗಳು ಹುಲ್ಲು ಬೆಳೆಯಲಿ ಎಂದೂ ಕೂಡ ಇಂತಹ ಕೆಲಸ ಮಾಡುತ್ತಿದ್ದಾರೆ. ಏನೇ ಆದರೂ ಅರಣ್ಯ ಇಲಾಖೆಯ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ ಎಂಬುದು

ಗುಡ್ಡಕ್ಕೆ ಬೆಂಕಿ ಹಾಕಿದ ದುಷ್ಕರ್ಮಿಗಳು! Read More »

ಕರ್ನಾಟಕ, ಕ್ರೈಮ್ ನ್ಯೂಸ್
Scroll to Top