newskadaba

➤ ಮಹಿಳೆಯ ಪಿತ್ತಕೋಶದಲ್ಲಿ 2000 ಕ್ಕೂ ಹೆಚ್ಚು ಕಲ್ಲುಗಳು ಪತ್ತೆ!

(ನ್ಯೂಸ್ ಕಡಬ) newskadaba.com. ಚೆನ್ನೈ. ಫೆ.21.  ಮಹಿಳೆಯೊಬ್ಬರ ಪಿತ್ತಕೋಶದಲ್ಲಿದ್ದ 2000 ಸಾವಿರಕ್ಕೂ ಹೆಚ್ಚು ಕಲ್ಲುಗಳನ್ನು ವೈದ್ಯರು ಶಸ್ತ್ರಚಿಕಿತ್ಸೆ ನಡೆಸಿ ಹೊರ ತೆಗೆದ ಘಟನೆ ತಮಿಳುನಾಡಿನ ಚೆನ್ನೈನಲ್ಲಿ ನಡೆದಿದೆ. ಪಶ್ಚಿಮ ಬಂಗಾಳ ಮೂಲದ 55 ವರ್ಷ ಪ್ರಾಯದ ಮಧುಮೇಹ ಕಾಯಿಲೆಯನ್ನು ಹೊಂದಿರುವ ಮಹಿಳೆಯೊಬ್ಬರು ಚೆನ್ನೈನಲ್ಲಿರುವ  ಮೋಹನ್ ಡಯಾಬಿಟಿಸ್ ಕ್ಲಿನಿಕ್‌ಗೆ ಅನಾರೋಗ್ಯದ ಕಾರಣಕ್ಕೆ ತಪಾಸಣೆಗೆ ಬಂದಿದ್ದರು, ಗ್ಯಾಸ್ಟಿಕ್ ಹಾಗೂ ಅಜೀರ್ಣದ ಸಮಸ್ಯೆಯ ಕಾರಣ ಹೇಳಿ ಆಸ್ಪತ್ರೆಗೆ ಬಂದಿದ್ದ ಅವರಿಗೆ ಸ್ಕ್ಯಾನಿಂಗ್ ಮಾಡಿದಾಗ ಮೊದಲಿಗೆ ಅವರ ಪಿತ್ತಕೋಶದಲ್ಲಿ 50ಕ್ಕೂ ಹೆಚ್ಚು ಕಲ್ಲುಗಳಿರುವುದು […]

➤ ಮಹಿಳೆಯ ಪಿತ್ತಕೋಶದಲ್ಲಿ 2000 ಕ್ಕೂ ಹೆಚ್ಚು ಕಲ್ಲುಗಳು ಪತ್ತೆ! Read More »

ಕರ್ನಾಟಕ

ವಿಟ್ಲ ಆಕಸ್ಮಿಕವಾಗಿ ಲಾರಿಗೆ ಬೆಂಕಿ ➤ ಅಪಾರ ನಷ್ಟ

(ನ್ಯೂಸ್ ಕಡಬ) newskadaba.com. ವಿಟ್ಲ.  ಫೆ.21. ಸಾಲೆತ್ತೂರು ಸಮೀಪದ  ಮೆದು ಎಂಬಲ್ಲಿನ ಪೆಟ್ರೋಲ್ ಬಂಕ್ ಎದುರುಗಡೆ ನಿಲ್ಲಿಸಿದ್ದ ಲಾರಿಯೊಂದಕ್ಕೆ ಆಕಸ್ಮಿಕವಾಗಿ ಬೆಂಕಿ ತಗುಲಿ ಲಾರಿಯ ಮುಂದಿನ ಭಾಗ ಸಂಪೂರ್ಣ ಸುಟ್ಟು ಕರಕಲಾಗಿದ್ದು, ಅಪಾರ ನಷ್ಟ ಸಂಭವಿಸಿದೆ. ಪೆಟ್ರೋಲ್ ಬಂಕ್ ಎದುರು ಈ ಘಟನೆ ನಡೆದಿದ್ದು, ಸ್ಥಳೀಯರು ಹರಸಾಹಸಪಟ್ಟು ಬೆಂಕಿ ನಂದಿಸಿ ಹೆಚ್ಚಿನ ಅನಾಹುತವೊಂದನ್ನು ತಪ್ಪಿಸಿದ್ದಾರೆ. ಬಂಟ್ವಾಳ ಅಗ್ನಿಶಾಮಕ ದಳದ ಸಿಬ್ಬಂದಿಗಳು ಸ್ಥಳಕ್ಕಾಗಮಿಸಿದ್ದಾರೆ.

ವಿಟ್ಲ ಆಕಸ್ಮಿಕವಾಗಿ ಲಾರಿಗೆ ಬೆಂಕಿ ➤ ಅಪಾರ ನಷ್ಟ Read More »

ಕರಾವಳಿ, ಕ್ರೈಮ್ ನ್ಯೂಸ್

➤ಏ.1ರಿಂದ ದುಡಿಯುವ ಹೆಣ್ಣು ಮಕ್ಕಳಿಗೆ, ಶಾಲಾ ವಿದ್ಯಾರ್ಥಿನಿಯರಿಗೆ ಉಚಿತ ಬಸ್ ಪಾಸ್

(ನ್ಯೂಸ್ ಕಡಬ) newskadaba.com. ಬೆಂಗಳೂರು. ಫೆ.21.  ರಾಜ್ಯದಲ್ಲಿ ಏಪ್ರಿಲ್ 1 ರಿಂದ ದುಡಿಯುವ ಹೆಣ್ಣು ಮಕ್ಕಳಿಗೆ ಹಾಗೂ ಶಾಲಾ ವಿದ್ಯಾರ್ಥಿನಿಯರಿಗೆ ಉಚಿತ ಬಸ್ ಪಾಸ್ ವ್ಯವಸ್ಥೆ ಕಲ್ಪಿಸಲು ಎಲ್ಲಾ ಕ್ರಮ ಕೈಗೊಳ್ಳಬೇಕು ಎಂದು ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ಸೂಚಿಸಿದ್ದಾರೆ. ಮಂಗಳವಾರ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ವೋಲ್ವೋ ಮಲ್ಟಿ ಆಕ್ಸೆಲ್ ಬಿಎಸ್ 4 -9600 ಸ್ಲೀಪರ್ ಬಸ್ಸುಗಳನ್ನು ಲೋಕಾರ್ಪಣೆ ಮಾಡಿ ಮಾತನಾಡಿದ ಅವರು, ಮಹಿಳೆಯರಿಗೆ ಗೌರವದ ಜೊತೆಗೆ ಆರ್ಥಿಕವಾಗಿ ಸ್ವಾವಲಂಭಿಯಾಗಲು ಈ ಯೋಜನೆ ರೂಪಿಸಲಾಗಿದೆ. ಮಿನಿ

➤ಏ.1ರಿಂದ ದುಡಿಯುವ ಹೆಣ್ಣು ಮಕ್ಕಳಿಗೆ, ಶಾಲಾ ವಿದ್ಯಾರ್ಥಿನಿಯರಿಗೆ ಉಚಿತ ಬಸ್ ಪಾಸ್ Read More »

ಕರ್ನಾಟಕ

ಫೆ. 22(ನಾಳೆಯಿಂದ) ಮಂಗಳೂರು-ಪಣಜಿಗೆ ರಾಜಹಂಸ ಬಸ್ ಸೇವೆ ಪ್ರಾರಂಭ

(ನ್ಯೂಸ್ ಕಡಬ)newskadaba.com ಮಂಗಳೂರು, ಫೆ.21. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು ಮಂಗಳೂರಿನಿಂದ ಉಡುಪಿ ಕುಂದಾಪುರ ಬೈಂದೂರು, ಭಟ್ಕಳ, ಹೊನ್ನಾವರ ಕುಮಟಾ, ಅಂಕೋಲಾ, ಕಾರವಾರ, ಪೊಲೆಂಕಾನಕೋನ, ಮಡಗಾಂವ್, ಪೋಂಡ, ಮಂಗೇಶಿ, ಪಣಜಿ ಹಾಗೂ ಬರುವ ಮಾರ್ಗದಲ್ಲಿ ಪಣಜಿ, ಕೊರ್ಟಾಲಿಂ, ಮಡಗಾಂವ್, ಕಾನಕೋನ, ಪೊಲೆಂ, ಕಾರವಾರ, ಅಂಕೋಲಾ, ಕುಮಟಾ, ಹೊನ್ನಾವರ, ಭಟ್ಕಳ, ಬೈಂದೂರು, ಕುಂದಾಪುರ, ಮಣಿಪಾಲ, ಉಡುಪಿ ಮಾರ್ಗವಾಗಿ ರಾಜಹಂಸ ಹೊಸ ಸಾರಿಗೆಯನ್ನು ಇದೇ ಫೆ.22ರಿಂದ ಪ್ರಾರಂಭಿಸಲಿದೆ ಎಂದು ತಿಳಿದುಬಂದಿದೆ.

ಫೆ. 22(ನಾಳೆಯಿಂದ) ಮಂಗಳೂರು-ಪಣಜಿಗೆ ರಾಜಹಂಸ ಬಸ್ ಸೇವೆ ಪ್ರಾರಂಭ Read More »

ಕರಾವಳಿ

➤ ಶೀಘ್ರದಲ್ಲಿಯೇ ತಮಿಳುನಾಡು ಕರ್ನಾಟಕ ನಡುವೆ ಮೆಟ್ರೊ ಸಂಚಾರ

(ನ್ಯೂಸ್ ಕಡಬ) newskadaba.com.ಬೆಂಗಳೂರು, ಫೆ.21.  ಹೊಸೂರು ಮತ್ತು ಬೆಂಗಳೂರು ನಡುವೆ ಮೆಟ್ರೊ ಸಂಪರ್ಕ ಕಲ್ಪಿಸುವಲ್ಲಿ ಮತ್ತೊಂದು ಹೆಜ್ಜೆ ಮುಂದಿಟ್ಟಿರುವ ಚೆನ್ನೈ ಮೆಟ್ರೊ ರೈಲು ನಿಗಮವು ಬೊಮ್ಮಸಂದ್ರದಿಂದ ರೈಲು ಸಂಪರ್ಕ ನಿರ್ಮಾಣಕ್ಕೆ ಕಾರ್ಯಸಾಧ್ಯತೆ ಅಧ್ಯಯನ ನಡೆಸಲು ಅನುಮತಿ ಕೋರಿ ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯಕ್ಕೆ ಪತ್ರ ಬರೆದಿದೆ. ಸಚಿವಾಲಯ ಪ್ರಸ್ತಾವನೆಯನ್ನು ಅನುಮೋದಿಸಿದ ನಂತರ ಸಿಎಂಆರ್‌ಎಲ್‌, ಹೊಸೂರಿನಿಂದ ಕರ್ನಾಟಕದ ಬೊಮ್ಮಸಂದ್ರದವರೆಗಿನ 20.5 ಕಿ.ಮೀ. ಉದ್ದದ ಮೆಟ್ರೊ ರೈಲು ಸಂಪರ್ಕದ ನಿರ್ಮಾಣದ ಅಧ್ಯಯನ ನಡೆಸಲು ಟೆಂಡರ್‌ ಕರೆಯಲಿದೆ. ತಮಿಳುನಾಡು

➤ ಶೀಘ್ರದಲ್ಲಿಯೇ ತಮಿಳುನಾಡು ಕರ್ನಾಟಕ ನಡುವೆ ಮೆಟ್ರೊ ಸಂಚಾರ Read More »

ಕರ್ನಾಟಕ, ರಾಷ್ಟ್ರೀಯ ನ್ಯೂಸ್

ಗಡಿಯಲ್ಲಿ ಕಳ್ಳಸಾಗಣೆ ➤ ಡ್ರಗ್ಸ್, ಶಸ್ತ್ರಾಸ್ತ್ರ ವಶಕ್ಕೆ ಪಡೆದ BFF

(ನ್ಯೂಸ್ ಕಡಬ)newskadaba.com  ನವದೆಹಲಿ, ಫೆ.18. ಪಾಕಿಸ್ತಾನದಿಂದ ಕಳ್ಳಸಾಗಣೆ ಪ್ರಯತ್ನವನ್ನು ವಿಫಲಗೊಳಿಸಿದ ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಮಾದಕ ದ್ರವ್ಯಗಳು, ಚೀನಾ ಮತ್ತು ಟರ್ಕಿ ನಿರ್ಮಿತ ಪಿಸ್ತೂಲ್‌ಗಳು ಮತ್ತು 242 ಸುತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಂಡಿದೆ ಎನ್ನಲಾಗಿದೆ. ಗುರುದಾಸ್‌ಪುರ ಸೆಕ್ಟರ್‌ನ ಡೇರಾ ಬಾಬಾ ನಾನಕ್ (ಡಿಬಿಎನ್) ಮತ್ತು ಶಿಕಾರ್ ಗಡಿ ಪೋಸ್ಟ್‌ನ ಬಳಿ ಗಡಿ ಬೇಲಿಯ ಎರಡೂ ಬದಿಗಳಲ್ಲಿ ಶಸ್ತ್ರಸಜ್ಜಿತ ಕಳ್ಳಸಾಗಾಣಿಕೆದಾರರ ಚಲನವಲನಗಳ ಮೇಲೆ ಭದ್ರತಾ ಪಡೆಗಳು ನಿಗಾವಹಿಸಲಾಗಿತ್ತು.

ಗಡಿಯಲ್ಲಿ ಕಳ್ಳಸಾಗಣೆ ➤ ಡ್ರಗ್ಸ್, ಶಸ್ತ್ರಾಸ್ತ್ರ ವಶಕ್ಕೆ ಪಡೆದ BFF Read More »

ರಾಷ್ಟ್ರೀಯ ನ್ಯೂಸ್

ಶಾಲೆಯಲ್ಲಿ ರಾಗಿಂಗ್     ➤ ಓರ್ವ ವಿದ್ಯಾರ್ಥಿಗೆ ಗಾಯ

(ನ್ಯೂಸ್ ಕಡಬ)newskadaba.com  ಕಾಸರಗೋಡು, ಫೆ.18. ಪೈವಳಿಕೆ ಸರಕಾರಿ ಶಾಲೆಯಲ್ಲಿ ರಾಗಿಂಗ್ ಪ್ರಕರಣವೊಂದು ನಡೆದಿದ್ದು, ಪ್ಲಸ್ ಟು ವಿದ್ಯಾರ್ಥಿ ಮೇಲೆ 15 ರಷ್ಟು ವಿದ್ಯಾರ್ಥಿಗಳು ಕಿರುಕುಳ ನೀಡಿರುವುದಾಗಿ ದೂರಲಾಗಿದೆ. ವಿದ್ಯಾರ್ಥಿಗೆ ಕಲ್ಲಿನಿಂದ ತಲೆ ಮತ್ತು ಹಣೆಗೆ ಹಲ್ಲೆ ಜಜ್ಜಲಾಗಿದೆ. ಇದಲ್ಲದೆ ಬೆಳ್ಳುಳ್ಳಿಯ ಸ್ಪ್ರೇಯನ್ನು ಕಣ್ಣಿಗೆ ಸ್ಪ್ರೇ ಮಾಡಲಾಗಿದೆ. ಬಳಿಕ ಥಳಿಸಲಾಗಿದೆ. ಪೈವಳಿಕೆ ಕಾಯರ್ ಕಟ್ಟೆ ಜಿ. ಎಚ್ .ಎಸ್ ಶಾಲೆಯ ವಿದ್ಯಾರ್ಥಿ ಮುಹಮ್ಮದ್ ಅದ್ನಾನ್ (17) ರ್‍ಯಾಗಿಂಗ್ ಗೆ ಒಳಗಾದವನು.  

ಶಾಲೆಯಲ್ಲಿ ರಾಗಿಂಗ್     ➤ ಓರ್ವ ವಿದ್ಯಾರ್ಥಿಗೆ ಗಾಯ Read More »

ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್

MEIF ವತಿಯಿಂದ  SSLC  ವಿದ್ಯಾರ್ಥಿಗಳಿಗೆ  ತರಬೇತಿ  ಕಾರ್ಯಗಾರ

(ನ್ಯೂಸ್ ಕಡಬ) newskadaba.com ಉಪ್ಪಿನಂಗಡಿಫೆ.18.  ಮುಸ್ಲಿಂ ಶಿಕ್ಷಣ ಸಂಸ್ಥೆಗಳ ಒಕ್ಕೂಟ ದ.ಕ ,ಡುಪಿ ಜಿಲ್ಲೆ(MEIF)ವತಿಯಿಂದ   ಉಭಯ   ಜಿಲ್ಲೆಗಳಲ್ಲಿ  ಹಮ್ಮಿಕೊಂಡ  ಸರಣಿ  SSLC  ತರಬೇತಿ  ಆಂದೋಲನದ  6ನೇ  ಕಾರ್ಯಾಗಾರವು  ಉಪ್ಪಿನಂಗಡಿಯ  ಅರಫಾ  ವಿದ್ಯಾಕೇಂದ್ರದಲ್ಲಿ  ಇಂದು   ನಡೆಯಿತು.  ಅರಫಾ  ವಿದ್ಯಾ  ಕೇಂದ್ರದ  ಅಧ್ಯಕ್ಷ  ಕೆ.ಪಿ.ಎ.  ಸಿದ್ದೀಕ್  ಹಾಜಿ ಕಾರ್ಯಕ್ರಮವನ್ನು  ಉದ್ಘಾಟಿಸಿದರು. MEIF ಈಸ್ಟ್  ಝೋನ್ ಉಪಾಧ್ಯಕ್ಷ  ಕೆ. ಎಂ.  ಮುಸ್ತಫಾ  ಸುಳ್ಯ  ಅಧ್ಯಕ್ಷತೆ  ವಹಿಸಿದ್ದರು. ವಿದ್ಯಾರ್ಥಿಗಳಲ್ಲಿ  ಆತ್ಮವಿಶ್ವಾಸ  ಮೂಡಿಸಿ,  ಪರೀಕ್ಷೆ  ಎದುರಿಸುವ  ವಿಧಾನಗಳ  ಬಗ್ಗೆ  ಸಂಪನ್ಮೂಲ  ವ್ಯಕ್ತಿಯಾಗಿ  ರಾಷ್ಟೀಯ ತರಬೇತಿದಾರ

MEIF ವತಿಯಿಂದ  SSLC  ವಿದ್ಯಾರ್ಥಿಗಳಿಗೆ  ತರಬೇತಿ  ಕಾರ್ಯಗಾರ Read More »

ಕರಾವಳಿ

ಅಜ್ಜಿಗೆ ಗುಂಡಿಟ್ಟ 6 ವರ್ಷದ ಬಾಲಕಿ!!

(ನ್ಯೂಸ್ ಕಡಬ) newskadaba.com ಫ್ಲೋರಿಡಾ, ಫೆ.18. ಫ್ಲೋರಿಡಾ ರಾಜ್ಯದಲ್ಲಿ 6 ವರ್ಷದ ಬಾಲಕಿಯೊಬ್ಬಳು ತನ್ನ ಸ್ವಂತ ಅಜ್ಜಿಯ ಮೇಲೆ ಗುಂಡು ಹಾರಿಸಿದ ಘಟನೆ ಬೆಳಕಿಗೆ ಬಂದಿದೆ. ಅಮೆರಿಕದಲ್ಲಿ ಮುಕ್ತವಾಗಿ ಗನ್ ಲೈಸೆನ್ಸ್ ನೀಡುವ ಬಗ್ಗೆ ಸಾಕಷ್ಟು ಚರ್ಚೆ, ವಾದ ಪ್ರತಿವಾದಗಳು ನಡೆಯುತ್ತಿರುವ ಹೊತ್ತಲ್ಲೇ ಈ ಘಟನೆ ನಡೆದಿದೆ. ಅದೃಷ್ಟವಶಾತ್, ಮೊಮ್ಮಗಳಿಂದ ಗುಂಡು ಬಡಿದ ಮಹಿಳೆಗೆ ಪ್ರಾಣಾಪಾಯವಾಗಿಲ್ಲ. 57 ವರ್ಷದ ಈಕೆಗೆ ಬೆನ್ನಿನ ಕೆಳಭಾಗದಲ್ಲಿ ಗಾಯಗೊಂಡಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ವರದಿಯಾಗಿದೆ. 6 ವರ್ಷದ ಬಾಲಕಿಯನ್ನು ಪೊಲೀಸರು ವಿಚಾರಣೆ ನಡೆಸಿದ್ದಾರೆ. ಈಕೆ ಆಕಸ್ಮಿಕವಾಗಿ ಗುಂಡು ಹಾರಿಸಿದ್ದು ಎಂಬ ವಿಚಾರ ಸದ್ಯಕ್ಕೆ

ಅಜ್ಜಿಗೆ ಗುಂಡಿಟ್ಟ 6 ವರ್ಷದ ಬಾಲಕಿ!! Read More »

ಅಂತರ್ರಾಷ್ಟ್ರೀಯ ನ್ಯೂಸ್

ಫೆ.23ಕ್ಕೆ ಸಂಡೂರಿಗೆ ಅಮಿತ್ ಶಾ ನೇತೃತ್ವದಲ್ಲಿ ಬೃಹತ್‌ ಸಮಾವೇಶ      ➤ ಸಚಿವ ಬಿ. ಶ್ರೀರಾಮುಲು

(ನ್ಯೂಸ್ ಕಡಬ)newskadaba.com  ಬಳ್ಳಾರಿ, ಫೆ.18. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಫೆ.23ರಂದು ಸಂಡೂರಿಗೆ ಆಗಮಿಸಲಿದ್ದು, ಸಾರ್ವಜನಿಕ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆಂದು ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವ ಬಿ.ಶ್ರೀರಾಮುಲು ಅವರು ಹೇಳಿದ್ದಾರೆ. ನಗರದ ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ತೋರಣಗಲ್ಲಿನಲ್ಲಿ ಬಳ್ಳಾರಿ, ರಾಯಚೂರು, ಕೊಪ್ಪಳ, ವಿಜಯನಗರ ಜಿಲ್ಲೆಗಳ ಬಿಜೆಪಿ ಪಕ್ಷದ ಮುಖಂಡರೊಂದಿಗೆ ಸಭೆ ನಡೆಸಲಿದ್ದಾರೆ. ಸಂಡೂರಿನಲ್ಲಿ ನಡೆಯುವ ಸಮಾವೇಶದಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಜನರು ಭಾಗವಹಿಸಲಿದ್ದಾರೆ ಎಂದು ಹೇಳಿದರು.  

ಫೆ.23ಕ್ಕೆ ಸಂಡೂರಿಗೆ ಅಮಿತ್ ಶಾ ನೇತೃತ್ವದಲ್ಲಿ ಬೃಹತ್‌ ಸಮಾವೇಶ      ➤ ಸಚಿವ ಬಿ. ಶ್ರೀರಾಮುಲು Read More »

ಕರ್ನಾಟಕ
Scroll to Top