newskadaba

ತೂಗುಸೇತುವೆಗಳ ಸರದಾರ’ ಪದ್ಮಶ್ರೀ ಡಾ. ಗಿರೀಶ್ ಭಾರದ್ವಾಜ್ ನಿಧನಕ್ಕೆ ಸಂಸದ ಕ್ಯಾ. ಚೌಟ ತೀವ್ರ ಸಂತಾಪ

(ನ್ಯೂಸ್ ಕಡಬ) newskadaba.com ಜು. 07. ವಿಶಿಷ್ಟ ತಂತ್ರಜ್ಞಾನದ ಮೂಲಕ ಪರಿಸರ ಸ್ನೇಹಿ ತೂಗುಸೇತುವೆಗಳನ್ನು ನಿರ್ಮಿಸಿ ದೇಶದ ಗ್ರಾಮೀಣ ಭಾಗಗಳಲ್ಲಿ ಸಂಪರ್ಕ ಕ್ರಾಂತಿಗೆ ಕಾರಣರಾಗಿದ್ದ, ‘ತೂಗುಸೇತುವೆಗಳ ಸರದಾರ’ ಎಂದೇ ಖ್ಯಾತರಾಗಿದ್ದ ತುಳುನಾಡಿನ ಮಹಾನ್ ಸಾಧಕ, ಪದ್ಮಶ್ರೀ ಪುರಸ್ಕೃತ ಡಾ. ಗಿರೀಶ್ ಭಾರದ್ವಾಜ್ ಅವರ ನಿಧನಕ್ಕೆ ಬಿಜೆಪಿ ರಾಜ್ಯ ಕಾರ್ಯದರ್ಶಿ ಹಾಗೂ ದ. ಕ. ಸಂಸದ ಕ್ಯಾ. ಬ್ರಿಜೇಶ್‌ ಚೌಟ ಅವರು ತೀವ್ರ ಸಂತಾಪ ಸೂಚಿಸಿದ್ದಾರೆ.   ತಮ್ಮ ಶೋಕ ಸಂದೇಶದಲ್ಲಿ , “ಸಾಮಾನ್ಯ ಹಳ್ಳಿಗಳ ಜನಸಾಮಾನ್ಯರ ಹಾಗೂ […]

ತೂಗುಸೇತುವೆಗಳ ಸರದಾರ’ ಪದ್ಮಶ್ರೀ ಡಾ. ಗಿರೀಶ್ ಭಾರದ್ವಾಜ್ ನಿಧನಕ್ಕೆ ಸಂಸದ ಕ್ಯಾ. ಚೌಟ ತೀವ್ರ ಸಂತಾಪ Read More »

ಕರಾವಳಿ

ಜುಲೈ 9ರಂದು ಸುಬ್ರಹ್ಮಣ್ಯದಲ್ಲಿ ಪತ್ರಿಕಾ ದಿನಾಚರಣೆ

(ನ್ಯೂಸ್ ಕಡಬ) newskadaba.com ಕಡಬ, ಜು. 07. ಕಡಬ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ ಇದರ ನೇತೃತ್ವದಲ್ಲಿ ಸುಬ್ರಹ್ಮಣ್ಯ ಪ್ರೆಸ್ ಕ್ಲಬ್ ಸಹಯೋಗದಲ್ಲಿ ಸುಬ್ರಹ್ಮಣ್ಯದ ಶ್ರೀ ಸುಬ್ರಹ್ಮಣ್ಯೇಶ್ವರ ಪದವಿಪೂರ್ವ ಕಾಲೇಜಿನ ಬೆಳ್ಳಿಹಬ್ಬ ಸಭಾಂಗಣದಲ್ಲಿ ಜುಲೈ 9ನೇ ಗುರುವಾರದಂದು ಪತ್ರಿಕಾ ದಿನಾಚರಣೆ ಕಾರ್ಯಕ್ರಮ ನಡೆಯಲಿದೆ.   ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಹರೀಶ್ ಎಸ್. ಇಂಜಾಡಿ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ.  ಕಡಬ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ಎಸ್.ಬಾಲಕೃಷ್ಣ ಕೊಯಿಲ ಅಧ್ಯಕ್ಷತೆ ವಹಿಸಲಿದ್ದಾರೆ. ಕುಕ್ಕೆ

ಜುಲೈ 9ರಂದು ಸುಬ್ರಹ್ಮಣ್ಯದಲ್ಲಿ ಪತ್ರಿಕಾ ದಿನಾಚರಣೆ Read More »

ಕರಾವಳಿ

ಕ್ಷಣಿಕ ಸೆಲ್ಫಿ ವ್ಯಾಮೋಹ ಮಲ್ಲಳ್ಳಿ ಜಲಪಾತದಲ್ಲಿ ಜವರಾಯನಿಂದ ಜಸ್ಟ್ ಮಿಸ್!

(ನ್ಯೂಸ್ ಕಡಬ) newskadaba.com ಜು. 07.ಕೊಡಗಿನ ಮಲ್ಲಳ್ಳಿ ಜಲಪಾತದಲ್ಲಿ ಒಂದು ಕ್ಷಣದ ಹುಚ್ಚಾಟ, ಇಡೀ ಜೀವವನ್ನೇ ಪಣಕ್ಕಿಟ್ಟ ಘಟನೆ ನಡೆದಿದೆ. ಕೇವಲ ಫೋಟೋ ಮತ್ತು ಸೆಲ್ಫಿಗಾಗಿ ಜಲಪಾತದ ರೌದ್ರ ರೂಪದ ನಡುವೆಯೇ ನುಗ್ಗಿದ ಬೆಂಗಳೂರಿನ ಇಬ್ಬರು ವಿದ್ಯಾರ್ಥಿಗಳು, ಸಾವಿನ ದವಡೆಗೆ ಸಿಲುಕಿ ಕೊನೆಗೂ ಅಗ್ನಿಶಾಮಕ ಸಿಬ್ಬಂದಿಯ ಸಮಯಪ್ರಜ್ಞೆಯಿಂದ ಪಾರಾಗಿದ್ದಾರೆ. ಮೂಲತಃ ಆಂಧ್ರಪ್ರದೇಶದವರಾದ, ಬೆಂಗಳೂರಿನಲ್ಲಿ ವ್ಯಾಸಂಗ ಮಾಡುತ್ತಿರುವ ಸಂತೋಷ್ ಕುಮಾರ್ ಮತ್ತು ಗಣೇಶ್ ನಾಯಕ್ ಎಂಬ ಇಬ್ಬರು ವಿದ್ಯಾರ್ಥಿಗಳು ಸೋಮವಾರಪೇಟೆ ತಾಲೂಕಿನ ಮಲ್ಲಳ್ಳಿ ಜಲಪಾತಕ್ಕೆ ಪ್ರವಾಸಕ್ಕೆ ಬಂದು, ಮಳೆಗಾಲದ ರಭಸದ ನಡುವೆಯೂ

ಕ್ಷಣಿಕ ಸೆಲ್ಫಿ ವ್ಯಾಮೋಹ ಮಲ್ಲಳ್ಳಿ ಜಲಪಾತದಲ್ಲಿ ಜವರಾಯನಿಂದ ಜಸ್ಟ್ ಮಿಸ್! Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್, ವೀಡಿಯೋ

ಗಡಾಯಿಕಲ್ಲು ಚಾರಣಕ್ಕೆ ಜುಲೈ 8ರಿಂದ ಬ್ರೇಕ್..!!

(ನ್ಯೂಸ್ ಕಡಬ) newskadaba.com ಬೆಳ್ತಂಗಡಿ, ಜು. 07. ನಿರಂತರವಾಗಿ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ನಡ ಗ್ರಾಮದ ಜಮಲಾಬಾದ್ ಗಡ (ಗಡಾಯಿಕಲ್ಲು) ಚಾರಣ ನಡೆಸುವುದು ಅಪಾಯಕಾರಿಯಾಗಿರುವ ಕಾರಣ ಜು. 8 ರಿಂದ ಮುಂದಿನ ಆದೇಶದ ವರೆಗೆ ಗಡಾಯಿಕಲ್ಲು ಚಾರಣಕ್ಕೆ ನಿರ್ಬಂಧ ಹೇರಲಾಗಿದೆ ಎಂದು ಅರಣ್ಯ ಇಲಾಖೆಯ ವನ್ಯಜೀವಿ ವಿಭಾಗದ ಬೆಳ್ತಂಗಡಿ ವಲಯ ಅರಣ್ಯಾಧಿಕಾರಿಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಗಡಾಯಿಕಲ್ಲು ಚಾರಣಕ್ಕೆ ಜುಲೈ 8ರಿಂದ ಬ್ರೇಕ್..!! Read More »

ಕರಾವಳಿ
crime, arrest, suspected

ಮಗುವಿನ ಅಳುವಿಗೆ ಸಿಟ್ಟುಗೊಂಡು ನೆಲಕ್ಕೆ ಎಸೆದ ತಂದೆ ಬೆಂಗಳೂರಿನಲ್ಲಿ ದಂಪತಿ ಅರೆಸ್ಟ್

(ನ್ಯೂಸ್ ಕಡಬ) newskadaba.com ಜು. 07. ಹನ್ನೊಂದು ತಿಂಗಳ ಹೆಣ್ಣುಮಗುವೊಂದನ್ನು ಕೊಲೆಮಾಡಿ, ಆ ಸಾವನ್ನು ಅಪಘಾತವೆಂದು ಬಿಂಬಿಸಲು ಪ್ರಯತ್ನಿಸಿದ ಆರೋಪದ ಮೇಲೆ ಮಗುವಿನ ಹೆತ್ತವರನ್ನು ​ಪೊಲೀಸರು ಬಂಧಿಸಿದ ಘಟನೆ ಬೆಂಗಳೂರಿನ ಅವಲಹಳ್ಳಿಯ ಕಿಟಗನೂರಿನಲ್ಲಿ ನಡೆದಿದೆ.   ಬಂಧಿತ ಆರೋಪಿಗಳನ್ನು ತಂದೆ ಶೇಕಪ್ಪ ಮತ್ತು ತಾಯಿ ವಿಜಯಲಕ್ಷ್ಮೀ ಎಂದು ಗುರುತಿಸಲಾಗಿದೆ. ಘಟನೆಯ ಪ್ರಕಾರ, ಜೂನ್ 9ರಂದು ದಂಪತಿ ನಡುವಿನ ಜಗಳದ ನಡೆದಿದ್ದು, ಈ ವೇಳೆ ಮಗು ಅಳುತ್ತಿದ್ದಕ್ಕೆ ಸಿಟ್ಟಿಗೆದ್ದ ತಂದೆ ಶೇಕಪ್ಪ ಮಗುವನ್ನು ನೆಲಕ್ಕೆ ಬಲವಾಗಿ ಎಸೆದಿದ್ದಾರೆ. ಇದರಿಂದ

ಮಗುವಿನ ಅಳುವಿಗೆ ಸಿಟ್ಟುಗೊಂಡು ನೆಲಕ್ಕೆ ಎಸೆದ ತಂದೆ ಬೆಂಗಳೂರಿನಲ್ಲಿ ದಂಪತಿ ಅರೆಸ್ಟ್ Read More »

ಕರ್ನಾಟಕ, ಕ್ರೈಮ್ ನ್ಯೂಸ್

ನಾಗುರಿ ದುರಂತ ನಿರ್ವಹಣೆ: ಅಗ್ನಿಶಾಮಕ ಅಧಿಕಾರಿಗೆ ಕೃತಜ್ಞತಾ ಪತ್ರ

(ನ್ಯೂಸ್ ಕಡಬ) newskadaba.com ಮಂಗಳೂರು, ಜು. 07. ಕಂಕನಾಡಿಯ ನಾಗುರಿಯಲ್ಲಿ ಜುಲೈ 1 ರಂದು ನಡೆದಿದ್ದ ಮನೆ ಕುಸಿತ ದುರಂತ ಸಂದರ್ಭದಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಸಿದ್ದ ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಮಹಮ್ಮದ್ ಝುಲ್ಫಿಕರ್ ನವಾಜ್ ಕೆ.ಪಿ. ಅವರಿಗೆ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದಿಂದ ಭಾನುವಾರ ಶ್ಲಾಘನೀಯ ಮತ್ತು ಕೃತಜ್ಞತಾ ಪತ್ರ ಸಲ್ಲಿಸಲಾಯಿತು. ರಕ್ಷಣಾ ಕಾರ್ಯಾಚರಣೆ ಮೂಲಕ ಅಮೂಲ್ಯ ಜೀವಗಳನ್ನು ರಕ್ಷಿಸುವಲ್ಲಿ ಪ್ರದರ್ಶಿಸಿದ ಅಪ್ರತಿಮ ಧೈರ್ಯ, ಸಮಯಪ್ರಜ್ಞೆ ಮತ್ತು ನಿಸ್ವಾರ್ಥ ಸೇವೆ ಹಿನ್ನೆಲೆಯಲ್ಲಿ ಪ್ರಾಕೃತಿಕ ವಿಕೋಪ ಪ್ರಗತಿ ಪರಿಶೀಲನಾ

ನಾಗುರಿ ದುರಂತ ನಿರ್ವಹಣೆ: ಅಗ್ನಿಶಾಮಕ ಅಧಿಕಾರಿಗೆ ಕೃತಜ್ಞತಾ ಪತ್ರ Read More »

ಕರಾವಳಿ

ಇಂದು ತುಳು ಚಳುವಳಿ – ಆನಿರ್ದ್ ಇನಿಕ್ ಕಾರ್ಯಕ್ರಮ

(ನ್ಯೂಸ್ ಕಡಬ) newskadaba.com ಮಂಗಳೂರು, ಜು. 07. ಮಂಗಳೂರು ವಿಶ್ವವಿದ್ಯಾನಿಲಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ  ತುಳುಪೀಠದ ವತಿಯಿಂದ  ಶ್ರೀ ಗೋಕರ್ಣನಾಥೇಶ್ವರ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯ, ಗಾಂಧಿನಗರ ಮಂಗಳೂರು ಸಂಯುಕ್ತ ಆಶ್ರಯದಲ್ಲಿ ತುಳು ಚಳುವಳಿ – ಆನಿರ್ದ್ ಇನಿಕ್ ಎಂಬ ಕಾರ್ಯಕ್ರಮ  ಜುಲೈ 7 ರಂದು  ಮಧ್ಯಾಹ್ನ 2:30 ಗಂಟೆಗೆ ನಗರದ  ಗಾಂಧಿನಗರ ಶ್ರೀ ಗೋಕರ್ಣನಾಥೇಶ್ವರ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯದಲ್ಲಿ ನಡೆಯಲಿದೆ. ಕಾರ್ಯಕ್ರಮವನ್ನು ಶ್ರೀ ಗೋಕರ್ಣನಾಥೇಶ್ವರ ಎಜ್ಯುಕೇಷನಲ್ ಇನ್ಸ್ಟಿಟ್ಯೂಷನ್ ಸಂಚಾಲಕ ವಸಂತ ಕಾರಂದೂರ್ ಉದ್ಘಾಟಿಸಲಿದ್ದು, ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ

ಇಂದು ತುಳು ಚಳುವಳಿ – ಆನಿರ್ದ್ ಇನಿಕ್ ಕಾರ್ಯಕ್ರಮ Read More »

ಕರಾವಳಿ

ಜುಲೈ 20 ರಿಂದ ಮಹಿಳೆಯರಿಗೆ ಉದ್ಯಮಶೀಲತಾ ಅಭಿವೃದ್ಧಿ ಕಾರ್ಯಕ್ರಮ

(ನ್ಯೂಸ್ ಕಡಬ) newskadaba.com ಮಂಗಳೂರು, ಜು. 07. ಕೌಶಲ್ಯಾಭಿವೃದ್ಧಿ, ಉದ್ಯಮಶೀ¯ತೆ ಮತ್ತು ಜೀವನೋಪಾಯ ಇಲಾಖೆ, ಬೆಂಗಳೂರು ಇವರ ಪ್ರಾಯೋಜಕತ್ವದಲ್ಲಿ ಕರ್ನಾಟಕ ಉದ್ಯಮಶೀಲತಾ ಅಭಿವೃದ್ಧಿ ಕೇಂದ್ರ (ಸಿಡಾಕ್), ಧಾರವಾಡ, ಸಿಡಾಕ್, ಮಂಗಳೂರು, ಜಿಲ್ಲಾ ಕೈಗಾರಿಕಾ ಕೇಂದ್ರ ಹಾಗೂ ಜಿಲ್ಲಾ ಕೌಶಲ್ಯ ಮಿಶನ್ ಮಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ಸ್ವಂತ ಉದ್ಯೋಗವನ್ನು ಸ್ಥಾಪಿಸಲು ಇಚ್ಚಿಸುವವರಿಗಾಗಿ ಹತ್ತು ದಿನಗಳ ಉದ್ಯಮಶೀಲತಾ ಅಭಿವೃದ್ಧಿ ಕಾರ್ಯಕ್ರಮವನ್ನು  ಮಹಿಳಾ ಅಭ್ಯರ್ಥಿಗಳಿಗೆ ಜುಲೈ 20 ರಿಂದ  ಜುಲೈ 30 ರವರೆಗೆ ನಗರದ ಕೊಟ್ಟಾರ ಭಾರತಿ ಟ್ರೈನಿಂಗ್ ಸೆಂಟರ್‍ನಲ್ಲಿ

ಜುಲೈ 20 ರಿಂದ ಮಹಿಳೆಯರಿಗೆ ಉದ್ಯಮಶೀಲತಾ ಅಭಿವೃದ್ಧಿ ಕಾರ್ಯಕ್ರಮ Read More »

ಕರಾವಳಿ

ಸಹಕಾರ ಡಿಪ್ಲೊಮಾ ಕೋರ್ಸ್ ಪ್ರವೇಶ: ಅರ್ಜಿ ಆಹ್ವಾನ

(ನ್ಯೂಸ್ ಕಡಬ) newskadaba.com ಮಂಗಳೂರು, ಜು. 07. ಜುಲೈ 1 ರಿಂದ ಪ್ರಾರಂಭವಾಗುವ 6 ತಿಂಗಳ ಅವಧಿಯ ರೆಗ್ಯೂಲರ್ ಮತ್ತು ದೂರ ಶಿಕ್ಷಣ  ಡಿಪ್ಲೊಮಾ ಇನ್ ಕೋ-ಆಪರೇಟಿವ್ ಮ್ಯಾನೇಜ್‍ ಮೆಂಟ್ ಕೋರ್ಸ್‍ ಗೆ ದಕ್ಷಿಣ ಕನ್ನಡ, ಉಡುಪಿ ಮತ್ತು ಕಾಸರಗೋಡು ಜಿಲ್ಲೆಗಳ ಸಾಮಾನ್ಯ ಹಾಗೂ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಂದ ಮತ್ತು ಎಲ್ಲಾ ವಿವಿಧ ಸಹಕಾರ ಸಂಘ/ಬ್ಯಾಂಕ್‍ ಗಳ ಉದ್ಯೋಗಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಿ ಪ್ರವೇಶ ಪಡೆಯಲು ಜುಲೈ 18 ಕೊನೆಯ ದಿನ. ಕನಿಷ್ಠ ವಿದ್ಯಾರ್ಹತೆ

ಸಹಕಾರ ಡಿಪ್ಲೊಮಾ ಕೋರ್ಸ್ ಪ್ರವೇಶ: ಅರ್ಜಿ ಆಹ್ವಾನ Read More »

ಕರಾವಳಿ

ಯುವನಿಧಿ ಸ್ವಯಂ ಘೋಷಣೆ ಕಡ್ಡಾಯ

(ನ್ಯೂಸ್ ಕಡಬ) newskadaba.com ಮಂಗಳೂರು, ಜು. 07. ಯುವನಿಧಿ ಯೋಜನೆಯ ಸೌಲಭ್ಯವನ್ನು ಪಡೆಯಲು ಫಲಾನುಭವಿಗಳು ಪ್ರತೀ ತಿಂಗಳು ಸ್ವಯಂ ಘೋಷಣೆಯನ್ನು ಮಾಡಬೇಕು. ಯುವನಿಧಿ ಯೋಜನೆಯಲ್ಲಿ ಪದವಿ, ಸ್ನಾತಕೋತ್ತರ ಪದವಿ, ಡಿಪ್ಲೋಮಾಗಳನ್ನು 2023, 2024, 2025 ಅಥವಾ 2026ರ ವರ್ಷದಲ್ಲಿ ತೇರ್ಗಡೆ ಹೊಂದಿ ಅರ್ಹತೆ ಪಡೆದಿರುವ ಅಭ್ಯರ್ಥಿಗಳು ಈಗಾಗಲೇ ಸೇವಾಸಿಂಧು ಪೋರ್ಟಲ್‍ನಲ್ಲಿ ನೋಂದಣಿಯಾಗಿದ್ದು ಹಾಗೂ ಫಲಿತಾಂಶದ ನಂತರ ನಿರುದ್ಯೋಗಿಗಳಾಗಿ 180 ದಿವಸಗಳು ಪೂರೈಸಿದ ಅಭ್ಯರ್ಥಿಗಳಿಗೆ ನೇರ ನಗದು ವರ್ಗಾವಣೆ ಮಾಡಲಾಗುತ್ತದೆ. ಅಭ್ಯರ್ಥಿಗಳು ಈ ಪ್ರಯೋಜನವನ್ನು ಪ್ರತಿ ತಿಂಗಳು ಪಡೆಯಬೇಕಿದ್ದರೆ,

ಯುವನಿಧಿ ಸ್ವಯಂ ಘೋಷಣೆ ಕಡ್ಡಾಯ Read More »

ಕರಾವಳಿ
Scroll to Top