newskadaba

ಡ್ರೈವಿಂಗ್ ಲೈಸೆನ್ಸ್ ಪಡೆಯಲು ಜನನ ಸರ್ಟಿಫಿಕೇಟ್ ಕಡ್ಡಾಯ..!

(ನ್ಯೂಸ್ ಕಡಬ) newskadaba.com ನವದೆಹಲಿ, ಸೆ. 15. ಶಿಕ್ಷಣ ಸಂಸ್ಥೆಗೆ ಪ್ರವೇಶ, ಡ್ರೈವಿಂಗ್ ಲೈಸೆನ್ಸ್ ಪಡೆಯಲು, ಮತದಾರರ ಪಟ್ಟಿ ತಿದ್ದುಪಡಿ, ಆಧಾರ್ ಸಂಖ್ಯೆ, ಮದುವೆ ನೋಂದಣಿ ಹಾಗೂ ಸರ್ಕಾರಿ ಉದ್ಯೋಗ ನೇಮಕಾತಿ ಮೊದಲಾದ ಸೇವೆಗಳನ್ನು ಪಡೆಯಲು ಅಕ್ಟೋಬರ್ 1ರಿಂದ, ಜನನ ಪ್ರಮಾಣಪತ್ರ ಕಡ್ಡಾಯ ದಾಖಲೆಯಾಗಿರುತ್ತದೆ ಎಂದು ಜನನ ಮತ್ತು ಮರಣಗಳ ನೋಂದಣಿ ಕಾಯಿದೆ 2023ರ ಅನುಷ್ಠಾನವನ್ನು ಕೇಂದ್ರ ಗೃಹ ಸಚಿವಾಲಯ ಘೋಷಿಸಿದೆ. ಜನನ ಪ್ರಮಾಣಪತ್ರ ಪಡೆಯುವುದರಿಂದ ಜನನ ಮತ್ತು ಮರಣಗಳ ಡೇಟಾ ಬೇಸ್ ರಚನೆಗೆ ಸಹಾಯವಾಗುತ್ತದೆ ಮತ್ತು […]

ಡ್ರೈವಿಂಗ್ ಲೈಸೆನ್ಸ್ ಪಡೆಯಲು ಜನನ ಸರ್ಟಿಫಿಕೇಟ್ ಕಡ್ಡಾಯ..! Read More »

ಕರ್ನಾಟಕ

ಬಳಕೆದಾರರ ಗಮನಕ್ಕೆ ತಾರದೇ ಗೌಪ್ಯ ಮಾಹಿತಿ ಸಂಗ್ರಹ – ಗೂಗಲ್ ಗೆ 7000 ಕೋಟಿ ರೂ. ದಂಡ

(ನ್ಯೂಸ್ ಕಡಬ) newskadaba.com ನವದೆಹಲಿ, ಸೆ. 15. ಬಳಕೆದಾರರಿಗೆ ತಿಳಿಸದೇ ಅವರ ಸ್ಥಳದ ಮಾಹಿತಿಯನ್ನು ಗೌಪ್ಯವಾಗಿ ಸಂಗ್ರಹಿಸುತ್ತಿರುವ ಆರೋಪದ ಹಿನ್ನೆಲೆ ಇದೀಗ ಗೂಗಲ್‌ ಸಂಸ್ಥೆಯು 7000 ಕೋಟಿ ರೂ. ದಂಡ ಪಾವತಿಸಬೇಕಾಗಿದೆ ಎಂದು ವರದಿಯೊಂದು ತಿಳಿಸಿದೆ. ಬಳಕೆದಾರರು ಲೊಕೇಷನ್‌ ಹಿಸ್ಟರಿ ಆಫ್‌ ಮಾಡಿದ್ದರೂ ಅವರು ಇರುವ ಸ್ಥಳದ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಗೂಗಲ್‌ ತನ್ನ ಬಳಕೆದಾರರ ಗಮನಕ್ಕೆ ತಾರದೇ ಅವರ ವಿವಿಧ ಮಾಹಿತಿಗಳನ್ನು ಗೌಪ್ಯವಾಗಿ ಸಂಗ್ರಹಿಸುತ್ತಿದೆ. ಇದರಿಂದ ಗೂಗಲ್‌ ಬಳಕೆದಾರರಿಗೆ ಅಪಾಯ ಎದುರಾಗಬಹುದು. ಖಾಸಗಿತನಕ್ಕೆ ಇದು ಧಕ್ಕೆ ಆಗುತ್ತಿದೆ

ಬಳಕೆದಾರರ ಗಮನಕ್ಕೆ ತಾರದೇ ಗೌಪ್ಯ ಮಾಹಿತಿ ಸಂಗ್ರಹ – ಗೂಗಲ್ ಗೆ 7000 ಕೋಟಿ ರೂ. ದಂಡ Read More »

ಅಂತರ್ರಾಷ್ಟ್ರೀಯ ನ್ಯೂಸ್, ತಂತ್ರಜ್ಞಾನ

ಸಿಂಗಾಪುರದ ನೂತನ ಅಧ್ಯಕ್ಷರಾಗಿ ಭಾರತ ಮೂಲದ ಥರ್ಮನ್ ಷಣ್ಮುಗರತ್ನಂ ಪ್ರಮಾಣವಚನ ಸ್ವೀಕಾರ

(ನ್ಯೂಸ್ ಕಡಬ) newskadaba.com  ಸಿಂಗಾಪುರ, ಸೆ. 15. ಸಿಂಗಾಪುರದ ನೂತನ ಅಧ್ಯಕ್ಷರಾಗಿ ಭಾರತ ಮೂಲದ ಥರ್ಮನ್ ಷಣ್ಮುಗರತ್ನಂ ಅವರು ಪ್ರಮಾಣವಚನ ಸ್ವೀಕರಿಸಿದ್ದಾರೆ. ಸಿಂಗಾಪುರದಲ್ಲಿ ಈ ಮೊದಲು ಅಧ್ಯಕ್ಷರಾಗಿದ್ದ ಹಲೀಮಾ ಯಾಕೋಬ್ ಅವರ ಅಧಿಕಾರಾವಧಿ ಸೆಪ್ಟೆಂಬರ್ 13ರಂದು ಕೊನೆಗೊಂಡಿದ್ದು, ಇದೀಗ ಥರ್ಮನ್ ಸಿಂಗಾಪುರದ 9ನೇ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ್ದಾರೆ.

ಸಿಂಗಾಪುರದ ನೂತನ ಅಧ್ಯಕ್ಷರಾಗಿ ಭಾರತ ಮೂಲದ ಥರ್ಮನ್ ಷಣ್ಮುಗರತ್ನಂ ಪ್ರಮಾಣವಚನ ಸ್ವೀಕಾರ Read More »

ಅಂತರ್ರಾಷ್ಟ್ರೀಯ ನ್ಯೂಸ್

ಜನವರಿಯಲ್ಲಿ ‘ಯುವನಿಧಿ’ ಯೋಜನೆ ಜಾರಿ- ಸಿಎಂ ಸಿದ್ದರಾಮಯ್ಯ

(ನ್ಯೂಸ್ ಕಡಬ) newskadaba.com  ಬೆಂಗಳೂರು, ಸೆ. 15. ಮುಂದಿನ ವರ್ಷ ಜನವರಿಯಲ್ಲಿ 5ನೇ ಗ್ಯಾರಂಟಿಯಾದ ಯುವನಿಧಿ ಯೋಜನೆಯನ್ನು ಜಾರಿ ಮಾಡುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಈ ಕುರಿತು ಮಾತನಾಡಿದ ಅವರು, ನಾನು ಈ ಹಿಂದೆ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ 165 ಭರವಸೆಗಳಲ್ಲಿ 158 ಭರವಸೆಗಳನ್ನು ಈಡೇರಿಸಿದ್ದೇನೆ. ಈ ಬಾರಿಯೂ 5 ಗ್ಯಾರಂಟಿಗಳಲ್ಲಿ 4 ಗ್ಯಾರಂಟಿ ಜಾರಿ ಮಾಡಿದ್ದೇವೆ. ಯುವನಿಧಿ ಗ್ಯಾರೆಂಟಿ ಜನವರಿಗೆ ಜಾರಿಗೆ ಬರುತ್ತದೆ ಎಂದರು. ನುಡಿದಂತೆ ನಡೆದ ನಾವು ಜುಲೈ 1ರಂದು ಗೃಹಜ್ಯೋತಿ ಯೋಜನೆ ಜಾರಿ

ಜನವರಿಯಲ್ಲಿ ‘ಯುವನಿಧಿ’ ಯೋಜನೆ ಜಾರಿ- ಸಿಎಂ ಸಿದ್ದರಾಮಯ್ಯ Read More »

ಕರಾವಳಿ

ಬ್ಲೌಸ್ ಹಾಕದೇ ಸೀರೆಯಲ್ಲೇ ಮೈ ಮುಚ್ಚಿಕೊಂಡ ಸಾನಿಯಾ ಅಯ್ಯರ್- ಫೋಟೋ ವೈರಲ್

(ನ್ಯೂಸ್ ಕಡಬ) newskadaba.com  ಬೆಂಗಳೂರು, ಸೆ. 15. ಕನ್ನಡ ಕಿರುತೆರೆ ನಟಿ ಸಾನಿಯಾ ಅಯ್ಯರ್ ತನ್ನ ಸಹಜ ಸೌಂದರ್ಯವನ್ನು ಬಿಗ್ ಬಾಸ್ ಸೀಸನ್ 9ರಲ್ಲಿ ತೋರಿಸಿ, ಇದೀಗ ಮತ್ತೆ ಸೀರೆ ಉಟ್ಟು ಪಡ್ಡೆ ಹುಡುಗರ ನಿದ್ದೆಗೆ ಕುತ್ತು ತಂದಿದ್ದಾಳೆ. ಸದ್ಯ ಬ್ಲೌಸ್ ಹಾಕದೇ ಬೆನ್ನು ಕಾಣುವಂತೆ ಸೀರೆಯುಟ್ಟ ಸಾನಿಯಾ ಅಯ್ಯರ್, ಸೊಂಟ ಬಳುಕಿಸಿ, ಹೊಕ್ಕಳಿಗೆ ಆಭರಣದ ಅಲಂಕಾರ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಫೋಟೋವನ್ನು ಹರಿಯ ಬಿಟ್ಟಿದ್ದಾರೆ. ಹಾಲು ಗಲ್ಲದ ಸಾನಿಯಾ ಈ ಮೊದಲೇ ಬಾಲಿವುಡ್‌ನ ಡಬೂ ರತ್ನಾನಿ

ಬ್ಲೌಸ್ ಹಾಕದೇ ಸೀರೆಯಲ್ಲೇ ಮೈ ಮುಚ್ಚಿಕೊಂಡ ಸಾನಿಯಾ ಅಯ್ಯರ್- ಫೋಟೋ ವೈರಲ್ Read More »

ಕರ್ನಾಟಕ

ಇಬ್ಬರು ಹೆಣ್ಣುಮಕ್ಕಳೊಂದಿಗೆ ತಾಯಿ ಆತ್ಮಹತ್ಯೆ

(ನ್ಯೂಸ್ ಕಡಬ) newskadaba.com ಚಾಮರಾಜನಗರ, ಸೆ. 15. ಇಬ್ಬರು ಮಕ್ಕಳೊಂದಿಗೆ ತಾಯಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ತೆರಕಣಾಂಬಿ ಹೋಬಳಿಯ ಬೊಮ್ಮನಹಳ್ಳಿ ಗ್ರಾಮದಲ್ಲಿ ಗುರುವಾರದಂದು ತಡರಾತ್ರಿ ನಡೆದಿರುವುದು ವರದಿಯಾಗಿದೆ. ಆತ್ಮಹತ್ಯೆ ಮಾಡಿಕೊಂಡವರನ್ನು ಮೇಘಾ(24) ಹಾಗೂ ಅವರ ಮಕ್ಕಳಾದ ಪುನ್ವಿತಾ(6) ಮತ್ತು ಮನ್ವಿತಾ(3) ಎಂದು ಗುರುತಿಸಲಾಗಿದೆ. ಪತಿ ಧನಂಜಯ ಮತ್ತು ಮನೆಮಂದಿ ಮೇಘಾರಿಗೆ ಚಿತ್ರಹಿಂಸೆ, ಮಾನಸಿಕ ಕಿರುಕುಳ ನೀಡುತ್ತಿದ್ದರೆನ್ನಲಾಗಿದ್ದು, ಇದರಿಂದ ಬೇಸತ್ತ ಮೇಘಾ ತನ್ನಿಬ್ಬರು ಹೆಣ್ಣು ಮಕ್ಕಳೊಂದಿಗೆ ಆತ್ಮಹತ್ಯೆಗೈದಿದ್ದಾರೆ ಎಂದು ತೆರಕಣಾಂಬಿ

ಇಬ್ಬರು ಹೆಣ್ಣುಮಕ್ಕಳೊಂದಿಗೆ ತಾಯಿ ಆತ್ಮಹತ್ಯೆ Read More »

ಕರ್ನಾಟಕ

ಸೆಪ್ಟೆಂಬರ್- 16: “ವಿಶ್ವ ಓಜೋನ್ ದಿನ” ಡಾ. ಮುರಲೀ ಮೋಹನ ಚೂಂತಾರು

(ನ್ಯೂಸ್ ಕಡಬ) newskadaba.com ಸೆ. 16. ಪ್ರತಿ ವರ್ಷ ಸಪ್ಟೆಂಬರ್ 16ನ್ನು “ವಿಶ್ವ ಓಜೋನ್ ದಿನ” ಎಂದು ಆಚರಿಸಿ ಓಜೋನ್ ಪದರದ ರಕ್ಷಣೆಯ ಬಗ್ಗೆ ವಿಶ್ವದಾದ್ಯಂತ ಜಾಗೃತಿ ಮೂಡಿಸುವ ಕಾರ್ಯ ನಡೆಯುತ್ತಿದೆ. ವಿಪರ್ಯಾಸವೆಂದರೆ ಮರುದಿನದಿಂದಲೇ ‘ಓಜೋನ್ ಪದರ’ದ ಬಗ್ಗೆ ದಿವ್ಯ ನಿರ್ಲಕ್ಷ್ಯ ತೋರುವ ಧೋರಣೆ ಮುಂದುವರಿಯುತ್ತಿದೆ. ಮನುಷ್ಯನ ಆಸೆ ದುರಾಸೆಗಳಿಗೆ ಕೊನೆಯೆಂಬುವುದಿಲ್ಲ ಎಂದು ಸಾಬೀತಾಗುತ್ತಲೇ ಇದೆ. ಓಜೋನ್ ಪದರದ ಇರುವಿಕೆಯನ್ನು 1839ರಲ್ಲೇ ಕಂಡು ಹಿಡಿಯಲಾಯಿತು ಮತ್ತು 1850ರಲ್ಲಿ ಓಜೋನ್‍ ನ್ನು ವಾತಾವರಣದ ನೈಸರ್ಗಿಕ ಅನಿಲವೆಂದು ಪರಿಗಣಿಸಲಾಯಿತು. 1880ರಲ್ಲಿಯೇ

ಸೆಪ್ಟೆಂಬರ್- 16: “ವಿಶ್ವ ಓಜೋನ್ ದಿನ” ಡಾ. ಮುರಲೀ ಮೋಹನ ಚೂಂತಾರು Read More »

ರಾಷ್ಟ್ರೀಯ ನ್ಯೂಸ್, ವಿಶೇಷ ಲೇಖನಗಳು

ಹಿಜಾಬ್ ಸರಿಯಾಗಿ ಧರಿಸದಿದ್ದಲ್ಲಿ 10 ವರ್ಷ ಜೈಲು ಶಿಕ್ಷೆ

(ನ್ಯೂಸ್ ಕಡಬ) newskadaba.com ಇರಾನ್​, ಸೆ. 14. ಹೆಣ್ಣುಮಕ್ಕಳು ಹಿಜಾಬ್​ ಸರಿಯಾಗಿ ಧರಿಸದಿದ್ದರೆ ಅವರಿಗೆ 60 ಛಡಿ ಏಟು ಹಾಗೂ 10 ವರ್ಷಗಳ ವರೆಗೆ ಜೈಲು ಶಿಕ್ಷೆ ವಿಧಿಸುವ ಲಿಂಗ ಭೇದ ಮಸೂದೆಯನ್ನು ಜಾರಿಗೆ ತರಲು ಇರಾನ್ ಸರಕಾರ ಮುಂದಾಗಿದೆ. ಇರಾನ್ ​ನಲ್ಲಿ ಹೆಣ್ಣುಮಕ್ಕಳು ಸಾರ್ವಜನಿಕವಾಗಿ ಕಡ್ಡಾಯವಾಗಿ ಹಿಜಾಬ್ ಧರಿಸಲೇಬೇಕು, ಇಲ್ಲದಿದ್ದಲ್ಲಿ ಅವರ ವಿರುದ್ಧ ಪ್ರಕರಣ ದಾಖಲಿಸಿ ಜೈಲು ಶಿಕ್ಷೆ ವಿಧಿಸಲಾಗುತ್ತದೆ, ಇದು ಕೊಲೆ ಮತ್ತು ಮಾದಕವಸ್ತು ಕಳ್ಳಸಾಗಣೆಯಷ್ಟೇ ಗಂಭೀರ ಅಪರಾಧ ಎಂದು ಪರಿಗಣಿಸಲಾಗಿದೆ.

ಹಿಜಾಬ್ ಸರಿಯಾಗಿ ಧರಿಸದಿದ್ದಲ್ಲಿ 10 ವರ್ಷ ಜೈಲು ಶಿಕ್ಷೆ Read More »

ಅಂತರ್ರಾಷ್ಟ್ರೀಯ ನ್ಯೂಸ್, ಬ್ರೇಕಿಂಗ್ ನ್ಯೂಸ್

ಗ್ರಾನೈಟ್ ಮೈಮೇಲೆ ಬಿದ್ದು ಕಾರ್ಮಿಕರಿಬ್ಬರು ದುರ್ಮರಣ

(ನ್ಯೂಸ್ ಕಡಬ) newskadaba.com ಉಡುಪಿ, ಸೆ. 14. ಗ್ರಾನೈಟ್ ಮೈಮೇಲೆ ಬಿದ್ದು ಕಾರ್ಮಿಕರಿಬ್ಬರು ಮೃತಪಟ್ಟ ಭೀಕರ ಘಟನೆ ಮಲ್ಪೆಯ ತೊಟ್ಟಂ ಎಂಬಲ್ಲಿ ನಡೆದಿದೆ. ಮೃತ ಕಾರ್ಮಿಕರನ್ನು ಒಡಿಶಾ ಮೂಲದ  ಬಾಬುಲ್ಲ(38) ಮತ್ತು ಭಾಸ್ಕರ್(40) ಎಂದು ಗುರುತಿಸಲಾಗಿದೆ. ಇವರಿಬ್ಬರು ಮನೆಯೊಂದಕ್ಕೆ ತಂದ ಗ್ರಾನೈಟ್ ನ್ನು ಲಾರಿಯಿಂದ ಖಾಲಿ ಮಾಡುತ್ತಿದ್ದ ಸಂದರ್ಭ ಈ ದುರ್ಘಟನೆ ನಡೆದಿದೆ. ಸ್ಥಳಕ್ಕೆ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ.

ಗ್ರಾನೈಟ್ ಮೈಮೇಲೆ ಬಿದ್ದು ಕಾರ್ಮಿಕರಿಬ್ಬರು ದುರ್ಮರಣ Read More »

ಕರಾವಳಿ, ಕ್ರೈಮ್ ನ್ಯೂಸ್

ತೆರಿಗೆ ವಂಚಕರ ವಿರುದ್ಧ ಕಠಿಣ ಕ್ರಮಕ್ಕೆ ಸಿಎಂ ಸೂಚನೆ

(ನ್ಯೂಸ್ ಕಡಬ) newskadaba.com ಬೆಂಗಳೂರು, ಸೆ. 14.  ತೆರಿಗೆ ವಂಚನೆ, ಸೋರಿಕೆ ಹಾಗೂ ತೆರಿಗೆ ಕಳ್ಳತನದ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಸಿಎಂ ಸಿದ್ದರಾಮಯ್ಯ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ವಾಣಿಜ್ಯ ತೆರಿಗೆ ಇಲಾಖೆ, ಅಬಕಾರಿ ಸೇರಿ ಹಲವು ಇಲಾಖೆಗಳ ಜತೆ‌ ಸಭೆ ನಡೆಸಿದ ಸಿಎಂ ಸಿದ್ದರಾಮಯ್ಯ ರಾಜ್ಯದಲ್ಲಿ ತೆರಿಗೆ ಸಂಗ್ರಹದ ಪ್ರಗತಿ ಹೆಚ್ಚಿಸಿ ಎಂದು ಹೇಳಿದ್ದಾರೆ.

ತೆರಿಗೆ ವಂಚಕರ ವಿರುದ್ಧ ಕಠಿಣ ಕ್ರಮಕ್ಕೆ ಸಿಎಂ ಸೂಚನೆ Read More »

ಕರ್ನಾಟಕ
Scroll to Top