newskadaba

ಪ್ರವೀಣ್‌ ನೆಟ್ಟಾರು ಹತ್ಯೆ ಪ್ರಕರಣ – ಮೂವರು ಆರೋಪಿಗಳ ಜಾಮೀನು ಅರ್ಜಿ ವಜಾ

(ನ್ಯೂಸ್ ಕಡಬ) newskadaba.com ಬೆಂಗಳೂರು, ಅ. 05. ಬಿಜೆಪಿ ಕಾರ್ಯಕರ್ತ ಪ್ರವೀಣ್‌ ನೆಟ್ಟಾರು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳು ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಹೈಕೋರ್ಟ್‌ ವಜಾಗೊಳಿಸಿದೆ. ನ್ಯಾಯಮೂರ್ತಿ ಎಚ್‌.ಬಿ. ಪ್ರಭಾಕರ್‌ ಶಾಸ್ತ್ರಿ, ನ್ಯಾ. ಅನಿಲ್‌ ಕೆ.ಕಟ್ಟಿ ಅವರಿದ್ದ ವಿಭಾಗೀಯ ಪೀಠವು ಪ್ರವೀಣ್‌ ನೆಟ್ಟಾರು ಹತ್ಯೆ ಸಂಬಂಧ ಸಂಚಿನಲ್ಲಿ‌ ಆರೋಪಿಗಳು ಭಾಗಿಯಾದ ಆರೋಪವಿದ್ದು, ಹೀಗಾಗಿ ಕೆ.ಇಸ್ಮಾಯಿಲ್‌ ಶಫಿ, (ಆರೋಪಿ 9), ಕೆ.ಮೊಹಮ್ಮದ್‌ ಇಕ್ಬಾಲ್‌ (ಆರೋಪಿ 10) ಹಾಗೂ ಎಂ.ಶಾಹೀದ್‌ (ಆರೋಪಿ 11) ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ವಜಾಗೊಳಿಸಿದೆ. […]

ಪ್ರವೀಣ್‌ ನೆಟ್ಟಾರು ಹತ್ಯೆ ಪ್ರಕರಣ – ಮೂವರು ಆರೋಪಿಗಳ ಜಾಮೀನು ಅರ್ಜಿ ವಜಾ Read More »

ಕರಾವಳಿ, ಕರ್ನಾಟಕ

ಮಾರ್ಬಲ್ ತುಂಬಿದ್ದ ಲಾರಿ ಪಲ್ಟಿ – ನಾಲ್ವರು ಕಾರ್ಮಿಕರು ಗಂಭೀರ

(ನ್ಯೂಸ್ ಕಡಬ) newskadaba.com ವಿಟ್ಲ, ಅ. 04. ಮಾರ್ಬಲ್‌ ತುಂಬಿದ್ದ ಲಾರಿ ಪಲ್ಟಿಯಾದ ಪರಿಣಾಮ ನಾಲ್ವರು ಗಂಭೀರ ಗಾಯಗೊಂಡ ಘಟನೆ ಬಂಟ್ವಾಳ ತಾಲೂಕಿನ ಕರೋಪಾಡಿ ಗ್ರಾಮದ ಒಡಿಯೂರು ಸಮೀಪ ನಡೆದಿದೆ. ಗಾಯಗೊಂಡವರನ್ನು ಉತ್ತರ ಪ್ರದೇಶ ಮೂಲದ ಕಾರ್ಮಿಕರು ಎಂದು ಗುರುತಿಸಲಾಗಿದೆ. ಮಾರ್ಬಲ್ ತುಂಬಿದ್ದ ಲಾರಿಯನ್ನು ಅನ್ ಲೋಡ್ ಗಾಗಿ ರಿವರ್ಸ್ ತೆಗೆಯುವ ಸಂದರ್ಭ ಬ್ರೇಕ್ ಫೈಲ್ ಆಗಿ ಲಾರಿ ಪಲ್ಟಿಯಾಗಿ ಈ ದುರ್ಘಟನೆ ಸಂಭವಿಸಿದೆನ್ನಲಾಗಿದೆ. ಘಟನೆಯಿಂದಾಗಿ ನಾಲ್ವರು ಕಾರ್ಮಿಕರ ಕೈ-ಕಾಲು ಛಿದ್ರ ಛಿದ್ರಗೊಂಡಿದ್ದು, ಗಾಯಾಳುಗಳನ್ನು ಮಂಗಳೂರಿನ ಆಸ್ಪತ್ರೆಗೆ

ಮಾರ್ಬಲ್ ತುಂಬಿದ್ದ ಲಾರಿ ಪಲ್ಟಿ – ನಾಲ್ವರು ಕಾರ್ಮಿಕರು ಗಂಭೀರ Read More »

ಕರಾವಳಿ, ಕ್ರೈಮ್ ನ್ಯೂಸ್

ಮಂಗಳೂರು: ಅ. 06 ರಂದು ಮಾಹಿತಿ ಶಿಬಿರ

(ನ್ಯೂಸ್ ಕಡಬ) newskadaba.com ಮಂಗಳೂರು, ಅ. 04. ಮಂಗಳೂರು ವಿಶ್ವವಿದ್ಯಾನಿಲಯ, ಕಾಲೇಜು ಶಿಕ್ಷಣ ಇಲಾಖೆ, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಹಾಗೂ ಕರ್ನಾಟಕ ಜಿಲ್ಲಾ ಸಂಸ್ಥೆಯ ಸಹಯೋಗದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ಸರ್ಕಾರಿ, ಅನುದಾನಿತ ಹಾಗೂ ಅನುದಾನ ರಹಿತ ಪದವಿ ಕಾಲೇಜುಗಳ ಉಪನ್ಯಾಸಕ ಮತ್ತು ಉಪನ್ಯಾಸಕಿಯರಿಗೆ ಒಂದು ದಿನದ ರೋವರಿಂಗ್ ಮತ್ತು ರೇಂಜರಿಂಗ್ ಮಾಹಿತಿ ಶಿಬಿರವನ್ನು ಅ. 06 ರಂದು ಬೆಳಗ್ಗೆ 10 ಗಂಟೆಗೆ ನಗರದ ಲಾಲ್ ಬಾಗ್ ನಲ್ಲಿರುವ ಜಿಲ್ಲಾ ಸ್ಕೌಟ್ಸ್ ಗೈಡ್ಸ್ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮವನ್ನು

ಮಂಗಳೂರು: ಅ. 06 ರಂದು ಮಾಹಿತಿ ಶಿಬಿರ Read More »

ಕರಾವಳಿ

ಯುವತಿ ಕಾಣೆ- ಪತ್ತೆಗೆ ಕೋರಿಕೆ

(ನ್ಯೂಸ್ ಕಡಬ) newskadaba.com ಮಂಗಳೂರು, ಅ. 04. ನಗರದ ಅಭಿಮಾನ್ ಮ್ಯಾನ್ಷನ್ ಫ್ಲ್ಯಾಟ್ ನಲ್ಲಿ ವಾಸವಾಗಿದ್ದ ಆಸ್ಟಿಯ ಸಮ್ರೀನ್ (22) ಎಂಬಾಕೆ ಅ. 01 ರಂದು ಕಾಣೆಯಾಗಿದ್ದು, ಈ ಬಗ್ಗೆ ಮಂಗಳೂರು ಪೂರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಚಹರೆ ಇಂತಿವೆ:- ಎತ್ತರ 5.2 ಅಡಿ, ಬಿಳಿ ಮೈ ಬಣ್ಣ, ಸಾಧಾರಣ ಮೈಕಟ್ಟು, ಕಾಣೆಯಾಗುವಾಗ ಹಸಿರು ಬಣ್ಣದ ಚೂಡಿದಾರ ಟಾಪ್, ತಿಳಿ ಗ್ರೇ ಬಣ್ಣದ ಪ್ಯಾಂಟ್ ಶಾಲು ಹಾಕಿರುತ್ತಾರೆ. ಹಿಂದಿ, ಉರ್ದು, ಕನ್ನಡ ಮತ್ತು ಇಂಗ್ಲೀಷ್ ಭಾಷೆ

ಯುವತಿ ಕಾಣೆ- ಪತ್ತೆಗೆ ಕೋರಿಕೆ Read More »

ಕರಾವಳಿ, ಕ್ರೈಮ್ ನ್ಯೂಸ್

ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಅರ್ಜಿ ಆಹ್ವಾನ

(ನ್ಯೂಸ್ ಕಡಬ) newskadaba.com ಮಂಗಳೂರು, ಅ. 04. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ 2023ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿಗೆ ವಿವಿಧ ಕ್ಷೇತ್ರಗಳ ಸಾಧಕರ ಹೆಸರುಗಳನ್ನು, ಸಾರ್ವಜನಿಕರು ಸೇವಾ ಸಿಂಧು ಪೋರ್ಟಲ್ ನ ವೆಬ್‍ಸೈಟ್ https://sevasindhu.karnataka.gov.in ನಲ್ಲಿ ಅ.15 ರೊಳಗೆ ನಾಮನಿರ್ದೇಶನ ಮಾಡಬಹುಬಹುದಾಗಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಅರ್ಜಿ ಆಹ್ವಾನ Read More »

ಕರಾವಳಿ

ಕಾವೇರಿ ನದಿ ನೀರು ವಿವಾದ – ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಕೆಆರ್.ಎಸ್ ವರೆಗೆ ಮೆರವಣಿಗೆ

(ನ್ಯೂಸ್ ಕಡಬ) newskadaba.com ಬೆಂಗಳೂರು, ಅ. 04. ಕಾವೇರಿ ನದಿ ನೀರನ್ನು ತಮಿಳುನಾಡಿಗೆ ಹರಿಸುತ್ತಿರುವುದನ್ನು ಖಂಡಿಸಿ ರಾಜ್ಯದೆಲ್ಲೆಡೆ ರೈತರು ನಿರಂತರವಾಗಿ ಪ್ರತಿಭಟನೆ ನಡೆಸುತ್ತಿದ್ದು, ಇದರ ಬೆನ್ನಲ್ಲೇ ಕನ್ನಡ ಒಕ್ಕೂಟದ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ನಾಳೆ(ಅ. 05) ಬೆಂಗಳೂರಿನಿಂದ ಕೆ ಆರ್ ಎಸ್ ವರೆಗೆ ವಾಹನಗಳಲ್ಲಿ ಭಾರೀ ಮೆರವಣಿಗೆ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಕಾವೇರಿ ನದಿ ನೀರನ್ನು ತಮಿಳುನಾಡಿಗೆ ಹರಿಸುತ್ತಿರುವ ರಾಜ್ಯ ಸರ್ಕಾರದ ನಡೆಯನ್ನು ಖಂಡಿಸಿ, ತಮಿಳುನಾಡು ಸರ್ಕಾರದ ವಿರುದ್ಧ ಕನ್ನಡ ಒಕ್ಕೂಟದ ಆಶ್ರಯದಲ್ಲಿ ಅಕ್ಟೋಬರ್ ಐದರಂದು ಬೆಳಗ್ಗೆ 11

ಕಾವೇರಿ ನದಿ ನೀರು ವಿವಾದ – ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಕೆಆರ್.ಎಸ್ ವರೆಗೆ ಮೆರವಣಿಗೆ Read More »

ಕರ್ನಾಟಕ

ಕಡಬ: ಸೈಂಟ್ ಜೋಕಿಮ್ಸ್ ಶಿಕ್ಷಣ ಸಂಸ್ಥೆಯಲ್ಲಿ ಗಾಂಧಿ ಜಯಂತಿ ಆಚರಣೆ

(ನ್ಯೂಸ್ ಕಡಬ) newskadaba.com ಕಡಬ, ಅ. 04. ಸೈಂಟ್ ಜೋಕಿಮ್ ಪ್ರೌಢ ಶಾಲೆ ಮತ್ತು ಪ್ರಾಥಮಿಕ ಶಾಲೆಯಲ್ಲಿ ಗಾಂಧಿ ಜಯಂತಿಯನ್ನು ಮಹಾತ್ಮ ಗಾಂಧೀಜಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ಇವರ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈಯುವ ಉದ್ಘಾಟಿಸಿ, ಬಳಿಕ ಗಾಂಧೀಜಿಯವರ ಮಹತ್ವದ ಕುರಿತು ಮಕ್ಕಳಿಗೆ ತಿಳಿಸಲಾಯಿತು.   ಸಂಸ್ಥೆಯ ವಿದ್ಯಾರ್ಥಿಗಳು ವಿವಿಧ ಕಾರ್ಯಕ್ರಮಗಳನ್ನು ನೆರವೇರಿಸಿಕೊಟ್ಟರು ಹಾಗೂ ಶಾಲೆಯ ಸುತ್ತಮುತ್ತ ಸ್ವಚ್ಛತೆಯನ್ನು ಮಾಡಿದರು. ಸೈಂಟ್ ಜೋಕಿಮ್ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಸಿಸ್ಟರ್ ಹಿಲ್ಡಾ ರೋಡ್ರಿಗಸ್ ಹಾಗೂ ಸೈಂಟ್ ಜೋಕಿಮ್ ಪ್ರೌಢಶಾಲೆಯ

ಕಡಬ: ಸೈಂಟ್ ಜೋಕಿಮ್ಸ್ ಶಿಕ್ಷಣ ಸಂಸ್ಥೆಯಲ್ಲಿ ಗಾಂಧಿ ಜಯಂತಿ ಆಚರಣೆ Read More »

ಕರಾವಳಿ

ಡ್ರೈವಿಂಗ್ ವೇಳೆ ಹೃದಯಾಘಾತ- ಲಾರಿ ಚಾಲಕ ಮೃತ್ಯು

(ನ್ಯೂಸ್ ಕಡಬ) newskadaba.com ಗುಂಡ್ಲುಪೇಟೆ, ಅ. 04. ಡ್ರೈವಿಂಗ್ ವೇಳೆ ಹೃದಯಾಘಾತವಾದ ಪರಿಣಾಮ ಲಾರಿಯು ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಚಾಲಕ ಸ್ಥಳದಲ್ಲೇ ಮೃತಪಟ್ಟ ಘಟನೆ ಗುಂಡ್ಲುಪೇಟೆ ತಾಲೂಕಿನ ಬೇಗೂರಿನಲ್ಲಿ ನಡೆದಿದೆ. ಮೃತ ಚಾಲಕನನ್ನು ತಮಿಳುನಾಡು ಮೂಲದ ಸೆಲ್ವರಾಜ್ (50) ಎಂದು ಗುರಿತಿಸಲಾಗಿದೆ. ಇವರು ನಂಜನಗೂಡು ಕಡೆಯಿಂದ ಗುಂಡ್ಲುಪೇಟೆ ಮಾರ್ಗವಾಗಿ ತೆರಳುತ್ತಿದ್ದ ಸಂದರ್ಭ ಹೃದಯಾಘಾತವಾಗಿತ್ತು. ಪರಿಣಾಮ ವಾಹನದ ಮೇಲಿನ ನಿಯಂತ್ರಣ ಕಳೆದುಕೊಂಡ ಚಾಲಕ, ಸರ್ವೀಸ್ ರಸ್ತೆಯಲ್ಲಿ ನಿಂತಿದ್ದ ಗೂಡ್ಸ್ ಟೆಂಪೋಗೆ ಗುದ್ದಿ, ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದ್ದು,

ಡ್ರೈವಿಂಗ್ ವೇಳೆ ಹೃದಯಾಘಾತ- ಲಾರಿ ಚಾಲಕ ಮೃತ್ಯು Read More »

ಕರ್ನಾಟಕ, ಕ್ರೈಮ್ ನ್ಯೂಸ್

ಮಂಗಳೂರು: ಕರ್ತವ್ಯ ನಿರತ ಹೆಡ್ ಕಾನ್ಸ್ಟೇಬಲ್ ಹೃದಯಾಘಾತದಿಂದ ನಿಧನ

(ನ್ಯೂಸ್ ಕಡಬ) newskadaba.com ಮಂಗಳೂರು, ಅ. 04. ಕರ್ತವ್ಯದಲ್ಲಿದ್ದಾಗಲೇ ಮಂಗಳೂರು ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ ಹೆಡ್ ಕಾನ್ಸ್​ಟೇಬಲ್ ಓರ್ವರು ಹೃದಯಾಘಾತದಿಂದ ಮೃತಪಟ್ಟ ಘಟನೆ ನಡೆದಿದೆ. ಮೃತರನ್ನು ವಿಜಯಪುರದ ಸೋಮನಗೌಡ ಚೌಧರಿ (32) ಎಂದು ಗುರುತಿಸಲಾಗದೆ. 2016ರ ಬ್ಯಾಚ್‌ನ ಸೋಮನಗೌಡ ಚೌಧರಿ ಅವರು, ಮಂಗಳೂರು ಸಿಎಆ‌ರ್ ಕಾನ್ಸ್​ಟೇಬಲ್ ಆಗಿ ವೃತ್ತಿಗೆ ಸೇರ್ಪಡೆಗೊಂಡಿದ್ದರು. ಬಳಿಕ ಹೆಡ್‌ ಕಾನ್ಸ್​ಟೇಬಲ್ ಆಗಿ ಬಡ್ತಿ ಪಡೆದು, ಸದ್ಯ ನಗರದ ಕಮಿಷನರೇಟ್ ವ್ಯಾಪ್ತಿಯ ಕಂಟ್ರೋಲ್ ರೂಂ ಇನ್ಸ್​ಪೆಕ್ಟರ್‌ ನ ವಾಹನ ಚಾಲಕನಾಗಿ ಕರ್ತವ್ಯದಲ್ಲಿದ್ದರು. ಮಂಗಳವಾರದಂದು

ಮಂಗಳೂರು: ಕರ್ತವ್ಯ ನಿರತ ಹೆಡ್ ಕಾನ್ಸ್ಟೇಬಲ್ ಹೃದಯಾಘಾತದಿಂದ ನಿಧನ Read More »

ಕರಾವಳಿ, ಬ್ರೇಕಿಂಗ್ ನ್ಯೂಸ್

ಮಕ್ಕಳಿಗೆ ಹಣದಾಸೆ ಮೂಡಿಸಿ ಲೈಂಗಿಕ ದೌರ್ಜನ್ಯ ಆರೋಪ – ಹೋಟೆಲ್ ಕುಕ್ ಅರೆಸ್ಟ್..!

(ನ್ಯೂಸ್ ಕಡಬ) newskadaba.com ಹುಬ್ಬಳ್ಳಿ, ಅ. 04. ಚಿಕ್ಕ ಮಕ್ಕಳಿಗೆ ಚಾಕೊಲೇಟ್ ಆಮಿಷ ತೋರಿಸಿ ಲೈಂಗಿಕ ದೌರ್ಜನ್ಯ ಎಸಗಿರುವ ಆರೋಪಕ್ಕೆ ಸಂಬಂಧಿಸಿ ಪ್ರತಿಷ್ಠಿತ ಹೋಟೆಲ್ ಒಂದರ ಕುಕ್ ನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆ ಹಳೇ ಹುಬ್ಬಳ್ಳಿಯಲ್ಲಿ ನಡೆದಿದೆ. ನಗರದ ಹೊಸೂರ ಬಳಿ ಇರುವ ಪ್ರತಿಷ್ಠಿತ ಹೋಟೆಲ್​ನಲ್ಲಿ ಕೆಲಸ ಮಾಡುತ್ತಿದ್ದ ಒಡಿಶಾ ಮೂಲದ ಕುಕ್​, ಅಪ್ರಾಪ್ತ ಮಕ್ಕಳಿಗೆ ಚಾಕೊಲೇಟ್​ ಹಾಗೂ ಹಣದ ಆಸೆ ಮೂಡಿಸಿ ಲೈಂಗಿಕ ದೌರ್ಜನ್ಯ ಎಸಗಿದ್ದಲ್ಲದೇ ಮಕ್ಕಳನ್ನು ಬೆತ್ತಲೆಗೊಳಿಸಿ, ತಾನೇ ವಿಡಿಯೋ ಮಾಡಿ ಹಣಕ್ಕೆ

ಮಕ್ಕಳಿಗೆ ಹಣದಾಸೆ ಮೂಡಿಸಿ ಲೈಂಗಿಕ ದೌರ್ಜನ್ಯ ಆರೋಪ – ಹೋಟೆಲ್ ಕುಕ್ ಅರೆಸ್ಟ್..! Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್
Scroll to Top