newskadaba

ಅಡಿಕೆ ಆಮದು ನೀತಿಗೆ ಕೇಂದ್ರ ಸರಕಾರ ಗ್ರೀನ್ ಸಿಗ್ನಲ್- ಅಶೋಕ್ ರೈ ಖಂಡನೆ

(ನ್ಯೂಸ್ ಕಡಬ) newskadaba.com ಮಂಗಳೂರು, ಸೆ. 26. ಅಡಿಕೆ ಆಮದು ನೀತಿಗೆ ಕೇಂದ್ರ ಸರಕಾರದಿಂದ ಗ್ರೀನ್ ಸಿಗ್ನಲ್ ನೀಡಿರುವುದನ್ನು ಪುತ್ತೂರು ಶಾಸಕ ಅಶೋಕ್ ರೈ ಖಂಡನೆ ಮಾಡಿದ್ದಾರೆ. ಅಡಿಕೆ ದರ ಇಳಿಕೆಯಾಗಿ ಎರಡೂ ಜಿಲ್ಲೆಗಳ ಆರ್ಥಿಕ ಪರಿಸ್ಥಿತಿ ನೆಲಕ್ಕೆ ಬೀಳಲಿದ್ದು, ಭೂತಾನ್ನಿಂದ ಅಡಿಕೆ ಆಮದು ಮಾಡುವ ನೀತಿ ಅತ್ಯಂತ ಆತಂಕಕಾರಿ ವಿಚಾರವಾಗಿದೆ. ಭೂತಾನ್ ನಿಂದ ನಿರಂತರವಾಗಿ ಅಡಿಕೆ ಆಮದುಗೊಂಡರೆ ಇಲ್ಲಿ ಅಡಿಕೆ ದರ ಕೇವಲ ರೂ.120 ಕ್ಕೆ ತಲುಪುವ ಅಪಾಯವಿದೆ ಇದರಿಂದ ಜಿಲ್ಲೆಯ ಜನತೆಯ ಬದುಕು ಬೀದಿಗೆ […]

ಅಡಿಕೆ ಆಮದು ನೀತಿಗೆ ಕೇಂದ್ರ ಸರಕಾರ ಗ್ರೀನ್ ಸಿಗ್ನಲ್- ಅಶೋಕ್ ರೈ ಖಂಡನೆ Read More »

ಕರಾವಳಿ

ಗೌರವ ಉಳಿಯಬೇಕಾದರೆ ಕೂಡಲೇ ರಾಜೀನಾಮೆ ನೀಡಿ- ಬೊಮ್ಮಾಯಿ

(ನ್ಯೂಸ್ ಕಡಬ) newskadaba.com ಸೆ. 26. ತಮಗಿರುವ ಗೌರವ ಉಳಿಯಬೇಕೆಂದರೆ ಸಿಎಂ ಸಿದ್ದರಾಮಯ್ಯ ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಸಂಸದ, ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.   ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಅವರಿಗೆ ಕರ್ನಾಟಕ ರಾಜಕಾರಣದಲ್ಲಿ ಅವರದ್ದೇ ಆದ ಗುರುತಿದೆ. ತಮ್ಮದೇ ಜನಾಭಿಪ್ರಾಯ ಇದೆ. ಅದನ್ನು ಉಳಿಸಿಕೊಂಡು ಹೋಗಬೇಕಾದರೆ ಅವರು ನೈತಿಕತೆಯನ್ನು ಮೆರೆಯಬೇಕು. ಎಲ್ಲರಂತೆ ಉದಾಹರಣೆ ಕೊಟ್ಟರೆ ಇವರೂ ಅವರ ಸಾಲಿಗೆ ಸೇರುತ್ತಾರೆ ಎಂದರು.

ಗೌರವ ಉಳಿಯಬೇಕಾದರೆ ಕೂಡಲೇ ರಾಜೀನಾಮೆ ನೀಡಿ- ಬೊಮ್ಮಾಯಿ Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್
Crime

ಮಹಾಲಕ್ಷ್ಮೀ ಕೊಲೆ ಪ್ರಕರಣ – ಆರೋಪಿಯ ಡೆತ್ ನೋಟ್ ನಲ್ಲಿ ಕೊಲೆರಹಸ್ಯ ಬಯಲು

(ನ್ಯೂಸ್ ಕಡಬ) newskadaba.com ಸೆ. 26. ವೈಯಾಲಿಕಾವಲ್‌ನಲ್ಲಿ ಮಹಾಲಕ್ಷ್ಮಿ ಕೊಲೆಗೆ ಸಮಬಂಧಿಸಿದ ಆರೋಪಿಯೋರ್ವ ಒಡಿಶಾದಲ್ಲಿ ಆತ್ಮಹತ್ಯೆಗೆ ಶರಣಾಗಿದ್ದು, ಇದೀಗ ಹತ್ಯೆಗೆ ಕಾರಣ ತಿಳಿಸಿ ಆತ ಬರೆದಿಟ್ಟಿರುವ ಡೆತ್‌ನೋಟ್ ಪೊಲೀಸರ ಕೈ ಸೇರಿದೆ. ಒಡಿಶಾದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಕೊಲೆ ಆರೋಪಿ ಮುಕ್ತಿ ರಂಜನ್ ರಾಯ್, ಆತ್ಮಹತ್ಯೆಗೂ ಮುನ್ನ ಮಹಾಲಕ್ಷ್ಮಿ ಕೊಲೆಗೆ ಕಾರಣವೇನೆಂಬುವುದನ್ನು ಡೆತ್ ನೋಟ್‌ ನಲ್ಲಿ ಬರೆದಿಟ್ಟಿದ್ದ. ಡೈರಿಯಲ್ಲಿದ್ದ ಡೆತ್‌ನೋಟ್ ನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ. ವರದಿಯ ಪ್ರಕಾರ ಡೆತ್ ನೋಟ್ ನಲ್ಲಿ ಸೆಪ್ಟೆಂಬರ್ 3

ಮಹಾಲಕ್ಷ್ಮೀ ಕೊಲೆ ಪ್ರಕರಣ – ಆರೋಪಿಯ ಡೆತ್ ನೋಟ್ ನಲ್ಲಿ ಕೊಲೆರಹಸ್ಯ ಬಯಲು Read More »

ಕರ್ನಾಟಕ, ಕ್ರೈಮ್ ನ್ಯೂಸ್

ಸಿಎಂ ರಾಜೀನಾಮೆ ಆಗ್ರಹಿಸಿ ರಾಜ್ಯ ಬಿಜೆಪಿ ವತಿಯಿಂದ ಪ್ರತಿಭಟನೆ

(ನ್ಯೂಸ್ ಕಡಬ) newskadaba.com ಸೆ. 26. ಸಿಎಂ ರಾಜೀನಾಮೆಗೆ ಆಗ್ರಹಿಸಿ ರಾಜ್ಯ ಬಿಜೆಪಿ ವತಿಯಿಂದ ವಿಧಾನಸೌಧದ ಗಾಂಧಿ ಪ್ರತಿಮೆ ಮುಂಭಾಗದಲ್ಲಿ ಇಂದು ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿತ್ತು. ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ. ವಿಜಯೇಂದ್ರ ಅವರ ಕರೆಯನ್ವಯ ಪ್ರತಿಭಟನೆ ನಡೆಯಿತು. ವಿರೋಧಪಕ್ಷದ ನಾಯಕ ಆರ್. ಅಶೋಕ್, ಉಪ ನಾಯಕ ಅರವಿಂದ ಬೆಲ್ಲದ, ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ಸಂಸದರು, ಶಾಸಕರು ಮತ್ತು ವಿಧಾನಪರಿಷತ್ ಸದಸ್ಯರು ಉಪಸ್ಥಿತರಿದ್ದರು. ಪ್ರತಿಭಟನೆಯಲ್ಲಿ ಕಾರ್ಯಕರ್ತರು ಭ್ರಷ್ಟ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಧಿಕ್ಕಾರ ಕೂಗಲಾಯಿತು.

ಸಿಎಂ ರಾಜೀನಾಮೆ ಆಗ್ರಹಿಸಿ ರಾಜ್ಯ ಬಿಜೆಪಿ ವತಿಯಿಂದ ಪ್ರತಿಭಟನೆ Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಮೂರು ತಿಂಗಳಲ್ಲಿ ಶಿವಮೊಗ್ಗಕ್ಕೆ ವಂದೇ ಭಾರತ್ ರೈಲು – ಸಚಿವ ಸೋಮಣ್ಣ

(ನ್ಯೂಸ್ ಕಡಬ) newskadaba.com ಸೆ. 26. ರೈಲ್ವೇ ಕಾಮಗಾರಿ ಈಗಾಗಲೇ ಆರಂಭಗೊಂಡಿದ್ದು, 2026ರ ಒಳಗೆ ಶಿವಮೊಗ್ಗ, ಶಿಕಾರಿಪುರ ರೈಲ್ವೇ ಕಾಮಗಾರಿ ಪೂರ್ಣಗೊಳಿಸುತ್ತೇವೆ ಎಂದು ಕೇಂದ್ರ ಸಚಿವ ವಿ ಸೋಮಣ್ಣ ಹೇಳಿದರು. ಈ ಕುರಿತು ಶಿವಮೊಗ್ಗದಲ್ಲಿ ರೈಲ್ವೆ ಯೋಜನೆಗಳ ಕಾಮಗಾರಿ ಪರಿಶೀಲನೆ ನಡೆಸಿ ಮಾತನಾಡಿದ ಅವರು, ಕೋಟೆ ಗಂಗೂರಿನಲ್ಲಿ ಕೋಚಿಂಗ್ ಡಿಪೋ ಕಾಮಗಾರಿಗೆ ಚಾಲನೆ ನೀಡಿದ್ದೇನೆ. ಮುಂದಿನ ಜೂನ್​​ನಲ್ಲಿ ಈ ಕಾಮಗಾರಿ ಮುಗಿಸುತ್ತೇವೆ ಎಂದರು. ಮೋದಿ ಮೂರನೇ ಬಾರಿ ಪ್ರಧಾನಿಯಾದ ಮೇಲೆ ರೈಲ್ವೇ ಇಲಾಖೆ ಐತಿಹಾಸಿಕ ಕಾರ್ಯಗಳನ್ನು ಮಾಡುತ್ತಿದೆ.

ಮೂರು ತಿಂಗಳಲ್ಲಿ ಶಿವಮೊಗ್ಗಕ್ಕೆ ವಂದೇ ಭಾರತ್ ರೈಲು – ಸಚಿವ ಸೋಮಣ್ಣ Read More »

ಕರ್ನಾಟಕ

ನಾನು ರಾಜೀನಾಮೆ ಕೊಡುವ ಪ್ರಮೇಯವೇ ಇಲ್ಲ- ಸಿಎಂ ಮರು ಸ್ಪಷ್ಟನೆ

(ನ್ಯೂಸ್ ಕಡಬ) newskadaba.com ಸೆ. 26. ನಾವು ಯಾವುದೇ ಕಾರಣಕ್ಕೂ ರಾಜೀನಾಮೆ ಕೊಡಲ್ಲ ಎಂದು ಸಿಎಂ ಸಿದ್ದರಾಮಯ್ಯ ಮರು ಸ್ಪಷ್ಟನೆ ನೀಡಿರುವ ಕುರಿತು ವರದಿಯಾಗಿದೆ. ಸಿಎಂ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿ ಬಿಜೆಪಿ ನಡೆಸುತ್ತಿರುವ ಪ್ರತಿಭಟನೆಯನ್ನುದ್ದೇಶಿಸಿ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಬಿಜೆಪಿಗರು ಕೇಳಿದ ಕೂಡಲೇ ನಾನಿ ಯಾಕೆ ರಾಜೀನಾಮೆ ನೀಡಬೇಕು? ನಾವು ಯಾವುದೇ ಕಾರಣಕ್ಕೂ ರಾಜೀನಾಮೆ ಕೊಡಲ್ಲ ಎಂದು ಸಿಎಂ ಸಿದ್ದರಾಮಯ್ಯ ಮರು ಸ್ಪಷ್ಟನೆ ನೀಡಿದ್ದಾರೆ. ನಾನು ಯಾವುದೇ ತಪ್ಪು ಮಾಡಿಲ್ಲ, ಮಾಡುವುದೂ ಇಲ್ಲ. ನಾನು

ನಾನು ರಾಜೀನಾಮೆ ಕೊಡುವ ಪ್ರಮೇಯವೇ ಇಲ್ಲ- ಸಿಎಂ ಮರು ಸ್ಪಷ್ಟನೆ Read More »

ಕರ್ನಾಟಕ

ಮಾನಹಾನಿಕ ಪ್ರಕರಣ: ಶಿವಸೇನೆ ನಾಯಕ ಸಂಜಯ್ ರಾವತ್ ಗೆ 15 ದಿನ ಜೈಲು ಶಿಕ್ಷೆ, 25,000ಸಾವಿರ ರೂ. ದಂಡ

(ನ್ಯೂಸ್ ಕಡಬ) newskadaba.com  ಮುಂಬೈ, ಸೆ. 26. ಬಿಜೆಪಿ ನಾಯಕ ಕಿರಿತ್ ಸೋಮಯ್ಯ ಪತ್ನಿ ಡಾ. ಮೇಧಾ ಕಿರಿತ್ ಸೋಮಯ್ಯ ದಾಖಲಿಸಿದ್ದ ಮಾನಹಾನಿ ಪ್ರಕರಣದಲ್ಲಿ ಶಿವಸೇನೆ (ಉದ್ಧವ್ ಬಣ) ನಾಯಕ ಮತ್ತು ರಾಜ್ಯಸಭಾ ಸಂಸದ ಸಂಜಯ್ ರಾವತ್ ಅವರನ್ನು ದೋಷಿ ಎಂದು ಘೋಷಿಸಿರುವ ಮುಂಬೈನ ಮಝಗಾಂವ್ ಮೆಟ್ರೊಪಾಲಿಟನ್ ಮ್ಯಾಜಿಸ್ಟ್ರೇಟ್, ಅವರಿಗೆ 15 ದಿನಗಳ ಸೆರೆವಾಸ ಮತ್ತು ರೂ. 25,000 ದಂಡ ವಿಧಿಸಿದ್ದಾರೆ. ಮೀರಾ ಭಯಾಂಡರ್ ನಲ್ಲಿರುವ ಸಾರ್ವಜನಿಕ ಶೌಚಾಲಯಗಳ ನಿರ್ಮಾಣ ಮತ್ತು ನಿರ್ವಹಣೆಯಲ್ಲಿ ನಡೆದಿರುವ ರೂ. 100

ಮಾನಹಾನಿಕ ಪ್ರಕರಣ: ಶಿವಸೇನೆ ನಾಯಕ ಸಂಜಯ್ ರಾವತ್ ಗೆ 15 ದಿನ ಜೈಲು ಶಿಕ್ಷೆ, 25,000ಸಾವಿರ ರೂ. ದಂಡ Read More »

ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ದ್ವಿಚಕ್ರ ವಾಹನ ಪಲ್ಟಿ- ಕಡಬದ ಯುವಕನಿಗೆ ಗಾಯ

(ನ್ಯೂಸ್ ಕಡಬ) newskadaba.com ಸೆ. 26. ದ್ವಿಚಕ್ರ ವಾಹನ ಪಲ್ಟಿಯಾಗಿ ಸವಾರ ಗಾಯಗೊಂಡಿರುವ ಘಟನೆ ಸರ್ವೆ ಗ್ರಾಮದ ಸೊರಕೆ ಸಮೀಪದ ಕಟ್ಟತ್ತಡ್ಕ ಎಂಬಲ್ಲಿ ಇಂದು ನಡೆದಿದೆ. ಗಾಯಗೊಂಡ ಸವಾರನನ್ನು ಕಡಬದ ಶಬೀಬ್ ಎಂದು ಗುರುತಿಸಲಾಗಿದೆ. ಶಬೀಬ್ ರವರು ತನ್ನ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದಾಗ ಕಟ್ಟತ್ತಡ್ಕ ತಿರುವಿನಲ್ಲಿ ವಿರುದ್ಧ ದಿಕ್ಕಿನಿಂದ ಬರುತ್ತಿದ್ದ ಆಪೆ ರಿಕ್ಷಾಗೆ ಸೈಡ್ ಕೊಡುವ ವೇಳೆ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಪರಿಣಾಮ ದ್ವಿಚಕ್ರ ವಾಹನ ಸವಾರ ಕಡಬದ ಯುವಕ ಶಬೀಬ್ ಅವರ ಮುಖ ಹಾಗೂ ಕಾಲಿಗೆ

ದ್ವಿಚಕ್ರ ವಾಹನ ಪಲ್ಟಿ- ಕಡಬದ ಯುವಕನಿಗೆ ಗಾಯ Read More »

ಕರಾವಳಿ, ಕ್ರೈಮ್ ನ್ಯೂಸ್

ನೆಟ್ ಫ್ಲಿಕ್ಸ್ ನಿಂದ 47 ಕೋಟಿ ವಂಚನೆ ಆರೋಪ-ದೂರು

(ನ್ಯೂಸ್ ಕಡಬ) newskadaba.com ಸೆ. 26. ಬಾಲಿವುಡ್‌ ನಿರ್ಮಾಪಕ ವಶು ಭಗ್ನಾನಿ ಅವರು ನೆಟ್ ಫ್ಲಿಕ್ಸ್ ಇಂಡಿಯಾ ಸಂಸ್ಥೆ ಚಿತ್ರದ ಹಕ್ಕುಗಳಿಗಾಗಿ 47.37 ಕೋಟಿಗಳಷ್ಟು ವಂಚಿಸಿದ್ದಾರೆ ಎಂದು ಆರೋಪಿಸಿ ಪೊಲೀಸ್‌‍ ದೂರು ದಾಖಲಿಸಿರುವ ಕುರಿತು ವರದಿಯಾಗಿದ್ದು, ಆದರೆ ಈ ಆರೋಪವನ್ನು ಸಂಸ್ಥೆ ನಿರಾಕರಿಸಿರುವುದಾಗಿ ತಿಳಿದುಬಂದಿದೆ. ಮುಂಬೈ ಪೊಲೀಸ್‌‍ನ ಆರ್ಥಿಕ ಅಪರಾಧ ವಿಭಾಗ (ಇಒಡಬ್ಲ್ಯು) ಭಗ್ನಾನಿ ಅವರು ಸಲ್ಲಿಸಿದ ದೂರಿನ ತನಿಖೆಯನ್ನು ಪ್ರಾರಂಭಿಸಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ವರದಿಯ ಪ್ರಕಾರ, ನಿರ್ಮಾಪಕರು ತಮ್ಮ ಇತ್ತೀಚಿನ ಮೂರು ಹಿಂದಿ ಚಲನಚಿತ್ರಗಳಾದ

ನೆಟ್ ಫ್ಲಿಕ್ಸ್ ನಿಂದ 47 ಕೋಟಿ ವಂಚನೆ ಆರೋಪ-ದೂರು Read More »

ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಮೈಸೂರು ದಸರಾ ಉದ್ಘಾಟನೆಗೆ ಸಾಹಿತಿ ಪ್ರೊ.ಹಂ.ಪ.ನಾಗರಾಜಯ್ಯ ಆಹ್ವಾನ

(ನ್ಯೂಸ್ ಕಡಬ) newskadaba.com ಸೆ. 26. ಇತಿಹಾಸ ಪ್ರಸಿದ್ದ ಮೈಸೂರು ದಸರಾ ಮಹೋತ್ಸವ ಉದ್ಘಾಟನೆಗೆ ಹೆಸರಾಂತ ಸಂಶೋಧಕ, ಸಾಹಿತಿ ಪ್ರೊ.ಹಂ.ಪ. ನಾಗರಾಜಯ್ಯ ಅವರನ್ನು ಮೈಸೂರು ಜಿಲ್ಲಾಡಳಿತದ ವತಿಯಿಂದ ಬೆಂಗಳೂರಿನ ಕ್ರಸೆಂಟ್ ರಸ್ತೆಯಲ್ಲಿರುವ ಅಮೆರಿಕನ್ ಕಾಲನಿಯಲ್ಲಿರುವ ಅವರ ನಿವಾಸಕ್ಕೆ ತೆರಳಿ ಮೈಸೂರು ಪೇಟ ತೋಡಿಸಿ, ಫಲಪುಷ್ಪ ನೀಡಿ ಆಮಂತ್ರಿಸಲಾಯಿತು. ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಲಕ್ಷ್ಮೀಕಾಂತ ರೆಡ್ಡಿ, ಮೈಸೂರು ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್, ಜಿಪಂ ಸಿಇಒ ಕೆ.ಎಂ.ಗಾಯತ್ರಿ, ಎಸ್ಪಿ ವಿಷ್ಣುವರ್ಧನ್, ಅಪರ ಜಿಲ್ಲಾಧಿಕಾರಿ ಡಾ.ಪಿ.ಶಿವರಾಜ್, ಚಾಮುಂಡಿ ಬೆಟ್ಟದ

ಮೈಸೂರು ದಸರಾ ಉದ್ಘಾಟನೆಗೆ ಸಾಹಿತಿ ಪ್ರೊ.ಹಂ.ಪ.ನಾಗರಾಜಯ್ಯ ಆಹ್ವಾನ Read More »

ಕರ್ನಾಟಕ
Scroll to Top