newskadaba

ಮಹಿಳೆಯರ ಟಿ20 ವಿಶ್ವಕಪ್; ಭಾರತದ ವಿರುದ್ಧ ಆಸ್ಟ್ರೇಲಿಯಕ್ಕೆ ರೋಚಕ ಗೆಲುವು

(ನ್ಯೂಸ್ ಕಡಬ) newskadaba.com ಅ. 14 . ಮಹಿಳೆಯರ ಟಿ20 ವಿಶ್ವಕಪ್ ನ 18ನೇ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಆಸ್ಟ್ರೇಲಿಯ ತಂಡ ಭಾರತ ತಂಡದ ವಿರುದ್ಧ 9 ರನ್ ಗಳಿಂದ ರೋಚಕ ಜಯ ಸಾಧಿಸಿದೆ. ಈ ಮೂಲಕ ಟೂರ್ನಿಯಲ್ಲಿ ಸತತ 4ನೇ ಗೆಲುವು ದಾಖಲಿಸಿದೆ. ಎ ಗುಂಪಿನ ಪಂದ್ಯದಲ್ಲಿ ಗೆಲ್ಲಲು 152 ರನ್ ಗುರಿ ಪಡೆದ ಭಾರತವು ನಾಯಕಿ ಹರ್ಮನ್ ಪ್ರೀತ್ ಕೌರ್ (ಔಟಾಗದೆ 54, 47 ಎಸೆತ, 6 ಬೌಂಡರಿ) ಏಕಾಂಗಿ ಹೋರಾಟದ ಹೊರತಾಗಿಯೂ 20 […]

ಮಹಿಳೆಯರ ಟಿ20 ವಿಶ್ವಕಪ್; ಭಾರತದ ವಿರುದ್ಧ ಆಸ್ಟ್ರೇಲಿಯಕ್ಕೆ ರೋಚಕ ಗೆಲುವು Read More »

ಕ್ರೀಡಾ ನ್ಯೂಸ್

ಪೆಟ್ರೋಲ್ ಹಾಕಿಸಿ ಹಣ ಕೊಡದೇ ಪರಾರಿ- ದೂರು ದಾಖಲು

(ನ್ಯೂಸ್ ಕಡಬ) newskadaba.com ಅ. 14. ಪೆಟ್ರೋಲ್ ಹಾಕಿಸಿ ಹಣ ಕೊಡದೇ ಚಾಲಕ ಕಾರಿನೊಂದಿಗೆ ಪರಾರಿಯಾಗಿರುವ ಘಟನೆ ಕಾರ್ಕಳದಲ್ಲಿ ನಡೆದಿದೆ. ಕಾರ್ಕಳದ ಅನು ಪೆಟ್ರೋಲ್ ಬಂಕ್‌ಗೆ ಕಾರಿನಲ್ಲಿ ಬಂದ ವ್ಯಕ್ತಿಯೋರ್ವ, 4253.88ರೂ. ಮೊತ್ತದ ಪೆಟ್ರೋಲ್ ಹಾಕಿಸಿಕೊಂಡು ಬಳಿಕ ಹಣ ನೀಡದೆ ಕಾರನ್ನು ಚಲಾಯಿಸಿಕೊಂಡು ಹೋಗಿ ಮೋಸ ಮಾಡಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪೆಟ್ರೋಲ್ ಹಾಕಿಸಿ ಹಣ ಕೊಡದೇ ಪರಾರಿ- ದೂರು ದಾಖಲು Read More »

ಕರಾವಳಿ, ಬ್ರೇಕಿಂಗ್ ನ್ಯೂಸ್

ಭಾರೀ ಮಳೆಗೆ ಗುಡ್ಡ ಕುಸಿತ- ರಸ್ತೆ ಸಂಚಾರ ಅಸ್ತವ್ಯಸ್ತ..!

(ನ್ಯೂಸ್ ಕಡಬ) newskadaba.com ಅ. 14. ಭಾರೀ ಮಳೆಗೆ ಗುಡ್ಡ ಕುಸಿದು ರಸ್ತೆ ಹಾಗೂ ಮನೆಯ ಮೇಲೆ ಬಿದ್ದ ಘಟನೆ ಬೆಳ್ತಂಗಡಿ ತಾಲೂಕಿನ ಮುಂಡಾಜೆಯಲ್ಲಿ ಭಾನುವಾರದಂದು ರಾತ್ರಿ ಸಂಭವಿಸಿದೆ. ರಸ್ತೆಯಲ್ಲಿ ವಾಹನ ಹಾಗೂ ಜನರ ಸಂಚಾರಕ್ಕೆ ತೊಡಕಾಗುವ ರೀತಿಯಲ್ಲಿ ಮುಚ್ವಿ ಹೋಗಿದೆ. ಭಾನುವಾರದಂದು ರಾತ್ರಿ ಸುರಿದ ಭಾರೀ ಮಳೆಗೆ ಮುಂಡಾಜೆ ಗ್ರಾಮದ ಪಿಲತ್ತಡ್ಕ ಎಂಬಲ್ಲಿ ವನದುರ್ಗಾ ದೇವಸ್ಥಾನಕ್ಕೆ ಹೋಗುವ ರಸ್ತೆಯಲ್ಲಿ ಶ್ರೀಧರ ಪೂಜಾರಿ ಎಂಬವರ ಮನೆ ಸಮೀಪ ಗುಡ್ಡ ಕುಸಿದಿದ್ದು, ರಸ್ತೆಗೆ ಹಾಗೂ ಮನೆಯ ಹಿಂಭಾಗದಲ್ಲಿ ಮಣ್ಣು

ಭಾರೀ ಮಳೆಗೆ ಗುಡ್ಡ ಕುಸಿತ- ರಸ್ತೆ ಸಂಚಾರ ಅಸ್ತವ್ಯಸ್ತ..! Read More »

ಕರಾವಳಿ
Theft, crime, Robbery

ವೈನ್ ಶಾಪ್ ಬೀಗ ಮುರಿದು ನಗದು, ಮದ್ಯ ಕಳವು

(ನ್ಯೂಸ್ ಕಡಬ) newskadaba.com ಅ. 14. ವೈನ್ಸ್ ಶಾಪ್‌ ನ ಬೀಗ ಒಡೆದು ಒಳನುಗ್ಗಿದ ಕಳ್ಳರು ಹಣ ಹಾಗೂ ಮದ್ಯದ ಬಾಟಲಿಗಳನ್ನು ಕಳವುಗೈದ ಘಟನೆ ನಗರದ ಬಸ್ ನಿಲ್ದಾಣದ ಸಮೀಪವೇ ಇರುವ ತ್ರಿ ಸ್ಟಾರ್ ವೈನ್ ಶಾಪ್ ನಲ್ಲಿ ನಡೆದಿದೆ. ಅಂಗಡಿಯ ಹೊರಗಿನ ಬೀಗ ಒಡೆದು ಶಟರ್ ತೆಗೆದು ಒಳಗೆ ನುಗ್ಗಿದ ಕಳ್ಳರು ಅಂಗಡಿಯ ಒಳಗೆ ಇರಿಸಲಾಗಿದ್ದ ಸುಮಾರು ಆರು ಸಾವಿರ ರೂ. ಗಿಂತಲೂ ಅಧಿಕ ನಗದನ್ನು ಅಪಹರಿಸಿರುವುದಾಗಿ ತಿಳಿದು ಬಂದಿದೆ. ಬೆಳ್ತಂಗಡಿ ಪೊಲೀಸರು ಸ್ಥಳಕ್ಕೆ ಆಗಮಿಸಿ

ವೈನ್ ಶಾಪ್ ಬೀಗ ಮುರಿದು ನಗದು, ಮದ್ಯ ಕಳವು Read More »

ಕರಾವಳಿ, ಬ್ರೇಕಿಂಗ್ ನ್ಯೂಸ್
crime, arrest, suspected

ತಲೆಮರೆಸಿಕೊಂಡಿದ್ದ ವಾರಂಟ್ ಆರೋಪಿ ಅರೆಸ್ಟ್

(ನ್ಯೂಸ್ ಕಡಬ) newskadaba.com ಅ. 14. ವಿವಿಧ ಪ್ರಕರಣಗಳಲ್ಲಿ ಭಾಗಿಯಾಗಿ ತಲೆಮರೆಸಿಕೊಂಡಿದ್ದ ವಾರಂಟ್ ಆರೋಪಿಯನ್ನು ಬೆಳ್ತಂಗಡಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತನನ್ನು ಆರೋಪಿ ಹಮೀದ್ ಯಾನೆ ಜಫಾರ್ ಹಮೀದ್ ಹಾನೆ ಕುಂಞಿಮೋನು ಎಂದು ಗುರುತಿಸಲಾಗಿದೆ. ಆರೋಪಿಯ ವಿರುದ್ಧ ದ.ಕ. ಜಿಲ್ಲೆಯ ಬಂಟ್ವಾಳ, ಉಪ್ಪಿನಂಗಡಿ, ಕಡಬ, ಪುತ್ತೂರು, ವೇಣೂರು, ಧರ್ಮಸ್ಥಳ, ಪುಂಜಾಲಕಟ್ಟೆ, ಮಂಗಳೂರು ನಗರ, ಬಂದರು ಠಾಣೆ, ಹೊರ ಜಿಲ್ಲೆಗಳಾದ ಹಾಸನದ ಬೇಲೂರು, ಚಿಕ್ಕಮಗಳೂರು ಜಿಲ್ಲೆ, ಕೊಪ್ಪ, ಹರಿಹರಪುರ, ಚಿಕ್ಕಮಗಳೂರು, ಮೂಡಿಗೆರೆ, ಉಡುಪಿ ಜಿಲ್ಲೆ ಪಡುಬಿದ್ರಿ, ಮಡಿಕೇರಿ ಹಾಗೂ

ತಲೆಮರೆಸಿಕೊಂಡಿದ್ದ ವಾರಂಟ್ ಆರೋಪಿ ಅರೆಸ್ಟ್ Read More »

ಕರಾವಳಿ, ಕ್ರೈಮ್ ನ್ಯೂಸ್

ಶಕ್ತಿ ವಿದ್ಯಾಸಂಸ್ಥೆಯಲ್ಲಿ ಶಾರದಾಪೂಜೆ ಮತ್ತು ಆಯುಧಪೂಜೆ

(ನ್ಯೂಸ್ ಕಡಬ) newskadaba.com ಅ. 12. ಶಕ್ತಿನಗರದ ಶಕ್ತಿ ರೆಸಿಡೆನ್ಶಿಯಲ್ ಶಾಲೆ, ಶಕ್ತಿ ಪದವಿ ಪೂರ್ವಕಾಲೇಜು ಮತ್ತು ಶಕ್ತಿ ಪೂರ್ವ ಪ್ರಾಥಮಿಕ ಶಾಲೆಯಲ್ಲಿ ಶಾರದ ಪೂಜೆ ಹಾಗೂ ಆಯುಧ ಪೂಜೆ ನೆರವೇರಿತು. ಸಂಸ್ಥೆಯ ಎಲ್ಲಾ ಶಾಲಾ ಬಸ್ ಸೇರಿದಂತೆ ಸಿಬ್ಬಂದಿ ವರ್ಗದವರ ವಾಹನಗಳಿಗೆ ಆಯುಧ ಪೂಜೆ ನೆರವೇರಿಸಲಾಯಿತು. ಕಾರ್ಯಕ್ರಮದಲ್ಲಿ ಸಂಸ್ಥೆಯ ಆಡಳಿತಾಧಿಕಾರಿ ಡಾ.ಕೆ.ಸಿ ನಾೈಕ್, ಆಡಳಿತ ಮಂಡಳಿ ಟ್ರಸ್ಟಿ ಶ್ರೀಮತಿ ಸಗುಣ ಸಿ. ನಾೈಕ್, ಪ್ರಧಾನ ಸಲಹೆಗಾರ ರಮೇಶ ಕೆ., ಶಕ್ತಿ ಪದವಿ ಪೂರ್ವಕಾಲೇಜಿನ ಪ್ರಾಂಶುಪಾಲರಾದ ವೆಂಕಟೇಶ

ಶಕ್ತಿ ವಿದ್ಯಾಸಂಸ್ಥೆಯಲ್ಲಿ ಶಾರದಾಪೂಜೆ ಮತ್ತು ಆಯುಧಪೂಜೆ Read More »

ಕರಾವಳಿ

ಗಾಂಧಿ ಜಯಂತಿ: ಕಡಬ ಪಟ್ಟಣ ಸ್ವಚ್ಚತಾ ಕಾರ್ಯಕ್ರಮ

(ನ್ಯೂಸ್ ಕಡಬ) newskadaba.com ಅ. 12. ಕಡಬ ಪಟ್ಟಣ ಪಂಚಾಯತ್, ದ.ಕ. ಉಡುಪಿ ಜಿಲ್ಲಾ ಗ್ಯಾರೇಜ್ ಮಾಲಕರ ಸಂಘದ ಕಡಬ ತಾಲೂಕು ಘಟಕದ ಜಂಟಿ ಆಶ್ರಯದಲ್ಲಿ ಗಾಂಧೀಜಿ ಹಾಗೂ ಲಾಲ್‍ ಬಹದ್ದೂರ್ ಶಾಸ್ತ್ರಿಯವರ ಜನ್ಮ ದಿನಾಚರಣೆ ಮತ್ತು ಕಡಬ ಪಟ್ಟಣ ಸ್ವಚ್ಚತಾ ಕಾರ್ಯಕ್ರಮವು ನಡೆಯಿತು. ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಲೀಲಾವತಿ ಇ. ಕಡಬ ಶ್ರೀ ಗಣೇಶ್ ಬಿಲ್ಡಿಂಗ್ ಬಳಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ,  ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿಯವರ ಭಾವ ಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಶುಭ

ಗಾಂಧಿ ಜಯಂತಿ: ಕಡಬ ಪಟ್ಟಣ ಸ್ವಚ್ಚತಾ ಕಾರ್ಯಕ್ರಮ Read More »

ಕರಾವಳಿ

ಕೈ ಕಳೆದುಕೊಂಡು ಅಸಾಯಕನಾಗಿರುವ ರವಿಚಂದ್ರ ಸಹಾಯಕ್ಕೆ ಮನವಿ

(ನ್ಯೂಸ್ ಕಡಬ) newskadaba.com ಅ. 12. ಸೆಂಟ್ರಿಂಗ್ ಮಿಲ್ಲರ್ ಆಪರೇಟರ್ ಆಗಿ  ಕೆಲಸ ಮಾಡುತ್ತಿದ್ದ ಕೂಲಿ ಕಾರ್ಮಿಕನೋರ್ವ ಯಂತ್ರಕ್ಕೆ ಕೈಸಿಲುಕಿ  ಬಲದ  ಕೈಕಳೆದುಕೊಂಡು ಕೂಲಿ ಕೆಲಸ ಮಾಡಲು ಸಾಧ್ಯವಾಗದೆ ಕಂಗಾಲಾಗಿದ್ದು, ಅಸಾಯಕರಾಗಿ ಸಾರ್ವಜನಿಕರಿಂದ ಧನ ಸಹಾಯದ ನಿರೀಕ್ಷೆಯಲಿದ್ದಾರೆ. ಕಡಬ ತಾಲೂಕು ಹಳೆನೇರಂಕಿ ಗ್ರಾಮದ  ಕಲ್ಲೇರಿಯ ನಿವಾಸಿ ಓಮರಾ ಎಂಬವರ ಪುತ್ರ ರವಿಚಂದ್ರ ಈಗ ಸಾರ್ವಜನಿಕರ ಸಹಾಯದ ನಿರೀಕ್ಷೆಯಲ್ಲಿದ್ದಾರೆ. ಇವರು ಕೂಲಿ ಕಾರ್ಮಿಕನಾಗಿ ಸೆಂಟ್ರಿಂಗ್ ಕೆಲಸದಲ್ಲಿ ಮಿಲ್ಲರ್ ಅಪರೇಟರ್ ಆಗಿ ಕೆಲಸ ಮಾಡುತ್ತಿದ್ದರು. ಮೇ 17ನೇ 2024 ರಂದು

ಕೈ ಕಳೆದುಕೊಂಡು ಅಸಾಯಕನಾಗಿರುವ ರವಿಚಂದ್ರ ಸಹಾಯಕ್ಕೆ ಮನವಿ Read More »

ಕರಾವಳಿ

ಅಕ್ರಮ ಮರಳು ಸಾಗಾಟ- ಸ್ಥಳೀಯರಿಂದ ದೂರು

(ನ್ಯೂಸ್ ಕಡಬ) newskadaba.com ಅ. 12. ಸರ್ಕಾರಿ ಜಾಗದಿಂದ ಅಕ್ರಮವಾಗಿ ಮರಳನ್ನು ತೆಗೆದು ಸಾಗಾಟ ಮಾಡಲಾಗುತ್ತಿದೆ ಎಂದು ನಗರದ ಹೊರವಲಯದ ಬೆಂಗ್ರೆಯ ಸ್ಥಳೀಯ ನಿವಾಸಿಗಳು ದೂರು ನೀಡಿರುವ ಕುರಿತು ವರದಿಯಾಗಿದೆ. ತೋಟಬೆಂಗ್ರೆ ಹಿಂದೂ ರುದ್ರಭೂಮಿಯ ಸಮೀಪ ಸುಮಾರು 6 ಎಕರೆ ಜಾಗವನ್ನು ಮೀನುಗಾರಿಕಾ ಇಲಾಖೆಗೆ ಬಂದರು ಇಲಾಖೆಯಿಂದ ಹಸ್ತಾಂತರಿಸಲಾಗಿತ್ತು. ಜೆಟ್ಟಿ ನಿರ್ಮಾಣ ಮಾಡುವ ಉದ್ದೇಶದಿಂದ ಇದನ್ನು ನೀಡಲಾಗಿದ್ದು, ಬಾಕಿ ಉಳಿದ ಜಾಗದಲ್ಲಿ ಹಾಗೆಯೇ ಎಷ್ಟೋ ವರ್ಷಗಳಿಂದ ಮರಳು ಇದೆ. ಅದನ್ನು ತೆರವು ಮಾಡುವಂತಿಲ್ಲ. ಆದರೆ 3-4 ತಿಂಗಳ

ಅಕ್ರಮ ಮರಳು ಸಾಗಾಟ- ಸ್ಥಳೀಯರಿಂದ ದೂರು Read More »

ಕರಾವಳಿ, ಕ್ರೈಮ್ ನ್ಯೂಸ್

ಬಾವಿಗೆ ಬಿದ್ದ ಕಾರು- ದಂಪತಿ ಪವಾಡ ಸದೃಶ ಪಾರು

(ನ್ಯೂಸ್ ಕಡಬ) newskadaba.com ಅ. 12. ಯುವ ದಂಪತಿಗಳು ಪ್ರಯಾಣಿಸುತ್ತಿದ್ದ ಕಾರೊಂದು 15 ಅಡಿ ಆಳದ ಬಾವಿಗೆ ಬಿದ್ದಿದ್ದು, ಪ್ರಯಾಣಿಕರು ಪವಾಡ ಸದೃಶ ರೀತಿಯಲ್ಲಿ ಪಾರಾಗಿರುವ ಘಟನೆ ಕೊಚ್ಚಿಯ ಪಟ್ಟಿಮಟ್ಟಂ ಬಳಿ ನಡೆದಿದೆ. ಕಾರು ಆಕಸ್ಮಿಕವಾಗಿ ಬಾವಿಯೊಳಗೆ ಬಿದ್ದಾಗ ಬಾವಿಯಲ್ಲಿ ಐದು ಅಡಿ ನೀರಿತ್ತು ಎಂದೆನ್ನಲಾಗಿದೆ. ಅಗ್ನಿಶಾಮಕ ಠಾಣೆಯ ಅಧಿಕಾರಿಯ ಪ್ರಕಾರ, ದಂಪತಿಗೆ ತಿಳಿದಿಲ್ಲದ ರಸ್ತೆಯಲ್ಲಿ ತಗ್ಗು ಇದ್ದುದರಿಂದ ಮತ್ತು ಕಾರು ಆ ದಾರಿಯಾಗಿ ಸಂಚರಿಸಿದಾಗ ನಿಯಂತ್ರಣ ತಪ್ಪಿ ಪಕ್ಕದ ಅಂಗಡಿಗೆ ಡಿಕ್ಕಿ ಹೊಡೆದು ನಂತರ ಹತ್ತಿರದ

ಬಾವಿಗೆ ಬಿದ್ದ ಕಾರು- ದಂಪತಿ ಪವಾಡ ಸದೃಶ ಪಾರು Read More »

ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್
Scroll to Top