newskadaba

ಮಾಜಿ ಸಚಿವ ನಾಗೇಂದ್ರ ಜೈಲಿನಿಂದ ಬಿಡುಗಡೆ

(ನ್ಯೂಸ್ ಕಡಬ) newskadaba.com ಅ.16. ವಾಲ್ಮೀಕಿ ಅಭಿವೃದ್ಧಿ ನಿಗಮದ ಅಕ್ರಮಕ್ಕೆ ಸಂಬಂಧಿಸಿ ಬಂಧನಕ್ಕೊಳಗಾಗಿ ನ್ಯಾಯಾಂಗ ಬಂಧನದಲ್ಲಿದ್ದ ಮಾಜಿ ಸಚಿವ ನಾಗೇಂದ್ರ ಅವರು ಪರಪ್ಪನ ಅಗ್ರಹಾರ ಜೈಲಿನಿಂದ ಬುಧವಾರ ಬೆಳಿಗ್ಗೆ ಬಿಡುಗಡೆಗೊಂಡಿದ್ದಾರೆ.

ಮಾಜಿ ಸಚಿವ ನಾಗೇಂದ್ರ ಜೈಲಿನಿಂದ ಬಿಡುಗಡೆ Read More »

ಕರ್ನಾಟಕ

ಮದ್ಯ ಅಕ್ರಮ ದಾಸ್ತಾನು- ದಾಳಿ

(ನ್ಯೂಸ್ ಕಡಬ) newskadaba.com ಅ.16. ಪಯಸ್ವಿನಿ ರಿಫ್ರೆಶ್‌ ಮೆಂಟ್ ಆಯಂಡ್ ಕೂಲ್ ಜೋನ್ ಅಂಗಡಿಯಲ್ಲಿ ಅಕ್ರಮವಾಗಿ ಸಂಗ್ರಹಿಸಿಡಲಾಗಿದ್ದ ಒಟ್ಟು 111.750 ಲೀಟರ್ ಕೂರ್ಗ್ ವಿಂಟೇಜ್ ಹೋಮ್ ಮೇಡ್ ವೈನ್‌ನ್ನು ಅಬಕಾರಿ ಇಲಾಖಾ ಅಧಿಕಾರಿಗಳು ಪತ್ತೆ ಹಚ್ಚಿ ವಶಪಡಿಸಿಕೊಂಡಿರುವ ಘಟನೆ ಸುಳ್ಯದಿಂದ ವರದಿಯಾಗಿದೆ. ಸುಳ್ಯ ವಲಯ ವಾಪ್ತಿಯ ಅರಂತೋಡು ಗ್ರಾಮದಲ್ಲಿ ಅಬಕಾರಿ ಇಲಾಖೆಯ ಅಧಿಕಾರಿಗಳು ಗಸ್ತು ತಿರುಗುತ್ತಿದ್ದಾಗ ದೊರೆತ ಮಾಹಿತಿಯ ಮೇರೆಗೆ ದಾಳಿ ನಡೆಸಿ ಅಕ್ರಮವಾಗಿ ಸಂಗ್ರಹಿಸಿಡಲಾಗಿದ್ದ ಮದ್ಯವನ್ನು ಪತ್ತೆ ಹಚ್ಚಿ ಅಂಗಡಿ ಮಾಲಿಕ ಮುರಾರಿ ಎಂಬಾತನ ವಿರುದ್ಧ

ಮದ್ಯ ಅಕ್ರಮ ದಾಸ್ತಾನು- ದಾಳಿ Read More »

ಕರಾವಳಿ, ಬ್ರೇಕಿಂಗ್ ನ್ಯೂಸ್

“ಮಗನೇ ಹುಟ್ಟಿ ಬಂದ”- ರೇಣುಕಾಸ್ವಾಮಿ ತಂದೆ ಕಣ್ಣೀರು

(ನ್ಯೂಸ್ ಕಡಬ) newskadaba.com ಅ.16. ದರ್ಶನ್ ಮತ್ತು ಗ್ಯಾಂಗ್ ನಿಂದ ಕೊಲೆಯಾಗಿದ್ದ ಚಿತ್ರದುರ್ಗದ ರೇಣುಕಾಸ್ವಾಮಿ ಪತ್ನಿ ಸಹನಾ ಬುಧವಾರದಂದು ಬೆಳಗ್ಗೆ ಗಂಡು ಮಗುವಿಗೆ ಜನ್ಮನೀಡಿದ್ದಾರೆ.   ಈ ಕುರಿತು ಮಾಧ್ಯಮದೊಂದಿಗೆ ಮಾತನಾಡಿದ ರೇಣುಕಾಸ್ವಾಮಿ ತಂದೆ ಕಾಶಿನಾಥಯ್ಯ ಶಿವನಗೌಡರ್, ‘ನನ್ನ ಸೊಸೆ ಸಹನಾಗೆ ಸಹಜ ಹೆರಿಗೆಯಾಗಿದ್ದು ರೇಣುಕಾಸ್ವಾಮಿಯೇ ಹುಟ್ಟಿ ಬಂದಿದ್ದಾನೆ. ದೇವರ ಕೃಪೆಯಿಂದ ಸೊಸೆ ಹಾಗೂ ಮೊಮ್ಮಗ ಆರೋಗ್ಯವಾಗಿದ್ದಾರೆ. ಕಳೆದ ನಾಲ್ಕು ತಿಂಗಳುಗಳಿಂದ ನಾವು ಅನುಭವಿಸಿದ ಕಷ್ಟ ಅಷ್ಟಿಷ್ಟಲ್ಲ. ನನ್ನ ಸೊಸೆ ಕೂಡ ತೀವ್ರ ನೋವಿನಲ್ಲಿದ್ದರು. ಆದರೂ ವೈದ್ಯರು

“ಮಗನೇ ಹುಟ್ಟಿ ಬಂದ”- ರೇಣುಕಾಸ್ವಾಮಿ ತಂದೆ ಕಣ್ಣೀರು Read More »

ಕರ್ನಾಟಕ

ಕರ್ನಾಟಕ ಸಾಹಿತ್ಯ ಅಕಾಡೆಮಿ ವತಿಯಿಂದ ಯುವಕವಿಗೋಷ್ಠಿ

(ನ್ಯೂಸ್ ಕಡಬ) newskadaba.com ಅ.16. ಕರ್ನಾಟಕ ಸಾಹಿತ್ಯ ಅಕಾಡೆಮಿಯ ಕರ್ನಾಟಕ ಸಂಭ್ರಮ – 50ರ ಅಭಿಯಾನದ ಅಂಗವಾಗಿ ಬೆಂಗಳೂರು, ಮೈಸೂರು, ಬೆಳಗಾವಿ ಹಾಗೂ ಕಲಬುರಗಿ ವಿಭಾಗಗಳಲ್ಲಿ ವಿಭಾಗವಾರು `ಯುವಕವಿ ಗೋಷ್ಟಿ’ಗಳನ್ನು ಆಯೋಜಿಸಲಾಗಿದ್ದು, ಆಸಕ್ತ 20 ರಿಂದ 40 ವರ್ಷ ವಯಸ್ಸಿನ ಯುವಕವಿಗಳಿಂದ ಕವಿತೆಗಳನ್ನು ಆಹ್ವಾನಿಸಲಾಗಿದೆ. ರಾಜ್ಯದ ಎಲ್ಲಾ ಭಾಗದ ಆಸಕ್ತ ಕವಿಗಳು ಕನಿಷ್ಠ 3 ಕವಿತೆಗಳನ್ನು ಕಳುಹಿಸಿಕೊಡಬಹುದು. ಕವಿತೆಗಳನ್ನು ಕಳುಹಿಸಲು ಅಕ್ಟೋಬರ್ 30 ಕೊನೆಯ ದಿನ. ಆಸಕ್ತ ಕವಿಗಳು ಕವಿತೆಗಳನ್ನು ಸಲ್ಲಿಸುವಾಗ ಅನುಸರಿಸಬೇಕಾದ ಕ್ರಮಗಳ ಬಗ್ಗೆ ಕರ್ನಾಟಕ

ಕರ್ನಾಟಕ ಸಾಹಿತ್ಯ ಅಕಾಡೆಮಿ ವತಿಯಿಂದ ಯುವಕವಿಗೋಷ್ಠಿ Read More »

ಕರಾವಳಿ

ಜಪ್ತಿಯಾಗಿದ್ದ ಮನೆಯ ಸಾಲ ತೀರಿಸಿ ಮಾನವೀಯತೆ ಮೆರೆದ ಯೂಸುಫ್ ಅಲಿ..!

(ನ್ಯೂಸ್ ಕಡಬ) newskadaba.com ಅ. 16. ಬ್ಯಾಂಕ್ ಸಾಲ ಸಂಪೂರ್ಣ ಕಟ್ಟಿ ಮನೆ ಉಳಿಸಿಕೊಡುವ ಮೂಲಕ ಬೀದಿಪಾಲಾಗುತ್ತಿದ್ದ ಕುಟುಂಬವನ್ನು ರಕ್ಷಿಸಿ ಲುಲು ಗ್ರೂಪ್ ಮಾಲೀಕ, ಉದ್ಯಮಿ ಯೂಸುಫ್ ಅಲಿ ಮಾನವೀಯತೆ ಮೆರೆದಿರುವ ಕುರಿತು ವರದಿಯಾಗಿದೆ. ಕೇರಳದ ಉತ್ತರ ಪರವೂರ್ ನ ಮಡಪ್ಲತುರಥ್ ಎಂಬಲ್ಲಿ ಸ್ಥಳೀಯ ನಿವಾಸಿ ಸಂಧ್ಯಾ ಮತ್ತು ಪತಿ 2019ರಲ್ಲಿ ಮನೆ ಕಟ್ಟಲು ಮಣಪ್ಪುರಂ ಹಣಕಾಸು ಸಂಸ್ಥೆಯಿಂದ 4 ಲಕ್ಷ ರೂ. ಸಾಲ ಪಡೆದಿದ್ದರು. 4.8 ಸೆಂಟ್ ಜಾಗದಲ್ಲಿ ಮನೆ ಕಟ್ಟಿಕೊಂಡು ಕುಟುಂಬ ಜೀವನ ನಡೆಸುತ್ತಿತ್ತು.

ಜಪ್ತಿಯಾಗಿದ್ದ ಮನೆಯ ಸಾಲ ತೀರಿಸಿ ಮಾನವೀಯತೆ ಮೆರೆದ ಯೂಸುಫ್ ಅಲಿ..! Read More »

ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ತಲಕಾವೇರಿ: ನಾಳೆ ಪವಿತ್ರ ತೀರ್ಥೋದ್ಭವ

(ನ್ಯೂಸ್ ಕಡಬ)newskadaba.com, ಅ. 14 ಮಡಿಕೇರಿ: ಕಾವೇರಿಯ ಉಗಮಸ್ಥಾನ ತಲಕಾವೇರಿ ಶ್ರೀ ಭಗಂಡೇಶ್ವರ-ತಲಕಾವೇರಿ ದೇವಾಲಯದಲ್ಲಿ ಅ. 17ರ ಬೆಳಗ್ಗೆ 7.40ಕ್ಕೆ ತುಲಾ ಸಂಕ್ರಮಣ ಮುಹೂರ್ತದಲ್ಲಿ ಪವಿತ್ರ ತೀರ್ಥೋದ್ಭವ ಜರಗಲಿದೆ. ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌, ಜಿಲ್ಲಾ ಉಸ್ತುವಾರಿ ಸಚಿವ ಎನ್‌.ಎಸ್‌. ಭೋಸರಾಜು, ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾ ರೆಡ್ಡಿ, ಸಂಸದ ಯದುವೀರ್‌ ಕೃಷ್ಣದತ್ತ ಚಾಮರಾಜ ಒಡೆಯರ್‌, ಶಾಸಕರಾದ ಎ.ಎಸ್‌. ಪೊನ್ನಣ್ಣ, ಡಾ| ಮಂತರ್‌ ಗೌಡ ಮುಂತಾದವರು ಪಾಲ್ಗೊಳ್ಳಲಿದ್ದಾರೆ.ಪೊಲೀಸ್‌ ಇಲಾಖೆಯಿಂದ ಜಿಲ್ಲಾ ಮಟ್ಟದಲ್ಲಿ ಬಂದೋಬಸ್ತ್ ಮಾಡಲಾಗಿದ್ದು, ಅಗತ್ಯ ಪೊಲೀಸರನ್ನು

ತಲಕಾವೇರಿ: ನಾಳೆ ಪವಿತ್ರ ತೀರ್ಥೋದ್ಭವ Read More »

ಕರ್ನಾಟಕ

ಶಾಸಕ ಮುನಿರತ್ನ ಜೈಲಿನಿಂದ ರಿಲೀಸ್..!

(ನ್ಯೂಸ್ ಕಡಬ) newskadaba.com ಅ.16. ಅತ್ಯಾಚಾರ ಆರೋಪ ಪ್ರಕರಣದಲ್ಲಿ ಜೈಲು ಸೇರಿದ್ದ ಶಾಸಕ ಮುನಿರತ್ನ ಅವರಿಗೆ ಕೋರ್ಟ್ ಜಾಮೀನು ನೀಡಿದ್ದು, ಈ ಹಿನ್ನೆಲೆ ಪರಪ್ಪನ ಅಗ್ರಹಾರ ಜೈಲಿನಿಂದ ಶಾಸಕ ಮುನಿರತ್ನ ಬಿಡುಗಡೆ ಆಗಿದ್ದಾರೆ. ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಮಂಗಳವಾರದಂದು ಶಾಸಕ ಮುನಿರತ್ನಗೆ ಜಾಮೀನು ಮಂಜೂರು ಮಾಡಿ ಆದೇಶ ಹೊರಡಿಸಿತ್ತು. ಶಾಸಕ ಮುನಿರತ್ನ ವಿರುದ್ಧ ಮಹಿಳೆಯೊಬ್ಬರು ಅತ್ಯಾಚಾರ ಪ್ರಕರಣ ದಾಖಲಿಸಿದ್ದರು. ಈ ಹಿನ್ನೆಲೆಯಲ್ಲಿ ಮುನಿರತ್ನ ಬಂಧನಕ್ಕೀಡಾಗಿ, ಜೈಲು ಸೇರಿದ್ದರು.

ಶಾಸಕ ಮುನಿರತ್ನ ಜೈಲಿನಿಂದ ರಿಲೀಸ್..! Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್

ತೆಂಗಿನ ಚಿಪ್ಪನ್ನು ಬಳಸಿ ಟಾಯ್ಲೆಟ್ ಫಳ ಫಳ ಹೊಳೆಯುವಂತೆ ಮಾಡಿ..!

(ನ್ಯೂಸ್ ಕಡಬ) newskadaba.com ಅ. 15. ಮನೆಯಲ್ಲಿ ಬಾತ್ ರೂಮ್, ಟಾಯ್ಲೆಟ್ ತೊಳೆದು ಕ್ಲೀನ್ ಮಾಡೋದೇ ಮನೆಮಂದಿಗೆ ದೊಡ್ಡ ಸಾಹಸ ಮಾಡಿದಂತೆ. ಯಾಕೆಂದರೆ ಅದನ್ನು ಎಷ್ಟೇ ತೊಳೆದರೂ ಅದು ತೊಳೆದಂತೆ ಭಾಸವಾಗವುದಿಲ್ಲ. ಎಷ್ಟು ಉಜ್ಜಿದರೂ ತೊಳೆಯದಂತೆ ತೋರುತ್ತದೆ. ಆದರೆ ನಾವು ಹೇಳೋ ಈ ಟಿಪ್ಸ್ ಬಳಸಿದರೆ ನಿಮ್ಮ ಮನೆಯ ಟಾಯ್ಲೆಟ್ ಅನ್ನು ಪಳ ಪಳ ಹೊಳೆಯುವಂತೆ ಮಾಡಬಹುದು. ಹೌದು, ನೈಸರ್ಗಿಕವಾಗಿ ಸಿಗುವ ತೆಂಗಿನ ಚಿಪ್ಪು ಬಳಸಿ ನಿಮ್ಮ ಮನೆಯ ಟಾಯ್ಲೆಟ್ ಅನ್ನು ಪಳ ಪಳ ಹೊಳೆಯುವಂತೆ ಮಾಡಬಹುದು.

ತೆಂಗಿನ ಚಿಪ್ಪನ್ನು ಬಳಸಿ ಟಾಯ್ಲೆಟ್ ಫಳ ಫಳ ಹೊಳೆಯುವಂತೆ ಮಾಡಿ..! Read More »

ಲೈಫ್‍ಸ್ಟೈಲ್

ಅಂಚೆ ಪೇಮೆಂಟ್ ಬ್ಯಾಂಕ್’ನಲ್ಲಿ 344 ಹುದ್ದೆಗಳಿಗೆ ಅರ್ಜಿ ಆಹ್ವಾನ

(ನ್ಯೂಸ್ ಕಡಬ) newskadaba.com ಅ. 15. ಅಂಚೆ ಇಲಾಖೆಯಲ್ಲಿ ಉದ್ಯೋಗ ಮಾಡಲು ಆಸಕ್ತಿಯಿರುವವರಿಗೆ ಅವಕಾಶ ಕಲ್ಪಿಸಲಾಗಿದ್ದು, ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ ಲಿಮಿಟೆಡ್ (ಐಪಿಪಿಬಿ) ಗ್ರಾಮೀಣ ಡಾಕ್ ಸೇವಕ್ ಹುದ್ದೆಗಳನ್ನು ಅಂಚೆ ಇಲಾಖೆಯಿಂದ ಐಪಿಪಿಬಿ ಎಕ್ಸಿಕ್ಯೂಟಿವ್ ಹುದ್ದೆಗಳಿಗೆ ಭರ್ತಿ ಮಾಡಲು ಆನ್ಲೈನ್ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಒಟ್ಟು 344 ಕಾರ್ಯನಿರ್ವಾಹಕ ಹುದ್ದೆಗಳ ನೇಮಕಾತಿಗಾಗಿ ಆನ್ಲೈನ್ ನೋಂದಣಿ ಲಿಂಕ್ ಅನ್ನು https://www.ippbonline.com/  ಅಕ್ಟೋಬರ್ 11, 2024 ರಿಂದ ಸಕ್ರಿಯಗೊಳಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ಐಪಿಪಿಬಿಯ ಅಧಿಕೃತ ಪೋರ್ಟಲ್ ಮೂಲಕ ತಮ್ಮ ಅರ್ಜಿ

ಅಂಚೆ ಪೇಮೆಂಟ್ ಬ್ಯಾಂಕ್’ನಲ್ಲಿ 344 ಹುದ್ದೆಗಳಿಗೆ ಅರ್ಜಿ ಆಹ್ವಾನ Read More »

ಉದ್ಯೋಗ

ಇನ್ಮುಂದೆ ಲಘು ವಾಹನಗಳಿಗಿಲ್ಲ ಟೋಲ್- ಸರಕಾರದಿಂದ ಮಹತ್ತರ ನಿರ್ಧಾರ

(ನ್ಯೂಸ್ ಕಡಬ) newskadaba.com ಅ. 15. ಇನ್ನೇನು ವಿಧಾನಸಭಾ ಚುನಾವಣೆಗೆ ಚುನಾವಣಾ ಆಯೋಗವು ದಿನಾಂಕ ಘೋಷಣೆ ಮಾಡಲು ಕ್ಷಣಗಣನೆ ಆರಂಭವಾಗಿರುವ ಹೊತ್ತಲ್ಲೇ ಮುಖ್ಯಮಂತ್ರಿ ಏಕನಾಥ ಶಿಂಧೆ ನೇತೃತ್ವದ ಮಹಾರಾಷ್ಟ್ರ ಸರ್ಕಾರವು ಮಾಸ್ಟರ್ ಪ್ಲಾನ್ ಪ್ರಯೋಗಿಸಿದ್ದು, ಇನ್ಮುಂದೆ ಈ ಮಹಾನಗರವನ್ನು ಪ್ರವೇಶಿಸುವ ಲಘು ವಾಹನಗಳಿಗೆ ಟೋಲ್ ಇರೋದಿಲ್ಲ. ಈ ಕುರಿತು ಅಲ್ಲಿನ ಸರ್ಕಾರವೇ ಹೊಸ ನಿರ್ಧಾರವನ್ನು ಕೈಗೊಂಡಿರುವುದಾಗಿ ವರದಿಯಾಗಿದೆ. ಈ ಮೂಲಕ ಸೋಮವಾರ (ಅ.14) ಮಧ್ಯರಾತ್ರಿಯಿಂದ ಲಘು ಮೋಟಾರು ವಾಹನಗಳ ಮೂಲಕ ಮುಂಬೈಗೆ ಉಚಿತ ಟೋಲ್ ಪ್ರವೇಶವನ್ನು ಪಡೆಯಬಹುದು

ಇನ್ಮುಂದೆ ಲಘು ವಾಹನಗಳಿಗಿಲ್ಲ ಟೋಲ್- ಸರಕಾರದಿಂದ ಮಹತ್ತರ ನಿರ್ಧಾರ Read More »

ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್
Scroll to Top