News Kadaba

ಚಾಕೊಲೇಟ್ ಪೌಡರ್ ನಲ್ಲಿಟ್ಟು ಲಕ್ಷಾಂತರ ಮೌಲ್ಯದ ಚಿನ್ನ ಸಾಗಾಟ   ➤ ಆರೋಪಿ ವಶಕ್ಕೆ..!

(ನ್ಯೂಸ್ ಕಡಬ)newskadaba.com ತಮಿಳುನಾಡು, ಜ.10. ಚಾಕೊಲೇಟ್ ಪೌಡರ್​ನಲ್ಲಿಟ್ಟು 200 ಗ್ರಾಂ ಚಿನ್ನದ ಸರವನ್ನು ದುಬೈಯಿಂದ ತಿರುಚಿನಾಪಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಾಗಿಸುತ್ತಿದ್ದ ಪ್ರಯಾಣಿಕನಿಗೆ ಕಸ್ಟಮ್ಸ್​ ಅಧಿಕಾರಿಗಳು ಬಂಧಿಸಿದ್ದಾರೆ. 21 ಲಕ್ಷ ರೂ. ಮೌಲ್ಯದ ಚಿನ್ನವನ್ನು ಚಾಕೊಲೇಟ್ ಪೌಡರ್​ನಲ್ಲಿ‌‌ ಇಟ್ಟಿದ್ದ ಎನ್ನಲಾಗಿದೆ. ಏರ್ ಇಂಡಿಯಾ ವಿಮಾನದ ಮೂಲಕ ದುಬೈನಿಂದ ಆಗಮಸಿದ ಪ್ರಯಾಣಿಕರ ಬ್ಯಾಗ್​ಗಳನ್ನು ಕಸ್ಟಮ್ಸ್​ ಅಧಿಕಾರಿಗಳು ಪರಿಶೀಲನೆ ಮಾಡುತ್ತಿದ್ದರು.ಈ ವೇಳೆ ಚಾಕೊಲೇಟ್ ಪೌಡರ್ ನಲ್ಲಿ ಚಿನ್ನ ಪತ್ತೆಯಾಗಿದೆ ಎನ್ನಲಾಗಿದೆ. ಇದೀಗ ಅಧಿಕಾರಿಗಳು ಪ್ರಯಾಣಿಕನನ್ನು ವಶಕ್ಕೆ ಪಡೆದು ತನಿಖೆ ಮಾಡುತ್ತಿದ್ದಾರೆ. […]

ಚಾಕೊಲೇಟ್ ಪೌಡರ್ ನಲ್ಲಿಟ್ಟು ಲಕ್ಷಾಂತರ ಮೌಲ್ಯದ ಚಿನ್ನ ಸಾಗಾಟ   ➤ ಆರೋಪಿ ವಶಕ್ಕೆ..! Read More »

ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಅಂಗಡಿಯೊಂದಕ್ಕೆ ತಗುಲಿದ ಬೆಂಕಿ

(ನ್ಯೂಸ್ ಕಡಬ) newskadaba.com ಮಡಿಕೇರಿ, ಜ.10.  ಪೇಂಟ್ಸ್ ಮಾರಾಟ ಮಾಡುವ ಅಂಗಡಿಯೊಂದರಲ್ಲಿ ಬೆಂಕಿ ಕಾಣಿಸಿಕೊಂಡ ಘಟನೆ ಮಡಿಕೇರಿಯ ಗೋಣಿಕೊಪ್ಪಲುವಿನ ಮುಖ್ಯ ರಸ್ತೆಯ ಬಳಿ ಮಂಗಳವಾರದಂದು ವರದಿಯಾಗಿದೆ. ಸ್ಥಳಕ್ಕೆ ಅಗ್ನಿಶಾಮಕಪಡೆಯ ಸಿಬ್ಬಂದಿ ಬಂದು ಬೆಂಕಿಯನ್ನು ನಂದಿಸಲು ಯತ್ನಿಸಿದಾಗ ನೀರು ಖಾಲಿಯಾಗಿದೆ ಎಂದು ತಿಳಿದುಬಂದಿದೆ. ಬೆಂಕಿ ಧಗಧಗಿಸುತ್ತಿತ್ತು, ಸದ್ಯ ಗ್ರಾಮ ಪಂಚಾಯಿತಿ ನೀರಿನ ವ್ಯವಸ್ಥೆ ಮಾಡಿದೆ. ಬೆಂಕಿ ಅಕ್ಕಪಕ್ಕದ ಅಂಗಡಿಗಳಿಗೂ ಹರಡುವ ಭೀತಿ ಮೂಡಿದೆ ಎನ್ನಲಾಗಿದೆ.

ಅಂಗಡಿಯೊಂದಕ್ಕೆ ತಗುಲಿದ ಬೆಂಕಿ Read More »

ಕರ್ನಾಟಕ, ಕ್ರೈಮ್ ನ್ಯೂಸ್

ಮಂಗಳೂರು: ಕರಾವಳಿಯಲ್ಲಿ ಹೆಚ್ಚಿದ ಚಳಿ…!!!  ➤ ಸಾಂಕ್ರಾಮಿಕ ರೋಗದ ಭೀತಿ

(ನ್ಯೂಸ್ ಕಡಬ)newskadaba.com ಮಂಗಳೂರು, ಜ.10. ರಾಜ್ಯದ ಕರಾವಳಿ ಜಿಲ್ಲೆಗಳಲ್ಲಿ ಚಳಿಯ ತೀವ್ರತೆ ಹೆಚ್ಚಾಗಿದ್ದು, ಸಾಂಕ್ರಾಮಿಕ ರೋಗದ ಭೀತಿ ಎದುರಾಗಿದೆ.ಕಳೆದ ಡಿಸಂಬರ್ ನಲ್ಲಿ ಕಾಣಿಸಿಕೊಂಡಿದ್ದ ಕಡಿಮೆ ಉಷ್ಣಾಂಶ ಇದೀಗ ಮತ್ತೆ ಕಂಡು ಬರುತ್ತಿದೆ. ಚಳಿಯಿಂದಾಗಿ ರಕ್ತ ಹೆಪ್ಪುಗಟ್ಟುವ ಜೊತೆಗೆ ಹೃದಯಾಘಾತಗಳು ದೇಶದ ಹಲವೆಡೆ ಹೆಚ್ಚಳವಾಗುತ್ತಿದೆ ಎಂದು ವರದಿ ತಿಳಿಸಿದೆ. ಅತಿಯಾದ ಚಳಿಯಿಂದ ಜ್ವರ, ಶೀತ- ಕೆಮ್ಮು, ಗಂಟಲು ನೋವು ಉಂಟಾಗಬಹುದು. ಅಲರ್ಜಿ, ಅಸ್ತಮಾ ರೋಗಿಗಳು ಎಚ್ಚರ ವಹಿಸಬೇಕಾದ ಆವಶ್ಯಕತೆ ಎದುರಾಗಿದೆ. ಚಳಿಗಾಲದಲ್ಲಿ ರೋಗನಿರೋಧಕ ಶಕ್ತಿ ಕುಂದುವ ಅಪಾಯವಿರುತ್ತದೆ.ಆದ್ದರಿಂದ ಈ

ಮಂಗಳೂರು: ಕರಾವಳಿಯಲ್ಲಿ ಹೆಚ್ಚಿದ ಚಳಿ…!!!  ➤ ಸಾಂಕ್ರಾಮಿಕ ರೋಗದ ಭೀತಿ Read More »

ಕರಾವಳಿ, ಕರ್ನಾಟಕ

ಮಂಗಳೂರು: ಬಾಲಕನೋರ್ವ ಹೃದಯಾಘಾತದಿಂದ ಮೃತ್ಯು…!!!                   

(ನ್ಯೂಸ್ ಕಡಬ)newskadaba.com ಮಂಗಳೂರು, ಜ.10. ಶಾಲೆಗೆ ಹೊರಟಿದ್ದ 9ನೇ ತರಗತಿಯ ವಿದ್ಯಾರ್ಥಿ ಹೃದಯಾಘಾತದಿಂದ ಮೃತಪಟ್ಟ ಘಟನೆ ಮಂಗಳೂರಿನಲ್ಲಿ ವರದಿಯಾಗಿದೆ. ಮೃತ ಬಾಲಕನನ್ನು ಕೃಷ್ಣಾಪುರ 7ನೇ ಬ್ಲಾಕ್‌ ನಿವಾಸಿ ಮೊಹಮ್ಮದ್‌ ಹಸೀಮ್‌ (17) ಎಂದು ಗುರುತಿಸಲಾಗಿದೆ. ಶಾಲೆಗೆ ಹೋಗಲು ಬೆಳಗ್ಗೆ ಸಿದ್ದನಾಗಿದ್ದ ಹಸೀಮ್‌ಗೆ ಏಕಾಏಕಿ ತಲೆ ಸುತ್ತಿ ಬಿದ್ದಿದ್ದಾನೆ ಮನೆಯವರು ತಕ್ಷಣ ಸಮೀಪದ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ವೈದ್ಯರು‌ ಪರೀಕ್ಷಿಸಿ ಮೃತಪಟ್ಟಿರುವ ಬಗ್ಗೆ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ. ಆದರೂ ಬದುಕಿಸುವ ಆಸೆಯಿಂದ ಪೋಷಕರು ಮುಕ್ಕದ ಖಾಸಗಿ ಆಸ್ಪತ್ರೆಗೆ ಕರೆತಂದಿದ್ದರು.ಅಲ್ಲಿ

ಮಂಗಳೂರು: ಬಾಲಕನೋರ್ವ ಹೃದಯಾಘಾತದಿಂದ ಮೃತ್ಯು…!!!                    Read More »

ಕರಾವಳಿ

ಬಿಸಿಯೂದಲ್ಲಿ ಹಾವು; ಬಿಸಿಯೂಟ ಸೇವಿಸಿದ 30ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥ…!!

(ನ್ಯೂಸ್ ಕಡಬ) newskadaba.com ಕೋಲ್ಕತ್ತ, ಜ. 10.  ಹಾವು ಬಿದ್ದ ಬಿಸಿಯೂಟ ಸೇವಿಸಿ 30 ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥರಾದ ಘಟನೆ ಕೋಲ್ಕತ್ತದ ಬಿರ್ಭೂಮ್ ಜಿಲ್ಲೆಯ ಮಯೂರೇಶ್ವರ ಬ್ಲಾಕ್ ನ ಪ್ರಾಥಮಿಕ ಶಾಲೆಯಲ್ಲಿ ವರದಿಯಾಗಿದೆ. ಬೇಳೆ ತುಂಬಿದ್ದ ಕಂಟೈನರ್ ವೊಂದರಲ್ಲಿ ಹಾವು ಕಾಣಿಸಿಕೊಂಡಿದೆ ಎಂದು ಬಿಸಿಯೂಟ ತಯಾರಿಸಿದ್ದ ಸಿಬ್ಬಂದಿಯೊಬ್ಬರು ಹೇಳಿಕೊಂಡಿದ್ದಾರೆ. ಬಿಸಿಯೂಟ ಸೇವಿಸಿದ ಬಳಿಕ ಮಕ್ಕಳು ವಾಂತಿ ಮಾಡಿಕೊಳ್ಳಲು ಆರಂಭಿಸಿದ್ದರಿಂದ ಮಕ್ಕಳನ್ನು ತಕ್ಷಣವೇ ರಾಂಪುರ್ ಹತ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ. ಸದ್ಯ

ಬಿಸಿಯೂದಲ್ಲಿ ಹಾವು; ಬಿಸಿಯೂಟ ಸೇವಿಸಿದ 30ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥ…!! Read More »

ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್
crime, arrest, suspected

ಶ್ರೀಗಂಧ ಮರ ಮಾರಟಕ್ಕೆ ಯತ್ನ…!!! ➤ ನಾಲ್ವರು ಆರೋಪಿಗಳು ಅರೆಸ್ಟ್       

(ನ್ಯೂಸ್ ಕಡಬ)newskadaba.com ಬೆಂಗಳೂರು, ಜ.10. ಮೀಸಲು ಅರಣ್ಯ ಪ್ರದೇಶದಿಂದ ಶ್ರೀಗಂಧದ ಮರಗಳನ್ನು ಕದ್ದು ಮಾರಾಟಕ್ಕೆ ಯತ್ನಿಸುತ್ತಿದ್ದ ನಾಲ್ವರು ಆರೋಪಿಗಳನ್ನು ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ. ಬಂಧಿತ ಆರೋಪಿಗಳನ್ನು ಕಮಲಾನಗರ ನಿವಾಸಿ ಪೊನ್ನರಾಜ್‌ ಅಲಿಯಾಸ್‌ ಪೊನ್ನ(35), ಲಗ್ಗೆರೆ ಪ್ರೇಮನಗರ ನಿವಾಸಿ ಧೃವಕುಮಾರ್‌(29), ಮೀನಾಕ್ಷಿ ನಗರದ ಸಿದ್ದಪ್ಪ(27) ಹಾಗೂ ಮಾಗಡಿಯ ಹರೀಶ್‌(34) ಎಂದು ಗುರುತಿಸಲಾಗಿದೆ. ಆರೋಪಿಗಳಿಂದ 16.50 ಲಕ್ಷ ಮೌಲ್ಯದ 330 ಕೆ.ಜಿ. ತೂಕದ ಶ್ರೀಗಂಧದ ಮರದ ತುಂಡುಗಳು ಹಾಗೂ ಕೃತ್ಯಕ್ಕೆ ಬಳಸಿದ್ದ ವಾಹನ ಜಪ್ತಿ ಮಾಡಲಾಗಿದೆ

ಶ್ರೀಗಂಧ ಮರ ಮಾರಟಕ್ಕೆ ಯತ್ನ…!!! ➤ ನಾಲ್ವರು ಆರೋಪಿಗಳು ಅರೆಸ್ಟ್        Read More »

ಕರಾವಳಿ
Crime

ವಿಮಾನಕ್ಕೆ ಬಾಂಬ್ ಬೆದರಿಕೆ…! ➤ ಸೇನಾ ವಾಯುನೆಲೆಯಲ್ಲಿ ತುರ್ತು ಭೂಸ್ಪರ್ಶ

(ನ್ಯೂಸ್ ಕಡಬ) newskadaba.com ನವದೆಹಲಿ, ಜ.10. ರಷ್ಯಾದ ಮಾಸ್ಕೋದಿಂದ ಗೋವಾಗೆ ಬರುತ್ತಿದ್ದ ಚಾರ್ಟರ್ಡ್ ವಿಮಾನಕ್ಕೆ ಬಾಂಬ್ ಬೆದರಿಕೆ ಕರೆ ಬಂದಿದ್ದು, ಈ ಹಿನ್ನೆಲೆಯಲ್ಲಿ ವಿಮಾನವನ್ನು ಗುಜರಾತ್ನ ಜಾಮ್ನಗರದ ಭಾರತೀಯ ವಾಯುಸೇನೆಯ ನೆಲೆಯಲ್ಲಿ ತುರ್ತು ಭೂಸ್ಪರ್ಶ ಮಾಡಲಾಗಿದೆ ಎಂದು ವರದಿಯಾಗಿದೆ. ಬಾಂಬ್ ಇರುವುದರ ಬಗ್ಗೆ ಮಾಹಿತಿ ತಿಳಿದ ಸಿಬ್ಬಂದಿ ತಕ್ಷಣವೇ ಪೈಲಟ್ಗೆ ಮಾಹಿತಿ ತಿಳಿಸಿದ್ದಾರೆ. ಆ ಬಳಿಕ ಗೋವಾಕ್ಕೆ ತೆರಳುತ್ತಿದ್ದ ವಿಮಾನವನ್ನು ಗುಜರಾತ್ನ ಜಾಮ್ನಗರದ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಮಾಡಲಾಗಿದೆ. ಸದ್ಯ ಪೊಲೀಸ್ ಹಿರಿಯ ಅಧಿಕಾರಿಯೊಂದಿಗೆ ಬಾಂಬ್ ನಿಷ್ಕ್ರಿಯ

ವಿಮಾನಕ್ಕೆ ಬಾಂಬ್ ಬೆದರಿಕೆ…! ➤ ಸೇನಾ ವಾಯುನೆಲೆಯಲ್ಲಿ ತುರ್ತು ಭೂಸ್ಪರ್ಶ Read More »

ಕರಾವಳಿ

ಒಆರ್‌ಒಪಿ ಬಾಕಿ ಪಾವತಿಸಲು ಕೇಂದ್ರಕ್ಕೆ ಮಾರ್ಚ್ 15 ರವರೆಗೆ ಸಮಯ ನೀಡಿದ ಸುಪ್ರೀಂ ಕೋರ್ಟ್

(ನ್ಯೂಸ್ ಕಡಬ) newskadaba.com ನವದೆಹಲಿ, ಜ.09.  ಸಶಸ್ತ್ರ ಪಡೆಗಳ ಎಲ್ಲಾ ಅರ್ಹ ಪಿಂಚಣಿದಾರರಿಗೆ ಒಂದು ಶ್ರೇಣಿ ಒಂದು ಪಿಂಚಣಿ(ಒಆರ್‌ಒಪಿ) ಯೋಜನೆಯ ಬಾಕಿ ಪಾವತಿಸಲು ಕೇಂದ್ರ ಸರ್ಕಾರಕ್ಕೆ ಸೋಮವಾರ ಸುಪ್ರೀಂ ಕೋರ್ಟ್ ಮಾರ್ಚ್ 15 ರವರೆಗೆ ಕಾಲಾವಕಾಶ ನೀಡಿದೆ ಎಂದು ವರದಿ ಪ್ರಕಟನೆ ತಿಳಿಸಿದೆ. ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಮತ್ತು ನ್ಯಾಯಮೂರ್ತಿ ಪಿ ಎಸ್ ನರಸಿಂಹ ಅವರ ಪೀಠ, ಸಶಸ್ತ್ರ ಪಡೆಗಳ ಪಿಂಚಣಿದಾರರಿಗೆ ಎಲ್ಲಾ ಬಾಕಿ ಹಣವನ್ನು ತ್ವರಿತವಾಗಿ ಪಾವತಿಸಲು ಮತ್ತು ಯಾವುದೇ ವಿಳಂಬವಾಗದಂತೆ ನೋಡಿಕೊಳ್ಳಲು ಕೇಂದ್ರ

ಒಆರ್‌ಒಪಿ ಬಾಕಿ ಪಾವತಿಸಲು ಕೇಂದ್ರಕ್ಕೆ ಮಾರ್ಚ್ 15 ರವರೆಗೆ ಸಮಯ ನೀಡಿದ ಸುಪ್ರೀಂ ಕೋರ್ಟ್ Read More »

ರಾಷ್ಟ್ರೀಯ ನ್ಯೂಸ್

ಕಾಲು ದಾರಿಗೆ ತ್ರಿವರ್ಣದ ಬಣ್ಣ ➤ ನೆಟ್ಟಿಗರಿಂದ ಆಕ್ರೋಶ

(ನ್ಯೂಸ್ ಕಡಬ) newskadaba.com ಇಂದೋರ್, ಜ. 09. 17ನೇ ಪ್ರವಾಸಿ ಭಾರತೀಯ ದಿವಸ್ ನ ಉದ್ಘಾಟನೆಗೆ ಆಗಮಿಸಲಿರುವ ಪ್ರಧಾನಿ ನರೇಂದ್ರ ಮೋದಿಯವರ ಸ್ವಾಗತಕ್ಕೆ ಇಂದೋರ್ ನಗರವು ಮಧುವಣಗಿತ್ತಿಯಂತೆ ಸಜ್ಜಾಗಿದೆ. ಹೂಡಿಕೆದಾರರು ಮತ್ತು ಎನ್ಆರ್.ಐ ಶೃಂಗಸಭೆಯ ಪೂರ್ವ ಸಿದ್ದತೆಗಳನ್ನು ವಿವರಿಸುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಪ್ರಸಾರವಾಗಿದ್ದು, ನೋಡುವವರಿಗೆ ಬಾರೀ ಆಘಾತವನ್ನುಂಟು ಮಾಡಿದೆ. ಇಲ್ಲಿನ ಪಾದಚಾರಿ ಮಾರ್ಗವೊಂದಕ್ಕೆ ತ್ರಿವರ್ಣ ಬಳಿದಿರುವುದು ವಿಡಿಯೋದಲ್ಲಿದ್ದು ಜನರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಕಾಲು ದಾರಿಗೆ ತ್ರಿವರ್ಣದ ಬಣ್ಣ ➤ ನೆಟ್ಟಿಗರಿಂದ ಆಕ್ರೋಶ Read More »

ರಾಷ್ಟ್ರೀಯ ನ್ಯೂಸ್

ಕೋಲಾರದಿಂದ ಸ್ಪರ್ಧೆಗೆ ತೀರ್ಮಾನ ➤  ಸಿದ್ದರಾಮಯ್ಯ ಅಧಿಕೃತ ಘೋಷಣೆ

(ನ್ಯೂಸ್ ಕಡಬ)newskadaba.com  ಕೋಲಾರ, ಜ.09. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕೋಲಾರದಿಂದ ಸ್ಪರ್ದಿಸುವುದಾಗಿ ವಿಪಕ್ಷ ನಾಯಕ ಸಿದ್ದರಾಮಯ್ಯ ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ. ಕೋಲಾರದಲ್ಲಿ ನಡೆದ ಕಾಂಗ್ರೆಸ್ ಬಹಿರಂಗ ಸಮಾವೇಶದಲ್ಲಿ ಮಾತನಾಡಿದ ವಿಪಕ್ಷ ನಾಯಕ ಸಿದ್ದರಾಮಯ್ಯ, ನಾನು ಮುಂದಿನ ಚುನಾವಣೆಯಲ್ಲಿ ಕೋಲಾರದಿಂದ ಸ್ಪರ್ಧೆ ಮಾಡಲು ತೀರ್ಮಾನ ಮಾಡಿದ್ದೇನೆ ಎಂದು ಘೋಷಿಸಿದರು ಎನ್ನಲಾಗಿದೆ. ಎಲ್ಲಾ ನಾಯಕರು ಇಲ್ಲಿಂದಲೇ ಸ್ಪರ್ಧಿಸುವಂತೆ ಹೇಳುತ್ತಿದ್ದಾರೆ. ಎಲ್ಲರೂ ಒಕ್ಕೋರಲಿನಿಂದ ಒತ್ತಾಯಿಸುತ್ತಿದ್ದೀರಿ. ನಿಮ್ಮ ಪ್ರೀತಿ, ಅಭಿಮಾನ ತಿರಸ್ಕಾರ ಮಾಡಲು ಸಾದ್ಯವಿಲ್ಲ ಎಂದರು.      

ಕೋಲಾರದಿಂದ ಸ್ಪರ್ಧೆಗೆ ತೀರ್ಮಾನ ➤  ಸಿದ್ದರಾಮಯ್ಯ ಅಧಿಕೃತ ಘೋಷಣೆ Read More »

ಕರಾವಳಿ
Scroll to Top