News Kadaba

ತೀವ್ರ ಅನಾರೋಗ್ಯದಿಂದ ಲಲಿತ್ ಮೋದಿ ಆಸ್ಪತ್ರೆಗೆ ದಾಖಲು..! ➤  ಕೃತಕ ಆಮ್ಲಜನಕ ಅಳವಡಿಕೆ

(ನ್ಯೂಸ್ ಕಡಬ) newskadaba.com ನವದೆಹಲಿ, ಜ.14. ತೀವ್ರ ಅನಾರೋಗ್ಯದ ಹಿನ್ನೆಲೆಯಲ್ಲಿ ಐಪಿಎಲ್ ಮಾಜಿ ಅಧ್ಯಕ್ಷ ಲಲಿತ್ ಮೋದಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರಿಗೆ ಕೃತಕ ಆಮ್ಲಜನಕ ಅಳವಡಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದು ಬಂದಿದೆ. ಕೊರೊನಾ ಸೋಂಕು ಮತ್ತು ನ್ಯುಮೋನಿಯಾ ಹಿನ್ನೆಲೆಯಲ್ಲಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ. ಲಲಿತ್ ಮೋದಿ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಈ ಸಂಬಂಧ ಮಾಹಿತಿ ನೀಡಲಾಗಿದ್ದು, ಎರಡು ವಾರಗಳಲ್ಲಿ ಎರಡು ಬಾರಿ ಕೋವಿಡ್ ಸೋಂಕು ತಗುಲಿತ್ತು. ನ್ಯುಮೋನಿಯಾವೂ ಇದ್ದ ಕಾರಣ ಆಸ್ಪತ್ರೆಗೆ […]

ತೀವ್ರ ಅನಾರೋಗ್ಯದಿಂದ ಲಲಿತ್ ಮೋದಿ ಆಸ್ಪತ್ರೆಗೆ ದಾಖಲು..! ➤  ಕೃತಕ ಆಮ್ಲಜನಕ ಅಳವಡಿಕೆ Read More »

ರಾಷ್ಟ್ರೀಯ ನ್ಯೂಸ್

ಫೆ.17 ರಂದು 2023-24ನೇ ಸಾಲಿನ ಬಜೆಟ್ ಮಂಡನೆ ಸಾಧ್ಯತೆ..! ➤ ಸಿಎಂ ಬೊಮ್ಮಾಯಿ

(ನ್ಯೂಸ್ ಕಡಬ) newskadaba.com ಬೆಂಗಳೂರು, ಜ.14. ಫೆಬ್ರವರಿ 17 ರಂದು 2023-24ನೇ ಸಾಲಿನ ರಾಜ್ಯ ಬಜೆಟ್‌ ಮಂಡಿಸುವ ಸಾಧ್ಯತೆ ಇದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಬಜೆಟ್‌ ಅಧಿವೇಶನ ಬಗ್ಗೆ ಮುಂದಿನ ಸಂಪುಟ ಸಭೆಯಲ್ಲಿ ಚರ್ಚಿಸಲಾಗಿದೆ. ಈಗಾಗಲೇ ಬಜೆಟ್ ಸಂಬಂಧ ವಿವಿಧ ಇಲಾಖೆಗಳ ಅಧಿಕಾರಿಗಳ ಸಭೆ ಆರಂಭಿಸಲಾಗಿದೆ ಎಂದು ಹೇಳಿದ್ದಾರೆ. ಏಪ್ರಿಲ್, ಮೇ ತಿಂಗಳಲ್ಲಿ ವಿಧಾನಸಭೆ ಚುನಾವಣೆ ನಡೆಯುವ ಸಾಧ್ಯತೆ ಇರುವ ಹಿನ್ನಲೆಯಲ್ಲಿ ಈ ಬಾರಿ ಸಿಎಂ ಮತದಾರರನ್ನು ಓಲೈಸಲು, ಜನಪ್ರಿಯ

ಫೆ.17 ರಂದು 2023-24ನೇ ಸಾಲಿನ ಬಜೆಟ್ ಮಂಡನೆ ಸಾಧ್ಯತೆ..! ➤ ಸಿಎಂ ಬೊಮ್ಮಾಯಿ Read More »

ಕರ್ನಾಟಕ
crime, arrest, suspected

ಉಳ್ಳಾಲ: ದರೋಡೆಗೆ ಹೊಂಚು ಹಾಕುತ್ತಿದ್ದ ಖದೀಮರು ಅರೆಸ್ಟ್…!

(ನ್ಯೂಸ್ ಕಡಬ) newskadaba.com  ಉಳ್ಳಾಲ, ಜ.14. ಕತ್ತಲಲ್ಲಿ ಅಂಗಡಿಗಳ ಬಳಿ ರಾಡಿನ ಜೊತೆಗೆ ಕುಳಿತಿದ್ದ ಇಬ್ಬರನ್ನು ಗಸ್ತು ತಿರುಗುತ್ತಿದ್ದ ಉಳ್ಳಾಲ ಪೊಲೀಸರು ಬಂಧಿಸಿದ್ದು, ಇಬ್ಬರು ಅಂಗಡಿ, ಎಟಿಎಂ, ಮನೆಗಳನ್ನು ದರೋಡೆ ನಡೆಸುವ ಹುನ್ನಾರ ಇಟ್ಟುಕೊಂಡು ಕುಳಿತಿರುವ ಸಂಶಯದಿಂದ ಪ್ರಕರಣ ದಾಖಲಿಸಲಾಗಿದೆ. ಮುಕ್ಕಚ್ಚೇರಿಯ ರಾಯಿಸ್ ಖಾನ್ (23) ಕುಂಪಲ ಯತೀಂ ಖಾನದ ಮಹಮ್ಮದ್ ಮುಜಾಂಬಿಲ್ (28) ಬಂಧಿತರು ಎಂದು ಗುರುತಿಸಲಾಗಿದೆ. ಜಂಕ್ಷನ್ನಿನ ಬಳಿಯ ಅಂಗಡಿಗಳ ಬಾಗಿಲು ಬಳಿ ಕತ್ತಲಲ್ಲಿ ಕುಳಿತಿದ್ದರು. ಗಸ್ತು ತಿರುಗುತ್ತಿದ್ದ ಉಳ್ಳಾಲ ಪೊಲೀಸರು ಅವರನ್ನು ಹಿಡಿದಾಗ

ಉಳ್ಳಾಲ: ದರೋಡೆಗೆ ಹೊಂಚು ಹಾಕುತ್ತಿದ್ದ ಖದೀಮರು ಅರೆಸ್ಟ್…! Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ನಟಿ ಉರ್ಫಿಯನ್ನು ವಿಚಾರಣೆಗೆ ಕರೆದ ಮುಂಬೈ ಪೊಲೀಸರು   

(ನ್ಯೂಸ್ ಕಡಬ) newskadaba.com  ಮುಂಬೈ, ಜ.14. ಬಟ್ಟೆಯ ಕಾರಣದಿಂದಲೇ ಸಿಕ್ಕಾಪಟ್ಟೆ ಸುದ್ದಿಯಲ್ಲಿರುವ ನಟಿ ಉರ್ಫಿ ಜಾವೇದ್‌ರನ್ನು ಮುಂಬೈ ಪೊಲೀಸರು ವಿಚಾರಣೆಗೆ ಕರೆದಿದ್ದಾರೆ ಎಂದು ತಿಳಿದುಬಂದಿದೆ. ಮುಂಬೈನ ಬೀದಿಗಳಲ್ಲಿ ತಮ್ಮ ದೇಹವನ್ನು ಪ್ರದರ್ಶನ ಮಾಡಿಕೊಂಡು ಓಡಾಡುತ್ತಾರೆ. ಹೀಗಾಗಿ ಅವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಮಹಾರಾಷ್ಟ್ರ ಬಿಜೆಪಿಯ ಮಹಿಳಾ ಮೋರ್ಚಾದ ಅಧ್ಯಕ್ಷೆ ಚಿತ್ರಾ ಕಿಶೋರ್‌ ವಾಘ್‌ ದೂರು ನೀಡಿದ್ದರು. ಅದನ್ನು ಖಂಡಿಸಿ ಮಹಿಳಾ ಮೋರ್ಚಾ ಅಧ್ಯಕ್ಷೆ ಚಿತ್ರಾ ಕಿಶೋರ್ ತಮಗೆ ಜೀವ ಬೆದರಿಕೆ ಹಾಕಿದ್ದು ಹಾಗೂ ಮಾನಹಾನಿ ಮಾಡುವಂತಹ

ನಟಿ ಉರ್ಫಿಯನ್ನು ವಿಚಾರಣೆಗೆ ಕರೆದ ಮುಂಬೈ ಪೊಲೀಸರು    Read More »

ರಾಷ್ಟ್ರೀಯ ನ್ಯೂಸ್
Theft, crime, Robbery

ಕಾಸರಗೋಡು: ಒಂದೇ ದಿನ ಎರಡು ಮನೆಗೆ ಕನ್ನ ➤ 40 ಪವನ್ ಚಿನ್ನಾಭರಣ ಸಹಿತ ನಗದು ಕಳವು.!

(ನ್ಯೂಸ್ ಕಡಬ) newskadaba.com  ಕಾಸರಗೋಡು, ಜ.14. ಎರಡು ಮನೆಗಳಿಗೆ ನುಗ್ಗಿದ ಕಳ್ಳರು ಸುಮಾರು 40 ಪವನ್ ಚಿನ್ನಾಭರಣ ಮತ್ತು 40 ಸಾವಿರ ರೂ. ನಗದು ಕಳವು ಗೈದ ಘಟನೆ ಕುಂಬಳೆ ಸಮೀಪದ ನಾಯ್ಕಾಪು ವಿನಲ್ಲಿ ನಡೆದಿದೆ. ಬ್ಯಾಂಕ್ ಸಿಬ್ಬಂದಿ ವಾಸುದೇವ ರಾವ್ ಮನೆಗೆ ನುಗ್ಗಿ 35 ಪವನ್ ಚಿನ್ನಾಭರಣ ಮತ್ತು 15 ಸಾವಿರ ರೂ. ನಗದು ಹಾಗೂ ಮೋಹನ್ ದಾಸ್ ಎಂಬವರ ಮನೆಯಿಂದ ಮೂರೂವರೆ ಪವನ್ ಚಿನ್ನಾಭರಣ ಮತ್ತು 25 ಸಾವಿರ ರೂ. ನಗದು ಕಳವು ಮಾಡಲಾಗಿದೆ.

ಕಾಸರಗೋಡು: ಒಂದೇ ದಿನ ಎರಡು ಮನೆಗೆ ಕನ್ನ ➤ 40 ಪವನ್ ಚಿನ್ನಾಭರಣ ಸಹಿತ ನಗದು ಕಳವು.! Read More »

ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಕೌಟುಂಬಿಕ ಕಲಹ ಹಿನ್ನೆಲೆ ತಾಯಿ ಆತ್ಮಹತ್ಯೆ   ➤ ನೊಂದ ಮಗ ನೇಣಿಗೆ ಶರಣು..!

(ನ್ಯೂಸ್ ಕಡಬ) newskadaba.com  ಬೆಂಗಳೂರು, ಜ.14. ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ತಾಯಿ- ಮಗ ಆತ್ಮಹತ್ಯೆ ಮಾಡಿಕೊಂಡ ಘಟನೆ ರಾಮನಗರದ ಕುಮಾರಸ್ವಾಮಿ ಲೇಔಟ್‌ನಲ್ಲಿ ನಡೆದಿದೆ. ಕುಮಾರಸ್ವಾಮಿ ಲೇಔಟ್‌ನ ವಿಜಯಲಕ್ಷ್ಮಿ (50) ಹಾಗೂ ಅವರ ಪುತ್ರ ಹರ್ಷ (25) ಎಂದು ಗುರುತಿಸಲಾಗಿದೆ. ತಾಯಿ ವಿಜಯಲಕ್ಷ್ಮಿ ಜೊತೆ ಊಟದ ವಿಚಾರಕ್ಕೆ ಮಗ ಹರ್ಷ ರಾತ್ರಿ ಜಗಳವಾಡಿದ್ದ. ಮಗನ ಮಾತಿನಿಂದ ಮನನೊಂದ ವಿಜಯಲಕ್ಷ್ಮಿ ಮನೆಯ ಬಳಿ ಸಂಪಿಗೆ ಬಿದ್ದು ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಬಳಿಕ ವಿಜಯಲಕ್ಷ್ಮಿ ಅವರನ್ನ ಆಸ್ಪತ್ರೆಗೆ ಸಾಗಿಸುವಾಗ ಮಾರ್ಗ ಮಧ್ಯೆ ಮೃತಪಟ್ಟಿದ್ದಾರೆ.

ಕೌಟುಂಬಿಕ ಕಲಹ ಹಿನ್ನೆಲೆ ತಾಯಿ ಆತ್ಮಹತ್ಯೆ   ➤ ನೊಂದ ಮಗ ನೇಣಿಗೆ ಶರಣು..! Read More »

ಕರ್ನಾಟಕ, ಕ್ರೈಮ್ ನ್ಯೂಸ್

ದಿನಕ್ಕೊಂದು ರಾಜ್ಯ, ಗಂಟೆಗೊಂದು ಸಿಮ್ ➤ ಸ್ಯಾಂಟ್ರೋ ರವಿ ಬಂಧನ ಮಾಹಿತಿ ಬಿಚ್ಚಿಟ್ಟ ಎಡಿಜಿಪಿ..!

(ನ್ಯೂಸ್ ಕಡಬ) newskadaba.com ಮೈಸೂರು, ಜ.14. ಅನೈತಿಕ ದಂಧೆಗಳ ಆರೋಪಿ ಸ್ಯಾಂಟ್ರೋ ರವಿಯನ್ನು ಮೈಸೂರು ಪೊಲೀಸರು ಗುಜರಾತ್‌ನ ಅಹಮ್ಮದಾಬಾದ್ ಸಮೀಪ ಬಂಧಿಸಲಾಗಿದೆ. ಮೈಸೂರಿನ ವಿಜಯನಗರ ಪೊಲೀಸ್ ಠಾಣೆಯಲ್ಲಿ ರವಿ ಎರಡನೇ ಪತ್ನಿ ನೀಡಿದ್ದ ದೂರಿನ ಆಧಾರದಲ್ಲಿ ಕಾರ್ಯಾಚರಣೆ ನಡೆಸಿದ ಮೈಸೂರು ಪೊಲೀಸರು ಚಾಲಾಕಿಯನ್ನು ಬಂಧಿಸಿದ್ದಾರೆ. ಬಂಧನದ ಬಳಿಕ ಎಡಿಜಿಪಿ ಅಲೋಕ್ ಕುಮಾರ್ ಸುದ್ದಿಗೋಷ್ಠಿ ನಡೆಸಿ ಸ್ಯಾಂಟ್ರೋ ರವಿಯ ಮಾಹಿತಿ ಬಿಚ್ಚಿಟ್ಟಿದ್ದಾರೆ. ಸ್ಯಾಂಟ್ರೋ ರವಿ ತಲೆಮರೆಸಿಕೊಳ್ಳಲು ವಿಗ್ ಕಳಚಿದ್ದ. ಶೇವ್ ಮಾಡಿಕೊಂಡ ಇಂದು ಬೆಳಗ್ಗೆ ಮಹಾರಾಷ್ಟ್ರದಿಂದ ಗುಜರಾತ್ ಪ್ರವೇಶ

ದಿನಕ್ಕೊಂದು ರಾಜ್ಯ, ಗಂಟೆಗೊಂದು ಸಿಮ್ ➤ ಸ್ಯಾಂಟ್ರೋ ರವಿ ಬಂಧನ ಮಾಹಿತಿ ಬಿಚ್ಚಿಟ್ಟ ಎಡಿಜಿಪಿ..! Read More »

ಕರ್ನಾಟಕ

ಲಾಡ್ಜ್ ವೊಂದರಲ್ಲಿ ಪ್ರೇಯಸಿಯಿಂದಲೇ ಪ್ರಿಯಕರನ ಹತ್ಯೆ..!   

(ನ್ಯೂಸ್ ಕಡಬ) newskadaba.com  ಶಿವಮೊಗ್ಗ, ಜ.14. ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲ್ಲೂಕಿನ ಹೆರಿಟೇಜ್ ಲಾಡ್ಜ್ ನಲ್ಲಿ ಪ್ರೇಯಸಿಯಿಂದಲೇ  ಪ್ರಿಯಕರನ ಹತ್ಯೆಯಾಗಿರುವ ಭೀಕರ ಘಟನೆ ನಡೆದಿದೆ. ಹಾಸನ ಮೂಲದ ಪರ್ವೇಜ್ ಖಾನ್​ ಎಂಬ ವ್ಯಕ್ತಿಯ ಕೊಲೆಯಾಗಿದೆ. ಪ್ರೇಯಸಿಯೇ ಈ ಕೊಲೆ ಮಾಡಿದ್ದಾಳೆ ಎಂದು ಆರೋಪಿಸಲಾಗುತ್ತಿದ್ದು ಪೊಲೀಸ್ ತನಿಖೆಯಿಂದ ಹೆಚ್ಚಿನ ಮಾಹಿತಿ ತಿಳಿದು ಬರಬೇಕಾಗಿದೆ. ಹಾಸನದ ಚನ್ನರಾಯಪಟ್ಟಣದ ಮೂಲದ ಆಯಿಷಾ ಮತ್ತು ಜಾವಗಲ್​ ಮೂಲದ ಪರ್ವೇಜ್ ಖಾನ್ ಇಬ್ಬರು ಕಳೆದ ಮೂರು ನಾಲ್ಕು ವರ್ಷಗಳಿಂದ ಸಂಬಂಧ ಹೊಂದಿದ್ದರು ಎನ್ನಲಾಗಿದೆ. ಇವರಿಬ್ಬರ

ಲಾಡ್ಜ್ ವೊಂದರಲ್ಲಿ ಪ್ರೇಯಸಿಯಿಂದಲೇ ಪ್ರಿಯಕರನ ಹತ್ಯೆ..!    Read More »

ಕರ್ನಾಟಕ, ಕ್ರೈಮ್ ನ್ಯೂಸ್

ನೋಂದಣಿ ರಹಿತ ಪೆಟ್‌ಶಾಪ್‌ಗಳಿಗೆ ಸಚಿವ ಚವ್ಹಾಣ್‌ ಎಚ್ಚರಿಕೆ..!    

(ನ್ಯೂಸ್ ಕಡಬ) newskadaba.com  ಬೆಂಗಳೂರು, ಜ.14. ಸಾಕು ಪ್ರಾಣಿ ಮಾರಾಟಗಾರರು ಕರ್ನಾಟಕ ಪ್ರಾಣಿ ಕಲ್ಯಾಣ ಮಂಡಳಿಯಲ್ಲಿ ನೋಂದಾಯಿಸಿಕೊಳ್ಳದೆ ಪೆಟ್‌ಶಾಪ್‌ ತೆರೆದಿದ್ದರೆ ಯಾವುದೇ ಮುನ್ಸೂಚನೆ ನೀಡದೆ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುವುದು ಎಂದು ಪಶು ಸಂಗೋಪನೆ ಸಚಿವ ಪ್ರಭು ಚವ್ಹಾಣ್‌ ಎಚ್ಚರಿಕೆ ನೀಡಿದ್ದಾರೆ ಎನ್ನಲಾಗಿದೆ. ಬಹುತೇಕ ಅಂಗಡಿಗಳಲ್ಲಿ ಅನೇಕ ಪಕ್ಷಿಗಳನ್ನು ಒಂದೇ ಪಂಜರದಲ್ಲಿ ಇರಿಸಿರುವುದು, ಪಕ್ಷಿಗಳು ಮತ್ತು ಪ್ರಾಣಿಗಳು ಸ್ಥಳ ಹಾಗೂ ತಾಜಾ ಗಾಳಿಗಾಗಿ ಹೆಣಗಾಡುತ್ತಿರುವುದು, ನೀರು ಅಥವಾ ಆಹಾರ ಪೂರೈಕೆ ಇಲ್ಲದಿರುವುದು ಶುಚಿತ್ವ ಇಲ್ಲದಿರುವುದು, ಸಣ್ಣ ಮರಿಗಳನ್ನೇ ಮಾರಾಟ

ನೋಂದಣಿ ರಹಿತ ಪೆಟ್‌ಶಾಪ್‌ಗಳಿಗೆ ಸಚಿವ ಚವ್ಹಾಣ್‌ ಎಚ್ಚರಿಕೆ..!     Read More »

ಕರ್ನಾಟಕ

 ಉಪ್ಪಿನಂಗಡಿ: ಟ್ಯಾಂಕರ್ ಚಲಾಯಿಸುವಾಗಲೇ ಹೃದಯಾಘಾತದಿಂದ ಚಾಲಕ ಮೃತ್ಯು

(ನ್ಯೂಸ್ ಕಡಬ) newskadaba.com   ಉಪ್ಪಿನಂಗಡಿ, ಜ.14. ಟ್ಯಾಂಕರ್ ಚಲಾಯಿಸುವಾಗಲೇ ಹೃದಯಾಘಾತಕ್ಕೀಡಾಗಿ ಚಾಲಕ ಕಿಶೋರ್ ಕುಮಾರ್ (53) ಎಂಬವರು ಮೃತಪಟ್ಟ ಘಟನೆ ಉಪ್ಪಿನಂಗಡಿಯಲ್ಲಿ ವರದಿಯಾಗಿದೆ. ಮೂಲತಃ ಮಂಗಳೂರಿನ ಕಾವೂರು ನಿವಾಸಿಯಾಗಿದ್ದ ಕಿಶೋರ್ ಕುಮಾರ್ ಬೆಂಗಳೂರಿನಿಂದ ಮಂಗಳೂರಿನತ್ತ ಟ್ಯಾಂಕರ್ ಚಲಾಯಿಸುತ್ತಿದ್ದಾಗ ಉಪ್ಪಿನಂಗಡಿ ಸಮೀಪಿಸುತ್ತಿದ್ದಂತೆಯೇ ಹೃದಯಾಘಾತಕ್ಕೆ ಒಳಗಾಗಿರುವುದಾಗಿ ತಿಳಿದುಬಂದಿದೆ. ಕೂಡಲೇ ಟ್ಯಾಂಕರ್ ನಲ್ಲಿದ್ದ ಸಹ ಚಾಲಕ ಟ್ಯಾಂಕರ್‌ನ್ನು ನಿಯಂತ್ರಣಕ್ಕೆ ತೆಗೆದುಕೊಂಡು ಅವರನ್ನು ಆಸ್ಪತ್ರೆಗೆ ದಾಖಲಿಸಲು ಮುಂದಾದರಾದರೂ ಆಸ್ಪತ್ರೆಯಲ್ಲಿ ಅವರು ಮೃತ ಪಟ್ಟಿದ್ದಾರೆಂದು ಘೋಷಿಸಲಾಯಿತು. ಪ್ರಕರಣಕ್ಕೆ ಸಂಬಂಧಿಸಿ ನಿಶಾಂತ್ ಶೆಟ್ಟಿ ನೀಡಿದ ದೂರಿನ

 ಉಪ್ಪಿನಂಗಡಿ: ಟ್ಯಾಂಕರ್ ಚಲಾಯಿಸುವಾಗಲೇ ಹೃದಯಾಘಾತದಿಂದ ಚಾಲಕ ಮೃತ್ಯು Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್
Scroll to Top