News Kadaba

ಫೆಬ್ರವರಿಗೆ ರಾಜ್ಯದ ಅಂಗನವಾಡಿಗಳಲ್ಲಿ NEP ಜಾರಿ !! ➤  ಸಚಿವ ಬಿ.ಸಿ ನಾಗೇಶ್

(ನ್ಯೂಸ್ ಕಡಬ)newskadaba.com  ಬೆಂಗಳೂರು, ಜ.20. ರಾಜ್ಯಾದ್ಯಂತ ಸುಮಾರು 400 ರಿಂದ 500 ಆಯ್ದ ಶಾಲೆಗಳಲ್ಲಿ ಫೆಬ್ರವರಿಯ ಆರಂಭದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ 2020 (ಎನ್ಇಪಿ) ಅನ್ನು ಶಾಲಾ ಶಿಕ್ಷಣ ವ್ಯವಸ್ಥೆಯಲ್ಲಿ ಜಾರಿಗೆ ತರಲಾಗುವುದು ಎಂದು ಕರ್ನಾಟಕ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಬಿ.ಸಿ.ನಾಗೇಶ್ ಹೇಳಿದ್ದಾರೆ. ಆರಂಭಿಕ ಬಾಲ್ಯದ ಆರೈಕೆ ಮತ್ತು ಶಿಕ್ಷಣಕ್ಕೆ ಸೀಮಿತಗೊಳಿಸಲಾಗಿದೆ ಎಂದು ಇಲಾಖೆಯ ಮೂಲಗಳು ತಿಳಿಸಿದ್ದು, ಈ ಹಂತದಲ್ಲಿ ಅನುಷ್ಠಾನವು ದೊಡ್ಡ ರೀತಿಯಲ್ಲಿ ಆಗುವುದಿಲ್ಲ. ಇದು ಅಂಗನವಾಡಿಗಳು ಮತ್ತು ನರ್ಸರಿಗಳಿಗೆ ಮಾತ್ರ ಸೀಮಿತವಾಗಿರುತ್ತದೆ, […]

ಫೆಬ್ರವರಿಗೆ ರಾಜ್ಯದ ಅಂಗನವಾಡಿಗಳಲ್ಲಿ NEP ಜಾರಿ !! ➤  ಸಚಿವ ಬಿ.ಸಿ ನಾಗೇಶ್ Read More »

ಕರ್ನಾಟಕ

ಖೋಟಾ ನೋಟು ಜಾಲ ಪತ್ತೆ  !! ➤  ಖತರ್ನಾಕ್ ಗ್ಯಾಂಗ್ ಅರೆಸ್ಟ್

(ನ್ಯೂಸ್ ಕಡಬ)newskadaba.com  ಚಿಕ್ಕಬಳ್ಳಾಪುರ, ಜ.20. ಜಿಲ್ಲೆಯಲ್ಲಿ ಖೋಟಾ ನೋಟಿನ ಜಾಲ ಪತ್ತೆಯಾಗಿದ್ದು, 2000 ರೂಪಾಯಿ ಮುಖಬೆಲೆಯ 1.29 ಕೋಟಿ ಮೌಲ್ಯದ ನಕಲಿ ನೋಟುಗಳನ್ನ ಚಿಂತಾಮಣಿ ಪೊಲೀಸರು ವಶ ಪಡಿಸಿಕೊಂಡಿದ್ದಾರೆ. ಚಿಂತಾಮಣಿ ತಾಲೂಕು ಊಲವಾಡಿ ಗ್ರಾಮದ ಬಾರ್ನ್ ಫೌಂಡೇಶನ್ ಕಟ್ಟಡದಲ್ಲಿ ನಡೆಯುತ್ತದ್ದ ನಕಲಿ ನೋಟು ತಯಾರಿಕಾ ಅಡ್ಡೆ ಮೇಲೆ ದಾಳಿ ಮಾಡಿದ ಪೊಲೀಸರು, ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಶೇಖ್ ಹಿದಾಯತ್, ದಾವೂದ್ ವಾಸಿಮ್ ಹಾಗೂ ಶಿವಣ್ಣ ಬಂಧಿತ ಆರೋಪಿಗಳು. ಕಟ್ಟಡದ ಕೋಣೆಯೊಂದರಲ್ಲೇ ನಕಲಿ ನೋಟುಗಳನ್ನು ಪ್ರಿಂಟ್​ ಮಾಡುತ್ತಿದ್ದರು.    

ಖೋಟಾ ನೋಟು ಜಾಲ ಪತ್ತೆ  !! ➤  ಖತರ್ನಾಕ್ ಗ್ಯಾಂಗ್ ಅರೆಸ್ಟ್ Read More »

ಕರ್ನಾಟಕ, ಕ್ರೈಮ್ ನ್ಯೂಸ್

ಕೇಂದ್ರ ಬಜೆಟ್‌ಗೂ ಮೊದಲು ಸರಕಾರದಿಂದ ರೈತರಿಗೆ ಭರ್ಜರಿ ಗಿಫ್ಟ್ !!

(ನ್ಯೂಸ್ ಕಡಬ)newskadaba.com  ನವದೆಹಲಿ, ಜ.20. ಕೇಂದ್ರ ಸರಕಾರದಿಂದ ಭಾರೀ ಉಡುಗೊರೆಯ ನಿರೀಕ್ಷೆಯಲ್ಲಿರುವ ರೈತರಿಗಾಗಿ ಬಜೆಟ್‌ಗೂ ಮೊದಲೇ ಸಿಹಿ ಸುದ್ದಿಯೊಂದನ್ನು ನೀಡಿದೆ. ದೇಶದ ಬೆನ್ನೆಲುಬಾಗಿರುವ ರೈತರನ್ನು ಉತ್ತೇಜಿಸುವ ನಿಟ್ಟಿನಲ್ಲಿ ದೇಶದ ಎಲ್ಲಾ ರೈತರಿಗೆ ಕಿಸಾನ್ ಕ್ರೆಡಿಟ್ ಕಾರ್ಡ್ ಸೌಲಭ್ಯವನ್ನು ಒದಗಿಸುವಂತೆ ಸಾರ್ವಜನಿಕ ವಲಯದ ಬ್ಯಾಂಕ್‌ಗಳ ಮುಖ್ಯಸ್ಥರಿಗೆ ಸರಕಾರ ಸೂಚನೆ ನೀಡಿದೆ. ಈ ಯೋಜನೆ ಅಡಿಯಲ್ಲಿ ರೈತರಿಗೆ ಕೃಷಿಗೆ ಸಂಬಂಧಪಟ್ಟಂತೆ ಸಾಲ ಸೌಲಭ್ಯವನ್ನು ನೀಡಲಾಗುತ್ತದೆ ಈ ಯೋಜನೆಯ ಪ್ರಯೋಜನವನ್ನು ಎಲ್ಲಾ ರೈತಾಪಿ ಮಿತ್ರರು ಪಡೆದುಕೊಳ್ಳಬೇಕು ಎನ್ನುವುದು ಸರಕಾರದ ಉದ್ದೇಶವಾಗಿದೆ.  

ಕೇಂದ್ರ ಬಜೆಟ್‌ಗೂ ಮೊದಲು ಸರಕಾರದಿಂದ ರೈತರಿಗೆ ಭರ್ಜರಿ ಗಿಫ್ಟ್ !! Read More »

ರಾಷ್ಟ್ರೀಯ ನ್ಯೂಸ್

ಮಂಗಳೂರು: ‘ಬಿಎಸ್ ಡಬ್ಲ್ಯೂಟಿ’ ವರ್ಷದ ವ್ಯಕ್ತಿ ಪ್ರಶಸ್ತಿ ಪ್ರಧಾನ!! ➤  ಚಿತ್ರ ನಟ ಅರವಿಂದ್ ಬೋಳಾರ್ ಆಯ್ಕೆ

(ನ್ಯೂಸ್ ಕಡಬ)newskadaba.com  ಮಂಗಳೂರು, ಜ.20. ಭಾರತ್ ಸೋಶಿಯಲ್ ವೆಲ್ಫೇರ್ ಟ್ರಸ್ಟ್ “BSWT” ವರ್ಷದ ವ್ಯಕ್ತಿ ಪ್ರಶಸ್ತಿಗೆ ಚಿತ್ರ ನಟ ಅರವಿಂದ್ ಬೋಳಾರ್ ರವರು ಆಯ್ಕೆಯಾಗಿದ್ದಾರೆ. ಅರವಿಂದ ಬೋಳಾರ್ ಅವರು ತುಳು ನಾಟಕ, ಚಲನಚಿತ್ರ ಮತ್ತು ಯಕ್ಷಗಾನ ರಂಗದ ಪ್ರಮುಖ ಕಲಾವಿದರಲ್ಲಿ ಒಬ್ಬರು. ಕನ್ನಡ, ಕೊಂಕಣಿ ಮಲೆಯಾಳಂ ಭಾಷಾ ಸಿನಿಮಾದಲ್ಲಿ ಅಭಿನಯಿಸುತ್ತಾ ಬ್ಯಾರಿ ಭಾಷಾ ಪಾತ್ರದಲ್ಲಿಯೂ ಸೈ ಎನಿಸಿಕೊಂಡವರು. ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ ಬೋಳಾರ್ ಎಂಬಲ್ಲಿ ತಂದೆ ಕೃಷ್ಣಪ್ಪ ಮತ್ತು ತಾಯಿ ಸುಂದರಿಯವರ ಮಗನಾಗಿ ಜನಿಸಿದ ಇವರು ತುಳು

ಮಂಗಳೂರು: ‘ಬಿಎಸ್ ಡಬ್ಲ್ಯೂಟಿ’ ವರ್ಷದ ವ್ಯಕ್ತಿ ಪ್ರಶಸ್ತಿ ಪ್ರಧಾನ!! ➤  ಚಿತ್ರ ನಟ ಅರವಿಂದ್ ಬೋಳಾರ್ ಆಯ್ಕೆ Read More »

ಕರಾವಳಿ

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ನೀಡುವ ಗಿರಿಧರ ಪ್ರಶಸ್ತಿಗೆ ಇಬ್ರಾಹಿಂ ಖಲೀಲ್ ಆಯ್ಕೆ !!

(ನ್ಯೂಸ್ ಕಡಬ)newskadaba.com  ಪುತ್ತೂರು, ಜ.20. ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ನೀಡುವ 2020ನೇ ಸಾಲಿನ ವಾರ್ಷಿಕ ಪ್ರಶಸ್ತಿ ಪ್ರಕಟವಾಗಿದ್ದು, ಪುತ್ತೂರು ಸುದ್ದಿ ಬಿಡುಗಡೆ ವರದಿಗಾರರಾಗಿದ್ದ ಇಬ್ರಾಹಿಂ ಖಲೀಲ್ ರವರು ಗಿರಿಧರ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. 2020 ನೇ ವರ್ಷದಲ್ಲಿ ಸುದ್ದಿ ಬಿಡುಗಡೆ ಪತ್ರಿಕೆಯಲ್ಲಿ ಪ್ರಕಟಗೊಂಡ ಅತ್ಯುತ್ತಮ ಅಪರಾಧ ವರದಿಗೆ ಈ ಪ್ರಶಸ್ತಿ ನೀಡಲಾಗಿದೆ. ವಿಜಯಪುರದಲ್ಲಿ ನಡೆಯುವ 37ನೇ ರಾಜ್ಯ ಪತ್ರಕರ್ತರ ಸಮ್ಮೇಳನದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು.  

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ನೀಡುವ ಗಿರಿಧರ ಪ್ರಶಸ್ತಿಗೆ ಇಬ್ರಾಹಿಂ ಖಲೀಲ್ ಆಯ್ಕೆ !! Read More »

ಕರಾವಳಿ

ವೇಶ್ಯಾವಾಟಿಕೆ ಜಾಲದಲ್ಲಿ ಬಂಧಿತ ವ್ಯಕ್ತಿ ನಾನಲ್ಲ !! ➤  ನ್ಯೂರಾನ್ ಚಿತ್ರದ ನಟ ‘ಯುವ’ ಸ್ಪಷ್ಟನೆ

(ನ್ಯೂಸ್ ಕಡಬ)newskadaba.com  ಬೆಂಗಳೂರು, ಜ.20. ಡೇಟಿಂಗ್ ಆ್ಯಪ್‌ನಲ್ಲಿ ಮಹಿಳೆಯರ ನಕಲಿ‌ ಫೋಟೊ ಸೃಷ್ಟಿಸಿ ಗ್ರಾಹಕರನ್ನು ವೇಶ್ಯಾವಾಟಿಕೆ ದಂಧೆಗೆ ಸೆಳೆದು ಅಕ್ರಮ ಹಣ‌ ಸಂಪಾದನೆ‌ ಪ್ರಕರಣದಲ್ಲಿ ಇತ್ತೀಚೆಗೆ ಸ್ಯಾಂಡಲ್​ವುಡ್​ ನಟರೊಬ್ಬರ ಹೆಸರು ಕೇಳಿಬಂದಿತ್ತು.  ಈ ಸಂಬಂಧ ನಟ ಮಾಧ್ಯಮಗೋಷ್ಟಿ ನಡೆಸಿ ಸ್ಪಷ್ಟನೆ ನೀಡಿದ್ದಾರೆ. ನನ್ನನ್ನೇ ಹೋಲುವ ಮಂಜುನಾಥ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.‌ ನಾನು ಯಾವುದೇ ಪ್ರಕರಣದಲ್ಲಿ ಭಾಗಿಯಾಗಿಲ್ಲ ಎಂದು  ನ್ಯೂರಾನ್ ಚಿತ್ರದ ನಾಯಕ ನಟ ಯುವ ಸ್ಪಷ್ಟನೆ ನೀಡಿದ್ದಾರೆ. ಖಾಸಗಿ ಆ್ಯಪ್​​ನಲ್ಲಿ ಯುವ ನಟ ವೇಶ್ಯಾವಾಟಿಕೆ ಜಾಲದಲ್ಲಿ ತೊಡಗಿಕೊಂಡು

ವೇಶ್ಯಾವಾಟಿಕೆ ಜಾಲದಲ್ಲಿ ಬಂಧಿತ ವ್ಯಕ್ತಿ ನಾನಲ್ಲ !! ➤  ನ್ಯೂರಾನ್ ಚಿತ್ರದ ನಟ ‘ಯುವ’ ಸ್ಪಷ್ಟನೆ Read More »

ಕರ್ನಾಟಕ

ಕಡಬ: ವಿಚಾರಣೆಗೆ ಹಾಜರಾಗದೇ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನಕ್ಕೆ ವಾರಂಟ್ ಜಾರಿ !!

(ನ್ಯೂಸ್ ಕಡಬ)newskadaba.com ಸಂಪ್ಯ, ಜ.20. ಸಂಪ್ಯ ಠಾಣಾ ವ್ಯಾಪ್ತಿಯಲ್ಲಿ 2019ರಲ್ಲಿ ನಡೆದ ಅಪರಾಧ ಪ್ರಕರಣವೊಂದಕ್ಕೆ ಸಂಬಂಧಿಸಿ ನ್ಯಾಯಾಲಯಕ್ಕೆ ವಿಚಾರಣೆಗೆ ಹಾಜರಾಗದೇ ತಲೆಮರೆಸಿಕೊಂಡಿದ್ದ ಕಡಬ ಮೂಲದ  ಆರೋಪಿಯನ್ನು ಸಂಪ್ಯ ಪೊಲೀಸರು ಬಂಧಿಸಿದ್ದಾರೆ. ಕಡಬ ತಾಲೂಕು ಕೊಯಿಲ ಗ್ರಾಮದ ಕಲಾಯಿ ನಿವಾಸಿಯಾಗಿದ್ದು ಪ್ರಸ್ತುತ ಮಂಜೇಶ್ವರ ಉಪ್ಪಳ ಗ್ರಾಮದ ಕೈಕಂಬ ಜಂಕ್ಷನ್ ಇಂಡಿಯನ್ ಗ್ಯಾರೇಜ್ ಬಳಿ ವಾಸವಿರುವ ಇಬ್ರಾಹಿಂ ಖಲಂದರ್ ಯಾನೆ ಇಬ್ರಾಹಿಂ ಬಂಧಿತ ಆರೋಪಿ. ಈತನ ಬಂಧನಕ್ಕೆ ನ್ಯಾಯಾಲಯ ವಾರಂಟ್ ಜಾರಿ ಮಾಡಿತ್ತು. ಸಂಪ್ಯ ಗ್ರಾಮಾಂತರ ಠಾಣಾ ಉಪನಿರೀಕ್ಷಕ ಉದಯರವಿ ಅವರ ಸಲಹೆಯಂತೆ ಗ್ರಾಮಾಂತರ ಠಾಣಾ ಹೆಡ್‌ಕಾನ್‌ ಸ್ಟೇಬಲ್‌ಗಳಾದ ಹರೀಶ್, ಪ್ರವೀಣ್ ಮತ್ತು ಕಾನ್‌ಸ್ಟೇಬಲ್ ಸಚಿನ್‌ರವರು ಜ.19ರಂದು ಕಾಸರಗೋಡು ವಿದ್ಯಾನಗರದಲ್ಲಿ ಆರೋಪಿಯನ್ನು ಪತ್ತೆ ಮಾಡಿ ಬಂಧಿಸಿ ಪುತ್ತೂರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.  

ಕಡಬ: ವಿಚಾರಣೆಗೆ ಹಾಜರಾಗದೇ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನಕ್ಕೆ ವಾರಂಟ್ ಜಾರಿ !! Read More »

ಕರಾವಳಿ, ಕ್ರೈಮ್ ನ್ಯೂಸ್

ಬುರ್ಖಾ ಧರಿಸಿದ ವಿದ್ಯಾರ್ಥಿನಿಯರಿಗೆ ಪ್ರವೇಶ ನಿರಾಕರಿಸಿದ ಕಾಲೇಜು !!

(ನ್ಯೂಸ್ ಕಡಬ)newskadaba.com  ಉತ್ತರಪ್ರದೇಶ, ಜ.20. ಮೊರದಾಬಾದ್‌ ನ ಕಾಲೇಜೊಂದರಲ್ಲಿ ಬುರ್ಖಾ ಧರಿಸಿ ಬಂದಿದ್ದ ವಿದ್ಯಾರ್ಥಿನಿಯರಿಗೆ ಪ್ರವೇಶವನ್ನು ನಿರಾಕರಿಸಲಾಗಿದೆ. ಬುರ್ಖಾ ಹಾಕಿಕೊಂಡು‌ ಬಂದರೆ ಕಾಲೇಜ್‌ ಕ್ಯಾಂಪಸ್‌ಗೆ ಹೋಗಲು ಬಿಡುವುದಿಲ್ಲ, ಗೇಟ್‌ನಲ್ಲಿ ಬುರ್ಖಾವನ್ನು ತೆಗೆಯುವಂತೆ ಒತ್ತಾಯಿಸಲಾಗುತ್ತಿದೆ ಎಂದು ವಿದ್ಯಾರ್ಥಿನಿಯರು ಆರೋಪಿಸಿದ್ದಾರೆ. ಇನ್ನು ಕಾಲೇಜಿನಲ್ಲಿ ಡ್ರೆಸ್‌ಕೋಡ್‌ ಇದೆ. ಕಾಲೇಜಿನ ಯೂನಿಫಾರ್ಮ್‌ ಹಾಕೊಂಡು ಬಂದರೆ ಮಾತ್ರ ಒಳಗೆ ಪ್ರವೇಶ ನೀಡಲಾಗುವುದು. ಈ ನಿಯಮವನ್ನು ಮೀರಿದರೆ ಒಳಗೆ ಪ್ರವೇಶವಿಲ್ಲ ಎಂದು ಕಾಲೇಜು ಪ್ರಾಧ್ಯಾಪಕ ಎಪಿ ಸಿಂಗ್ ಹೇಳಿದ್ದಾರೆ. ಕಾಲೇಜಿನ ನಿರ್ಧಾರದ ವಿರುದ್ಧ ವಿದ್ಯಾರ್ಥಿನಿಯರು ಪ್ರತಿಭಟಿಸಿ

ಬುರ್ಖಾ ಧರಿಸಿದ ವಿದ್ಯಾರ್ಥಿನಿಯರಿಗೆ ಪ್ರವೇಶ ನಿರಾಕರಿಸಿದ ಕಾಲೇಜು !! Read More »

ರಾಷ್ಟ್ರೀಯ ನ್ಯೂಸ್

 ಬಂಟ್ವಾಳ: ಯುವ ವಕೀಲರ ಮೇಲೆ ಹಲ್ಲೆ ನಡೆಸಿದ ಪೊಲೀಸ್ ಅಧಿಕಾರಿಗೆ ತರಾಟೆಗೆ ತೆಗೆದುಕೊಂಡ ಹೈಕೋರ್ಟ್ !! ➤  3 ಲಕ್ಷ ಪರಿಹಾರ ಕೊಡುವಂತೆ ಸೂಚನೆ..!

(ನ್ಯೂಸ್ ಕಡಬ)newskadaba.com  ಬಂಟ್ವಾಳ, ಜ.20. ಯುವ ವಕೀಲ ಕುಲದೀಪ್‌ ಶೆಟ್ಟಿ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ ಸಂತ್ರಸ್ತ ವಕೀಲರಿಗೆ 3 ಲಕ್ಷ ರೂ ಪರಿಹಾರ ನೀಡುವಂತೆ ಪುಂಜಾಲಕಟ್ಟೆ ಪೊಲೀಸರಿಗೆ ಹೈಕೋರ್ಟ್‌ ಸೂಚನೆ ನೀಡಿದೆ. ಸಿವಿಲ್ ಸ್ವರೂಪದ ವ್ಯಾಜ್ಯದಲ್ಲಿ ಮಧ್ಯಪ್ರವೇಶಿಸಿ ವಕೀಲರೊಬ್ಬರ ಮೇಲೆ ಅಮಾನವೀಯವಾಗಿ ಹಲ್ಲೆ ನಡೆಸಿದ ಪ್ರಕರಣದಲ್ಲಿ ಹೈಕೋರ್ಟ್ ಮಹತ್ವದ ಆದೇಶ ನೀಡಿದೆ. ದಂಡದ ಮೊತ್ತವನ್ನು ತಪ್ಪಿತಸ್ಥ ಪೊಲೀಸರಿಂದ ವಸೂಲಿ ಮಾಡುವಂತೆ ಸರಕಾರಕ್ಕೆ ನಿರ್ದೇಶನ ನೀಡಿದೆ. ಪೊಲೀಸರ ನಡೆ ವಿರುದ್ಧ ನ್ಯಾಯಾಲಯ ತೀವ್ರ ತರಾಟೆಗೆ ತೆಗೆದುಕೊಂಡಿದೆ.

 ಬಂಟ್ವಾಳ: ಯುವ ವಕೀಲರ ಮೇಲೆ ಹಲ್ಲೆ ನಡೆಸಿದ ಪೊಲೀಸ್ ಅಧಿಕಾರಿಗೆ ತರಾಟೆಗೆ ತೆಗೆದುಕೊಂಡ ಹೈಕೋರ್ಟ್ !! ➤  3 ಲಕ್ಷ ಪರಿಹಾರ ಕೊಡುವಂತೆ ಸೂಚನೆ..! Read More »

ಕರಾವಳಿ, ಕರ್ನಾಟಕ

ಮೊದಲ ಬಾರಿಗೆ ಕರ್ನಲ್ ಹುದ್ದೆಗೇರಲಿದ್ದಾರೆ 108 ಮಹಿಳಾ ಯೋಧರು !!

(ನ್ಯೂಸ್ ಕಡಬ)newskadaba.com  ನವದೆಹಲಿ, ಜ.20. ಲೆಫ್ಟಿನೆಂಟ್ ಕರ್ನಲ್‌ಗಳಾಗಿದ್ದ ಭಾರತೀಯ ಸೇನೆಯ 108 ಮಂದಿ ಮಹಿಳಾ ಯೋಧರು ಕರ್ನಲ್ ಆಗಿ ಬಡ್ತಿ ಪಡೆದುಕೊಳ್ಳಲಿದ್ದಾರೆ. ಆ ಮೂಲಕ ಅವರೆಲ್ಲರೂ ತಂಡ ಮುನ್ನಡೆಸುವ ಜವಾಬ್ದಾರಿ ಪಡೆದುಕೊಳ್ಳಲಿದ್ದಾರೆ. ಲೆಫ್ಟಿನೆಂಟ್ ಕರ್ನಲ್ ಸೇವೆಯಲ್ಲಿರುವ ಮಹಿಳೆಯರಿಗೆ ಬಡ್ತಿ ನೀಡುವ ಪ್ರಕ್ರಿಯೆ ಆರಂಭವಾಗಿದ್ದು, 1992ರಿಂದ 2006ನೇ ಬ್ಯಾಚ್‌ನ ಒಟ್ಟು 108 ಮಂದಿ ಮಹಿಳೆಯರು ಲೆಫ್ಟಿನೆಂಟ್ ಕರ್ನಲ್ ಹುದ್ದೆಯಿಂದ ಕರ್ನಲ್ ಹುದ್ದೆಗೆ ಪದೋನ್ನತಿ ಹೊಂದಲಿದ್ದಾರೆ. ಆ ಮೂಲಕ ತಮ್ಮ ತಂಡಗಳನ್ನು ಮುನ್ನಡೆಸುವ ಜವಾಬ್ದಾರಿಯನ್ನು ಅವರು ಪಡೆದುಕೊಳ್ಳಲಿದ್ದಾರೆ. ಎಂಜಿನಿಯರ್‍ಸ್, ಸಿಗ್ನಲ್‌ಗಳು,

ಮೊದಲ ಬಾರಿಗೆ ಕರ್ನಲ್ ಹುದ್ದೆಗೇರಲಿದ್ದಾರೆ 108 ಮಹಿಳಾ ಯೋಧರು !! Read More »

ರಾಷ್ಟ್ರೀಯ ನ್ಯೂಸ್
Scroll to Top