ಮಂಗಳೂರು: ಬೆಂಕಿಗಾಹುತಿಯಾದ ಮನೆ ➤ ದಿಕ್ಕುತೋಚದಂತಾಗಿದೆ ಬಡ ಕುಟುಂಬ
(ನ್ಯೂಸ್ ಕಡಬ)newskadaba.com ಮಂಗಳೂರು, ಜ. 23. ಕಾವೂರಿನ ಪಳನೀರು ಎಂಬಲ್ಲಿ ಬಡ ಕುಟುಂಬದ ಮನೆಯೊಂದರಲ್ಲಿ ಆಕಸ್ಮಿಕ ಬೆಂಕಿ ಅವಘಢ ಸಂಭವಿಸಿ ಮನೆ ಹೊತ್ತಿ ಉರಿದ ಘಟನೆ ಮಂಗಳೂರಿನಲ್ಲಿ ನಡೆದಿದೆ. ಇಂದಿರಾ ಎಂಬವರಿಗೆ ಸೇರಿದ ಮನೆ ಇದಾಗಿದ್ದು, ಮನೆಮಂದಿಯೆಲ್ಲಾ ಕೆಲಸಕ್ಕೆ ಹೋದ ಸಂದರ್ಭದಲ್ಲಿ ಈ ದುರ್ಘಟನೆ ನಡೆದಿದೆ. ಇನ್ನು ಸ್ಥಳೀಯರು, ಅಗ್ನಿಶಾಮಕ ದಳದ ನೆರವಿನಿಂದ ಕಾರ್ಯಾಚರಣೆ ನಡೆಸಲಾಗಿದ್ದು, ಬೆಂಕಿ ನಂದಿಸಲಾಗಿದೆ ಎಂದು ತಿಳಿದುಬಂದಿದೆ.
ಮಂಗಳೂರು: ಬೆಂಕಿಗಾಹುತಿಯಾದ ಮನೆ ➤ ದಿಕ್ಕುತೋಚದಂತಾಗಿದೆ ಬಡ ಕುಟುಂಬ Read More »
ಕರಾವಳಿ, ಕ್ರೈಮ್ ನ್ಯೂಸ್






