News Kadaba

8 ಕನ್ನಡಿಗರಿಗೆ ಪದ್ಮ ಪ್ರಶಸ್ತಿಯು ಕರ್ನಾಟಕದಲ್ಲಿನ ಅಪಾರ ಪ್ರತಿಭೆಯನ್ನು ತೋರಿಸುತ್ತದೆ ➤ ಸಿಎಂ ಬೊಮ್ಮಾಯಿ

(ನ್ಯೂಸ್ ಕಡಬ)newskadaba.com  ಬೆಂಗಳೂರು, ಜ.26. ವಿವಿಧ ಕ್ಷೇತ್ರಗಳ 8 ಮಂದಿ ಕನ್ನಡಿಗರಿಗೆ ಪ್ರತಿಷ್ಠಿತ ಪದ್ಮ ಪ್ರಶಸ್ತಿ ನೀಡುತ್ತಿರುವುದಕ್ಕೆ ಸಂತಸ ವ್ಯಕ್ತಪಡಿಸಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಇದು ಕರ್ನಾಟಕದಲ್ಲಿರುವ ಅಮೋಘ ಪ್ರತಿಭೆಯನ್ನು ತೋರಿಸುತ್ತದೆ ಎಂದು ಹೇಳಿದ್ದಾರೆ. ಯಾವುದೇ ನಿರೀಕ್ಷೆಗಳಿಲ್ಲದೆ ದೇಶಕ್ಕೆ ಉತ್ಕೃಷ್ಟ ಕೊಡುಗೆ ನೀಡಿದವರನ್ನು ಪ್ರಶಸ್ತಿಗೆ ಆಯ್ಕೆ ಮಾಡಿದ್ದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರದ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರಕ್ಕೆ ಅವರು ಕೃತಜ್ಞತೆ ಸಲ್ಲಿಸಿದರು. ಕರ್ನಾಟಕದಿಂದ ಮಾಜಿ ಸಿಎಂ ಎಸ್ಎಂ ಕೃಷ್ಣ, ಸಮಾಜ ಸೇವಕಿ ಸುಧಾ ಮೂರ್ತಿ […]

8 ಕನ್ನಡಿಗರಿಗೆ ಪದ್ಮ ಪ್ರಶಸ್ತಿಯು ಕರ್ನಾಟಕದಲ್ಲಿನ ಅಪಾರ ಪ್ರತಿಭೆಯನ್ನು ತೋರಿಸುತ್ತದೆ ➤ ಸಿಎಂ ಬೊಮ್ಮಾಯಿ Read More »

ಕರ್ನಾಟಕ
crime, arrest, suspected

ಮಂಗಳೂರು: ಬಾಲಕಿಗೆ ಕಿರುಕುಳ ನೀಡಲು ಯತ್ನ ➤ ಉತ್ತರ ಪ್ರದೇಶ ಮೂಲದ ವ್ಯಕ್ತಿ ಬಂಧನ

(ನ್ಯೂಸ್ ಕಡಬ)newskadaba.com  ಮಂಗಳೂರು, ಜ.26. ಮಂಗಳೂರು ತಾಲೂಕಿನ ಮರವೂರಿನಲ್ಲಿ ಅಪ್ರಾಪ್ತ ಬಾಲಕಿಗೆ ಕಿರುಕುಳ ನೀಡಲು ಯತ್ನಿಸಿದ ಆರೋಪದ ಮೇಲೆ 23 ವರ್ಷದ ಯುವಕನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆತನನ್ನು ಉತ್ತರ ಪ್ರದೇಶ ಮೂಲದ ಗೋಪಾಲ್ ಬಿಂದಾ ಎಂದು ಗುರುತಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಕೂಲಿ ಕಾರ್ಮಿಕರಾಗಿರುವ ಬಾಲಕಿಯ ಪೋಷಕರ ದೂರಿನ ಪ್ರಕಾರ, ವ್ಯಕ್ತಿ ಕಾರ್ಮಿಕರ ಕೋಣೆಗೆ ನುಸುಳಿ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯಕ್ಕೆ ಯತ್ನಿಸಿದ್ದಾನೆ. ಆರೋಪಿಯ ವಿರುದ್ಧ ಮಕ್ಕಳ ಲೈಂಗಿಕ ಅಪರಾಧಗಳ ರಕ್ಷಣೆ (ಪೊಕ್ಸೊ) ಕಾಯ್ದೆಯಡಿ

ಮಂಗಳೂರು: ಬಾಲಕಿಗೆ ಕಿರುಕುಳ ನೀಡಲು ಯತ್ನ ➤ ಉತ್ತರ ಪ್ರದೇಶ ಮೂಲದ ವ್ಯಕ್ತಿ ಬಂಧನ Read More »

ಕರಾವಳಿ

ಹೊಯ್ಸಳರ ಕಾಲದ 13ನೇ ಶತಮಾನದಲ್ಲಿನ ವೀರಗಲ್ಲು ಮಂಡ್ಯದಲ್ಲಿ ಪತ್ತೆ

(ನ್ಯೂಸ್ ಕಡಬ)newskadaba.com  ಮೈಸೂರು, ಜ.26. ಇಲ್ಲಿನ ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರದ ತಂಡವು ಮಂಡ್ಯ ಜಿಲ್ಲೆಯ ಪಾಂಡವಪುರ ತಾಲ್ಲೂಕಿನ ಚಾಕಶೆಟ್ಟಿಹಳ್ಳಿ ಗ್ರಾಮದಲ್ಲಿ ಈಚೆಗೆ ನಡೆಸಿದ ಕ್ಷೇತ್ರ ಕಾರ್ಯದಲ್ಲಿ ‘ಹೊಯ್ಸಳರ ಕಾಲದ ವಿಶೇಷವಾದ ಅಪ್ರಕಟಿತ ವೀರಗಲ್ಲು ಶಾಸನ ಶಿಲ್ಪ’ವನ್ನು ಪತ್ತೆ ಹಚ್ಚಿದೆ. ಪುರಾತತ್ವಜ್ಞ ಪ್ರೊ.ರಂಗರಾಜು ಎನ್.ಎಸ್. ನೀಡಿದ ಮಾಹಿತಿಯ ಮೇರೆಗೆ ಪುರಾತತ್ವ ಸಂಶೋಧಕ ಡಾ.ಶಶಿಧರ ಸಿ.ಎ. ಕ್ಷೇತ್ರ ಕಾರ್ಯಾನ್ವೇಷಣೆ ಕೈಗೊಂಡಿದ್ದಾರೆ. ಬಳಿಕ ಅವರು ಚಾಕಶೆಟ್ಟಿಹಳ್ಳಿ ಗ್ರಾಮದಲ್ಲಿ ಈ ವಿಶೇಷ ವೀರಗಲ್ಲನ್ನು ಪತ್ತೆ ಮಾಡಿದ್ದಾರೆ. ಮೂರು ಹಂತದಲ್ಲಿ ಶಿಲ್ಪಕಲಾ

ಹೊಯ್ಸಳರ ಕಾಲದ 13ನೇ ಶತಮಾನದಲ್ಲಿನ ವೀರಗಲ್ಲು ಮಂಡ್ಯದಲ್ಲಿ ಪತ್ತೆ Read More »

ಕರ್ನಾಟಕ

ಕಡಬ: 10 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯ ಬಂಧನ

(ನ್ಯೂಸ್ ಕಡಬ)newskadaba.com  ಕಡಬ, ಜ.26. ಪ್ರಕರಣವೊಂದಕ್ಕೆ ಸಂಬಂಧಿಸಿ  ಕಳೆದ ಹತ್ತು ವರ್ಷಗಳಿಂದ ತಲೆ ಮರೆಸಿಕೊಂಡಿದ್ದ ಆರೋಪಿಯನ್ನು ಕಡಬ ಪೊಲೀಸರು ಬಂದಿಸಿದ್ದಾರೆ. ಈತನ ವಿರುದ್ದ  ಪುತ್ತೂರು ನಗರ ಠಾಣೆ, ಉಪ್ಪಿನಂಗಡಿ, ಸುಳ್ಯ, ಕೊಣಾಜೆ ಹಾಗೂ ಬಂಟ್ವಾಳ ನಗರ ಠಾಣೆಯಲ್ಲಿ  ಪ್ರಕರಣ ದಾಖಲಾಗಿತ್ತು. ಈತನನ್ನು ಪತ್ತೆ ಹಚ್ಚಿ ಠಾಣೆಗೆ ಕರೆದುಕೊಂಡು ಬಂದು  ಬಳಿಕ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ. ಮಾನ್ಯ ನ್ಯಾಯಾಲವು  ಆರೋಪಿಗೆ  15 ದಿನಗಳ ನ್ಯಾಯಾಂಗ ಬಂಧನವನ್ನು ವಿಧಿಸಿದೆ.  ಪುತ್ತೂರು ಗ್ರಾಮಾಂತರ ವೃತ್ತ ನಿರೀಕ್ಷಕ ರವಿ ಬಿಎಸ್ , ಕಡಬ ಠಾಣಾ ಎಸ್.ಐ  ಆಂಜನೇಯ ರೆಡ್ಡಿ ರವರ ಮಾರ್ಗದರ್ಶನದಲ್ಲಿ  ಕಡಬ ಠಾಣಾ ಎ.ಎಸ್.ಐ

ಕಡಬ: 10 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯ ಬಂಧನ Read More »

ಕರಾವಳಿ

ಗಣರಾಜ್ಯೋತ್ಸವ ಸಂಭ್ರಮದಲ್ಲಿದ್ದ ನೌಕರ ಕುಸಿದು ಬಿದ್ದು ಮೃತ್ಯು..!

(ನ್ಯೂಸ್ ಕಡಬ)newskadaba.com  ಸಿಂಧನೂರು, ಜ.26. ನಗರದ ತಾಲೂಕು ಕ್ರೀಡಾಂಗಣದಲ್ಲಿ 74ನೇ ಗಣರಾಜ್ಯೋತ್ಸವದ ವೇಳೆ ಕೋಲಾಟ ಆಡುತ್ತಿದ್ದ ನೌಕರ ಸ್ಥಳದಲ್ಲೇ ಕುಸಿದು ಬಿದ್ದು ಮೃತಪಟ್ಟ ಘಟನೆ ವರದಿಯಾಗಿದೆ. ಸ್ಥಳೀಯ ಸರಕಾರಿ ಆಸ್ಪತ್ರೆಯ ನೌಕರ ಮಹಾಂತೇಶ ಪೂಜಾರ್ (40) ಮೃತ ಎಂದು ಗುರುತಿಸಲಾಗಿದೆ. ಗರಡು ಗಮನ ಕೀರ್ತನೆಗೆ ತಂಡದೊಟ್ಟಿಗೆ ಕೋಲಾಟದಲ್ಲಿ ನಿರತರಾಗಿದ್ದಾಗ ದಿಢೀರ್ ಮೈದಾನದಲ್ಲೇ ಕುಸಿದು ಬಿದ್ದರು. ತಕ್ಷಣವೇ ಅವರನ್ನು ನಗರಸಭೆ ಅಧ್ಯಕ್ಷ ಮಲ್ಲಿಕಾರ್ಜುನ ಪಾಟೀಲ್, ನಗರಸಭೆಯ ಕಾರಿನಲ್ಲಿ ಆಸ್ಪತ್ರೆಗೆ ಕರೆ ತಂದರು. ಆಸ್ಪತ್ರೆಗೆ ಕರೆ ತರುವ ಮುನ್ನವೇ ಹೃದಯಾಘಾತದಿಂದ

ಗಣರಾಜ್ಯೋತ್ಸವ ಸಂಭ್ರಮದಲ್ಲಿದ್ದ ನೌಕರ ಕುಸಿದು ಬಿದ್ದು ಮೃತ್ಯು..! Read More »

ಕರ್ನಾಟಕ, ಕ್ರೈಮ್ ನ್ಯೂಸ್

ಮೊದಲು ಹಣ; ಉಳಿದಿದ್ದೆಲ್ಲಾ ನಂತರ..! ➤ ನಾಲ್ವರ ಜಗಳದಿಂದ ಬಯಲಾಯ್ತು ವೇಶ್ಯಾವಾಟಿಕೆ ದಂಧೆ

(ನ್ಯೂಸ್ ಕಡಬ)newskadaba.com ದಾವಣಗೆರೆ, ಜ.26. ಹೊರರಾಜ್ಯಗಳಿಂದ ಯುವತಿಯರನ್ನು ಕರೆತಂದು ರಾಜ್ಯದಲ್ಲಿ ವೇಶ್ಯಾವಾಟಿಕೆ ದಂಧೆ ನಡೆಸಲು ತೀರ್ಮಾನಿಸಿದ್ದರು. ಅದರಂತೆ ಗುಜರಾತ್ನಿಂದ ಇಬ್ಬರು ಯುವತಿಯರನ್ನು ದಾವಣಗೆರೆಗೆ ಕರೆತಂದಿದ್ದರು. ಶಿವಮೊಗ್ಗ ಮೂಲದ ಇಬ್ಬರು ವ್ಯಕ್ತಿಗಳೊಂದಿಗೆ ವೇಶ್ಯಾವಟಿಕೆಯಲ್ಲಿ ತೊಡಗಿಕೊಳ್ಳುವಂತೆ ಸೂಚಿಸಿದ್ದರು. ಆದರೆ ಕೊನೆಯ ಕ್ಷಣದಲ್ಲಿ ಆಗಿದ್ದೇ ಬೇರೆ. ಗುಜರಾತ್ ಮೂಲದ ಯುವತಿರು ಹಾಗೂ ವೇಶ್ಯಾವಾಟಿಕೆಗೆ ಕರೆಸಿದ್ದವರ ನಡುವೆ ಹಣದ ವಿಚಾರವಾಗಿ ಜಗಳ ಆರಂಭವಾಗಿದೆ. ಇದರಿಂದ ಸಿಟ್ಟಾದ ಯುವತಿಯರು ದಾವಣಗೆರೆಗೆ ಕರೆಯಿಸಿ ವೇಶ್ಯಾವಾಟಿಕೆ ಯತ್ನಿಸಿದ ಕುರಿತು ಪೊಲೀಸ್ ದೂರು ನೀಡಿದ್ದಾರೆ. ಸದ್ಯ ಹಣದ ವಿಚಾರವಾಗಿ

ಮೊದಲು ಹಣ; ಉಳಿದಿದ್ದೆಲ್ಲಾ ನಂತರ..! ➤ ನಾಲ್ವರ ಜಗಳದಿಂದ ಬಯಲಾಯ್ತು ವೇಶ್ಯಾವಾಟಿಕೆ ದಂಧೆ Read More »

ಕರ್ನಾಟಕ, ಕ್ರೈಮ್ ನ್ಯೂಸ್

ಗಣರಾಜ್ಯೋತ್ಸವ ಪರೇಡ್ ನಲ್ಲಿ ಗಮನ ಸೆಳೆದ ಕರ್ನಾಟಕದ ಸ್ತಬ್ದಚಿತ್ರ..!

(ನ್ಯೂಸ್ ಕಡಬ)newskadaba.com  ನವದೆಹಲಿ, ಜ.26. 74ನೇ ಗಣರಾಜ್ಯೋತ್ಸವ ಸಂಭ್ರಮದಲ್ಲಿ ರಾಷ್ಟ್ರ ರಾಜಧಾನಿ ನವದೆಹಲಿಯ ಕರ್ತವ್ಯಪಥದಲ್ಲಿ ನಡೆದ ಪರೇಡ್​ನಲ್ಲಿ ಕರ್ನಾಟಕದ ಸ್ತಬ್ಧ ಚಿತ್ರ ಎಲ್ಲರ ಗಮನಸೆಳೆಯಿತು. ಪರೇಡ್ ನಲ್ಲಿ ಕರ್ನಾಟಕದಿಂದ ನಾರಿ ಶಕ್ತಿ ಸಾರುವ ಸ್ತಬ್ಧಚಿತ್ರವನ್ನು ಪ್ರದರ್ಶಿಸಲಾಯಿತು. ಸ್ತಬ್ಧ ಚಿತ್ರದ ಮೂಲಕ ಪದ್ಮಶ್ರೀ ಪುರಸ್ಕೃತರಾದ ಸೂಲಗಿತ್ತಿ ನರಸಮ್ಮ, ತುಳಸಿ ಗೌಡ ಮತ್ತು ಸಾಲು ಮರದ ತಿಮ್ಮಕ್ಕ ಅವರ ಸಾಧನೆಗಳ ಅನಾವರಣಗೊಳಿಸಲಾಯಿತು. ಗಿಡ-ಮರ ,ಬೆಟ್ಟ-ಗುಡ್ಡಗಳಿಂದ ಸ್ತಬ್ಧಚಿತ್ರ ಶೃಂಗಾರಗೊಂಡಿತ್ತು ಎನ್ನಲಾಗಿದೆ.  

ಗಣರಾಜ್ಯೋತ್ಸವ ಪರೇಡ್ ನಲ್ಲಿ ಗಮನ ಸೆಳೆದ ಕರ್ನಾಟಕದ ಸ್ತಬ್ದಚಿತ್ರ..! Read More »

ರಾಷ್ಟ್ರೀಯ ನ್ಯೂಸ್

ಗೂಗಲ್, ಅಮೇಜಾನ್ ಬಳಿಕ ಈಗ IBM ಸರದಿ ➤ 3,900 ಸಿಬ್ಬಂದಿಗಳ ವಜಾಗೊಳಿಸಲು ನಿರ್ಧಾರ !

(ನ್ಯೂಸ್ ಕಡಬ)newskadaba.com  ವಾಷಿಂಗ್ಟನ್, ಜ.26. ಆರ್ಥಿಕ ಹಿಂಜರಿತದ ಭೀತಿ ನಡುವೆಯೇ ಗೂಗಲ್, ಅಮೆಜಾನ್ ಬಳಿಕ ಇದೀಗ ಅಮೆರಿಕದ ಹೆಸರಾಂತ ಮಾಹಿತಿ ತಂತ್ರಜ್ಞಾನ ಸಂಸ್ಥೆ ಐಬಿಎಂ ಕೂಡ ಸಿಬ್ಬಂದಿಗಳ ವಜಾ ಕ್ರಮಕ್ಕೆ ಮುಂದಾಗಿದೆ. ಮೂಲಗಳ ಪ್ರಕಾರ ಅಮೆರಿಕದ ಹೆಸರಾಂತ ಮಾಹಿತಿ ತಂತ್ರಜ್ಞಾನ ಸಂಸ್ಥೆ ಐಬಿಎಂ ಆಸ್ತಿ ವಿನಿಯೋಗದ ಭಾಗವಾಗಿ 3,900 ನೌಕರರನ್ನು ಕೆಲಸದಿಂದ ವಜಾಗೊಳಿಸುವುದಾಗಿ ಘೋಷಣೆ ಮಾಡಿದೆ. ಈ ಬಗ್ಗೆ ಮಾಹಿತಿ ನೀಡಿರುವ ಐಬಿಎಂ ಸಂಸ್ಥೆ ಆರ್ಥಿಕ ಪರಿಸ್ಥಿತಿಯು ಸವಾಲಿನಿಂದ ಕೂಡಿರುವ ಕಾರಣ, ಕಂಪನಿಗೆ ಹೊಸ ರೂಪ ಕೊಡುವ

ಗೂಗಲ್, ಅಮೇಜಾನ್ ಬಳಿಕ ಈಗ IBM ಸರದಿ ➤ 3,900 ಸಿಬ್ಬಂದಿಗಳ ವಜಾಗೊಳಿಸಲು ನಿರ್ಧಾರ ! Read More »

ರಾಷ್ಟ್ರೀಯ ನ್ಯೂಸ್

ಕರಾವಳಿಯಲ್ಲಿ ಮುಂದುವರಿದ ನೈತಿಕ ಪೊಲೀಸ್ ಗಿರಿ

(ನ್ಯೂಸ್ ಕಡಬ)newskadaba.com  ಧರ್ಮಸ್ಥಳ, ಜ.26. ಯುವತಿಯೊಂದಿಗೆ ಲಾಡ್ಜ್ ನಲ್ಲಿ ಇದ್ದಾನೆ ಎಂದು ಆರೋಪಿಸಿ ಸಂಘಪರಿವಾರದ ಕಾರ್ಯಕರ್ತರು ಮುಸ್ಲಿಮ್ ಯುವಕನೊಬ್ಬನಿಗೆ ಹಲ್ಲೆ ನಡೆಸಿದ ಘಟನೆ ಇಲ್ಲಿನ ಕನ್ಯಾಡಿಯಲ್ಲಿ ವರದಿಯಾಗಿದೆ. ಧರ್ಮಸ್ಥಳದ ಕನ್ಯಾಡಿಯ ವಸತಿಗೃಹದಲ್ಲಿ ಕೋಣೆ ಪಡೆಯಲು ಪ್ರಯತ್ನಿಸಿದ ಚಿತ್ರದುರ್ಗದ ದಾದಾ ಪೀರ್ ಮತ್ತು ಉಮಾ ಎಂಬುವವರನ್ನು ಸಂಘಪರಿವಾರದ ಕಾರ್ಯಕರ್ತರು ಹಲ್ಲೆ ನಡೆಸಿ ಪೋಲೀಸರಿಗೆ ಒಪ್ಪಿಸಿದ್ದಾರೆ ಎಂದು ತಿಳಿದುಬಂದಿದೆ. ಪೋಲೀಸರು ಪೋಷಕರಿಗೆ ಮಾಹಿತಿ ನೀಡಿದ್ದು, ತನಿಖೆ ನಡೆಸುತ್ತಿದ್ದಾರೆ ಎನ್ನಲಾಗಿದೆ.

ಕರಾವಳಿಯಲ್ಲಿ ಮುಂದುವರಿದ ನೈತಿಕ ಪೊಲೀಸ್ ಗಿರಿ Read More »

ಕರಾವಳಿ

ಇಬ್ಬರನ್ನು ಬಲಿ ಪಡೆದ ನರಭಕ್ಷಕ ಚಿರತೆ ಸೆರೆ

(ನ್ಯೂಸ್ ಕಡಬ)newskadaba.com  ಮೈಸೂರು, ಜ.26. ತಿ.ನರಸೀಪುರ ತಾಲೂಕು ಸೋಸಲೆ ಹೋಬಳಿಯಲ್ಲಿ ಇತ್ತೀಚೆಗೆ ಬಾಲಕ ಹಾಗೂ ವೃದ್ಧೆಯನ್ನು ಬಲಿ ಪಡೆದ ನರಭಕ್ಷಕ ಚಿರತೆಯನ್ನು ಸೆರೆ ಹಿಡಿಯುವಲ್ಲಿ ಅರಣ್ಯ ಇಲಾಖೆ ಯಶಸ್ವಿಯಾಗಿದೆ. ಬಲಿ ಪಡೆದ ಪ್ರದೇಶಗಳಲ್ಲಿ ಸುಮಾರು 19 ಬೋನ್ ಗಳನ್ನು ಇರಿಸಲಾಗಿತ್ತು. ಜತೆಗೆ ಇಪತ್ತಕ್ಕೂ ಹೆಚ್ಚು ಕ್ಯಾಮೆರಾ ಟ್ರ್ಯಾಪ್ ಅಳವಡಿಸಲಾಗಿತ್ತು. ಥರ್ಮಲ್ ಡ್ರೋನ್ ಕ್ಯಾಮೆರಾ ಬಳಸಿ ಚಿರತೆ ಅಡಗು ತಾಣ ಪತ್ತೆ ಹಚ್ವಿದ್ದ ಇಲಾಖೆ, ಆ ಸ್ಥಳದಲ್ಲಿ ತುಮಕೂರಿನಿಂದ ತರಿಸಿದ್ದ ದೊಡ್ಡ ಬೋನ್ ಅಳವಡಿಸಲಾಗಿತ್ತು. ಚಿರತೆ ಸೆರೆ ಸಿಕ್ಕಿದೆ

ಇಬ್ಬರನ್ನು ಬಲಿ ಪಡೆದ ನರಭಕ್ಷಕ ಚಿರತೆ ಸೆರೆ Read More »

ಕರ್ನಾಟಕ
Scroll to Top