News Kadaba

crime, arrest, suspected

ಮಂಗಳೂರು: ಅಕ್ರಮ ಗಾಂಜಾ ಸಾಗಾಟ.! ➤ ಮೂವರ ಬಂಧನ

(ನ್ಯೂಸ್ ಕಡಬ)newskadaba.com ಮಂಗಳೂರು, ಫೆ.01. ನೆತ್ತಿಲಪದವು ಎಂಬಲ್ಲಿ ಅಕ್ರಮವಾಗಿ ಗಾಂಜಾ ಸಾಗಾಟ ಮಾಡುತ್ತಿದ್ದ ಮೂವರನ್ನು ಪೊಲೀಸರು ಬಂಧಿಸಿದ್ದು, ಅವರಿಂದ ಸುಮಾರು 27 ಲಕ್ಷ ರೂ. ಮೌಲ್ಯದ ಗಾಂಜಾ ಸೇರಿದಂತೆ ಒಟ್ಟು 32,07,000 ರೂಪಾಯಿ ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಮಂಜೇಶ್ವರದ ಹೊಸಬೆಟ್ಟು ಕಡಪುರಂ ನಿವಾಸಿ ಅಬೂಬಕ್ಕರ್ ಸಿದ್ದೀಕ್ ಅಲಿಯಾಸ್ ಹ್ಯಾರೀಸ್ (35), ಕುಂಬ್ಳೆ ಮಂಬ್ರಾನ್ ಗ್ರಾಮದ ಆರಿಕ್ಕಾಡಿ ಬೀರಂಟಿಕಾರ ನಿವಾಸಿ ಅಖಿಲ್ ಎಂ. (25), ಹಾಗೂ ಹೈದರ್ ಆಲಿ ಅಲಿಯಾಸ್ ಗಾಡಿ ಹೈದರ್ (39) ಬಂಧಿತ ಆರೋಪಿಗಳು. ಬಂಧಿತರಿಂದ […]

ಮಂಗಳೂರು: ಅಕ್ರಮ ಗಾಂಜಾ ಸಾಗಾಟ.! ➤ ಮೂವರ ಬಂಧನ Read More »

ಕರಾವಳಿ, ಕ್ರೈಮ್ ನ್ಯೂಸ್

ಬೆಂಗಳೂರಿನಲ್ಲಿ ಕೊಲೆಯಾದ ಯುವಕ..! ➤ ಮೃತದೇಹ ಚಾರ್ಮಾಡಿ ಘಾಟ್ ನ ಪ್ರಪಾತದಲ್ಲಿ ಪತ್ತೆ

(ನ್ಯೂಸ್ ಕಡಬ)newskadaba.com ಚಿಕ್ಕಮಗಳೂರು, ಫೆ.01. ಯುವತಿಯೊಬ್ಬಳಿಗೆ ಮೆಸೇಜ್ ಮಾಡಿದನೆಂಬ ಕಾರಣಕ್ಕೆ ಬೆಂಗಳೂರಿನಲ್ಲಿ ಯುವಕನೋರ್ವನನ್ನು ಅಪಹರಿಸಿ ಕೊಲೆಗೈದು ಚಾರ್ಮಾಡಿ ಘಾಟ್ ನಲ್ಲಿ ಎಸೆದಿರುವ ಪ್ರಕರಣವನ್ನು ಭೇದಿಸಿರುವ ಯಶವಂತಪುರ ಠಾಣೆ ಪೊಲೀಸರು ಮೃತದೇಹವನ್ನು ಪ್ರಪಾತದಲ್ಲಿ ಪತ್ತೆ ಹಚ್ಚಿದ್ದಾರೆ. ಬೆಂಗಳೂರಿನ ಆಂಧ್ರಹಳ್ಳಿ ನಿವಾಸಿ ಗೋವಿಂದರಾಜು(19) ಕೊಲೆಯಾದ ಯುವಕ. ಗೋವಿಂದರಾಜು ತನ್ನದೇ ಕುಟುಂಬದ ಮತ್ತಿಕೆರೆಯ ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದನೆನ್ನಲಾಗಿದೆ. ಪ್ರೀತಿಗೆ ಯುವತಿಯ ಪೋಷಕರು, ಸಂಬಂಧಿಕರಿಂದ ವಿರೋಧವಿತ್ತೆನ್ನಲಾಗಿದೆ. ಇತ್ತೀಚೆಗೆ ಗೋವಿಂದರಾಜು ಯುವತಿಯ ಮೊಬೈಲ್ ಫೋನ್ ಗೆ ಮೆಸೇಜೊಂದನನ್ನು ಕಳುಹಿಸಿದ್ದರೆನ್ನಲಾಗಿದೆ. ಇದನ್ನು ಗಮನಿಸಿದ ಯುವತಿಯ ಸಂಬಂಧಿಕ ಅನಿಲ್

ಬೆಂಗಳೂರಿನಲ್ಲಿ ಕೊಲೆಯಾದ ಯುವಕ..! ➤ ಮೃತದೇಹ ಚಾರ್ಮಾಡಿ ಘಾಟ್ ನ ಪ್ರಪಾತದಲ್ಲಿ ಪತ್ತೆ Read More »

ಕರ್ನಾಟಕ, ಕ್ರೈಮ್ ನ್ಯೂಸ್

ಕೇಂದ್ರ ಬಜೆಟ್; ಮಹಿಳೆಯರಿಗಾಗಿ ವಿಶೇಷ ಉಳಿತಾಯ ಯೋಜನೆ ಪ್ರಕಟ

(ನ್ಯೂಸ್ ಕಡಬ)newskadaba.com ನವದೆಹಲಿ, ಫೆ.01. 2023-2024 ನೇ ಸಾಲಿನ ಕೇಂದ್ರ ಬಜೆಟ್‌ ನಲ್ಲಿ ಕೇಂದ್ರ ಸರ್ಕಾರವು ಮಹಿಳೆಯರಿಗಾಗಿ ವಿಶೇಷ ಉಳಿತಾಯ ಯೋಜನೆ ಪ್ರಕಟಿಸಿದೆ. 2 ವರ್ಷಗಳ ಅವಧಿಯ ಈ ಯೋಜನೆಗೆ ಶೇ 7.5 ಬಡ್ಡಿ ನಿಗದಿಪಡಿಸಲಾಗಿದೆ. ಅಂಚೆ ಕಚೇರಿಗಳ ಮೂಲಕ ನಿರ್ವಹಿಸುವ ಮಾಸಿಕ ಆದಾಯ ಯೋಜನೆಯ ಹೂಡಿಕೆ ಮಿತಿಯನ್ನು 9 ಲಕ್ಷಕ್ಕೆ ಹೆಚ್ಚಿಸಲಾಗಿದ್ದು, ಈ ಮೊದಲು 4.5 ಲಕ್ಷ ಹೂಡಿಕೆಗೆ ಮಾತ್ರ ಅವಕಾಶವಿತ್ತು. ಇನ್ನು ಸಣ್ಣ ಉಳಿತಾಯ ಯೋಜನೆಗಳಲ್ಲಿ ಹಿರಿಯ ನಾಗರಿಕರ ಹೂಡಿಕೆಗೆ ಇದ್ದ 15 ಲಕ್ಷದ

ಕೇಂದ್ರ ಬಜೆಟ್; ಮಹಿಳೆಯರಿಗಾಗಿ ವಿಶೇಷ ಉಳಿತಾಯ ಯೋಜನೆ ಪ್ರಕಟ Read More »

ರಾಷ್ಟ್ರೀಯ ನ್ಯೂಸ್

ಕೇಂದ್ರ ಬಜೆಟ್; ದೇಶದಲ್ಲಿ 157 ಹೊಸ ನರ್ಸಿಂಗ್ ಕಾಲೇಜುಗಳ ಸ್ಥಾಪನೆ

(ನ್ಯೂಸ್ ಕಡಬ)newskadaba.com ನವದೆಹಲಿ, ಫೆ.01. ವೈದ್ಯಕೀಯ ಶಿಕ್ಷಣಕ್ಕೆ ವಿಶೇಷ ಒತ್ತು ನೀಡಲಾಗಿದ್ದು, ದೇಶದಲ್ಲಿ 157 ಹೊಸ ನರ್ಸಿಂಗ್ ಕಾಲೇಜುಗಳನ್ನು ಸ್ಥಾಪನೆ ಮಾಡಲಾಗುವುದು ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. 2023-24ನೇ ಸಾಲಿನ ಬಜೆಟ್‌ನಲ್ಲಿ ಈ ವಿಚಾರ ಪ್ರಸ್ತಾಪಿಸಿರುವ ಅವರು, ದೇಶದಲ್ಲಿ ವೈದ್ಯಕೀಯ ಶಿಕ್ಷಣಕ್ಕೆ ವಿಶೇಷ ಒತ್ತು ನೀಡಲಾಗುವುದು. ವೈದ್ಯಕೀಯ ಶಿಕ್ಷಣದಲ್ಲಿ ಹೊಸ ಪಠ್ಯಕ್ರಮವನ್ನು ಜಾರಿಗೆ ತರಲಾಗುವುದು. ದೇಶದಲ್ಲಿ ಹೊಸದಾಗಿ 157 ನರ್ಸಿಂಗ್ ಕಾಲೇಜುಗಳನ್ನು ಸ್ಥಾಪಿಸಲಾಗುವುದು. ಇದರಿಂದ ವೈದ್ಯಕೀಯ ರಂಗದಲ್ಲಿ ಸೇವೆ ಸಲ್ಲಿಸಲು ಬಯಸುವ ವಿದ್ಯಾರ್ಥಿಗಳಿಗೆ ಹೆಚ್ಚಿನ

ಕೇಂದ್ರ ಬಜೆಟ್; ದೇಶದಲ್ಲಿ 157 ಹೊಸ ನರ್ಸಿಂಗ್ ಕಾಲೇಜುಗಳ ಸ್ಥಾಪನೆ Read More »

ರಾಷ್ಟ್ರೀಯ ನ್ಯೂಸ್

ಕರ್ನಾಟಕಕ್ಕೆ ಕೊಡುಗೆ; ಭದ್ರಾ ಮೇಲ್ದಂಡೆ ಯೋಜನೆಗೆ 5300 ಕೋಟಿ ರೂ. ಅನುದಾನ ➤ ನಿರ್ಮಲಾ ಸೀತರಾಮನ್

(ನ್ಯೂಸ್ ಕಡಬ)newskadaba.com ನವದೆಹಲಿ, ಫೆ.01. 2023-2024 ನೇ ಸಾಲಿನ ಕೇಂದ್ರ ಬಜೆಟ್‌ ನಲ್ಲಿ ಮಧ್ಯ ಕರ್ನಾಟಕದ ಕೃಷಿಗೆ ವರದಾನವಾಗಲಿರುವ ಭದ್ರಾ ಮೇಲ್ದಂಡೆ ಯೋಜನೆಗೆ ಕೇಂದ್ರ ಬಜೆಟ್‌ನಲ್ಲಿ 5300 ಕೋಟಿ ರೂ. ಪ್ರಕಟಿಸಲಾಗಿದೆ. ಭದ್ರಾ ಮೇಲ್ದಂಡೆ ಯೋಜನೆಯಡಿ ಒಟ್ಟು 29.90 ಟಿ.ಎಂ.ಸಿ. ನೀರಿನ ಬಳಕೆಯೊಂದಿಗೆ ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ ಹಾಗೂ ತುಮಕೂರು ಜಿಲ್ಲೆಗಳ 5,57,022 ಎಕರೆ (2,25,515 ಹೆಕ್ಟೇರ್) ಭೂಪ್ರದೇಶಕ್ಕೆ ನೀರಾವರಿ ಕಲ್ಪಿಸಲು ಅನುಕೂಲವಾಗಲಿದೆ. ಬರಗಾಲ ಪೀಡಿತ ಪ್ರದೇಶಗಳಿಗೆ ನೀರಾವರಿ ಕಲ್ಪಿಸುವ ಭದ್ರಾ ಮೇಲ್ದಂಡೆ ಯೋಜನೆಗೆ ನಿರ್ಮಲಾ ಸೀತಾರಾಮನ್

ಕರ್ನಾಟಕಕ್ಕೆ ಕೊಡುಗೆ; ಭದ್ರಾ ಮೇಲ್ದಂಡೆ ಯೋಜನೆಗೆ 5300 ಕೋಟಿ ರೂ. ಅನುದಾನ ➤ ನಿರ್ಮಲಾ ಸೀತರಾಮನ್ Read More »

ರಾಷ್ಟ್ರೀಯ ನ್ಯೂಸ್

ಆದಾಯ ತೆರಿಗೆ ವಿನಾಯಿತಿ ಮಿತಿ 7 ಲಕ್ಷ ರೂ.ಗೆ ಹೆಚ್ಚಳ

(ನ್ಯೂಸ್ ಕಡಬ)newskadaba.com ನವದೆಹಲಿ, ಫೆ.01. ಹೊಸ ತೆರಿಗೆ ಪದ್ಧತಿ ಆದಾಯ ತೆರಿಗೆ ವಿನಾಯ್ತಿ ಮೊತ್ತವನ್ನು ₹ 5 ಲಕ್ಷದಿಂದ ₹ 7 ಲಕ್ಷಕ್ಕೆ ಹೆಚ್ಚಿಸಲಾಗುವುದು ಎಂದು ವಿತ್ತ ಸಚಿವೆ ನಿರ್ಮಲಾ ಸೀತರಾಮನ್ ಬಜೆಟ್ ನಲ್ಲಿ ತೆರಿಗೆ ವಿವರಗಳನ್ನು ನೀಡಿದ್ದಾರೆ. ತೆರಿಗೆ ವಿನಾಯಿತಿ ಹೀಗಿದೆ: ₹ 7 ಲಕ್ಷದವರೆಗೆ ತೆರಿಗೆ ವಿನಾಯಿತಿ ಘೋಷಣೆ ₹3ರಿಂದ ₹6 ಲಕ್ಷದವರೆಗಿನ ಆದಾಯಕ್ಕೆ ಶೇ.5ರಷ್ಟು ₹6ರಿಂದ ₹9 ಲಕ್ಷದವರಿನ ಆದಾಯಕ್ಕೆ ಶೇ.10ರಷ್ಟು ₹9ರಿಂದ ₹12 ಲಕ್ಷದ ಆದಾಯಕ್ಕೆ ಶೇ.15ರಷ್ಟು ₹12ರಿಂದ ₹15 ಲಕ್ಷದವರೆಗಿನ

ಆದಾಯ ತೆರಿಗೆ ವಿನಾಯಿತಿ ಮಿತಿ 7 ಲಕ್ಷ ರೂ.ಗೆ ಹೆಚ್ಚಳ Read More »

ರಾಷ್ಟ್ರೀಯ ನ್ಯೂಸ್

ಪ್ಯಾನ್‌ಕಾರ್ಡ್ ಇನ್ಮುಂದೆ ಕಾಮೆನ್ ಐಡೆಂಟಿಟಿ ➤ ನಿರ್ಮಲಾ ಸೀತರಾಮನ್

(ನ್ಯೂಸ್ ಕಡಬ)newskadaba.com ನವದೆಹಲಿ, ಫೆ.01. ರೈತರು, ಇತರರ ಅನುಕೂಲಕ್ಕೆ ಕೆವೈಸಿ ಪ್ರಕ್ರಿಯೆಯ ಸರಳೀಕರಣಗೊಳಿಸಲಾಗುವುದು ಹಾಗೂ ಕೇಂದ್ರ ಸರ್ಕಾರದ ಎಲ್ಲಾ ಯೋಜನೆಗೆ ಪ್ಯಾನ್‌ಕಾರ್ಡ್‌ ಇನ್ನು ಸಾಮಾನ್ಯ ಗುರುತಿನ ಚೀಟಿ ಎಂದು ಬಜೆಟ್ ನಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತರಾಮನ್ ಘೋಷಿಸಿದ್ದಾರೆ. ರೈತರು ಕೆಲವು ಸೌಲಭ್ಯ ಪಡೆಯಲು ಬ್ಯಾಂಕ್ ಗಳಲ್ಲಿ ಕಡ್ಡಾಯವಾಗಿರುವ ಕೆ ವೈಸಿ ಪ್ರತಿಕ್ರಿಯೆಯನ್ನು ಸರಳಗೊಳಿಸುವುದಾಗಿ ಅವರು ಹೇಳಿದ್ದಾರೆ. ಡಿಜಿಟಲೀಕರಣ ವಿಭಾಗದಲ್ಲಿ ಇನ್ಮುಂದೆ ಕೆವೈಸಿ ವಿಚಾರದಲ್ಲಿ ಯಾವುದೇ ಕಠಿಣ ಪ್ರಕ್ರಿಯೆ ಇರುವುದಿಲ್ಲ ಎಂದು ಬಜೆಟ್ ನಲ್ಲಿ ಘೋಷಿಸಿದ್ದಾರೆ. ಕೇಂದ್ರ

ಪ್ಯಾನ್‌ಕಾರ್ಡ್ ಇನ್ಮುಂದೆ ಕಾಮೆನ್ ಐಡೆಂಟಿಟಿ ➤ ನಿರ್ಮಲಾ ಸೀತರಾಮನ್ Read More »

ರಾಷ್ಟ್ರೀಯ ನ್ಯೂಸ್

ಉಡುಪಿ: ನಾಗಬನದ ಮರ ಕಳವು ➤ ಆರೋಪಿ ಸೆರೆ

(ನ್ಯೂಸ್ ಕಡಬ)newskadaba.com ಉಡುಪಿ, ಫೆ.01. ಅಂಬಲಪಾಡಿಯ ಫ್ಯಾಮಿಲಿ ಸಭಾಭವನದ ಹಿಂಬದಿಯಲ್ಲಿರುವ ಸಿಪಿಸಿ ಲೇಔಟ್ ನಲ್ಲಿನ ನಾಗಬನದಲ್ಲಿದ್ದ ಶ್ರೀಗಂಧ ಮರ ಕಡಿಯುತ್ತಿದ್ದ ವ್ಯಕ್ತಿಯೋರ್ವನನ್ನು ಉಡುಪಿ ಅರಣ್ಯ ಇಲಾಖೆ ವಶಕ್ಕೆ ತೆಗೆದುಕೊಂಡಿದ್ದಾರೆ. ಮೂಡುಬೆಳ್ಳೆ ನಿವಾಸಿ ಅಶೋಕ ಬಂಧಿತ ಆರೋಪಿ. ನಾಗಬನದಲ್ಲಿ ಶ್ರೀಗಂಧದ ಮರಕಡಿಯುತ್ತಿರುವ ಬಗ್ಗೆ ಬಂದ ಮಾಹಿತಿಯಂತೆ ಉಡುಪಿ ವಲಯದ ಪ್ರಭಾರ ಉಪ ವಲಯ ಅರಣ್ಯಾಧಿಕಾರಿ ಕೇಶವ ಪೂಜಾರಿ ಎಂ. ನೇತೃತ್ವದಲ್ಲಿ ಗಸ್ತು ಅರಣ್ಯ ಪಾಲಕರಾದ ಹೆಚ್. ದೇವರಾಜ್ ಪಾಣ, ಅಭಿಲಾಷ್ ಎಸ್. ಬಿ ಮತ್ತು ವಿತೇಶ್ ಕಾರ್ಯಾಚರಣೆ ನಡೆಸಿ

ಉಡುಪಿ: ನಾಗಬನದ ಮರ ಕಳವು ➤ ಆರೋಪಿ ಸೆರೆ Read More »

ಕರಾವಳಿ, ಕ್ರೈಮ್ ನ್ಯೂಸ್

ಉಡುಪಿ: ಅಧಿಕಾರಿಯೆಂದು ನಂಬಿಸಿ ಆನ್‌ಲೈನ್‌ ಮೂಲಕ ಸಾವಿರಾರು ರೂ. ವಂಚನೆ

(ನ್ಯೂಸ್ ಕಡಬ)newskadaba.com ಉಡುಪಿ, ಫೆ.01. ಅಧಿಕಾರಿ ಎಂದು ನಂಬಿಸಿ ವ್ಯಕ್ತಿಯೋರ್ವರಿಗೆ 99,997 ರೂ. ಹಣ ವಂಚಿಸಿದ ಘಟನೆ ಉಡುಪಿಯಲ್ಲಿ ನಡೆದಿದೆ. ಫ್ರಾನ್ಸಿಸ್‌ ಪಿಯುಸ್‌ ಪುಟಾಡೋ ಎಂಬವರು ಅವರು ತಮ್ಮ ಪೆಟಿಎಂ ಫಾಸ್ಟ್‌ ಟ್ಯಾಗ್‌ ನಿಷ್ಕ್ರಿಯಗೊಂಡ ಬಗ್ಗೆ ಗೂಗಲ್‌ನಲ್ಲಿ ಪೆಟಿಎಂ ಫಾಸ್ಟ್‌ ಟ್ಯಾಗ್‌ ಎಪ್ಲಿಕೇಶನ್‌ ಹುಡುಕಿದಾಗ ಗೂಗಲ್‌ನಲ್ಲಿ ಪೆಟಿಎಂ ಹೆಲ್ಪ್ ಸಪೋರ್ಟ್‌ ನಲ್ಲಿ ಕಂಡುಬಂದ ಮೊಬೈಲ್‌ ನಂಬ್ರ +918249255475 ಕ್ಕೆ ಕರೆ ಮಾಡಿದಾಗ ಆ ವ್ಯಕ್ತಿ ತಾನು ಪೆಟಿಎಂ ಫಾಸ್ಟ್‌ ಟ್ಯಾಗ್‌ ವೆಬ್‌ಸೈಟ್‌ ಅಧಿಕಾರಿಯಾಗಿ ಎಂಬುದಾಗಿ ನಂಬಿಸಿ, ಪೆಟಿಎಂ

ಉಡುಪಿ: ಅಧಿಕಾರಿಯೆಂದು ನಂಬಿಸಿ ಆನ್‌ಲೈನ್‌ ಮೂಲಕ ಸಾವಿರಾರು ರೂ. ವಂಚನೆ Read More »

ಕರಾವಳಿ, ಕ್ರೈಮ್ ನ್ಯೂಸ್

ಉಳ್ಳಾಲ: ವಿಶೇಷ ಚೇತನ ಯುವತಿಯ ಶವ ಪತ್ತೆ ➤ ಕೊಲೆ ಶಂಕೆ…

(ನ್ಯೂಸ್ ಕಡಬ)newskadaba.com ಮಂಗಳೂರು, ಫೆ.01. ಯುವತಿ ಸಂಶಯಾಸ್ಪದ ರೀತಿಯಲ್ಲಿ ಸಾವನ್ನಪ್ಪಿರುವ ಘಟನೆ ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ಕೊಲ್ಯ ಸಾರಸ್ವತ ಕಾಲನಿ ಬಾಡಿಗೆ ಮನೆಯಲ್ಲಿ ನಡೆದಿದ್ದು, ಮೃತದೇಹ ನೇಣುಬಿಗಿದ ಸ್ಥಿತಿಯಲ್ಲಿ ಕಂಡುಬಂದರೂ ಬಾಯಿಗೆ ಬಟ್ಟೆಯನ್ನು ಗಟ್ಟಿಯಾಗಿ ಕಟ್ಟಿರುವುದು ಕೊಲೆ ಸಂಶಯ ವ್ಯಕ್ತಪಡಿಸಿದೆ. ಛತ್ತೀಸಗಢ ಮೂಲದ ಸರಿತಾ ವರ್ಮ(23) ನಿಗೂಢ ರೀತಿಯಲ್ಲಿ ಸಾವನ್ನಪ್ಪಿದಾಕೆ ಎನ್ನಲಾಗಿದೆ. ಇಬ್ಬರು ಸಹೋದರರು ಹಾಗೂ ಅತ್ತಿಗೆ ಜೊತೆ ಸರಿತಾ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು. ಘಟನೆ ವೇಳೆ ಸಹೋದರರಿಬ್ಬರು ಕೆಲಸಕ್ಕೆ ತೆರಳಿದ್ದರೆ, ಅತ್ತಿಗೆ ಆಸ್ಪತ್ರೆಗೆ ತೆರಳಿದ್ದರು.

ಉಳ್ಳಾಲ: ವಿಶೇಷ ಚೇತನ ಯುವತಿಯ ಶವ ಪತ್ತೆ ➤ ಕೊಲೆ ಶಂಕೆ… Read More »

ಕರಾವಳಿ, ಕ್ರೈಮ್ ನ್ಯೂಸ್
Scroll to Top