News Kadaba

ಎನ್‌ಇಪಿ ವಿದ್ಯಾರ್ಥಿಗಳಿಗೆ ಅಗ್ನಿಪರೀಕ್ಷೆ ➤ ಅನುತ್ತೀರ್ಣರಾದವರಿಗೆ ಶುಲ್ಕ

(ನ್ಯೂಸ್ ಕಡಬ)newskadaba.com ಮಂಗಳೂರು, ಫೆ.05. ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ) ಯಡಿ ಪರೀಕ್ಷೆ ಬರೆದಿರುವ ವಿದ್ಯಾರ್ಥಿಗಳಿಗೆ ಮಂಗಳೂರು ವಿವಿಯಿಂದ ಮತ್ತೆ ಸಮಸ್ಯೆ ಸೃಷ್ಟಿಯಾಗಿದೆ. ವಿವಿ ಕಡೆಯಿಂದ ಮರು ಮೌಲ್ಯಮಾಪನಕ್ಕೆ ಅವಕಾಶ ಸಿಕ್ಕರೂ ಕೂಡ ಈ ಬಾರಿ ಅನುತ್ತೀರ್ಣರಾದ ವಿದ್ಯಾರ್ಥಿಗಳು ಪರೀಕ್ಷೆ ಎದುರಿಸುವ ಜತೆಗೆ ಶುಲ್ಕ ಹಾಗೂ ಸಮಯ ಎರಡನ್ನೂ ಕಳೆದುಕೊಳ್ಳಲಿದ್ದಾರೆ. ಮಂಗಳೂರು ವಿವಿ ಪರೀಕ್ಷೆ ಜತೆಗೆ ಫಲಿತಾಂಶ ನೀಡುವುದರಲ್ಲಿ ಕಳೆದ ಎರಡು ವರ್ಷಗಳಿಂದ ನಿರಂತರ ಸುದ್ದಿಯಲ್ಲಿದೆ. ವಿದ್ಯಾರ್ಥಿಗಳ ಪ್ರತಿಭಟನೆ, ಪ್ರಿನ್ಸಿಪಾಲರ ಮನವಿಗಳೆಲ್ಲವೂ ವಿವಿ ಅಧಿಕಾರಿಗಳ ಕದ ಬಡಿದರೂ […]

ಎನ್‌ಇಪಿ ವಿದ್ಯಾರ್ಥಿಗಳಿಗೆ ಅಗ್ನಿಪರೀಕ್ಷೆ ➤ ಅನುತ್ತೀರ್ಣರಾದವರಿಗೆ ಶುಲ್ಕ Read More »

ಕರಾವಳಿ

ಉಳ್ಳಾಲ: ವೀರ ರಾಣಿ ಅಬ್ಬಕ್ಕನ ಥೀಮ್ ಪಾರ್ಕ್ ನಿರ್ಮಾಣವಾಗಬೇಕು ➤ ಶೋಭಾ ಕರಂದ್ಲಾಜೆ

(ನ್ಯೂಸ್ ಕಡಬ)newskadaba.com ಮಂಗಳೂರು, ಫೆ.05. ತೊಕ್ಕೊಟ್ಟಿನ ಉದ್ದೇಶಿತ ಜಾಗದಲ್ಲಿ ಉಳ್ಳಾಲದ ರಾಣಿ ಅಬ್ಬಕ್ಕ ಹೆಸರಲ್ಲಿ ಭವನ ನಿರ್ಮಾಣ ಮಾತ್ರವಲ್ಲದೆ ಜೀಟಿಗೆ ಹಿಡಿದು ಪೋರ್ಚುಗೀಸರನ್ನ ಸೋಲಿಸಿದ ವೀರರಾಣಿಯ ಚರಿತ್ರೆ ದೇಶಕ್ಕೆ ತಿಳಿಸುವ ಥೀಮ್ ಪಾರ್ಕ್ ನಿರ್ಮಾಣವಾಗಬೇಕು ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆಯವರು ಹೇಳಿದ್ದಾರೆ. ಉಳ್ಳಾಲ ವೀರರಾಣಿ ಅಬ್ಬಕ್ಕ ಉತ್ಸವ ಸಮಿತಿ ನೆರಳಲ್ಲಿ ಉಳ್ಳಾಲದ ಮಹಾತ್ಮ ಗಾಂಧಿ ರಂಗ ಮಂದಿರದಲ್ಲಿ ನಡೆದ “ವೀರ ರಾಣಿ ಅಬ್ಬಕ್ಕ ಉತ್ಸವ”ದಲ್ಲಿ ಸಭಾಧ್ಯಕ್ಷತೆ ವಹಿಸಿ ಶೋಭಾ ಕರಂದ್ಲಾಜೆಯವರು ಮಾತನಾಡಿದರು. ರಾಣಿ ಅಬ್ಬಕ್ಕನಂತಹ ವೀರ

ಉಳ್ಳಾಲ: ವೀರ ರಾಣಿ ಅಬ್ಬಕ್ಕನ ಥೀಮ್ ಪಾರ್ಕ್ ನಿರ್ಮಾಣವಾಗಬೇಕು ➤ ಶೋಭಾ ಕರಂದ್ಲಾಜೆ Read More »

ಕರಾವಳಿ

ಗ್ರಾಮೀಣ ಪತ್ರಕರ್ತರಿಗೂ ಉಚಿತ ಬಸ್‌ ಪಾಸ್‌ ➤ ಸಿಎಂ ಬೊಮ್ಮಾಯಿ

(ನ್ಯೂಸ್ ಕಡಬ)newskadaba.com ಬೆಂಗಳೂರು, ಫೆ,05. ಗ್ರಾಮೀಣ ಪತ್ರಕರ್ತರಿಗೂ ಉಚಿತ ಬಸ್‌ ಸೇವೆ ಒದಗಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುತ್ತೇನೆ. ನಿವೃತ್ತ ಪತ್ರಕರ್ತರಿಗೆ ಮಾಸಾಶನ ಹೆಚ್ಚಿಸುವ ನಿಟ್ಟಿನಲ್ಲಿ ಬಜೆಟ್‌ನಲ್ಲಿ ಅನುದಾನ ಮೀಸಲಿರಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭರವಸೆ ನೀಡಿದರು. ವಿಜಯಪುರದಲ್ಲಿ 2 ದಿನಗಳ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ 37ನೇ ರಾಜ್ಯಮಟ್ಟದ ಪತ್ರಕರ್ತರ ಸಮ್ಮೇಳನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಪತ್ರಕರ್ತರನ್ನು ಮೇಲ್ಮನೆಗೆ ನಾಮಕರಣ ಮಾಡುವ ಬೇಡಿಕೆಯನ್ನು ನಗುತ್ತಲೇ ಸ್ಪಂದಿಸಿ, ನಮ್ಮಲ್ಲಿಯೇ ಪೈಪೋಟಿ ಅಧಿಕವಾಗಿದೆ. ಎಲ್ಲ ರಂಗದಲ್ಲಿರುವ ಮುಖಂಡರು

ಗ್ರಾಮೀಣ ಪತ್ರಕರ್ತರಿಗೂ ಉಚಿತ ಬಸ್‌ ಪಾಸ್‌ ➤ ಸಿಎಂ ಬೊಮ್ಮಾಯಿ Read More »

ಕರ್ನಾಟಕ

ಕುಡಿದು ಬಂದು ಪತ್ನಿಗೆ ಹಲ್ಲೆ,ನಿಂದನೆ ➤ ಮಾಜಿ ಕ್ರಿಕೆಟಿಗನ ವಿರುದ್ಧ FIR

(ನ್ಯೂಸ್ ಕಡಬ)newskadaba.com ಮುಂಬಯಿ, ಫೆ.05. ಪತ್ನಿ ಮೇಲೆ ಹಲ್ಲೆ ನಡೆಸಿ ನಿಂದಿಸಿದ ಆರೋಪದ ಮೇಲೆ ಭಾರತದ ಮಾಜಿ ಕ್ರಿಕೆಟಿಗ ವಿನೋದ್ ಕಾಂಬ್ಳಿ ವಿರುದ್ಧ ಬಾಂದ್ರಾ ಪೊಲೀಸ್‌ ಠಾಣೆಯಲ್ಲಿ ಎಫ್‌.ಐ.ಆರ್‌ ದಾಖಲಾಗಿದೆ. ಪತ್ನಿ ಆಂಡ್ರಿಯಾ ನೀಡಿದ ದೂರಿನ ಮೇರೆಗೆ ಐಪಿಸಿ ಸೆಕ್ಷನ್‌ 324,504 ಅಡಿಯಲ್ಲಿ ಪೊಲೀಸರು ದೂರು ದಾಖಲಿಸಿದ್ದಾರೆ. ಕುಡಿದು ಮನೆಗೆ ಬಂದ ವಿನೋದ್ ಕಾಂಬ್ಳಿ ಪತ್ನಿಯನ್ನು ಕೆಟ್ಟದಾಗಿ ನಿಂದಿಸಿದ್ದಾರೆ. ಇದಾದ ಬಳಿಕ ಸಿಟ್ಟಿನಲ್ಲಿ ಅಡುಗೆಯ ಕಾವಲಿಯನ್ನು ಪತ್ನಿಯ ಮೇಲೆ ಎಸೆದಿದ್ದಾನೆ. ಇದರಿಂದ ಪತ್ನಿ ಆಂಡ್ರಿಯಾ ತಲೆಗೆ ಗಾಯವಾಗಿದೆ.

ಕುಡಿದು ಬಂದು ಪತ್ನಿಗೆ ಹಲ್ಲೆ,ನಿಂದನೆ ➤ ಮಾಜಿ ಕ್ರಿಕೆಟಿಗನ ವಿರುದ್ಧ FIR Read More »

ರಾಷ್ಟ್ರೀಯ ನ್ಯೂಸ್
Death, deadbody, Waterfall

ವಿದ್ಯುತ್ ಸ್ಪರ್ಶಿಸಿ ಇಬ್ಬರು ಕಾರ್ಮಿಕರು ಸ್ಥಳದಲ್ಲೇ ಮೃತ್ಯು

(ನ್ಯೂಸ್ ಕಡಬ)newskadaba.com ಬೆಂಗಳೂರು, ಫೆ.05. ಬೆಂಗಳೂರಿನ ಕೋಣನಕುಂಟೆ ಬಳಿಯ ಅಪಾರ್ಟ್ ಮೆಂಟ್ ನಲ್ಲಿ ವಿದ್ಯುತ್ ಶಾಕ್ ನಿಂದ ಇಬ್ಬರು ಕಾರ್ಮಿಕರು ಸ್ಥಳದಲ್ಲೇ ಮೃತಪಟ್ಟ ಘಟನೆ ನಡೆದಿದೆ. ಕೋಣನಕುಂಟೆ ಬಳಿಯ ಪ್ರೆಸ್ಟೀಜ್ ಗ್ರೂಪ್ ನ ಅಪಾರ್ಟ್ ಮೆಂಟ್ ನಲ್ಲಿ ವಿದ್ಯುತ್ ಪ್ರವಹಿಸಿ ಇಬ್ಬರು ಕಾರ್ಮಿಕರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮೃತ ಕಾರ್ಮಿಕರನ್ನು ತುಮಕೂರು ಜಿಲ್ಲೆಯ ಮಧುಗಿರಿ ಮೂಲದ ರಘು ಹಾಗೂ ಅಸ್ಸಾಂ ಮೂಲದ ದಿಲೀಪ್ ಎಂದು ಗುರುತಿಸಲಾಗಿದೆ. ಇಬ್ಬರು ಕಾರ್ಮಿಕರು ಅಪಾರ್ಟ್ ಮೆಂಟ್ ನಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದರು.

ವಿದ್ಯುತ್ ಸ್ಪರ್ಶಿಸಿ ಇಬ್ಬರು ಕಾರ್ಮಿಕರು ಸ್ಥಳದಲ್ಲೇ ಮೃತ್ಯು Read More »

ಕರ್ನಾಟಕ, ಕ್ರೈಮ್ ನ್ಯೂಸ್

ನ್ಯುಮೋನಿಯಾದಿಂದ ಬಳಲುತ್ತಿದ್ದ ಮಗುವಿಗೆ ಕಾದ ಕಬ್ಬಿಣದಿಂದ ಬರೆ ➤ ಕಂದಮ್ಮ ಬಲಿ..!

(ನ್ಯೂಸ್ ಕಡಬ)newskadaba.com ಭೋಪಾಲ್, ಫೆ.05. ನ್ಯುಮೋನಿಯಾದಿಂದ ಬಳಲುತ್ತಿದ್ದ ಮೂರು ತಿಂಗಳ ಹೆಣ್ಣು ಮಗುವಿಗೆ ಆಸ್ಪತ್ರೆಗೆ ಕರೆದುಕೊಂಡು ಹೋಗುವ ಬದಲು ಕಾದ ಕಬ್ಬಿಣದಿಂದ ಹೊಟ್ಟೆಯ ಮೇಲೆ ಬರೆ ಎಳೆದು ಗಾಯಗೊಳಿಸಿದ ಆಘಾತಕಾರಿ ಘಟನೆ ಭೋಪಲ್ ನಿಂದ ವರದಿಯಾಗಿದೆ. ಶಹದೋಲ್ ಜಿಲ್ಲೆಯ ಆದಿವಾಸಿ ಪ್ರದೇಶದಲ್ಲಿ ಜ್ವರದಿಂದ ಬಳಲುತ್ತಿದ್ದ ಮಗುವಿಗೆ 51 ಬಾರಿ ಕಬ್ಬಿಣದಿಂದ ಬರೆ ಹಾಕಲಾಗಿದೆ. ಕಾದ ಕಬ್ಬಿಣದ ಬರೆ ಹಾಕಿದರೆ ಗುಣಮುಖವಾಗುತ್ತದೆ ಎಂಬ ಮೂಢನಂಬಿಕೆ ಈ ಭಾಗದ ಜನರಿಗಿದೆ. ಮಗುವಿಗೆ ಸಕಾಲಕ್ಕೆ ಚಿಕಿತ್ಸೆ ಸಿಗದ ಹಿನ್ನೆಲೆಯಲ್ಲಿ ಮಗು ಮೃತಪಟ್ಟಿದೆ.ಇದೀಗ

ನ್ಯುಮೋನಿಯಾದಿಂದ ಬಳಲುತ್ತಿದ್ದ ಮಗುವಿಗೆ ಕಾದ ಕಬ್ಬಿಣದಿಂದ ಬರೆ ➤ ಕಂದಮ್ಮ ಬಲಿ..! Read More »

ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಪ್ರೀತಿ ನಿರಾಕರಿಸಿದ್ದಕ್ಕೆ ಯುವತಿ ವಿರುದ್ಧ ಕೋರ್ಟ್ ಮೆಟ್ಟಿಲೇರಿದ ಯುವಕ

(ನ್ಯೂಸ್ ಕಡಬ)newskadaba.com ಸಿಂಗಪುರ, ಫೆ.05. ಪ್ರೀತಿಸುತ್ತಿದ್ದ ಯುವತಿ ಮದುವೆಯನ್ನು ನಿರಾಕರಿಸಿದ್ದಕ್ಕೆ ಆಕೆ‌‌ ಮೇಲೆ ಬರೊಬ್ಬರಿ 24 ಕೋಟಿ ಪರಿಹಾರ ಕೊಡುವಂತೆ ಕೇಸ್ ಹಾಕಿರುವ ವಿಚಿತ್ರ ಘಟನೆ ಸಿಂಗಪುರದಿಂದ ವರದಿಯಾಗಿದೆ. ಕೌಶಿಗನ್ ಎಂಬ ವ್ಯಕ್ತಿ ನೋರಾ ತಾನ್ ಎಂಬ ಯುವತಿಯನ್ನು 2016 ರಲ್ಲಿ ಭೇಟಿಯಾಗಿದ್ದರು. ಬಳಿಕ ಇಬ್ಬರ ನಡುವೆ ಗೆಳೆತನವಾಗಿದೆ. ಗೆಳೆತನ ಪ್ರೀತಿಯಾಗಿ ಬದಲಾಗಿತ್ತು. ಕೌಶಿಗನ್ ಆಕೆಗೆ ಪ್ರೇಮ ನಿವೇದನೆ ಮಾಡಿಕೊಂಡಾಗ ಅದನ್ನು ನೋರಾ ನಿರಾಕರಿಸಿದ್ದಾಳೆ. ಇದರಿಂದ ಕೊಪಗೊಂಡ ಕೌಶಿಗನ್​ ಆಕೆ ನನ್ನ ಪ್ರೇಮವನ್ನು ನಿರಾಕರಿಸಿದ್ದರಿಂದ ನಾನು ಮಾನಸಿಕ

ಪ್ರೀತಿ ನಿರಾಕರಿಸಿದ್ದಕ್ಕೆ ಯುವತಿ ವಿರುದ್ಧ ಕೋರ್ಟ್ ಮೆಟ್ಟಿಲೇರಿದ ಯುವಕ Read More »

ರಾಷ್ಟ್ರೀಯ ನ್ಯೂಸ್

ಬಾಲಕಿಗೆ ಲೈಂಗಿಕ ದೌರ್ಜನ್ಯ ಪ್ರಕರಣ ➤ ಬಂಟ್ವಾಳ ನಿವಾಸಿ ಅರೆಸ್ಟ್

(ನ್ಯೂಸ್ ಕಡಬ)newskadaba.com ಕಾಸರಗೋಡು, ಫೆ.05. ವಿದ್ಯಾರ್ಥಿನಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಬಂಟ್ವಾಳ ನಿವಾಸಿಯನ್ನು ಮಂಜೇಶ್ವರ ಠಾಣಾ ಪೊಲೀಸರು ಬಂಧಿಸಿದ್ದಾರೆ. ಬಿ.ಸಿ ರೋಡ್ ನ ಮುಹಮ್ಮದ್ ಇಬ್ರಾಹಿಂ ತೌಫಿಕ್ (23) ಬಂಧಿತ. ತೌಫಿಕ್ ಇನ್ಸ್ಟಾಗ್ರಾಂ ಮೂಲಕ ಪರಿಚಯವಾದ ಮಂಜೇಶ್ವರ ಪೊಲೀಸ್ ಠಾಣಾ ವ್ಯಾಪ್ತಿಯ ವಿದ್ಯಾರ್ಥಿನಿಯೋರ್ವಳನ್ನು ಆಮಿಷ ತೋರಿಸಿ ವಿವಿಧೆಡೆಗೆ ಕರೆದೊಯ್ದು ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎನ್ನಲಾಗಿದೆ. ಈ ಬಗ್ಗೆ ನೀಡಿದ ದೂರಿನಂತೆ ತನಿಖೆ ನಡೆಸಿದ ಮಂಜೇಶ್ವರ ಪೊಲೀಸರು ತೌಫಿಕ್ ನನ್ನು ಬಂಧಿಸಿದ್ದಾರೆ.  

ಬಾಲಕಿಗೆ ಲೈಂಗಿಕ ದೌರ್ಜನ್ಯ ಪ್ರಕರಣ ➤ ಬಂಟ್ವಾಳ ನಿವಾಸಿ ಅರೆಸ್ಟ್ Read More »

ಕರಾವಳಿ, ಕ್ರೈಮ್ ನ್ಯೂಸ್

ಮಂಗಳೂರು: ಜ್ಯುವೆಲ್ಲರಿ ಅಂಗಡಿಯ ಸಿಬ್ಬಂದಿ ಹತ್ಯೆ ಕೇಸ್ ➤ಆರೋಪಿಗಾಗಿ ಮುಂದುವರಿದ ಶೋಧ

(ನ್ಯೂಸ್ ಕಡಬ)newskadaba.com ಮಂಗಳೂರು, ಫೆ.05. ನಗರದ ಜ್ಯುವೆಲ್ಲರಿ ಅಂಗಡಿಯೊಂದರಲ್ಲಿ ಹಾಡಹಗಲೇ ಸಿಬ್ಬಂದಿ ರಾಘವೇಂದ್ರ ಆಚಾರ್ಯರನ್ನು ಚೂರಿಯಿಂದ ಇರಿದು ಕೊಲೆಗೈದು ತಲೆಮರೆಸಿಕೊಂಡಿರುವ ಆರೋಪಿಗಾಗಿ ಬಂದರು ಪೊಲೀಸರು ಶೋಧ ಕಾರ್ಯ ಮುಂದುವರಿಸಿದ್ದಾರೆ ಎನ್ನಲಾಗಿದೆ. ಘಟನೆ ವೇಳೆ ಅಂಗಡಿಯಲ್ಲಿದ್ದ ಒಟ್ಟು 12 ಗ್ರಾಂ ತೂಕದ 60,000 ರೂ. ಮೌಲ್ಯದ 3 ಚಿನ್ನದ ಸರಗಳನ್ನು ದರೋಡೆ ಮಾಡಲಾಗಿದೆ. ಆರೋಪಿಯ ಪತ್ತೆಗಾಗಿ ಅಕ್ಕಪಕ್ಕದ ಅಂಗಡಿಗಳು ಸೇರಿದಂತೆ ಹಲವಾರು ಕಟ್ಟಡಗಳ ಸಿಸಿ ಕೆಮರಾ ದೃಶ್ಯಗಳನ್ನು ಪೊಲೀಸರು ಪರಿಶೀಲನೆ ನಡೆಸಿದ್ದು, ದುಷ್ಕರ್ಮಿ ಕೃತ್ಯ ನಡೆಸಿದ ಬಳಿಕ ತುಂಬಾ

ಮಂಗಳೂರು: ಜ್ಯುವೆಲ್ಲರಿ ಅಂಗಡಿಯ ಸಿಬ್ಬಂದಿ ಹತ್ಯೆ ಕೇಸ್ ➤ಆರೋಪಿಗಾಗಿ ಮುಂದುವರಿದ ಶೋಧ Read More »

ಕರಾವಳಿ, ಕ್ರೈಮ್ ನ್ಯೂಸ್

ಹವಾಮಾನ ಏರುಪೇರು; ಮಕ್ಕಳನ್ನು ಕಾಡುತ್ತಿದೆ ಜ್ವರ, ವಾಂತಿ-ಭೇದಿ

(ನ್ಯೂಸ್ ಕಡಬ)newskadaba.com ದಾವಣಗೆರೆ, ಫೆ.04. ತಾಪಮಾನ ಹೆಚ್ಚಳದ ಜತೆ ಪ್ರತಿದಿನ ಬದಲಾಗುತ್ತಿರುವ ಹವಾಮಾನ ಮಕ್ಕಳ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಈಗ ರಾಜ್ಯದೆಲ್ಲೆಡೆ ಮಕ್ಕಳು ವಾಂತಿ-ಭೇದಿ, ಜ್ವರ, ಶೀತ, ಕೆಮ್ಮು, ನೆಗಡಿ ಹಾಗೂ ಕಫದ ಸಮಸ್ಯೆಗೆ ತುತ್ತಾಗುತ್ತಿದ್ದಾರೆ. ಈ ಬಾರಿ ಹವಮಾನ ಸ್ಥಿರವಾಗಿಲ್ಲ, ಬೆಳಗ್ಗೆ ಮೈ ಕೊರೆಯುವ ಚಳಿಯಿದ್ದರೆ, ಮಧ್ಯಾಹ್ನ ಬೆವರ ಬಸಿಯುವ ಬಿಸಿಲು ಇರುತ್ತದೆ. ಹಾಸನ, ಮಡಿಕೇರಿ ಜಿಲ್ಲೆಗಳಲ್ಲಿ ಅಕಾಲಿಕ ಮಳೆಯಾಗಿದೆ. ಬೆಂಗಳೂರು, ಹಳೇ ಮೈಸೂರು ಭಾಗದಲ್ಲಿ ಚಳಿ ಇನ್ನೂ ಕಡಿಮೆ ಆಗಿಲ್ಲ. ಮಧ್ಯ ಕರ್ನಾಟಕ

ಹವಾಮಾನ ಏರುಪೇರು; ಮಕ್ಕಳನ್ನು ಕಾಡುತ್ತಿದೆ ಜ್ವರ, ವಾಂತಿ-ಭೇದಿ Read More »

ಕರ್ನಾಟಕ
Scroll to Top