News Kadaba

ವೀಕೆಂಡ್ ಸ್ಪೆಷಲ್ ➤ ಚಿಕನ್ ಬಿರಿಯಾನಿ ಮಾಡುವ ವಿಧಾನ.!

(ನ್ಯೂಸ್ ಕಡಬ)newskadaba.com ಬೇಕಾಗುವ ಸಾಮಗ್ರಿ ಚಿಕನ್ ಅರ್ಧ ಕೆಜಿ ಚಕ್ಕೆ 1 ಲವಂಗ 3 ಟೊಮೆಟೊ 2 2 ಗೋಡಂಬಿ, 2 ಬಾದಾಮಿ ಈರುಳ್ಳಿ 1 ಖಾರದ ಪುಡಿ 11/2 ಚಮಚ ಕೊತ್ತಂಬರಿ ಪುಡಿ 1 ಚಮಚ ಗರಂ ಮಸಾಲ 1/2 ಚಮಚ ಅರಿಶಿಣ ಪುಡಿ 1/4 ಚಮಚ ಬಿರಿಯಾನಿ ಮಸಾಲೆ 1 ಚಮಚ ಪಲಾವ್ ಎಲೆ 1 ಗಟ್ಟಿ ಮೊಸರು 1/4 ಕಪ್ ರುಚಿಗೆ ತಕ್ಕ ಉಪ್ಪು ಬಾಸುಮತಿ ಅಕ್ಕಿ 1ಕಪ್ ಮಾಡುವ ವಿಧಾನ: ಈರುಳ್ಳಿ, […]

ವೀಕೆಂಡ್ ಸ್ಪೆಷಲ್ ➤ ಚಿಕನ್ ಬಿರಿಯಾನಿ ಮಾಡುವ ವಿಧಾನ.! Read More »

ಅಡುಗೆ

6,650 ಉದ್ಯೋಗಿಗಳ ವಜಾಗೊಳಿಸಲಿದೆ ಡೆಲ್..!

(ನ್ಯೂಸ್ ಕಡಬ)newskadaba.com ನವದೆಹಲಿ, ಫೆ.06. ಕಂಪ್ಯೂಟರ್​ಗಳ ಬೇಡಿಕೆ ಕುಸಿತದ ಕಾರಣ 6,650 ಮಂದಿ ಉದ್ಯೋಗಿಗಳನ್ನು ವಜಾಗೊಳಿಸಲು ಚಿಂತನೆ ನಡೆಸಿರುವುದಾಗಿ ಡೆಲ್ ತಿಳಿಸಿದೆ. ಕಂಪನಿಯ ಒಟ್ಟು ಉದ್ಯೋಗಿಗಳ ಶೇ 5ರಷ್ಟು ಮಂದಿ ಮೇಲೆ ಉದ್ಯೋಗ ಕಡಿತ ಪರಿಣಾಮ ಬೀರಲಿದೆ ಎನ್ನಲಾಗಿದೆ. ಕಂಪನಿಯು ಕಠಿಣ ಮಾರುಕಟ್ಟೆ ಪರಿಸ್ಥಿತಿಯನ್ನು ಎದುರಿಸುತ್ತಿದೆ. ಭವಿಷ್ಯವೂ ಅನಿಶ್ಚಿತವಾಗಿದೆ. ಪರ್ಸನಲ್ ಕಂಪ್ಯೂಟರ್ ಉದ್ಯಮವು ಪ್ರಸ್ತುತ ಜಾಗತಿಕವಾಗಿ ಎದುರಿಸುತ್ತಿರುವ ಸವಾಲುಗಳನ್ನು ಮೆಟ್ಟಿ ನಿಲ್ಲುವ ಸಲುವಾಗಿ ಉದ್ಯೋಗ ಕಡಿತ ಅನಿವಾರ್ಯವಾಗಿದೆ ಎಂದು ಹೇಳಿದ್ದಾರೆ.  

6,650 ಉದ್ಯೋಗಿಗಳ ವಜಾಗೊಳಿಸಲಿದೆ ಡೆಲ್..! Read More »

ರಾಷ್ಟ್ರೀಯ ನ್ಯೂಸ್

23 ವರ್ಷದ ಯುವತಿಯನ್ನು ಪ್ರೀತಿಸಿ ಮದುವೆಯಾದ 6 ಮಕ್ಕಳ ತಂದೆ

(ನ್ಯೂಸ್ ಕಡಬ)newskadaba.com ಉತ್ತರ ಪ್ರದೇಶ, ಫೆ.06. 6 ಮಕ್ಕಳ ತಂದೆಯೊಬ್ಬ 23 ವರ್ಷದ ಯುವತಿಯನ್ನು ಪ್ರೀತಿಸಿ ಮದುವೆಯಾದ ಘಟನೆ ನಡೆದಿದ್ದು, ಕಳೆದ ಕೆಲ ವರ್ಷಗಳಿಂದ, ಪತ್ನಿ ನಿಧನದ ಬಳಿಕ ಒಂಟಿ ಜೀವನವನ್ನು ನಡೆಸುತ್ತಿದ್ದು, ತನ್ನ 6 ಹೆಣ್ಣು ಮಕ್ಕಳೊಂದಿಗೆ ವಾಸಿಸುತ್ತಿರುವ 65 ವರ್ಷದ ನಖೇಶ್‌ ಯಾದವ್‌ ಈಗ ಎಲ್ಲರ ಸಮ್ಮುಖದಲ್ಲಿ 23 ವರ್ಷದ ನಂದಿನಿ ಯಾದವ್‌ ಎಂಬ ಯುವತಿಯನ್ನು ಮದುವೆಯಾಗಿದ್ದಾರೆ ಎನ್ನಲಾಗಿದೆ. ಇತ್ತೀಚೆಗೆ ವೈಯಕ್ತಿಕ ಕೆಲಸದ ನಿಮಿತ್ತ ರಾಂಚಿಗೆ ಹೋಗಿದ್ದ ವೇಳೆ ಅಲ್ಲಿ ಯುವತಿಯ ಪರಿಚಯವಾಗಿ ದಿನ

23 ವರ್ಷದ ಯುವತಿಯನ್ನು ಪ್ರೀತಿಸಿ ಮದುವೆಯಾದ 6 ಮಕ್ಕಳ ತಂದೆ Read More »

ರಾಷ್ಟ್ರೀಯ ನ್ಯೂಸ್

ನಿಂತಿದ್ದ ಲಾರಿಗೆ ಬಸ್ ಢಿಕ್ಕಿ  ➤  ಚಾಲಕ ಸ್ಥಳದಲ್ಲೇ ಮೃತ್ಯು..!

(ನ್ಯೂಸ್ ಕಡಬ)newskadaba.com ಕಲಬುರಗಿ, ಫೆ.06. ರಸ್ತೆಯಲ್ಲಿ ನಿಂತಿದ್ದ ಲಾರಿಯೊಂದಕ್ಕೆ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಬಸ್ ಢಿಕ್ಕಿ ಹೊಡೆದ ಪರಿಣಾಮ ಚಾಲಕನೋರ್ವ ಸ್ಥಳದಲ್ಲಿ ಮೃತಪಟ್ಟಿದ್ದು, ಇತರೆ 9 ಜನರಿಗೆ ಗಾಯಗಳಾದ ಘಟನೆ ಕಮಲಾಪುರ ತಾಲೂಕಿನ ಕುರಿಕೋಟ ಗ್ರಾಮದ ಬಳಿ ಸಂಭವಿಸಿದೆ. ಘಟನೆಯಲ್ಲಿ ಬಸ್‌ ಚಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಅಪಘಾತಕ್ಕೀಡಾದ ಬಸ್ ಬಳ್ಳಾರಿಯಿಂದ ಬೀದರಿಗೆ ತೆರಳುತ್ತಿತ್ತು. ಮಾರ್ಗ ಮಧ್ಯೆ ಈ ದುರಂತ ಸಂಭವಿಸಿದೆ ಎಂದು ಪೊಲೀಸ್ ಠಾಣೆ ಪಿಎಸ್‌ಐ ತಿಳಿಸಿದ್ದಾರೆ.  

ನಿಂತಿದ್ದ ಲಾರಿಗೆ ಬಸ್ ಢಿಕ್ಕಿ  ➤  ಚಾಲಕ ಸ್ಥಳದಲ್ಲೇ ಮೃತ್ಯು..! Read More »

ಕರ್ನಾಟಕ, ಕ್ರೈಮ್ ನ್ಯೂಸ್

ಹೊಸ ಯೋಜನೆಗಳಿಂದ ಹೊಸ ಗುರಿ !     ➤  ಸಿಎಂ ಬೊಮ್ಮಾಯಿ..!

(ನ್ಯೂಸ್ ಕಡಬ)newskadaba.com ಬೆಂಗಳೂರು,ಫೆ.06. ಹೊಸ ಯೋಜನೆಗಳಿಂದ ಹೊಸ ಹೆಜ್ಜೆ , ಹೊಸ ಗುರಿಯೊಂದಿಗೆ ಮುಂದೆ ಕೇಂದ್ರ ಸರ್ಕಾರ ಮುಂದೆ ಸಾಗುತ್ತಿದ್ದು, ದೇಶವು ಗುರಿ ಮುಟ್ಟಲು ಕರ್ನಾಟಕವು ತನ್ನ ಕೊಡುಗೆ ನೀಡಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಹೇಳಿದ್ದಾರೆ. ಮಾದಾವರದಲ್ಲಿರುವ ಅಂತರರಾಷ್ಟ್ರೀಯ ವಸ್ತುಪ್ರದರ್ಶನ ಕೇಂದ್ರದಲ್ಲಿ ನಡೆಯುತ್ತಿರುವ ಪ್ರತಿಷ್ಠಿತ ಇಂಧನ ಸಪ್ತಾಹ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕೋವಿಡ್ ನಂತರ ಬದುಕಿನ ಹಲವು ಮುಖಗಳು ಬದಲಾಗಿವೆ. ಇದನ್ನು ಗಮನಿಸಿದ ಪ್ರಧಾನಿ ಮೋದಿ ಹೊಸ ಗುರಿಗಳನ್ನು ಕೊಟ್ಟಿದ್ದಾರೆ ಎಂದು ವರದಿ ತಿಳಿಸಿದೆ.  

ಹೊಸ ಯೋಜನೆಗಳಿಂದ ಹೊಸ ಗುರಿ !     ➤  ಸಿಎಂ ಬೊಮ್ಮಾಯಿ..! Read More »

ಕರಾವಳಿ, ಕರ್ನಾಟಕ

ಟರ್ಕಿ, ಸಿರಿಯಾದಲ್ಲಿ ಪ್ರಬಲ ಭೂಕಂಪನಕ್ಕೆ 568 ಮಂದಿ ಮೃತ್ಯು

(ನ್ಯೂಸ್ ಕಡಬ)newskadaba.com ಟರ್ಕಿ, ಫೆ.06. 7.8 ತೀವ್ರತೆಯ ಭೂಕಂಪವು ಟರ್ಕಿಯನ್ನು ಬೆಚ್ಚಿಬೀಳಿಸಿದ್ದು, ಇದರ ಬೆನ್ನಲ್ಲೇ ಮತ್ತೊಂದು ಪ್ರಬಲ ಭೂಕಂಪವು ಪ್ರದೇಶದ ಹಲವಾರು ಪ್ರಾಂತ್ಯಗಳಲ್ಲಿ ಸಂಭವಿಸಿದೆ. ಹಲವಾರು ಕಟ್ಟಡಗಳು ನೆಲಸಮವಾಗಿವೆ ಎಂದು ವರದಿಗಳು ತಿಳಿಸಿದೆ. ನೂರ್ಡಗಿ ಪಟ್ಟಣದಿಂದ ಸುಮಾರು 26 ಕಿಲೋಮೀಟರ್ (16 ಮೈಲಿ) ದೂರದಲ್ಲಿರುವ ಗಾಜಿಯಾಂಟೆಪ್‌ನಿಂದ 33 ಕಿಲೋಮೀಟರ್ (20 ಮೈಲಿ) ದೂರದಲ್ಲಿ ಭೂಕಂಪನ ಕೇಂದ್ರೀಕೃತವಾಗಿದೆ ಎಂದು ಯುಎಸ್ ಜಿಯೋಲಾಜಿಕಲ್ ಸರ್ವೆ ಹೇಳಿದೆ. ಎರಡು ದೇಶಗಳ ನಡುವಿನ ಗಡಿಯ ಸಮೀಪ ಆಗ್ನೇಯ ಟರ್ಕಿಯಲ್ಲಿ 7.8 ತೀವ್ರತೆಯ ಭೂಕಂಪ

ಟರ್ಕಿ, ಸಿರಿಯಾದಲ್ಲಿ ಪ್ರಬಲ ಭೂಕಂಪನಕ್ಕೆ 568 ಮಂದಿ ಮೃತ್ಯು Read More »

ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಅಂಗಡಿಗಳಿಗೆ ಕನ್ನ ಹಾಕುತ್ತಿದ್ದ ಖತರ್ನಾಕ್ ಕಳ್ಳನ ಬಂಧನ

(ನ್ಯೂಸ್ ಕಡಬ)newskadaba.com ಮೈಸೂರು, ಫೆ.06. ನಗರದ ವಿವಿಧೆಡೆ ಅಂಗಡಿಗಳ ರೋಲಿಂಗ್ ಶೆಟರ್ಸ್ ಮೀಟಿ ಕನ್ನ ಹಾಕುತ್ತಿದ್ದ ಖದೀಮನನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಬಂಧಿತನಿಂದ 1.32 ಲಕ್ಷರ ರೂ.ನಗದು, ಒಂದು ದ್ವಿಚಕ್ರ ವಾಹನ ವಶಕ್ಕೆ ಪಡೆದಿದ್ದಾರೆ. ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಿಸಿದಾಗ ಆರೋಪಿ ನಗರದ ವಿವಿಧ ಠಾಣಾ ವ್ಯಾಪ್ತಿಗಳಲ್ಲಿ ಹಾಲಿನ ಬೂತ್, ಮೆಡಿಕಲ್ ಶಾಪ್ ಮತ್ತು ದೇವಸ್ಥಾನಗಳಲ್ಲಿ ಕಳ್ಳತನ ಮಾಡಿರುವ ಬಗ್ಗೆ ತಿಳಿಸಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.  

ಅಂಗಡಿಗಳಿಗೆ ಕನ್ನ ಹಾಕುತ್ತಿದ್ದ ಖತರ್ನಾಕ್ ಕಳ್ಳನ ಬಂಧನ Read More »

ಕರ್ನಾಟಕ

ಕೃಷಿ ಹೊಂಡಕ್ಕೆ ಬಿದ್ದು ಇಬ್ಬರು ಮಕ್ಕಳು ಮೃತ್ಯು

(ನ್ಯೂಸ್ ಕಡಬ)newskadaba.com ವಿಜಯನಗರ, ಫೆ.06. ಕೃಷಿ ಕಾರ್ಯಕ್ಕಾಗಿ ಹಾಗೂ ನೀರಾವರಿ ಅನುಕೂಲಕ್ಕಾಗಿ ಜಮೀನಿನಲ್ಲಿ‌ ನಿರ್ಮಾಣ ಮಾಡಲಾಗಿದ್ದ ಕೃಷಿ ಹೊಂಡದಲ್ಲಿ ಕಾಲು ಜಾರಿ ಬಿದ್ದು ಇಬ್ಬರು ವಿದ್ಯಾರ್ಥಿಗಳು ಮೃತಪಟ್ಟಿರುವ ದುರಂತ ಘಟನೆ ವಿಜಯನಗರದಲ್ಲಿ ವರದಿಯಾಗಿದೆ. ನಾಗರಾಜ ಎಂಬುವರ ಕೃಷಿ ಹೊಂಡದಲ್ಲಿ ಬಾಲಕರು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಮೃತ ವಿದ್ಯಾರ್ಥಿಗಳನ್ನು ಅಭಿಶೇಕ್ (15), ಜಿತೇಂದ್ರ (10) ಎಂದು ಗುರುತಿಸಲಾಗಿದೆ. ಸ್ಥಳಕ್ಕೆ ಉಪತಹಸೀಲ್ದಾರ ಶಂಕ್ರಪ್ಪ ಹಾಗೂ ಎಎಸ್ ಐ ಕರಿವೀರಪ್ಪ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.  ಕೃಷಿ ಹೊಂಡ ಬಳಿ ಚಪ್ಪಲಿಗಳು

ಕೃಷಿ ಹೊಂಡಕ್ಕೆ ಬಿದ್ದು ಇಬ್ಬರು ಮಕ್ಕಳು ಮೃತ್ಯು Read More »

ಕರ್ನಾಟಕ, ಕ್ರೈಮ್ ನ್ಯೂಸ್

ಹಿರಿಯ ಚಿತ್ರಕಲಾವಿದ ಬಿ.ಕೆ.ಎಸ್​. ವರ್ಮಾ ನಿಧನ

(ನ್ಯೂಸ್ ಕಡಬ)newskadaba.com ಬೆಂಗಳೂರು, ಫೆ.06. ಅನಾರೋಗ್ಯದಿಂದ ಬಳಲುತ್ತಿದ್ದ ಹಿರಿಯ ಚಿತ್ರಕಲಾವಿದ ಬಿ.ಕೆ.ಎಸ್​. ವರ್ಮಾ ಅವರು ಮೃತಪಟ್ಟಿದ್ದಾರೆ ಎಂದು ವರದಿ ತಿಳಿಸಿದೆ. ಕಳೆದ ಮೂರು ತಿಂಗಳಿಂದ ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಹೆಬ್ಬಾಳದ ಮಣಿಪಾಲ್ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ವರ್ಮಾ ಅವರಿಗೆ 76 ವರ್ಷ ವಯಸ್ಸಾಗಿದ್ದು, ಪರಿಸರ, ಸಾಮಾಜಿಕ ಸಮಸ್ಯೆಗಳ ಬಗ್ಗೆ ಚಿತ್ರ ಬರೆಯುವ ಮೂಲಕ ಎಲ್ಲರ ಗಮನಸೆಳೆದಿದ್ದರು ಎಂದು ವರದಿ ಪ್ರಕಟಣೆ ತಿಳಿಸಿದೆ. ಬಿಕೆಎಸ್ ವರ್ಮಾ ಅವರಿಗೆ ಬೆಂಗಳೂರು ವಿವಿಯಿಂದ 2011ರಲ್ಲಿ ಗೌರವ ಡಾಕ್ಟರೇಟ್ ನೀಡಲಾಗಿತ್ತು.  

ಹಿರಿಯ ಚಿತ್ರಕಲಾವಿದ ಬಿ.ಕೆ.ಎಸ್​. ವರ್ಮಾ ನಿಧನ Read More »

ಕರ್ನಾಟಕ

ಕೋರ್ಟ್ ಗೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರೋಪಿ ಅರೆಸ್ಟ್

(ನ್ಯೂಸ್ ಕಡಬ)newskadaba.com ಬೆಳ್ತಂಗಡಿ, ಫೆ.06. ಗಾಂಜಾ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋರ್ಟ್ ಗೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಬೆಳ್ತಂಗಡಿ ಪೊಲೀಸರು ಬಂಧಿಸಿದ್ದು, ಬಂಧಿತ ಆರೋಪಿಯನ್ನು ಅಂಜುಂಖಾನ್ (41) ಎಂದು ಗುರುತಿಸಲಾಗಿದೆ. ಈತನು ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಎಂದು ತಿಳಿದುಬಂದಿದೆ. ಈತನನ್ನು ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಣಕಲ್‌ನಿಂದ ಪೊಲೀಸರು ಬಂಧಿಸಿದ್ದಾರೆನ್ನಲಾಗಿದೆ.  

ಕೋರ್ಟ್ ಗೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರೋಪಿ ಅರೆಸ್ಟ್ Read More »

ಕರಾವಳಿ, ಕ್ರೈಮ್ ನ್ಯೂಸ್
Scroll to Top