News Kadaba

ಮಂಗಳೂರು: ವಿಮಾನ ನಿಲ್ದಾಣದಲ್ಲಿ 2.60 ಕೋಟಿ ರೂ. ಮೌಲ್ಯದ ವಜ್ರ ವಶ

(ನ್ಯೂಸ್ ಕಡಬ)newskadaba.com ಮಂಗಳೂರು, ಫೆ.13. ಭಾರತದಿಂದ ದುಬೈಗೆ ಅಕ್ರಮವಾಗಿ ವಿಮಾನದಲ್ಲಿ 2.60 ಕೋಟಿ ರೂ. ಮೌಲ್ಯದ ವಜ್ರ ಸಾಗಿಸುತ್ತಿದ್ದ ಇಬ್ಬರನ್ನು ಮಂಗಳೂರು ವಿಮಾನ ನಿಲ್ದಾಣದಲ್ಲಿ ಭಾರತೀಯ ಕಂದಾಯ ಗುಪ್ತಚರ ನಿರ್ದೇಶನಾಲಯ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ದುಬೈಗೆ ಪ್ರಯಾಣ ಬೆಳೆಸಿದ್ದ ಭಟ್ಕಳದ ಅನಸ್ ಮತ್ತು ಅಮ್ಮರ್ ಎಂಬ ಪ್ರಯಾಣಿಕರು ತಮ್ಮ ಶೂ ಮತ್ತು ಬ್ಯಾಗ್ ಅಡಿಯಲ್ಲಿ ಅನುಮಾನ ಬಾರದಂತೆ ವಜ್ರವನ್ನು ಅಡಗಿಸಿಟ್ಟು ಸಾಗಾಟ ಮಾಡುತ್ತಿದ್ದರು. ಈ ವಜ್ರಗಳನ್ನು ಮುಂಬಯಿಯಿಂದ ತಂದಿದ್ದರು ಎನ್ನಲಾಗಿದೆ.    

ಮಂಗಳೂರು: ವಿಮಾನ ನಿಲ್ದಾಣದಲ್ಲಿ 2.60 ಕೋಟಿ ರೂ. ಮೌಲ್ಯದ ವಜ್ರ ವಶ Read More »

ಕರಾವಳಿ, ಕ್ರೈಮ್ ನ್ಯೂಸ್

ನದಿಯಲ್ಲಿ  ಮುಳುಗಿ ಯುವಕನೋರ್ವ ಮೃತ್ಯು

(ನ್ಯೂಸ್ ಕಡಬ) newskadaba.com ಸಿರುಗುಪ್ಪ, ಫೆ.12. ತಾಲೂಕಿನ ಕೆಂಚನಗುಡ್ಡದ ಸಮೀಪದ ಹರಿಯುತ್ತಿರುವ ತುಂಗಭದ್ರಾ ನದಿಯ ನಡುವೆ ಇರುವ ಗಡ್ಡೆ ಖಾದರ್ ಭಾಷ ಉರುಸ್ ಗೆ ಬಂದಿದ್ದ ನಬಿರಸೂಲ್(18) ಎಂಬುವ ಯುವಕ ತುಂಗಭದ್ರಾ ನದಿಯಲ್ಲಿ ಸ್ಥಾನ ಮಾಡಲು ಹೋಗಿ ಕೆಸರಿನಲ್ಲಿ ಸಿಕ್ಕಿಕೊಂಡು ಮೃತ ಪಟ್ಟಿರುವ ಘಟನೆ ಸಂಭವಿಸಿದೆ. ಮೃತ ವ್ಯಕ್ತಿಯು ಸೀಮಾಂದ್ರ ಪ್ರದೇಶದ ರಾಯದುರ್ಗ ತಾಲೂಕಿನ ಬಿ.ಹಿರೇಹಾಳ್ ಗ್ರಾಮದವನೆಂದು ಪತ್ತೆ ಹಚ್ಚಲಾಗಿದೆ ಈ ಬಗ್ಗೆ ತೆಕ್ಕಲಕೋಟೆ ಪೋಲಿಸ್ ಠಾಣೆಯಲ್ಲಿ ಪ್ರಕಾರಣ ದಾಖಲಾಗಿದೆ ಎಂದು  ವರದಿ ತಿಳಿದು ಬಂದಿದೆ.  

ನದಿಯಲ್ಲಿ  ಮುಳುಗಿ ಯುವಕನೋರ್ವ ಮೃತ್ಯು Read More »

ಕರ್ನಾಟಕ

ಬೆಂಗಳೂರಲ್ಲಿ ಫೆ.12. ರಂದು ‘ಏರ್ ಶೋ’ ಆರಂಭ 

(ನ್ಯೂಸ್ ಕಡಬ)newskadaba.com ಬೆಂಗಳೂರು, ಫೆ.12. ಫೆ.13 ನಾಳೆಯಿಂದ ಯಲಹಂಕ ವಾಯುನೆಲೆಯಲ್ಲಿ ಏರ್ ಶೋ ವೈಮಾನಿಕ ಪ್ರದರ್ಶನ ನಡೆಯಲಿದೆ. ಹೀಗಾಗಿ ನಗರದ ಹಲವು ರಸ್ತೆಗಳಲ್ಲಿ ಕೆಲವೊಂದು ವಾಹನಗಳ ಸಂಚಾರಕ್ಕೆ ನಿರ್ಬಂಧ ವಿಧಿಸಲಾಗಿದೆ. ಈ ಬಾರಿಯ ಏರ್ ಶೋ ವೀಕ್ಷಣೆಗೆ ಸಾರ್ವಜನಿಕರಿಗೆ ಯಾವುದೇ ನಿರ್ಬಂಧವಿಲ್ಲ. ಏರೋ ಇಂಡಿಯಾ ಅಧಿಕೃತ ವೆಬ್ ಸೈಟ್ ಮೂಲಕ ಟಿಕೆಟ್ ಖರೀದಿಸಬಹುದಾಗಿದೆ. ಕೇವಲ ವಿಮಾನಗಳನ್ನು ನೋಡುವ ಸ್ಥಳದ ಪ್ರವೇಶಕ್ಕೆ 1 ಸಾವಿರ ರೂ. ಶುಲ್ಕ ನಿಗದಿಪಡಿಸಲಾಗಿದೆ. ವಿಮಾನಗಳು ಹಾಗೂ ಎಕ್ಸಿಬಿಷನ್ ನೋಡಲು ಟಿಕೆಟ್ ಗೆ 2

ಬೆಂಗಳೂರಲ್ಲಿ ಫೆ.12. ರಂದು ‘ಏರ್ ಶೋ’ ಆರಂಭ  Read More »

ಕರ್ನಾಟಕ

ಕೀರ್ನಾನ್ ಫೋರ್ಬ್ಸ್ ಗುಂಡೇಟಿಗೆ ಬಲಿ

(ನ್ಯೂಸ್ ಕಡಬ)newskadaba.com ಹೊಸದಿಲ್ಲಿ, ಫೆ,12. ದಕ್ಷಿಣ ಆಫ್ರಿಕಾದ ರ್ಯಾಪರ್ ಕೀರ್ನಾನ್ ಫೋರ್ಬ್ಸ್ (35) ರನ್ನು ಡರ್ಬನ್ನ ಜನಪ್ರಿಯ ರೆಸ್ಟೋರೆಂಟ್ ಒಂದರ ಹೊರಗೆ ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ರ್ಯಾಪರ್ ಎಂದು ಗುರುತಿಸಲ್ಪಡುವ ಅವರ ಮೇಲೆ ಆರು ಬಾರಿ ಗುಂಡು ಹಾರಿಸಲಾಗಿದೆ ಎಂದು ದಕ್ಷಿಣ ಆಫ್ರಿಕಾದ ಮಾಧ್ಯಮಗಳು ತಿಳಿಸಿವೆ. ಗಾಯಕನ ಸಾವಿಗೆ ಸಂತಾಪ ಸೂಚಿಸಿ, ಫೋರ್ಬ್ಸ್ ಅವರ ಪೋಷಕರು ಫೋರ್ಬ್ಸ್ ರ ಟ್ವಿಟರ್ ಹ್ಯಾಂಡಲ್ನಲ್ಲಿ ಪ್ರಕಟಣೆ ಹೊರಡಿಸಿದ್ದಾರೆ. “ನಮ್ಮ ಪ್ರೀತಿಯ ಮಗನ ನಿಧನವನ್ನು ನಾವು ತೀವ್ರ ದುಃಖದಿಂದ ಒಪ್ಪಿಕೊಳ್ಳುತ್ತೇವೆ” ಎಂದು

ಕೀರ್ನಾನ್ ಫೋರ್ಬ್ಸ್ ಗುಂಡೇಟಿಗೆ ಬಲಿ Read More »

ರಾಷ್ಟ್ರೀಯ ನ್ಯೂಸ್

ಉದ್ಯಮಿ ಅಪಹರಿಸಿ ಹತ್ಯೆ ಪ್ರಕರಣ ➤ ಇಬ್ಬರು ಆರೋಪಿಗಳ ಬಂಧನ

(ನ್ಯೂಸ್ ಕಡಬ)newskadaba.com ಹಾಸನ. ಫೆ.12. ಹಾಸನದ ಉದ್ಯಮಿಯೋರ್ವನನ್ನು ಅಪಹರಿಸಿ ಹತ್ಯೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ನವೀನ್ ಮತ್ತು ಸಾಗರ್ ಬಂಧಿತ ಆರೋಪಿಗಳು ಎಂದು ಎಸ್ಪಿ ಹರಿರಾಮ್ ಶಂಕರ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ಹಾಸನದ ಗವೇನಹಳ್ಳಿ ಬೈಪಾಸ್ ಸಮೀಪ ಸರ್ವಿಸ್ ಸ್ಟೇಷನ್ ನಡೆಸುತ್ತಿದ್ದ ಲಿಖಿತ್‌ ಗೌಡ (26) ಹತ್ಯೆಗೀಡಾದ ಯುವಕನಾಗಿದ್ದು, ಈತನ ಮೃತದೇಹ ಇತ್ತೀಚೆಗೆ ಹಾಸನ ತಾಲೂಕಿನ ಯೋಗೀಹಳ್ಳಿ ಅರಣ್ಯದಲ್ಲಿ ಪತ್ತೆಯಾಗಿತ್ತು ಎನ್ನಲಾಗಿದೆ.  

ಉದ್ಯಮಿ ಅಪಹರಿಸಿ ಹತ್ಯೆ ಪ್ರಕರಣ ➤ ಇಬ್ಬರು ಆರೋಪಿಗಳ ಬಂಧನ Read More »

ಕರ್ನಾಟಕ, ಕ್ರೈಮ್ ನ್ಯೂಸ್

ಬೈಕ್ ಗೆ ಟಿಪ್ಪರ್ ಡಿಕ್ಕಿಯಾಗಿ ಇಬ್ಬರು ಸ್ಥಳದಲ್ಲೇ ಮೃತ್ಯು               

(ನ್ಯೂಸ್ ಕಡಬ)newskadaba.com ತುಮಕೂರು, ಫೆ.12. ತುಮಕೂರಿನಲ್ಲಿ ಬೈಕ್ ಗೆ ಟಿಪ್ಪರ್ ಢಿಕ್ಕಿಯಾಗಿ ಇಬ್ಬರು ಸ್ಥಳದಲ್ಲೇ ಮೃತಪಟ್ಟ ಘಟನೆ ವರದಿಯಾಗಿದೆ. ಮೃತರನ್ನು ಚಿಕ್ಕ ಹುಲಿಕುಂಟೆಯ ಅನಿಲ್ ಹಾಗೂ ಆಂದ್ರದ ಶ್ರೀಧರ್ ಎಂದು ಗುರುತಿಸಲಾಗಿದೆ. ಇಬ್ಬರು ಬೈಕ್ ನಲ್ಲಿ ಸೌತೆಕಾಯಿ ವ್ಯಾಪಾರಕ್ಕೆ ತೆರಳುತ್ತಿದ್ದಾಗ ಎದುರಿನಿಂದ ವೇಗವಾಗಿ ಬಂದ ಟಿಪ್ಪರ್ ಡಿಕ್ಕಿ ಹೊಡೆದಿದೆ. ಈ ಸಂಬಂಧ ಪಟ್ಟನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.    

ಬೈಕ್ ಗೆ ಟಿಪ್ಪರ್ ಡಿಕ್ಕಿಯಾಗಿ ಇಬ್ಬರು ಸ್ಥಳದಲ್ಲೇ ಮೃತ್ಯು                Read More »

ಕರ್ನಾಟಕ, ಕ್ರೈಮ್ ನ್ಯೂಸ್

8 ವರ್ಷಗಳಿಂದ ದ್ವಿಪತ್ನಿತ್ವ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿ ಬಂಧನ                

(ನ್ಯೂಸ್ ಕಡಬ)newskadaba.com ಕಾಸರಗೋಡು, ಫೆ.12. ಮೊದಲ ಪತ್ನಿಗೆ ತಿಳಿಯದಂತೆ ಎರಡನೇ ಮದುವೆಯಾಗಿದ್ದ ದ್ವಿಪತ್ನಿತ್ವ ಪ್ರಕರಣದಲ್ಲಿ ಎಂಟು ವರ್ಷಗಳಿಂದ ತಲೆಮರೆಸಿಕೊಂಡಿದ್ದ ಪುತ್ತೂರಿನ ದರ್ಬೆ ನಿವಾಸಿ ಅಬ್ದುಲ್ ಹಮೀದ್ (50) ಎಂಬಾತನನ್ನು ಮಂಜೇಶ್ವರ ಪೊಲೀಸರು ಬಂಧಿಸಿದ್ದಾರೆ. ಅಬ್ದುಲ್ ಹಮೀದ್ ಅವರ ಮೊದಲ ಪತ್ನಿ ಮಂಜೇಶ್ವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವಾಸವಾಗಿದ್ದರು. ಬಳಿಕ ಅಬ್ದುಲ್ 2014ರಲ್ಲಿ ಬೇರೊಬ್ಬ ಮಹಿಳೆಯನ್ನು ಮದುವೆಯಾಗಿದ್ದ. ಈ ಸಂಬಂಧ ಅಬ್ದುಲ್‌ನ ಮೊದಲ ಪತ್ನಿ ದೂರು ನೀಡಿದ್ದರು. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಅಬ್ದುಲ್‌ಗಾಗಿ ಹುಡುಕಾಟ ನಡೆಸಿದ್ದರು. ಅಬ್ದುಲ್‌ ಮೇಲೆ

8 ವರ್ಷಗಳಿಂದ ದ್ವಿಪತ್ನಿತ್ವ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿ ಬಂಧನ                 Read More »

ಕರಾವಳಿ, ಕ್ರೈಮ್ ನ್ಯೂಸ್

ಅಪಘಾತದಲ್ಲಿ ಮೂವರು ಯುವಕರ ಸಾವಿನ ಪ್ರಕರಣಕ್ಕೆ ಟ್ವಿಸ್ಟ್!         

(ನ್ಯೂಸ್ ಕಡಬ)newskadaba.com ದಾವಣಗೆರೆ, ಫೆ.12. ಅಪರಿಚಿತ ವಾಹನಕ್ಕೆ ಬೈಕ್ ಡಿಕ್ಕಿಯಾಗಿ ಮೂವರು ಯುವಕರ ಸಾವಿನ ಪ್ರಕರಣಕ್ಕೆ ತಿರುವು ಸಿಕ್ಕಿದೆ. ಉದ್ದೇಶಪೂರ್ವಕವಾಗಿ ಯುವಕರ ಹತ್ಯೆ ಮಾಡಿರುವ ಬಗ್ಗೆ ಕೂಡ ಇದೀಗ ಶಂಕೆ ವ್ಯಕ್ತವಾಗಿದೆ. ಲಾರಿ ಹರಿದು ರಾಮನಗರದ ಪರಶುರಾಮ್ (24) ಸಂದೇಶ (23) ಹಾಗೂ ಶಿವಕುಮಾರ(26) ಮೃತಪಟ್ಟಿದ್ದರು. ಉದ್ದೇಶಪೂರ್ವಕವಾಗಿ ಲಾರಿ ಚಾಲಕನು ಯುವಕರ ಮೇಲೆ ಲಾರಿ ಹತ್ತಿಸಿದ ಕೊಲೆ ಮಾಡಿರುವ ಶಂಕೆ ಇದೀಗ ವ್ಯಕ್ತವಾಗಿದೆ‌. ಸಿಸಿ ಕ್ಯಾಮರಾದಲ್ಲಿ ಲಾರಿ ನಿಂತಿರುವ ದೃಶ್ಯ ಮಾತ್ರ ದಾಖಲಾಗಿದೆ. ಜೊತೆಗೆ ಘಟನಾ ಸ್ಥಳದಲ್ಲಿ

ಅಪಘಾತದಲ್ಲಿ ಮೂವರು ಯುವಕರ ಸಾವಿನ ಪ್ರಕರಣಕ್ಕೆ ಟ್ವಿಸ್ಟ್!          Read More »

ಕರ್ನಾಟಕ, ಕ್ರೈಮ್ ನ್ಯೂಸ್

‘ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ರಾಷ್ಟ್ರಕವಿ ಕುವೆಂಪು ಹೆಸರು’ !  ➤ ಯಡಿಯೂರಪ್ಪ ಘೋಷಣೆ

(ನ್ಯೂಸ್ ಕಡಬ)newskadaba.com ಶಿವಮೊಗ್ಗ, ಫೆ.12. ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ರಾಷ್ಟ್ರಕವಿ ಕುವೆಂಪು ಹೆಸರಿಡಲು ತೀರ್ಮಾನಿಸಲಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಘೋಷಿಸಿದ್ದಾರೆ. ಈ ಕುರಿತು ಮಾತನಾಡಿದ ಯಡಿಯೂರಪ್ಪ, ಜ್ಞಾನಪೀಠ ಪಡೆದ ಮೊದಲ ಕನ್ನಡಿಗ ಕುವೆಂಪು ಆಗಿದ್ದು, ಅವರು ವಿಶ್ವ ಮಾನವ ಸಂದೇಶವನ್ನ ಸಾರಿದ್ದಾರೆ. ಹಾಗಾಗಿ ಕುವೆಂಪು ಹೆಸರಿಸಲು ನಿರ್ಣಯ ಮಾಡಿದ್ದು, ಸದನದಲ್ಲಿ ನಾನೇ ಮಂಡಿಸುತ್ತೇನೆ. ಅಧಿವೇಶನದಲ್ಲಿ ತೀರ್ಮಾನವನ್ನ ಸರ್ವಾನುಮತದಿಂದ ನಿರ್ಣಯಿಸಿ ಕೇಂದ್ರಕ್ಕ ಕಳುಹಿಸಲಾಗುತ್ತದೆ. ಬಿಎಸ್ ವೈ ಹೆಸರು ಮೊದಲೇ ಬೇಡ ಎಂದಿದ್ದೆ. ಹಾಗಾಗಿ ಕುವೆಂಪು ಹೆಸರು ಇಡಲು

‘ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ರಾಷ್ಟ್ರಕವಿ ಕುವೆಂಪು ಹೆಸರು’ !  ➤ ಯಡಿಯೂರಪ್ಪ ಘೋಷಣೆ Read More »

ಕರ್ನಾಟಕ

ಆದಾಯ ತೆರಿಗೆ ಇಲಾಖೆಯ ಇನ್​​ಸ್ಪೆಕ್ಟರ್ ರೈಲ್ವೇ ಹಳಿಗೆ ತಲೆ ಕೊಟ್ಟು ಆತ್ಮಹತ್ಯೆ!                  

(ನ್ಯೂಸ್ ಕಡಬ)newskadaba.com ಬೆಂಗಳೂರು, ಫೆ. 12. ಆದಾಯ ತೆರಿಗೆ ಇಲಾಖೆಯ ಇನ್​​ಸ್ಪೆಕ್ಟರ್ ಓರ್ವರು ರೈಲ್ವೆ ಹಳಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಗರದ ಸಮೀಪ ನಡೆದಿದೆ. ಉತ್ತರ ಪ್ರದೇಶ ಮೂಲದವರಾದ ದೇವೆಂದ್ರ ದುಬೆ ಆತ್ಮಹತ್ಯೆ ಮಾಡಿಕೊಂಡವರು. ಅವರು ಬೆಂಗಳೂರಿನ ಆದಾಯ ತೆರಿಗೆ ಇಲಾಖೆಯಲ್ಲಿ ಇನ್​ಸ್ಪೆಕ್ಟರ್​ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಉತ್ತರ ಪ್ರದೇಶದಲ್ಲಿ ನೆಲೆಸಿರುವ ತನ್ನ ತಂದೆ-ತಾಯಿ ಜೊತೆ ಕೊನೆಯದಾಗಿ ಫೋನ್​ನಲ್ಲಿ ಮಾತನಾಡಿರುವುದು ತನಿಖೆ ವೇಳೆ ತಿಳಿದು ಬಂದಿದೆ. ಪತ್ನಿಗೆ ವಾಟ್ಸ್​ ಆಪ್​ ಮೂಲಕ ಇನ್ಶುರೆನ್ಸ್ ಪಾಲಿಸಿ ಹಾಗೂ ಡೆತ್​

ಆದಾಯ ತೆರಿಗೆ ಇಲಾಖೆಯ ಇನ್​​ಸ್ಪೆಕ್ಟರ್ ರೈಲ್ವೇ ಹಳಿಗೆ ತಲೆ ಕೊಟ್ಟು ಆತ್ಮಹತ್ಯೆ!                   Read More »

ಕರ್ನಾಟಕ, ಕ್ರೈಮ್ ನ್ಯೂಸ್
Scroll to Top