News Kadaba

ಟ್ರಕ್‌ನಲ್ಲಿ 18 ಮೃತದೇಹಗಳು ಪತ್ತೆ

(ನ್ಯೂಸ್ ಕಡಬ)newskadaba.com  ಬಲ್ಗೇರಿಯಾ, ಫೆ.18. ರಾಜಧಾನಿ ಸೋಫಿಯಾದ ಹೊರವಲಯದಲ್ಲಿ ಶವಗಳಿದ್ದ ಟ್ರಕ್ ಅನ್ನು ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ. ಆರಂಭಿಕ ಮಾಹಿತಿಯ ಪ್ರಕಾರ, ಟ್ರಕ್‌ನಲ್ಲಿ ಸುಮಾರು 40 ವಲಸಿಗರು ಪ್ರಯಾಣಿಸುತ್ತಿದ್ದರು. ಟ್ರಕ್ ನಲ್ಲಿದ್ದ 40 ಜನರಲ್ಲಿ 18 ಜನರು ಆಹಾರ/ ಆಮ್ಲಜನಕವಿಲ್ಲದೆ ಪ್ರಾಣ ಕಳೆದುಕೊಂಡಿದ್ದಾರೆ. ಎಂದು ಅಧಿಕಾರಿಗಳು ಬಹಿರಂಗಪಡಿಸಿದ್ದಾರೆ. ಬದುಕುಳಿದವರ ಸ್ಥಿತಿಯೂ ಗಂಭೀರವಾಗಿದ್ದು, ತುರ್ತು ಚಿಕಿತ್ಸೆಗಾಗಿ ಹತ್ತಿರದ ಆಸ್ಪತ್ರೆಗಳಿಗೆ ಕರೆದೊಯ್ಯಲಾಗಿದೆ ಎಂದು ಆಂತರಿಕ ಸಚಿವಾಲಯ ತಿಳಿಸಿದೆ.

ಟ್ರಕ್‌ನಲ್ಲಿ 18 ಮೃತದೇಹಗಳು ಪತ್ತೆ Read More »

ರಾಷ್ಟ್ರೀಯ ನ್ಯೂಸ್

ಮಂಗಳೂರು: ರಕ್ಷಿಸಲ್ಪಟ್ಟ ಮಕ್ಕಳ ಟ್ರ್ಯಾಕಿಂಗ್‌ಗಾಗಿ ಚೈಲ್ಡ್ ಪೋರ್ಟಲ್       ➤ 3.0′ ಪ್ರಾರಂಭ

(ನ್ಯೂಸ್ ಕಡಬ)newskadaba.com  ಮಂಗಳೂರು, ಫೆ.18. ರೈಲ್ವೆ ಪ್ರೊಟೆಕ್ಷನ್ ಫೋರ್ಸ್ (ಆರ್‌ಪಿಎಫ್)ನಿಂದ ರಕ್ಷಿಸಿದ ಮಕ್ಕಳನ್ನು ಪತ್ತೆಹಚ್ಚಲು ಭಾರತೀಯ ರೈಲ್ವೇಯು ‘ಟ್ರ್ಯಾಕ್ ಚೈಲ್ಡ್ ಪೋರ್ಟಲ್- 3.0’ ಅನ್ನು ಪ್ರಾರಂಭಿಸಿದೆ. ಆರ್‌ಪಿಎಫ್ ಈಗ ಅಧಿಕೃತ ವೆಬ್‌ಸೈಟ್‌ನಲ್ಲಿ ಲಭ್ಯವಿರುವ ಟ್ರ್ಯಾಕ್ ಚೈಲ್ಡ್ ಪೋರ್ಟಲ್‌ನಲ್ಲಿ ರಕ್ಷಿಸಲ್ಪಟ್ಟ ಮಕ್ಕಳ ವಿವರಗಳನ್ನು ಅಪ್‌ಲೋಡ್ ಮಾಡುತ್ತಿದ್ದು, https://indianrailways.gov.in/. ಕಾಣೆಯಾದ ಮಕ್ಕಳ ಕುಟುಂಬ ಸದಸ್ಯರು ಅಥವಾ ಸಾರ್ವಜನಿಕರು ಕಾಣೆಯಾದ ಮತ್ತು ರಕ್ಷಿಸಲ್ಪಟ್ಟ ಮಕ್ಕಳನ್ನು ಪತ್ತೆಹಚ್ಚಲು ಪೋರ್ಟಲ್‌ನಲ್ಲಿ ಲಭ್ಯವಿರುವ ಡೇಟಾದಲ್ಲಿ ಪರೀಕ್ಷಿಸಬಹುದು.  

ಮಂಗಳೂರು: ರಕ್ಷಿಸಲ್ಪಟ್ಟ ಮಕ್ಕಳ ಟ್ರ್ಯಾಕಿಂಗ್‌ಗಾಗಿ ಚೈಲ್ಡ್ ಪೋರ್ಟಲ್       ➤ 3.0′ ಪ್ರಾರಂಭ Read More »

ಕರಾವಳಿ

ಹತ್ತು ವರ್ಷದ ಹಿಂದೆ ಚಿನ್ನಾಭರಣ ಸುಲಿಗೆ ಮಾಡಿದ್ದ ಕೇಸ್        ➤ ಆರೋಪಿಗಳಿಗೆ 7 ವರ್ಷ ಕಠಿಣ ಕಾರಾಗೃಹ ಶಿಕ್ಷೆ

(ನ್ಯೂಸ್ ಕಡಬ)newskadaba.com ಉಡುಪಿ, ಫೆ.18. ಹತ್ತು ವರ್ಷದ ಹಿಂದೆ ಚಿನ್ನಾಭರಣ ಸುಲಿಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳಿಗೆ 7 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ, ತಲಾ 5,000 ರೂ. ದಂಡ ವಿಧಿಸಿ 2 ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಉಡುಪಿ ಹಾಗು ಸಂಚಾರಿ ನ್ಯಾಯಾಲಯ ಕಾರ್ಕಳದ ನ್ಯಾಯಧೀಶ ದಿನೇಶ್ ಹೆಗ್ಡೆ ಆದೇಶಿಸಿದ್ದಾರೆ. ಆರೋಪಿಗಳಾದ ಕಾರ್ಕಳದ ಬಂಡಿಮಠದ ಮಧುಕರ ಆಚಾರ್ಯ (36) ಹಾಗು ಕುಂಭಾಶಿ ನಿವಾಸಿ ಪ್ರಶಾಂತ್ ಆಚಾರ್ಯ (36) ನಿಗೆ ಸೆಕ್ಷನ್ 392 ರ

ಹತ್ತು ವರ್ಷದ ಹಿಂದೆ ಚಿನ್ನಾಭರಣ ಸುಲಿಗೆ ಮಾಡಿದ್ದ ಕೇಸ್        ➤ ಆರೋಪಿಗಳಿಗೆ 7 ವರ್ಷ ಕಠಿಣ ಕಾರಾಗೃಹ ಶಿಕ್ಷೆ Read More »

ಕರಾವಳಿ

ಎಂಟು ಮನೆಗಳ ಕಳ್ಳತನ ಪ್ರಕರಣ          ➤ ಇಬ್ಬರು ಆರೋಪಿಗಳ ಬಂಧನ

(ನ್ಯೂಸ್ ಕಡಬ)newskadaba.com ಹೊಸಪೇಟೆ, ಫೆ.18. ಇಲ್ಲಿನ ಗ್ರಾಮೀಣ ಠಾಣೆ ಪೊಲೀಸರು ಕಾರ್ಯಾಚರಣೆ ನಡೆಸಿ ಮನೆ ಕಳ್ಳತನದ ಆರೋಪದ ಮೇಲೆ ಇಬ್ಬರು ಆರೋಪಿಗಳನ್ನು ಬಂಧಿಸಿ .19,19,200 ಮೌಲ್ಯದ ಚಿನ್ನ ಹಾಗೂ ಬೆಳ್ಳಿ ಆಭರಣ ವಶಕ್ಕೆ ಪಡೆದಿದ್ದಾರೆ. ಮರಡಿ ಹನುಮಂತ (27), ಜಿ.ಅನಿಲ್‌ (23) ಬಂಧಿತ ಆರೋಪಿಗಳಾಗಿದ್ದು, ಇವರಿಬ್ಬರ ವಿಚಾರಣೆ ನಡೆಸಿದಾಗ ಒಟ್ಟು ಎಂಟು ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿರುವುದಾಗಿ ಪೊಲೀಸರ ಬಳಿ ಬಾಯಿಬಿಟ್ಟಿದ್ದಾರೆ.  

ಎಂಟು ಮನೆಗಳ ಕಳ್ಳತನ ಪ್ರಕರಣ          ➤ ಇಬ್ಬರು ಆರೋಪಿಗಳ ಬಂಧನ Read More »

ಕರ್ನಾಟಕ

ಮತ್ತೆ ಭಾರತಕ್ಕೆ ಬಂದ 12 ಚೀತಾಗಳು       ➤ ದಕ್ಷಿಣ ಆಫ್ರಿಕಾದಿಂದ ಆಗಮಿಸಿದ ಅತಿಥಿಗಳು

(ನ್ಯೂಸ್ ಕಡಬ)newskadaba.com ನವದೆಹಲಿ, ಫೆ.18. ಭಾರತಕ್ಕೆ ಆಫ್ರಿಕಾದಿಂದ ಮತ್ತೆ 12 ಚೀತಾಗಳು ಆಗಮಿಸಿವೆ. ನಮೀಬಿಯಾದಿಂದ 8 ಚೀತಾಗಳನ್ನು ಸಾಗಿಸಿದ 5 ತಿಂಗಳುಗಳ ನಂತರ  ದಕ್ಷಿಣ ಆಫ್ರಿಕಾದಿಂದ 12 ಚೀತಾಗಳು ಮಧ್ಯ ಪ್ರದೇಶಕ್ಕೆ ಅಗಮಿಸಿವೆ. ಚೀತಾಳನ್ನು ಹೊತ್ತಿದ್ದ ವಾಯುಪಡೆಯ ವಿಮಾನವೊಂದು ಗ್ವಾಲಿಯರ್ ವಾಯುನೆಲೆಗೆ ಬೆಳಗ್ಗೆ 10 ಗಂಟೆಗೆ ಬಂದಿಳಿಯಿತು. ಬಳಿಕ ಆ ಚೀತಾಗಳನ್ನು ಹೆಲಿಕಾಪ್ಟರ್‌ಗಳ ಮೂಲಕ ಕುನೋ ರಾಷ್ಟ್ರೀಯ ಉದ್ಯಾನವನಕ್ಕೆ ಕರೆತರಲಾಗಿದೆ.  

ಮತ್ತೆ ಭಾರತಕ್ಕೆ ಬಂದ 12 ಚೀತಾಗಳು       ➤ ದಕ್ಷಿಣ ಆಫ್ರಿಕಾದಿಂದ ಆಗಮಿಸಿದ ಅತಿಥಿಗಳು Read More »

ರಾಷ್ಟ್ರೀಯ ನ್ಯೂಸ್

ಬಜೆಟ್‌ನಲ್ಲಿ ಕರಾವಳಿ ಭಾಗದ ಮೀನುಗಾರಿಕೆಗೆ ಬಂಪರ್    ➤ ಹಳೆ ಘೋಷಣೆಗಳಿಗೆ ಅನುದಾನ…!!!

(ನ್ಯೂಸ್ ಕಡಬ)newskadaba.com ಮಂಗಳೂರು, ಫೆ.18. ಕರಾವಳಿ ಭಾಗದ ಮೀನುಗಾರಿಕಾ ವಲಯಕ್ಕೆ ಬಂಪರ್‌ ಕೊಡುಗೆ, ಇದುವರೆಗೂ ನಿರ್ಲಕ್ಷ್ಯಕ್ಕೆ ಒಳಗಾಗಿದ್ದ ಕರಾವಳಿ ಹಿನ್ನೀರ ಪ್ರವಾಸೋದ್ಯಮ ಉತ್ತೇಜನಕ್ಕೆ ಕ್ರಮ, ಮೀನುಗಾರಿಕೆ ಬಂದರುಗಳ ಹೂಳೆತ್ತುವ ಪ್ರಸ್ತಾಪ, ಕಿರು ಬಂದರುಗಳಿಗೆ ವಿಶೇಷ ಯೋಜನೆಗಳು ಜಾರಿ. ಇವು ರಾಜ್ಯ ಬಜೆಟ್‌ನಲ್ಲಿ ಕರಾವಳಿ ಭಾಗಕ್ಕೆ ಸಿಕ್ಕ ಪ್ರಮುಖ ಯೋಜನೆಗಳು, ಕರಾವಳಿಯ ಮೀನುಗಾರಿಕಾ ವಲಯಕ್ಕೆ ಹತ್ತು ಹಲವು ಯೋಜನೆಗಳನ್ನು ಘೋಷಿಸಲಾಗಿದೆ.  

ಬಜೆಟ್‌ನಲ್ಲಿ ಕರಾವಳಿ ಭಾಗದ ಮೀನುಗಾರಿಕೆಗೆ ಬಂಪರ್    ➤ ಹಳೆ ಘೋಷಣೆಗಳಿಗೆ ಅನುದಾನ…!!! Read More »

ಕರಾವಳಿ

ಕೊಳ್ಳೇಗಾಲದ ನಾಯ್ಡು ಗಾರ್ಡನ್ ನಲ್ಲಿ ಉಚಿತ ಮೂಳೆ ತಪಾಸಣೆ ಶಿಬಿರ  

(ನ್ಯೂಸ್ ಕಡಬ)newskadaba.com ಕೊಳ್ಳೆಗಾಲ, ಫೆ.18. ಪಟ್ಟಣದ ನಾಯ್ಡು ಗಾರ್ಡನ್‌ ಬಡಾವಣೆಯಲ್ಲಿ ಪಿ.ಕೆ  ವೇಣುಗೋಪಾಲ್‌ ನಾಯ್ಡು ಮತ್ತು ರಾಜಮ್ಮ ನಾಯ್ಡು ಸ್ಮರಣಾರ್ಥ ಉಚಿತ ಮೂಳೆ ಸಾಂದ್ರತೆ ತಪಾಸಣೆ ಶಿಬಿರವನ್ನು ಆಯೋಜಿಸಲಾಗಿದೆ. ಮಾಜಿ ಶಾಸಕ ಎಸ್. ಜಯಣ್ಣ ಅವರು ಈ ಶಿಬಿರವನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಬಡ ಹಾಗೂ ಮಧ್ಯಮ ವರ್ಗದ ಜನರ ಆರೋಗ್ಯ ಸುಧಾರಣೆಗೆ ಉಚಿತ ಆರೋಗ್ಯ ಶಿಬಿರಗಳು ಸಹಕಾರಿಯಾಗಿವೆ ಎಂದು ಹೇಳಿದರು.  

ಕೊಳ್ಳೇಗಾಲದ ನಾಯ್ಡು ಗಾರ್ಡನ್ ನಲ್ಲಿ ಉಚಿತ ಮೂಳೆ ತಪಾಸಣೆ ಶಿಬಿರ   Read More »

ಕರ್ನಾಟಕ

ಫೆ.24ರಿಂದ ಕಲಬುರಗಿಯಲ್ಲಿ ಕಲ್ಯಾಣ ಕರ್ನಾಟಕ ಉತ್ಸವ       

(ನ್ಯೂಸ್ ಕಡಬ)newskadaba.com  ಕಲಬುರಗಿ, ಫೆ.18. ಫೆ.24ರಿಂದ ಫೆ.26ರವರೆಗೆ ಮೂರು ದಿನಗಳ ಕಲ್ಯಾಣ ಕರ್ನಾಟಕ ಉತ್ಸವ ಆಯೋಜಿಸಲು ಭರದ ಸಿದ್ಧತೆ ನಡೆದಿದೆ ಎಂದು ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷ ದತ್ತಾತ್ರೇಯ ಪಾಟೀಲ ರೇವೂರ ಅವರು ಹೇಳಿದರು. ಕಲ್ಯಾಣ ಕರ್ನಾಟಕ ಉತ್ಸವ ಹಿನ್ನೆಲೆಯಲ್ಲಿ ನಿನ್ನೆಯಷ್ಟೇ ದತ್ತಾತ್ರೇಯ ಪಾಟೀಲ ರೇವೂರ ಅವರು ಉತ್ಸವದ ಪೋಸ್ಟರ್, ಲೋಗೋ, ಪ್ರೋಮೋ ಮತ್ತು ವೆಬ್‌ಸೈಟ್ ಬಿಡುಗಡೆ ಮಾಡಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉತ್ಸವಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಕೇಂದ್ರ ಮತ್ತು ರಾಜ್ಯ

ಫೆ.24ರಿಂದ ಕಲಬುರಗಿಯಲ್ಲಿ ಕಲ್ಯಾಣ ಕರ್ನಾಟಕ ಉತ್ಸವ        Read More »

ಕರ್ನಾಟಕ

ನಮ್ಮ ಬಳಿ ಇನ್ನೂ ಸಮಯವಿದೆ; ಬಜೆಟ್ ಘೋಷಣೆಗಳನ್ನು ಈಡೇರಿಸುತ್ತೇವೆ        ➤ ಸಿಎಂ ಬೊಮ್ಮಾಯಿ…!!!

(ನ್ಯೂಸ್ ಕಡಬ)newskadaba.com  ಬೆಂಗಳೂರು, ಫೆ.18, ನಮ್ಮ ಬಳಿ ಇನ್ನೂ ಸಮಯವಿದೆ, ಬಜೆಟ್ ನಲ್ಲಿ ಘೋಷಣೆಗಳನ್ನು ಈಡೇರಿಸುತ್ತೇವೆಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಹೇಳಿದ್ದಾರೆ. ಬಜೆಟ್ ಮಂಡನೆ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ವರ್ಷಕ್ಕೆ ಹೋಲಿಸಿದರೆ ಶೇ 16ರಷ್ಟು (43,462 ಕೋಟಿ ರೂ.) ವೆಚ್ಚ ಹೆಚ್ಚಿದ್ದರೂ ನಮ್ಮ ಸರ್ಕಾರ ಬಜೆಟ್ ಘೋಷಣೆಗಳನ್ನು ಜಾರಿಗೆ ತರಲಿದೆ ಎಂದು ಪ್ರತಿಪಕ್ಷಗಳ ಸಂಶಯಗಳ ನಡುವೆ ವಿಶ್ವಾಸ ವ್ಯಕ್ತಪಡಿಸಿದರು.

ನಮ್ಮ ಬಳಿ ಇನ್ನೂ ಸಮಯವಿದೆ; ಬಜೆಟ್ ಘೋಷಣೆಗಳನ್ನು ಈಡೇರಿಸುತ್ತೇವೆ        ➤ ಸಿಎಂ ಬೊಮ್ಮಾಯಿ…!!! Read More »

ಕರ್ನಾಟಕ

ಮಕ್ಕಳನ್ನು ಶಾಲೆಗೆ ಸೇರಿಸುವ ಪೋಷಕರಿಗೆ ಮುಖ್ಯ ಮಾಹಿತಿ       ➤ ಮಾ.20ರಿಂದ ‘RTE ಸೀಟಿ’ಗಾಗಿ ಅರ್ಜಿ ಸಲ್ಲಿಕೆ ಆರಂಭ…!!!

(ನ್ಯೂಸ್ ಕಡಬ)newskadaba.com ಬೆಂಗಳೂರು, ಫೆ.18. 2023-24ನೇ ಸಾಲಿನಲ್ಲಿ ಶಿಕ್ಷಣ ಹಕ್ಕು ಕಾಯ್ದಿಯಡಿ ದಾಖಲಾತಿಗೆ ಮಾರ್ಚ್ 20, 2023ರಿಂದ ಅರ್ಜಿ ಸಲ್ಲಿಕೆ ಆರಂಭವಾಗಲಿದೆ. ಈ ಕುರಿತಂತೆ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿರುವಂತ ಪ್ರಾಥಮಿಕ ಶಿಕ್ಷಣ ಇಲಾಖೆಯ ನಿರ್ದೇಶಕರು, 2023-24ನೇ ಸಾಲಿನಲ್ಲಿ ಶಿಕ್ಷಣ ಹಕ್ಕು ಕಾಯಿದೆಯಡಿ ದಾಖಲಾತಿಗಾಗಿ ಅರ್ಜಿಗಳನ್ನು ದಿನಾಂಕ 20-03-2023ರಿಂದ 20-04-2023ರವರೆಗೆ ಸ್ವೀಕರಿಸಲಾಗುವುದು ಎಂದಿದ್ದಾರೆ. ಉಚಿತ ಮತ್ತು ಕಡ್ಡಾಯ ಶಿಕ್ಷಣಕ್ಕಾಗಿ ಮಕ್ಕಳ ಹಕ್ಕು ಕಾಯಿದೆ-2009ರ ಅಡಿಯಲ್ಲಿ ಅನುದಾನಿತ ಮತ್ತು ಅನುದಾನ ರಹಿತ ಶಾಲೆಗಳಲ್ಲಿ ಮಕ್ಕಳಿಗೆ ಪ್ರವೇಶ ಪಡೆಯಲು ಇಚ್ಚಿಸುವ

ಮಕ್ಕಳನ್ನು ಶಾಲೆಗೆ ಸೇರಿಸುವ ಪೋಷಕರಿಗೆ ಮುಖ್ಯ ಮಾಹಿತಿ       ➤ ಮಾ.20ರಿಂದ ‘RTE ಸೀಟಿ’ಗಾಗಿ ಅರ್ಜಿ ಸಲ್ಲಿಕೆ ಆರಂಭ…!!! Read More »

ಕರ್ನಾಟಕ
Scroll to Top