News Kadaba

ಒಂದೇ ಕಾರ್ಯಕ್ರಮದಲ್ಲಿ 4 ಅಂತಾರಾಷ್ಟ್ರೀಯ ಪ್ರತಿಷ್ಠಿತ ಪ್ರಶಸ್ತಿಗಳನ್ನು ಗೆದ್ದ ʼRRRʼ…!

(ನ್ಯೂಸ್ ಕಡಬ)newskadaba.com ಲಾಸ್ ಏಂಜಲೀಸ್, ಫೆ.25. ಪ್ರತಿಷ್ಠಿತ ಆಸ್ಕರ್‌ ಪ್ರಶಸ್ತಿಗೆ ನಾಮಿನೇಟ್‌ ಆಗಿರುವ ʼಆರ್‌ ಆರ್‌ ಆರ್‌ʼ ಇತ್ತೀಚೆಗಷ್ಟೇ ಕ್ರಿಟಿಕ್ಸ್ ಚಾಯ್ಸ್ ಸೂಪರ್ ಅವಾರ್ಡ್ಸ್ʼ ನ ಎರಡು ವಿಭಾಗದಲ್ಲಿ ‘ಆರ್‌ ಆರ್‌ ಆರ್‌’ ಸಿನಿಮಾ ನಾಮಿನೇಟ್‌ ಆಗಿದೆ. ಇದೀಗ ಮತ್ತೊಂದು ಅಂತಾರಾಷ್ಟ್ರೀಯ ಪ್ರಶಸ್ತಿಯನ್ನು ಗೆದ್ದಿದೆ. ಅಮೆರಿಕಾದಲ್ಲೇ ಬೀಡು ಬಿಟ್ಟಿರುವ ʼಆರ್‌ ಆರ್‌ ಆರ್‌ʼ ತಂಡ ಹಾಲಿವುಡ್‌ ಕ್ರಿಟಿಕ್ಸ್ ಅಸೋಸಿಯೇಷನ್ ಕೊಡಮಾಡುವ ಪ್ರಶಸ್ತಿಯನ್ನು ಪಡೆದುಕೊಂಡಿದೆ. 6ನೇ ವರ್ಷದ ಕ್ರಿಟಿಕ್ಸ್ ಅಸೋಸಿಯೇಷನ್ ನ ಹೆಚ್‌ ಸಿಎ ಫಿಲ್ಮ್ ಅವಾರ್ಡ್‌ ನ್ನು […]

ಒಂದೇ ಕಾರ್ಯಕ್ರಮದಲ್ಲಿ 4 ಅಂತಾರಾಷ್ಟ್ರೀಯ ಪ್ರತಿಷ್ಠಿತ ಪ್ರಶಸ್ತಿಗಳನ್ನು ಗೆದ್ದ ʼRRRʼ…! Read More »

ರಾಷ್ಟ್ರೀಯ ನ್ಯೂಸ್

➤ ಬೆಳ್ತಂಗಡಿ ಕುಡಿಯುವ ನೀರಿಗಾಗಿ ಪಂಚಾಯತ್ ಎದುರು ಪ್ರತಿಭಟನೆ

(ನ್ಯೂಸ್ ಕಡಬ) newskadaba.com. ಬೆಳ್ತಂಗಡಿ. ಫೆ.25. ಶಿರ್ಲಾಲು ಗ್ರಾಮ ಪಂಚಾಯತ್  ವ್ಯಾಪ್ತಿಯ ಕರಂಬಾರು ಬಂತಡ್ಕದ ಜನತೆಗೆ ಸರಿಯಾಗಿ ಕುಡಿಯುವ ನೀರಿನ ವ್ಯವಸ್ಥೆ ಇಲ್ಲ ಎಂದು ಗ್ರಾಮಸ್ಥರು ಪಂಚಯತ್ ಬಳಿ ನೀರಿನ ಕೊಡ, ಬಕೆಟ್ ಗಳ ಜೊತೆಗೆ ಪ್ರತಿಭಟನೆ ನಡೆಸಿದರು. ಬೆಳ್ತಂಗಡಿ ತಾಲೂಕಿನ ಶಿರ್ಲಾಲು ಗ್ರಾಮ ಪಂಚಾಯತ್ ವ್ಯಾಪ್ತಿಯ ಬಂತಡ್ಕದ ಜನತೆಗೆ ನಾಲ್ಕೈದು ದಿನಗಳಿಂದ ಸರಿಯಾದ ರೀತಿಯಲ್ಲಿ ನೀರಿನ ವ್ಯವಸ್ಥೆ ಇಲ್ಲದೆ ಈ ಪ್ರತಿಭಟನೆ ನಡೆಸಿದರು ಎಂದು ತಿಳಿದು ಬಂದಿದೆ. ಈ ಸಂಬಂಧ ಪಂಚಾಯತ್ ಪಿಡಿಒ ಅವರನ್ನು ತರಾಟೆಗೆ

➤ ಬೆಳ್ತಂಗಡಿ ಕುಡಿಯುವ ನೀರಿಗಾಗಿ ಪಂಚಾಯತ್ ಎದುರು ಪ್ರತಿಭಟನೆ Read More »

ಕರಾವಳಿ

SSLC, ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್…!

(ನ್ಯೂಸ್ ಕಡಬ)newskadaba.com ಬೆಂಗಳೂರು, ಫೆ.25. ಎಸ್‌ಎಸ್‌ಎಲ್ ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆ ಬರೆಯಲಿರುವ ವಿದ್ಯಾರ್ಥಿಗಳಿಗೆ ಈ ವರ್ಷವೂ ಕೃಪಾಕ ನೀಡಲಾಗುತ್ತದೆ. ಒಟ್ಟಾರೆ ಕನಿಷ್ಠ ಅಂಕ ಪಡೆಯುವ ಎಸ್‌ಎಸ್‌ಎಲ್ ಸಿ ವಿದ್ಯಾರ್ಥಿಗಳಿಗೆ ಶೇಕಡ 10ರಷ್ಟು ಮತ್ತು ಪಿಯುಸಿ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಶೇಕಡ 5ರಷ್ಟು ಕೃಪಾಕ ನೀಡಲಾಗುವುದು ಎಂದು ತಿಳಿದುಬಂದಿದೆ. ಕೊರೊನಾ ಕಾರಣದಿಂದಾಗಿ ಕಲಿಕೆಯ ಮೇಲೆ ಉಂಟಾದ ಪರಿಣಾಮದಿಂದ ಮಕ್ಕಳು ಇನ್ನು ಪೂರ್ಣ ಪ್ರಮಾಣದಲ್ಲಿ ಚೇತರಿಸಿಕೊಳ್ಳದ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.  

SSLC, ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್…! Read More »

ಕರ್ನಾಟಕ

ಗ್ರಾಹಕರೇ ಗಮನಿಸಿ…!    ➤  ಮಾರ್ಚ್ 1 ರಿಂದ ಬದಲಾಗಲಿವೆ ಈ ನಿಯಮಗಳು

(ನ್ಯೂಸ್ ಕಡಬ)newskadaba.com ನವದೆಹಲಿ, ಫೆ.25. ಫೆಬ್ರವರಿಯಲ್ಲಿ ಸರ್ಕಾರವು ಅನೇಕ ನಿಯಮಗಳನ್ನು ಬದಲಾಯಿಸಿದೆ. ಮಾರ್ಚ್ ನಲ್ಲಿಯೂ ಇದೇ ಪರಿಸ್ಥಿತಿ ಇರಬಹುದು. ಜನರು ಅನೇಕ ಹೊಸ ಬದಲಾವಣೆಗಳನ್ನು ನೋಡಬಹುದು ಎನ್ನಲಾಗಿದೆ. ಬ್ಯಾಂಕುಗಳು ಸಾಲವನ್ನು ದುಬಾರಿಯಾಗಿಸಬಹುದು. ಹೊಸ ವೈಶಿಷ್ಟ್ಯಗಳನ್ನು ಸಾಮಾಜಿಕ ಮಾಧ್ಯಮ ಪ್ಲಾಟ್ ಫಾರ್ಮ್ ಗಳಲ್ಲಿಯೂ ನೋಡಬಹುದು. ರೈಲಿನ ವೇಳಾಪಟ್ಟಿಯಲ್ಲಿಯೂ ಬದಲಾವಣೆಯಾಗಬಹುದು. ಈ ಬದಲಾವಣೆಗಳು ಸಾಮಾನ್ಯ ಜನರ ಮೇಲೆ ನೇರ ಪರಿಣಾಮ ಬೀರುತ್ತವೆ.  

ಗ್ರಾಹಕರೇ ಗಮನಿಸಿ…!    ➤  ಮಾರ್ಚ್ 1 ರಿಂದ ಬದಲಾಗಲಿವೆ ಈ ನಿಯಮಗಳು Read More »

ರಾಷ್ಟ್ರೀಯ ನ್ಯೂಸ್

ಬರವಣಿಗೆಯಿರುವ ಕರೆನ್ಸಿ ನೋಟುಗಳು ಮಾನ್ಯವಲ್ಲ    ➤  ಈ ಬಗ್ಗೆ ಸ್ಪಷ್ಟತೆ ಕೊಟ್ಟ ಕೇಂದ್ರ

(ನ್ಯೂಸ್ ಕಡಬ)newskadaba.com ನವದೆಹಲಿ, ಫೆ.25. ಕರೆನ್ಸಿ ನೋಟುಗಳ ಮೇಲೆ ಯಾವುದೇ ಬರಹಗಳು ಅಥವಾ ಗೀರುಗಳು ಇರಬಾರದು. ಹಣದ ನೋಟುಗಳ ಮೇಲೆ ಏನಾದರೂ ಬರೆದಿದ್ದರೆ ಅದು ಅಮಾನ್ಯ. ಅವುಗಳ ಮೇಲೆ ಯಾವುದೇ ಬರಹಗಳು ಅಥವಾ ಹುಚ್ಚು ಗೀರುಗಳಿದ್ದರೆ ಅಂತಹ ಕರೆನ್ಸಿ ನೋಟುಗಳನ್ನು ಸ್ವೀಕರಿಸುವುದಿಲ್ಲ. ಈ ಕುರಿತು ಆರ್‌ಬಿಐ ನಿರ್ಧಾರ ಏನು ಮುಂತಾದ ವಿಚಾರಗಳ ಬಗ್ಗೆ ಕೇಂದ್ರ ಸರ್ಕಾರ ಸ್ಪಷ್ಟನೆ ನೀಡಿದೆ.  

ಬರವಣಿಗೆಯಿರುವ ಕರೆನ್ಸಿ ನೋಟುಗಳು ಮಾನ್ಯವಲ್ಲ    ➤  ಈ ಬಗ್ಗೆ ಸ್ಪಷ್ಟತೆ ಕೊಟ್ಟ ಕೇಂದ್ರ Read More »

ರಾಷ್ಟ್ರೀಯ ನ್ಯೂಸ್

ಮಂಡ್ಯ ಜಿಲ್ಲೆಯ ಶಿಂಷಾ ಸಹಕಾರ ಬ್ಯಾಂಕ್‌ಗೆ RBI ನಿರ್ಬಂಧ

(ನ್ಯೂಸ್ ಕಡಬ)newskadaba.com ಮುಂಬೈ, ಫೆ.25. ಕರ್ನಾಟಕ ರಾಜ್ಯದ ಮಂಡ್ಯ ಜಿಲ್ಲೆಯ ಮದ್ದೂರಿನ ಶಿಂಷಾ ಸಹಕಾರ ಬ್ಯಾಂಕ್‌ ನಿಯಮಿತದ ಮೇಲೆ ಭಾರತೀಯ ರಿಸರ್ವ್ ಬ್ಯಾಂಕ್‌ (ಆರ್‌ಬಿಐ) ನಿರ್ಬಂಧ ಹೇರಿದೆ. ಬ್ಯಾಂಕ್‌ನ ಹಣಕಾಸು ಸ್ಥಿತಿ ಹದಗೆಡುತ್ತಿರುವ ಕಾರಣ ಆರ್‌ಬಿಐ ಈ ತೀರ್ಮಾನ ಕೈಗೊಂಡಿದೆ. ಆರ್‌ಬಿಐ ಅನುಮತಿ ಇಲ್ಲದೆ ಈ ಹೊಸದಾಗಿ ಸಾಲ ಕೊಡು ವಂತಿಲ್ಲ, ಹೊಸದಾಗಿ ಹೂಡಿಕೆ ಮಾಡುವಂತಿಲ್ಲ, ಹೊಸದಾಗಿ ಠೇವಣಿ ಸ್ವೀಕರಿಸುವಂತೆಯೂ ಇಲ್ಲ.  

ಮಂಡ್ಯ ಜಿಲ್ಲೆಯ ಶಿಂಷಾ ಸಹಕಾರ ಬ್ಯಾಂಕ್‌ಗೆ RBI ನಿರ್ಬಂಧ Read More »

ರಾಷ್ಟ್ರೀಯ ನ್ಯೂಸ್

ಭಾರತದಲ್ಲಿ ಜನಸಾಮಾನ್ಯರು ಭ್ರಷ್ಟಾಚಾರದಿಂದ ಕಂಗೆಟ್ಟು ಹೋಗಿದ್ದಾರೆ       ➤  ಸುಪ್ರೀಂ ಕೋರ್ಟ್

(ನ್ಯೂಸ್ ಕಡಬ)newskadaba.com ಹೊಸದಿಲ್ಲಿ, ಫೆ.25. ಭಾರತದಲ್ಲಿ ಜನಸಾಮಾನ್ಯರು ಭ್ರಷ್ಟಾಚಾರದಿಂದ ಕಂಗೆಟ್ಟು ಹೋಗಿದ್ದಾರೆ. ಎಲ್ಲಾ ಹಂತಗಳಲ್ಲಿ ಹೊಣೆಗಾರಿಕೆಯನ್ನು ಸರಿಪಡಿಸುವ ಅಗತ್ಯವಿದೆ” ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಕ್ರಿಮಿನಲ್ ಪ್ರಕರಣಗಳಲ್ಲಿ ಆರೋಪ ಹೊರಿಸಿರುವವರನ್ನು ಚುನಾವಣೆಗೆ ಸ್ಪರ್ಧಿಸದಂತೆ ತಡೆಯುವಂತೆ ಕೋರಿ ಸಲ್ಲಿಸಲಾದ ಅರ್ಜಿಯ ವಿಚಾರಣೆ ನಡೆಸಿ, ಭಾರತವು ನಿಜವಾಗಿಯೂ ತಾನು ಶ್ರಮಿಸುತ್ತಿರುವುದು ಸಾಧ್ಯವಾಗಬೇಕಾದರೆ ಅದರ ಮೂಲ ಮೌಲ್ಯಗಳು ಮತ್ತು ಸ್ವಭಾವಕ್ಕೆ ಹಿಂತಿರುಗಬೇಕಾಗುತ್ತದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ.

ಭಾರತದಲ್ಲಿ ಜನಸಾಮಾನ್ಯರು ಭ್ರಷ್ಟಾಚಾರದಿಂದ ಕಂಗೆಟ್ಟು ಹೋಗಿದ್ದಾರೆ       ➤  ಸುಪ್ರೀಂ ಕೋರ್ಟ್ Read More »

ರಾಷ್ಟ್ರೀಯ ನ್ಯೂಸ್

ಬೆಂಗಳೂರು: ಸಿಇಟಿ ಪರೀಕ್ಷಾ ವೇಳಾಪಟ್ಟಿ ಪ್ರಕಟ

(ನ್ಯೂಸ್ ಕಡಬ)newskadaba.com ಬೆಂಗಳೂರು, ಫೆ.25. ವಿವಿಧ ವೃತ್ತಿಪರ ಕೋರ್ಸ್ ಗಳ ಪ್ರವೇಶಕ್ಕಾಗಿ ನಡೆಸುವ ಸಾಮಾನ್ಯ ಪ್ರವೇಶ ಪರೀಕ್ಷೆಯ (CET) ದಿನಾಂಕ ನಿಗದಿಯಾಗಿದ್ದು, ಮೇ 20ರಿಂದ ಸಾಮಾನ್ಯ ಪ್ರವೇಶ ಪರೀಕ್ಷೆಗಳು ಆರಂಭವಾಗಲಿವೆ. ಮೇ. 20 ಮತ್ತು 21ರಂದು ಸಿಇಟಿ ಕನ್ನಡ ಕಡ್ಡಾಯ ಪರೀಕ್ಷೆ ನಡೆಯಲಿದೆ. ಹೊರನಾಡು, ಗಡಿನಾಡು ವಿದ್ಯಾರ್ಥಿಗಳಿಗೆ ಕನ್ನಡ ಪರೀಕ್ಷೆ ನಡೆಸಲಾಗುತ್ತೆ. ಮೇ.22ರಂದು ಸಿಇಟಿ ಅಂಗವಾಗಿ ಕನ್ನಡ ಪರೀಕ್ಷೆ ನಡೆಸಲಾಗುವುದು. ಇಂಜಿನಿಯರಿಂಗ್ / ವಾಸ್ತುಶಿಲ್ಪ ಕೋರ್ಸುಗಳು, ಫಾರ್ಮ್ ಸೈನ್ಸ್ ಅಂದ್ರೆ ಬಿಎಸ್ಸಿ(ಕೃಷಿ), ಬಿ.ಎಸ್.ಸಿ (ರೇಷ್ಮೆ ಕೃಷಿ), ಬಿಎಸ್ಸಿ

ಬೆಂಗಳೂರು: ಸಿಇಟಿ ಪರೀಕ್ಷಾ ವೇಳಾಪಟ್ಟಿ ಪ್ರಕಟ Read More »

ಕರ್ನಾಟಕ

ರೋಹಿಣಿ, ರೂಪಾ ವಿರುದ್ಧ ತನಿಖೆಗೆ ಆದೇಶಿಸಿದ ರಾಜ್ಯ ಸರ್ಕಾರ

(ನ್ಯೂಸ್ ಕಡಬ)newskadaba.com ಬೆಂಗಳೂರು, ಫೆ.25. ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಮತ್ತು ಐಪಿಎಸ್ ಡಿ. ರೂಪಾ ಮೌದ್ಗಿಲ್​ ವಿರುದ್ಧ ತನಿಖೆ ನಡೆಸುವಂತೆ ರಾಜ್ಯ ಸರ್ಕಾರ ಆದೇಶಿಸಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೂಚನೆ ಮೇರೆಗೆ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ ಅವರು ಇಬ್ಬರು ಅಧಿಕಾರಿಗಳ ವಿರುದ್ಧ ತನಿಖೆಗೆ ಆದೇಶ ಹೊರಡಿಸಿದ್ದಾರೆ. ರೋಹಿಣಿ ವಿರುದ್ಧ ಐಪಿಎಸ್​ ಡಿ.ರೂಪಾ ಬಹಿರಂಗ ಹೇಳಿಕೆ. ಸಾಮಾಜಿಕ‌ ಜಾಲತಾಣದಲ್ಲಿ ರೋಹಿಣಿ ಸಿಂಧೂರಿ ಫೋಟೋ ಪ್ರಕಟಣೆ. ಸರ್ಕಾರಕ್ಕೆ ಮುಜುಗರ ಉಂಟು ಮಾಡಿರುವುದು. ರೋಹಿಣಿಯಿಂದ ಪಾರಂಪರಿಕ ಕಟ್ಟಡ ನಿಯಮಾವಳಿ

ರೋಹಿಣಿ, ರೂಪಾ ವಿರುದ್ಧ ತನಿಖೆಗೆ ಆದೇಶಿಸಿದ ರಾಜ್ಯ ಸರ್ಕಾರ Read More »

ಕರ್ನಾಟಕ

ಬಸ್ ಮತ್ತು ಟ್ರಕ್ ನಡುವೆ ಭೀಕರ ಅಪಘಾತ ➤ 14 ಮಂದಿ ದುರ್ಮರಣ

(ನ್ಯೂಸ್ ಕಡಬ)newskadaba.com ಮಧ್ಯಪ್ರದೇಶ, ಫೆ.25. ಮೊಹಾನಿಯಾ ಸುರಂಗದ ಬಳಿ ಟ್ರಕ್ ವೊಂದು ನಿಂತಿದ್ದ ಬಸ್ ಗಳಿಗೆ ಢಿಕ್ಕಿ ಹೊಡೆದ ಪರಿಣಾಮ, 14 ಜನರು ಮೃತಪಟ್ಟು, 50ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ. ಗೃಹ ಸಚಿವ ಅಮಿತ್ ಶಾ ಅವರ ರ್ಯಾೊಲಿಗೆ ತೆರಳಿದ್ದ ಬಸ್ ನ್ನು ಚಾಲಕರು ಸುರಂಗ ಮಾರ್ಗದ ಬಳಿ ನಿಲ್ಲಿಸಿದ್ದಾರೆ. ಆಗ ಎದುರಗಡೆಯಿಂದ ವೇಗವಾಗಿ ಬರುತ್ತಿದ್ದ ಟ್ರಕ್ ವೊಂದು ಬಸ್ ಗಳಿಗೆ ಡಿಕ್ಕಿ ಹೊಡೆದಿದೆ. ಢಿಕ್ಕಿಯ ರಭಸಕ್ಕೆ ಒಂದು ಬಸ್ ಪಲ್ಟಿಯಾಗಿದ್ದು, ಉಳಿದ

ಬಸ್ ಮತ್ತು ಟ್ರಕ್ ನಡುವೆ ಭೀಕರ ಅಪಘಾತ ➤ 14 ಮಂದಿ ದುರ್ಮರಣ Read More »

ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್
Scroll to Top