News Kadaba

➤ ಐಟಿಎಫ್ ಮಹಿಳಾ ಓಪನ್ ನಲ್ಲಿ ಭಾರತದ ವೈದೇಹಿ ಚೌಧರಿಗೆ ಗೆಲುವು

(ನ್ಯೂಸ್ ಕಡಬ) newskadaba.com. ಬೆಂಗಳೂರು.  ಭಾರತದ ಟೆನಿಸ್ ಆಟಗಾರ್ತಿ ವೈದೇಹಿ ಚೌಧರಿ ಅವರು ಕೆಎಸ್‌ಎಲ್‌ಟಿಎ ಸ್ಟೇಡಿಯಂನಲ್ಲಿ ಭಾನುವಾರ ಜಪಾನ್‌ನ ಜುನ್ರಿ ನಮಗತಾ ಅವರನ್ನು 6-2, 6-0 ಸೆಟ್‌ಗಳಿಂದ ಸೋಲಿಸಿ ಐಟಿಎಫ್ ಮಹಿಳಾ ಓಪನ್‌ನ ಸಿಂಗಲ್ಸ್ ಅರ್ಹತಾ ಸುತ್ತಿನ ಎರಡನೇ ಸುತ್ತಿಗೆ ಪ್ರವೇಶಿಸಿದ್ದಾರೆ. ಒಂಬತ್ತನೇ ಶ್ರೇಯಾಂಕದ ವೈದೇಹಿ ಮೊದಲ ಸೆಟ್‌ನಲ್ಲಿ ಗೆಲ್ಲಲು ಡಬಲ್ ಬ್ರೇಕ್ ತೆಗೆದುಕೊಂಡಿದ್ದರಿಂದ ಗೆಲುವಿಗಾಗಿ ತನ್ನನ್ನು ತಾನೇ ಹಿಗ್ಗಿಸಬೇಕಾಗಿಲ್ಲ ಮತ್ತು ಎರಡನೇ ಸೆಟ್‌ನಲ್ಲಿ ಪಂದ್ಯವನ್ನು ಆರಾಮವಾಗಿ ಸುತ್ತುವಂತೆ ಮಾಡಿದರು. ವೈದೇಹಿ ಅವರು ಸೋಮವಾರದ ಅಂತಿಮ ಅರ್ಹತಾ […]

➤ ಐಟಿಎಫ್ ಮಹಿಳಾ ಓಪನ್ ನಲ್ಲಿ ಭಾರತದ ವೈದೇಹಿ ಚೌಧರಿಗೆ ಗೆಲುವು Read More »

ಕ್ರೀಡಾ ನ್ಯೂಸ್

ಮಣಿಪಾಲ: 35 ಅಂತಸ್ತುಗಳ ಕಟ್ಟಡ ಏರಿದ ಜ್ಯೋತಿರಾಜ್.!

(ನ್ಯೂಸ್ ಕಡಬ)newskadaba.com ಉಡುಪಿ, ಮಾ .06. ಮಣಿಪಾಲದಲ್ಲಿರುವ 35 ಅಂತಸ್ತುಗಳ ರಾಯಲ್ ಕಟ್ಟಡವನ್ನು ಚಿತ್ರದುರ್ಗದ ಸಾಹಸಿ ಜ್ಯೋತಿ ರಾಜ್ (ಕೋತಿರಾಜ್) ಯಶಸ್ವಿಯಾಗಿ ಏರಿದ್ದು, 120 ಮೀಟರ್ ಎತ್ತರದ ಈ ಕಟ್ಟಡ ಇದುವರೆಗೂ ಜ್ಯೋತಿರಾಜ್ ಹತ್ತಿರುವ ಬಹು ಎತ್ತರದ ಕಟ್ಟಡವಾಗಿದೆ. ಬೆಳಿಗ್ಗೆ 11.10ಕ್ಕೆ ಸುರಕ್ಷತಾ ಸಾಧನಗಳೊಂದಿಗೆ ಕಟ್ಟಡವನ್ನು ಹತ್ತಲು ಆರಂಭಿಸಿದ ಜ್ಯೋತಿರಾಜ್ 12.10ಕ್ಕೆ ತುತ್ತತುದಿಯನ್ನು ತಲುಪುತ್ತಿದ್ದಂತೆ ನೆರೆದಿದ್ದವರೆಲ್ಲ ಚಪ್ಪಾಳೆಯ ಮೂಲಕ ಅಭಿನಂದನೆ ಸಲ್ಲಿಸಿದರು ಎನ್ನಲಾಗಿದೆ. ಬಹುಮಹಡಿ ಕಟ್ಟಡದ ತುದಿಯಲ್ಲಿ ಕನ್ನಡದ ಬಾವುಟ ಹಾರಿಸಿ ಸಂಭ್ರಮಿಸಿದರು.  

ಮಣಿಪಾಲ: 35 ಅಂತಸ್ತುಗಳ ಕಟ್ಟಡ ಏರಿದ ಜ್ಯೋತಿರಾಜ್.! Read More »

ಕರಾವಳಿ

➤ ಮಗುವನ್ನು ನೋಡಲು ಮೊದಲ ಗಂಡ ಬಿಡುತ್ತಿಲ್ಲ ಎಂದು ತಾಯಿ ಆತ್ಮಹತ್ಯೆಗೆ ಯತ್ನ!

(ನ್ಯೂಸ್ ಕಡಬ) newskadaba.com. ಬೆಂಗಳೂರು. ಬೆಂಗಳೂರು  ಮಗುವನ್ನು ನೋಡಲು ಮೊದಲ ಗಂಡ ಬಿಡುತ್ತಿಲ್ಲ ಎಂದು ಲೈವ್ ವಿಡಿಯೋ ಮಾಡಿ ವಿಷ ಕುಡಿದು ಆತ್ಮಹತ್ಯೆಗೆ ಯತ್ನ ಮಾಡಿರುವ ಘಟನೆ ದೇವನಹಳ್ಳಿ ಹೊರವಲಯದ ಒಜೋನ್ ಅರ್ಬನಾ ಅಪಾರ್ಟ್ಮೆಂಟ್ ಬಳಿ ನಡೆದಿದೆ. ತುಮಕೂರು ಮೂಲದ ಮಹಿಳೆ ಸುಮಯಾ ಬಾನು ಎಂಬ ಮಹಿಳೆಯೇ ಆತ್ಮಹತ್ಯೆಗೆ ಯತ್ನಿಸಿದವರು. ಕಳೆದ‌ ಎರಡು ವರ್ಷಗಳ ಹಿಂದೆ ಪತಿ ಜೊತೆ ಈ ಮಹಿಳೆ ಡೈವರ್ಸ್ ಪಡೆದುಕೊಂಡಿದ್ದಳು. ಈ ವೇಳೆ ಮಗುವನ್ನ ತಾಯಿಯ ಸುಪರ್ದಿಗೆ ನೀಡಿಬೇಕು ಎಂದು ಕೋರ್ಟ್‌ ಆದೇಶವಿದ್ದು,

➤ ಮಗುವನ್ನು ನೋಡಲು ಮೊದಲ ಗಂಡ ಬಿಡುತ್ತಿಲ್ಲ ಎಂದು ತಾಯಿ ಆತ್ಮಹತ್ಯೆಗೆ ಯತ್ನ! Read More »

ಕರ್ನಾಟಕ

ನಕಲಿ ಎನ್‍ಕೌಂಟರ್ ಮಾಡಿದ್ದ ಸೇನಾಧಿಕಾರಿಗೆ ಜೀವಾವಧಿ ಶಿಕ್ಷೆ.!       

(ನ್ಯೂಸ್ ಕಡಬ)newskadaba.com ಶ್ರೀನಗರ, ಮಾ.06. ಜಮ್ಮು ಮತ್ತು ಕಾಶ್ಮೀರದ ಶೋಪಿಯಾನ್ ಜಿಲ್ಲೆಯಲ್ಲಿ ನಡೆದ ನಕಲಿ ಎನ್‍ ಕೌಂಟರ್‍ನಲ್ಲಿ ಭಾಗಿಯಾಗಿದ್ದ ಅಧಿಕಾರಿಯೊಬ್ಬರಿಗೆ ಸೇನಾ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ. ಕೆಲವು ದಿನಗಳ ಹಿಂದೆ ಕೋರ್ಟ್ ಮಾರ್ಷಲ್ ಪ್ರಕ್ರಿಯೆಗಳು ಪೂರ್ಣಗೊಂಡ ನಂತರ ನಕಲಿ ಎನ್‍ಕೌಂಟರ್‍ನ ಆರೋಪಿ ಕ್ಯಾಪ್ಟನ್ ಭೂಪಿಂದರ್ ಸಿಂಗ್‍ಗೆ ಜೀವಾವಧಿ ಶಿಕ್ಷೆ ವಿಧಿಸಲಾಯಿತು ಎಂದು ಅಧಿಕೃತ ಮೂಲಗಳು ತಿಳಿಸಿವೆ.  

ನಕಲಿ ಎನ್‍ಕೌಂಟರ್ ಮಾಡಿದ್ದ ಸೇನಾಧಿಕಾರಿಗೆ ಜೀವಾವಧಿ ಶಿಕ್ಷೆ.!        Read More »

ರಾಷ್ಟ್ರೀಯ ನ್ಯೂಸ್

H3N2 ವೈರಸ್‍ ಬಗ್ಗೆ ಆತಂಕ ಬೇಡ.!     ➤  ಡಾ.ಕೆ.ಸುಧಾಕರ್

(ನ್ಯೂಸ್ ಕಡಬ)newskadaba.com ಬೆಂಗಳೂರು, ಮಾ.06. ದೇಶಾದ್ಯಂತ ವ್ಯಾಪಕವಾಗಿ ಹರಡಿರುವ ಎಚ್3 ಎನ್2 ವೈರಸ್‍ ರಾಜ್ಯದಲ್ಲಿ ಇದುವರೆಗೂ ಕಂಡು ಬಂದಿಲ್ಲದ ಕಾರಣ ಜನರು ಆತಂಕ ಪಡುವ ಅಗತ್ಯವಿಲ್ಲ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು. ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವಿಧಾನಸೌಧದ ಮುಂಭಾಗ ಹಮ್ಮಿಕೊಂಡಿದ್ದ ಸೈಕಲ್ ಜಾಥಾಗೆ ಚಾಲನೆ ನೀಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಈ ವೈರಸ್ ಬಗ್ಗೆ ಕೈಗೊಳ್ಳಬೇಕಾದ ನಿಯಂತ್ರಣ ಕ್ರಮಗಳು ಹಾಗೂ ಚಿಕಿತ್ಸೆ ಕುರಿತಂತೆ

H3N2 ವೈರಸ್‍ ಬಗ್ಗೆ ಆತಂಕ ಬೇಡ.!     ➤  ಡಾ.ಕೆ.ಸುಧಾಕರ್ Read More »

ಕರ್ನಾಟಕ

ಸಂಚಾರ ನಿಯಮ ಉಲ್ಲಂಘನೆ ದಂಡಕ್ಕೆ ಶೇ 50 ರಿಯಾಯಿತಿ.!       ➤  ಚಾಲಕರ ವೇತನ ಬಳಸಿಕೊಂಡು ರೂ.33 ಲಕ್ಷ ದಂಡ ಕಟ್ಟಿದ BMTC

(ನ್ಯೂಸ್ ಕಡಬ)newskadaba.com ಬೆಂಗಳೂರು, ಮಾ.06. ಸಂಚಾರ ನಿಯಮ ಉಲ್ಲಂಘನೆ ಮಾಡಿರುವ ಸವಾರರಿಗೆ ದಂಡ ಪಾವತಿಸಲು ಸರ್ಕಾರ ಶೇ.50ರ ರಿಯಾಯಿತಿಯನ್ನು ನೀಡಿದ್ದು, ಸರ್ಕಾರದ ಈ ಆಫರ್’ನ್ನು ಬಿಎಂಟಿಸಿ ಕೂಡ ಬಳಕೆ ಮಾಡಿಕೊಂಡಿದೆ. ನಗರದಲ್ಲಿ 12 ಸಾವಿರ ಸಿಗ್ನಲ್ ಜಂಪ್ ಮಾಡಿರುವ ಬಿಎಂಟಿಸಿ ಚಾಲಕರು ನಿಗಮಕ್ಕೆ ಬರೋಬ್ಬರಿ 1 ಕೋಟಿ ರೂ. ನಷ್ಟವುಂಟು ಮಾಡಿದ್ದಾರೆ. 12 ಸಾವಿರ ಸಿಗ್ನಲ್ ಜಂಪ್ ಮಾಡಿರುವ ಪ್ರಕರಣಗಳು ಸೇರಿ ಒಟ್ಟು ದಂಡದ ಮೊತ್ತ 1 ಕೋಟಿ ರೂ.ಗೆ ತಲುಪಿದೆ. ಟ್ರಾಫಿಕ್ ನಿಯಮಗಳನ್ನ ಉಲ್ಲಂಘಿಸಿದ ಪ್ರಮುಖ

ಸಂಚಾರ ನಿಯಮ ಉಲ್ಲಂಘನೆ ದಂಡಕ್ಕೆ ಶೇ 50 ರಿಯಾಯಿತಿ.!       ➤  ಚಾಲಕರ ವೇತನ ಬಳಸಿಕೊಂಡು ರೂ.33 ಲಕ್ಷ ದಂಡ ಕಟ್ಟಿದ BMTC Read More »

ಕರ್ನಾಟಕ

ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳೇ ಗಮನಿಸಿ.!    ➤  ಪ್ರೋತ್ಸಾಹಧನಕ್ಕಾಗಿ ಆನ್ ಲೈನ್ ಅರ್ಜಿ ಸಲ್ಲಿಸುವ ದಿನಾಂಕ ವಿಸ್ತರಣೆ

(ನ್ಯೂಸ್ ಕಡಬ)newskadaba.com ಬೆಂಗಳೂರು, ಮಾ.06. ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ 2022-23ನೇ ಸಾಲಿನಲ್ಲಿ ಪ್ರಥಮ ಪ್ರಯತ್ನದಲ್ಲಿ ಪ್ರಥಮ ದರ್ಜೆಯಲ್ಲಿ ತೇರ್ಗಡೆಯಾದ ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನಕ್ಕಾಗಿ ಆನ್‌ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸುವ ದಿನಾಂಕವನ್ನು 2023ರ ಮಾರ್ಚ್ 15 ರವರೆಗೆ ವಿಸ್ತರಿಸಲಾಗಿದೆ ಎಂದು ತಿಳಿದುಬಂದಿದೆ. ಅರ್ಹ ವಿದ್ಯಾರ್ಥಿಗಳು ಇಲಾಖಾ ವೆಬ್‌ಸೈಟ್ www..tw.kar.nic.in ನಲ್ಲಿ ಅರ್ಜಿಯನ್ನು ಸಲ್ಲಿಸುವುದು.  

ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳೇ ಗಮನಿಸಿ.!    ➤  ಪ್ರೋತ್ಸಾಹಧನಕ್ಕಾಗಿ ಆನ್ ಲೈನ್ ಅರ್ಜಿ ಸಲ್ಲಿಸುವ ದಿನಾಂಕ ವಿಸ್ತರಣೆ Read More »

ಕರ್ನಾಟಕ

ಬಾರ್‌ ಗೆ ಬಂದ ಕಡಲಾಮೆ.!        ➤  ಗ್ರಾಹಕರ ಟೇಬಲ್​ ಕೆಳಗೇ ಇಟ್ಟ ಮೊಟ್ಟೆಗಳ ಸಂರಕ್ಷಣೆ

(ನ್ಯೂಸ್ ಕಡಬ)newskadaba.com ಕುಂದಾಪುರ, ಮಾ.06. ಆಮೆ ಬಾರ್‌ಗೆ ಬಂತು ! ಎಣ್ಣೆ ಹಾಕುವುದಕ್ಕೆ ಅಲ್ಲ, ಹೆರಿಗೆಗಾಗಿ ! ಗ್ರಾಹಕರ ಟೇಬಲ್ ಅಡಿ ನಿರ್ಭಯವಾಗಿ ನುಸುಳಿ ರೆಕ್ಕೆ, ಹಿಂಗಾಲಲ್ಲಿ ಮರಳು ಬಗೆದು, ಹೊಂಡವೆಬ್ಬಿಸಿ ನೂರಾರು ಮೊಟ್ಟೆಯಿಟ್ಟು ಸಮುದ್ರದಲ್ಲಿ ಮರೆಯಾಗಿದೆ ಎಂದು ತಿಳಿದುಬಂದಿದೆ. ಇಂಥದ್ದೊಂದು ಅಚ್ಚರಿಗೆ ಶುಕ್ರವಾರ ರಾತ್ರಿ ಸಾಕ್ಷಿಯಾದ ತಾಣ ಕುಂದಾಪುರ ಕೋಡಿ ಕಡಲ ಕಿನಾರೆಯ ಬಾರ್ & ರೆಸ್ಟೋರೆಂಟ್, ಕೋಡಿ ಬೀಚ್‌ನಲ್ಲಿರುವ ಬಾರ್‌ನ ಹೊರಗೆ ಮರಳಿನ ಮೇಲೆ ಛತ್ರಿ ಸಹಿತ ಟೇಬಲ್ ಹಾಕಲಾಗುತ್ತದೆ.  

ಬಾರ್‌ ಗೆ ಬಂದ ಕಡಲಾಮೆ.!        ➤  ಗ್ರಾಹಕರ ಟೇಬಲ್​ ಕೆಳಗೇ ಇಟ್ಟ ಮೊಟ್ಟೆಗಳ ಸಂರಕ್ಷಣೆ Read More »

ಕರಾವಳಿ

ಮಾರ್ಚ್ 31ರೊಳಗೆ ‘ಆಧಾರ್’ ಜೊತೆ ‘ಪಾನ್’ ಲಿಂಕ್ ಮಾಡುವುದು ಕಡ್ಡಾಯ..!    

(ನ್ಯೂಸ್ ಕಡಬ)newskadaba.com ಬೆಂಗಳೂರು, ಮಾ.06. ಆಧಾರ್ ಜೊತೆ ಪಾನ್ ಕಾರ್ಡ್ ಲಿಂಕ್ ಮಾಡುವ ಕುರಿತಂತೆ ಈಗಾಗಲೇ ಆದಾಯ ತೆರಿಗೆ ಇಲಾಖೆ ಹಲವು ಬಾರಿ ಸೂಚನೆಗಳನ್ನು ನೀಡಿದೆ. ಅಲ್ಲದೆ ದಿನಾಂಕಗಳನ್ನು ಸಹ ಈ ಹಿಂದೆ ಮುಂದೂಡಲಾಗಿದ್ದು, ಇದೀಗ 31 ಮಾರ್ಚ್ 2023 ಕೊನೆಯ ದಿನಾಂಕವಾಗಿದೆ ಎಂದು ವರದಿ ತಿಳಿಸಿದೆ. ಪಾನ್ ಜೊತೆ ಆಧಾರ್ ಲಿಂಕ್ ಮಾಡಲು ರೂ.1000 ವಿಳಂಬ ಶುಲ್ಕ ಪಾವತಿಸಬೇಕಾಗುತ್ತದೆ. ಜೊತೆಗೆ ಹಲವು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಆಧಾರ್ ಜೊತೆ ಪಾನ್ ಲಿಂಕ್ ಮಾಡದಿದ್ದರೆ ನಿಮ್ಮ ಪಾನ್ ಕಾರ್ಡ್

ಮಾರ್ಚ್ 31ರೊಳಗೆ ‘ಆಧಾರ್’ ಜೊತೆ ‘ಪಾನ್’ ಲಿಂಕ್ ಮಾಡುವುದು ಕಡ್ಡಾಯ..!     Read More »

ಕರ್ನಾಟಕ

ಸಿಲಿಂಡರ್ ಸ್ಫೋಟ..!     ➤  ಛಿದ್ರವಾಗಿ ಹೋಯ್ತು ಬಾಲಕನ ದೇಹ

(ನ್ಯೂಸ್ ಕಡಬ)newskadaba.com ಬೆಂಗಳೂರು, ಮಾ.06. ಸಿಲಿಂಡರ್ ಸ್ಫೋಟಗೊಂಡು 13 ವರ್ಷದ ಬಾಲಕನೊಬ್ಬ ಮೃತಪಟ್ಟಿರುವ ಘಟನೆ ಹೆಬ್ಬಾಳ ಸಮೀಪದ ಗುಡ್ಡದಹಳ್ಳಿಯಲ್ಲಿ ಇಂದು ಬೆಳಗ್ಗೆ 10 ಗಂಟೆಯ ಸುಮಾರಿಗೆ ನಡೆದಿದೆ. ಆರನೇ ತರಗತಿಯಲ್ಲಿ ಓದುತಿದ್ದ ಮಹೇಶ್(13) ಮೃತಪಟ್ಟ ಬಾಲಕ ಎಂದು ತಿಳಿದುಬಂದಿದೆ. ಸಿಲಿಂಡರ್ ಫಿಲ್ಲಿಂಗ್ ಅಂಗಡಿಯಲ್ಲಿ ಘಟನೆ ನಡೆದಿದ್ದು, ಅಂಗಡಿ ಪಕ್ಕದಲ್ಲಿ ಬಾಲಕ ಮಹೇಶ್ ನಿಂತಿದ್ದ. ಸ್ಫೋಟದ ತೀವ್ರತೆಗೆ ಗಂಭೀರವಾಗಿ ಗಾಯಗೊಂಡಿದ್ದ ಬಾಲಕನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇದೀಗ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾನೆ.  

ಸಿಲಿಂಡರ್ ಸ್ಫೋಟ..!     ➤  ಛಿದ್ರವಾಗಿ ಹೋಯ್ತು ಬಾಲಕನ ದೇಹ Read More »

ಕರ್ನಾಟಕ, ಕ್ರೈಮ್ ನ್ಯೂಸ್
Scroll to Top