News Kadaba

ಪಡುಬಿದ್ರಿ: ಟ್ಯಾಂಕರ್ ಮತ್ತು ಸ್ಕೂಟರ್‌ ನಡುವೆ ಅಪಘಾತ   ➤  ಇಬ್ಬರು ಸ್ಥಳದಲ್ಲೇ ಮೃತ್ಯು

(ನ್ಯೂಸ್ ಕಡಬ)newskadaba.com  ಪಡುಬಿದ್ರಿ, ಮಾ.07. ಮೂಲ್ಕಿ ಸೇತುವೆ ಮೇಲೆ ಟ್ಯಾಂಕರ್ – ಸ್ಕೂಟರ್ ನಡುವೆ ಭೀಕರ ಅಪಘಾತ ಸಂಭವಿಸಿ ಇಬ್ಬರು ಮೃತಪಟ್ಟಿರುವ ಘಟನೆ ಮಂಗಳವಾರ ಮಧ್ಯಾಹ್ನ ನಡೆದಿದೆ. ಮೃತರನ್ನು ತೀರ್ಥಹಳ್ಳಿ ಕೋಳಿಕಾಲು ಗುಡ್ಡೆ ನಿವಾಸಿ, ದಂಪತಿ ಅಕ್ಬರ್ ಪಾಶ(61) ಹಾಗೂ ಖತೀಜಾಬಿ(46) ಎಂದು ಗುರುತಿಸಲಾಗಿದೆ. ದಂಪತಿ ಮಂಗಳೂರಿನ ಪಾಸ್ ಪೋರ್ಟ್ ಕಚೇರಿಗೆ ತಮಗಾಗಿ ಪಾಸ್ ಪೋರ್ಟ್ ಮಾಡಿಸಲೆಂದು ಹೊರಟಿದ್ದರು ಎಂದು ತಿಳಿದುಬಂದಿದೆ.  

ಪಡುಬಿದ್ರಿ: ಟ್ಯಾಂಕರ್ ಮತ್ತು ಸ್ಕೂಟರ್‌ ನಡುವೆ ಅಪಘಾತ   ➤  ಇಬ್ಬರು ಸ್ಥಳದಲ್ಲೇ ಮೃತ್ಯು Read More »

ಕರಾವಳಿ, ಕ್ರೈಮ್ ನ್ಯೂಸ್

ಕರಾವಳಿಯಲ್ಲಿ ನಿಲ್ಲದ ʼಧರ್ಮದಂಗಲ್ʼ   ➤  ಹಿಂದೂಯೇತರರ ವಾಹನಗಳಿಗೆ ʻಸೌತಡ್ಕದಲ್ಲಿ ನಿಷೇಧ ಹೇರಿ ಬ್ಯಾನರ್ ಅಳವಡಿಕೆʼ

(ನ್ಯೂಸ್ ಕಡಬ)newskadaba.com  ದಕ್ಷಿಣಕನ್ನಡ, ಮಾ.07. ಬೆಳ್ತಂಗಡಿ ಕೊಕ್ಕಡ ಸೌತಡ್ಕ ದೇವಸ್ಥಾ‌ನಕ್ಕೆ ತೆರಳುವ ರಸ್ತೆಯಲ್ಲಿ ಹಿಂದೂಯೇತರರ ಆಟೋ, ಟ್ಯಾಕ್ಸಿ ಇನ್ನಿತರ ವಾಹನಗಳ ಪ್ರವೇಶಕ್ಕೆ ನಿಷೇಧ ಹೇರಿ ಬ್ಯಾನರ್ ಅಳವಡಿಸಲಾಗಿದೆ. ನಮ್ಮ ದೇಶದಲ್ಲಿ ಸಾಕಷ್ಟು ಗಣೇಶನ ದೇವಾಲಯಗಳಿವೆ. ಆ ದೇವಾಲಯಗಳಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಕೊಕ್ಕಡದಲ್ಲಿರುವ ಗಣೇಶನ ದೇವಾಲಯವೂ ಒಂದು. ಇದೊಂದು ಪವಿತ್ರ ಧಾರ್ಮಿಕ ಸ್ಥಳದ ಜೊತೆಗೆ ಪ್ರವಾಸಿತಾಣವೂ ಆಗಿದೆ. ದೇವಸ್ಥಾ‌ನಕ್ಕೆ ತೆರಳುವ ರಸ್ತೆಯಲ್ಲಿ ಹೊಸ ಬ್ಯಾನರ್‌ ವೊಂದು ತಲೆಎತ್ತಿದ್ದು, ಹಿಂದೂಯೇತರರ ವಾಹನಗಳ ಬ್ಯಾನ್‌ ಎಂದು ಸಂದೇಶ

ಕರಾವಳಿಯಲ್ಲಿ ನಿಲ್ಲದ ʼಧರ್ಮದಂಗಲ್ʼ   ➤  ಹಿಂದೂಯೇತರರ ವಾಹನಗಳಿಗೆ ʻಸೌತಡ್ಕದಲ್ಲಿ ನಿಷೇಧ ಹೇರಿ ಬ್ಯಾನರ್ ಅಳವಡಿಕೆʼ Read More »

ಕರಾವಳಿ

AC ಸ್ಫೋಟಗೊಂಡು ತಾಯಿ, ಇಬ್ಬರು ಮಕ್ಕಳು ಮೃತ್ಯು

(ನ್ಯೂಸ್ ಕಡಬ)newskadaba.com ರಾಯಚೂರು, ಮಾ.07. ಶಾರ್ಟ್ ಸರ್ಕ್ಯೂಟ್ ನಿಂದ ಎಸಿ ಸ್ಫೋಟಗೊಂಡ ಹಿನ್ನೆಲೆ ತಾಯಿ ಮತ್ತು ಇಬ್ಬರು ಮಕ್ಕಳು ಮೃತಪಟ್ಟ ಘಟನೆ ರಾಯಚೂರು ತಾಲೂಕಿನ ಶಕ್ತಿ ನಗರದಲ್ಲಿ ನಡೆದಿದೆ. ತಾಯಿ ರಂಜಿತಾ(33), ಮಕ್ಕಳಾದ ಮೃದಲ್(13), ತಾರುಣ್ಯ(5) ಮೃತರಾಗಿದ್ದು, ಮೂಲತಃ ಮಂಡ್ಯ ನಿವಾಸಿಗಳು ಎಂದು ಗುರುತಿಸಲಾಗಿದೆ. ಸಿದ್ದಲಿಂಗಯ್ಯ ಸ್ವಾಮಿ ಪತ್ನಿ ಮತ್ತು ಮಕ್ಕಳನ್ನು ಕಳೆದುಕೊಂಡಿದ್ದಾರೆ. ಸ್ಥಳಕ್ಕೆ ಶಕ್ತಿನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.

AC ಸ್ಫೋಟಗೊಂಡು ತಾಯಿ, ಇಬ್ಬರು ಮಕ್ಕಳು ಮೃತ್ಯು Read More »

ಕರ್ನಾಟಕ, ಕ್ರೈಮ್ ನ್ಯೂಸ್

ವಿಮಾನದ ಟಾಯ್ಲೆಟ್‌ನಲ್ಲಿ 1.42 ಕೋಟಿ ರೂ. ಮೌಲ್ಯದ ಚಿನ್ನ ಪತ್ತೆ

(ನ್ಯೂಸ್ ಕಡಬ)newskadaba.com  ಕಣ್ಣೂರು, ಮಾ.07. ಇಲ್ಲಿನ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ವಿಮಾನದ ಟಾಯ್ಲೆಟ್‌ನಲ್ಲಿ ಭಾರೀ ಮೌಲ್ಯದ ಚಿನ್ನವನ್ನು ಡಿಆರ್‌ಐ ಅಧಿಕಾರಿಗಳು ಪತ್ತೆ ಮಾಡಿದ್ದಾರೆ. ಅಬುಧಾಬಿಯಿಂದ ಕೇರಳದ ಕಣ್ಣೂರು ವಿಮಾನ ನಿಲ್ದಾಣಕ್ಕೆ ಆಗಮಿಸಿದ ‘ಗೋ ಫಸ್ಟ್ ವಿಮಾನದ ಟಾಯ್ಲೆಟ್‌ನಲ್ಲಿ 2,536 ಗ್ರಾಂ ಚಿನ್ನ ಪತ್ತೆಯಾಗಿದೆ. ಸುಮಾರು 1.42 ಕೋಟಿ ರೂ. ಬೆಲೆಬಾಳುವ ಚಿನ್ನವನ್ನು ಕಪ್ಪು ಬಟ್ಟೆಯಿಂದ ಸುತ್ತಲಾಗಿತ್ತು. ರಹಸ್ಯ ಮಾಹಿತಿ ಆಧರಿಸಿ ಡಿಆರ್‌ಐ ಕೊಚ್ಚಿ ಘಟಕ ನಡೆಸಿದ ತಪಾಸಣೆಯಲ್ಲಿ ಚಿನ್ನ ಪತ್ತೆಯಾಗಿದೆ ಎಂದು ತಿಳಿದುಬಂದಿದೆ. ಚಿನ್ನ ಕಳ್ಳಸಾಗಣೆ

ವಿಮಾನದ ಟಾಯ್ಲೆಟ್‌ನಲ್ಲಿ 1.42 ಕೋಟಿ ರೂ. ಮೌಲ್ಯದ ಚಿನ್ನ ಪತ್ತೆ Read More »

ಕರ್ನಾಟಕ

ಸುರತ್ಕಲ್: ಬೈಕ್ ಅಪಘಾತ..! ➤ ಹಿಂಬದಿ ಸವಾರ ರಸ್ತೆಗೆ ಎಸೆಯಲ್ಪಟ್ಟು ಮೃತ್ಯು

(ನ್ಯೂಸ್ ಕಡಬ)newskadaba.com ಸುರತ್ಕಲ್, ಮಾ.07. ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯವ ಎನ್ಐಟಿಕೆ ಟೊಲ್ ಗೇಟ್ ಬಳಿ ಬೈಕ್ ಅಪಘಾತಕ್ಕೀಡಾಗಿ ಯುವಕನೋರ್ವ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ನಡೆದಿದೆ. ಮೃತ ಯುವಕನನ್ನು ಮಡಿಕೇರಿ ಸೋಮವಾರಪೇಟೆ ಬಿಟಿ ಕಟ್ಟೆಯ ನಿವಾಸಿ ಶಶಾಂಕ್(21) ಎಂದು ತಿಳಿದು ಬಂದಿದೆ. ಸುರತ್ಕಲ್ ಟೋಲ್ ಗೇಟ್ ಬಳಿ ಬೈಕ್ ಅಪಘಾತಕ್ಕೀಡಾಗಿದ್ದು, ಬೈಕ್ ನ ಹಿಂಬದಿ ಸವಾರರಾಗಿ ತೆರಳಿತ್ತಿದ್ದ ಇವರು ರಸ್ತೆಗೆ ಎಸೆಯಲ್ಪಟ್ಟು ಗಂಭೀರ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಸುರತ್ಕಲ್: ಬೈಕ್ ಅಪಘಾತ..! ➤ ಹಿಂಬದಿ ಸವಾರ ರಸ್ತೆಗೆ ಎಸೆಯಲ್ಪಟ್ಟು ಮೃತ್ಯು Read More »

ಕರಾವಳಿ, ಕ್ರೈಮ್ ನ್ಯೂಸ್

ಮುಂಬೈ, ಪುಣೆ, ನಗರಗಳಲ್ಲಿ ಗುಡುಗು ಸಹಿತ ಮಳೆ       ➤  ರಾಜ್ಯಕ್ಕೂ ತಟ್ಟುತ್ತ ಎಫೆಕ್ಟ್‌; ಹವಾಮಾನ ಮುನ್ಸೂಚನೆ

(ನ್ಯೂಸ್ ಕಡಬ)newskadaba.com ಮಹಾರಾಷ್ಟ್ರ, ಮಾ.07. ಮುಂಬೈ, ಪುಣೆ ಮತ್ತು ಅಹ್ಮದ್‌ನಗರ ಜಿಲ್ಲೆಗಳಿಗೆ ಮುಂದಿನ ಎರಡು ದಿನಗಳ ಕಾಲ ಗುಡುಗು ಸಹಿತ ಸಾಧಾರಣ ಮಳೆಯಾಗಲಿದೆ ಎಂದು ಹವಾಮಾನ ಮುನ್ಸೂಚನೆಯ ಎಚ್ಚರಿಕೆ ನೀಡಲಾಗಿದೆ. ಈ ಜಿಲ್ಲೆಗಳಲ್ಲಿ ಪ್ರತ್ಯೇಕ ಸ್ಥಳಗಳಲ್ಲಿ ಗುಡುಗು ಸಹಿತ ಮಿಂಚು ಮತ್ತು ಹಗುರವಾದ ಗಾಳಿಯೊಂದಿಗೆ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ಸಂದೇಶ ರವಾನಿಸಿದೆ. ಮಾರ್ಚ್ 7 ರಂದು ಬೆಳಿಗ್ಗೆ 9 ಗಂಟೆಗೆ, IMD ಮುಂಬೈ ಎಚ್ಚರಿಕೆಯನ್ನು ನೀಡಿದ್ದು, ‘ಗುಡುಗು ಸಹಿತ ಮಿಂಚು ಮತ್ತು

ಮುಂಬೈ, ಪುಣೆ, ನಗರಗಳಲ್ಲಿ ಗುಡುಗು ಸಹಿತ ಮಳೆ       ➤  ರಾಜ್ಯಕ್ಕೂ ತಟ್ಟುತ್ತ ಎಫೆಕ್ಟ್‌; ಹವಾಮಾನ ಮುನ್ಸೂಚನೆ Read More »

ರಾಷ್ಟ್ರೀಯ ನ್ಯೂಸ್

ಕೀಟ ಕಚ್ಚಿ 8ನೇ ತರಗತಿ ವಿದ್ಯಾರ್ಥಿನಿ ದಾರುಣ ಮೃತ್ಯು

(ನ್ಯೂಸ್ ಕಡಬ)newskadaba.com ಪತ್ತನಂತಿಟ್ಟ, ಮಾ.07. ವಿಷಪೂರಿತ ಕೀಟ ಕಚ್ಚಿ ಪುಟ್ಟ ಬಾಲಕಿ ಮೃತ ಪಟ್ಟಿರುವ ದಾರುಣ ಘಟನೆ ಕೇರಳದ ಪತ್ತನಂತಿಟ್ಟದ ತಿರುವಲ್ಲಾದಲ್ಲಿ ನಡೆದಿದೆ. ಪೆರಿಂಗಾರ ಕೊಚಾರಿಮುಕ್ಕಂನ ಪನಾರ ಮನೆ ನಿವಾಸಿ ಅನೀಶ್ ಮತ್ತು ಶಾಂತಿ ಕೃಷ್ಣನ್ ದಂಪತಿಯ ಪುತ್ರಿ ಅಂಜಿತಾ ಅನೀಶ್ ಮೃತಪಟ್ಟ ಬಾಲಕಿ. ಮಾ.5ರಂದು ಸಂಜೆ ಮನೆಯ ಸಮೀಪದ ಹೊಲದಲ್ಲಿ ಸ್ನೇಹಿತೆಯರೊಂದಿಗೆ ಆಟವಾಡುತ್ತಿದ್ದಾಗ ಕಿವಿಯ ಕೆಳಗೆ ಕೀಟವೊಂದು ಕಚ್ಚಿದೆ. ನೊಣದಂತಹ ಜೀವಿ ಕಚ್ಚಿರುವುದಾಗಿ ಬಾಲಕಿ ಮನೆಯಲ್ಲಿ ಹೇಳಿದ್ದಾಳೆ. ಕೀಟ ಕಚ್ಚಿದ 30 ನಿಮಿಷದಲ್ಲಿ ಬಾಲಕಿಯ ಇಡೀ

ಕೀಟ ಕಚ್ಚಿ 8ನೇ ತರಗತಿ ವಿದ್ಯಾರ್ಥಿನಿ ದಾರುಣ ಮೃತ್ಯು Read More »

ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್

➤ ಬಂಟ್ವಾಳ 81ರ ವೃದ್ಧನನ್ನು ಅಂಗನವಾಡಿಗೆ ಕಳುಹಿಸಿದ ಹೈಕೋರ್ಟ್

ನ್ಯೂಸ್ ಕಡಬ) newskadaba.com. ಬಂಟ್ವಾಳ ಮಾ 7.   ಬಂಟ್ವಾಳ ತಾಲೂಕಿನ ಕರೋಪಾಡಿ ಗ್ರಾಮದ ಈ 81 ವರ್ಷ ಪ್ರಾಯದ ವೃದ್ಧನ ಸನ್ನಡತೆ, ಪ್ರಾಮಾಣಿಕತೆ ಪರಿಗಣಿಸಿರುವ ಕೋರ್ಟ್ ಜೈಲು ಶಿಕ್ಷೆಯ ಬದಲು ಅಂಗನವಾಡಿಯಲ್ಲಿ ಸೇವೆ ಮಾಡಲು ಕಳುಹಿಸಿರುವ ಘಟನೆಯೊಂದು ವರದಿಯಾಗಿದೆ. ಇನ್ನು ಐತಪ್ಪ ನಾಯ್ಕ ಅವರದ್ದು ಕಡು ಬಡ ಕುಟುಂಬ. 2008ರಲ್ಲಿ ಜಾಗದ ವಿಚಾರದ ಹಿನ್ನೆಲೆಯಲ್ಲಿ ನೆರೆಮನೆಯ ವ್ಯಕ್ತಿಯೊಬ್ಬರಿಗೆ ಐತಪ್ಪ ನಾಯ್ಕ ಹಲ್ಲೆ ನಡೆಸಿದ್ದರು. ಈ ಬಗ್ಗೆ ಬಂಟ್ವಾಳದ ಕೋರ್ಟ್ ಆರೋಪಿ ಐತಪ್ಪ ನಾಯ್ಕರಿಗೆ ಮೂರು ದಿನಗಳ ಜೈಲು

➤ ಬಂಟ್ವಾಳ 81ರ ವೃದ್ಧನನ್ನು ಅಂಗನವಾಡಿಗೆ ಕಳುಹಿಸಿದ ಹೈಕೋರ್ಟ್ Read More »

ರಾಷ್ಟ್ರೀಯ ನ್ಯೂಸ್

ಬಕೆಟ್‌ಗೆ ಬಿದ್ದು ಮಗು ಮೃತ್ಯು !      

(ನ್ಯೂಸ್ ಕಡಬ)newskadaba.com ಹೊಸನಗರ, ಮಾ.06. ಆಟವಾಡುತ್ತಿದ್ದ ಒಂದು ವರ್ಷದ ಮಗು ಬಕೆಟ್‌ನಲ್ಲಿ ಬಿದ್ದು ಮೃತಪಟ್ಟ ದಾರುಣ ಘಟನೆ ತಾಲ್ಲೂಕಿನ ಸೊನಲೆಯಲ್ಲಿ ನಡೆದಿದೆ. ಸೊನಲೆ ಗ್ರಾಮದ ಹರೀಶ್ ಮತ್ತು ವೀಣಾ ದಂಪತಿಯ ಮಗು ಸಂಕೇತ್ ಬೆಳಿಗ್ಗೆ ದನಗಳಿಗೆ ಕೊಡುವ ಮುಸುರೆ ತುಂಬಿದ ಬಕೆಟ್‌ ಬಳಿ ಆಟವಾಡುತ್ತಿರುವಾಗ ತಲೆ ಕೆಳಗಾಗಿ ಬಕೆಟ್‌ನಲ್ಲಿ ಬಿದ್ದು ಮೃತಪಟ್ಟಿದೆ. ತೋಟದಲ್ಲಿ ಕೆಲಸ ಮಾಡುತ್ತಿದ್ದ ದಂಪತಿ ಮನೆಗೆ ಬಂದು ಮಗು ಹುಡುಕಿದ್ದಾರೆ. ಮುಸುರೆ ಬಕೆಟ್‌ನಲ್ಲಿ ಶವವಾಗಿ ಮಗು ಪತ್ತೆಯಾಗಿದೆ.    

ಬಕೆಟ್‌ಗೆ ಬಿದ್ದು ಮಗು ಮೃತ್ಯು !       Read More »

ಕರ್ನಾಟಕ

➤ ಲಾಲು ಪ್ರಸಾದ್ ಯಾದವ್ ಪುತ್ರಿ ಮನೆಗೆ ಸಿಬಿಐ ದಾಳಿ

(ನ್ಯೂಸ್ ಕಡಬ) newskadaba.com. ದೆಹಲಿ, ಮಾ 7.   ಉದ್ಯೋಗಕ್ಕಾಗಿ ಭೂಮಿ ಪ್ರಕರಣಕ್ಕೆ ಸಂಬಂಧಿಸಿದಂತೆ ಆರ್​ಜೆಡಿ ಪಕ್ಷದ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್  ಅವರನ್ನು ಪ್ರಶ್ನಿಸಲು ಅವರ ಪುತ್ರಿ ಮಿಸಾ ಭಾರತಿ ಅವರ ಮನೆಗೆ ಇಂದು ಸಿಬಿಐ ದಾಳಿ ನಡೆಸಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಲಾಲು ಅವರ ಪತ್ನಿ ಹಾಗೂ ಬಿಹಾರ ಮಾಜಿ ಮುಖ್ಯಮಂತ್ರಿ ರಾಬ್ರಿ ದೇವಿ ಮನೆಯ ಮೇಲೆ  ದಾಳಿ ನಡೆಸಿತ್ತು. ಈ ಬಗ್ಗೆ ಲಾಲು ಪ್ರಸಾದ್ ಯಾದವ್ ಅವರನ್ನು ಸಿಬಿಐ ಪ್ರಶ್ನಿಸುವ ಸಾಧ್ಯತೆಯಿದೆ ಎಂದು ವರದಿಗಳು ಹೇಳಿತ್ತು.

➤ ಲಾಲು ಪ್ರಸಾದ್ ಯಾದವ್ ಪುತ್ರಿ ಮನೆಗೆ ಸಿಬಿಐ ದಾಳಿ Read More »

ಕರ್ನಾಟಕ, ರಾಷ್ಟ್ರೀಯ ನ್ಯೂಸ್
Scroll to Top