News Kadaba

➤ಬೆಂಗಳೂರಲ್ಲಿ ಮಹಡಿಯಿಂದ ಜಿಗಿದು ಗಗನಸಖಿ ಆತ್ಮಹತ್ಯೆ

ನ್ಯೂಸ್ ಕಡಬ) newskadaba.com. ಬೆಂಗಳೂರು. ಮಾ 11. ಗಗನಸಖಿಯೊಬ್ಬರು ಅಪಾರ್ಟ್ ಮೆಂಟ್‍ನ 4ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೋರಮಂಗಲ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮಧ್ಯರಾತ್ರಿ ನಡೆದಿದೆ. ಮೂಲತಃ ಹಿಮಾಚಲ ಪ್ರದೇಶದ ಅರ್ಚನಾ(28) ಆತ್ಮಹತ್ಯೆ ಮಾಡಿಕೊಂಡಿರುವ ಗಗನಸಖಿ. ಕೋರಮಂಗಲದ 8ನೇ ಬ್ಲಾಕ್‍ನಲ್ಲಿರುವ ರೇಣುಕಾ ರೆಸಿಡೆನ್ಸಿ ಅಪಾರ್ಟ್‍ಮೆಂಟ್‍ನಲ್ಲಿ ವಾಸವಾಗಿದ್ದ ಗಗನಸಖಿ ಅರ್ಚನಾ ಅವರು ಸಾಫ್ಟ್ ವೇರ್ ಎಂಜಿನಿಯರ್ ಜೊತೆ ಲೀವಿಂಗ್ ಟುಗೆದರ್‍ ನಲ್ಲಿದ್ದರು. ಮಧ್ಯರಾತ್ರಿ 12 ಗಂಟೆ ಸುಮಾರಿನಲ್ಲಿ ಅರ್ಚನಾ ಅವರು ಅಪಾರ್ಟ್ ಮೆಂಟ್‍ನ 4ನೇ ಮಹಡಿಗೆ […]

➤ಬೆಂಗಳೂರಲ್ಲಿ ಮಹಡಿಯಿಂದ ಜಿಗಿದು ಗಗನಸಖಿ ಆತ್ಮಹತ್ಯೆ Read More »

ಕರ್ನಾಟಕ, ಕ್ರೈಮ್ ನ್ಯೂಸ್

➤ಯುಎಸ್ ಅಭಿವೃದ್ಧಿ ನೀತಿ ಸಮಿತಿಗೆ ಇಬ್ಬರು ಭಾರತೀಯರು ಆಯ್ಕೆ

(ನ್ಯೂಸ್ ಕಡಬ) newskadaba.com. ಅಮೇರಿಕ, ಮಾ 11. ವ್ಯಾಪಾರ ಮತ್ತು ನೀತಿ ಅಭಿವೃದ್ಧಿ ಸಮಿತಿಗೆ ಇಬ್ಬರು ಭಾರತೀಯ-ಅಮೆರಿಕನ್ನರನ್ನು ಅಧ್ಯಕ್ಷ ಜೋಬೈಡನ್ ಆಡಳಿತಕ್ಕೆ ನೇಮಕ ಮಾಡಿ ಆದೇಶ ಹೊರಡಿಸಿದೆ. ಫ್ಲೆಕ್ಸ್‌ನ ಮುಖ್ಯಕಾರ್ಯನಿರ್ವಹಣಾಧಿಕಾರಿ ರೇವತಿ ಅದ್ವೈತಿ ಮತ್ತು ನೈಸರ್ಗಿಕ ಸಂಪನ್ಮೂಲಗಳ ರಕ್ಷಣಾ ಮಂಡಳಿಯ ಮುಖ್ಯಕಾರ್ಯನಿರ್ವಹಣಾಧಿಕಾರಿ ಮನೀಶ್ ಬಾಪ್ನಾ ಅವರನ್ನು ವ್ಯಾಪಾರ ನೀತಿ ಮತ್ತು ಮಾತುಕತೆಯ ಸಲಹಾ ಸಮಿತಿಗೆ ನೇಮಿಸಲಾಗಿದೆ. ಅಮೇರಿಕಾದ ವ್ಯಾಪಾರ ನೀತಿಯ ಅಭಿವೃದ್ಧಿ, ಅನುಷ್ಠಾನ ಮತ್ತು ಆಡಳಿತದ ವಿಷಯಗಳ ಕುರಿತು ಅಮೇರಿಕಾದ ವ್ಯಾಪಾರ ಪ್ರತಿನಿಧಿ ಸಭೆಗೆ ಸಲಹೆ ನೀಡುವ

➤ಯುಎಸ್ ಅಭಿವೃದ್ಧಿ ನೀತಿ ಸಮಿತಿಗೆ ಇಬ್ಬರು ಭಾರತೀಯರು ಆಯ್ಕೆ Read More »

ಅಂತರ್ರಾಷ್ಟ್ರೀಯ ನ್ಯೂಸ್, ಕರಾವಳಿ, ರಾಷ್ಟ್ರೀಯ ನ್ಯೂಸ್

ಅಕ್ರಮ ಮದ್ಯ ಮಾರಾಟ ➤ಒಬ್ಬನ ಬಂಧನ

(ನ್ಯೂಸ್ ಕಡಬ) newskadaba.com. ವಿಜಯಪುರ, ಮಾ 11. ಅಕ್ರಮವಾಗಿ ಗೋವಾ ಮದ್ಯ ಮಾರಾಟ ಮಾಡುವಾಗ ಪೊಲೀಸರು ದಾಳಿ ಮಾಡಿ ಒಬ್ಬನನ್ನು ಬಂಧಿಸಿದ ಘಟನೆ ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಅಹಿರಸಂಗ ಗ್ರಾಮದಲ್ಲಿ ನಡೆದಿದೆ. ಬಸವರಾಜ ಆಕಳವಾಡಿ ಬಂಧಿತ ಆರೋಪಿ. ಆಕ್ರಮವಾಗಿ 18 ಲೀಟರ ಗೋವಾ ರಾಜ್ಯದ ಮದ್ಯ ಮಾರಾಟ ಮಾಡುತ್ತಿದ್ದ, ವೇಳೆ ಅಬಕಾರಿ ಪೊಲೀಸರು ದಾಳಿ ನಡೆಸಿ ಮದ್ಯ ಜಪ್ತಿ ಮಾಡಿದ್ದಾರೆ. ಈ ಕುರಿತು ಇಂಡಿ ಅಬಕಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  

ಅಕ್ರಮ ಮದ್ಯ ಮಾರಾಟ ➤ಒಬ್ಬನ ಬಂಧನ Read More »

ಕರ್ನಾಟಕ, ಕ್ರೈಮ್ ನ್ಯೂಸ್

ನಾಳೆ ಪ್ರಧಾನಿ ಮೋದಿ ಮಂಡ್ಯ, ಮದ್ದೂರು ಪ್ರವಾಸ ಹಿನ್ನೆಲೆ ➤ ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಬಂದ್!

(ನ್ಯೂಸ್ ಕಡಬ) newskadaba.com.ಮಂಡ್ಯ, ಮಾ 11. ಪ್ರಧಾನಿ ನರೇಂದ್ರ ಮೋದಿ ಅವರು ಮಂಡ್ಯ ಹಾಗೂ ಮದ್ದೂರು ಪ್ರವಾಸ ಹಿನ್ನಲೆ ಬೆಳಗ್ಗೆ 7 ಗಂಟೆಯಿಂದ ಬೆಂಗಳೂರು ರಾಷ್ಟ್ರೀಯಾ ಹೆದ್ದಾರಿ ಬಂದ್  ಆಗಲಿದ್ದು, ಸಾರ್ವಜನಿಕರ ಸುಗಮ ಪ್ರಯಾಣಕ್ಕಾಗಿ ಸಂಚಾರ ಮಾರ್ಗವನ್ನು ಬದಲಾಯಿಸಲಾಗಿದೆ. ಆದರೆ ಅಗತ್ಯ ಸೇವೆ ಮತ್ತು ಹಾಲಿನ ವಾಹನಗಳಿಗೆ 9 ಗಂಟೆಯವರೆಗೆ ಮಾತ್ರ ಸರ್ವಿಸ್ ರಸ್ತೆಯಲ್ಲಿ ಪ್ರವೇಶಕ್ಕೆ ಅವಕಾಶ ನೀಡಲಾಗಿದ್ದು, ಮದ್ದೂರಿನಲ್ಲಿ ನಡೆಯುವ ಬೃಹತ್ ಸಮಾವೇಶದಲ್ಲಿ ಭಾಗಿಯಾಗಲು ತೆರಳುವ ವಾಹನಗಳಿಗೆ ಬೆಳಗ್ಗೆ 9.30ರ ವರೆಗೆ ಅವಕಾಶ ನೀಡಲಾಗುತ್ತಿದೆ. ಮಳವಳ್ಳಿ

ನಾಳೆ ಪ್ರಧಾನಿ ಮೋದಿ ಮಂಡ್ಯ, ಮದ್ದೂರು ಪ್ರವಾಸ ಹಿನ್ನೆಲೆ ➤ ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಬಂದ್! Read More »

ಕರ್ನಾಟಕ

➤ ಚೀನಾದ ಅಧ್ಯಕ್ಷರಾಗಿ ಕ್ಸಿ-ಜಿನ್ ಪಿಂಗ್ ಆಯ್ಕೆ

(ನ್ಯೂಸ್ ಕಡಬ) newskadaba.com. ಚೀನಾ. ಮಾ 11. ಸಂಸತ್ತು ಸರ್ವಾನುಮತದಿಂದ ಕ್ಸಿ-ನ್ ಪಿಂಗ್ ಅವರನ್ನು ಅಧ್ಯಕ್ಷರನ್ನಾಗಿ  ಆಯ್ಕೆ ಮಾಡಿತು. 2, 952 ಮತಗಳನ್ನು ಪಡೆದ ಅವರು ಮೂರನೇ ಅವಧಿಗೆ ಚೀನಾ ಅಧ್ಯಕ್ಷರಾಗಿ ಆಯ್ಕೆಯಾದರು. ಅಲ್ಲದೆ ದೇಶದ ಕೇಂದ್ರ ಮಿಲಿಟರಿ ಆಯೋಗದ ಮುಖ್ಯಸ್ಥರಾಗಿಯೂ ಕ್ಸಿ-ಜಿನ್ ಪಿಂಗ್ ಪುನರಾಯ್ಕೆಗೊಂಡರು. ಇದೇ ವೇಳೆ ಮೂರನೇ ಅವಧಿಗೆ ಅಧ್ಯಕ್ಷರಾಗಿ ಪ್ರಮಾಣವಚನ ಸ್ವೀಕರಿಸಿದ ಕ್ಸಿ-ಜಿನ್ ಪಿಂಗ್, ದೇಶದ ಸಂವಿಧಾನಕ್ಕೆ ಬದ್ದನಾಗಿ ಪ್ರಾಮಾಣಿಕ ಕರ್ತವ್ಯ ನಿರ್ವಹಿಸುವುದಾಗಿ ಹೇಳಿದರು.

➤ ಚೀನಾದ ಅಧ್ಯಕ್ಷರಾಗಿ ಕ್ಸಿ-ಜಿನ್ ಪಿಂಗ್ ಆಯ್ಕೆ Read More »

ಅಂತರ್ರಾಷ್ಟ್ರೀಯ ನ್ಯೂಸ್

➤ ಮಂಟಪಕ್ಕೆ ಕುಡಿದು ಬಂದ ವರ-ಮದುವೆ ರದ್ದುಗೊಳಿಸಿದ ವಧು

(ನ್ಯೂಸ್ ಕಡಬ) newskadaba.com. ಅಸ್ಸಾಂ.ಮಾ 11.  ಅಸ್ಸಾಂನ ನಲ್ಬರಿ ಎಂಬಲ್ಲಿ ಮದುವೆ ಮಂಟಪದಲ್ಲಿ ಹಸೆಮಣೆ ಮೇಲೆ ಕುಳಿತಿದ್ದ   ವರನಿಗೆ ಅರ್ಚಕರು ಮದುವೆಯ ಶಾಸ್ತ್ರಗಳನ್ನು ಹೇಳಿಕೊಡುತ್ತಿದ್ದರೂ ಆತ ಕೇಳಿಸಿಕೊಳ್ಳುವ ಪರಿಸ್ಥಿತಿಯಲ್ಲಿ ಇರಲಿಲ್ಲ. ಕುಡಿದ ಅಮಲಿನಲ್ಲಿ ಮಂಟಪದಲ್ಲಿ ಕುಳಿತಲ್ಲೇ ತೂರಾಡುತ್ತಾ ಕೊನೆಗೆ ಪಕ್ಕದಲ್ಲಿ ಇದ್ದವರ ಮೇಲೆ ಮಲಗಿದ್ದಾನೆ. ವರನ ಅವಸ್ಥೆ ನೋಡಿದ ವಧು ಇಂತಹ ವರನನ್ನು ಮದುವೆಯಾಗಲಾರೆ ಎಂದು ಮದುವೆಯನ್ನೇ ರದ್ದು ಮಾಡಿದ್ದಾಳೆ. ಬಳಿಕ ವಧುವಿನ ಕುಟುಂಬ ಸಮೇತ ನಲ್ಬರಿ ಪೊಲೀಸ್ ಠಾಣೆಗೆ ತೆರಳಿ ಮದುವೆಗೆ ಖರ್ಚು ಮಾಡಿದ ಹಣವನ್ನು

➤ ಮಂಟಪಕ್ಕೆ ಕುಡಿದು ಬಂದ ವರ-ಮದುವೆ ರದ್ದುಗೊಳಿಸಿದ ವಧು Read More »

ರಾಷ್ಟ್ರೀಯ ನ್ಯೂಸ್

➤ ಆಟವಾಡುತ್ತಾ 2ನೇ ಮಹಡಿಯಿಂದ ಬಿದ್ದ ಮಗು ಗಂಭೀರ

(ನ್ಯೂಸ್ ಕಡಬ) newskadaba.com. ಬೆಂಗಳೂರು.ಮಾ 11.  ಬೆಂಗಳೂರಿನ ಕೆಂಗೇರಿ ಬಳಿಯ ಬಿಡಿಎ ಅಪಾರ್ಟ್​ಮೆಂಟ್​ ನ 2ನೇ ಮಹಡಿಯಿಂದ​ ಕೆಳಗೆ ಬಿದ್ದು ಮಗು ಗಂಭೀರ ಗಾಯಗೊಂಡಿರುವ ಘಟನೆ ನಡೆದಿದೆ.  ರಾಹುಲ್  ಎಂಬ ಪುಟ್ಟ ಮಗು ಅಪಾರ್ಟ್​ಮೆಂಟ್​​ನಿಂದ ಕೆಳಗೆ ಬಿದ್ದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಸದ್ಯ ರಾಜರಾಜೇಶ್ವರಿ ಆಸ್ಪತ್ರೆಗೆ ದಾಖಲಿಸಿ ಗಾಯಾಳು ಮಗುವಿಗೆ ಚಿಕಿತ್ಸೆ ನೀಡಲಾಗುತ್ತಿದೆ. ತಲೆಗೆ ಬಲವಾದ ಪೆಟ್ಟು ಬಿದ್ದ ಹಿನ್ನೆಲೆ ಮಗುವಿನ ಸ್ಥಿತಿ ಚಿಂತಾಜನಕವಾಗಿದೆ. ಬೆಳಗ್ಗೆ 11.30ರ ಸುಮಾರಿಗೆ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಕೆಂಗೇರಿ

➤ ಆಟವಾಡುತ್ತಾ 2ನೇ ಮಹಡಿಯಿಂದ ಬಿದ್ದ ಮಗು ಗಂಭೀರ Read More »

ಕರ್ನಾಟಕ, ಕ್ರೈಮ್ ನ್ಯೂಸ್

➤ ಇನ್ಫೋಸಿಸ್ ಅಧ್ಯಕ್ಷ ಸ್ಥಾನಕ್ಕೆ ಮೋಹಿತ್ ಜೋಶಿ ರಾಜೀನಾಮೆ

(ನ್ಯೂಸ್ ಕಡಬ) newskadaba.com. ನವದೆಹಲಿ. ಮಾ 11.  ಐಟಿ ದೈತ್ಯ ಇನ್ಫೋಸಿಸ್ ಅಧ್ಯಕ್ಷ ಮೋಹಿತ್ ಜೋಶಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಮೋಹಿತ್ ಜೋಶಿ ಹಣಕಾಸು ಸೇವೆಗಳು ಮತ್ತು ಹೆಲ್ತ್ಕೇರ್ / ಲೈಫ್ ಸೈನ್ಸಸ್ ವ್ಯವಹಾರಕ್ಕೆ ಜವಾಬ್ದಾರರಾಗಿದ್ದರು ಮತ್ತು ಎಡ್ಜ್ವರ್ವ್ ಸಿಸ್ಟಮ್  ಅಧ್ಯಕ್ಷರಾಗಿದ್ದರು. ಮುಂದಿನ ಪೀಳಿಗೆಯ ಡಿಜಿಟಲ್ ಸೇವೆಗಳು ಮತ್ತು ಸಲಹಾ ಕ್ಷೇತ್ರದಲ್ಲಿ ಜಾಗತಿಕ ಮುಂಚೂಣಿಯಲ್ಲಿರುವ ಇನ್ಫೋಸಿಸ್ ಇಂದು ಅಧ್ಯಕ್ಷ ಮೋಹಿತ್ ಜೋಶಿ ಅವರ ರಾಜೀನಾಮೆಯನ್ನು ಘೋಷಿಸಿದೆ. ಮಾರ್ಚ್ 11, 2023 ರಿಂದ ಅವರು ರಜೆಯಲ್ಲಿರುತ್ತಾರೆ ಮತ್ತು ಕಂಪನಿಯೊಂದಿಗಿನ

➤ ಇನ್ಫೋಸಿಸ್ ಅಧ್ಯಕ್ಷ ಸ್ಥಾನಕ್ಕೆ ಮೋಹಿತ್ ಜೋಶಿ ರಾಜೀನಾಮೆ Read More »

ರಾಷ್ಟ್ರೀಯ ನ್ಯೂಸ್

➤ ಹಾವಿನಿಂದ ಮಾಲೀಕನನ್ನು ರಕ್ಷಿಸಿದ ಶ್ವಾನ

(ನ್ಯೂಸ್ ಕಡಬ) newskadaba.com. ದಕ್ಷಿಣ ಆಫ್ರಿಕಾ, ಮಾ 11  ಮಂಚದ ಹಿಂದೆ ಇದ್ದ ವಿಷಕಾರಿ ಹಾವಿನಿಂದ ಮಾಲೀಕನನ್ನು ನಾಯಿ ಕಾಪಾಡಿದೆ. ಕುತೂಹಲದಿಂದ ರೊಟ್‌ವೀಲರ್ ನಾಯಿಯು ಮಂಚದ ಮೇಲೆ ಬೊಗಳುತ್ತಿತ್ತು ಮತ್ತು ಅದರ ಮಾಲೀಕರು ಮಂಚದ ಮೇಲೆ ಕುಳಿತುಕೊಳ್ಳಲು ಪ್ರಯತ್ನಿಸಿದಾಗಲೆಲ್ಲಾ ಕೆಲ ದಿನಗಳವರೆಗೆ ದೂರ ತಳ್ಳುತ್ತಿತ್ತು. ಇದನ್ನು ಗಮನಿಸಿದ ನಂತರ, ನಾಯಿಯ ಮಾಲೀಕರು ಅದು ಏನನ್ನು ಸೂಚಿಸುತ್ತಿದೆ ಎಂದು  ಮಂಚದ ಕೆಳಗೆ ಹುಡುಕಾಟ ನಡೆಸಿದರು. ಆಗ ಅಲ್ಲಿ ಅವರು ಅಪಾಯಕಾರಿ ಕಪ್ಪು ಮಾಂಬಾ ಹಾವು ಅಡಗಿರುವುದನ್ನು ಕಂಡುಹಿಡಿದರು. ದಕ್ಷಿಣ ಆಫ್ರಿಕಾದ

➤ ಹಾವಿನಿಂದ ಮಾಲೀಕನನ್ನು ರಕ್ಷಿಸಿದ ಶ್ವಾನ Read More »

ಅಂತರ್ರಾಷ್ಟ್ರೀಯ ನ್ಯೂಸ್

➤ ಉಜಿರೆ ಎಸ್.ಡಿ.ಎಂ.ಗೆ ಬೆಸ್ಟ್ ಜರ್ನಲಿಸಂ ಡಿಪಾರ್ಟ್ಮೆಂಟ್ ಅವಾರ್ಡ್

(ನ್ಯೂಸ್ ಕಡಬ) newskadaba.com. ಉಜಿರೆ. ಮಾ 11  ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ ಪತ್ರಿಕೋದ್ಯಮ ವಿಭಾಗವನ್ನು ಬೆಂಗಳೂರಿನ ದಿ ನ್ಯೂ ಇಂಡಿಯನ್ ಟೈಮ್ಸ್ ಸಂಸ್ಥೆಯು ಕರ್ನಾಟಕದ ಅತ್ಯುತ್ತಮ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ ಎಂದು ಗುರುತಿಸಿ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ರವೀಂದ್ರ ಕಲಾಕ್ಷೇತ್ರದಲ್ಲಿ ನಡೆದ ವರ್ಣರಂಜಿತ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಉಜಿರೆಯ ಕಾಲೇಜಿನ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಮುಖ್ಯಸ್ಥರಾದ ಡಾ.ಭಾಸ್ಕರ ಹೆಗಡೆ ಅವರಿಗೆ ಪ್ರಶಸ್ತಿಯನ್ನು ನೀಡಲಾಯಿತು. ವಿಭಾಗದ ವಿದ್ಯಾರ್ಥಿಗಳೂ ಈ ಸಂದರ್ಭದಲ್ಲಿ

➤ ಉಜಿರೆ ಎಸ್.ಡಿ.ಎಂ.ಗೆ ಬೆಸ್ಟ್ ಜರ್ನಲಿಸಂ ಡಿಪಾರ್ಟ್ಮೆಂಟ್ ಅವಾರ್ಡ್ Read More »

ಕರಾವಳಿ
Scroll to Top