News Kadaba

ಸ್ಕೂಬಾ ಡೈವಿಂಗ್ ವೇಳೆ ನುಂಗಲು‌ ಬಾಯ್ತೆರೆದ ಶಾರ್ಕ್ ➤ ಕೂದಲೆಳೆ ಅಂತರದಲ್ಲಿ ಪಾರಾದ ಮಹಿಳೆ        

(ನ್ಯೂಸ್ ಕಡಬ) newskadaba.com ಮಾ. 18. ಮಹಿಳೆಯೊಬ್ಬರು ಸ್ಕೂಬಾ ಡೈವಿಂಗ್ ವೇಳೆ ಶಾರ್ಕ್ ಬಾಯಿಯಿಂದ ಕೂದಲೆಳೆ ಅಂತರದಿಂದ ಪಾರಾದ ವೀಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ಸ್ಕೂಬಾ ಡೈವಿಂಗ್ ಮಾಡಲು ಸಮುದ್ರಕ್ಕೆ ಹಾರಲು ಪ್ರಯತ್ನಿಸುವ ವೇಳೆ ದಿಡೀರನೆ ಶಾರ್ಕ್ ಪ್ರತ್ಯಕ್ಷಗೊಂಡು ಬಾಯ್ತೆರೆದಿದೆ. ಈ ಅನಿರೀಕ್ಷಿತ ಘಟನೆಯಿಂದ ಗಾಬರಿಗೊಂಡ ಮಹಿಳೆ ಡೈವಿಂಗ್ ಮಾಡದೆ ಹಿಂದೆ ಸರಿದಿದ್ದು, ಕೂದಲೆಳೆ ಅಂತರದಿಂದ ಪಾರಾಗಿದ್ದಾರೆ. ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಅದು ಒಂದು ಕ್ಷಣ ಬೆಚ್ಚಿಬೀಳಿಸುವಂತಿದೆ.  

ಸ್ಕೂಬಾ ಡೈವಿಂಗ್ ವೇಳೆ ನುಂಗಲು‌ ಬಾಯ್ತೆರೆದ ಶಾರ್ಕ್ ➤ ಕೂದಲೆಳೆ ಅಂತರದಲ್ಲಿ ಪಾರಾದ ಮಹಿಳೆ         Read More »

ರಾಷ್ಟ್ರೀಯ ನ್ಯೂಸ್

ಜಿಲ್ಲಾಧ್ಯಕ್ಷರನ್ನು ಬಂಧಿಸಿ ಅವಮಾನ ➤ ಪೊಲೀಸ್ ಅಧಿಕಾರಿ ವಿರುದ್ಧ SDPI ಪ್ರತಿಭಟನೆ

(ನ್ಯೂಸ್ ಕಡಬ) newskadaba.com ಚಿಕ್ಕಮಗಳೂರು, ಮಾ. 18. ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಚಿಕ್ಕಮಗಳೂರು ಜಿಲ್ಲಾ ಅಧ್ಯಕ್ಷರನ್ನು ಬಂಧಿಸಿ ಅವಮಾನಿಸಿರುವ ಚಿಕ್ಕಮಗಳೂರು ನಗರ ಪೊಲೀಸ್ ವೃತ್ತ ನಿರೀಕ್ಷಕರಾದ ಶ್ರೀನಿವಾಸ್ ವಿರುದ್ಧ ಚಿಕ್ಕಮಗಳೂರಿನ ಆಝಾದ್ ಪಾರ್ಕ್ ವೃತ್ತದಲ್ಲಿ SDPI ಪ್ರತಿಭಟನೆ ನಡೆಸಿತು. ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ SDPI ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಝ್ಮತ್ ಪಾಷ, ಚಿಕ್ಕಮಗಳೂರು ನಗರ ಪೊಲೀಸ್ ವೃತ್ತ ನಿರೀಕ್ಷಕರಾದ ಶ್ರೀನಿವಾಸ್ ಮತ್ತು ತಂಡ ಮಂಗಳವಾರ ಮಧ್ಯರಾತ್ರಿ 12.45 ರ ಸಮಯದಲ್ಲಿ SDPI ಚಿಕ್ಕಮಗಳೂರು ಜಿಲ್ಲಾ

ಜಿಲ್ಲಾಧ್ಯಕ್ಷರನ್ನು ಬಂಧಿಸಿ ಅವಮಾನ ➤ ಪೊಲೀಸ್ ಅಧಿಕಾರಿ ವಿರುದ್ಧ SDPI ಪ್ರತಿಭಟನೆ Read More »

ಕರ್ನಾಟಕ

ಕಾಂಗ್ರೆಸ್, ಬಿಜೆಪಿ ಕಾರ್ಯಕರ್ತರ ನಡುವೆ ಮಾರಾಮಾರಿ ➤ 3 ಪ್ರತ್ಯೇಕ ಪ್ರಕರಣ ದಾಖಲು

(ನ್ಯೂಸ್ ಕಡಬ) newskadaba.com ಬೆಂಗಳೂರು, ಮಾ. 18. ಇಲ್ಲಿನ ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದಲ್ಲಿ ಬ್ಯಾನರ್ ಕಟ್ಟುವ ವಿಚಾರಕ್ಕೆ ಸಂಬಂಧಿಸಿ ಕಾಂಗ್ರೆಸ್ ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ಗಲಾಟೆ ನಡೆದಿದ್ದು, ಘಟನೆಗೆ ಸಂಬಂಧಿಸಿದಂತೆ ಗೋವಿಂದರಾಜನಗರ ಪೊಲೀಸ್ ಠಾಣೆಯಲ್ಲಿ ಮೂರು ಪ್ರತ್ಯೇಕ ಪ್ರಕರಣ ದಾಖಲಾಗಿದೆ. ಬ್ಯಾನರ್ ಕಟ್ಟುವ ವಿಚಾರವಾಗಿ ಕಾಂಗ್ರೆಸ್ ಹಾಗೂ ಬಿಜೆಪಿ ಕಾರ್ಯಕರ್ತರ ನಡುವೆ ಗಲಾಟೆಯಾಗಿತ್ತು. ಘಟನೆಯಲ್ಲಿ ಇಬ್ಬರು ಪೊಲೀಸ್ ಸಿಬ್ಬಂದಿ ಗಾಯಗೊಂಡಿದ್ದರು. ಗಾಯಗೊಂಡ ಹೆಡ್ ಕಾನ್ಸ್ಟೇಬಲ್ ಹೆಚ್ ಸಿ ವರದರಾಜು ನೀಡಿದ ದೂರಿನಂತೆ 36 ಮಂದಿ ಕಾಂಗ್ರೆಸ್

ಕಾಂಗ್ರೆಸ್, ಬಿಜೆಪಿ ಕಾರ್ಯಕರ್ತರ ನಡುವೆ ಮಾರಾಮಾರಿ ➤ 3 ಪ್ರತ್ಯೇಕ ಪ್ರಕರಣ ದಾಖಲು Read More »

ಕರ್ನಾಟಕ

ಕಡಬ: ಕೆರೆಯ ಬಳಿ ಗೃಹರಕ್ಷಕದಳದ ಕಛೇರಿ ನಿರ್ಮಾಣಕ್ಕೆ ಕಾದಿರಿಸಿದ ಜಾಗ ಅತಿಕ್ರಮಿಸಿ ಕಟ್ಟಡ ನಿರ್ಮಾಣ ಆರೋಪ      ➤ ತಹಸೀಲ್ದಾರ್ ಗೆ ದೂರು        

(ನ್ಯೂಸ್ ಕಡಬ)newskadaba.com  ಕಡಬ, ಮಾ.18. ಇಲ್ಲಿನ ಕೆರೆಯ ಸಮಿಪ ಕಡಬ ಗೃಹರಕ್ಷಕ ಕಛೇರಿ ನಿರ್ಮಿಸಲು 5 ಸೆಂಟ್ಸ್ ಜಾಗ ಮೀಸಲು ಇರಿಸಲಾಗಿದ್ದು, ಈ ಜಾಗವನ್ನು ಸ್ಥಳೀಯ ಖಾಸಗಿ ವ್ಯಕ್ತಿಯೋರ್ವರು ಅತಿಕ್ರಮಿಸಿ ಎರಡು ಅಂತಸ್ಥಿನ ಮನೆ ಕಟ್ಟಿದ್ದಾರೆ ಎಂಬ ಆರೋಪ ವ್ಯಕ್ತವಾಗಿದ್ದು, ಈ ಬಗ್ಗೆ ಕಡಬ ಗೃಹರಕ್ಷಕದಳದ ಘಟಕಾಧಿಕಾರಿ ಕಡಬ ತಹಸೀಲ್ದಾರ್ ಹಾಗೂ ಕಡಬ ಪೋಲಿಸ್ ಠಾಣೆಗೆ ದೂರು ನೀಡಿದ್ದಾರೆ.  ಕಡಬ ಘಟಕಾಧಿಕಾರಿ ತೀರ್ಥೇಶ್ ಅಮೈ ಅವರು ನೀಡಿದ ದೂರಿನಲ್ಲಿ ತಿಳಿಸಿರುವಂತೆ, 2004ನೇ ಇಸವಿಯಲ್ಲಿ ಆಗಿನ ಪುತ್ತೂರು ಸಹಾಯಕ

ಕಡಬ: ಕೆರೆಯ ಬಳಿ ಗೃಹರಕ್ಷಕದಳದ ಕಛೇರಿ ನಿರ್ಮಾಣಕ್ಕೆ ಕಾದಿರಿಸಿದ ಜಾಗ ಅತಿಕ್ರಮಿಸಿ ಕಟ್ಟಡ ನಿರ್ಮಾಣ ಆರೋಪ      ➤ ತಹಸೀಲ್ದಾರ್ ಗೆ ದೂರು         Read More »

ಕರಾವಳಿ

ಸ್ನೇಹಿತರೊಂದಿಗೆ ಈಜಲು ಹೋಗಿ ದಾರುಣ ಅಂತ್ಯ ಕಂಡ ಬಾಲಕ ➤ ಮುಗಿಲು ಮುಟ್ಟಿದ ಪೋಷಕರ ಆಕ್ರಂದನ

(ನ್ಯೂಸ್ ಕಡಬ) newskadaba.com.ಬೆಂಗಳೂರು. ಮಾ. 18. ಲಗ್ಗೆರಿ ನಿವಾಸಿಯಾದ ದರ್ಶನ್ ತನ್ನ ಸ್ನೇಹಿತರೊಂದಿಗೆ ಈಜಲು ಹೋಗಿ ದಾರುಣ ಅಂತ್ಯ ಕಂಡ ಘಟನೆ  ಬೆಂಗಳೂರು ಉತ್ತರ ತಾಲೂಕು ಲಕ್ಷ್ಮೀಪುರ ಕೆರೆಯಲ್ಲಿ ನಡೆದಿದೆ. ತಾಯಿಯ ತಂದೆಗೆ ಹುಷಾರಿಲ್ಲದ ಕಾರಣ ಮನೆಯವರೆಲ್ಲರು ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲೂಕಿನ ಹಿರೆಸಾವೆಗೆ ಹೋಗಿರುವ ವೇಳೆ ಮನೆಯಲ್ಲಿ ಉಳಿದಿದ್ದ ಮಗ ದರ್ಶನ್  ಸ್ನೇಹಿತರೊಂದಿಗೆ ಈಜಲು ತೆರಳಿದ್ದಾನೆ. ಈ ವೇಳೆ ದರ್ಶನ್​ ಈಜು ಬಾರದೆ ನೀರಿನಾಳಕ್ಕೆ ಮುಳುಗಿ ಸಾವನ್ನಪ್ಪಿದ್ದಾನೆ. ಕೆರೆಯೊಳಗೆ ಸುಮಾರು ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ

ಸ್ನೇಹಿತರೊಂದಿಗೆ ಈಜಲು ಹೋಗಿ ದಾರುಣ ಅಂತ್ಯ ಕಂಡ ಬಾಲಕ ➤ ಮುಗಿಲು ಮುಟ್ಟಿದ ಪೋಷಕರ ಆಕ್ರಂದನ Read More »

ಕರ್ನಾಟಕ, ಕ್ರೈಮ್ ನ್ಯೂಸ್

ಲಂಚ ಸ್ವೀಕರಿಸಿದ್ದ ಕಂದಾಯ ನಿರೀಕ್ಷಕನಿಗೆ 5 ವರ್ಷ ಜೈಲು ಶಿಕ್ಷೆ    ➤ ರೂ 4 ಲಕ್ಷ ದಂಡ ವಿಧಿಸಿದ ನ್ಯಾಯಾಲಯ          

(ನ್ಯೂಸ್ ಕಡಬ)newskadaba.com  ಲಂಚಕ್ಕೆ ಬೇಡಿಕೆ ಇಟ್ಟು ಸಿಕ್ಕಿಬಿದ್ದಿದ್ದ ಕಂದಾಯ ನಿರೀಕ್ಷಕನೊಬ್ಬನಿಗೆ ವಿಶೇಷ ನ್ಯಾಯಾಲಯ ಐದು ವರ್ಷ ಕಠಿಣ ಜೈಲು ಶಿಕ್ಷೆ ವಿಧಿಸಿದ್ದು, 4 ಲಕ್ಷ ರೂಪಾಯಿ ದಂಡ ಪಾವತಿಸುವಂತೆ ಆದೇಶಿಸಿದೆ. ಕೆಂಗೇರಿ ಹೋಬಳಿಯ ಕಂದಾಯ ನಿರೀಕ್ಷಕ ಸುರೇಶ್‌ ಜಿ.ಸಿ. (51) ದೋಷಿ ಎಂದು ತೀರ್ಮಾನಿಸಿರುವ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ ಪ್ರಕರಣಗಳ ವಿಶೇಷ ನ್ಯಾಯಾಲಯ, 5 ವರ್ಷಗಳ ಕಠಿಣ ಜೈಲು ಶಿಕ್ಷೆ ಮತ್ತು ರೂ.4 ಲಕ್ಷ ದಂಡ ವಿಧಿಸಿದೆ.

ಲಂಚ ಸ್ವೀಕರಿಸಿದ್ದ ಕಂದಾಯ ನಿರೀಕ್ಷಕನಿಗೆ 5 ವರ್ಷ ಜೈಲು ಶಿಕ್ಷೆ    ➤ ರೂ 4 ಲಕ್ಷ ದಂಡ ವಿಧಿಸಿದ ನ್ಯಾಯಾಲಯ           Read More »

ಕರ್ನಾಟಕ

ಕೈದಿಯನ್ನು ಶಾಪಿಂಗ್‌ ಮಾಲ್‌ ಗೆ ಕರೆದೊಯ್ದ 4 ಪೊಲೀಸರ ಅಮಾನತು

(ನ್ಯೂಸ್ ಕಡಬ) newskadaba.com ಲಕ್ನೋ, ಮಾ. 18. ಜೈಲಿನಲ್ಲಿದ್ದ ವಿಚಾರಣಾಧೀನ ಖೈದಿಯನ್ನು ಶಾಪಿಂಗ್ ಮಾಲ್‌ ಗೆ ಕರೆದೊಯ್ದ ಆರೋಪದ ಮೇಲೆ ನಾಲ್ಕು ಜನ ಪೊಲೀಸರನ್ನು ಅಮಾನತುಗೊಳಿಸಿದ ಘಟನೆ  ಉತ್ತರಪ್ರದೇಶದಲ್ಲಿ ನಡೆದಿದೆ. ಕರ್ತವ್ಯ ಲೋಪ ಎಸಗಿದ್ದಕ್ಕಾಗಿ ಎಸ್‌ಐ ರಾಮ್‌ ಸೇವಕ್ ಮತ್ತು ಕಾನ್‌ಸ್ಟೆಬಲ್‌ ಗಳಾದ ಅನುಜ್ ಧಾಮ, ನಿತಿನ್ ರಾಣಾ ಮತ್ತು ರಾಮಚಂದ್ರ ಪ್ರಜಾಪತಿ ಅವರನ್ನು ಅಮಾನತುಗೊಳಿಸಲಾಗಿದೆ ಎಂದು ಲಕ್ನೋ ಪೊಲೀಸ್ ಕಮಿಷನರೇಟ್ ತಿಳಿಸಿದೆ.

ಕೈದಿಯನ್ನು ಶಾಪಿಂಗ್‌ ಮಾಲ್‌ ಗೆ ಕರೆದೊಯ್ದ 4 ಪೊಲೀಸರ ಅಮಾನತು Read More »

ರಾಷ್ಟ್ರೀಯ ನ್ಯೂಸ್

ಚುನಾವಣೆ ಘೋಷಣೆಗೂ ಮುನ್ನವೇ ಮತದಾರರಿಗೆ ಆಮಿಷ ➤ ರಾಜ್ಯದ ವಿವಿಧೆಡೆ ಕುಕ್ಕರ್, ಸೀರೆ ಹಾಗೂ ಆಹಾರ ಕಿಟ್ ವಿತರಣೆ

(ನ್ಯೂಸ್ ಕಡಬ) newskadaba.com ಬೆಂಗಳೂರು, ಮಾ. 18. ರಾಜ್ಯ ವಿಧಾನಸಭಾ ಚುನಾವಣೆಗೆ ದಿನಗಣನೆ ಆರಂಭವಾಗಿದೆ. ಈ ತಿಂಗಳ ಅಂತ್ಯದ ವೇಳೆಗೆ ಕೇಂದ್ರ ಚುನಾವಣಾ ಆಯೋಗದಿಂದ ಮತದಾನದ ದಿನಾಂಕ ಘೋಷಣೆಯಾಗಬಹುದು ಎಂಬ ಮಾತುಗಳು ಕೇಳಿ ಬರುತ್ತಿರುವ ಬೆನ್ನಲ್ಲೇ, ಟಿಕೆಟ್ ಆಕಾಂಕ್ಷಿಗಳು ಈಗಾಗಲೇ ಮತದಾರರಿಗೆ ಆಮಿಷ ಒಡ್ಡುವ ಕಾರ್ಯ ಆರಂಭಿಸಿದ್ದಾರೆ. ಈ ಮೊದಲು ಸಂಕ್ರಾಂತಿ ಸಂದರ್ಭದಲ್ಲಿ ಮತದಾರರಿಗೆ ಕೆಲವೊಂದು ಗಿಫ್ಟ್ ನೀಡುತ್ತಿದ್ದ ಆಕಾಂಕ್ಷಿಗಳು, ಇದೀಗ ಯುಗಾದಿ- ರಂಜಾನ್ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಮತದಾರರಿಗೆ ಕೆಲವೊಂದು ಕ್ಷೇತ್ರಗಳಲ್ಲಿ ಸೀರೆ, ಕುಕ್ಕರ್ ಹಾಗೂ ಆಹಾರ

ಚುನಾವಣೆ ಘೋಷಣೆಗೂ ಮುನ್ನವೇ ಮತದಾರರಿಗೆ ಆಮಿಷ ➤ ರಾಜ್ಯದ ವಿವಿಧೆಡೆ ಕುಕ್ಕರ್, ಸೀರೆ ಹಾಗೂ ಆಹಾರ ಕಿಟ್ ವಿತರಣೆ Read More »

ಕರ್ನಾಟಕ

ಸುಳ್ಯ: ಇಂದು ನಾಲ್ಕೂರು ಗ್ರಾಮದಲ್ಲಿ ಜಿಲ್ಲಾಧಿಕಾರಿ ಗ್ರಾಮ ವಾಸ್ತವ್ಯ

(ನ್ಯೂಸ್ ಕಡಬ) newskadaba.com ಸುಳ್ಯ, ಮಾ. 18. ಸುಳ್ಯ ತಾಲೂಕಿನ ನಾಲ್ಕೂರು ಗ್ರಾಮದ ಹಾಲೆ ಮಜಲು ಶ್ರೀ ವೆಂಕಟೇಶ್ವರ ಸಭಾ ಭವನದಲ್ಲಿ ಜಿಲ್ಲಾಧಿಕಾರಿಯವರು ಗ್ರಾಮ ವಾಸ್ತವ್ಯ ನಡೆಸಲಿದ್ದಾರೆ. ಈ ಸಂದರ್ಭದಲ್ಲಿ ಅವರು ಸ್ಥಳೀಯ ಗ್ರಾಮಸ್ಥರಿಂದ ಅಹವಾಲು ಸ್ವೀಕರಿಸಿ, ಕೆಲವು ಸಮಸ್ಯೆಗಳನ್ನು ಸ್ಥಳದಲ್ಲಿಯೇ ಬಗೆಹರಿಸಲಿದ್ದಾರೆ. ಜಿಲ್ಲಾ ಮಟ್ಟದ ಎಲ್ಲಾ ಅಧಿಕಾರಿಗಳು ಕಡ್ಡಾಯವಾಗಿ ಹಾಜರಾಗುವಂತೆ ಅಪರ ಜಿಲ್ಲಾಧಿಕಾರಿಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸುಳ್ಯ: ಇಂದು ನಾಲ್ಕೂರು ಗ್ರಾಮದಲ್ಲಿ ಜಿಲ್ಲಾಧಿಕಾರಿ ಗ್ರಾಮ ವಾಸ್ತವ್ಯ Read More »

ಕರಾವಳಿ

ಮಂಗಳೂರು: ಅಕ್ರಮ ಚಿನ್ನ ಸಾಗಾಟಕ್ಕೆ ಮಗುವನ್ನು ಬಳಸಿಕೊಂಡ ತಂದೆ.!

(ನ್ಯೂಸ್ ಕಡಬ) newskadaba.com ಮಂಗಳೂರು, ಮಾ. 18. ಅಕ್ರಮ ಚಿನ್ನ ಸಾಗಾಟ ಮಾಡುತ್ತಿದ್ದ ಪ್ರಯಾಣಿಕನಿಂದ 90 ಲಕ್ಷ ರೂ.ಮೌಲ್ಯದ ಚಿನ್ನವನ್ನು ಮಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ವಶಕ್ಕೆ ಪಡೆದ ಘಟನೆ ವರದಿಯಾಗಿದೆ. ಮಾರ್ಚ್ 1 ರಿಂದ ಮಾರ್ಚ್ 15 ರ ಅವಧಿಯಲ್ಲಿ ಮೂವರು ಪ್ರಯಾಣಿಕರಿಂದ ಅಧಿಕಾರಿಗಳು 90 ಲಕ್ಷದ 67 ಸಾವಿರದ 750 ರೂ. ಮೌಲ್ಯದ 1,606 ಗ್ರಾಂ 24 ಕ್ಯಾರೆಟ್ ಶುದ್ಧತೆಯ ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ. ಚಿನ್ನವನ್ನು ವಿವಿಧ ವಿಧಾನಗಳಲ್ಲಿ ಪೇಸ್ಟ್ ರೂಪದಲ್ಲಿ ಮರೆಮಾಡಿ

ಮಂಗಳೂರು: ಅಕ್ರಮ ಚಿನ್ನ ಸಾಗಾಟಕ್ಕೆ ಮಗುವನ್ನು ಬಳಸಿಕೊಂಡ ತಂದೆ.! Read More »

ಕರಾವಳಿ
Scroll to Top