News Kadaba

ಅರಂತೋಡು:ನಾಳೆ ಅರಂತೋಡು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಅಮೃತ ಉದ್ಯಾನವನ ➤ಅಮೃತ ಮುಕ್ತಿಧಾಮ ಹಾಗೂ ಅಮೃತ ಸಭಾಂಗಣ ಉದ್ಘಾಟನಾ ಕಾರ್ಯಕ್ರಮ

(ನ್ಯೂಸ್ ಕಡಬ) News kadaba.com ಅರಂತೋಡು, ಮಾ.24 ಅರಂತೋಡು ಗ್ರಾಮ ಪಂಚಾಯತ್ ವತಿಯಿಂದ ನೂತನವಾಗಿ ನಿರ್ಮಿಸಿದ ಅಮೃತ ಸಭಾಂಗಣ ,ಅಮೃತ ಮುಕ್ತಿಧಾಮ ಹಾಗೂ ಅಮೃತ ಉದ್ಯಾನವನ ಉದ್ಘಾಟನಾ ಕಾರ್ಯಕ್ರಮ ಮಾ.25 ರಂದು (ನಾಳೆ) ನಡೆಯಲಿದೆ.ನೂತನ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆಯನ್ನು ಬಂದರು ಮೀನುಗಾರಿಕೆ ಮತ್ತು ಒಳನಾಡುಜಲ ಸಾರಿಗೆ ಸಚಿವ ಎಸ್.ಅಂಗಾರ ಉದ್ಘಾಟಿಸಲಿದ್ದಾರೆ.ಅಧ್ಯಕ್ಷತೆಯನ್ನು  ಅರಂತೋಡು ಗ್ರಾಮ ಪಂಚಾಯತ್ ಅಧ್ಯಕ್ಷೆ ಹರಿಣಿ ದೇರಾಜೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕರ್ನಾಟಕ ಮೀನುಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷ  ಎ.ವಿ.ತೀರ್ಥರಾಮ,ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಮುಖ್ಯ […]

ಅರಂತೋಡು:ನಾಳೆ ಅರಂತೋಡು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಅಮೃತ ಉದ್ಯಾನವನ ➤ಅಮೃತ ಮುಕ್ತಿಧಾಮ ಹಾಗೂ ಅಮೃತ ಸಭಾಂಗಣ ಉದ್ಘಾಟನಾ ಕಾರ್ಯಕ್ರಮ Read More »

ಕರಾವಳಿ, ಕರ್ನಾಟಕ

ಉಪ್ಪಿನಂಗಡಿ: ರಸ್ತೆ ಅಪಘಾತ  ➤ ಪ್ರಯಾಣಿಕರಿಗೆ ಗಾಯ

(ನ್ಯೂಸ್ ಕಡಬ) newskadaba.com ನೆಲ್ಯಾಡಿ, ಮಾ. 24. ಅಶೋಕ್ ಲೈಲ್ಯಾಂಡ್ ದೋಸ್ತ್ ಹಾಗೂ ರಿಕ್ಷಾ ನಡುವೆ ಢಿಕ್ಕಿ ಸಂಭವಿಸಿ ರಿಕ್ಷಾದಲ್ಲಿದ್ದ ಪ್ರಯಾಣಿಕರು ಗಾಯಗೊಂಡಿರುವ ಘಟನೆ ಮಂಗಳೂರು- ಬೆಂಗಳೂರು ರಾಷ್ಟ್ರೀಯ ಹೆದ್ದಾರಿ- 75ರ ಉಪ್ಪಿನಂಗಡಿ ಗ್ರಾಮದ ಮಠ ಎಂಬಲ್ಲಿ ನಡೆದಿದೆ. ಗಾಯಗೊಂಡವರನ್ನು ರಿಕ್ಷಾ ಚಾಲಕ ಮಹಮ್ಮದ್ ಅನ್ಸಾರ್, ಸುಮಯ್ಯ ಹಾಗೂ 1 ವರ್ಷದ ಮಗು ಎಂದು ಗುರುತಿಸಲಾಗಿದೆ. ಮಂಗಳೂರಿನಿಂದ ಬೆಂಗಳೂರಿಗೆ ಹೋಗುತ್ತಿದ್ದ ಅಶೋಕ್ ಲೇಲ್ಯಾಂಡ್ ಹಾಗೂ ರಿಕ್ಷಾ ನಡುವೆ ಢಿಕ್ಕಿ ಸಂಭವಿಸಿದೆ.  

ಉಪ್ಪಿನಂಗಡಿ: ರಸ್ತೆ ಅಪಘಾತ  ➤ ಪ್ರಯಾಣಿಕರಿಗೆ ಗಾಯ Read More »

ಕರಾವಳಿ, ಕ್ರೈಮ್ ನ್ಯೂಸ್

ಸುಳ್ಯದ ಯುವಕ ಚಿಕ್ಕಮಗಳೂರಿನಲ್ಲಿ ಆತ್ಮಹತ್ಯೆ

(ನ್ಯೂಸ್ ಕಡಬ) newskadaba.com ಸುಳ್ಯ, ಮಾ. 24. ಸುಳ್ಯ ತಾಲೂಕಿನ ಕಲ್ಮಕಾರು ಗ್ರಾಮದ ಯುವಕನೋರ್ವ ಚಿಕ್ಕಮಗಳೂರಿನಲ್ಲಿ ಆತ್ಮಹತ್ಯೆ ಮಾಡಿಕೊಂಡ ಘಟನೆ ವರದಿಯಾಗಿದೆ. ಆತ್ಮಹತ್ಯೆ ಮಾಡಿಕೊಂಡ ಯುವಕನನ್ನು ಕಲ್ಮಕಾರು ಗ್ರಾಮದ ಮೆಂಟೆಕಜೆ ತೇಜಕುಮಾರ್ ರವರ ಪುತ್ರ ಲೋಕೇಶ(22) ಎಂದು ಗುರುತಿಸಲಾಗಿದೆ. ಈತ ಚಿಕ್ಕಮಗಳೂರುನಲ್ಲಿ ಜಿಯೋ ಕಂಪೆನಿಯಲ್ಲಿ ಉದ್ಯೋಗಿಯಾಗಿದ್ದು, ತನ್ನ ರೂಮಿನಲ್ಲಿ ನೇಣುಬಿಗಿದು ಆತ್ಮಹತ್ಯೆಗೆ ಶರಣಾಗಿದ್ದಾನೆ.  

ಸುಳ್ಯದ ಯುವಕ ಚಿಕ್ಕಮಗಳೂರಿನಲ್ಲಿ ಆತ್ಮಹತ್ಯೆ Read More »

ಕರಾವಳಿ, ಕ್ರೈಮ್ ನ್ಯೂಸ್

ಧರ್ಮಸ್ಥಳ ಕ್ಷೇತ್ರ ಸಂದರ್ಶಿಸಲು ಬಂದಿದ್ದ ಯುವತಿ ನಾಪತ್ತೆ ➤ ದೂರು ದಾಖಲು

(ನ್ಯೂಸ್ ಕಡಬ) newskadaba.com ಬೆಳ್ತಂಗಡಿ, ಮಾ. 24. ಕುಟುಂಬಸ್ಥರ ಜೊತೆ ಉತ್ತರ ಕನ್ನಡದಿಂದ ಧರ್ಮಸ್ಥಳ ಶ್ರೀ ಕ್ಷೇತ್ರಕ್ಕೆ ದೇವರ ಸಂದರ್ಶನಕ್ಕೆ ಬಂದಿದ್ದ ಯುವತಿಯೋರ್ವಳು ನಾಪತ್ತೆಯಾದ ಕುರಿತು ವರದಿಯಾಗಿದೆ. ನಾಪತ್ತೆಯಾದ ಯುವತಿಯನ್ನು ರೇಶ್ಮಾ ಎಂದು ಗುರುತಿಸಲಾಗಿದೆ. ಶ್ರೀ ಕ್ಷೇತ್ರ ಧರ್ಮಸ್ಥಳ ದೇವರ ದರ್ಶನ ಪಡೆದ ಬಳಿಕ ಎಲ್ಲರೂ ರೂಂ ಹೋಗಿದ್ದು, ಬಳಿಕ ಯುವತಿ ರೇಶ್ಮಾ ನಾಪತ್ತೆಯಾಗಿರುವುದಾಗಿ ತಿಳಿದುಬಂದಿದೆ.  

ಧರ್ಮಸ್ಥಳ ಕ್ಷೇತ್ರ ಸಂದರ್ಶಿಸಲು ಬಂದಿದ್ದ ಯುವತಿ ನಾಪತ್ತೆ ➤ ದೂರು ದಾಖಲು Read More »

ಕರಾವಳಿ, ಕ್ರೈಮ್ ನ್ಯೂಸ್

ದ.ಕ. ಜಿಲ್ಲೆಯಲ್ಲಿ 8 ಮತಗಟ್ಟೆಗಳ ಬದಲಾವಣೆಗೆ ಚುನಾವಣಾ ಆಯೋಗ ತೀರ್ಮಾನ

(ನ್ಯೂಸ್ ಕಡಬ) newskadaba.com ಮಂಗಳೂರು, ಮಾ. 24. ದಕ್ಷಿಣ ಕನ್ನಡ ಜಿಲ್ಲೆಯ 202 ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ 6 ಮತಗಟ್ಟೆಗಳು ಹಾಗೂ 205 ಬಂಟ್ವಾಳ ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ 2 ಮತಗಟ್ಟೆಗಳ ಬದಲಾವಣೆ ಮಾಡಲಾಗಿದ್ದು, ಕೇಂದ್ರ ಚುನಾವಣಾ ಆಯೋಗವು  ಅನುಮೋದನೆ ನೀಡಿದೆ. 202 ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಕದ್ರಿಯಲ್ಲಿದ್ದ ಕಿರಿಯ ತಾಂತ್ರಿಕ ಶಾಲೆಯಲ್ಲಿದ್ದ ಮತಗಟ್ಟೆ ಸಂಖ್ಯೆ 131, ಕಟ್ಟಡ ಶಿಥಿಲಗೊಂಡ ಕಾರಣ ಹಾಗೂ ಮೂಲಭೂತ ಸೌಕರ್ಯಗಳ ಕೊರತೆ ಇರುವ ಕಾರಣ ಅದನ್ನು ಕದ್ರಿಯಲ್ಲಿರುವ

ದ.ಕ. ಜಿಲ್ಲೆಯಲ್ಲಿ 8 ಮತಗಟ್ಟೆಗಳ ಬದಲಾವಣೆಗೆ ಚುನಾವಣಾ ಆಯೋಗ ತೀರ್ಮಾನ Read More »

ಕರಾವಳಿ

ಸಾರಿಗೆ ನೌಕರರ ಮುಷ್ಕರಕ್ಕೆ ಕೋರ್ಟ್ ತಡೆ ➤ 3 ವಾರ ಮುಷ್ಕರ ಮಾಡದಂತೆ ಆದೇಶ

(ನ್ಯೂಸ್ ಕಡಬ) newskadaba.com ಬೆಂಗಳೂರು, ಮಾ. 23. ಸರ್ಕಾರಿ ನೌಕರರ ಸಮಾನ ವೇತನಕ್ಕಾಗಿ ಆಗ್ರಹಿಸಿ ಸಾರಿಗೆ ನೌಕರರು ಮಾ. 24 ರಿಂದ ಮುಷ್ಕರಕ್ಕೆ ಕರೆ ನೀಡಿದ ಬೆನ್ನಲ್ಲೇ ಮುಷ್ಕರಕ್ಕೆ ಹೈಕೋರ್ಟ್ ಬ್ರೇಕ್ ಹಾಕಿದ್ದು, 3 ವಾರಗಳ ಕಾಲ ಮುಷ್ಕರ ನಡೆಸದಂತೆ ಆದೇಶ ಹೊರಡಿಸಿದೆ. ಸಾರಿಗೆ ನೌಕರರ ಮುಷ್ಕರದ ಹಿನ್ನೆಲೆ ಸಾರಿಗೆ ಸಂಚಾರ ವ್ಯತ್ಯಯವಾಗುವ ಸಾಧ್ಯತೆ ಇದೆ ಎನ್ನಲಾಗಿತ್ತು, ಇದೀಗ ಹೈಕೋರ್ಟ್ ಮುಷ್ಕರಕ್ಕೆ ಬ್ರೇಕ್ ಹಾಕಿದೆ. ಸಾರಿಗೆ ನೌಕರರ ಮುಷ್ಕರ ಪ್ರಶ್ನಿಸಿ ಹೈಕೋರ್ಟ್ ಗೆ ಪಿಐಎಲ್ ಸಲ್ಲಿಸಲಾಗಿತ್ತು. ಇದರ

ಸಾರಿಗೆ ನೌಕರರ ಮುಷ್ಕರಕ್ಕೆ ಕೋರ್ಟ್ ತಡೆ ➤ 3 ವಾರ ಮುಷ್ಕರ ಮಾಡದಂತೆ ಆದೇಶ Read More »

ಕರ್ನಾಟಕ

27 ವರ್ಷದ ವಿವಾಹಿತೆ ನಾಪತ್ತೆ

(ನ್ಯೂಸ್ ಕಡಬ)newskadaba.com  ಶಿರ್ವ, ಮಾ.23. ಬೆಳಪು ಬದ್ರಿಯಾ ಮಸೀದಿ ಬಳಿ, ಬಾಡಿಗೆ ಮನೆ ನಿವಾಸಿ ಕರಿಶ್ಮಾ ಬಾನು (27) ಕಾಣೆಯಾಗಿದ್ದಾರೆ ಎಂದು ತಿಳಿದುಬಂದಿದೆ. ತನ್ನ ಇಬ್ಬರು ಮಕ್ಕಳ ಜತೆ ಅಲ್ಲಿಯೇ ಹತ್ತಿರ ಇರುವ ಅತ್ತೆ ಮನೆಗೆ ಹೋಗಿದ್ದು, ಅಲ್ಲಿಂದ ಮಕ್ಕಳನ್ನು ಅತ್ತೆ ಮನೆಯಲ್ಲಿಯೇ ಬಿಟ್ಟು ಒಬ್ಬಳೇ ಮನೆಗೆ ಹೋಗಿ ಬರುತ್ತೇನೆಂದು ಹೇಳಿ ಹೋದವರು ವಾಪಾಸು ಮನೆಗೆ ಬಾರದೆ ಕಾಣೆಯಾಗಿದ್ದಾರೆ. ಮನೆಯಲ್ಲಿದ್ದ ಆಕೆಯ ಬಟ್ಟೆಬರೆ, ಚಿನ್ನಾಭರಣ, ನಗದು, ಆಕೆಯ ದಾಖಲಾತಿ ನಾಪತ್ತೆಯಾಗಿದ್ದು, ಬ್ಯಾಗ್‌ ಸಹ ಇಲ್ಲವಾಗಿದೆ.  

27 ವರ್ಷದ ವಿವಾಹಿತೆ ನಾಪತ್ತೆ Read More »

ಕರ್ನಾಟಕ

➤ಮಂಗಳೂರು ಹಲವು ಪ್ರಖರಣಗಳಲ್ಲಿ ಬೇಕಾಗಿದ್ದ ಮೋಸ್ಟ್ ವಾಟೆಂಡ್ ಬಂಧನ

(ನ್ಯೂಸ್ ಕಡಬ) newskadaba.com. ಮುಂಬೈ,  ಮಾ. 23. ಹಲವು ಪ್ರಕರಣಗಳಲ್ಲಿ ಭಾಗಿಯಾಗಿದ್ದ ಮೋಸ್ಟ್ ವಾಟೆಂಡ್ ಆರೋಪಿ ಅಜರುದ್ದೀನ್ ನನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಬಂಧಿತ ಆರೋಪಿ ಅಜರುದ್ದೀನ್ ಅಲಿಯಾಸ್ ಅಜರ್ (29) ಎಂದು ಗುರುತಿಸಲಾಗಿದೆ.ಈತನ ಮೇಲೆ ಮಂಗಳೂರು ನಗರ, ದಕ್ಷಿಣಕನ್ನಡ ಜಿಲ್ಲೆ ಹಾಗೂ ಉಡುಪಿ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ಒಟ್ಟು 23 ಪ್ರಕರಣಗಳಲ್ಲಿ ಜಾಮೀನು ರಹಿತ  ವಾರಂಟ್ ಇದೆ.ಮಂಗಳೂರು ಪೊಲೀಸ್ ಆಯುಕ್ತರ ಆದೇಶದ ಮೇರೆಗೆ ಮಂಗಳೂರು ಉತ್ತರ ಉಪವಿಭಾಗದ ಸಹಾಯಕ ಆಯುಕ್ತರಾದ ಮನೋಜ್ ಕುಮಾರ್ ರವರ

➤ಮಂಗಳೂರು ಹಲವು ಪ್ರಖರಣಗಳಲ್ಲಿ ಬೇಕಾಗಿದ್ದ ಮೋಸ್ಟ್ ವಾಟೆಂಡ್ ಬಂಧನ Read More »

ಕರಾವಳಿ, ಕ್ರೈಮ್ ನ್ಯೂಸ್

ಸೀರೆ ಹಂಚಲು ಬಂದಿದ್ದ ಶಾಸಕರ ಬೆಂಬಲಿಗರನ್ನು ತರಾಟೆಗೆ ತೆಗೆದುಕೊಂಡ ಜನರು

(ನ್ಯೂಸ್ ಕಡಬ)newskadaba.com  ವಿಜಯಪುರ, ಮಾ.23. ಮತದಾರರನ್ನು ಸೆಳೆಯಲು ಸೀರೆ ಹಂಚಲು ಬಂದಿದ್ದ ಶಾಸಕರ ಬೆಂಬಲಿಗರನ್ನು ತರಾಟೆಗೆ ತೆಗೆದುಕೊಂಡ ಜನರು, ಸೀರೆಯನ್ನು ಸ್ವೀಕರಿಸಿದೆ ಶಾಸಕರ ಬೆಂಬಲಿಗರನ್ನು ವಾಪಸ್ ಕಳಿಸಿದ ಪ್ರಸಂಗ ನಡೆದಿದೆ. ವಿಜಯಪುರ ಜಿಲ್ಲೆಯಲ್ಲಿ ಈ ಪ್ರಕರಣ ನಡೆದಿದೆ. ಶಾಸಕ ಎ.ಎಸ್.ಪಾಟೀಲ್ ನಡಹಳ್ಳಿ ಅವರ ಬೆಂಬಲಿಗರು ಮುದ್ದೇಬಿಹಾಳದ ಮೆಹಬೂಬ್​ ನಗರದಲ್ಲಿ ಸೀರೆ ಹಂಚಲು ಹೋಗಿದ್ದು, ನೀವು ನಮ್ಮ ಕೆಲಸ ಮಾಡಿಕೊಟ್ಟಿಲ್ಲ ಎಂದು ಆರೋಪಿಸಿರುವ ಸ್ಥಳೀಯ ಮನೆಯೊಂದರ ಮಂದಿ, ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ.  

ಸೀರೆ ಹಂಚಲು ಬಂದಿದ್ದ ಶಾಸಕರ ಬೆಂಬಲಿಗರನ್ನು ತರಾಟೆಗೆ ತೆಗೆದುಕೊಂಡ ಜನರು Read More »

ಕರ್ನಾಟಕ

ರಾಜ್ಯದ ಹಲವು ಹೆದ್ದಾರಿ ಅಭಿವೃದ್ಧಿ       ➤ ನಿತಿನ್‌ ಗಡ್ಕರಿ

(ನ್ಯೂಸ್ ಕಡಬ)newskadaba.com  ಬೆಂಗಳೂರು, ಮಾ.23. ಹೊನ್ನಾವರ-ಚಿತ್ತೂರು ರಾಷ್ಟ್ರೀಯ ಹೆದ್ದಾರಿ ಸೇರಿದಂತೆ ಕರ್ನಾಟಕದ ಹಲವು ಹೆದ್ದಾರಿಗಳನ್ನು ಉನ್ನತೀಕರಣಗೊಳಿಸಲಾಗುವುದು ಎಂದು ಕೇಂದ್ರ ಸಾರಿಗೆ ಸಚಿವ ನಿತಿನ್‌ ಗಡ್ಕರಿ ಹೇಳಿದ್ದಾರೆ. ಈ ಕುರಿತು ಟ್ವೀಟ್‌ ಮಾಡಿರುವ ಅವರು, 2022-23ನೇ ಸಾಲಿನಲ್ಲಿ ಅಭಿವೃದ್ಧಿಗೆ ಆಯ್ದುಕೊಂಡ ರಾಜ್ಯದ ಹೆದ್ದಾರಿ ವಿವರಗಳನ್ನು ನೀಡಿದ್ದಾರೆ.  

ರಾಜ್ಯದ ಹಲವು ಹೆದ್ದಾರಿ ಅಭಿವೃದ್ಧಿ       ➤ ನಿತಿನ್‌ ಗಡ್ಕರಿ Read More »

ಕರ್ನಾಟಕ
Scroll to Top