News Kadaba

ಕಡಬ: ಹೃದಯಾಘಾತಕ್ಕೆ ಕಡಬದ ಯೋಧ ಬಲಿ ➤ ಇಂದು ಹುಟ್ಟೂರಿಗೆ ಪಾರ್ಥಿವ ಶರೀರ ರವಾನೆ

(ನ್ಯೂಸ್ ಕಡಬ)newskadaba.com  ಕಡಬ, ಮಾ.28. ಕಡಬ ಮೂಲದ ಯೋಧರೊಬ್ಬರು ಮದ್ರಾಸ್ ರಿಜಿಮೆಂಟ್ ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾಗಲೇ ಹೃದಯಾಘಾತಕ್ಕೆ ಬಲಿಯಾದ ಘಟನೆ ವರದಿಯಾಗಿದೆ. ಕಡಬ ತಾಲೂಕಿನ  ಕುಟ್ರುಪ್ಪಾಡಿ ಗ್ರಾಮದ ತರಪ್ಪೇಳ್‌ ನಿವಾಸಿ ಜೋನಿ ಎಂಬವರ ಮಗ  ಲಿಜೇಶ್ ಕುರಿಯನ್ ಮೃತ ಯೋಧರಾಗಿದ್ದಾರೆ. ಮಾ.26 ರಂದು ಕೊಯಂಬತ್ತೂರು ಮದ್ರಾಸ್ ರಿಜಿಮೆಂಟ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾಗ ಹೃದಯಾಘಾತ ಕ್ಕೆ ಒಳಗಾಗಿ ಚಿಕಿತ್ಸೆ ಫಲಿಸದೆ  ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದು ಬಂದಿದೆ.  ಇವರ ಪಾರ್ಥಿವ ಶರೀರ ಇಂದು ಬೆಳಗ್ಗೆ ಕಡಬ ತಲುಪಲಿದೆ. 11:30ಕ್ಕೆ ಕುಟ್ರುಪ್ಪಾಡಿ ಸಂತ ಮೇರಿಸ್ […]

ಕಡಬ: ಹೃದಯಾಘಾತಕ್ಕೆ ಕಡಬದ ಯೋಧ ಬಲಿ ➤ ಇಂದು ಹುಟ್ಟೂರಿಗೆ ಪಾರ್ಥಿವ ಶರೀರ ರವಾನೆ Read More »

ಕರಾವಳಿ

ಸೇನಾ ಪಡೆಗಳಲ್ಲಿ 1.5 ಲಕ್ಷಕ್ಕೂ ಅಧಿಕ ಹುದ್ದೆ ಖಾಲಿ..!   ➤ ರಾಜ್ಯಸಭೆಗೆ ಕೇಂದ್ರ ಮಾಹಿತಿ

(ನ್ಯೂಸ್ ಕಡಬ)Newskadaba.com ನವದೆಹಲಿ: ಮಾ,28. ದೇಶದ ಮೂರೂ ಮಾದರಿಯ ಸೇನಾಪಡೆಗಳಲ್ಲಿ 1.5 ಲಕ್ಷಕ್ಕೂಅಧಿಕ ಹುದ್ದೆಗಳು ಖಾಲಿ ಇವೆ ಎಂದು ಕೇಂದ್ರ ಸರ್ಕಾರ ರಾಜ್ಯಸಭೆಗೆ ತಿಳಿಸಿದೆ. ಸಶಸ್ತ್ರ ಪಡೆಗಳ ಸಿಬ್ಬಂದಿ ಕೊರತೆ ತಗ್ಗಿಸುವ ಕ್ರಮಗಳನ್ನು ಸಶಸ್ತ್ರ ಪಡೆಗಳು ನಿಯಮಿತವಾಗಿ ಪರಿಶೀಲಿಸುತ್ತವೆ. ಖಾಲಿ ಇರುವ ಹುದ್ದೆಗಳ ಭರ್ತಿ ಮತ್ತು ಸೇನೆ ಸೇರಲು ಯುವಕರನ್ನು ಉತ್ತೇಜಿಸುವತ್ತ ಕ್ರಮ ಕೈಗೊಳ್ಳಲಾಗಿದೆ ಎಂದು ರಕ್ಷಣಾ ಇಲಾಖೆಯ ರಾಜ್ಯ ಸಚಿವ ಅಜಯ್ ಭಟ್ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.ಮೆಡಿಕಲ್ ಹಾಗೂ ಡೆಂಟಲ್ ವಿಭಾಗ ಸೇರಿ ಭೂಸೇನೆಯಲ್ಲಿ 8,129

ಸೇನಾ ಪಡೆಗಳಲ್ಲಿ 1.5 ಲಕ್ಷಕ್ಕೂ ಅಧಿಕ ಹುದ್ದೆ ಖಾಲಿ..!   ➤ ರಾಜ್ಯಸಭೆಗೆ ಕೇಂದ್ರ ಮಾಹಿತಿ Read More »

ರಾಷ್ಟ್ರೀಯ ನ್ಯೂಸ್

ಕೊರೊನಾ ಹವಾಳಿ ಮಧ್ಯೆ ಕೇಂದ್ರದಿಂದ ಖಡಕ್ ಸೂಚನೆ..!   ➤’RT-PCR’, ಬೂಸ್ಟರ್ ಡೋಸ್ ಪ್ರಮಾಣ ಹೆಚ್ಚಳಕ್ಕೆ ಸಲಹೆ                        

(ನ್ಯೂಸ್ ಕಡಬ)Newskadaba.com ನವದೆಹಲಿ: ಮಾ,28.ಭಾರತವು ಸತತ ಎರಡನೇ ದಿನ 1,800ಕ್ಕೂ ಹೆಚ್ಚು ಹೊಸ ಕೋವಿಡ್ ಪ್ರಕರಣಗಳನ್ನು ದಾಖಲಿಸುತ್ತಿದ್ದಂತೆ, ಸಕ್ರಿಯ ಪ್ರಕರಣಗಳ ಸಂಖ್ಯೆ 10,000 ಕ್ಕಿಂತ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಆರ್ಟಿ-ಪಿಸಿಆರ್ ಪರೀಕ್ಷೆಗಳ ಪ್ರಮಾಣವನ್ನ ಹೆಚ್ಚಿಸಲು ಮತ್ತು ಬೂಸ್ಟರ್ ಡೋಸ್ ವ್ಯಾಪ್ತಿಯನ್ನ ಹೆಚ್ಚಿಸಲು ಕೇಂದ್ರವು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸೂಚಿಸಿದೆ. ಆಮ್ಲಜನಕ ಸಿಲಿಂಡರ್ಗಳು, ಪಿಎಸ್‌ಎ ಸ್ಥಾವರಗಳು, ವೆಂಟಿಲೇಟರ್ಗಳು, ಲಾಜಿಸ್ಟಿಕ್ಸ್ ಮತ್ತು ಮಾನವ ಸಂಪನ್ಮೂಲಗಳು ಸೇರಿದಂತೆ ಆಸ್ಪತ್ರೆ ಮೂಲಸೌಕರ್ಯಗಳ ಕಾರ್ಯಾಚರಣೆಯ ಸಿದ್ಧತೆಯನ್ನ ಖಚಿತಪಡಿಸಿಕೊಳ್ಳಲು ಏಪ್ರಿಲ್ 10

ಕೊರೊನಾ ಹವಾಳಿ ಮಧ್ಯೆ ಕೇಂದ್ರದಿಂದ ಖಡಕ್ ಸೂಚನೆ..!   ➤’RT-PCR’, ಬೂಸ್ಟರ್ ಡೋಸ್ ಪ್ರಮಾಣ ಹೆಚ್ಚಳಕ್ಕೆ ಸಲಹೆ                         Read More »

ರಾಷ್ಟ್ರೀಯ ನ್ಯೂಸ್

ಅಶಿಸ್ತು ವರ್ತನೆ ➤ಇಬ್ಬರು ಕಾನ್‌ಸ್ಟೆಬಲ್‌ ಅಮಾನತು

(ನ್ಯೂಸ್ ಕಡಬ) newskadaba.com. ಬೆಂಗಳೂರು, ಮಾ. 28. ಅಶಿಸ್ತು ತೋರಿದ ಆರೋಪದ ಅಡಿ ಸುಬ್ರಹ್ಮಣ್ಯ ನಗರ ಠಾಣೆಯ ಇಬ್ಬರು ಪೊಲೀಸ್‌ ಕಾನ್‌ ಸ್ಟೆಬಲ್‌ಗಳನ್ನು ಅಮಾನತು ಮಾಡಲಾಗಿದೆ.  ಕಾನ್‌ಸ್ಟೆಬಲ್‌ ವಿಜಯ್‌ ರಾಥೋಡ್‌, ಠಾಣಾ ಬರಹಗಾರ ಶಿವಕುಮಾರ್‌ ಅಮಾನತುಗೊಂಡ ಸಿಬ್ಬಂದಿ. ‘ಠಾಣೆಯ ಇನ್‌ಸ್ಪೆಕ್ಟರ್‌ ಶರಣಗೌಡ ಅವರು ರಜೆ ನೀಡುತ್ತಿಲ್ಲ. ತಮಗೆ ಹಣ ಮಾಡಿಕೊಡುವಂತೆ ಕೆಳಗಿನ ಸಿಬ್ಬಂದಿ, ಅಧಿಕಾರಿಗಳಿಗೆ ಕಿರುಕುಳ ನೀಡುತ್ತಿದ್ದಾರೆ’ ಎಂದು ಆರೋಪಿಸಿ ಶಿವಕುಮಾರ್‌ ಅವರು ರಾಷ್ಟ್ರಪತಿ, ಪ್ರಧಾನ ಮಂತ್ರಿ, ಮುಖ್ಯಮಂತ್ರಿ ಸೇರಿದಂತೆ ಹಲವರಿಗೆ ಪತ್ರ ಬರೆದಿದ್ದರು ಎಂಬ ಆರೋಪದ

ಅಶಿಸ್ತು ವರ್ತನೆ ➤ಇಬ್ಬರು ಕಾನ್‌ಸ್ಟೆಬಲ್‌ ಅಮಾನತು Read More »

ಕರ್ನಾಟಕ

ಕಾರ್ಕಳ: ಅನಾರೋಗ್ಯದಿಂದ ಪುತ್ರ ಮೃತ್ಯು ➤ ನೊಂದು ತಾಯಿ ಆತ್ಮಹತ್ಯೆ

(ನ್ಯೂಸ್ ಕಡಬ)newskadaba.com  ಕಾರ್ಕಳ, ಮಾ.28. ಮಗನನ್ನು ಕಳೆದುಕೊಂಡ ನೋವಿನಲ್ಲಿ ತಾಯಿಯೊಬ್ಬರು ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಕಾರ್ಕಳ ತಾಲೂಕಿನ ಕೆರ್ವಾಶೆ ಗ್ರಾಮದ ಬಂಗ್ಲೆಗುಡ್ಡೆಯಲ್ಲಿ ನಡೆದಿದೆ. ರತ್ನಾವತಿ ನಾಯಕ್ (85) ಆತ್ಮಹತ್ಯೆ ಮಾಡಿಕೊಂಡವರು ಎಂದು ಗುರುತಿಸಲಾಗಿದೆ. ಇದೇ ನೋವಿನಿಂದ ರತ್ನಾವತಿ ನಾಯಕ್ ಅವರು ಮನೆಯ ಸಮೀಪದ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹಿರಿಮಗ ಚಂದ್ರಶೇಖರ್ ನಾಯಕ್ ನೀಡಿದ ದೂರಿನಂತೆ ಅಜೆಕಾರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ    

ಕಾರ್ಕಳ: ಅನಾರೋಗ್ಯದಿಂದ ಪುತ್ರ ಮೃತ್ಯು ➤ ನೊಂದು ತಾಯಿ ಆತ್ಮಹತ್ಯೆ Read More »

ಕರಾವಳಿ

ಮಂಗಳೂರು: ‘ರಂಗ್‌‌ದ ಬರ್ಸಾ’ ಕಾರ್ಯಕ್ರಮಕ್ಕೆ ಅಡ್ಡಿ ಪ್ರಕರಣ ➤ ಆರು ಮಂದಿ ಆರೋಪಿಗಳಿಗೆ ಜಾಮೀನು

(ನ್ಯೂಸ್ ಕಡಬ)newskadaba.com  ಮಂಗಳೂರು, ಮಾ.28. ಮರೋಳಿಯಲ್ಲಿ ಹೋಳಿ ಪ್ರಯುಕ್ತ ಆಯೋಜಿಸಲಾಗಿದ್ದ ರಂಗ್‌‌ದ ಬರ್ಸಾ ಕಾರ್ಯಕ್ರಮಕ್ಕೆ ದಾಳಿ ನಡೆಸಿ ಬ್ಯಾನರ್ ಹರಿದು ಹಾಕಿ ವಸ್ತುಗಳನ್ನು ಪುಡಿಗೈದಿದ್ದ ಬಜರಂಗ ದಳ ಕಾರ್ಯಕರ್ತರಿಗೆ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ. ಯುವಕ-ಯುವತಿಯರು ಅಶ್ಲೀಲವಾಗಿ ನಡೆದುಕೊಳ್ಳುತ್ತಾರೆ, ಅನ್ಯಕೋಮಿನ ಯುವಕರು ಕೂಡ ಪಾಲ್ಗೊಳ್ಳುತ್ತಾರೆ ಎಂದು ಆರೋಪಿಸಿ ಬಜರಂಗದಳದ ಆರು ಮಂದಿ ಕಾರ್ಯಕರ್ತರು ಸ್ಥಳಕ್ಕೆ ತೆರಳಿ ಆಯೋಜಕರನ್ನು ತರಾಟೆಗೆ ತೆಗೆದುಕೊಂಡಿದ್ದರು. ಕಾರ್ಯಕ್ರಮಕ್ಕೆ ಹಾಕಲಾಗಿದ್ದ ಬ್ಯಾನರ್‌ ಹರಿದು ಹಾಕಿದ್ದರು. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದಾರೆ.  

ಮಂಗಳೂರು: ‘ರಂಗ್‌‌ದ ಬರ್ಸಾ’ ಕಾರ್ಯಕ್ರಮಕ್ಕೆ ಅಡ್ಡಿ ಪ್ರಕರಣ ➤ ಆರು ಮಂದಿ ಆರೋಪಿಗಳಿಗೆ ಜಾಮೀನು Read More »

ಕರಾವಳಿ

ಸೇತುವೆಗೆ ಡಿಕ್ಕಿ ಹೊಡೆದು ಬಸ್‌ಗೆ ಬೆಂಕಿ..!   ➤20 ಹಜ್ ಯಾತ್ರಿಕರು ಸಜೀವ ದಹನ

            (ನ್ಯೂಸ್ ಕಡಬ)Newskadaba.com ಸೌದಿ ಅರೇಬಿಯಾ: ಮಾ,28.ನೈಋತ್ಯ ಸೌದಿ ಅರೇಬಿಯಾದಲ್ಲಿ ಮಾರಣಾಂತಿಕ ಬಸ್ ಅಪಘಾತ ಸಂಭವಿಸಿದೆ. ಹಜ್ ಯಾತ್ರಿಕರನ್ನು ಹೊತ್ತೊಯ್ಯುತ್ತಿದ್ದ ಬಸ್ ನಿಯಂತ್ರಣ ತಪ್ಪಿ ಸೇತುವೆಗೆ ಡಿಕ್ಕಿ ಹೊಡೆದಿದೆ. ಈ ಘಟನೆಯಿಂದಾಗಿ ಬಸ್‌ಗೆ ಬೆಂಕಿ ಹೊತ್ತಿಕೊಂಡು 20 ಪ್ರಯಾಣಿಕರು ಸ್ಥಳದಲ್ಲೇ ಸಜೀವ ದಹನವಾಗಿದ್ದು, ಇನ್ನುಳಿದ 29 ಮಂದಿಗಾಯಗೊಂಡಿದ್ದಾರೆ. ಅಸಿರ್ ಪ್ರಾಂತ್ಯ ಮತ್ತು ಅಭಾ ನಗರವನ್ನು ಸಂಪರ್ಕಿಸುವ ರಸ್ತೆಯಲ್ಲಿ ಈ ದುರಂತ ಘಟನೆ ನಡೆದಿದೆ. ಬ್ರೇಕ್ ವೈಫಲ್ಯದಿಂದ ಅಪಘಾತ ಸಂಭವಿಸಿದೆ ಎಂದು ತೋರುತ್ತದೆ.

ಸೇತುವೆಗೆ ಡಿಕ್ಕಿ ಹೊಡೆದು ಬಸ್‌ಗೆ ಬೆಂಕಿ..!   ➤20 ಹಜ್ ಯಾತ್ರಿಕರು ಸಜೀವ ದಹನ Read More »

ರಾಷ್ಟ್ರೀಯ ನ್ಯೂಸ್

ವಿದ್ಯಾರ್ಥಿನಿಯರೊಂದಿಗೆ ಅನುಚಿತ ವರ್ತನೆ ➤ತುಮಕೂರಲ್ಲಿ ಕಾಮುಕ ಶಿಕ್ಷಕನ ಬಂಧನ

(ನ್ಯೂಸ್ ಕಡಬ) newskadaba.com. ತುಮಕೂರು, ಮಾ. 28. ಜಿಲ್ಲೆಯ ಶಾಲೆಯೊಂದರ ಶಿಕ್ಷಕನೊಬ್ಬ  ವಿದ್ಯಾರ್ಥಿನಿಯರ ಅಂಗಾಂಗ ಮುಟ್ಟಿ ಲೈಂಗಿಕ ಕಿರುಕುಳ ನೀಡಿರುವ ಆರೋಪ ಕೇಳಿಬಂದಿದ್ದು, ಶಿಕ್ಷಕನ ವಿರುದ್ಧ ರೊಚ್ಚಿಗೆದ್ದ ಪೋಷಕರು‌ ಹಾಗೂ ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದಾರೆ. ಆರೋಪ ಕೇಳಿಬರುತ್ತಿದ್ದಂತೆ ಕಾಮುಕ ಶಿಕ್ಷಕ ಮಂಜುನಾಥ್ ಹಾಗೂ ಮುಖ್ಯ ಶಿಕ್ಷಕ ನಟರಾಜ್​ರನ್ನು ಕರ್ತವ್ಯದಿಂದ ಅಮಾನತು ಮಾಡಲಾಗಿದೆ. ತುಮಕೂರು ಜಿಲ್ಲೆಯ ಮಧುಗಿರಿ ತಾಲ್ಲೂಕಿನ ಬೋರನಗುಂಟೆ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಈ ಘಟನೆ ನಡೆದಿದೆ. 4 ಮತ್ತು 5ನೇ ತರಗತಿ ವಿದ್ಯಾರ್ಥಿನಿಯರ ಅಂಗಾಂಗ

ವಿದ್ಯಾರ್ಥಿನಿಯರೊಂದಿಗೆ ಅನುಚಿತ ವರ್ತನೆ ➤ತುಮಕೂರಲ್ಲಿ ಕಾಮುಕ ಶಿಕ್ಷಕನ ಬಂಧನ Read More »

ಕರ್ನಾಟಕ, ಕ್ರೈಮ್ ನ್ಯೂಸ್

ಮಾ.31 ರಿಂದ `SSLC’ ಪರೀಕ್ಷೆ…!   ➤ ವಿದ್ಯಾರ್ಥಿಗಳಿಗೆ  ನಿಯಮ ಪಾಲನೆ ಕಡ್ಡಾಯ                          

(ನ್ಯೂಸ್ ಕಡಬ)Newskadaba.com ಬೆಂಗಳೂರು: ಮಾ,28. 2022-23ನೇ ಸಾಲಿನ ಎಸ್ ಎಸ್ ಎಲ್ ಸಿ ಅಂತಿಮ ಪರೀಕ್ಷೆಗಳು ( SSLC Exam 2023 ) ದಿನಾಂಕ 31-03-2023 ರಿಂದ 15-04-2023ರವರೆಗೆ ನಡೆಯಲಿದ್ದು, ಈ ಬಾರಿ ವಿದ್ಯಾರ್ಥಿಗಳಿಗೆ ಅನುಕೂಲ ಆಗಲು ಬಹು ಆಯ್ಕೆ ಪ್ರಶ್ನೆಗಳನ್ನುನೀಡಲಾಗುತ್ತಿದೆ.ಬಿ.ಇ.ಓ ನೇತೃತ್ವದ ಸಮಿತಿಯ ಸಮ್ಮುಖದಲ್ಲಿಯೇ ಪ್ರಶ್ನೆ ಪತ್ರಿಕೆಗಳನ್ನು ಆಯಾ ತಾಲೂಕು ಖಜಾನೆಗಳಿಂದ ಪರೀಕ್ಷೆ ಕೇಂದ್ರಗಳಿಗೆ ರವಾನಿಸಬೇಕು. ಇತರೆ ಕಾರಣಗಳಿಗೆ ಖಜಾನೆಯ ಸ್ಟ್ರಾಂಗ್ ರೂಮ್ ತೆರೆಯುವ ಪ್ರಸಂಗ ಬಂದರೆ, ಬಿ.ಇ.ಓ ನೇತೃತ್ವದ 3 ಜನರ ಸಮಿತಿ ಮಾಹಿತಿ

ಮಾ.31 ರಿಂದ `SSLC’ ಪರೀಕ್ಷೆ…!   ➤ ವಿದ್ಯಾರ್ಥಿಗಳಿಗೆ  ನಿಯಮ ಪಾಲನೆ ಕಡ್ಡಾಯ                           Read More »

ಕರ್ನಾಟಕ

‘ನನ್ನ ಕೆಲಸ ನಿಮಗೆ ಇಷ್ಟವಾಗಿದ್ರೆ ಮತ ಹಾಕಿ, ಇಲ್ಲದಿದ್ದರೆ ಹಾಕಬೇಡಿ’ ➤ ನಿತಿನ್ ಗಡ್ಕರಿ

(ನ್ಯೂಸ್ ಕಡಬ)newskadaba.com ಬೆಂಗಳೂರು, ಮಾ.28. “ನಿಮಗೆ ನನ್ನ ಕೆಲಸ ಇಷ್ಟವಾಗಿದ್ರೆ ನನಗೆ ಮತ ಹಾಕಿ, ಇಲ್ಲದಿದ್ರೆ ಹಾಕಬೇಡಿ, ನಾನು ಬೆಣ್ಣೆ ಹಚ್ಚುವುದಿಲ್ಲ” ಎಂದು ಕೇಂದ್ರ ರಾಷ್ಟ್ರೀಯ ಹೆದ್ದಾರಿ ಮತ್ತು ಸಾರಿಗೆ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ. ಈ ಕುರಿತು ಮಾತನಾಡಿದ ಅವರು, “ದೇಶದಲ್ಲಿ ಜೈವಿಕ ಇಂಧನ, ಜಲಾನಯನ ಸಂರಕ್ಷಣೆ ಸೇರಿದಂತೆ ಹಲವು ಪ್ರಯೋಗಗಳನ್ನು ಮಾಡುತ್ತಿದ್ದೇನೆ. ಬಂಜರು ಭೂಮಿ, ಹವಾಮಾನ ಬದಲಾವಣೆ ಮತ್ತು ಜಲ ಸಂರಕ್ಷಣೆ ಕ್ಷೇತ್ರದಲ್ಲಿ ಹಲವು ಪ್ರಯೋಗಗಳ ಸಾಧ್ಯತೆಗಳಿವೆ. ನಮ್ಮ ಕಡೆಯಿಂದಲೂ ಈ ನಿಟ್ಟಿನಲ್ಲಿ ಕೆಲಸ

‘ನನ್ನ ಕೆಲಸ ನಿಮಗೆ ಇಷ್ಟವಾಗಿದ್ರೆ ಮತ ಹಾಕಿ, ಇಲ್ಲದಿದ್ದರೆ ಹಾಕಬೇಡಿ’ ➤ ನಿತಿನ್ ಗಡ್ಕರಿ Read More »

ಕರ್ನಾಟಕ
Scroll to Top