News Kadaba

ಉಡುಪಿ: 55 ಕೇಂದ್ರಗಳಲ್ಲಿ ಎಸೆಸೆಲ್ಸಿ ಪರೀಕ್ಷೆ ➤ 200 ಮೀಟರ್ ಸುತ್ತಮುತ್ತ ನಿಷೇಧಾಜ್ಞೆ

(ನ್ಯೂಸ್ ಕಡಬ)newskadaba.com  ಉಡುಪಿ, ಮಾ.31. ರಾಜ್ಯಾದ್ಯಂತ ಇಂದಿನಿಂದ ಎಸೆಸೆಲ್ಸಿ ಪರೀಕ್ಷೆ ಆರಂಭಗೊಂಡಿದ್ದು, ಉಡುಪಿ ಜಿಲ್ಲೆಯಲ್ಲಿ 13, 753 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ನೋಂದಾಯಿಸಿಕೊಂಡಿದ್ದಾರೆ. ಜಿಲ್ಲೆಯ 55 ಕೇಂದ್ರಗಳಲ್ಲಿ ಪರೀಕ್ಷೆ ನಡೆಯುತ್ತಿದ್ದು, ಬೈಂದೂರಿನಲ್ಲಿ 8, ಕುಂದಾಪುರದಲ್ಲಿ 9, ಕಾರ್ಕಳದಲ್ಲಿ 10, ಬ್ರಹ್ಮಾವರದಲ್ಲಿ 12 ಹಾಗೂ ಉಡುಪಿಯಲ್ಲಿ 16 ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ. ಇನ್ನು ಪರೀಕ್ಷೆ ಇಂದಿನಿಂದ ಎಪ್ರಿಲ್ 15ರವರೆಗೆ ನಡೆಯಲಿದ್ದು, ಪರೀಕ್ಷಾ ಕೇಂದ್ರದ 200 ಮೀಟರ್ ಸುತ್ತಮುತ್ತ ನಿಷೇಧಾಜ್ಞೆ ಮಾಡಲಾಗಿದೆ.    

ಉಡುಪಿ: 55 ಕೇಂದ್ರಗಳಲ್ಲಿ ಎಸೆಸೆಲ್ಸಿ ಪರೀಕ್ಷೆ ➤ 200 ಮೀಟರ್ ಸುತ್ತಮುತ್ತ ನಿಷೇಧಾಜ್ಞೆ Read More »

ಕರಾವಳಿ

ತಾಯಿ ಶವವನ್ನು 13 ವರ್ಷ ಮನೆಯಲ್ಲಿಟ್ಟುಕೊಂಡಿದ್ದ ಮಗ…!!

(ನ್ಯೂಸ್ ಕಡಬ)Newskadaba.com ಮಾ.31 ಮಕ್ಕಳು ತಮ್ಮ ತಾಯಂದಿರೊಂದಿಗೆ ವಿಶೇಷ ಸಂಬಂಧವನ್ನು ಹೊಂದಿರುತ್ತಾರೆ. ಆದರೆ ದುಃಖಿತ ಮಗನು ತನ್ನ ತಾಯಿಯ ಶವವನ್ನು ಆಕೆಯ ಸಮಾಧಿಯಿಂದ ಅಗೆದು 13 ವರ್ಷಗಳ ಕಾಲ ತನ್ನ ಸೋಫಾದಲ್ಲಿ ಇಟ್ಟುಕೊಂಡಿರುವ ಭಯಾನಕ ಘಟನೆ ನಡೆದಿದೆ. ಆ ವ್ಯಕ್ತಿ ಈಗ ಜೈಲು ಶಿಕ್ಷೆಯನ್ನು ಎದುರಿಸುತ್ತಿದ್ದಾನೆ. ಪೋಲೆಂಡ್‌ನ ರಾಡ್ಲಿನ್‌ನ ನಿವಾಸಿ ಮರಿಯನ್ ಎಲ್ ಅವರ ಮನೆಯೊಳಗೆ ಮಹಿಳೆಯ ರಕ್ಷಿತ ಅವಶೇಷಗಳನ್ನು ಪೊಲೀಸರು ಕಂಡುಕೊಂಡಿದ್ದಾರೆ. ಮರಿಯನ್​ ಮನೆಬಿಟ್ಟು ಎಲ್ಲಿಯೂ ಬರಲಾಗದ ಕಾರಣ ಸಂದೇಹಗೊಂಡ ಸೋದರ ಮಾವ ಮನೆ ಪರಿಶೀಲಿಸಿದಾಗ

ತಾಯಿ ಶವವನ್ನು 13 ವರ್ಷ ಮನೆಯಲ್ಲಿಟ್ಟುಕೊಂಡಿದ್ದ ಮಗ…!! Read More »

ಅಂತರ್ರಾಷ್ಟ್ರೀಯ ನ್ಯೂಸ್

ಕಾಸರಗೋಡು: ಬೈಕ್ ಮತ್ತು ಟ್ಯಾಂಕರ್ ಲಾರಿ ನಡುವೆ ಅಪಘಾತ ➤ ಇಬ್ಬರು ಸವಾರರು ಮೃತ್ಯು

(ನ್ಯೂಸ್ ಕಡಬ)newskadaba.com  ಕಾಸರಗೋಡು, ಮಾ.31. ಬೈಕ್ ಮತ್ತು ಟ್ಯಾಂಕರ್ ಲಾರಿ ನಡುವೆ ಉಂಟಾದ ಅಪಘಾತದಲ್ಲಿ ಇಬ್ಬರು ಮೃತಪಟ್ಟ ದಾರುಣ ಘಟನೆ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ ಎಂದು ವರದಿ ತಿಳಿಸಿದೆ. ನೀಲೇಶ್ವರ ಚಾಯೋತ್ ನ ದೀಪಕ್ (33) ಮತ್ತು ಕನ್ನಾಟಿಪಾರೆಯ ಶೋಭಿತ್ (27) ಮೃತ ಪಟ್ಟವರು ಎಂದು ಗುರುತಿಸಲಾಗಿದೆ. ದೀಪಕ್ ಖಾಸಗಿ ಬಸ್ಸಿನ ಚಾಲಕರಾಗಿದ್ದರು. ಶೋಭಿತ್ ಹಣಕಾಸು ಸಂಸ್ಥೆಯಲ್ಲಿ ಉದ್ಯೋಗದಲ್ಲಿದ್ದರು. ಸ್ನೇಹಿತರಾಗಿದ್ದ ಇವರು ರಾತ್ರಿ ಮನೆಗೆ ತೆರಳುತ್ತಿದ್ದಾಗ ಈ ಅಪಘಾತ ನಡೆದಿದೆ ಎನ್ನಲಾಗಿದೆ.  

ಕಾಸರಗೋಡು: ಬೈಕ್ ಮತ್ತು ಟ್ಯಾಂಕರ್ ಲಾರಿ ನಡುವೆ ಅಪಘಾತ ➤ ಇಬ್ಬರು ಸವಾರರು ಮೃತ್ಯು Read More »

ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ರಾಜ್ಯಕ್ಕೆ ಮತ್ತೆ ‘ಮೋದಿ’ ಆಗಮನ        ➤ ಏಪ್ರಿಲ್ 9 ರಂದು ‘ಬಂಡೀಪುರ’ಕ್ಕೆ ಪ್ರಧಾನಿ ಭೇಟಿ 

(ನ್ಯೂಸ್ ಕಡಬ)Newskadaba.com ಗುಂಡ್ಲುಪೇಟೆ,ಮಾ.31 ವಿಧಾನಸಭೆ ಚುನಾವಣೆ ಹಿನ್ನೆಲೆ ಪ್ರಧಾನಿ ಮೋದಿ ಈಗಾಗಲೇ ಹಲವು ಬಾರಿ ಕರ್ನಾಟಕಕ್ಕೆ ಆಗಮಿಸಿದ್ದಾರೆ.ಇದೀಗ ಏಪ್ರಿಲ್ 9 ರಂದು ಮತ್ತೆ ಬಂಡೀಪುರಕ್ಕೆ ಪ್ರಧಾನಿ ಮೋದಿ ಭೇಟಿ ನೀಡಲಿದ್ದಾರೆ ಎಂದು ತಿಳಿದು ಬಂದಿದೆ. ಹುಲಿ ಯೋಜನೆ 50 ವರ್ಷ ಪೂರೈಸಿದ ಹಿನ್ನೆಲೆ ಮೈಸೂರಿನಲ್ಲಿ ಏ.9 ರಂದು ನಡೆಯಲಿರುವ ಮೆಗಾ ಕಾರ್ಯಕ್ರಮದಲ್ಲಿ ಮೋದಿ ಭಾಗವಹಿಸಲಿದ್ದಾರೆ.ಬಂಡೀಪುರಕ್ಕೆ ಆಗಮಿಸುವ ಮೋದಿ ‘ವಿದ್ಯುತ್ ಸ್ಪರ್ಶಿಸಿ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದ ಆನೆಯನ್ನು ರಕ್ಷಿಸಿದ್ದವರನ್ನು ಅಭಿನಂದಿಸಲಿದ್ದಾರೆ. ಮೋದಿ ಆಗಮನದ ಹಿನ್ನೆಲೆ ಈಗಾಗಲೇ

ರಾಜ್ಯಕ್ಕೆ ಮತ್ತೆ ‘ಮೋದಿ’ ಆಗಮನ        ➤ ಏಪ್ರಿಲ್ 9 ರಂದು ‘ಬಂಡೀಪುರ’ಕ್ಕೆ ಪ್ರಧಾನಿ ಭೇಟಿ  Read More »

ಕರ್ನಾಟಕ

ಕಡಬ: ಮರವೊಂದಕ್ಕೆ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡ ಯುವಕ 

(ನ್ಯೂಸ್ ಕಡಬ)newskadaba.com  ಕಡಬ, ಮಾ.31. ಯುವಕನೋರ್ವ ಸಾಯುವ ಕುರಿತಾಗಿ ವಾಟ್ಸ್ಯಾಪ್ ಸ್ಟೇಟಸ್ ಹಾಕಿ ಬಳಿಕ ಮರವೊಂದಕ್ಕೆ ನೇಣು ಬಿಗಿದು ಆತ್ಮಹತ್ಯೆ ‌ಮಾಡಿಕೊಂಡ ಘಟನೆ ಕಡಬದಲ್ಲಿ ವರದಿಯಾಗಿದೆ. ಕಡಬ ತಾಲೂಕಿನ ಇಚಿಲಂಪಾಡಿ ಗ್ರಾಮದಲ್ಲಿ ಘಟನೆ ಸಂಭವಿಸಿದ್ದು, ಈ ಘಟನೆ ನಡೆದಿದ್ದು ಮೃತ ಯುವಕ  ರೆನೀಶ್ (27 ವರ್ಷ) ಎಂದು ಗುರುತಿಸಲಾಗಿದೆ.  

ಕಡಬ: ಮರವೊಂದಕ್ಕೆ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡ ಯುವಕ  Read More »

ಕರಾವಳಿ, ಕ್ರೈಮ್ ನ್ಯೂಸ್

ಮತ್ತೆ ಸದ್ದು ಮಾಡಿದ ಪಕ್ಷಾಂತರ ರಾಜಕೀಯ.!        ➤ ಕಾಂಗ್ರೆಸ್‌ ಸೇರಿದ ಗುಬ್ಬಿ ಶ್ರೀನಿವಾಸ್‌                    

(ನ್ಯೂಸ್ ಕಡಬ)Newskadaba.com ಬೆಂಗಳೂರು,ಮಾ.31  ಜೆಡಿಎಸ್‌ ಮಾಜಿ ಶಾಸಕ ಎಸ್‌.ಆರ್‌. ಶ್ರೀನಿವಾಸ್‌ (ವಾಸು) ಸಹಿತ ಮಂಡ್ಯ, ಮೂಡಿಗೆರೆಯ ಹಲವು ಬಿಜೆಪಿ ಮುಖಂಡರು ಗುರುವಾರ ವಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಸಮ್ಮುಖದಲ್ಲಿ ಕೆಪಿಸಿಸಿ ಕಚೇರಿಯಲ್ಲಿ ಕಾಂಗ್ರೆಸ್‌ ಸೇರಿದರು.   ಈ ವೇಳೆ ಮಾತನಾಡಿದ ಡಿ.ಕೆ. ಶಿವಕುಮಾರ್‌, ಶ್ರೀನಿವಾಸ ಅವರಿಗೆ ನಾನು ಬಹಳ ವರ್ಷಗಳಿಂದ ಗಾಳ ಹಾಕುತ್ತಿದ್ದೆ. ಆದರೆ ಅವರನ್ನು ಕರೆತರಲು ಸಾಧ್ಯವಾಗಿರಲಿಲ್ಲ. ಈಗ ಅವರು ಮತದಾರರ ಗಾಳಕ್ಕೆ ಬಿದ್ದಿದ್ದಾರೆ. ಅವರ ಸೇರ್ಪಡೆ ಕೇವಲ ತುಮಕೂರಿಗಲ್ಲ;

ಮತ್ತೆ ಸದ್ದು ಮಾಡಿದ ಪಕ್ಷಾಂತರ ರಾಜಕೀಯ.!        ➤ ಕಾಂಗ್ರೆಸ್‌ ಸೇರಿದ ಗುಬ್ಬಿ ಶ್ರೀನಿವಾಸ್‌                     Read More »

ಕರ್ನಾಟಕ

ಹಾಸನ 2 ಗುಂಪುಗಳ ನಡುವೆ ಮಾರಾಮಾರಿ ➤ ಬಾಲಕರಿಗೆ ಚಾಕು ಇರಿತ

(ನ್ಯೂಸ್ ಕಡಬ) newskadaba.com. ಹಾಸನ, ಮಾ.31. ಜಿಲ್ಲೆಯ ಚನ್ನರಾಯಪಟ್ಟಣದಲ್ಲಿ ರಾಮನವಮಿ‌ ಹಿನ್ನೆಲೆ ಮೆರವಣೆಗೆ ನಡೆಯುತ್ತಿದ್ದ ವೇಳೆ  ಎರಡು ಗುಂಪುಗಳ ನಡುವೆ ಮಾರಾಮಾರಿ ಶುರುವಾಗಿದೆ. ಈ ಸಂದರ್ಭದಲ್ಲಿ ಅನ್ಯಕೋಮಿನ ಯುವಕರ ಗುಂಪೊಂದು ಇಬ್ಬರು ಅಪ್ರಾಪ್ತ ಬಾಲಕರಿಗೆ ಚಾಕುವಿನಿಂದ ಇರಿದಿರುವ ಘಟನೆ ಚನ್ನರಾಯಪಟ್ಟಣದ ಬಾಗೂರು ರಸ್ತೆಯಲ್ಲಿ ನಡೆದಿದೆ. ಗಾಯಗೊಂಡ ಮುರಳಿ, ಹರ್ಷ ಎಂಬ ಬಾಲಕರಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಚನ್ನರಾಯಪಟ್ಟಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದ್ದು, ಮುಂಜಾಗ್ರತಾ ಕ್ರಮವಾಗಿ ಪೊಲೀಸ್ ಬಿಗಿ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ.

ಹಾಸನ 2 ಗುಂಪುಗಳ ನಡುವೆ ಮಾರಾಮಾರಿ ➤ ಬಾಲಕರಿಗೆ ಚಾಕು ಇರಿತ Read More »

ಕರ್ನಾಟಕ, ಕ್ರೈಮ್ ನ್ಯೂಸ್

ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ ➤ ತಲೆಮರೆಸಿಕೊಂಡಿದ್ದ ಆರೋಪಿ ಅರೆಸ್ಟ್

(ನ್ಯೂಸ್ ಕಡಬ)newskadaba.com ಕಾಸರಗೋಡು, ಮಾ.31. ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಜಾಮೀನು ಪಡೆದು ಕಳೆದ ಆರು ವರ್ಷಗಳಿಂದ ತಲೆ ಮರೆಸಿ ಕೊಂಡಿದ್ದ ಪೋಕ್ಸೋ ಪ್ರಕರಣದ ಆರೋಪಿಯನ್ನು ನೀಲೇಶ್ವರ ಪೊಲೀಸರು ಅಸ್ಸಾಂ ನಿಂದ ಬಂಧಿಸಿದ್ದಾರೆ. ಅಸ್ಸಾಂ ಮಿಲನ್ ಪುರದ ಶೇಖರ ಚೌಧರಿ(42) ಬಂಧಿತ ಆರೋಪಿ ಎಂದು ಗುರುತಿಸಲಾಗಿದೆ. ಚಾಯೋತ್ ನ ಫ್ಲೈ ವುಡ್ ಕಂಪೆನಿಯಲ್ಲಿ ಕೆಲಸ ನಿರ್ವ ಹಿಸುತ್ತಿದ್ದ ಈತ ಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ್ದು, ಪೊಲೀಸರು ಈತನನ್ನು ಬಂಧಿಸಿದ್ದರು. ಕಣ್ಣೂರು ಸೆಂಟ್ರಲ್

ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ ➤ ತಲೆಮರೆಸಿಕೊಂಡಿದ್ದ ಆರೋಪಿ ಅರೆಸ್ಟ್ Read More »

ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಉಳ್ಳಾಲ: ಕಳವಾದ ಬೈಕ್-ಮಂಗಳೂರಿನಲ್ಲಿ ಪತ್ತೆ..! ➤ ಮೂವರು ಪೊಲೀಸರ ವಶಕ್ಕೆ

(ನ್ಯೂಸ್ ಕಡಬ)newskadaba.com ಮಂಗಳೂರು, ಮಾ.31. ಕೋಟೆಕಾರು ಕೊರಗಜ್ಜನ ಕಟ್ಟೆ ಬಳಿಯಿಂದ ಕಳವು ನಡೆಸಿದ್ದ ಬೈಕ್ ಇಂದು ಮಂಗಳೂರಿನಲ್ಲಿ ಪತ್ತೆಯಾಗಿದ್ದು, ಬೈಕ್ ಮಾಲೀಕರ ಸ್ನೇಹಿತರೊಬ್ಬರು ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಬೈಕ್ ಸಮೇತ ಪಾಂಡೇಶ್ವರ ಠಾಣಾ ಪೊಲೀಸರು ಮೂವರನ್ನು ವಶಕ್ಕೆ ಪಡೆದುಕೊಂಡಿರುವುದಾಗಿ ತಿಳಿದುಬಂದಿದೆ. ಮಾ.28ರ ನಸುಕಿನ ಜಾವ ಕೋಟೆಕಾರು ಕೊರಗಜ್ಜನ ಕಟ್ಟೆ ಬಳಿ ಒಳರಸ್ತೆಯಲ್ಲಿ ನಿಲ್ಲಿಸಿದ್ದ ರಾಜೇಶ್ ಎಂಬವರಿಗೆ ಸೇರಿದ ಬೈಕನ್ನು ಕಳ್ಳರು ಕಳವು ನಡೆಸಿದ್ದರು. ಕೃತ್ಯ ಸಿಸಿಟಿವಿಯಲ್ಲಿ ಸೆಎರಯಾಗಿದ್ದು, ಕಳ್ಳನ ಚಹರೆಯೂ ಸರಿಯಾಗಿ ಗೋಚರಿಸಿತ್ತು. ಅದೇ

ಉಳ್ಳಾಲ: ಕಳವಾದ ಬೈಕ್-ಮಂಗಳೂರಿನಲ್ಲಿ ಪತ್ತೆ..! ➤ ಮೂವರು ಪೊಲೀಸರ ವಶಕ್ಕೆ Read More »

ಕರಾವಳಿ, ಕ್ರೈಮ್ ನ್ಯೂಸ್

‘ಮೋದಿ’ ಅಂತ ಹೆಸರಿದ್ದವರೆಲ್ಲ ಕಳ್ಳರೇ.!      ➤ಯುವ ಕಾಂಗ್ರೆಸ್ ಅಧ್ಯಕ್ಷ ನಲಪಾಡ್ ಹೊಸ ವಿವಾದ.!                        

(ನ್ಯೂಸ್ ಕಡಬ)newskadaba.com ನವದೆಹಲಿ,ಮಾ.31 ಕಳ್ಳರೆಲ್ಲರಿಗೂ ಮೋದಿ ಎಂಬ ಉಪ ನಾಮ ಏಕಿರುತ್ತದೆ ಎಂದು ಕರ್ನಾಟಕದ ಕೋಲಾರದಲ್ಲಿ ನಡೆದಿದ್ದ ಸಭೆ ಒಂದರಲ್ಲಿ ಹೇಳಿದ್ದ ಕಾರಣಕ್ಕೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಈಗ ಸಂಕಷ್ಟಕ್ಕೆ ಸಿಲುಕಿದ್ದಾರೆ. ಸೂರತ್ ನ್ಯಾಯಾಲಯದಿಂದ ಅವರಿಗೆ ಎರಡು ವರ್ಷಗಳ ಜೈಲು ಶಿಕ್ಷೆ ನೀಡಲಾಗಿದ್ದು, ಈ ಕಾರಣಕ್ಕಾಗಿಯೇ ಸಂಸತ್ ಸದಸ್ಯತ್ವವನ್ನೂ ಕಳೆದುಕೊಂಡಿದ್ದಾರೆ.ಇದೀಗ ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷ ಮಹಮ್ಮದ್ ನಲಪಾಡ್, ರಾಹುಲ್ ಗಾಂಧಿಯವರ ಹೇಳಿಕೆಯನ್ನೇ ಪುನರುಚ್ಚರಿಸಿದ್ದು, ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ನಡೆದಿದ್ದ ಸಭೆಯಲ್ಲಿ, ಮೋದಿ ಅಂತ ಹೆಸರು ಇಟ್ಟುಕೊಂಡವರೆಲ್ಲರೂ

‘ಮೋದಿ’ ಅಂತ ಹೆಸರಿದ್ದವರೆಲ್ಲ ಕಳ್ಳರೇ.!      ➤ಯುವ ಕಾಂಗ್ರೆಸ್ ಅಧ್ಯಕ್ಷ ನಲಪಾಡ್ ಹೊಸ ವಿವಾದ.!                         Read More »

ರಾಷ್ಟ್ರೀಯ ನ್ಯೂಸ್
Scroll to Top