News Kadaba

ವಿವಾಹಿತೆ ಜತೆ ಯುವಕನ ಸಂಬಂಧ!   ➤ಕೊಲೆಯಲ್ಲಿ ಅಂತ್ಯ!  

(ನ್ಯೂಸ್ ಕಡಬ) newskadaba.com. ಮಹಾರಾಷ್ಟ್ರ ,ಏ.10. ತಾಲ್ಲೂಕಿನ ಸೊನ್ನ ಗ್ರಾಮದಲ್ಲಿ ವಿವಾಹಿತೆ ಜತೆ ಸಂಬಂಧ ಬೆಳೆಸಿದ ಆರೋಪದಡಿ ಯುವಕನನ್ನು ಕೊಚ್ಚಿ ಕೊಲೆ ಮಾಡಿದ್ದು, ನೆಲೋಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಗ್ರಾಮದ ನಿವಾಸಿ ಸಂತೋಷ ಶ್ರೀಮಂತ ಹೆಗಡೆ (26) ಕೊಲೆಗೀಡಾದ ಯುವಕ.’ಗ್ರಾಮದ ವಿವಾಹಿತೆ ಜತೆ ನನ್ನ ಮಗ ಸಂತೋಷ ಸಂಬಂಧ ಬೆಳೆಸಿದ್ದ. ಅವಳಿಂದ ದೂರಾಗುವಂತೆ ತಿಳಿ ಹೇಳಿದ್ದೆವು ಆದರೆ ಆಕೆಯನ್ನು ನಾನು ಬಿಟ್ಟರೂ ಆಕೆ ನನ್ನನ್ನು ಬಿಡುವುದಿಲ್ಲ ಎನ್ನುತ್ತಿದ್ದ. ಹೀಗಾಗಿ, ಸಂತೋಷನಿಗೆ ಹೆಣ್ಣು ನೋಡಿ, ನಿಶ್ಚಿತಾರ್ಥಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿದ್ದೆವು. ಶನಿವಾರ […]

ವಿವಾಹಿತೆ ಜತೆ ಯುವಕನ ಸಂಬಂಧ!   ➤ಕೊಲೆಯಲ್ಲಿ ಅಂತ್ಯ!   Read More »

ಕರ್ನಾಟಕ

ಬೆಳ್ತಂಗಡಿ: ಮನೆ ಮೇಲೆ ತೆಂಗಿನ ಮರ ಬಿದ್ದು ಹಾನಿ

(ನ್ಯೂಸ್ ಕಡಬ)newskadaba.com ಬೆಳ್ತಂಗಡಿ, ಏ.10. ಪಡಂಗಡಿ ಗ್ರಾಮದ ಬದ್ಯಾರು ಸಮೀಪದ ಕಳೆಂಜಿರೋಡಿ ಜೊಬೆಲ್ಲಾ ಫೆಲಿಕ್ಸ್‌ ಅವರ ಮನೆಗೆ ತೆಂಗಿನ ಮರ ಬಿದ್ದ ಪರಿಣಾಮ ಮನೆ ಸಂಪೂರ್ಣ ಹಾನಿಗೀಡಾಗಿರುವ ಘಟನೆ ನಡೆದಿದೆ. ಫೆಲಿಕ್ಸ್‌ ಅವರ ಪುತ್ರ ನವೀನ ಹಾಗೂ ಆತನ ಪತ್ನಿ, ಇಬ್ಬರು ಮಕ್ಕಳು ಮನೆಯಲ್ಲಿ ವಾಸವಾಗಿದ್ದರು. ಆದರೆ ಪೂಜೆ ನಿಮಿತ್ತ ಅವರೆಲ್ಲರೂ ಚರ್ಚ್‌ಗೆ ತೆರಳಿದ್ದರಿಂದ ಜೀವಹಾನಿ ತಪ್ಪಿದೆ. ಇನ್ನು ಘಟನಾ ಸ್ಥಳಕ್ಕೆ ಪಂಚಾಯತ್‌ ಸಿಬಂದಿ ಭೇಟಿ ನೀಡಿದ್ಧಾರೆ.  

ಬೆಳ್ತಂಗಡಿ: ಮನೆ ಮೇಲೆ ತೆಂಗಿನ ಮರ ಬಿದ್ದು ಹಾನಿ Read More »

ಕರಾವಳಿ

ದೇವಸ್ಥಾನದ ಶೆಡ್​​ ಮೇಲೆ ಉರುಳಿ ಬಿದ್ದ ಬೃಹತ್​ ಗಾತ್ರದ ಬೇವಿನ ಮರ!!   ➤7 ಜನ ಮೃತ್ಯು, 30ಕ್ಕೂ ಹೆಚ್ಚು ಮಂದಿಗೆ ಗಾಯ  

(ನ್ಯೂಸ್ ಕಡಬ) newskadaba.com. ಮಹಾರಾಷ್ಟ್ರ ,ಏ.10.ಭಾರೀ ಮಳೆ ಮತ್ತು ಗಾಳಿಯ ಪರಿಣಾಮ ಬೃಹತ್ ಮರವೊಂದು ದೇವಸ್ಥಾನದ ತಗಡಿನ ಶೆಡ್​​​ ಮೇಲೆ ಉರುಳಿ ಬಿದ್ದ ಘಟನೆ ಅಕೋಲಾ ಜಿಲ್ಲೆಯ ಬಾಲಾಪುರ್​ ತೆಹಸಿಲ್​​ನ ಪಾರಸ್​ ಗ್ರಾಮದ ದೇವಸ್ಥಾನದಲ್ಲಿ ನಡೆದಿದೆ. ಈ ಘಟನೆಯಿಂದ ಏಳು ಜನರು ಸಾವನ್ನಪ್ಪಿದ್ದು, 30ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ. ಪೂಜೆ ನಡೆಯುವ ವೇಳೆ ಅಲ್ಲಿನ ಬಾಬುಜಿ ಮಹರಾಜ್​ ಮಂದಿರದ ಆವರಣದಲ್ಲಿದ್ದ ಬೃಹತ್​ ಬೇವಿನ ಮರ ನೆಲಕಪ್ಪಳಿಸಿದೆ. ಭಾರೀ ಗಾಳಿ, ಮಳೆಯಿಂದಾಗಿ ದೇವಸ್ಥಾನದ ತಗಡಿನ ಶೆಡ್​

ದೇವಸ್ಥಾನದ ಶೆಡ್​​ ಮೇಲೆ ಉರುಳಿ ಬಿದ್ದ ಬೃಹತ್​ ಗಾತ್ರದ ಬೇವಿನ ಮರ!!   ➤7 ಜನ ಮೃತ್ಯು, 30ಕ್ಕೂ ಹೆಚ್ಚು ಮಂದಿಗೆ ಗಾಯ   Read More »

ರಾಷ್ಟ್ರೀಯ ನ್ಯೂಸ್

ಬಂಟ್ವಾಳ: ಪ್ರಪಾತಕ್ಕೆ ಉರುಳಿ ಬಿದ್ದ ಬೈಕ್ ➤ ಹಿಂಬದಿ ಸವಾರ ಮೃತ್ಯು

(ನ್ಯೂಸ್ ಕಡಬ)newskadaba.com ಬಂಟ್ವಾಳ, ಏ.10. ಬೈಕ್ ಪ್ರಪಾತಕ್ಕೆ ಬಿದ್ದು ಬೈಕ್ ನಲ್ಲಿ ಹಿಂಬದಿ ಸವಾರನಾಗಿ ಪ್ರಯಾಣಿಸುತ್ತಿದ್ದ ಚಿಕ್ಕ ಮಂಗಳೂರು ಮೂಲದ ಯುವಕ ಮೃತಪಟ್ಟ ಘಟನೆ ಬಿಸಿರೋಡಿನ ಕೈಕಂಬ ಸಮೀಪದ ತಲಪಾಡಿ ಎಂಬಲ್ಲಿ ನಡೆದಿದೆ. ಚಿಕ್ಕಮಗಳೂರು ನಿವಾಸಿ ಮಂಗಳೂರು ಖಾಸಗಿ ಕಂಪೆನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಯಶೋಧರ (25) ಮೃತಪಟ್ಟ ಯುವಕ ಎಂದು ಗುರುತಿಸಲಾಗಿದೆ.  

ಬಂಟ್ವಾಳ: ಪ್ರಪಾತಕ್ಕೆ ಉರುಳಿ ಬಿದ್ದ ಬೈಕ್ ➤ ಹಿಂಬದಿ ಸವಾರ ಮೃತ್ಯು Read More »

ಕರಾವಳಿ, ಕ್ರೈಮ್ ನ್ಯೂಸ್
crime, arrest, suspected

ಮಂಗಳೂರು: ಗಾಂಜಾ ಮಾರಾಟಕ್ಕೆ ಯತ್ನ ➤ ಆರೋಪಿ ಅರೆಸ್ಟ್

(ನ್ಯೂಸ್ ಕಡಬ)newskadaba.com ಮಂಗಳೂರು, ಏ.10. ಗಾಂಜಾ ಮಾರಾಟಕ್ಕೆ ಯತ್ನಿಸಿದ ಆರೋಪದ ಮೇಲೆ ಯುವಕನೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಮಲ್ಪೆ ನಿವಾಸಿ ಸುಹಾನ್ ಎಸ್ ಪೂಜಾರಿ (23) ಎಂದು ಗುರುತಿಸಲಾಗಿದೆ. ಸುಹಾನ್ ಕಾವೂರು ಪೊಲೀಸ್ ಠಾಣಾ ವ್ಯಾಪ್ತಿಯ ಮರಕಡ್ಡದ ಪಡುಶೆಡ್ಡೆ ಬಳಿ ರಸ್ತೆ ಬದಿಯಲ್ಲಿ ಸ್ಕೂಟರ್‌ನಲ್ಲಿ ಕುಳಿತು ಗಾಂಜಾ ಮಾರಾಟ ಮಾಡಲು ಯತ್ನಿಸುತ್ತಿದ್ದಾಗ ಪೊಲೀಸರು ಬಂಧಿಸಿದ್ದಾರೆ. ಆತನಿಂದ 1.999 ಕೆಜಿ ಗಾಂಜಾ, ಮೊಬೈಲ್ ಮತ್ತು ಸ್ಕೂಟರ್ ಅನ್ನು ಪೊಲೀಸರು ಜಪ್ತಿ ಮಾಡಿದ್ದಾರೆ ಎನ್ನಲಾಗಿದೆ.  

ಮಂಗಳೂರು: ಗಾಂಜಾ ಮಾರಾಟಕ್ಕೆ ಯತ್ನ ➤ ಆರೋಪಿ ಅರೆಸ್ಟ್ Read More »

ಕರಾವಳಿ, ಕ್ರೈಮ್ ನ್ಯೂಸ್

ವಿಮಾನ ನಿಲ್ದಾಣಕ್ಕೆ ಬಂದಿಳಿದ ಪ್ರಯಾಣಿಕರ ಒಳ ಉಡುಪುವಿನಲ್ಲಿ 2.28 ಕೆ.ಜಿ ಚಿನ್ನ ಪತ್ತೆ

(ನ್ಯೂಸ್ ಕಡಬ)newskadaba.com ಬೆಂಗಳೂರು, ಏ.10. ದುಬೈಯಿಂದ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಬಂದಿಳಿದ ಮೂವರು ಪ್ರಯಾಣಿಕರ ಒಳಉಡುಪಿನಲ್ಲಿ 2.28 ಕೆಜಿ ಚಿನ್ನ ಪತ್ತೆಯಾಗಿರುವ ಬಗ್ಗೆ ವರದಿಯಾಗಿದೆ. ಇವರು ಚಿನ್ನಸಾಗಾಟಕ್ಕೆಂದು ಒಳ ಉಡುಪು ತಯಾರಿ ಮಾಡಿದ್ದರು. ಒಬ್ಬಾತ 3 ಚಿನ್ನದ ಬಿಸ್ಕೆತ್ ಮತ್ತು ಇಬ್ಬರು ಚಿನ್ನದ ಪೇಸ್ಟ್ ನ್ನು ಬಚ್ಚಿಟ್ಟುಕೊಂಡು ದುಬೈಯಿಂದ ವಿಮಾನದಲ್ಲಿ ಕೆಂಪೇಗೌಡ ವಿಮಾನ ನಿಲ್ಧಾಣಕ್ಕೆ ಬಂದಿಳಿದ್ದರು ಎನ್ನಲಾಗಿದೆ.

ವಿಮಾನ ನಿಲ್ದಾಣಕ್ಕೆ ಬಂದಿಳಿದ ಪ್ರಯಾಣಿಕರ ಒಳ ಉಡುಪುವಿನಲ್ಲಿ 2.28 ಕೆ.ಜಿ ಚಿನ್ನ ಪತ್ತೆ Read More »

ಕರ್ನಾಟಕ

ಅಪಘಾತದಲ್ಲಿ ಮೆದುಳು ನಿಷ್ಕ್ರಿಯಗೊಂಡಿದ್ದ ಕಾಪು ನಿವಾಸಿ ಯುವಕ ಮೃತ್ಯು…!

(ನ್ಯೂಸ್ ಕಡಬ)newskadaba.com ಸೌದಿ ಅರೇಬಿಯಾ, ಏ.10. ಕಾರು ಅಪಘಾತದಲ್ಲಿ ಗಾಯಗೊಂಡು ಗಂಭೀರವಸ್ಥೆಯಲ್ಲಿದ್ದ ಉಡುಪಿ ಕಾಪು ನಿವಾಸಿ ಯುವಕ ಜುಬೈಲ್ ನ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ ಎಂದು ವರದಿ ತಿಳಿಸಿದೆ. ಕೆಸಿಎಫ್ ಅಬುಹಾದ್ರಿಯ ಸೆಕ್ಟರ್, ಜುಬೈಲ್ ಇದರ ಈಸ್ಟ್ ಯುನಿಟ್ ನ ಪಬ್ಲಿಕೇಶನ್ ವಿಂಗ್ ನ ಕಾರ್ಯದರ್ಶಿ ಕೂಡ ಆಗಿದ್ದ ಎನ್ನಲಾಗಿದೆ.  

ಅಪಘಾತದಲ್ಲಿ ಮೆದುಳು ನಿಷ್ಕ್ರಿಯಗೊಂಡಿದ್ದ ಕಾಪು ನಿವಾಸಿ ಯುವಕ ಮೃತ್ಯು…! Read More »

ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ರಾಜ್ಯದಲ್ಲಿ `CNG-PNG’ ಅನಿಲ ದರಗಳು 7 ರೂ.ವರೆಗೆ ಇಳಿಕೆ!   ➤ ಕೇಂದ್ರ ಸರ್ಕಾರ ಪ್ರಕಟ  

(ನ್ಯೂಸ್ ಕಡಬ) newskadaba.com. ಬೆಂಗಳೂರು,ಏ.10. ಕೇಂದ್ರ ಸರ್ಕಾರವು ಸಾಂದ್ರಿಕೃತ ನೈಸರ್ಗಿಕ ಅನಿಲ (CNG) ಹಾಗೂ ಪೈಪ್ಡ್ ನೈಸರ್ಗಿಕ ಅನಿಲ (PNG) ದರ ಇಳಿಕೆ ಮಾಡಿದ ಬೆನ್ನಲ್ಲೇ ಕರ್ನಾಟಕದಲ್ಲೂ ಎರಡೂ ಅನಿಲಗಳ ದರ 6 ರಿಂದ 7 ರೂ. ನಷ್ಟು ಇಳಿಕೆಯಾಗಿದೆ. ಜಿಎಐಎಲ್ ಸಿಎನ್ ಜಿ ಹಾಗೂ ಪಿಎನ್ ಜಿ ಅನಿಲ ದರ ಇಳಿಕೆ ಬಗ್ಗೆ ಪ್ರಕಟಣೆ ಹೊರಡಿಸಿದ್ದು, ಬೆಂಗಳೂರು ಮತ್ತು ದಕ್ಷಿಣ ಕನ್ನಡದಲ್ಲಿ ಪಿಎನ್ ಜಿ ದರವನ್ನು 7 ರೂ.ಹಾಗೂ ಕಂಪನಿ ಕಾರ್ಯನಿರ್ವಹಿಸುವ ಇತರ ನಗರಗಳಲ್ಲಿ 6

ರಾಜ್ಯದಲ್ಲಿ `CNG-PNG’ ಅನಿಲ ದರಗಳು 7 ರೂ.ವರೆಗೆ ಇಳಿಕೆ!   ➤ ಕೇಂದ್ರ ಸರ್ಕಾರ ಪ್ರಕಟ   Read More »

ಕರ್ನಾಟಕ

ಕತ್ತಿಯಿಂದ ಯುವಕನ ಬರ್ಬರ ಹತ್ಯೆ…! ➤ ಅಪ್ರಾಪ್ತ ಬಾಲಕಿ ಅರೆಸ್ಟ್

(ನ್ಯೂಸ್ ಕಡಬ)newskadaba.com ಹಾವೇರಿ, ಏ.10. ನಿಶ್ಚಿತಾರ್ಥ ಮಾಡಿಕೊಂಡ ಯುವಕನಿಗೆ 17 ವರ್ಷದ ಅಪ್ರಾಪ್ತೆ ಕತ್ತಿಗೆ ಚೂರಿಯಿಂದ ಇರಿದು ಕೊಲೆಗೆ ಯತ್ನಿಸಿದ ಘಟನೆ ಹಾವೇರಿಯಲ್ಲಿ ನಡೆದಿದೆ. ರಾಣೇಬೆನ್ನೂರು ಪಟ್ಟಣದ ಹೊರವಲಯದ ಓಂ ಪಬ್ಲಿಕ್ ಸ್ಕೂಲ್ ಬಳಿ ನಡೆದ ಘಟನೆಯೊಂದು ಅಚ್ಚರಿಗೆ ಕಾರಣವಾಗಿದೆ ಎಂದು ವರದಿ ತಿಳಿಸಿದೆ.

ಕತ್ತಿಯಿಂದ ಯುವಕನ ಬರ್ಬರ ಹತ್ಯೆ…! ➤ ಅಪ್ರಾಪ್ತ ಬಾಲಕಿ ಅರೆಸ್ಟ್ Read More »

ಕರ್ನಾಟಕ, ಕ್ರೈಮ್ ನ್ಯೂಸ್

ಭಾರತೀಯ ಪಾಸ್‍ಪೋರ್ಟ್  ಬಳಸಿ ಅಕ್ರಮವಾಗಿ ಬೆಂಗಳೂರಿಗೆ ಬಂದಿದ್ದ ಇಬ್ಬರು ಬಾಂಗ್ಲಾ ಪ್ರಜೆಗಳ ಬಂಧನ

(ನ್ಯೂಸ್ ಕಡಬ) newskadaba.com. ಬೆಂಗಳೂರು,ಏ.8.   ಅಕ್ರಮವಾಗಿ ಭಾರತೀಯ ಪಾಸ್‍ಪೋರ್ಟ್ ಮಾಡಿಸಿಕೊಂಡು ವಿಮಾನದಲ್ಲಿ ಬೆಂಗಳೂರಿಗೆ ಬಂದಿದ್ದ ಇಬ್ಬರು ಬಾಂಗ್ಲಾದೇಶದ ಪ್ರಜೆಗಳನ್ನು ಕೆಂಪೇಗೌಡ ಅಂತರ್‍ರಾಷ್ಟ್ರೀಯ ವಿಮಾನ ನಿಲ್ದಾಣ ಪೋಲೀಸರು ಬಂಧಿಸಿದ್ದಾರೆ. ಸಿಂಗಾಪುರ್‍ ನಿಂದ ಬೆಂಗಳೂರಿಗೆ ಆಗಮಿಸಿದ ಇಂಡಿಗೊ ವಿಮಾನದಲ್ಲಿ ಬಾಂಗ್ಲಾ ದೇಶದ ಪ್ರಜೆಗಳಾದ ಲಿಯಾಕತ್ ಆಲಿ ಮತ್ತು ರಿಜಾಉಲ್ ಶೇಕ್ ಎಂಬುವರು ಬಂದಿದ್ದಾರೆ. ವಿಮಾನ ನಿಲ್ದಾಣದ ಅಕಾರಿಗಳು ಈ ಇಬ್ಬರ ಪಾಸ್‍ಪೋರ್ಟ್‍ಗಳನ್ನು ಪರಿಶೀಲಿಸಿದಾಗ ಬೇರೆಯವರ ಹೆಸರಿನಲ್ಲಿ ಮೋಸದಿಂದ ಭಾರತೀಯ ಪಾಸ್‍ಪೋರ್ಟ್ ಮಾಡಿಸಿಕೊಂಡಿರುವುದು ಕಂಡು ಬಂದಿದೆ.

ಭಾರತೀಯ ಪಾಸ್‍ಪೋರ್ಟ್  ಬಳಸಿ ಅಕ್ರಮವಾಗಿ ಬೆಂಗಳೂರಿಗೆ ಬಂದಿದ್ದ ಇಬ್ಬರು ಬಾಂಗ್ಲಾ ಪ್ರಜೆಗಳ ಬಂಧನ Read More »

ಕರಾವಳಿ
Scroll to Top