News Kadaba

ಸಚಿವ ಮುನಿರತ್ನ ವಿರುದ್ಧ ಮತ್ತೊಂದು FIR

(ನ್ಯೂಸ್ ಕಡಬ)newskadaba.com  ಬೆಂಗಳೂರು, ಏ.10. ಮತದಾರರಿಗೆ ಬೆಂಬಲಿಗರು ಸೀರೆ ಹಂಚುತ್ತಿದ್ದ ಹಿನ್ನೆಲೆಯಲ್ಲಿ ತೋಟಗಾರಿಕೆ ಸಚಿವ ಮುನಿರತ್ನ ವಿರುದ್ಧ ಮತ್ತೊಂದು ಎಫ್’ಐಆರ್ ದಾಖಲಾಗಿದೆ. ಚುನಾವಣಾ ಆಯೋಗದ ಅಧಿಕಾರಿ ಮನೋಜ್ ಕುಮಾರ್ ನೀಡಿದ ದೂರಿನ ಮೇರೆಗೆ ಮೂವರ ವಿರುದ್ಧ ಪ್ರಕರಣ ದಾಖಲಾಗಿದೆ. ಇತ್ತೀಚೆಗೆ ಆರ್.ಆರ್. ನಗರದ ಬಂಗಾರಪ್ಪ ನಗರದಲ್ಲಿ ಮತದಾರರಿಗೆ ಮುನಿರತ್ನ ಬೆಂಬಲಿಗರು ಸೀರೆ ಹಂಚುವಾಗ ಸಿಕ್ಕಿಬಿದ್ದಿದ್ದರು. ಕೋಮುದ್ವೇಷ ಭಾಷಣ ಹಿನ್ನೆಲೆಯಲ್ಲಿ ಸಚಿವ ಮುನಿರತ್ನ ವಿರುದ್ಧ ಆರ್.ಆರ್. ನಗರ ಪೊಲೀಸರು ಎಫ್’ಐಆರ್ ದಾಖಲಿಸಿಕೊಂಡಿದ್ದರು.  

ಸಚಿವ ಮುನಿರತ್ನ ವಿರುದ್ಧ ಮತ್ತೊಂದು FIR Read More »

ಕರ್ನಾಟಕ

RCB ತಂಡಕ್ಕೆ ಕನ್ನಡಿಗ ಸೇರ್ಪಡೆ

(ನ್ಯೂಸ್ ಕಡಬ)newskadaba.com ಬೆಂಗಳೂರು,  ಏ.10. RCB ತಂಡಕ್ಕೆ ಕನ್ನಡಿಗ ಸೇರ್ಪಡೆಯಾಗಿದೆ. ರಜತ್ ಪಾಟಿದಾರ್ ಬದಲಾಗಿ ವೇಗಿ ವೈಶಾಕ್ ವಿಜಯ್ ಕುಮಾರ್ ಅವರು, ಮೂಲಬೆಲೆ ೨೦ ಲಕ್ಷಕ್ಕೆ ಬೆಂಗಳೂರು ತಂಡ ಸೇರ್ಪಡೆಯಾಗಿದ್ದಾರೆ. ದೇಶಿಯ ಕ್ರಿಕೆಟ್ ನಲ್ಲಿ ಕರ್ನಾಟಕ ಪ್ರತಿನಿಧಿಸುವ ವೈಶಾಕ್, ಇದುವರೆಗೆ 14ಟಿ20 ಪಂದ್ಯಗಳನ್ನಾಡಿದ್ದು , 22 ವಿಕೆಟ್ ಕಬಳಿಸಿದ್ದಾರೆ. ಹಿಮ್ಮಡಿ ಗಾಯಕ್ಕೆ ಒಳಗಾಗಿರುವ ಪಾಟಿದಾರ್ ಮೊದಲ ಪಂದ್ಯದಲ್ಲಿ ಕಣಕ್ಕಿಳಿದಿರಲಿಲ್ಲ. ಅವರು ಇನ್ನೂ ಚೇತರಿಸಿಕೊಳ್ಳದ ಕಾರಣ ಐಪಿಎಲ್ ಸರಣಿಯಿಂದಲೇ ಹೊರಗುಳಿದಿದ್ದಾರೆ. ಪಾಟಿದಾರ್ ಹಿಮ್ಮಡಿ ನೋವಿನಿಂದ ಟೂರ್ನಿಯಿಂದ ಹೊರಬಿದ್ದಿದ್ದಾರೆ. ಈ

RCB ತಂಡಕ್ಕೆ ಕನ್ನಡಿಗ ಸೇರ್ಪಡೆ Read More »

ಕರ್ನಾಟಕ

 ಚುನಾವಣಾ ನೀತಿಸಂಹಿತೆ ಉಲ್ಲಂಘಿಸಿದ ಸರ್ಕಾರಿ ನೌಕರ!   ➤ ನೌಕರನನ್ನು ಅಮಾನತುಗೊಳಿಸಿದ ಜಿಲ್ಲಾಧಿಕಾರಿ  

(ನ್ಯೂಸ್ ಕಡಬ) newskadaba.com.ಬೆಂಗಳೂರು,ಏ.10 ರಾಜಕೀಯ ಪಕ್ಷದ ಪ್ರತಿನಿಧಿಯೊಂದಿಗೆ ಸೆಲ್ಫಿ ತೆಗೆದುಕೊಂಡು‌ ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವ ಮೂಲಕ‌ ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿದ ಲೆಕ್ಕ ವಿಚಕ್ಷಣ ತಂಡದ‌ ಮುಖ್ಯಸ್ಥರಾದ ನೆಲಮಂಗಲ ಸರ್ಕಾರಿ ಪದವಿ ಪೂರ್ವ ಕಾಲೇಜು ದೈಹಿಕ ಶಿಕ್ಷಕ ಅಂಜ‌ನ್ ಕುಮಾರ್.ಬಿ.ಜೆ.ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ‌ ಅಮಾನತು‌ಪಡಿಸಿ ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಆರ್.ಲತಾ ಅವರು ಆದೇಶಿಸಿದ್ದಾರೆ. ಕರ್ನಾಟಕ ಸಾರ್ವತ್ರಿಕ ವಿಧಾನಸಭಾ ಚುನಾವಣೆ-2023ರ ಸಂಬಂಧ ಅಂಜನ್ ಕುಮಾರ್.ಬಿ.ಜೆ. ಅವರನ್ನು ನೆಲಮಂಗಲದ ಸೋಲೂರು ಹೋಬಳಿಯಲ್ಲಿ ಸ್ಥಾಪಿಸಲಾಗಿರುವ ಚೆಕ್‌ಪೋಸ್ಟ್‌ನಲ್ಲಿ

 ಚುನಾವಣಾ ನೀತಿಸಂಹಿತೆ ಉಲ್ಲಂಘಿಸಿದ ಸರ್ಕಾರಿ ನೌಕರ!   ➤ ನೌಕರನನ್ನು ಅಮಾನತುಗೊಳಿಸಿದ ಜಿಲ್ಲಾಧಿಕಾರಿ   Read More »

ಕರ್ನಾಟಕ

ಆಸ್ಟ್ರೇಲಿಯಾದ ಸಿಡ್ನಿಯ ಶಾಸಕಿಯಾಗಿ ಕೊಡಗಿನ ಕುವರಿ ಚರಿಶ್ಮಾ

(ನ್ಯೂಸ್ ಕಡಬ)newskadaba.com ಆಸ್ಟ್ರೇಲಿಯ, ಏ.10.  ನ್ಯೂ ಸೌತ್ ವೇಲ್ಸ್ ರಾಜ್ಯದ ಅಸೆಂಬ್ಲಿ ಚುನಾವಣೆಯಲ್ಲಿ ಕೊಡಗಿನ ಕುವರಿ ಚರಿಶ್ಮಾ ಅವರು ಭಾರೀ ಅಂತರದಲ್ಲಿ ಜಯಗಳಿಸಿದ್ದಾರೆ ಎಂದು ವರದಿ ತಿಳಿಸಿದೆ. ಚರಿಶ್ಮಾ ಅವರು ಕೊಳಕೇರಿಯವರಾದ ಕಲಿಯಂಡ ಮಾದಪ್ಪ ಮತ್ತು ಭಾನುಮತಿ ಅವರ ಪುತ್ರಿಯಾಗಿದ್ದಾರೆ. ಇನ್ನು 35 ವರ್ಷದ ಚರಿಶ್ಮಾ ಅವರು ಲೇಬರ್ ಪಕ್ಷದ ಸದಸ್ಯರಾಗಿದ್ದು, ಈ ಹಿಂದೆ ಎರಡು ಬಾರಿ ಹೋಲ್ಸ್ ವರ್ತಿ ಸ್ಥಾನದಿಂದ ಸ್ಪರ್ಧಿಸಿದ್ದರು.  

ಆಸ್ಟ್ರೇಲಿಯಾದ ಸಿಡ್ನಿಯ ಶಾಸಕಿಯಾಗಿ ಕೊಡಗಿನ ಕುವರಿ ಚರಿಶ್ಮಾ Read More »

ಕರಾವಳಿ, ರಾಷ್ಟ್ರೀಯ ನ್ಯೂಸ್

ನ್ಯಾಯಾಧೀಶರ ವಿರುದ್ಧದ ಟ್ವೀಟ್‌ ಪ್ರಕರಣ ➤ ಕ್ಷಮೆಯಾಚಿಸಿದ ವಿವೇಕ್‌ ಅಗ್ನಿಹೋತ್ರಿ

(ನ್ಯೂಸ್ ಕಡಬ)newskadaba.com ನವದೆಹಲಿ, ಏ.10. 2018 ರಲ್ಲಿ ಜಸ್ಟಿಸ್‌ ಎಸ್‌ ಮುರಳೀಧರ್‌ ಕುರಿತಂತೆ ಟ್ವಿಟರ್‌ನಲ್ಲಿ ಮಾಡಿದ ಪೋಸ್ಟ್‌ಗೆ ಸಂಬಂಧಿಸಿದಂತೆ ದಾಖಲಿಸಲಾಗಿದ್ದ ನ್ಯಾಯಾಂಗ ನಿಂದನೆ ಪ್ರಕರಣ ಸಂಬಂಧ ಚಿತ್ರ ನಿರ್ಮಾಪಕ ವಿವೇಕ್‌ ಅಗ್ನಿಹೋತ್ರಿ ಅವರು ದೆಹಲಿ ಹೈಕೋರ್ಟಿನ ಮುಂದೆ ಬೇಷರತ್‌ ಕ್ಷಮೆಯಾಚಿಸಿದ್ದು, ಅವರ ವಿರುದ್ಧದ ಪ್ರಕರಣವನ್ನು ನ್ಯಾಯಾಲಯ ವಜಾಗೊಳಿಸಿದೆ. ದೆಹಲಿ ಹೈಕೋರ್ಟಿನ ಮಾಜಿ ನ್ಯಾಯಾಧೀಶ ಹಾಗೂ ಪ್ರಸಕ್ತ ಒಡಿಶಾ ಹೈಕೋರ್ಟಿನ ಮುಖ್ಯ ನ್ಯಾಯಮೂರ್ತಿ ಜಸ್ಟಿಸ್‌ ಮುರಳೀಧರ್‌ ಅವರ ವಿರುದ್ಧದ ಪೋಸ್ಟ್‌ ಒಂದನ್ನು ಅಗ್ನಿಹೋತ್ರಿ 2018 ರಲ್ಲಿ ರಿಟ್ವೀಟ್‌ ಮಾಡಿದ್ದರು.

ನ್ಯಾಯಾಧೀಶರ ವಿರುದ್ಧದ ಟ್ವೀಟ್‌ ಪ್ರಕರಣ ➤ ಕ್ಷಮೆಯಾಚಿಸಿದ ವಿವೇಕ್‌ ಅಗ್ನಿಹೋತ್ರಿ Read More »

ರಾಷ್ಟ್ರೀಯ ನ್ಯೂಸ್

ಉಪ್ಪಿನಂಗಡಿ: ಟ್ಯಾಂಕರ್ ದುರಂತಕ್ಕೆ ಹತ್ತು ವರ್ಷ ! ➤ ಅಚ್ಚಳಿಯದೆ ಉಳಿದ ಕಹಿ ನೆನಪು

(ನ್ಯೂಸ್ ಕಡಬ)newskadaba.com ಉಪ್ಪಿನಂಗಡಿ, ಏ.10. ಉಪ್ಪಿನಂಗಡಿ ಸಮೀಪದ ಪೆರ್ಣೆ ಎಂಬಲ್ಲಿ 2013ರ ಏಪ್ರಿಲ್ 9ರಂದು ಸಂಭವಿಸಿದ ಭೀಕರ ಗ್ಯಾಸ್ ಟ್ಯಾಂಕರ್ ದುರಂತದಲ್ಲಿ ವಿವಿಧ ಕುಟುಂಬಗಳ 13 ಮಂದಿ ಮೃತಪಟ್ಟು, ಹಲವರು ಗಾಯಗೊಂಡು 10 ವರ್ಷಗಳು ಕಳೆದರೂ, ದುರಂತದ ಮಾನಸಿಕ ಗಾಯ ಇನ್ನೂ ಮಾಸಿಲ್ಲ. ಮಂಗಳೂರಿನಿಂದ ಬೆಂಗಳೂರಿನತ್ತ ಅನಿಲ ಸಾಗಾಟದ ಟ್ಯಾಂಕರ್ ಪೆರ್ನೆ ತಿರುವಿನಲ್ಲಿ ಅಪಘಾತಕ್ಕೀಡಾಗಿ ಮಗುಚಿ ಬಿತ್ತು. ಈ ಪರಿಣಾಮ ಅನಿಲ ಸೋರಿಕೆಯುಂಟಾಗಿ ಅಗ್ನಿ ಸ್ಪರ್ಶಗೊಂಡ ಕಾರಣ ಬೆಂಕಿಯ ಕೆನ್ನಾಲಿಗೆಯು ಪರಿಸರದಾದ್ಯಂತ ವ್ಯಾಪಿಸಿ ಮನೆ, ಅಂಗಡಿಯೊಳಗಿದ್ದ ಜನರೆಲ್ಲಾ

ಉಪ್ಪಿನಂಗಡಿ: ಟ್ಯಾಂಕರ್ ದುರಂತಕ್ಕೆ ಹತ್ತು ವರ್ಷ ! ➤ ಅಚ್ಚಳಿಯದೆ ಉಳಿದ ಕಹಿ ನೆನಪು Read More »

ಕರಾವಳಿ

  ಮದುವೆಯ ವೇಳೆ ಗಾಳಿಯಲ್ಲಿ 4 ಗುಂಡು ಹಾರಿಸಿದ ವಧು!   ➤ ಬೆಚ್ಚಿಬಿದ್ದ ವರ

(ನ್ಯೂಸ್ ಕಡಬ) newskadaba.com.ಉತ್ತರ ಪ್ರದೇಶದ,ಏ.10 ಮದುವೆಗಳಿಗೆ ಸಂಬಂಧಿಸಿದ ವೀಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ಬಹಳ ಜನಪ್ರಿಯವಾಗಿವೆ. ಉತ್ತರ ಪ್ರದೇಶದ ಹತ್ರಾಸ್ನಲ್ಲಿ ಉತ್ತರ ಪ್ರದೇಶದ ಹತ್ರಾಸ್ನಲ್ಲಿ, ವಧು ತನ್ನ, ವಿವಾಹ ಸಮಾರಂಭದಲ್ಲಿ ರಿವಾಲ್ವರ್ ನಿಂದ ಗಾಳಿಯಲ್ಲಿ ನಾಲ್ಕು ಗುಂಡುಗಳನ್ನು ಹಾರಿಸಿರುವ ವೀಡಿಯೊ ವೈರಲ್ ಆಗಿದೆ. ಪ್ರಮೋದ್ ಕುಮಾರ್ ಸಿಂಗ್ ಎಂಬ ಬಳಕೆದಾರರು ಹತ್ರಾಸ್ ಪೊಲೀಸ್ ಟ್ಯಾಗ್ ಮಾಡಿದ ಪೋಸ್ಟ್ಗೆ ಉತ್ತರಿಸಿದ್ದಾರೆ. ಐಪಿಸಿ ಸೆಕ್ಷನ್ 336ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಹತ್ರಾಸ್ ಜಂಕ್ಷನ್ ಪೊಲೀಸ್ ಠಾಣೆಯಲ್ಲಿ ಸಂಬಂಧಿತ ವಿಭಾಗಗಳ ಅಡಿಯಲ್ಲಿ ಆರೋಪಗಳನ್ನು

  ಮದುವೆಯ ವೇಳೆ ಗಾಳಿಯಲ್ಲಿ 4 ಗುಂಡು ಹಾರಿಸಿದ ವಧು!   ➤ ಬೆಚ್ಚಿಬಿದ್ದ ವರ Read More »

ರಾಷ್ಟ್ರೀಯ ನ್ಯೂಸ್

ಸಮುದ್ರ ಕಾರ್ಯಾಚರಣೆ ವೇಳೆ ಐಎನ್‌ಎಸ್ ಬ್ರಹ್ಮಪುತ್ರದ ಭಾರತೀಯ ನೌಕಾಪಡೆ ಅಧಿಕಾರಿ ಮೃತ್ಯು!

(ನ್ಯೂಸ್ ಕಡಬ) newskadaba.com.ನವದೆಹಲಿ,ಏ.10 ಸಮುದ್ರದಲ್ಲಿ ಕಾರ್ಯಾಚರಣೆ ವೇಳೆ ದುರಂತವೊಂದು ಸಂಭವಿಸಿದ್ದು, ಐಎನ್ಎಸ್ ಬ್ರಹ್ಮಪುತ್ರದಲ್ಲಿ ನಿಯೋಜನೆಗೊಂಡಿದ್ದ ಭಾರತೀಯ ನೌಕಾಪಡೆ ಅಧಿಕಾರಿಯೊಬ್ಬರು ಸಾವನ್ನಪ್ಪಿದ್ದಾರೆ. ಈ ಕುರಿತು ತನಿಖೆಗೆ ಆದೇಶ ನೀಡಲಾಗಿದೆ. ಸಮುದ್ರದಲ್ಲಿ ಕಾರ್ಯಾಚರಣೆಯ ವೇಳೆ ಕ್ಷಿಪಣಿ ಹೊಂದಿದ ಹಡಗಿನಲ್ಲಿ ಗಂಭೀರ ಗಾಯಗೊಂಡು ಸಾವನ್ನಪ್ಪಿದ್ದಾರೆ ಎಂದು ಹೇಳಲಾಗುತ್ತಿದೆ.      

ಸಮುದ್ರ ಕಾರ್ಯಾಚರಣೆ ವೇಳೆ ಐಎನ್‌ಎಸ್ ಬ್ರಹ್ಮಪುತ್ರದ ಭಾರತೀಯ ನೌಕಾಪಡೆ ಅಧಿಕಾರಿ ಮೃತ್ಯು! Read More »

ರಾಷ್ಟ್ರೀಯ ನ್ಯೂಸ್

ಬಿಯರ್ ಬಾಟಲಿ & ಕಲ್ಲಿನಿಂದ ಹೊಡೆದು ಯುವಕನ ಕೊಲೆ

(ನ್ಯೂಸ್ ಕಡಬ)newskadaba.com ಬೆಂಗಳೂರು, ಏ.10. ಯುವಕನೋರ್ವನನ್ನು ಬಿಯರ್ ಬಾಟಲಿಯಿಂದ ತಲೆಗೆ ಹೊಡೆದು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಉತ್ತರಹಳ್ಳಿಯ ಬಾರ್ ವೊಂದರಲ್ಲಿ ನಡೆದಿದೆ. ಸುಬ್ರಹ್ಮಣ್ಯಪುರದ ರೌಡಿಶೀಟರ್ ಶಿವರಾಜ್ ನನ್ನು ಹತ್ಯೆ ಮಾಡಲಾಗಿದೆ. ಬಿಯರ್ ಬಾಟಲಿನಿಂದ ತಲೆಗೆ ಹೊಡೆದು ಮತ್ತೊಬ್ಬ ರೌಡಿಶೀಟರ್ ಮಂಜ ಕೊಲೆ ಮಾಡಿದ್ದಾನೆ.

ಬಿಯರ್ ಬಾಟಲಿ & ಕಲ್ಲಿನಿಂದ ಹೊಡೆದು ಯುವಕನ ಕೊಲೆ Read More »

ಕರ್ನಾಟಕ

ಎರಡು ವರ್ಷದ ಬಾಲಕಿ ನಾಪತ್ತೆ ➤ ನೆರೆಮನೆಯವನ ಬ್ಯಾಗ್ ನಲ್ಲಿ ಮೃತದೇಹ ಪತ್ತೆ

(ನ್ಯೂಸ್ ಕಡಬ)newskadaba.com ನೋಯ್ಡಾ, ಏ.10. ಎರಡು ವರ್ಷದ ಬಾಲಕಿಯ ನಾಪತ್ತೆಯಾಗಿದ್ದು, ಇದೀಗ ಆಕೆಯ ಶವ ನೆರೆಮನೆಯ ಬ್ಯಾಗಿನಲ್ಲಿ ಪತ್ತೆಯಾಗಿರುವ ಘಟನೆ ನೋಯ್ಡಾದಲ್ಲಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಸೂರಜ್ಪುರ ಪೊಲೀಸ್ ಠಾಣಾ ವ್ಯಾಪ್ತಿಯ ದೇವ್ಲಾ ಗ್ರಾಮದ ಬಾಡಿಗೆ ಮನೆಯಿಂದ ಬಾಲಕಿ ನಾಪತ್ತೆಯಾಗಿದ್ದು, ಅದಾದ ಎರಡು ದಿನಗಳ ನಂತರ ಶವ ಪತ್ತೆಯಾಗಿದೆ.

ಎರಡು ವರ್ಷದ ಬಾಲಕಿ ನಾಪತ್ತೆ ➤ ನೆರೆಮನೆಯವನ ಬ್ಯಾಗ್ ನಲ್ಲಿ ಮೃತದೇಹ ಪತ್ತೆ Read More »

ರಾಷ್ಟ್ರೀಯ ನ್ಯೂಸ್
Scroll to Top