News Kadaba

ಬಂಟ್ವಾಳ: KSRTC ಬಸ್ ಮತ್ತು ಬೈಕ್ ಢಿಕ್ಕಿ ➤ ಬೈಕ್ ಸವಾರ ಸ್ಥಳದಲ್ಲೇ ಮೃತ್ಯು

(ನ್ಯೂಸ್ ಕಡಬ)newskadaba.com ಬಂಟ್ವಾಳ, ಏ.13. KSRTC ಬಸ್ ಬೈಕ್ ಗೆ ಢಿಕ್ಕಿಯಾದ ಪರಿಣಾಮ ಬೈಕ್ ಸವಾರ ಮೃತಪಟ್ಟ ಘಟನೆ ಬಂಟ್ವಾಳ ಸಮೀಪದ ಜಕ್ರಿಬೆಟ್ಟು ಎಂಬಲ್ಲಿ ನಡೆದಿದೆ. ಸರಪಾಡಿ ನಿವಾಸಿ ಅವಿವಾಹಿತ ಯುವಕ ಸೇಸಪ್ಪ ಯಾನೆ ಶ್ರೇಯಸ್ (30) ಮೃತಪಟ್ಟಿದ್ದಾನೆ. ಖಾಸಗಿ ಕಂಪೆನಿಯೊಂದರಲ್ಲಿ ಚಾಲಕ ವೃತ್ತಿ ಮಾಡುತ್ತಿದ್ದ ಬಡಕುಟುಂಬದ ಯುವಕನಾಗಿದ್ದು, ವೃತ್ತಿ ಮುಗಿಸಿ ಮನೆಗೆ ವಾಪಾಸು ಬೈಕಿನಲ್ಲಿ ಹೋಗುವ ವೇಳೆ ಅಪಘಾತ ಸಂಭವಿಸಿದೆ. ಬಿ.ಸಿರೋಡು ಕಡೆಯಿಂದ ಧರ್ಮಸ್ಥಳ ಹೆದ್ದಾರಿಯಲ್ಲಿ ಶ್ರೇಯಸ್ ಸರಪಾಡಿ ಮನೆಗೆ ಬೈಕಿನಲ್ಲಿ ಹೋಗುತ್ತಿದ್ದ ವೇಳೆ ಧರ್ಮಸ್ಥಳ […]

ಬಂಟ್ವಾಳ: KSRTC ಬಸ್ ಮತ್ತು ಬೈಕ್ ಢಿಕ್ಕಿ ➤ ಬೈಕ್ ಸವಾರ ಸ್ಥಳದಲ್ಲೇ ಮೃತ್ಯು Read More »

ಕರಾವಳಿ, ಕ್ರೈಮ್ ನ್ಯೂಸ್

ಕಾಸರಗೋಡು: ಕಣಜದ ಹುಳು ದಾಳಿ ➤ ಕಾರ್ಮಿಕ ಮೃತ್ಯು

(ನ್ಯೂಸ್ ಕಡಬ)newskadaba.com ಕಾಸರಗೋಡು, ಏ.13. ಕಣಜದ ಹುಳುಗಳ ದಾಳಿಯಿಂದ ಪೈಂಟಿಂಗ್ ಕಾರ್ಮಿಕರೋರ್ವರು ಮೃತಪಟ್ಟ ದಾರುಣ ಘಟನೆ ಚಿತ್ತಾರಿಕಾಲ್ ನಲ್ಲಿ ನಡೆದಿದೆ. ಚಿತ್ತಾರಿಕಾಲ್ ಕಂಬಲ್ಲೂರಿನ ಬಿಟೋ ಜೋಸೆಫ್ (35) ಮೃತಪಟ್ಟವರು. ಸಂಬಂಧಿಕ ರೋರ್ವರ ಮನೆಯಲ್ಲಿ ಈ ಘಟನೆ ನಡೆದಿದೆ. ಪೈಂಟಿಂಗ್ ಕೆಲಸದ ಸಂದರ್ಭದಲ್ಲಿ ಜೋಸೆ ಫ್ ರವರ ಮೇಲೆ ಕಣಜದ ಹುಳುಗಳು ದಾಳಿ ನಡೆಸಿದ್ದು, ಮನೆಯವರು ಹಾಗೂ ಪರಿಸರವಾಸಿಗಳು ಪರಿಯಾರಂ ನ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ತಲಪಿಸಿದರೂ ಜೀವ ಉಳಿಸಲಾಗಲಿಲ್ಲ.

ಕಾಸರಗೋಡು: ಕಣಜದ ಹುಳು ದಾಳಿ ➤ ಕಾರ್ಮಿಕ ಮೃತ್ಯು Read More »

ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಮಂಗಳೂರು: ನಂಬರ್ ಪ್ಲೇಟ್ ನಿಯಮ ಉಲ್ಲಂಘನೆ ವಿರುದ್ದ ಕಾರ್ಯಾಚರಣೆ ➤ 87 ಪ್ರಕರಣ ದಾಖಲು

(ನ್ಯೂಸ್ ಕಡಬ)newskadaba.com ಮಂಗಳೂರು, ಏ.13. ನಂಬರ್ ಪ್ಲೇಟ್ ಅಳವಡಿಸದ, ನಂಬರ್ ಪ್ಲೇಟ್ ನಿಯಮ ಮೀರಿದ ವಾಹನಗಳ ವಿರುದ್ದ ನಗರದಾದ್ಯಂತ ಮಂಗಳೂರು ಪೊಲೀಸರು ವಿಶೇಷ ಕಾರ್ಯಾಚರಣೆ ಆರಂಭಿಸಿದ್ದಾರೆ. ಕಾರ್ಯಾಚರಣೆ ವೇಳೆ ಸಂಚಾರ ನಿಯಮಗಳನ್ನು ಉಲ್ಲಂಘಿಸಿದ ಪ್ಯಾನ್ಸಿ ನಮ್ಬರ್ ಪ್ಲೇಟ್, ಅಸಮರ್ಪಕ ನಂಬರ್ ಪ್ಲೇಟ್ ಗಳನ್ನು ವಶಪಡಿಸಿಕೊಳ್ಳಲಾಗಿದೆ. ಸುಮಾರು 87 ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಮಂಗಳೂರು ಪೊಲೀಸ್ ಆಯುಕ್ತ ಕುಲದೀಪ್ ಜೈನ್ ತಿಳಿಸಿದ್ದಾರೆ.  

ಮಂಗಳೂರು: ನಂಬರ್ ಪ್ಲೇಟ್ ನಿಯಮ ಉಲ್ಲಂಘನೆ ವಿರುದ್ದ ಕಾರ್ಯಾಚರಣೆ ➤ 87 ಪ್ರಕರಣ ದಾಖಲು Read More »

ಕರಾವಳಿ

ಶಾಲಾ ಬಾಲಕ ನಾಪತ್ತೆ ! ➤ ದೂರು ದಾಖಲು

(ನ್ಯೂಸ್ ಕಡಬ)newskadaba.com ಕೊಲ್ಲೂರು, ಏ.13. ಕೊಲ್ಲೂರು ಶ್ರೀ ಮೂಕಾಂಬಿಕಾ ಪ್ರೌಢಶಾಲೆಯಲ್ಲಿ 9 ನೇ ತರಗತಿ ವ್ಯಾಸಂಗ ಮಾಡುತ್ತಿದ್ದ ಬೈಂದೂರು ತಾಲೂಕು ಕೊಲ್ಲೂರು ಗ್ರಾಮದ ಸಲಗೇರಿ ಕಂಟಗದ್ದೆ ನಿವಾಸಿ ದೇವದತ್ತ (16) ಎಂಬ ಬಾಲಕನು ಮನೆಯಿಂದ ಹೊರಟು ಹೋದವನು ವಾಪಸು ಬಾರದೇ ನಾಪತ್ತೆಯಾದ ಬಗ್ಗೆ ಕೊಲ್ಲೂರು ಠಾಣೆಯಲ್ಲಿ ದೂರು ದಾಖಲಾಗಿದೆ ಎಂದು ವರದಿ ತಿಳಿಸಿದೆ. 4 ಅಡಿ 5 ಇಂಚು ಎತ್ತರ, ಕೋಲು ಮುಖ, ಸಾಧಾರಣ ಶರೀರ, ಗೋಧಿ ಮೈಬಣ್ಣ ಹೊಂದಿದ್ದು, ಕನ್ನಡ ಹಾಗೂ ಮಲೆಯಾಳಿ ಭಾಷೆ ಮಾತನಾಡುತ್ತಾರೆ.

ಶಾಲಾ ಬಾಲಕ ನಾಪತ್ತೆ ! ➤ ದೂರು ದಾಖಲು Read More »

ಕರ್ನಾಟಕ

ಪುತ್ತೂರು: ವಿವಾಹಿತ ಮಹಿಳೆ ಆತ್ಮಹತ್ಯೆ

(ನ್ಯೂಸ್ ಕಡಬ)newskadaba.com ಪುತ್ತೂರು, ಏ.12. ವಿವಾಹಿತ ಮಹಿಳೆ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಟ್ಟಂಪಾಡಿ ಗುಮ್ಮಟಗದ್ದೆ ಎಂಬಲ್ಲಿ ವರದಿಯಾಗಿದೆ. ಗುಮ್ಮಟಗದ್ದೆಯ ನಿವಾಸಿ ಬಾಲಕೃಷ್ಣ ಎಂಬವರ ಪುತ್ರಿ ಪುಣ್ಯಶ್ರೀ(32)ಮೃತ ಯುವತಿ. ಪುಣ್ಯಶ್ರೀಯನ್ನು ಬೆಳ್ತಂಗಡಿ ತಾಲೂಕಿನ ಪುದುವೆಟ್ಟು ಗ್ರಾಮದ ಉದ್ದದಪಳಿಕೆ ನಿವಾಸಿ ಪುರುಶೋತ್ತಮ ಎಂಬವರಿಗೆ ವಿವಾಹ ಮಾಡಿಕೊಡಲಾಗಿತ್ತು. ಪುಣ್ಯಶ್ರೀ ಕಳೆದ ಕೆಲ ದಿನಗಳ ಹಿಂದೆ ಬೆಳ್ತಂಗಡಿಯ ಪತಿಯ ಮನೆಯಿಂದ ತನ್ನ ತವರು ಮನೆಯಾದ ಗುಮ್ಮಟಗದ್ದೆಗೆ ಆಗಮಿಸಿದ್ದರು ಎನ್ನಲಾಗಿದೆ. ಎ.10ರಂದು ತನ್ನ ಪತಿಗೆ ವೀಡಿಯೋ ಕಾಲ್ ಮಾಡಿ ಮಾತನಾಡಿದ್ದರು. ಅಲ್ಲದೆ

ಪುತ್ತೂರು: ವಿವಾಹಿತ ಮಹಿಳೆ ಆತ್ಮಹತ್ಯೆ Read More »

ಕರಾವಳಿ

ಅಡುಗೆ ಅನಿಲ ಸ್ಫೋಟ..! ➤ ಇಬ್ಬರು ಮೃತ್ಯು

(ನ್ಯೂಸ್ ಕಡಬ)newskadaba.com  ತೆಲಂಗಾಣ, ಏ.12.  ಖಮ್ಮಂ ಜಿಲ್ಲೆಯಲ್ಲಿ ಬಿಆರ್‌ಎಸ್ ಸಭೆಯ ವೇಳೆ ಪಟಾಕಿ ಸಿಡಿಸಿದ್ದರಿಂದ ಬೆಂಕಿ ಹೊತ್ತಿಕೊಂಡು ಅಡುಗೆ ಅನಿಲ ಸಿಲಿಂಡರ್ ಸ್ಫೋಟಗೊಂಡು ಇಬ್ಬರು ಸಾವನ್ನಪ್ಪಿದ್ದು, ಕೆಲವರು ಗಾಯಗೊಂಡಿದ್ದಾರೆ. ವೈರಾ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕಾರೇಪಲ್ಲಿ ಮಂಡಲದ ಚೀಮಲಪಾಡು ಗ್ರಾಮದಲ್ಲಿ ಈ ಘಟನೆ ನಡೆದಿದೆ.  

ಅಡುಗೆ ಅನಿಲ ಸ್ಫೋಟ..! ➤ ಇಬ್ಬರು ಮೃತ್ಯು Read More »

ಕ್ರೈಮ್ ನ್ಯೂಸ್

ಪುರುಷರ ‘IPL 2023 ಪಂದ್ಯಾವಳಿ’ಯ ವೇಳಾಪಟ್ಟಿ ಪ್ರಕಟ

(ನ್ಯೂಸ್ ಕಡಬ)newskadaba.com  ನವೆದಹಲಿ, ಏ.12. ಬಹುನಿರೀಕ್ಷಿತ ಇಂಡಿಯನ್ ಪ್ರೀಮಿಯರ್ ಲೀಗ್ 2023ರ ವೇಳಾಪಟ್ಟಿ ಇಂದು ಪ್ರಕಟಗೊಂಡಿದೆ. ಮಾರ್ಚ್ 31 ರಿಂದ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಪಂದ್ಯಾವಳಿಗಳು ನಡೆಯಲಿದ್ದು, ಗುಜರಾತ್ ಟೈಟಾನ್ಸ್ ಆರಂಭಿಕ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಅನ್ನು ಎದುರಿಸಲಿದೆ ಎಂಬ ಮಾಹಿತಿ ಲಭ್ಯವಾಗಿದೆ. ಪಂದ್ಯಾವಳಿಯ 16 ನೇ ಆವೃತ್ತಿಯು ಮಾರ್ಚ್ 31 ರಂದು ಪ್ರಾರಂಭವಾಗುತ್ತದೆ ಮತ್ತು ಕೊನೆಯ ಲೀಗ್ ಪಂದ್ಯವು ಮೇ 21 ರಂದು ನಡೆಯಲಿದೆ. 18 ಡಬಲ್ ಹೆಡರ್ ಸೇರಿದಂತೆ ಒಟ್ಟು 70 ಲೀಗ್

ಪುರುಷರ ‘IPL 2023 ಪಂದ್ಯಾವಳಿ’ಯ ವೇಳಾಪಟ್ಟಿ ಪ್ರಕಟ Read More »

ರಾಷ್ಟ್ರೀಯ ನ್ಯೂಸ್

ಟೆಸ್ಟ್ ಪಂದ್ಯದಲ್ಲಿ ‘ಶತಕ’ ಸಿಡಿಸಿದ ‘ವಿರಾಟ್ ಕೊಹ್ಲಿ’

(ನ್ಯೂಸ್ ಕಡಬ)newskadaba.com  ಅಹಮದಾಬಾದ್, ಏ.12. ಅಹಮದಾಬಾದ್‌ ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯಾ ವಿರುದ್ಧದ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಭಾರತದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಶತಕ ಭಾರಿಸಿದ್ದಾರೆ. ಮೂರು ವರ್ಷಗಳ ಬಳಿಕ ಕೋಹ್ಲಿ 100 ರನ್ ಗಳನ್ನು ಸಿಡಿಸಿದ್ದಾರೆ ಎಂದು ವರದಿ ತಿಳಿಸಿದೆ. ಕಳೆದ ವರ್ಷ ಏಷ್ಯಾ ಕಪ್ 2022ರಲ್ಲಿ ವಿರಾಟ್ ಕೊಹ್ಲಿ ತಮ್ಮ ಮೊದಲ ಟಿ20 ಶತಕ ದಾಖಲಿಸಿದ್ದರು. ಇದೀಗ ಟೆಸ್ಟ್ ಕ್ರಿಕೆಟ್‌ನಲ್ಲಿ ವಿರಾಟ್ ಕೊಹ್ಲಿ 3 ವರ್ಷಗಳ ನಂತರ 100 ರನ್

ಟೆಸ್ಟ್ ಪಂದ್ಯದಲ್ಲಿ ‘ಶತಕ’ ಸಿಡಿಸಿದ ‘ವಿರಾಟ್ ಕೊಹ್ಲಿ’ Read More »

ರಾಷ್ಟ್ರೀಯ ನ್ಯೂಸ್

ಉಳ್ಳಾಲ: ಎಲ್ಲರೂ ಒಗ್ಗಟ್ಟಿನಿಂದ ಪಕ್ಷಕ್ಕಾಗಿ ದುಡಿಯಲಿದ್ದೇವೆ ➤ ಅಭ್ಯರ್ಥಿ ಸತೀಶ್ ಕುಂಪಲ

(ನ್ಯೂಸ್ ಕಡಬ)newskadaba.com  ಉಳ್ಳಾಲ, ಏ.12. ಪಕ್ಷದೊಳಗೆ ಯಾವುದೇ ಭಿನ್ನಾಭಿಪ್ರಾಯವಿಲ್ಲ, ಪಕ್ಷದ ಆದೇಶದಂತೆ ಚುನಾವಣೆಗೆ ಸ್ಪರ್ಧಿಸುತ್ತಿದ್ದರೂ ನಾನೊಬ್ಬ ಪಕ್ಷದ ಸಾಮಾನ್ಯ ಕಾರ್ಯಕರ್ತ, ಪಕ್ಷಕ್ಕಾಗಿ ದುಡಿಯುವ ಕಾರ್ಯವನ್ನು ಹಿಂದಿನಿಂದ ಮಾಡುತ್ತಾ ಬಂದಿದ್ದೇವೆ, ಅಭ್ಯರ್ಥಿಯಾಗಲು ಅವಕಾಶ ಕಲ್ಪಿಸಿಕೊಟ್ಟ ರಾಷ್ಟ್ರೀಯ ಅಧ್ಯಕ್ಷರು, ರಾಜ್ಯಾಧ್ಯಕ್ಷರು ಹಾಗೂ ಮುಖ್ಯಮಂತ್ರಿಗಳಿಗೆ ಕೃತಜ್ಞತೆಗಳನ್ನು ಸಲ್ಲಿಸುತ್ತಿದ್ದೇನೆ ಎಂದು ಸತೀಶ್ ಕುಂಪಲ ಹೇಳಿದ್ದಾರೆ. ಉಳ್ಳಾಲ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಘೋಷಣೆಯಾದ ಬಳಿಕ ಮಾತನಾಡಿದ ಅವರು ಪಕ್ಷದ ಸಿದ್ಧಾಂತಕ್ಕೆ ಬದ್ಧರಾಗಿ ಎಲ್ಲರೂ ಒಗ್ಗಟ್ಟಿನೊಂದಿಗೆ ದುಡಿಯುವ ಪಣ ತೊಟ್ಟಿದ್ದೇವೆ. ಕುಡಿಯುವ ನೀರಿನ ಸಮಸ್ಯೆಯಿಂದ

ಉಳ್ಳಾಲ: ಎಲ್ಲರೂ ಒಗ್ಗಟ್ಟಿನಿಂದ ಪಕ್ಷಕ್ಕಾಗಿ ದುಡಿಯಲಿದ್ದೇವೆ ➤ ಅಭ್ಯರ್ಥಿ ಸತೀಶ್ ಕುಂಪಲ Read More »

ಕರಾವಳಿ

‘ಬಹುಮತದೊಂದಿಗೆ ಅಧಿಕಾರ ಬರುವ ವಿಶ್ವಾಸ ಇದೆ’..! ➤ ಸಿಎಂ ಬೊಮ್ಮಾಯಿ

(ನ್ಯೂಸ್ ಕಡಬ)newskadaba.com ಬೆಂಗಳೂರು, ಏ.12. ರಾಜ್ಯದ 189 ಸ್ಥಳಗಳಿಗೆ ಅಭ್ಯರ್ಥಿಗಳ ಘೋಷಣೆಯಾಗಿದ್ದು, ಎಲ್ಲರೂ ಬಹುಮತದಿಂದ ಆಯ್ಕೆಯಾಗಿ ಬಿಜೆಪಿ ಅಧಿಕಾರಕ್ಕೆ ಬರುವ ವಿಶ್ವಾಸವಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಅವರು ಮಾಧ್ಯಮದವರೊಂದಿಗೆ ಮಾತನಾಡಿದರು. ಬಹುತೇಕ ಎಲ್ಲ ಕ್ಷೇತ್ರಗಳಲ್ಲಿ ಒಮ್ಮತದ ಸ್ವಾಗತ ದೊರೆತಿದೆ. ಕೆಲವು ಅಸಮಧಾನಿತರ ಜೊತೆ ಮಾತಾಡುವ ಕೆಲಸ ನಡೆದಿದೆ. ಲಕ್ಷ್ಮಣ ಸವದಿ ಅವರೊಂದಿಗೆ ಮಾತಾಡಿದ್ದು, ಯಾವುದೇ ದುಡುಕಿನ ನಿರ್ಧಾರ ಕೈಗೊಳ್ಳಬಾರದು ಎಂದು ತಿಳಿಸಿರುವುದಾಗಿ ಹೇಳಿದರು.

‘ಬಹುಮತದೊಂದಿಗೆ ಅಧಿಕಾರ ಬರುವ ವಿಶ್ವಾಸ ಇದೆ’..! ➤ ಸಿಎಂ ಬೊಮ್ಮಾಯಿ Read More »

ಕರ್ನಾಟಕ
Scroll to Top