News Kadaba

ರಾಜ್ಯಕ್ಕೆ ಮೇ 4 ರಂದು ಮೋದಿ, ಯೋಗಿ ಆದಿತ್ಯನಾಥ್ ಎಂಟ್ರಿ..!

(ನ್ಯೂಸ್ ಕಡಬ)Newskadaba.com ಉಡುಪಿ,ಏ.18 ಕರ್ನಾಟಕ ವಿಧಾನಸಭಾ ಚುನಾವಣಾ ಕಣ ರಂಗೇರುತ್ತಿದ್ದು ಪ್ರಧಾನಿ ನರೇಂದ್ರ ಮೋದಿ ಅಖಾಡಕ್ಕಿಳಿಯಲಿದ್ದಾರೆ.ಬಿಜೆಪಿ ಕಾರ್ಯಕರ್ತರ ಸಮಾವೇಶದಲ್ಲಿ ಪಾಲ್ಗೊಳ್ಳಲು ಪ್ರಧಾನಿ ನರೇಂದ್ರ ಮೋದಿ ಮೇ 4 ರಂದು ಉಡುಪಿಗೆ ಆಗಮಿಸುವ ಸಾಧ್ಯತೆ ಇದೆ ಎಂದು ಪಕ್ಷದ ಮೂಲಗಳು ತಿಳಿಸಿವೆ. ಕರ್ನಾಟಕದಲ್ಲಿ ಮೇ 10 ರಂದು ನಡೆಯಲಿರುವ ವಿಧಾನಸಭಾ ಚುನಾವಣೆಗೆ ಮುನ್ನ ಪಕ್ಷದ ಕಾರ್ಯಕರ್ತರ ಸಮಾವೇಶದಲ್ಲಿ ಪ್ರಧಾನಿ ಪಾಲ್ಗೊಳ್ಳಲಿದ್ದಾರೆ ಎಂದು ಉಡುಪಿ ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ತಿಳಿಸಿದ್ದಾರೆ.    

ರಾಜ್ಯಕ್ಕೆ ಮೇ 4 ರಂದು ಮೋದಿ, ಯೋಗಿ ಆದಿತ್ಯನಾಥ್ ಎಂಟ್ರಿ..! Read More »

ಕರ್ನಾಟಕ

ಮಂಗಳೂರು: ದ.ಕ ಜಿಲೆಯಲ್ಲಿ 15 ಅಭ್ಯರ್ಥಿಗಳಿಂದ ನಾಮಪತ್ರ ಸಲ್ಲಿಕೆ

(ನ್ಯೂಸ್ ಕಡಬ)newskadaba.com ಮಂಗಳೂರು, ಏ.18. ಎಂಟು ವಿಧಾನಸಭಾ ಕ್ಷೇತ್ರಗಳಲ್ಲಿ ಮೂರನೇ ದಿನವಾದ 14 ಪುರುಷ ಹಾಗೂ ಮಹಿಳಾ ಅಭ್ಯರ್ಥಿಯೊಬ್ಬರು ಸೇರಿದಂತೆ 15 ಅಭ್ಯರ್ಥಿಗಳಿಂದ 23 ನಾಮಪತ್ರಗಳು ಸಲ್ಲಿಕೆಯಾಗಿದ್ದು, ಜಿಲ್ಲೆಯಲ್ಲಿ ಈವರೆಗೆ ಒಟ್ಟು 29 ನಾಮಪತ್ರಗಳು ಸಲ್ಲಿಕೆಯಾಗಿವೆ. ಬೆಳ್ತಂಗಡಿ ಕ್ಷೇತ್ರದಿಂದ ಸರ್ವೋದಯ ಕರ್ನಾಟಕ ಪಕ್ಷದ ಅಭ್ಯರ್ಥಿಯಾಗಿ ಆದಿತ್ಯ ನಾರಾಯಣ ಕೊಲ್ಲಾಜೆ, ಭಾರತೀಯ ಜನತಾ ಪಕ್ಷದಿಂದ ಹರೀಶ್ ಪೂಂಜಾ ಎರಡು ನಾಮಪತ್ರಗಳು, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ನಿಂದ ರಕ್ಷಿತ್ ಶಿವರಾಂ ಎರಡು ನಾಮಪತ್ರಗಳು, ಮೂಡುಬಿದರೆ ವಿಧಾನಸಭಾ ಕ್ಷೇತ್ರದಿಂದ ಆಮ್ ಆದ್ಮಿ

ಮಂಗಳೂರು: ದ.ಕ ಜಿಲೆಯಲ್ಲಿ 15 ಅಭ್ಯರ್ಥಿಗಳಿಂದ ನಾಮಪತ್ರ ಸಲ್ಲಿಕೆ Read More »

ಕರಾವಳಿ

ಬಿಸಿಲಿನ ಝಳ ಹಾಗೂ ನಿರ್ಜಲೀಕರಣದಿಂದ 13 ಮಂದಿ ಸಾವು..!   ➤ಇನ್ನು ಕೆಲವರು ಆಸ್ಪತ್ರೆಗೆ ದಾಖಲು!

(ನ್ಯೂಸ್ ಕಡಬ)Newskadaba.com ಮಹಾರಾಷ್ಟ್ರ,ಏ.18  ‘ಸಮಾಜ ಸುಧಾರಕ ಅಪ್ಪಾಸಾಹೇಬ್‌ ಧರ್ಮಾಧಿಕಾರಿ ಅವರಿಗೆ ‘ಮಹಾರಾಷ್ಟ್ರ ಭೂಷಣ’ ‍ಪ್ರಶಸ್ತಿ ಪ್ರದಾನ ಮಾಡಲು ಮಹಾರಾಷ್ಟ್ರ ಸರ್ಕಾರ ಆಯೋಜಿಸಿದ್ದ ಸಮಾರಂಭದ ವೇಳೆ ಬಿಸಿಲಿನ ಝಳ ಹಾಗೂ ನಿರ್ಜಲೀಕರಣದಿಂದ ಬಳಲಿ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದವರ ಪೈಕಿ ಮತ್ತೆ ಇಬ್ಬರು ಅಸುನೀಗಿದ್ದಾರೆ. ಇದರೊಂದಿಗೆ ಮೃತರ ಸಂಖ್ಯೆ 13ಕ್ಕೆ ಏರಿಕೆಯಾಗಿದೆ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಮಹಾರಾಷ್ಟ್ರದ ರಾಯಗಢ ಜಿಲ್ಲೆಯ ಖಾರ್‌ಘರ್‌ ಪ್ರದೇಶದಲ್ಲಿ ನಡೆದಿದ್ದ ಸಮಾರಂಭದಲ್ಲಿ ಲಕ್ಷಾಂತರ ಮಂದಿ ಪಾಲ್ಗೊಂಡಿದ್ದರು ಈ ವೇಳೆ 11 ಜನ ಮೃತಪಟ್ಟಿದ್ದರು.’ಕಾಮೋಟೆಯಲ್ಲಿರುವ ಎಂಜಿಎಂ ಆಸ್ಪತ್ರೆಯಲ್ಲಿ ಎಂಟು

ಬಿಸಿಲಿನ ಝಳ ಹಾಗೂ ನಿರ್ಜಲೀಕರಣದಿಂದ 13 ಮಂದಿ ಸಾವು..!   ➤ಇನ್ನು ಕೆಲವರು ಆಸ್ಪತ್ರೆಗೆ ದಾಖಲು! Read More »

ರಾಷ್ಟ್ರೀಯ ನ್ಯೂಸ್

ಬಂಟ್ವಾಳ: ಎರಡು ಕಾರುಗಳ ನಡುವೆ ಮುಖಾಮುಖಿ ಢಿಕ್ಕಿ

(ನ್ಯೂಸ್ ಕಡಬ)newskadaba.com ಬಂಟ್ವಾಳ, ಏ.18. ಎರಡು ಕಾರುಗಳ ಮಧ್ಯೆ ಮುಖಾಮುಖಿ ಢಿಕ್ಕಿಯಾದ ಘಟನೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಲೊರೆಟ್ಟೋ ಎಂಬಲ್ಲಿ ನಡೆದಿದೆ. ಬಿ.ಸಿ ರೋಡಿಗೆ ಬರುತ್ತಿದ್ದ ಇ.ವಿ.ಕಾರು ಹಾಗೂ ಅಂಬಾಸಿಡರ್ ಕಾರುಗಳ ನಡುವೆ ಮುಖಾಮುಖಿ ಢಿಕ್ಕಿಯಾಗಿದೆ. ಇನ್ನು ಢಿಕ್ಕಿಯ ರಭಸಕ್ಕೆ ಎರಡು ಕಾರುಗಳ ಮುಂಭಾಗ ಜಖಂಗೊಂಡಿದೆ. ಆದರೆ ಅದೃಷ್ಟವಶಾತ್ ಕಾರಿನಲ್ಲಿದ್ದ ಪ್ರಯಾಣಿಕರು ಯಾವುದೇ ಗಾಯವಿಲ್ಲದೆ ಪಾರಾಗಿದ್ದಾರೆ.  

ಬಂಟ್ವಾಳ: ಎರಡು ಕಾರುಗಳ ನಡುವೆ ಮುಖಾಮುಖಿ ಢಿಕ್ಕಿ Read More »

ಕರಾವಳಿ

ಉಡುಪಿ: KSRTC ಬಸ್ ಢಿಕ್ಕಿ   ➤ ಪಾದಚಾರಿ ಮೃತ್ಯು

(ನ್ಯೂಸ್ ಕಡಬ)newskadaba.com ಉಡುಪಿ, ಏ.18. ನಗರದ ತ್ರೀವೇಣಿ ಸರ್ಕಲ್ ಬಳಿ KSRTC ಬಸ್ ಢಿಕ್ಕಿ ಹೊಡೆದ ಪರಿಣಾಮ ರಸ್ತೆ ಬದಿ ನಿಂತಿದ್ದ ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ನಡೆದಿದೆ. ಮೃತರನ್ನು ರಾಜಶೇಖರ ಪೂಜಾರಿ (68) ಎಂದು ಗುರುತಿಸಲಾಗಿದೆ. ರಾಜಶೇಖರ ಪೂಜಾರಿ ಅವರು ರೂಮಿನಿಂದ ತ್ರಿವೇಣಿ ಹೊಟೇಲಿಗೆ ಕೆಲಸ ಬರುತ್ತಿರುವಾಗ ಉಡುಪಿ ಕೆಎಂ ಮಾರ್ಗ ಕಡೆಯಿಂದ ಉಡುಪಿ ಬಸ್ ನಿಲ್ದಾಣದ ಕಡೆಗೆ ಹೋಗುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್ ಢಿಕ್ಕಿ ಹೊಡೆಯಿತ್ತೆನ್ನಲಾಗಿದೆ. ಈ ಬಗ್ಗೆ ಉಡುಪಿ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಉಡುಪಿ: KSRTC ಬಸ್ ಢಿಕ್ಕಿ   ➤ ಪಾದಚಾರಿ ಮೃತ್ಯು Read More »

ಕರಾವಳಿ

ಗೂಂಡಾ ಕಾರ್ಯಕರ್ತರಿಂದ  ಅನಿಲ್‌ ಪಿ.ಮೆಣಸಿನಕಾಯಿ ಕಾರಿನ ಗಾಜಿಗೆ ಕಲ್ಲು ತೂರಾಟ.!

(ನ್ಯೂಸ್ ಕಡಬ)Newskadaba.com ಗದಗ,ಏ.18 ನಾಮಪತ್ರ ಸಲ್ಲಿಸಿ ಹೊರಬರುವ ಸಂದರ್ಭದಲ್ಲಿ ಕಾಂಗ್ರೆಸ್‌ನ ಕೆಲವು ಗೂಂಡಾ ಕಾರ್ಯಕರ್ತರು ನನ್ನ ಕಾರಿನ ಗಾಜಿಗೆ ಕಲ್ಲು ಎಸೆದರು. ಚಪ್ಪಲಿ ತೂರಿದರು. ಕೆಲವರು ಕುಡಿಯುತ್ತಿದ್ದ ಮಜ್ಜಿಗೆಯನ್ನು ಕಾರಿನ ಮೇಲೆ ಉಗುಳಿದರು’ ಎಂದು ಗದಗ ವಿಧಾನಸಭಾ ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅನಿಲ್‌ ಪಿ.ಮೆಣಸಿನಕಾಯಿ ಆರೋಪ ಮಾಡಿದರು. ಬಿಜೆಪಿ ಮುಖಂಡ ರಾಜು ಕುರಡಗಿ ಮಾತನಾಡಿ, ‘ನಾಮಪತ್ರ ಸಲ್ಲಿಸಲು ಹೋದಾಗ ಹಲ್ಲೆ ನಡೆಸಿದ್ದಾರೆ ಅಂದರೆ, ಕಾಂಗ್ರೆಸ್‌ ನಾಯಕರಿಗೆ ಸೋಲಿನ ಭೀತಿ ಕಾಡುತ್ತಿದೆ. ಗೂಂಡಾಗಿರಿ ರಾಜಕೀಯಕ್ಕೆ ಯಾರೂ ಹೆದರುವುದಿಲ್ಲ. ಎಲ್ಲರೂ

ಗೂಂಡಾ ಕಾರ್ಯಕರ್ತರಿಂದ  ಅನಿಲ್‌ ಪಿ.ಮೆಣಸಿನಕಾಯಿ ಕಾರಿನ ಗಾಜಿಗೆ ಕಲ್ಲು ತೂರಾಟ.! Read More »

ಕರ್ನಾಟಕ
Death, deadbody, Waterfall

ಮಂಗಳೂರು: ಫೈಬರ್‌ ಶೀಟ್‌ ಬದಲಿಸುವ ವೇಳೆ ಬಿದ್ದು ಕಾರ್ಮಿಕ ಮೃತ್ಯು

(ನ್ಯೂಸ್ ಕಡಬ)newskadaba.com ಮಂಗಳೂರು, ಏ.18. ಅಪಾರ್ಟ್‌ಮೆಂಟ್‌ ನಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರೊಬ್ಬರು ಕೆಳಕ್ಕೆ ಬಿದ್ದು ಮೃತಪಟ್ಟ ಘಟನೆ ದೇರೆಬೈಲ್‌ ಕೊಂಚಾಡಿಯಲ್ಲಿ ಸಂಭವಿಸಿದೆ. ಮೃತರನ್ನು ಜಿತೇಂದ್ರ (44) ಎಂದು ಗುರುತಿಸಲಾಗಿದೆ. ಅವರು ನೀರುಮಾರ್ಗದ ಗುತ್ತಿಗೆದಾರ ಅವೀನ್‌ ಅಮೀನ್‌ ಅವರೊಂದಿಗೆ ಹಳೆಯ ಫೈಬರ್‌ಶೀಟ್‌ ಬದಲಿ ಮಾಡುವ, ಕಬ್ಬಿಣದ ಶೀಟ್‌ಗಳಿಗೆ ಸ್ಕ್ರೂ ಅಳವಡಿಸುವ ಕೆಲಸ ಮಾಡುತ್ತಿದ್ದರು.

ಮಂಗಳೂರು: ಫೈಬರ್‌ ಶೀಟ್‌ ಬದಲಿಸುವ ವೇಳೆ ಬಿದ್ದು ಕಾರ್ಮಿಕ ಮೃತ್ಯು Read More »

ಕರಾವಳಿ

ಕೇರಳದಲ್ಲಿ ನೀರಿಗಾಗಿ ಪ್ರತ್ಯೇಕ ಬಜೆಟ್

(ನ್ಯೂಸ್ ಕಡಬ)newskadaba.com ತಿರುವನಂತಪುರಂ, ಏ.18. ಹೇರಳವಾದ ನದಿ, ತೊರೆ, ಹಿನ್ನೀರು ಹಾಗೂ ಉತ್ತಮ ಪ್ರಮಾಣದ ಮಳೆಯು ಕೇರಳವನ್ನು ಹಚ್ಚ ಹಸಿರನ್ನಾಗಿರಿಸಿದರೂ, ಈ ರಾಜ್ಯದ ಅನೇಕ ಭಾಗಗಳಲ್ಲಿ ನೀರಿನ ಕೊರತೆಯನ್ನು ಎದುರಿಸುತ್ತಿದೆ. ಇದಕ್ಕಾಗಿಯೇ ದೇಶದಲ್ಲೇ ಪ್ರಥಮ ಬಾರಿಗೆ ಕೇರಳದಲ್ಲಿ ನೀರಿಗಾಗಿ ಪ್ರತ್ಯೇಕ ಬಜೆಟ್ ಘೋಷಿಸಲಾಗಿದೆ. ರಾಜ್ಯದ 15 ಬ್ಲಾಕ್ ಪಂಚಾಯತ್ ಗಳ 94 ಗ್ರಾಮ ಪಂಚಾಯತ್ ಗಳನ್ನು ಒಳಗೊಂಡ ಮೊದಲ ಹಂತದ ನೀರಿನ ಬಜೆಟ್ ನ ವಿವರಗಳನ್ನು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅನಾವರಣಗೊಳಿಸಿ ಮಾತನಾಡಿದ ಮುಖ್ಯಮಂತ್ರಿ ಪಿಣರಾಯಿ

ಕೇರಳದಲ್ಲಿ ನೀರಿಗಾಗಿ ಪ್ರತ್ಯೇಕ ಬಜೆಟ್ Read More »

ರಾಷ್ಟ್ರೀಯ ನ್ಯೂಸ್

ನಿರೀಕ್ಷೆಗಿಂತ ಹೆಚ್ಚಿನ ಮಟ್ಟದಲ್ಲಿ ‘ನರೇಗಾ’ ಗುರಿ ಸಾಧನೆ ➤ಕಡಬ ತಾಲೂಕಿಗೆ ಗುರಿ ಮೀರಿದ ಹೆಗ್ಗಳಿಕೆ

(ನ್ಯೂಸ್ ಕಡಬ) newskadaba.com. ಕಡಬ, ಏ.17. ಕೇಂದ್ರ ಸರಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದಾದ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಗ್ರಾ.ಪಂ.ಗಳ ಮೂಲಕ ಗ್ರಾಮೀಣ ಭಾಗದ ಜನರ ಕೈಹಿಡಿದಿದೆ ಎನ್ನುವುದಕ್ಕೆ ಕಳೆದ ಮೂರು ವರ್ಷ ಸರಕಾರ ನೀಡಿದ್ದ ಮಾನವ ದಿನಗಳ ಗುರಿಯನ್ನು ಸಾಧಿಸುವ ಮೂಲಕ ಕಡಬ ತಾಲೂಕು ಗುರಿ ಮೀರಿದ ಸಾಧನೆಯನ್ನು ಮಾಡಿರುವುದೇ ಸಾಕ್ಷಿ. ರಾಜ್ಯ ಸರಕಾರ 2022-23 ನೇ ಆರ್ಥಿಕ ವರ್ಷದಲ್ಲಿ ಕಡಬ ತಾಲೂಕಿಗೆ 2,30,509 ಮಾನವ ದಿನ ಸೃಜನೆಯ ಗುರಿಯನ್ನು ನಿಗದಿಪಡಿಸಿತ್ತು.

ನಿರೀಕ್ಷೆಗಿಂತ ಹೆಚ್ಚಿನ ಮಟ್ಟದಲ್ಲಿ ‘ನರೇಗಾ’ ಗುರಿ ಸಾಧನೆ ➤ಕಡಬ ತಾಲೂಕಿಗೆ ಗುರಿ ಮೀರಿದ ಹೆಗ್ಗಳಿಕೆ Read More »

ಕರಾವಳಿ, ಕರ್ನಾಟಕ

ಬಂಟ್ವಾಳ: ನಾಪತ್ತೆಯಾಗಿದ್ದ ವ್ಯಕ್ತಿ ನೇತ್ರಾವತಿ ನದಿಯಲ್ಲಿ ಶವವಾಗಿ ಪತ್ತೆ!

(ನ್ಯೂಸ್ ಕಡಬ) newskadaba.com. ಬಂಟ್ವಾಳ, ಏ.17. ನಾಪತ್ತೆಯಾಗಿದ್ದ ವ್ಯಕ್ತಿ ನೇತ್ರಾವತಿ ನದಿಯಲ್ಲಿ ಶವವಾಗಿ ಪತ್ತೆಯಾದ ಘಟನೆ ನಡೆದಿದೆ. ಸಜೀಪ ಮುನ್ನೂರು ಗ್ರಾಮದ ಕೌಳಿಗೆ ನಿವಾಸಿ ಪರಮೇಶ್ವರ(75) ಎಂಬವರು ಮೃತಪಟ್ಟ ವ್ಯಕ್ತಿ. ಮನೆಯಲ್ಲಿದ್ದ ಉಡುಗೆಯಲ್ಲಿ ವ್ಯಕ್ತಿಯೋರ್ವ ನಾಪತ್ತೆಯಾದ ಘಟನೆಯ ಬಗ್ಗೆ ಬಂಟ್ವಾಳ ನಗರ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಅವರು ಎ.14 ರಂದು ರಾತ್ರಿ ವೇಳೆ ಕೈಯಲ್ಲಿ ಟಾರ್ಚ್ ಹಿಡಿದು ಕೊಂಡು ಮನೆಯಿಂದ ಹೊರಗೆ ಹೋದವರು ಮನೆಗೆ ಬರದೆ ನಾಪತ್ತೆಯಾಗಿದ್ದಾರೆ ಎಂದು ಇವರ ಮಗ ಶಿವಾನಂದ ದೂರು ನೀಡಿದ್ದರು. 

ಬಂಟ್ವಾಳ: ನಾಪತ್ತೆಯಾಗಿದ್ದ ವ್ಯಕ್ತಿ ನೇತ್ರಾವತಿ ನದಿಯಲ್ಲಿ ಶವವಾಗಿ ಪತ್ತೆ! Read More »

ಕರಾವಳಿ, ಕ್ರೈಮ್ ನ್ಯೂಸ್
Scroll to Top