News Kadaba

ಕೋರಿಯರ್ ಕಂಪೆನಿಯವನೆಂದು ನಂಬಿಸಿ 72 ಸಾವಿರ ರೂ. ವಂಚನೆ   ➤ದೂರು ದಾಖಲು.!

(ನ್ಯೂಸ್ ಕಡಬ)Newskadaba.com ಮಂಗಳೂರು ,ಏ.19 ಅಪರಿಚಿತ ವ್ಯಕ್ತಿಯೋರ್ವ ಕೋರಿಯರ್ ಕಂಪೆನಿಯವನೆಂದು ನಂಬಿಸಿ ಲಿಂಕ್ ಕಳುಹಿಸಿ 72,444 ರೂ. ಬ್ಯಾಂಕ್ ಖಾತೆಯಿಂದ ವರ್ಗಾಯಿಸಿಕೊಂಡು ವಂಚಿಸಿದ್ದಾನೆ. ಈ ಪ್ರಕರಣದ ಬಗ್ಗೆ ಮಂಗಳೂರಿನ ಸೆನ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ದೂರುದಾರ ವ್ಯಕ್ತಿ ಹಣ ಪಾವತಿಸಿದರೂ, ಪಾರ್ಸೆಲ್ ಕೊಂಡು ಹೋಗಲು ಯಾರೂ ಬಂದಿರಲಿಲ್ಲ. ಕೊರಿಯರ್ ಕಂಪೆನಿಯವನೆಂದು ಪರಿಚಯಿಸಿಕೊಂಡ ವ್ಯಕ್ತಿ ಕಳುಹಿಸಿದ ಲಿಂಕ್‌ಗೆ ಬ್ಯಾಂಕ್‌ನ ವಿವರ ನೀಡಿದ್ದರಿಂದ ಮೋಸದಿಂದ ಹಣ ವರ್ಗಾವಣೆ ಮಾಡಿಕೊಂಡಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.           […]

ಕೋರಿಯರ್ ಕಂಪೆನಿಯವನೆಂದು ನಂಬಿಸಿ 72 ಸಾವಿರ ರೂ. ವಂಚನೆ   ➤ದೂರು ದಾಖಲು.! Read More »

ಕರಾವಳಿ

ಕಾಂಗ್ರೆಸ್ ಮತ್ತು ಬಿಜೆಪಿಯಲ್ಲಿ ಟಿಕೆಟ್ ಸಿಗದ ಹಿನ್ನಲೆ ➤25 ಕ್ಷೇತ್ರಗಳ ಪ್ರಮುಖ ನಾಯಕರು ಜೆಡಿಎಸ್ ತೆಕ್ಕೆಗೆ..!

(ನ್ಯೂಸ್ ಕಡಬ)Newskadaba.com ಬೆಂಗಳೂರು,ಏ.19 ಕಾಂಗ್ರೆಸ್ ಮತ್ತು ಬಿಜೆಪಿಯಲ್ಲಿ ಟಿಕೆಟ್ ಸಿಗದ ಒಂಬತ್ತು ಮಾಜಿ ಶಾಸಕರು ಸೇರಿ 25 ಕ್ಷೇತ್ರಗಳ ಪ್ರಮುಖ ನಾಯಕರು ಜೆಡಿಎಸ್ ತೆಕ್ಕೆಗೆಬಿದ್ದಿದ್ದಾರೆ. ಎರಡೂ ಪಕ್ಷಗಳಲ್ಲಿ ಕಾಣಿಸಿಕೊಂಡ ಬಂಡಾಯ ಜೆಡಿಎಸ್ ಪಾಲಿಗೆ ವರದಾನವಾಗಿದ್ದು, ಕೆಲವು ಕ್ಷೇತ್ರಗಳ ಅಭ್ಯರ್ಥಿಗಳ ಕೊರತೆಯನ್ನೂ ನೀಗಿಸಿದೆ. ಐವರು ಮಾಜಿ ಶಾಸಕರು, ಇಬ್ಬರು ವಿಧಾನಪರಿಷತ್ನ ಮಾಜಿ ಸದಸ್ಯರಷ್ಟೇ ಅಲ್ಲದೆ ಮೂವರು ಮಾಜಿ ಸಚಿವರು ಸಹ ಕಾಂಗ್ರೆಸ್ ಮತ್ತು ಬಿಜೆಪಿ ತೊರೆದು ಜೆಡಿಎಸ್ ಸೇರ್ಪಡೆಯಾಗಿದ್ದು, ಪಕ್ಷಕ್ಕೂ ಕೆಲವೆಡೆ ಬಲ ಬಂದಂತಾಗಿದೆ.      

ಕಾಂಗ್ರೆಸ್ ಮತ್ತು ಬಿಜೆಪಿಯಲ್ಲಿ ಟಿಕೆಟ್ ಸಿಗದ ಹಿನ್ನಲೆ ➤25 ಕ್ಷೇತ್ರಗಳ ಪ್ರಮುಖ ನಾಯಕರು ಜೆಡಿಎಸ್ ತೆಕ್ಕೆಗೆ..! Read More »

ಕರ್ನಾಟಕ

ಐಸ್ ಕ್ರೀಂ ತಿಂದ ಬಳಿಕ ಅಸ್ವಸ್ಥನಾಗಿ ಬಾಲಕ ಮೃತ್ಯು

(ನ್ಯೂಸ್ ಕಡಬ)newskadaba.com ಕೇರಳ, ಏ.19. ಐಸ್ ಕ್ರೀಂ ತಿಂದ ಬಳಿಕ ವಾಂತಿ-ಭೇದಿಯಿಂದ ಬಳಲಿದ ವಿದ್ಯಾರ್ಥಿ ಚಿಕಿತ್ಸೆ ಫಲಿಸದೆ ಮೃತಪಟ್ಟಿರುವ ಘಟನೆ ನಡೆದಿದೆ. ಅರಿಕ್ಕುಲಂ‌ನಿವಾಸಿ ಮೊಹಮ್ಮದ್ ಅಲಿ ಅವರ ಪುತ್ರ ಹಸನ್ ರಿಫಾಯಿ(12)ಮೃತ ಬಾಲಕ ಎಂದು ತಿಳಿದುಬಂದಿದೆ. ರಿಫಾಯಿ 6ನೇ ತರಗತಿಯ ಬಾಲಕನಾಗಿದ್ದು ಆದಿತ್ಯವಾರ ಸಂಜೆ ಐಸ್ ಕ್ರೀಂ ತಿಂದಿದ್ದಾನೆ. ಬಳಿಕ ಬಾಲಕನಿಗೆ ಹೊಟ್ಟೆ ನೋವು ಕಾಣಿಸಿಕೊಂಡಿದೆ ಎಂದು ವರದಿ ತಿಳಿಸಿದೆ.  

ಐಸ್ ಕ್ರೀಂ ತಿಂದ ಬಳಿಕ ಅಸ್ವಸ್ಥನಾಗಿ ಬಾಲಕ ಮೃತ್ಯು Read More »

ರಾಷ್ಟ್ರೀಯ ನ್ಯೂಸ್

ಇಸ್ರೋದಿಂದ ಏ.22ಕ್ಕೆ ಉಪಗ್ರಹ ಉಡಾವಣೆ

(ನ್ಯೂಸ್ ಕಡಬ)newskadaba.com ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಶನಿವಾರ ಮತ್ತೊಂದು ವಾಣಿಜ್ಯ ಉಡಾವಣೆಗೆ ಸಜ್ಜಾಗುತ್ತಿದೆ. ಇಸ್ರೋ ಸಂಸ್ಥೆಯು ತನ್ನ ಹೊಸ ಪಿಎಸ್‌ಎಲ್‌ವಿ ರಾಕೆಟ್‌ನೊಂದಿಗೆ ಏ.22ರಂದು ಸಿಂಗಾಪುರದ ಭೂ ವೀಕ್ಷಣಾ TeLEOS-02 ಉಪಗ್ರಹವನ್ನು ಉಡಾವಣೆ ಮಾಡಲಿದೆ. ಈ ರಾಕೆಟ್ ಅನ್ನು ವಿಶೇಷವಾಗಿ ಸಂಯೋಜಿಸಲಾಗಿದೆ. ಪಿಎಸ್‌ಎಲ್‌ವಿ ಮೂಲಕ ಇದುವರೆಗೆ 33 ದೇಶಗಳ ಒಟ್ಟು 297 ಉಪಗ್ರಹ ಉಡಾವಣೆ ಮಾಡಲಾಗಿದೆ. ಈ ಹೊಸ ರಾಕೆಟ್ 44ಮೀ. ಎತ್ತರ & 2.8ಮೀ. ವ್ಯಾಸ ಹೊಂದಿದೆ. ಇದು ನಾಲ್ಕು ಹಂತಗಳನ್ನು ಹೊಂದಿದ್ದು, ರಾಕೆಟ್‌

ಇಸ್ರೋದಿಂದ ಏ.22ಕ್ಕೆ ಉಪಗ್ರಹ ಉಡಾವಣೆ Read More »

ರಾಷ್ಟ್ರೀಯ ನ್ಯೂಸ್

ಉಡುಪಿ: ಒಂದೇ ದಿನ ಆರು ಮಂದಿ ನಾಮಪತ್ರ ಸಲ್ಲಿಕೆ

(ನ್ಯೂಸ್ ಕಡಬ)newskadaba.com ಉಡುಪಿ, ಏ.19. ಕಾರ್ಕಳ ವಿಧಾನ ಸಭಾ ಚುನಾವಣೆಯಲ್ಲಿ ಸ್ವರ್ಧಿಸಲು ಇಚ್ಚಿಸಿ ಆರು ಮಂದಿ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ. ಮುನಿಯಾಲು ಉದಯಕುಮಾರ್ ಶೆಟ್ಟಿ- ಇಂಡಿಯನ್ ನ್ಯಾಶನಲ್ ಕಾಂಗ್ರೆಸ್, ಶ್ರೀಕಾಂತ ಪೂಜಾರಿ -ಜನತಾದಳ ಜಾತ್ಯತೀತ, ಡಾ.ಮಮತಾ ಹೆಗ್ಡೆ-ಪಕ್ಷೇತರ, ಪ್ರಮೋದ್ ಮುತಾಲಿಕ್ – ಪಕ್ಷೇತರ, ಹರೀಶ್ ಅಧಿಕಾರಿ- ಪಕ್ಷೇತರ, ಸುಧಾಕರ ಆಚಾರ್ಯ- ಪಕ್ಷೇತರ ಇವರು ನಾಮಪತ್ರ ಸಲ್ಲಿಸಿದವರು ಎಂದು ತಿಳಿದುಬಂದಿದೆ.  

ಉಡುಪಿ: ಒಂದೇ ದಿನ ಆರು ಮಂದಿ ನಾಮಪತ್ರ ಸಲ್ಲಿಕೆ Read More »

ಕರಾವಳಿ

ಕೇಂದ್ರ ಸರ್ಕಾರ ಸಮಾನ ನಾಗರಿಕ ಸಂಹಿತೆ ಜಾರಿಗೆ ಸಿದ್ಧತೆ..!

(ನ್ಯೂಸ್ ಕಡಬ)Newskadaba.com ನವದೆಹಲಿ,ಏ.19  ಕೇಂದ್ರ ಸರ್ಕಾರ ಸಮಾನ ನಾಗರಿಕ ಸಂಹಿತೆ ಜಾರಿಗೆ ಸಿದ್ಧತೆ ನಡೆಸಿದ್ದು, ಈ ನಿಟ್ಟಿನಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ನೇತೃತ್ವದಲ್ಲಿ ಉನ್ನತ ಮಟ್ಟದ ಸಭೆ ನಡೆಸಲಾಗಿದೆ. 2024ರ ಸಾರ್ವತ್ರಿಕ ಚುನಾವಣೆ ಮೇಲೆ ಕಣ್ಣಿಟ್ಟ ಕೇಂದ್ರ ಸರ್ಕಾರ ಮುಂದಿನ ಮುಂಗಾರು ಸಂಸತ್ ಅಧಿವೇಶನದಲ್ಲಿ ಮಹತ್ವಾಕಾಂಕ್ಷಿಯ ಸಮಾನ ನಾಗರಿಕ ಸಂಹಿತೆ ವಿಧೇಯಕ ಮಂಡಿಸುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ನಮ್ಮ ಸರ್ಕಾರ ಸಮಾನ ನಾಗರಿಕ ಸಂಹಿತೆ ಜಾರಿಗೆ ಬದ್ಧವಾಗಿದ್ದು, ಅದಕ್ಕೆ ಸೂಕ್ತ ಸಮಯ ಬರಬೇಕು.

ಕೇಂದ್ರ ಸರ್ಕಾರ ಸಮಾನ ನಾಗರಿಕ ಸಂಹಿತೆ ಜಾರಿಗೆ ಸಿದ್ಧತೆ..! Read More »

ರಾಷ್ಟ್ರೀಯ ನ್ಯೂಸ್

ಮಂಗಳೂರಿನಲ್ಲಿ ಬಂಟ್ವಾಳ ಮೂಲದ ವ್ಯಕ್ತಿಯ ಹತ್ಯೆ    ➤ ಆರೋಪಿಯ ಬಂಧನ

(ನ್ಯೂಸ್ ಕಡಬ)newskadaba.com ಬಂಟ್ವಾಳ, ಏ.`19. ಮಂಗಳೂರಿನಲ್ಲಿ ಬಂಟ್ವಾಳ ತಾಲೂಕಿನ ಪೊಳಲಿ ಮೂಲದ ವ್ಯಕ್ತಿಯೋರ್ವನ ಕೊಲೆಯಾಗಿದ್ದು, ಪೊಲೀಸರ ಕ್ಷಿಪ್ರ ಕಾರ್ಯಚರಣೆಯಿಂದ ಆರೋಪಿಗಳ ಬಂಧಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಪೊಳಲಿ ಸಮೀಪದ ಅಮ್ಮುಂಜೆ ನಿವಾಸಿ ಜನಾರ್ದನ ಬಾರಿಂಜ ಅವರು‌ ಕೊಲೆಯಾದ ವ್ಯಕ್ತಿ ಎನ್ನಲಾಗಿದೆ.  ಮಂಗಳೂರು ನೆಹರು ಮೈದಾನದಲ್ಲಿ ಕುಳಿತುಕೊಂಡಿದ್ದ ವೇಳೆ ಅವರ ಕೊಲೆಯಾಗಿದೆ ಎಂದು ಹೇಳಲಾಗುತ್ತಿದೆ. ಕೊಲೆಗೆ ಸ್ಪಷ್ಟವಾದ ಕಾರಣ ತಿಳಿದು ಬಂದಿಲ್ಲವಾದರೂ ರಾಬರಿ ನಡೆಸಲು ಬಂದಿದ್ದ ವ್ಯಕ್ತಿಗಳಿಂದ ಈ ಘಟನೆ ನಡೆದಿದೆ ಎನ್ನಲಾಗುತ್ತಿದೆ.  

ಮಂಗಳೂರಿನಲ್ಲಿ ಬಂಟ್ವಾಳ ಮೂಲದ ವ್ಯಕ್ತಿಯ ಹತ್ಯೆ    ➤ ಆರೋಪಿಯ ಬಂಧನ Read More »

ಕರಾವಳಿ

ಬಂಟ್ವಾಳ: ಹೊಟೇಲ್ ಗೆ ಕನ್ನ ಹಾಕಿದ ಖದೀಮರು ➤ ನಗದು ದೋಚಿ ಪರಾರಿ

(ನ್ಯೂಸ್ ಕಡಬ)newskadaba.com ಬಂಟ್ವಾಳ, ಏ.19. ರಾಷ್ಟ್ರೀಯ ಹೆದ್ದಾರಿ ಮಂಗಳೂರು ಬೆಂಗಳೂರು ರಸ್ತೆ ಮಧ್ಯೆ ಬಿಸಿರೋಡಿನ ಹೃದಯ ಭಾಗದಲ್ಲಿರುವ ಪ್ರಸಿದ್ಧ ಹೊಟೇಲ್ ಒಂದಕ್ಕೆ ಕಳ್ಳರು ನುಗ್ಗಿ, ಸಾವಿರಾರು ನಗದು ದೋಚಿದ ಬಂದಿದೆ. ಬಿಸಿರೋಡಿನ ಕಿಶೋರ್ ಎಂಬವರ ಮಾಲಕತ್ವದ ಕೆ.ಎಸ್.ಆರ್.ಟಿ.ಸಿ.ಬಸ್ ನಿಲ್ದಾಣದ ಮುಂಭಾಗದಲ್ಲಿರುವ ಶ್ರೀ ಕೃಷ್ಣ ವಿಲಾಸ ಹೋಟೆಲ್’ನಿಂದ ಕಳವು ಮಾಡಲಾಗಿದೆ. ಹೊಟೇಲ್ ನ ಬೀಗವನ್ನು ಮುರಿದು ಶಟರ್ ತೆಗದು ಒಳನುಗ್ಗಿದ ಕಳ್ಳರು ಕ್ಯಾಶ್ ಕೌಂಟರ್’ನಲ್ಲಿದ್ದ ಸುಮಾರು 30 ಸಾವಿರಕ್ಕಿಂತಲೂ ಅಧಿಕ ನಗದನ್ನು ದೋಚಿಕೊಂಡು ಹೋಗಿದ್ದಾರೆ ಎನ್ನಲಾಗಿದೆ.

ಬಂಟ್ವಾಳ: ಹೊಟೇಲ್ ಗೆ ಕನ್ನ ಹಾಕಿದ ಖದೀಮರು ➤ ನಗದು ದೋಚಿ ಪರಾರಿ Read More »

ಕರಾವಳಿ, ಕ್ರೈಮ್ ನ್ಯೂಸ್

ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಏಳು ಕೋಟಿ ರೂಪಾಯಿ ನಗದು ಪತ್ತೆ..!   ➤ಆ ಹಣ ಕೆಲ ಹೊತ್ತಲ್ಲಿ ನಾಪತ್ತೆ.!

(ನ್ಯೂಸ್ ಕಡಬ)Newskadaba.com ಬೆಂಗಳೂರು,ಏ.19 ರಾಜ್ಯ ಚುನಾವಣೆ ಹತ್ತಿರವಾಗುತ್ತಿದ್ದಂತೆ ಕೋಟಿ ಕೋಟಿ ಹಣ ಹರಿದಾಡುತ್ತಿದೆ. ಇದಕ್ಕೆ ಸಾಕ್ಷಿ ಎಂಬಂತೆ ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಏಳು ಕೋಟಿ ರೂಪಾಯಿ ನಗದು ಪತ್ತೆಯಾಗಿತ್ತು. ಆದರೆ ಆ ಹಣ ಕೆಲ ಹೊತ್ತಲ್ಲಿ ನಾಪತ್ತೆಯಾಗಿದೆ. ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಏಳು ಕೋಟಿ ರೂಪಾಯಿ ನಗದು ಪತ್ತೆಯಾಗಿದ್ದು, ಐಎಎಸ್ ಅಧಿಕಾರಿಯೊಬ್ಬರು ಸ್ಥಳಕ್ಕೆ ಬಂದ ನಂತರ ಆ ಹಣ ಮಾಯವಾಗಿದೆ ಎಂಬ ಆರೋಪ ಕೇಳಿ ಬಂದಿದೆ. ಮಾಧ್ಯಮಗಳ ಮೂಲಕ ಮಾಹಿತಿ ಪಡೆದ ದಕ್ಷಿಣ ವಿಭಾಗದ ಪೊಲೀಸರು ನಗದು

ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಏಳು ಕೋಟಿ ರೂಪಾಯಿ ನಗದು ಪತ್ತೆ..!   ➤ಆ ಹಣ ಕೆಲ ಹೊತ್ತಲ್ಲಿ ನಾಪತ್ತೆ.! Read More »

ಕರ್ನಾಟಕ

ಬಿಸಿಲಿನ ಬೇಗೆಗೆ ಜನ ತತ್ತರ..!   ➤ ಮುಂಜಾಗ್ರತ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರಿಗೆ ಆರೋಗ್ಯ ಇಲಾಖೆ ಸಲಹೆ.!

(ನ್ಯೂಸ್ ಕಡಬ)Newskadaba.com ಕೊಪ್ಪಳ,ಏ.19 ಬಿಸಿಲಿನ ಪ್ರಕರತೆ ಮತ್ತು ತೀವ್ರತೆ ಕಂಡು ಬಂದ ಹಿನ್ನಲೆಯಲ್ಲಿ ಸಾರ್ವಜನಿಕರು, ಗರ್ಭಿಣಿಯರು, ಬಾಣಂತಿಯರು ಹಾಗೂ ಮಕ್ಕಳ ಆರೋಗ್ಯದ ಕೆಲ ಅಗತ್ಯ ಮುಂಜಾಗ್ರತ ಕ್ರಮ ಕೈಗೊಳ್ಳುವಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳಾದ ಡಾ ಅಲಕನಂದಾ ಕೆ ಮಳಗಿ ಅವರು ಸಲಹೆ ನೀಡಿದ್ದಾರೆ. ಆರೋಗ್ಯದ ಯಾವುದೇ ಸಮಸ್ಯೆವಿದ್ದರೆ ತಮ್ಮ ಸಮೀಪದ ಆಸ್ಪತ್ರೆಯ ವೈದ್ಯರನ್ನು ಮತ್ತು ಆರೋಗ್ಯ ಸಿಬ್ಬಂದಿ ಹಾಗೂ ಆಶಾ ಕಾರ್ಯಕರ್ತೆರನ್ನು ಸಂಪರ್ಕಿಸಬೇಕು ಎಂದು ಜಿಲ್ಲಾ ಆರೋಗ್ಯ ಇಲಾಖೆಯ ಪ್ರಕಟಣೆ ತಿಳಿಸಿದೆ.  

ಬಿಸಿಲಿನ ಬೇಗೆಗೆ ಜನ ತತ್ತರ..!   ➤ ಮುಂಜಾಗ್ರತ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರಿಗೆ ಆರೋಗ್ಯ ಇಲಾಖೆ ಸಲಹೆ.! Read More »

ಕರ್ನಾಟಕ
Scroll to Top