News Kadaba

ನಾಮಪತ್ರ ಸಲ್ಲಿಸಲು ಆಟೋದಲ್ಲಿ ಬಂದಿಳಿದ ಬಿಜೆಪಿ ಅಭ್ಯರ್ಥಿ..!

(ನ್ಯೂಸ್ ಕಡಬ)Newskadaba.com ವಿಜಯಪುರ,ಏ.21 ನಾಗಠಾಣ ಕ್ಷೇತ್ರದ ಅಚ್ಚರಿಯ ಅಭ್ಯರ್ಥಿ, ಪಕ್ಷದ ಸಾಮಾನ್ಯ ಕಾರ್ಯಕರ್ತ ಸಂಜೀವ ಐಹೊಳಿ ಆಟೋದಲ್ಲಿ ಆಗಮಿಸಿ ನಾಮಪತ್ರ ಸಲ್ಲಿಸಿರುವುದು ಮತ್ತೊಂದು ಅಚ್ಚರಿಗೆ ಕಾರಣವಾಗಿದೆ. ನಾಮಪತ್ರ ಸಲ್ಲಿಕೆಯ ಅಂತಿಮ ದಿನದಂದು ಸಿದ್ದೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಸಂಜೀವ ಐಹೊಳ್ಳಿ ನಾಮಪತ್ರ ಸಲ್ಲಿಕೆ ಕೇಂದ್ರಕ್ಕೆ ತೆರಳಲು ವಾಹನಕ್ಕಾಗಿ ತಡಕಾಡಿದರು. ತೀರ ಸಾಮಾನ್ಯ ಕಾರ್ಯಕರ್ತನಾದ ಸಂಜೀವನ ಹೆಸರಿನಲ್ಲಿ ಸ್ವಂತ ಕಾರು, ಬೈಕ್ ಸಹ ಇಲ್ಲ. ಹೀಗಾಗಿ ನಾಮಪತ್ರ ಸಲ್ಲಿಕೆ ಕೇಂದ್ರಕ್ಕೆ ಬರಲು ಆಟೋಕ್ಕಾಗಿ ಕಾಯ್ದು ನಿಂತರು. ಬಹಳ […]

ನಾಮಪತ್ರ ಸಲ್ಲಿಸಲು ಆಟೋದಲ್ಲಿ ಬಂದಿಳಿದ ಬಿಜೆಪಿ ಅಭ್ಯರ್ಥಿ..! Read More »

ಕರ್ನಾಟಕ

ಕೋರ್ಟಿನ ಆವರಣದಲ್ಲೇ ಮಹಿಳೆ ಮೇಲೆ ಗುಂಡಿನ ದಾಳಿ

(ನ್ಯೂಸ್ ಕಡಬ)newskadaba.com ದೆಹಲಿ, ಏ.21. ಕೋರ್ಟಿನ ಆವರಣದಲ್ಲಿ ಮಹಿಳೆಯೊಬ್ಬರ ಮೇಲೆ ಗುಂಡಿನ ದಾಳಿ ನಡೆಸಿರುವ ಘಟನೆ ದೆಹಲಿಯ ಸಾಕೇತ್ ಜಿಲ್ಲಾ ನ್ಯಾಯಾಲಯದಲ್ಲಿ ನಡೆದಿದೆ. ದೆಹಲಿಯ ಸಾಕೇತ್ ಜಿಲ್ಲಾ ಕೋರ್ಟಿನ ಆವರಣದಲ್ಲಿ ವಕೀಲರ ಧಿರಿಸಿನಲ್ಲಿ ಬಂದ ವ್ಯಕ್ತಿಯೊಬ್ಬ ಮಹಿಳೆ ಮೇಲೆ ಗುಂಡಿನ ದಾಳಿ ನಡೆಸಿದ್ದಾನೆ. ನಾಲ್ಕು ಸುತ್ತಿನ ಗುಂಡಿನ ದಾಳಿ ನಡೆಸಿದ್ದಾನೆ. ಗಂಭೀರ ಸ್ಥಿತಿಯಲ್ಲಿ ಮಹಿಳೆಯನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದು ವರದಿ ತಿಳಿಸಿದೆ.

ಕೋರ್ಟಿನ ಆವರಣದಲ್ಲೇ ಮಹಿಳೆ ಮೇಲೆ ಗುಂಡಿನ ದಾಳಿ Read More »

ರಾಷ್ಟ್ರೀಯ ನ್ಯೂಸ್

ಮಲಗಿದ್ದ ವೇಳೆ ಹಾವು ಕಚ್ಚಿ 7 ವರ್ಷದ ಬಾಲಕ ಮೃತ್ಯು

(ನ್ಯೂಸ್ ಕಡಬ)newskadaba.com ದೊಡ್ಡಬಳ್ಳಾಪುರ, ಏ.21. ಮನೆಯಲ್ಲಿ ಮಲಗಿದ್ದ ವೇಳೆ ನಾಗರಹಾವು ಕಚ್ಚಿದ ಪರಿಣಾಮ, 7 ವರ್ಷದ ಬಾಲಕ ಮೃತಪಟ್ಟಿರುವ ಹೃದಯವಿದ್ರಾವಕ ಘಟನೆ ತಾಲೂಕಿನ ಬೈರಾಪುರ ತಾಂಡದಲ್ಲಿ ಸಂಭವಿಸಿದೆ. ಬೈರಾಪುರ ತಾಂಡದ ಮಂಜುನಾಥ್‌ ನಾಯಕ್‌, ಸುಮಿತ್ರಾ ದಂಪತಿಯ ಎರಡನೇ ಪುತ್ರ ಮೌನಿಕ್‌ ಎಂ.ನಾಯಕ್‌ ಮೃತ ಬಾಲಕ ಎಂದು ವರದಿ ತಿಳಿಸಿದೆ.

ಮಲಗಿದ್ದ ವೇಳೆ ಹಾವು ಕಚ್ಚಿ 7 ವರ್ಷದ ಬಾಲಕ ಮೃತ್ಯು Read More »

ರಾಷ್ಟ್ರೀಯ ನ್ಯೂಸ್

ಶಾಲಾ ಮಕ್ಕಳಿಗೆ ಗುಡ್ ನ್ಯೂಸ್! ➤ ಶಿಕ್ಷಣ ಇಲಾಖೆ ಬಿಸಿಯೂಟ, ಕ್ಷೀರ ಭಾಗ್ಯ ಯೋಜನೆಗೆ ಸಿದ್ಧತೆ ಕೈಗೊಳ್ಳಲು ಸೂಚನೆ ನೀಡಿದೆ..!

(ನ್ಯೂಸ್ ಕಡಬ)Newskadaba.com ಬೆಂಗಳೂರು,ಏ.21 2023 -24 ನೇ ಮುಂದಿನ ಶೈಕ್ಷಣಿಕ ವರ್ಷದಲ್ಲಿ ಮಧ್ಯಾಹ್ನದ ಬಿಸಿಯೂಟ ಮತ್ತು ಕ್ಷೀರ ಭಾಗ್ಯ ಯೋಜನೆ ಅನುಷ್ಠಾನಕ್ಕೆ ಅಗತ್ಯ ಪೂರ್ವಭಾವಿ ಸಿದ್ಧತೆ ಕೈಗೊಳ್ಳಲು ಶಿಕ್ಷಣ ಇಲಾಖೆ ವತಿಯಿಂದ ರಾಜ್ಯದ ಎಲ್ಲಾ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳಿಗೆ ಸೂಚನೆ ನೀಡಲಾಗಿದೆ. ರಾಜ್ಯದ ಎಲ್ಲಾ ಸರ್ಕಾರಿ ಮತ್ತು ಅನುದಾನಿತ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿ ರಜೆ ಅವಧಿಯಲ್ಲಿ ಉಳಿಕೆಯಾದ ಅಕ್ಕಿ, ಗೋಧಿ, ತೊಗರಿ ಬೇಳೆ, ಸೂರ್ಯಕಾಂತಿ ಎಣ್ಣೆ ಮತ್ತು ಹಾಲಿನ ಪುಡಿ ಸೇರಿದಂತೆ ಇತರೆ ಪದಾರ್ಥಗಳನ್ನು ಪರಿಶೀಲಿಸಿ

ಶಾಲಾ ಮಕ್ಕಳಿಗೆ ಗುಡ್ ನ್ಯೂಸ್! ➤ ಶಿಕ್ಷಣ ಇಲಾಖೆ ಬಿಸಿಯೂಟ, ಕ್ಷೀರ ಭಾಗ್ಯ ಯೋಜನೆಗೆ ಸಿದ್ಧತೆ ಕೈಗೊಳ್ಳಲು ಸೂಚನೆ ನೀಡಿದೆ..! Read More »

ಕರ್ನಾಟಕ

ಜನರಿಗೆ ಹಣ ಪಡೆದು ಮತ ಹಾಕುವುದರಲ್ಲೇ ಆಸಕ್ತಿ!   ➤ ಹೈಕೋರ್ಟ್ ಕಿಡಿ..!

(ನ್ಯೂಸ್ ಕಡಬ)Newskadaba.com ಬೆಂಗಳೂರು,ಏ.21 ಸಾರ್ವಜನಿಕ ಪ್ರಕಟಣೆ ನೀಡಿದ ಹೊರತಾಗಿಯೂ ಇಡೀ ರಾಜ್ಯದ ಯಾವೊಂದು ಭಾಗದಿಂದಲೂ ಸ್ಮಶಾನ ಜಾಗಕ್ಕೆ ಭೂಮಿ ಮಂಜೂರಾತಿ ಕೋರಿ ಸರ್ಕಾರಕ್ಕೆ ಜನರು ಮನವಿ ಸಲ್ಲಿಸದ ಬಗ್ಗೆ ಕರ್ನಾಟಕ ಹೈಕೋರ್ಟ್ ಕಿಡಿ ಕಾರಿದೆ. ಅಲ್ಲದೇ, ನಮ್ಮ ಜನರಿಗೆ ಮೂಲಭೂತ ಸೌಲಭ್ಯ ಪಡೆಯುವುದಕ್ಕಿಂತ ಚುನಾವಣೆ ಬಗ್ಗೆಯೇ ಹೆಚ್ಚು ಆಸಕ್ತಿ, ಅದರಲ್ಲೂ ಹಣ ಪಡೆದು ಮತ ಹಾಕುವುದರಲ್ಲೇ ಮಗ್ನರಾಗಿದ್ದಾರೆ ಎಂದು ತರಾಟೆಗೆ ತೆಗೆದುಕೊಂಡಿದೆ.        

ಜನರಿಗೆ ಹಣ ಪಡೆದು ಮತ ಹಾಕುವುದರಲ್ಲೇ ಆಸಕ್ತಿ!   ➤ ಹೈಕೋರ್ಟ್ ಕಿಡಿ..! Read More »

ಕರ್ನಾಟಕ

‘ಜನಸಂಖ್ಯೆಯಲ್ಲಿ ಚೀನಾವನ್ನೇ ಹಿಂದಿಕ್ಕಿದ ಭಾರತ’     ➤ ವಿಶ್ವಸಂಸ್ಥೆ ವರದಿ

(ನ್ಯೂಸ್ ಕಡಬ)newskadaba.com ನವದೆಹಲಿ, ಏ.21. ಭಾರತ ವಿಶ್ವದಲ್ಲೇ ಅತಿ ಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ರಾಷ್ಟ್ರವಾಗಿದ್ದು, ಆ ಮೂಲಕ ಇದೀಗ ನೆರೆಯ ದೇಶ ಚೀನಾವನ್ನೇ ಹಿಂದಿಕ್ಕಿದೆ ಎಂದು ವಿಶ್ವಸಂಸ್ಥೆ ಬಿಡುಗಡೆ ಮಾಡಿರುವ ಅಂಕಿ ಅಂಶಗಳಲ್ಲಿ ಉಲ್ಲೇಖಿಸಲಾಗಿದೆ. ವಿಶ್ವಸಂಸ್ಥೆಯ ವರದಿ ಪ್ರಕಾರ, ಭಾರತ ಕೋಟಿ ಜನಸಂಖ್ಯೆ ಹೊಂದಿದ್ದರೆ, ಚೀನಾ 142.57 ಕೋಟಿ ಜನಸಂಖ್ಯೆ ಹೊಂದಿದೆ. ಭಾರತದ ಜನಸಂಖ್ಯೆಯ ಸುಮಾರು 1/4 ರಷ್ಟು ಜನರು 14 ವರ್ಷದ ಒಳಗಿನವರಾಗಿದ್ದಾರೆ. ಜನಸಂಖ್ಯೆಯ ಶೇಕಡಾ 68ರಷ್ಟು ಜನರು 15 ರಿಂದ 64 ವಯಸ್ಸಿನವರಾಗಿದ್ದರೆ, ಶೇಕಡಾ

‘ಜನಸಂಖ್ಯೆಯಲ್ಲಿ ಚೀನಾವನ್ನೇ ಹಿಂದಿಕ್ಕಿದ ಭಾರತ’     ➤ ವಿಶ್ವಸಂಸ್ಥೆ ವರದಿ Read More »

ರಾಷ್ಟ್ರೀಯ ನ್ಯೂಸ್

ಕೊಹ್ಲಿ, ಶಾರುಖ್ ಸೇರಿ ಹಲವು ಖ್ಯಾತನಾಮರ ಬ್ಲೂಟಿಕ್‌ ತೆಗೆದುಹಾಕಿದ ಟ್ವಿಟರ್

(ನ್ಯೂಸ್ ಕಡಬ)newskadaba.com ನವದೆಹಲಿ, ಏ.21. ಚಿತ್ರತಾರೆಯರು, ಕ್ರಿಕೆಟ್ ಆಟಗಾರರು, ರಾಜಕಾರಣಿಗಳು ಮತ್ತು ಪತ್ರಕರ್ತರ ಹೀಗೆ ಖ್ಯಾತನಾಮರ ಅಧಿಕೃತ ಟ್ವಿಟರ್ ಖಾತೆಗಳಿಂದ ‘ಬ್ಲೂ ಟಿಕ್‌’ ಗುರುತನ್ನು ತೆಗೆದುಹಾಕುವ ಕಾರ್ಯವನ್ನು ಟ್ವಿಟರ್ ಗುರುವಾರದಿಂದ ಆರಂಭಿಸಿದೆ. ಹೀಗಾಗಿ ಭಾರತದ ಹಲವು ಸೆಲೆಬ್ರಿಟಿಗಳು ತಮ್ಮ ಟ್ವಿಟರ್ ಖಾತೆಯಲ್ಲಿದ್ದ ‘ಬ್ಲೂ ಟಿಕ್‌’ ಗುರುತನ್ನು ಕಳೆದುಕೊಂಡಿದ್ದಾರೆ. ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್​, ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ, ಕರ್ನಾಟಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕಾಂಗ್ರೆಸ್ ನಾಯಕರಾದ ರಾಹುಲ್

ಕೊಹ್ಲಿ, ಶಾರುಖ್ ಸೇರಿ ಹಲವು ಖ್ಯಾತನಾಮರ ಬ್ಲೂಟಿಕ್‌ ತೆಗೆದುಹಾಕಿದ ಟ್ವಿಟರ್ Read More »

ರಾಷ್ಟ್ರೀಯ ನ್ಯೂಸ್

ಡಿ.ಕೆ. ಶಿವಕುಮಾರ್ ಗೆ ನಾಮಪತ್ರ ತಿರಸ್ಕೃತವಾಗುವ ಆತಂಕ.!

(ನ್ಯೂಸ್ ಕಡಬ)Newskadaba.com ಬೆಂಗಳೂರು,ಏ.21 ಕರ್ನಾಟಕ ವಿಧಾನಸಭೆ ಚುನಾವಣೆಗೆ ನಾಮಪತ್ರ ಸಲ್ಲಿಕೆ ಅವಧಿಮುಕ್ತಾಯವಾಗಿದ್ದು, ನಾಮಪತ್ರ ವಾಪಸ್ ಪಡೆಯಲು ಏಪ್ರಿಲ್ 24 ಕೊನೆಯ ದಿನವಾಗಿದೆ. ಏಪ್ರಿಲ್ 21(ಇಂದು) ಚುನಾವಣಾ ಅಧಿಕಾರಿಗಳು ನಾಮಪತ್ರಕೆಗಳನ್ನು ಪರಿಶೀಲನೆ ಮಾಡಲಿದ್ದಾರೆ. ಕಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್​ ಕನಕಪುರ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದು, ನಾಮಪತ್ರ ಸಲ್ಲಿಸಿದ್ದಾರೆ. ಆದರೆ ಈ ನಾಮಪತ್ರ ತಿರಸ್ಕೃತವಾಗುವ ಆತಂಕದಲ್ಲಿದ್ದು, ಡಿಕೆ ಶಿವಕುಮಾರ್​ ಅವರ ರಾಜಕೀಯ ಭವಿಷ್ಯ ಇಂದು ನಿರ್ಧಾರವಾಗಲಿದೆ.      

ಡಿ.ಕೆ. ಶಿವಕುಮಾರ್ ಗೆ ನಾಮಪತ್ರ ತಿರಸ್ಕೃತವಾಗುವ ಆತಂಕ.! Read More »

ಕರ್ನಾಟಕ

ಹಲವು ಉದ್ಯಮಿ ಮನೆ, ಕಚೇರಿಯಲ್ಲಿ ಇಡಿ ➤ ಐಟಿ ಅಧಿಕಾರಿಗಳಿಂದ ಪರಿಶೀಲನೆ

(ನ್ಯೂಸ್ ಕಡಬ)newskadaba.com ಉಡುಪಿ, ಏ.21. ರಾಜ್ಯದ ಹಲವೆಡೆ ನಡೆದಿರುವ ಇಡಿ, ಐಟಿ ಅಧಿಕಾರಿಗಳ ದಾಖಲೆ ಪರಿಶೀಲನೆ ಕಾರ್ಯ ಉಡುಪಿಯಲ್ಲಿ ಕೂಡಾ ನಡೆದಿದ್ದು, ಉಡುಪಿಯ ಹಲವು ಉದ್ಯಮಿ, ಕಂಟ್ರಾಕ್ಟರ್ ದಾರರ ಮನೆಗಳಲ್ಲಿ ದಾಖಲೆ ಪರೀಶೀಲನೆ ನಡೆಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿರುವ ಇಡಿ ಅಧಿಕಾರಿಗಳು ಮಲ್ಪೆ ಬೀಚ್ ನಿರ್ವಹಣಾ ಗುತ್ತಿಗೆದಾರ ಸುದೇಶ್ ಶೆಟ್ಟಿ ಯ ಮಾಲಿಕತ್ವದ ಮಲ್ಪೆಯಲ್ಲಿರುವ ಗೆಸ್ಟ್ ಹೌಸ್ ನ ಕಚೇರಿ, ರೆಸ್ಟೋರೆಂಟ್, ಅಂಗಡಿ, ಮನೆ ಮತ್ತು ಇತರ ಕಡೆಗಳಲ್ಲಿ 10 ರಿಂದ

ಹಲವು ಉದ್ಯಮಿ ಮನೆ, ಕಚೇರಿಯಲ್ಲಿ ಇಡಿ ➤ ಐಟಿ ಅಧಿಕಾರಿಗಳಿಂದ ಪರಿಶೀಲನೆ Read More »

ಕರಾವಳಿ

ಸರ್ಕಾರಿ ನೌಕರರು ಜೀನ್ಸ್, ಟೀ-ಶರ್ಟ್ ಧರಿಸಿ ಕಚೇರಿಗೆ ಬರುವಂತಿಲ್ಲ.!   ➤ ಮ್ಯಾಜಿಸ್ಟ್ರೇಟ್ ಕೋರ್ಟ್ ಮಹತ್ವದ ಆದೇಶ..!

(ನ್ಯೂಸ್ ಕಡಬ)Newskadaba.com ನವದೆಹಲಿ,ಏ.21 ಸರ್ಕಾರಿ ನೌಕರರು ಕಚೇರಿಗೆ ಬರುವಾಗ ಜೀನ್ಸ್, ಟೀ-ಶರ್ಟ್ ಧರಿಸಿ ಬರುವಂತಿಲ್ಲ ಎಂದು ಮ್ಯಾಜಿಸ್ಟ್ರೇಟ್ ಕೋರ್ಟ್ ಆದೇಶ ಹೊರಡಿಸಿದೆ.ಬಿಹಾರದ ಸರನ್ ಜಿಲ್ಲೆಯ ಸರ್ಕಾರಿ ನೌಕರರು ಕಚೇರಿಗೆ ಜೀನ್ಸ್ ಮತ್ತು ಟೀ-ಶರ್ಟ್ ಧರಿಸಿ ಬರುವುದಕ್ಕೆ ಜಿಲ್ಲಾ ಮ್ಯಾಜಿಸ್ಟ್ರೇಟ್ ಕೋರ್ಟ್ ಬ್ರೇಕ್ ಹಾಕಿದೆ. ಸರ್ಕಾರಿ ಸಿಬ್ಬಂದಿ ಜೀನ್ಸ್ ಮತ್ತು ಟೀ-ಶರ್ಟ್ ಧರಿಸದಂತೆ ಕೋರ್ಟ್ ನಿರ್ದೇಶನ ನೀಡಿದೆ. ಜೊತೆಗೆ ಕೆಲಸದ ಅವಧಿಯಲ್ಲಿ ತಪ್ಪದೇ ಗುರುತಿನ ಚೀಟಿಗಳನ್ನು ಕುತ್ತಿಗೆಗೆ ಧರಿಸುವಂತೆ ಹೇಳಿದೆ.      

ಸರ್ಕಾರಿ ನೌಕರರು ಜೀನ್ಸ್, ಟೀ-ಶರ್ಟ್ ಧರಿಸಿ ಕಚೇರಿಗೆ ಬರುವಂತಿಲ್ಲ.!   ➤ ಮ್ಯಾಜಿಸ್ಟ್ರೇಟ್ ಕೋರ್ಟ್ ಮಹತ್ವದ ಆದೇಶ..! Read More »

ರಾಷ್ಟ್ರೀಯ ನ್ಯೂಸ್
Scroll to Top