News Kadaba

ಲಿಫ್ಟ್ ನಲ್ಲಿ ಸಿಲುಕಿ ಯುವಕ ಮೃತ್ಯು..!

(ನ್ಯೂಸ್ ಕಡಬ)Newskadaba.com ಬೆಂಗಳೂರು,ಏ.27 ಬೆಂಗಳೂರಿನ ಜೆಸಿ ರಸ್ತೆ ಭರತ್ ಸರ್ಕಲ್ ಬಳಿ ಲಿಫ್ಟ್ ನಲ್ಲಿ ಸಿಲುಕಿ ಯುವಕ ಮೃತಪಟ್ಟಿದ್ದಾನೆ. ಜೆಪಿ ರಸ್ತೆ ಭರತ್ ಸರ್ಕಲ್ ಸಮೀಪದ ಕಮರ್ಷಿಯಲ್ ಬಿಲ್ಡಿಂಗ್ ನಲ್ಲಿ ಘಟನೆ ನಡೆದಿದೆ.ಸಂಜಯ್ ಆಟೋಮೊಬೈಲ್ ಶಾಪ್ ನಲ್ಲಿ ಕೆಲಸ ಮಾಡುತ್ತಿದ್ದ ಉತ್ತರ ಪ್ರದೇಶದ ವಿಕಾಸ್(23) ಮೃತಪಟ್ಟ ಯುವಕ ಎಂದು ಹೇಳಲಾಗಿದೆ. ಆರು ತಿಂಗಳ ಹಿಂದೆ ಬೆಂಗಳೂರಿಗೆ ಕೆಲಸಕ್ಕೆ ಬಂದಿದ್ದ ವಿಕಾಸ್ ಸಾವಿನ ವಿಚಾರವನ್ನು ಪೊಲೀಸರು ಪೋಷಕರಿಗೆ ತಿಳಿಸಿದ್ದಾರೆ. ಮೃತ ದೇಹವನ್ನು ವಿಕ್ಟೋರಿಯಾ ಆಸ್ಪತ್ರೆಗೆ ಸ್ಥಳಾಂತರ ಮಾಡಲಾಗಿದೆ. ಕಲಾಸಿಪಾಳ್ಯ […]

ಲಿಫ್ಟ್ ನಲ್ಲಿ ಸಿಲುಕಿ ಯುವಕ ಮೃತ್ಯು..! Read More »

ಕರ್ನಾಟಕ

ದೇಶದ ಆರ್ಥಿಕ ಸ್ಥಿತಿ ಸ್ಥಿರವಾಗಿದೆ ಮತ್ತು ಉತ್ತಮವಾಗಿದೆ   ➤ ನಿರ್ಮಲಾ ಸೀತಾರಾಮನ್‌

(ನ್ಯೂಸ್ ಕಡಬ)Newskadaba.com ಕಲಬುರಗಿ,ಏ.27 ದೇಶದ ಆರ್ಥಿಕ ಸ್ಥಿತಿ ಸ್ಥಿರವಾಗಿದೆ ಮತ್ತು ಉತ್ತಮವಾಗಿದೆ. ಪ್ರಸ್ತುತ ಎರಡು ಲಕ್ಷ ಕೋಟಿ ರೂಪಾಯಿ ರೂ. ತೆರಿಗೆ ಸಂಗ್ರಹವಾಗಿದೆ ಎಂದು ಕೇಂದ್ರ ಹಣಕಾಸು ಖಾತೆ ಸಚಿವೆ ನಿರ್ಮಲಾ ಸೀತಾರಾಮನ್‌ ಹೇಳಿದರು ಚುನಾವಣ ಪ್ರಚಾರಾರ್ಥ ಹಮ್ಮಿಕೊಂಡಿದ್ದ ಉದ್ಯಮಿಗಳು ಹಾಗೂ ಹೂಡಿಕೆದಾರರ ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ವಿಪಕ್ಷಗಳು ಹಾಗೂ ಅದರಲ್ಲೂ ಪ್ರಮುಖವಾಗಿ ಕಾಂಗ್ರೆಸ್‌ ಆರೋಪಿಸುತ್ತಿರುವಂತೆ ದೇಶದ ಆರ್ಥಿಕ ಸ್ಥಿತಿ ಡೋಲಾ ಯಮಾನವಾಗಿಲ್ಲ. ಈಗಾ ಗಲೇ ಎರಡು ಲಕ್ಷ ಕೋಟಿ ರೂ. ತೆರಿಗೆ ಸಂಗ್ರಹವಾಗಿದೆ.

ದೇಶದ ಆರ್ಥಿಕ ಸ್ಥಿತಿ ಸ್ಥಿರವಾಗಿದೆ ಮತ್ತು ಉತ್ತಮವಾಗಿದೆ   ➤ ನಿರ್ಮಲಾ ಸೀತಾರಾಮನ್‌ Read More »

ಕರ್ನಾಟಕ

ಸಚಿವ ಎಸ್. ಅಂಗಾರಗೆ ಅನಾರೋಗ್ಯ    ➤ ಮಂಗಳೂರು ಆಸ್ಪತ್ರೆಗೆ ದಾಖಲು

(ನ್ಯೂಸ್ ಕಡಬ)newskadaba.com ಮಂಗಳೂರು, ಏ.27. ಅನಾರೋಗ್ಯದ ಹಿನ್ನಲೆಯಲ್ಲಿ ಸುಳ್ಯ ಶಾಸಕ ಹಾಗೂ ಸಚಿವ ಎಸ್.ಅಂಗಾರ ಮಂಗಳೂರಿನ ಕೆಎಂಸಿ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಗುರುತಿಸಲಾಗಿದೆ. ಸಚಿವ ಅಂಗಾರ ಅವರು ಕಳೆದ ಎರಡು ದಿನಗಳಿಂದ ಅವರು ಆಸ್ಪತ್ರೆಯಲ್ಲಿದ್ದು, ಚೇತರಿಸಿಕೊಳ್ಳುತ್ತಿರುವುದಾಗಿ ತಿಳಿದು ಬಂದಿದೆ. ಅನಾರೋಗ್ಯದ ಹಿನ್ನೆಲೆಯಲ್ಲಿ ಕೆಲವು ದಿನಗಳ ಕಾಲ ಅವರಿಗೆ ವಿಶ್ರಾಂತಿ ಬೇಕಾಗಿದೆ ಎಂದು ಹೇಳಲಾಗಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.  

ಸಚಿವ ಎಸ್. ಅಂಗಾರಗೆ ಅನಾರೋಗ್ಯ    ➤ ಮಂಗಳೂರು ಆಸ್ಪತ್ರೆಗೆ ದಾಖಲು Read More »

ಕರಾವಳಿ

ಬೆಳ್ತಂಗಡಿ: ನದಿ ನೀರಿಗೆ ವಿಷಪ್ರಾಷನ      ➤ನೀರು ಸರಬರಾಜು ಸ್ಥಗಿತ, ಮೀನುಗಳ ಮಾರಣಹೋಮ

(ನ್ಯೂಸ್ ಕಡಬ)newskadaba.com ಬೆಳ್ತಂಗಡಿ, ಏ.27. ನಗರ ಪಂಚಾಯತ್ ವ್ಯಾಪ್ತಿಯಲ್ಲಿ 11 ವಾರ್ಡ್ ಗಳಿಗೆ ನೀರು ಪೂರೈಸುತ್ತಿದ್ದ ಸೋಮಾವತಿ ನದಿ ನೀರಿಗೆ ದುಷ್ಕರ್ಮಿಗಳು ವಿಷ ಬೆರೆಸಿರುವ ಪರಿಣಾಮ ಸಾವಿರಾರು ಮೀನುಗಳ ಮಾರಣಹೋಮವಾಗಿವೆ. ನಗರಕ್ಕೆ ಕುಡಿಯುವ ನೀರಿನ ಪ್ರಮುಖ ಆಶ್ರಯವಾಗಿದೆ. ನಗರಕ್ಕೆ ಪ್ರಸಕ್ತ ಪ್ರತಿ ದಿನ 10 ಲಕ್ಷ ಲೀಟರ್ ನೀರಿನ ಅವಶ್ಯಕತೆಯಿದ್ದು ಇದೇ ನೀರನ್ನು ಅವಲಂಬಿಸಲಾಗಿತ್ತು. ಆದರೆ ವಿಷ ಪ್ರಾಶನವಾಗಿರುವ ಪರಿಣಾಮ ನೀರು ಸರಬರಾಜನ್ನು ಸ್ಥಗಿತಗೊಳಿಸಲಾಗಿದೆ ಎಂದು ವರದಿ ತಿಳಿಸಿದೆ.  

ಬೆಳ್ತಂಗಡಿ: ನದಿ ನೀರಿಗೆ ವಿಷಪ್ರಾಷನ      ➤ನೀರು ಸರಬರಾಜು ಸ್ಥಗಿತ, ಮೀನುಗಳ ಮಾರಣಹೋಮ Read More »

ಕರಾವಳಿ

ಕರ್ನಾಟಕ ವಿಧಾನಸಭೆ ಚುನಾವಣೆಯ ಮತದಾನ ಏ. 29 ರಿಂದಲೇ ಆರಂಭ..!

(ನ್ಯೂಸ್ ಕಡಬ)Newskadaba.com ಬೆಂಗಳೂರು,ಏ.27 ಕರ್ನಾಟಕ ವಿಧಾನಸಭೆ ಚುನಾವಣೆಯ ಮತದಾನ ಮೇ. 10 ರಂದು ನಡೆಯಲಿದ್ದು, ಅದಕ್ಕೂ ಮೊದಲೇ ಏಪ್ರಿಲ್ 29 ರಿಂದ ಮೇ. 6 ರವರೆಗೆ 80 ವರ್ಷ ಮೇಲ್ಪಟ್ಟವರು ಹಾಗೂ ಅಂಗವಿಕಲರು ತಮ್ಮ ಮನೆಯಿಂದಲೇ ಮತ ಚಲಾಯಿಸಲು ಅವಕಾಶ ನೀಡಲಾಗಿದೆ. ಇದೇ ಮೊದಲ ಬಾರಿಗೆ 80 ವರ್ಷ ಮೇಲ್ಪಟ್ಟ ಹಾಗೂ ಅಂಗವಿಕಲರಿಗೆ ಮನೆಯಿಂದಲೇ ಮತದಾನ ಮಾಡಲು ಚುನಾವಣಾ ಆಯೋಗ ಅವಕಾಶ ನೀಡಿದ್ದು, 99,529 ಮತದಾರರು ಮನೆಯಿಂದಲೇ ಮತ ಚಲಾಯಿಸಲು ನೋಂದಾಯಿಸಿಕೊಂಡಿದ್ದಾರೆ. ಹೀಗಾಗಿ ಮತದಾನ ಪಡೆದುಕೊಳ್ಳಲು ಚುನಾವಣಾ

ಕರ್ನಾಟಕ ವಿಧಾನಸಭೆ ಚುನಾವಣೆಯ ಮತದಾನ ಏ. 29 ರಿಂದಲೇ ಆರಂಭ..! Read More »

ಕರ್ನಾಟಕ

ಮತದಾನದ ಅವಧಿ ವಿಸ್ತರಿಸಿದ ಚುನಾವಣಾ ಆಯೋಗ

(ನ್ಯೂಸ್ ಕಡಬ)newskadaba.com ಬೆಂಗಳೂರು, ಏ.27. ರಾಜ್ಯದಲ್ಲಿ ಚುನಾವಣೆಗೆ ಅಂತಿಮ ಹಂತದ ತಯಾರಿ ನಡೆಸುತ್ತಿರುವ ಆಯೋಗವು ಇದೀಗ ಮತದಾರರಿಗೆ ಅನುಕೂಲವಾಗುವಂತೆ ಮತದಾನದ ಸಮಯವನ್ನು ಹೆಚ್ಚಳ ಮಾಡಿ ಅಧಿಸೂಚನೆ ಹೊರಡಿಸಿದೆ. ಪ್ರತಿ ಚುನಾವಣೆಗೆ ಬೆಳಗ್ಗೆ 7ರಿಂದ ಸಂಜೆ 5 ಗಂಟೆವರೆಗೆ ಮತದಾನವಿರುತ್ತದೆ. ಆದರೆ ಈ ಬಾರಿ ಅಧಿಕ ಬಿಸಿಲಿನ ವಾತಾವರಣ ಇರುವುದರಿಂದ ಮತದಾರರಿಗೆ ಅನುಕೂಲವಾಗುವಂತೆ ಒಂದೂವರೆ ತಾಸು ಸಮಯ ಹೆಚ್ಚಳ ಮಾಡಿದೆ. ಆ ಪ್ರಕಾರ ಬೆಳಗ್ಗೆ 7ರಿಂದ ಸಂಜೆ 6.30ರವರೆಗೆ ಮತದಾನ ಅವಧಿಯಾಗಿರುತ್ತದೆ. ಒಂದೇ ಹಂತದಲ್ಲಿ ಮೇ.10ರಂದು ಮತದಾನ ನಡೆಯಲಿದೆ

ಮತದಾನದ ಅವಧಿ ವಿಸ್ತರಿಸಿದ ಚುನಾವಣಾ ಆಯೋಗ Read More »

ಕರ್ನಾಟಕ

ಲಾರಿಯೊಂದು ಬೈಕ್​ಗೆ ಡಿಕ್ಕಿ ಹೊಡೆದ ಪರಿಣಾಮ..! ➤ ನವಜೋಡಿ  ಸ್ಥಳದಲ್ಲೇ ಮೃತ್ಯು

(ನ್ಯೂಸ್ ಕಡಬ)Newskadaba.com,ಏ.26 ನಿಶ್ಚಿತಾರ್ಥ ನೆರವೇರಿ ಮದುವೆಗೆ ಇನ್ನು 15 ದಿನ ಬಾಕಿ ಇರುವಾಗಲೇ ಅಪಘಾತದಲ್ಲಿ ನವಜೋಡಿಯೊಂದು ದುರಂತ ಸಾವಿಗೀಡಾಗಿರುವ ಘಟನೆ ಆಂಧ್ರಪ್ರದೇಶದ ರಾಜಮಂಡ್ರಿಯಲ್ಲಿ ನಡೆದಿದೆ.ಮೃತರನ್ನು ಮನೆಪಲ್ಲಿ ರಾಜ್​ಕುಮಾರ್​ (25) ಮತ್ತು ಮಲಿರೆಡ್ಡಿ ದುರ್ಗಾಭವಾನಿ (18) ಎಂದು ಗುರುತಿಸಲಾಗಿದೆ. ರಾಜಮಂಡ್ರಿಯ ಕೊವ್ವೂರು ಬಳಿ ಹಿಂದಿನಿಂದ ಬಂದ ಲಾರಿಯೊಂದು ಬೈಕ್​ಗೆ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ನವಜೋಡಿ ದುರಂತ ಸಾವಿಗೀಡಾಗಿದೆ. ಮಾಹಿತಿ ತಿಳಿಯುತ್ತಿದ್ದಂತೆ ಘಟನಾ ಸ್ಥಳಕ್ಕೆ ಆಗಮಿಸಿದ ಪೊಲೀಸರು ಮೃತದೇಹಗಳನ್ನು ರಾಜಮಂಡ್ರಿ ಸರ್ಕಾರಿ ಆಸ್ಪತ್ರೆಗೆ ಸ್ಥಳಾಂತರಿಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.  

ಲಾರಿಯೊಂದು ಬೈಕ್​ಗೆ ಡಿಕ್ಕಿ ಹೊಡೆದ ಪರಿಣಾಮ..! ➤ ನವಜೋಡಿ  ಸ್ಥಳದಲ್ಲೇ ಮೃತ್ಯು Read More »

ರಾಷ್ಟ್ರೀಯ ನ್ಯೂಸ್

ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಕಾಂಗ್ರೆಸ್-ಬಿಜೆಪಿ ನಾಯಕರು ಮುಖಾಮುಖಿ..! *

(ನ್ಯೂಸ್ ಕಡಬ)Newskadaba.com ಬೆಳಗಾವಿ,ಏ.26 ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಕಾಂಗ್ರೆಸ್-ಬಿಜೆಪಿ ನಾಯಕರು ಮುಖಾಮುಖಿಯಾದರು.ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಒಂದೇ ಕಡೆ ಸೇರಿದರು.ಪರಸ್ಪರರು ಹಸ್ತಲಾಘವ ಮಾಡಿ ಮಾತುಕತೆ ನಡೆಸಿದರು. ಬೆಂಗಳೂರಿನಿಂದ ಬಂದಿಳಿದ ಮಲ್ಲಿಕಾರ್ಜುನ ಖರ್ಗೆ ಚಿಕ್ಕೋಡಿಯತ್ತ, ಬಸವರಾಜ ಬೊಮ್ಮಾಯಿ ಹುಕ್ಕೇರಿ ತಾಲ್ಲೂಕಿನ ಯಮಕನಮರಡಿಯತ್ತ ತೆರಳಿದರು. ಮಾಜಿ ಸಚಿವ ಡಿ.ಬಿ.ಇನಾಮದಾರ ಅವರಿಗೆ ಅಂತಿಮ ನಮನ ಸಲ್ಲಿಸಿ‌ ನೇಗಿನಹಾಳದಿಂದ ಆಗಮಿಸಿದ ಸಿದ್ದರಾಮಯ್ಯ ಬೆಂಗಳೂರಿನತ್ತ ಪ್ರಯಾಣ ಬೆಳೆಸಿದರು.      

ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಕಾಂಗ್ರೆಸ್-ಬಿಜೆಪಿ ನಾಯಕರು ಮುಖಾಮುಖಿ..! * Read More »

ಕರಾವಳಿ, ಕರ್ನಾಟಕ

ಜೆಡಿಎಸ್‌ನ ಭೋಜೇಗೌಡ ಅವರು ಕಾಂಗ್ರೆಸ್‌ ಮುಖಂಡ ಸತೀಶ್‌ ಅವರಿಗೆ ಸಿಹಿ ತಿನ್ನಿಸಿದ್ದಾರೆ.!

(ನ್ಯೂಸ್ ಕಡಬ)Newskadaba.com ಚಿಕ್ಕಮಗಳೂರು,ಏ.26 ಜೆಡಿಎಸ್‌ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಎಸ್‌.ಎಲ್‌. ಭೋಜೇಗೌಡ ಅವರು ಸಖರಾಯಪಟ್ಟಣ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಮಹಡಿಮನೆ ಸತೀಶ್‌ ಅವರಿಗೆ ಸಿಹಿ ತಿನ್ನಿಸಿದ ಫೋಟೊ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ. ‘ಈ ಬಾರಿ ಕಾಂಗ್ರೆಸ್‌ಗೆ ವೋಟು ಹಾಕಿ’ ಎಂದು ಎಸ್‌.ಎಲ್‌. ಭೋಜೇಗೌಡ ಹೇಳಿರುವ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಹರಿಯಬಿಟ್ಟ ಬೆನ್ನಲ್ಲೇ ಈ ಫೋಟೊ ಹರಿದಾಡುತ್ತಿರುವುದು ಚರ್ಚೆಗೆ ಗ್ರಾಸವಾಗಿದೆ.’ಮಹಡಿಮನೆ ಸತೀಶ್‌ ಮತ್ತು ನಾನು ಸ್ನೇಹಿತರು. ಅವರ ಜನ್ಮದಿನ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾಗ ಕೇಕ್‌ ತಿನ್ನಿಸಿದ ಫೋಟೊವನ್ನು ಹರಿಯಬಿಟ್ಟಿದ್ದಾರೆ.

ಜೆಡಿಎಸ್‌ನ ಭೋಜೇಗೌಡ ಅವರು ಕಾಂಗ್ರೆಸ್‌ ಮುಖಂಡ ಸತೀಶ್‌ ಅವರಿಗೆ ಸಿಹಿ ತಿನ್ನಿಸಿದ್ದಾರೆ.! Read More »

ಕರ್ನಾಟಕ

‘ಸರ್ಕಾರದ ಮೀಸಲಾತಿ ಬರೀ ಲಾಲಿಪಾಪ್‌’  ➤ ರಣದೀಪ್‌ ಸುರ್ಜೇವಾಲ

(ನ್ಯೂಸ್ ಕಡಬ)newskadaba.com  ಮೈಸೂರು, ಏ.26. ಮುಸ್ಲಿಮರ ಶೇ.4ರಷ್ಟು ಮೀಸಲಾತಿ ರದ್ದು ಮಾಡಿದ ಬಿಜೆಪಿ ಸರ್ಕಾರ ಅದನ್ನು ಸುಪ್ರೀಂಕೋರ್ಟ್‌ ಮುಂದೆ ಸಮರ್ಥಿಸಲು ವಿಫಲವಾಗಿದ್ದು, ಸರ್ಕಾರದ ಈ ಮೀಸಲಾತಿ ಬರೀ ಲಾಲಿಪಾಪ್‌ ಆಗಿದೆ ಎಂದು ಕಾಂಗ್ರೆಸ್‌ ಉಸ್ತುವಾರಿ ರಣದೀಪ್‌ ಸುರ್ಜೇವಾಲ ಟೀಕಿಸಿದ್ದಾರೆ. ರಣದೀಪ್ ಸಿಂಗ್ ಸರ್ಜೇವಾಲ ಹಾಗೂ ಡಿ.ಕೆ ಶಿವಕುಮಾರ್ ಅವರ ಮೈಸೂರಿನಲ್ಲಿ ನಡೆದ ಜಂಟಿ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಮೀಸಲಾತಿ ಹೆಸರಿನಲ್ಲಿ ಸುಳ್ಳು ಹೇಳುತ್ತಿರುವ ಬಿಜೆಪಿಗೆ ಸುಪ್ರೀಂನಲ್ಲಿ ಹಿನ್ನಡೆಯಾಗಿದೆ. ಇದು ಡಬಲ್‌ ಇಂಜಿನ್‌ ದೋಖಾ. ದ್ರೋಹ ಬಗೆವ ಬಿಜೆಪಿ

‘ಸರ್ಕಾರದ ಮೀಸಲಾತಿ ಬರೀ ಲಾಲಿಪಾಪ್‌’  ➤ ರಣದೀಪ್‌ ಸುರ್ಜೇವಾಲ Read More »

ಕರ್ನಾಟಕ
Scroll to Top